ನಿಜವಾದ ದೀಪಾವಳಿಯನ್ನು ಹಿಂದೂ ರಾಷ್ಟ್ರದಲ್ಲಿಯೇ ಆಚರಿಸಬಹುದು ! – ಪ.ಪೂ.ಪಾಂಡೆ ಮಹಾರಾಜ

ದೀಪಾವಳಿಯ ಅರ್ಥವು ಹೀಗಿದೆ, ‘ದೀಪಾವಲಿ’ ಎಂದರೆ ಅಸಂಖ್ಯಾತ ದೀಪಗಳ ಜ್ಯೋತಿಯ ಪ್ರಕಾಶದಿಂದ ಆನಂದಮಯವಾದ ವಾತಾವರಣವೇ ದೀಪಾವಳಿ ! ದೀಪ ಈ ಶಬ್ದವು ನಿಜವಾದ ಅರ್ಥದಿಂದ ಆತ್ಮಕ್ಕೆ ಸಂಬಂಧಿತವಾಗಿದೆ. ದೀಪಜ್ಯೋತಿಯು ಆತ್ಮಜ್ಯೋತಿಯ ಪ್ರತೀಕವಾಗಿದೆ. ಆತ್ಮವು ಸಚ್ಚಿದಾನಂದವಾಗಿದೆ. ಅದು ಪ್ರಕಟವಾಗುವುದು ಅಂದರೆ ಆನಂದದ ಹರಡುವಿಕೆಯಾಗುವುದು !

ಇಂತಹ ಆತ್ಮದ ಪ್ರಕಟೀಕರಣವಾಗಲು ಅಡಚಣೆಯಾಗಿರುವ ಸ್ವಭಾವದೋಷ ಮತ್ತು ಅಹಂಗಳ ನಿರ್ಮೂಲನೆ ಮಾಡುವುದು ಅವಶ್ಯಕವಾಗಿದೆ. ಸಾಧನೆಯು ಇದಕ್ಕಾಗಿಯೇ ಇರುವುದು. ಈ ಸಾಧನೆಯೆಂದರೆ ಹಗಲೂ ರಾತ್ರಿ ನಮಗೆ ‘ಯುದ್ಧದ ಪ್ರಸಂಗ’ ಸ್ವರೂಪದ್ದಾಗಿದೆ. ಅಂದರೆ ಆ ಸಾಧನೆಯನ್ನು ಹಗಲೂರಾತ್ರಿ ಸದ್ಗುರುಕೃಪೆಯ ಧ್ಯಾಸದಿಂದಲೇ ಮಾಡಬೇಕಾಗಿರುತ್ತದೆ. ಹಾಗಾಗಿ ಗುರುಕೃಪಾಯೋಗದ ಮೂಲಕ ಸಾಧನೆ ಮಾಡಿದರೆ ಅದು ಸಹಜ ಸಾಧ್ಯವಾಗುತ್ತದೆ. ಯಾವಾಗ ಸಾಧಕನು ಈ ರೀತಿಯಲ್ಲಿ ಸಾಧನೆಯನ್ನು ಮಾಡಿ ಆನಂದಿತನಾಗುತ್ತಾನೆಯೋ ಆಗ ಅವನ ಮೂಲಕ ಸಾವಿರಾರು ಜನರ ಉದ್ಧಾರವಾಗುತ್ತದೆ, ಅವರು ಪಾವನರಾಗುತ್ತಾರೆ ಎಂದು ‘ತ್ರಿಸುಪರ್ಣಾ’ದಲ್ಲಿ ಹೇಳಲಾಗಿದೆ.

ಯಾವಾಗ ಬಹುಸಂಖ್ಯೆಯಲ್ಲಿ ಸಾಧಕರು ಈ ರೀತಿ ಸಿದ್ಧರಾಗುತ್ತಾರೆಯೋ ಅಂದರೆ ಸಂತರಾಗುತ್ತಾರೆಯೋ ಆಗ ಅವರ ಚೈತನ್ಯದಿಂದ ಎಲ್ಲೆಡೆ ಚೈತನ್ಯಮಯ ವಾತಾವರಣವು ನಿರ್ಮಾಣವಾಗುತ್ತದೆ. ಅಂದರೆ ಇಂತಹ ಈ ಸಾವಿರಾರು ಆತ್ಮಜ್ಯೋತಿಗಳ ಮೂಲಕ ಎಲ್ಲೆಡೆಗೆ ಪ್ರಕಾಶಮಯ ವಾತಾವರಣ ನಿರ್ಮಾಣವಾಗುತ್ತದೆ. ಇಂತಹ ಪರಿಸ್ಥಿತಿಯು ನಿರ್ಮಾಣವಾಗುವುದೇ ನಿಜವಾದ ದೀಪಾವಳಿಯಾಗಿದೆ.

ಹಿಂದೂಗಳ ಪ್ರತಿಯೊಂದು ಹಬ್ಬವು ಒಂದಲ್ಲೊಂದು ದುಷ್ಪ್ರವೃತ್ತಿಯ ನಾಶ ಮಾಡಿದ ನಂತರ ಆಚರಿಸುವಂತಹ ಆನಂದೋತ್ಸವವಾಗಿದೆ

ಶ್ರೀಕೃಷ್ಣನು ನರಕಾಸುರನನ್ನು ವಧಿಸಿ ಅವನ ವಶದಲ್ಲಿದ್ದ ೧೬,೧೦೮ ಮಹಿಳೆಯರನ್ನು ಮುಕ್ತಗೊಳಿಸಿದನು. ಅನಂತರ ಆ ಮಹಿಳೆಯರು ದೀಪ ಬೆಳಗಿಸಿ ಶ್ರೀಕೃಷ್ಣನಿಗೆ ಆರತಿಯನ್ನೆತ್ತಿದರು. ಅಂದರೆ ಅಂಧಃಕಾರವನ್ನು ದೂರಗೊಳಿಸಿ ತೇಜದ ಆರಾಧನೆ ಮಾಡುವುದು ! ಸದ್ಗುರುಗಳ ಆರತಿಯಲ್ಲಿಯೂ, ‘ಜ್ಯೋತ್ ಸೇ ಜ್ಯೋತ್ ಜಗಾವೋ, ಮೇರಾ ಅಂತರ ತಿಮಿರ ಮಿಟಾವೋ | ಅಂತರ ಮೇ ಯುಗಯುಗ ಸೆ ಸೋಯಿ, ಚಿತಶಕ್ತಿ ಕೋ ಜಗಾವೋ |‘ ಎಂದು ಹೇಳಲಾಗಿದೆ; ಅಂದರೆ ಯುಗಯುಗಗಳಿಂದ ಸುಪ್ತಾವಸ್ಥೆಯಲ್ಲಿದ್ದ ನನ್ನ ಅಂತರಂಗದ ಆತ್ಮಜ್ಯೋತಿಯು ಸದ್ಗುರುಗಳ ಆತ್ಮಜ್ಯೋತಿಯಿಂದ ಪ್ರಜ್ವಲಿತವಾಗಲಿ. ಈ ರೀತಿಯಲ್ಲಿ ನನ್ನ ಆತ್ಮಜ್ಯೋತಿಯು ಬೆಳಗಿತೆಂದರೆ ಎಲ್ಲರ ಆತ್ಮಜ್ಯೋತಿಯನ್ನು ಬೆಳಗಿಸಲು ಸಾಧ್ಯವಾಗುತ್ತದೆ ಅಂದರೆ ಸಮಷ್ಟಿ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಅದರ ಮೂಲಕ ಎಲ್ಲೆಡೆಯಲ್ಲಿ ರಜ – ತಮದಿಂದ ಆವೃತ್ತವಾದ ವಾತಾವರಣವು ಸತ್ತ್ವ ಪ್ರಧಾನ ಅಂದರೆ ಪ್ರಕಾಶಮಯವಾಗುವುದು. ಎಲ್ಲರ ವೃತ್ತಿಯಲ್ಲಿ ಬದಲಾವಣೆ ಯಾಗುವುದು ಮತ್ತು ಎಲ್ಲ ಜನರು ಸತ್ಪ್ರವೃತ್ತಿಯಿಂದ ವರ್ತಿಸುವರು. ಇಂತಹ ವಾತಾವರಣದಿಂದ ನಿರ್ಮಾಣವಾದ ಆನಂದವೇ ನಿಜವಾದ ದೀಪಾವಳಿಯಾಗಿದೆ. ಉನ್ನತ ಋಷಿಗಳು ಮುಂದಿನಂತೆ ಹೇಳಿದ್ದಾರೆ –

ಅಸತೋಮಾ ಸದ್ಗಮಯ| ತಮಸೋಮಾ ಜ್ಯೋತಿರ್ಗಮಯ| ಮೃತ್ಯೋರ್ಮಾಮೃತಂಗಮಯ||

ಅರ್ಥ: ಹೇ ಪ್ರಭುವೇ, ನೀನು ನಮ್ಮನ್ನು ಅಸತ್ಯದಿಂದ ಸತ್ಯದೆಡೆಗೆ ಕೊಂಡೊಯ್ಯು, ಅಜ್ಞಾನರೂಪೀ ಅಂಧಃಕಾರದಿಂದ (ರಜ-ತಮಾತ್ಮಕ ವಾತಾವರಣ) ಜ್ಞಾನರೂಪೀ ಪ್ರಕಾಶದೆಡೆಗೆ ಕೊಂಡೊಯ್ಯು. ಮೃತ್ಯುವಿನಿಂದ ಅಮೃತತ್ವದೆಡೆಗೆ ಅಂದರೆ ಅಮರತ್ವದೆಡೆಗೆ ಕೊಂಡೊಯ್ಯು.

ಇಂತಹ ರೀತಿ ಜೀವನ ಸಾಗಿಸುವುದರಿಂದ ಮನುಷ್ಯನಿಗೆ ನಿಜವಾದ ತ್ರಿವಿಧ (ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ) ಶಾಂತಿ ಸಿಗುತ್ತದೆ.

ಇಂದಿನ ದೀಪಾವಳಿಯನ್ನು ನಿಜವಾದ ಅರ್ಥದಲ್ಲಿ ದೀಪಾವಳಿ ಎಂದು ಹೇಗೆ ಹೇಳುವುದು ?

ಇಂದು ಸಮಾಜದಲ್ಲಿ ದುಷ್ಪ್ರವೃತ್ತಿಗಳು ಅಟ್ಟಹಾಸವನ್ನು ಮೆರೆಯುತ್ತಿವೆ. ಮತಾಂಧರು ಹಿಂದೂಗಳ ಮೇಲೆ ದಾಳಿ ನಡೆಸುತ್ತಾರೆ. ಹಿಂದೂಗಳ ಹುಡುಗಿಯರು – ಮಹಿಳೆಯರ ಮೇಲೆ ಬಲಾತ್ಕಾರ ಮಾಡುತ್ತಾರೆ. ಭ್ರಷ್ಟ ರಾಜಕಾರಣಿಗಳು ದೇಶವನ್ನು ಮಾರಾಟ ಮಾಡಲು ಹೊರಟಿದ್ದಾರೆ. ಹಿಂದೂ ಧರ್ಮಾಚರಣೆಯ ಅಭಾವದಿಂದ ಭೋಗವಾದದ ಹಿಂದೆ ಬಿದ್ದು ಸಮಾಜದಲ್ಲಿ ಲಿವ್-ಇನ್ – ರಿಲೇಶನ್ ಶಿಪ್, ಸಲಿಂಗ ಸಂಬಂಧದಂತಹ ವಿಕೃತಿಗಳು ಎಲ್ಲೆಡೆಗಳಲ್ಲಿ ಅಂಧಃಕಾರದ ಸಾಮ್ರಾಜ್ಯವನ್ನು ಪಸರಿಸಿವೆ. ಇಂತಹ ಸಮಯದಲ್ಲಿ ನಾವು ಹಿಂದೂಗಳು ದೀಪಾವಳಿಯನ್ನು ಆಚರಿಸುತ್ತಿರುವಾಗ ಇದನ್ನು ನಿಜವಾದ ಅರ್ಥದಿಂದ ದೀಪಾವಳಿ ಎನ್ನಬಹುದೇ?

ಇಂದು ಕೇವಲ ಪಟಾಕಿ ಸಿಡಿಸುವುದು, ದೀಪ ಹಚ್ಚುವುದು, ಜೂಜಾಡುವುದು ಮುಂತಾದ ಕೃತ್ಯಗಳಿಗೆ ದೀಪಾವಳಿ ಎನ್ನಲಾಗುತ್ತದೆ. ಪಟಾಕಿಗಳಿಂದ ವಾತಾವರಣದಲ್ಲಿ ತಮೋಗುಣದ (ವಾಯುಮಾಲಿನ್ಯ) ಪ್ರಾಬಲ್ಯವು ಹೆಚ್ಚಾಗುತ್ತದೆ. ಇಂತಹ ವಾತಾವರಣದಲ್ಲಿ ಆನಂದ ನಿರ್ಮಾಣವಾಗುವ ಬದಲು ದುಃಖವೇ ಸಿಗುತ್ತದೆ. ಹಣದ ಅಪವ್ಯಯವಾಗುತ್ತದೆ. ವಾತಾವರಣ ಕಲುಷಿತವಾಗುತ್ತದೆ. ಮೊದಲು ಪುರುಷಾರ್ಥಗಳನ್ನು ಸಾಧಿಸಿಯೇ ಆನಂದೋತ್ಸವವನ್ನು ಆಚರಿಸಲಾಗುತ್ತಿತ್ತು. ಇಂದು ಮಾತ್ರ ಪುರುಷಾರ್ಥರಹಿತವಾಗಿ ಆನಂದೋತ್ಸವವನ್ನು ಆಚರಿಸುವ ಸ್ಪರ್ಧೆಯೇ ನಡೆಯುತ್ತಿರುತ್ತದೆ. ಆದುದರಿಂದ ಸಹಜವಾಗಿ ಸಮಾಜದಲ್ಲಿ ಆನಂದವು ಕಾಣಿಸದೇ ದುಃಖದ ಕರಿ ನೆರಳು ಮಾತ್ರ ಕಾಣಿಸುತ್ತದೆ.

ಭಗವಂತನು ಪ್ರತಿಯೊಂದು ಅವತಾರದಲ್ಲಿ ತಮೋಗುಣಿಯಾಗಿರುವ ರಾಕ್ಷಸರ ಪ್ರಾಬಲ್ಯವನ್ನು ನಾಶಗೊಳಿಸಿರುವುದು !

ಮೇಲಿನ ಎಲ್ಲ ತಮೋರೂಪೀ ಅಂಧಃಕಾರವನ್ನು (ರಾಕ್ಷಸೀ ಪ್ರವೃತ್ತಿಯ) ನಾಶಗೊಳಿಸಲು ಹಿಂದೂಗಳು ಸಂಘಟಿತರಾಗಬೇಕು. ಭ್ರಷ್ಟಾಚಾರ ಅನಾಚಾರದಂತಹ ದುಷ್ಪ್ರವೃತ್ತಿಗಳನ್ನು ಸಂಹರಿಸಲು ಹೆಜ್ಜೆಗಳನ್ನಿಡಬೇಕು. ಯಾವಾಗ ಅಧರ್ಮದ ಪ್ರಮಾಣವು ಹೆಚ್ಚಾಗುತ್ತದೆಯೋ ಆಗ ಭಗವಂತನು ಸ್ವತಃ ಅವತಾರ ತಾಳುತ್ತಾನೆ ಮತ್ತು ಕಾಲಚಕ್ರವನ್ನು ಮುಂದೆ ಕೊಂಡೊಯ್ಯುತ್ತಾನೆ. ಅಂದರೆ ಅವನು ಅವಶ್ಯಕತೆಗನುಸಾರ ಸಂಪೂರ್ಣ ಸಂಸಾರವನ್ನು (ಪ್ರಪಂಚ) ಲಯಗೊಳಿಸಲು ಸಹ ಹಿಂದೆ ಮುಂದೆ ನೋಡುವುದಿಲ್ಲ. ಹಾಗಾಗಿ ಕೌರವ – ಪಾಂಡವರ ಹೋರಾಟ ನಡೆಯುತ್ತಿರುವಾಗ ಹತಾಶನಾಗಿದ್ದ ಅರ್ಜುನನಿಗೆ ಭಗವಂತನು ಮುಂದಿನಂತೆ ಉಪದೇಶ ಮಾಡುತ್ತಾನೆ.

ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ, ಜಿತ್ವಾ ವಾ ಭೋಕ್ಷ್ಯಸೆ ಮಹೀಮ್|
ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕೃತನಿಶ್ಚಯಃ||

– ಶ್ರೀಮದ್ಭವದ್ಗೀತೆ, ಅಧ್ಯಾಯ ೨, ಶ್ಲೋಕ ೩೭

ಅರ್ಥ: ಹೇ ಅರ್ಜುನನೇ, ನೀನು ಯುದ್ಧದಲ್ಲಿ ಮರಣವನ್ನಪ್ಪಿದರೆ ಸ್ವರ್ಗಕ್ಕೆ ಹೋಗುವೆ ಅಥವಾ ಗೆದ್ದರೆ ಪೃಥ್ವಿಯ ರಾಜ್ಯವನ್ನು ಅನುಭವಿಸುವೆ. (ಹಾಗಾಗಿ) ಎಲೈ ಅರ್ಜುನನೇ, ಯಾವುದೇ ಚಿಂತೆಯನ್ನು ಮಾಡದೇ (ನಿಶ್ಚಿಂತನಾಗಿ) ಎದ್ದೇಳು, ದೃಢಸಂಕಲ್ಪ ಮಾಡಿ ಯುದ್ಧಕ್ಕೆ ಸಿದ್ಧನಾಗು !

೨ಅ. ಪ್ರಭು ಶ್ರೀರಾಮಚಂದ್ರನು ರಾವಣನ ತೊಂದರೆಯಿಂದ ಜನತೆಯನ್ನು ಮುಕ್ತಗೊಳಿಸಲು ೧೪ ವರ್ಷಗಳ ಕಾಲ ವನವಾಸವನ್ನು ಸ್ವೀಕರಿಸಿದನು. ಇಷ್ಟು ದೊಡ್ಡ ಭಾರತದೇಶವನ್ನು ಕಾಲ್ನಡಿಗೆಯಲ್ಲಿ ಮತ್ತು ಪ್ರಸಂಗ ಬಂದಾಗ ಸೇತುವೆಯನ್ನು ಕಟ್ಟಿ ಶ್ರೀಲಂಕಾಗೆ ಹೋಗಿ ರಾವಣರೂಪೀ ದೈತ್ಯನನ್ನು ನಾಶಗೊಳಿಸಿದನು ಮತ್ತು ಅಯೋಧ್ಯೆಗೆ ಮರಳಿದ ನಂತರ ಅಲ್ಲಿನ ಜನತೆಯು ಆನಂದೋತ್ಸವ ಅಂದರೆ ದೀಪಾವಳಿಯನ್ನು ಆಚರಿಸಿತು.

೨ಆ. ಶ್ರೀಕೃಷ್ಣನು ಸಮಷ್ಟಿಗಾಗಿ ತನ್ನ ಮಾವನನ್ನು ಸಹ ಬಿಡಲಿಲ್ಲ. ಯಾವಾಗ ಕುಂತಿಯ ಅಂದರೆ ಅವನ ಅತ್ತೆಯ ಮಕ್ಕಳು ಸಂಕಟದಲ್ಲಿ ಸಿಲುಕಿದರೋ ಆಗ ಅವರ ಅಧರ್ಮೀ ದೊಡ್ಡಪ್ಪನ ಮಕ್ಕಳನ್ನು ಸಹ ಸಂಹರಿಸುವ ಆಜ್ಞೆಯನ್ನು ನೀಡಿದನು. ಇಷ್ಟು ಮಾತ್ರವಲ್ಲ ಶ್ರೀಕೃಷ್ಣನಿಗೆ ಯಾವಾಗ ತನ್ನ ವಂಶಜರು ಮದೋನ್ಮತ್ತರಾಗಿದ್ದಾರೆ, ಅಧರ್ಮದ ರಾಜಕಾರಣ ಮಾಡುತ್ತಿದ್ದಾರೆ ಎಂದು ತಿಳಿಯಿತೋ ಆಗ ಅವನು ಯಾವುದೇ ವಿಚಾರ ಮಾಡದೇ ಸಮಾಜಹಿತಕ್ಕಾಗಿ, ಸಮಷ್ಟಿಗಾಗಿ ತನ್ನದೇ ಆಗಿದ್ದ ದ್ವಾರಕೆಯನ್ನೇ ಮುಳುಗಿಸಿದನು ಮತ್ತು ಯದು ವಂಶವನ್ನೇ ನಾಶ ಮಾಡಿದನು.

ಅಯೋಗ್ಯವಿರುವುದನ್ನು ನಾಶ ಮಾಡಿ ಮಂಗಲವನ್ನು ಸ್ಥಾಪಿಸುವುದೇ ಹಿಂದೂ ಧರ್ಮದ ಧ್ಯೇಯ !

ಅಯೋಗ್ಯವಾಗಿರುವುದನ್ನೆಲ್ಲ ಭಗವಂತನು ಅವಶ್ಯಕತೆಗನುಸಾರ ನಾಶ ಮಾಡಿದ್ದಾನೆ. ಕಾಲಚಕ್ರದ ಲೆಕ್ಕಾಚಾರವು ಹೇಗಿದೆ ಎಂದರೆ ಪ್ರತಿಯೊಂದು ಘೋರ ಕಲಿಯುಗದ ನಂತರ ಅಥವಾ ತಮೋಗುಣದ ಘೋರ ಯುಗದ ನಂತರ ಭಗವಂತನು ಸ್ವತಃ ಕಾಲಚಕ್ರವನ್ನು ಮುಂದೆ ತಳ್ಳುತ್ತಾನೆ ಮತ್ತು ಸತ್ಯಯುಗವು ಅವತರಿಸುತ್ತದೆ. ಅದಕ್ಕಾಗಿ ಅಗತ್ಯ ಬಿದ್ದಲ್ಲಿ ಭಗವಂತನು ಸ್ವತಃ ಮಹಾಪ್ರಳಯವನ್ನು ನಡೆಸುತ್ತಾನೆ. ಅಯೋಗ್ಯವಾಗಿರುವುದನ್ನು ನಾಶಗೊಳಿಸಿ ಮಂಗಲವನ್ನು ಸ್ಥಾಪಿಸುವುದೇ ಹಿಂದೂ ಧರ್ಮದ ಧ್ಯೇಯವಾಗಿದೆ. ಹಾಗಾಗಿಯೇ ಭಗವಂತನು ಮುಂದಿನಂತೆ ಹೇಳಿದ್ದಾನೆ,

ಏವಂ ಪ್ರವತಿತಂ ಚಕ್ರಂ ನಾನುರರ್ತ ಯತೀಹ ಯಃ|
ಅದ್ಯಾಯುರಿದ್ರೀ ಯಾರಾಮೋ ಮೋಘಂ ಪಾರ್ಥ ಸ ಜೀವತೀ||

-ಶ್ರೀಮದ್ಭಗವದ್ಗೀತೆ, ಅಧ್ಯಾಯ ೩, ಶ್ಲೋಕ ೧೬.

ಅರ್ಥ: ಎಲೈ ಪಾರ್ಥನೆ, ಯಾವ ಪುರುಷನು ಈ ಜಗತ್ತಿನಲ್ಲಿ ಭಗವಂತನು ಆಯೋಜಿಸಿದ ಪರಂಪರೆಯಿಂದ ನಡೆಯುತ್ತಿರುವ ಸೃಷ್ಟಿಚಕ್ರಕ್ಕೆ ಅನುಸಾರವಾಗಿ ವರ್ತಿಸುವುದಿಲ್ಲವೋ ಅಂದರೆ ತನ್ನ ಕರ್ತವ್ಯಗಳನ್ನು ಪಾಲಿಸುವುದಿಲ್ಲವೋ, ಇಂದ್ರಿಯಗಳ ಮೂಲಕ ಭೋಗಗಳಲ್ಲಿ ರಮಿಸುವ (ಅಂದರೆ ಇಂದಿನ ಭೋಗವಾದೀ ವಾತಾವರಣದಲ್ಲಿ ಜೀವಿಸುವ) ಪುರುಷನು ವ್ಯರ್ಥವಾಗಿ ಜೀವಿಸುತ್ತಾನೆ. ಇಂತಹ ನಿರರ್ಥಕ ಮೂರ್ಛಾವಸ್ಥೆಯಲ್ಲಿ (‘ಕೋಮಾ’ಕ್ಕೆ ಹೋಗಿ) ಜೀವಿಸುವುದಕ್ಕಿಂತ ಸಂಕಟಗಳನ್ನು ಎದುರಿಸಿ ಮೃತ್ಯು ಬಂದರೂ ಅದು ಹೆಚ್ಚು ಉತ್ತಮವಾಗಿರುತ್ತದೆ.

ಇದಕ್ಕೊಂದು ಉದಾಹರಣೆ ಎಂದರೆ ಕೊಂಡಾಣ ಕೋಟೆಯ ಯುದ್ಧದಲ್ಲಿ ಉಗ್ರವಾಗಿ ಹೋರಾಡಿ ತಾನಾಜಿ ಮಾಲುಸರೆ ನೆಲಕ್ಕುರುಳಿದಾಗ ಶಿವಾಜಿಯ ವೀರ ಸೈನಿಕರು ‘ಮಾಡು ಇಲ್ಲ ಮಡಿ’ ಎಂಬಂತೆ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದರು ಮತ್ತು ಕೊಂಡಾಣವನ್ನು ಗೆದ್ದರು. ಛತ್ರಪತಿ ಶಿವಾಜಿ ಮಹಾರಾಜರು ತಾನಾಜಿಯ ಬಲಿದಾನದ ವಿಷಯದಲ್ಲಿ ಮುಂದಿನಂತೆ ಉದ್ಗರಿಸಿದರು – ‘ಕೋಟೆ ಸಿಕ್ಕಿತು ಆದರೆ ಸಿಂಹ ಮರೆಯಾಯಿತು !’

ಮಾನವೀ ಜೀವನದ ಧ್ಯೇಯ ಮರೆತು ದೀಪಾವಳಿಯನ್ನು ಆಚರಿಸುವುದು ಯೋಗ್ಯವೇ ?

ಇಂದು ಯಾವ ಭೋಗವಾದಿ ಪದ್ಧತಿಯಿಂದ ಹಿಂದೂಗಳು ದೀಪಾವಳಿಯನ್ನು ಆಚರಿಸಲು ಇಚ್ಛಿಸುತ್ತಾರೆಯೋ ಅದು ಮಾನವನ ಜೀವನ ಧ್ಯೇಯಕ್ಕೆ ವಿರುದ್ಧವಾಗಿದೆ. ಪೃಥ್ವಿಯಲ್ಲಿ ಜನ್ಮ ತಾಳಿ ಸಾಧನೆಯನ್ನು ಮಾಡಿ ಭಗವಂತನೊಂದಿಗೆ ಏಕರೂಪವಾಗುವುದು ಮಾನವನ ಜನ್ಮದ ಧ್ಯೇಯ. ಈಶ್ವರಪ್ರಾಪ್ತಿಯೇ ನಿಜವಾದ ಸಚ್ಚಿದಾನಂದ ಅವಸ್ಥೆಯಾಗಿದೆ. ಭಗವಂತನು ನಮ್ಮಲ್ಲಿ ಸ್ವತಃ ಚೈತನ್ಯ ಜ್ಯೋತಿಯ ರೂಪದಲ್ಲಿರುತ್ತಾನೆ ನಮ್ಮ ಸೇವೆಯನ್ನು ಮಾಡುತ್ತಾನೆ ಮತ್ತು ನಾವು ಮಾತ್ರ ಅವನ ಚೈತನ್ಯದ ದುರುಪಯೋಗ ಮಾಡುತ್ತೇವೆ. ಹಾಗಾಗಿ ಈ ಸಂಸಾರದ ಮೋಹಜಾಲದಲ್ಲಿ ಅಮೂಲ್ಯ ಜೀವನವನ್ನು ವ್ಯರ್ಥವಾಗಿ ಕಳೆಯುವುದು ಯೋಗ್ಯವಾಗಿದೆಯೇ? ಒಂದು ವೇಳೆ ಮಾನವನು ಆ ರೀತಿಯಲ್ಲಿ ಜೀವನವನ್ನು ವ್ಯರ್ಥ ಕಳೆದರೆ ಭಗವಂತನು ಸ್ವತಃ ದೊಡ್ಡ ಪ್ರಳಯವನ್ನು ನಡೆಸುವನು ಮತ್ತು ನಾವೆಲ್ಲರೂ ಅದರಲ್ಲಿ ನಾಶವಾಗುವೆವು.

ಹಿಂದೂ ರಾಷ್ಟ್ರದ ನಿರ್ಮಿತಿಯು ರಾಷ್ಟ್ರದ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದೆ !

ಮೇಲೆ ಹೇಳಿದಂತೆ ಯಾವುದೇ ಪಕ್ಷದ ರಾಜಕಾರಣಿಗಳಲ್ಲಿ ಅಧಿಕಾರಪ್ರಾಪ್ತಿಯ ಹೊರತು ಬೇರೆ ಯಾವುದೇ ಧ್ಯೇಯ ಧೋರಣೆಗಳಿಲ್ಲ, ನಾಗರಿಕರ ಜೀವದ ಚಿಂತೆಯಿಲ್ಲ, ಹಾಗಾಗಿ ಅವರು ದೇಶವನ್ನು ಆಳಲು ಯೋಗ್ಯರಲ್ಲ. ಆದುದರಿಂದ ಸನಾತನವು ಹಿಂದೂ ರಾಷ್ಟ್ರದ ನಿರ್ಮಿತಿಯ ಧ್ಯೇಯವನ್ನು ಸಮಾಜದೆದುರು ಇಟ್ಟಿದೆ. ಹಿಂದೂ ರಾಷ್ಟ್ರ ಎಂದರೆ ರಾಮರಾಜ್ಯದ ಅಂದರೆ ಆದರ್ಶ ರಾಜ್ಯದ ನಿರ್ಮಿತಿಯು ಈ ರಾಷ್ಟ್ರದ ಎಲ್ಲ ಸಮಸ್ಯೆಗಳನ್ನು ಬುಡ ಸಮೇತ ನಾಶ ಮಾಡುವ ಪರಿಹಾರೋಪಾಯವಾಗಿದೆ.

ಹಿಂದೂ ರಾಷ್ಟ್ರದಲ್ಲಿನ ರಾಜ್ಯ ಕಾರುಬಾರಿನ ಪದ್ಧತಿಯೇ ಈ ದೇಶವನ್ನು ಸುಖೀ, ಸಮೃದ್ಧ ಮಾಡಬಲ್ಲದು. ಆಗಲೇ ಸಮಸ್ತ ನಾಗರಿಕರು ನಿಜವಾದ ಅರ್ಥದಿಂದ ದೀಪಾವಳಿಯನ್ನು ಆಚರಿಸಲು ಯೋಗ್ಯರಾಗುವರು ! ಹಾಗಾಗಿ ಹಿಂದೂಗಳೇ, ಹಿಂದೂ ರಾಷ್ಟ್ರದ ನಿರ್ಮಿತಿಯ ಕಾರ್ಯದಲ್ಲಿ ತನು, ಮನ ಮತ್ತು ಧನಗಳನ್ನು ಅರ್ಪಿಸಿ ಪಾಲ್ಗೊಳ್ಳಿರಿ !

– ಪ.ಪೂ. ಪಾಂಡೆ ಮಹಾರಾಜರು, ದೇವದ, ಪನವೇಲ.

Leave a Comment