ಶ್ರೀ ದತ್ತ ಜಯಂತಿ (Shri Datta Jayanti 2023)

 

ದತ್ತ ಜಯಂತಿ ಮಹತ್ವ

ದತ್ತ ಜಯಂತಿಯಂದು (ಮಾರ್ಗಶಿರ ಹುಣ್ಣಿಮೆ) ಪೃಥ್ವಿಯ ಮೇಲೆ ದತ್ತತತ್ತ್ವವು ನಿತ್ಯದ ತುಲನೆಯಲ್ಲಿ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ದಿನ ಮನಃಪೂರ್ವಕ ದತ್ತನ ನಾಮಜಪಾದಿ ಉಪಾಸನೆಯನ್ನು ಮಾಡಿದರೆ ದತ್ತತತ್ತ್ವದ ಆದಷ್ಟು ಹೆಚ್ಚು ಲಾಭವಾಗಲು ಸಹಾಯವಾಗುತ್ತದೆ. ದತ್ತನ ನಾಮಜಪದಿಂದ ಮರ್ತ್ಯಲೋಕದಲ್ಲಿ ಸಿಲುಕಿಕೊಂಡಿರುವ ಪೂರ್ವಜರಿಗೆ ಗತಿಯು ಸಿಗುತ್ತದೆ. ಮುಂದೆ ಅವರು ಅವರ ಕರ್ಮಗಳಿಗನುಸಾರ ಮುಂದುಮುಂದಿನ ಲೋಕಕ್ಕೆ ಹೋಗುವುದರಿಂದ ಸಹಜವಾಗಿಯೇ ಅವರಿಂದ ನಮಗಾಗುವ ತೊಂದರೆಗಳ ಪ್ರಮಾಣವು ಕಡಿಮೆಯಾಗುತ್ತದೆ. 2023 ರಲ್ಲಿ ದತ್ತ ಜಯಂತಿಯನ್ನು 26 ಡಿಸೆಂಬರ್, ಮಂಗಳವಾರದಂದು ಆಚರಿಸಲಾಗುವುದು.

ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ಮತ್ತು ಅವರಿಗೆ ಸದ್ಗತಿಯನ್ನು ಪ್ರದಾನಿಸುವ ದೇವತೆ – ದತ್ತ

| ಶ್ರೀ ಗುರುದೇವ ದತ್ತ |

ದತ್ತ ನಾಮಜಪ

ಅತೃಪ್ತ ಪೂರ್ವಜರಿಂದ ಯಾವುದೇ ರೀತಿಯ ತೊಂದರೆ ಇಲ್ಲದಿದ್ದಲ್ಲಿ ಮತ್ತು ಮುಂದೆ ತೊಂದರೆಗಳು ಆಗಬಾರದೆಂದು, ಹಾಗೆಯೇ ಸ್ವಲ್ಪ ತೊಂದರೆ ಇದ್ದರೆ ಪ್ರತಿದಿನ 1 ರಿಂದ 2 ಗಂಟೆ ‘ಶ್ರೀ ಗುರುದೇವ ದತ್ತ|’ ನಾಮಜಪವನ್ನು ಮಾಡಬೇಕು. ಈ ಜಪವನ್ನು ಕೆಳಗೆ ನೀಡಲಾಗಿದೆ.

ಅವಶ್ಯ ಓದಿ…

ದತ್ತನ ‘ಶ್ರೀ ಗುರುದೇವ ದತ್ತ’ ನಾಮಜಪದಿಂದ ವ್ಯಕ್ತಿಯ ಮೇಲಾಗುವ ಪರಿಣಾಮವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ನಡೆಸಲಾದ ಪ್ರಯೋಗದ ಬಗ್ಗೆ ಓದಿ….

ದತ್ತ ನಾಮಜಪ ಮಾಡುವುದರಿಂದ ಬಂದಂತಹ ಅನುಭೂತಿಗಳು

ನಿಮಗೂ ದತ್ತ ಜಪ ಮಾಡಿದ ನಂತರ ಇಂತಹ ಅನುಭೂತಿಗಳು ಬಂದಿದ್ದರೆ ನಮಗೆ ತಿಳಿಸಿ. ಇದರಿಂದ ಇತರರಿಗೂ ನಾಮಜಪ ಮಾಡುವ ಪ್ರೇರಣೆ ದೊರೆಯುವುದು.


ದತ್ತಗುರುಗಳಿಗೆ ಮಾಡಬೇಕಾದ ಕೆಲವು ಪ್ರಾರ್ಥನೆಗಳು

೧. ಹೇ ದತ್ತಾತ್ರೇಯಾ, ನೀನು ಇಪ್ಪತ್ನಾಲ್ಕು ಗುಣಗುರುಗಳನ್ನು ಮಾಡಿದಂತೆ ನನ್ನಲ್ಲಿಯೂ ಎಲ್ಲರಲ್ಲಿರುವ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳುವ ವೃತ್ತಿಯನ್ನು ನಿರ್ಮಿಸು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ.
೨. ಹೇ ದತ್ತಾತ್ರೇಯಾ, ಭುವರ್ಲೋಕದಲ್ಲಿ ಸಿಲುಕಿಕೊಂಡಿರುವ ನನ್ನ ಅತೃಪ್ತ ಪೂರ್ವಜರಿಗೆ ಮುಂದಿನ ಗತಿಯನ್ನು ಪ್ರದಾನಿಸು.
೩. ಹೇ ದತ್ತಾತ್ರೇಯಾ, ನನ್ನನ್ನು ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸು. ನಿನ್ನ ರಕ್ಷಾಕವಚವು ನನ್ನ ಸುತ್ತಲೂ ಸದಾಕಾಲ ಇರಲಿ, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ.

ದತ್ತ ಜಯಂತಿಯಂದು ದತ್ತನ ಉಪಾಸನೆಗೆಂದು ಮುಂದಿನ ಕೃತಿಗಳನ್ನು ಮಾಡಿ!

ಸಾಧ್ಯವಾದಷ್ಟು ದತ್ತನ ನಾಮ ಜಪಿಸಿ ಮತ್ತು ಪ್ರಾರ್ಥನೆ ಮಾಡಿ

ಭಾವಪೂರ್ಣವಾಗಿ ದತ್ತಾತ್ರೇಯನ ಪೂಜೆ ಮಾಡಿ ಆರತಿ ಬೆಳಗಿಸಿ

ದತ್ತ ತತ್ವವನ್ನು ಆಕರ್ಶಿಸಿ ಪ್ರಕ್ಷೇಪಿಸುವ ರಂಗೋಲಿಯನ್ನು ಬಿಡಿಸಿ 

ದತ್ತ ಜಯಂತಿಯ ಬಗ್ಗೆ ವೀಡಿಯೋ ನೋಡಿ

ದತ್ತಗುರುಗಳ ಬಗ್ಗೆ ಮಾಹಿತಿಯನ್ನು ಓದಿ

ಉಪಾಸನೆಗೆ ಪೂರಕವಾಗಿರುವ ಈ ವಸ್ತುಗಳನ್ನು ತಮ್ಮದಾಗಿಸಿ

ದತ್ತಗುರುಗಳ ಸ್ತೋತ್ರಗಳು