ಅ. ತಿಥಿ:
ಪ್ರತಿಯೊಂದು ತಿಂಗಳಿನಲ್ಲಿ ಬರುವ ಶುಕ್ಲ ಮತ್ತು ಕೃಷ್ಣ ತ್ರಯೋದಶಿಯಂದು ಸೂರ್ಯಾಸ್ತದ ನಂತರದ ಮೂರು ಘಳಿಗೆಗಳ ಕಾಲಕ್ಕೆ ‘ಪ್ರದೋಷ’ ಎನ್ನುತ್ತಾರೆ.
ಆ. ವ್ರತವನ್ನು ಮಾಡುವ ಪದ್ಧತಿ:
ಇಂದು ದಿನವಿಡೀ ಉಪವಾಸ ಮತ್ತು ಉಪಾಸನೆಯನ್ನು ಮಾಡಿ ರಾತ್ರಿ ಶಿವಪೂಜೆಯ ನಂತರ ಭೋಜನ ಮಾಡಬೇಕು. ಪ್ರದೋಷದ ಮರುದಿನ ಶ್ರೀವಿಷ್ಣುಪೂಜೆಯನ್ನು ಅವಶ್ಯವಾಗಿ ಮಾಡಬೇಕು. ಈ ವ್ರತವನ್ನು ಆದಷ್ಟು ಉತ್ತರಾಯಣದಲ್ಲಿ ಪ್ರಾರಂಭಿಸಬೇಕು. ಈ ವ್ರತವು ಮೂರರಿಂದ ಹನ್ನೆರಡು ವರ್ಷಗಳ ಅವಧಿಯದ್ದಾಗಿರುತ್ತದೆ.
ಇ. ನಿಷೇಧ:
ಪ್ರದೋಷಕಾಲದಲ್ಲಿ ವೇದಾಧ್ಯಯನವನ್ನು ಮಾಡಬಾರದು ಎಂದು ಹೇಳಲಾಗಿದೆ; ಏಕೆಂದರೆ ಇದು ರಾತ್ರಿಯ ಸಮಯದಲ್ಲಿನ ವ್ರತವಾಗಿದೆ ಮತ್ತು ವೇದಾಧ್ಯಯನವನ್ನು ಸೂರ್ಯನಿರುವಾಗ ಮಾಡಬೇಕಾಗುತ್ತದೆ.
ಈ. ವಿಧಗಳು :
ಸೋಮವಾರ ಬರುವ ಪ್ರದೋಷಕ್ಕೆ ಸೋಮಪ್ರದೋಷವೆನ್ನುತ್ತಾರೆ, ಮಂಗಳವಾರ ಬರುವ ಪ್ರದೋಷಕ್ಕೆ ಭೌಮಪ್ರದೋಷವೆನ್ನುತ್ತಾರೆ ಮತ್ತು ಶನಿವಾರ ಬರುವ ಪ್ರದೋಷಕ್ಕೆ ಶನಿಪ್ರದೋಷವೆಂದು ಕರೆಯುತ್ತಾರೆ. ಕೃಷ್ಣ ಪಕ್ಷದಲ್ಲಿನ ಪ್ರದೋಷವು ಒಂದು ವೇಳೆ ಶನಿವಾರ ಬಂದರೆ ಅದನ್ನು ವಿಶೇಷ ಫಲದಾಯಕವೆಂದು ತಿಳಿದುಕೊಳ್ಳಲಾಗುತ್ತದೆ.
(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ “ಶಿವ”)

ಗುರುಪೂರ್ಣಿಮೆ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ (2026)
ಆಷಾಢ ಏಕಾದಶಿ
ವಿಜಯದಶಮಿ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆಯವರ ಸಂದೇಶ
ರಕ್ಷಾಬಂಧನ (ರಾಖಿ ಹುಣ್ಣಿಮೆ) Raksha bandhan 2025
ವಿಜಯ ದಶಮಿ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ
ಸಂಪೂರ್ಣ ಶ್ರೀ ಗಣೇಶ ಪೂಜೆ