ದೀಪಾವಳಿಯ ಮಂಗಲ ಸಮಯದಲ್ಲಿ ನಿಮ್ಮಿಂದ ಏನಾದರೂ ಅಮಂಗಲ ಘಟಿಸುವುದಿಲ್ಲವಲ್ಲ, ಎಂಬುದರ ವಿಚಾರ ಮಾಡಿರಿ !

ಅ. ದೀಪಾವಳಿಯಲ್ಲಿ ಪ್ರೇಮದ ಕೊಡುಕೊಳ್ಳುವಿಕೆಯಾಗ ಬೇಕೆಂದು ಸಂಬಂಧಿಕರು, ಮಿತ್ರರು ಮುಂತಾದವರಿಗೆ ಸಿಹಿತಿಂಡಿಯ ಪೆಟ್ಟಿಗೆಗಳನ್ನು ಉಡುಗೊರೆಯೆಂದು ನೀಡಲಾಗುತ್ತದೆ. ಕೆಲವೊಮ್ಮೆ ಪೆಟ್ಟಿಗೆಗಳ ಹೊದಿಕೆಗಳ ಮೇಲೆ ದೇವತೆಗಳ ಚಿತ್ರ ಅಥವಾ ಹೆಸರುಗಳಿರುತ್ತವೆ. ಹೆಚ್ಚಿನ ಸಂದರ್ಭದಲ್ಲಿ ಖಾಲಿಯಾದ ನಂತರ ಈ ಪೆಟ್ಟಿಗೆಗಳನ್ನು ಕಸದಲ್ಲಿ ಎಸೆಯಲಾಗುತ್ತದೆ.

ಆ. ದೀಪಾವಳಿಯ ಸಮಯದಲ್ಲಿ ಬಹಳಷ್ಟು ಪ್ರಮಾಣದಲ್ಲಿ ದೇವತೆಗಳ ಚಿತ್ರ ಅಥವಾ ಹೆಸರುಗಳಿರುವ ಲಾಟರಿ ಟಿಕೇಟುಗಳ ಮಾರಾಟವಾಗುತ್ತಿರುತ್ತದೆ. ಹೆಚ್ಚಿನ ಜನರು ಲಾಟರಿ ಟಿಕೇಟುಗಳನ್ನು ಉಪಯೋಗಿಸಿದ ನಂತರ ಅವುಗಳನ್ನು ಮುದ್ದೆ ಮಾಡಿ ಕಸದಲ್ಲಿ ಎಸೆದುಬಿಡುತ್ತಾರೆ. ಅಧ್ಯಾತ್ಮಶಾಸ್ತ್ರಕ್ಕನುಸಾರ ದೇವತೆಯ ಚಿತ್ರ ಅಥವಾ ರೂಪವಿದ್ದಲ್ಲಿ ದೇವತೆಯ ತತ್ವ ವಿರುತ್ತದೆ, ಅಂದರೆ ಸೂಕ್ಷ್ಮದಲ್ಲಿ ದೇವತೆಯ ಅಸ್ತಿತ್ವ ಇರುತ್ತದೆ. ಆದ್ದರಿಂದ ಮೇಲಿನ ಪ್ರಕಾರಗಳಿಂದ ದೇವತೆಗಳ ವಿಡಂಬನೆಯೇ ಆಗುತ್ತದೆ. ಇದರಿಂದ ದೇವತೆಗಳ ಅವಕೃಪೆಯಾಗುತ್ತದೆ. ಇದೇ ರೀತಿಯಲ್ಲಿ ರಾಷ್ಟ್ರಪುರುಷರ ವಿಡಂಬನೆಯೂ ಆಗುತ್ತಿರುತ್ತದೆ. ಇದಕ್ಕಾಗಿ,

೧. ಇಂತಹ ಅಧರ್ಮಾಚರಣೆಯನ್ನು ಸ್ವತಃ ತಡೆಗಟ್ಟಿರಿ !

೨. ಇದರ ಬಗ್ಗೆ ಇತರರಿಗೂ ಪ್ರಬೋಧನೆ ಮಾಡಿರಿ !

೩. ಉದ್ದೇಶಪೂರ್ವಕವಾಗಿ ವಿಡಂಬನೆ ಮಾಡುವವರನ್ನು ನಿಷೇಧಿಸಿರಿ ಮತ್ತು ಅವರ ಉತ್ಪಾದನೆಗಳನ್ನು ಬಹಿಷ್ಕರಿಸಿರಿ !

೪. ಧಾರ್ಮಿಕ ಭಾವನೆಯನ್ನು ನೋಯಿಸಿದ್ದಕ್ಕಾಗಿ ಆರಕ್ಷಕರಲ್ಲಿ ದೂರು ನೀಡಿರಿ !

Leave a Comment