ಆನ್‌ಲೈನ್ ಸತ್ಸಂಗ (27)

ಇಂದಿನ ತನಕ ನಾವು ೨೬ ಲೇಖನಗಳನ್ನು ಓದಿದ್ದೇವೆ. ಈ ಲೇಖನಗಳಲ್ಲಿ ನಾವು ಸಾಧನೆಯ ದೃಷ್ಟಿಯಿಂದ ಅನೇಕ ಮಹತ್ವಪೂರ್ಣ ವಿಷಯಗಳನ್ನು ಸಹ ನೋಡಿದೆವು. ಆರಂಭದಲ್ಲಿ ಲೇಖನಗಳಲ್ಲಿ ನಾವು ಸಾಧನೆಯ ಸಿದ್ಧಾಂತಗಳನ್ನು ಅರಿತುಕೊಂಡೆವು. ‘ವ್ಯಕ್ತಿಯಷ್ಟು ಪ್ರಕೃತಿ, ಮತ್ತು ಅಷ್ಟೇ ಸಾಧನಾಮಾರ್ಗಗಳು’ ಎಂಬ ಅಧ್ಯಾತ್ಮದ ಒಂದು ಮೂಲಭೂತ ಸಿದ್ಧಾಂತವಿದೆ. ಆ ದೃಷ್ಟಿಯಿಂದ ನಮ್ಮ ಇಷ್ಟಾನಿಷ್ಟ, ಕೌಶಲ್ಯ, ನಮ್ಮ ಜ್ಞಾನ ಅಥವಾ ಅಭ್ಯಾಸ, ನಮ್ಮ ಶಾರೀರಿಕ, ಬೌದ್ಧಿಕ ಕ್ಷಮತೆಗನುಸಾರ ಸಾಧನೆಯನ್ನು ಮಾಡಲು ಪ್ರಯತ್ನಿಸಿದರೆ ನಮ್ಮ ಆಧ್ಯಾತ್ಮಿಕ ಉನ್ನತಿಯು ಸಹ ವೇಗವಾಗಿ ಆಗುತ್ತದೆ. ಗುರುಗಳನ್ನು … Read more

ಆನ್‌ಲೈನ್ ಸತ್ಸಂಗ (26)

ಗುಣಗಳ ವಿಕಾಸವಾಗಿರುವ ವ್ಯಕ್ತಿಯು ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಮಾನಸಿಕ ದೃಷ್ಟಿಯಿಂದ ಸ್ಥಿರ ಹಾಗೂ ಆನಂದಿಯಾಗಿರಬಹುದು. ಆದುದರಿಂದ ಈಗ ನಾವು ಗುಣಸಂವರ್ಧನೆಯನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ.

ಆನ್‌ಲೈನ್ ಸತ್ಸಂಗ (25)

ಆಪತ್ಕಾಲ ಮತ್ತು ಸಾಧನೆ  ಹೇಗೆ ಒಳ್ಳೆಯದು ಹಾಗೂ ಕೆಟ್ಟದು ಹೀಗೆ ಎರಡು ಭಾಗಗಳಿರುತ್ತವೆಯೋ ಹಾಗೆಯೇ ಕಾಲದಲ್ಲಿಯೂ ಎರಡು ವಿಧಗಳಿರುತ್ತವೆ. ಒಂದು ಅನುಕೂಲ ಕಾಲ, ಮತ್ತೊಂದು ಪ್ರತಿಕೂಲ ಕಾಲ. ಅನುಕೂಲ ಕಾಲ ಎಂದರೆ ಸಂಪತ್ಕಾಲ ಮತ್ತು ಪ್ರತಿಕೂಲ ಕಾಲವೆಂದರೆ ಆಪತ್ಕಾಲ ಅಥವಾ ಸಂಕಟದ ಕಾಲ. 2020 ರಲ್ಲಿ ನಾವು ವರ್ಷವಿಡೀ ಕೊರೋನಾ ಮಹಾಮಾರಿಯನ್ನು ಎದುರಿಸಿದೆವು. ಒಂದು ಸೂಕ್ಷ್ಮ ವಿಷಾಣುವು ಇಡೀ ಜಗತ್ತಿನಲ್ಲಿ ಸಂಚಾರವನ್ನು ಹೇಗೆ ನಿಲ್ಲಿಸಿಬಿಟ್ಟಿತು ಎಂಬುದನ್ನು ನಾವು ಅನುಭವಿಸಿದೆವು. ಕೊರೋನಾದ ತೀವ್ರತೆಯು ಕಡಿಮೆಯಂತೂ ಆಗಿಲ್ಲ, ಅದರ ಬದಲಿಗೆ … Read more

ಆನ್‌ಲೈನ್ ಸತ್ಸಂಗ (24)

ಇದುವರೆಗೆ ನಾವು ಜೀವನದಲ್ಲಿ ಸಾಧನೆ ಮಾಡುವುದರ ಮಹತ್ವ, ಅಷ್ಟಾಂಗ ಸಾಧನೆಯ ಸೂತ್ರಗಳು ಹಾಗೂ ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯ ಬಗ್ಗೆ ತಿಳಿದುಕೊಂಡಿದ್ದೇವೆ. ಈಗ ನಾವು ಪ್ರಾರಬ್ಧ, ಅಂದರೆ ಯಾವುದನ್ನು ಸಾಮಾನ್ಯ ಭಾಷೆಯಲ್ಲಿ ಹಣೆಬರಹ ಎನ್ನಲಾಗುತ್ತದೆಯೋ, ಅದು ಏನು ? ಸಂಚಿತಕರ್ಮ, ಕ್ರಿಯಾಮಾಣ ಕರ್ಮ ಎಂದರೇನು ? ಮನುಷ್ಯನ ಜೀವನದ ಮೇಲೆ ಇವುಗಳಿಂದ ಹೇಗೆ ಪರಿಣಾಮವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಮನುಷ್ಯನ ಜೀವನ ಎಂದ ಮೇಲೆ ಸುಖ ಮತ್ತು ದುಃಖ ಇದ್ದದ್ದೇ. ಜೀವನದಲ್ಲಿ ದುಃಖ ಬೇಡ ಎಂದು ಹೇಳಿ ಅದರಿಂದ ತಪ್ಪಿಸಿಕೊಳ್ಳಲಾಗದು. … Read more

ಆನ್‌ಲೈನ್ ಸತ್ಸಂಗ (23)

ಕರ್ಮಕಾಂಡ, ಉಪಾಸನಾಕಾಂಡ ಮತ್ತು ಜ್ಞಾನಕಾಂಡದ ಮಹತ್ವ ಕರ್ಮಕಾಂಡ, ಉಪಾಸನಾಕಾಂಡ ಮತ್ತು ಜ್ಞಾನಕಾಂಡದ ಉಪಾಸನಾ ಪದ್ಧತಿಗಳ ತುಲನಾತ್ಮಕ ಮಹತ್ವ ಮತ್ತು ಶೀಘ್ರ ಆಧ್ಯಾತ್ಮಿಕ ಪ್ರಗತಿಗಾಗಿ ಸಾಧನೆಯೆಂದು ಯಾವ್ಯಾವ ಪ್ರಯತ್ನಗಳನ್ನು ಮಾಡಬೇಕು ಎಂಬ ಮಹತ್ವಪೂರ್ಣ ವಿಷಯವನ್ನು ಅರಿತುಕೊಳ್ಳೋಣ… ಸತ್ಸಂಗದ ಮಹತ್ವ ಮೊದಲಿಗೆ ನಾವು ಸಾಧನೆಯನ್ನು ಮಾಡುವುದರ ಮತ್ತು ಸತ್ಸಂಗದ ಮಹತ್ವವನ್ನು ತಿಳಿದುಕೊಳ್ಳೋಣ. ನಾವು ಸತ್ಸಂಗಕ್ಕೆ ಏಕೆ ಬರುತ್ತೇವೆ? ‘ನಮಗೆ ಒಳ್ಳೆಯದೆನಿಸುತ್ತದೆ, ಮನಸ್ಸು ಶಾಂತವಾಗುತ್ತದೆ, ಹೊಸ ವಿಷಯ ಕಲಿಯಲು ಸಿಗುತ್ತದೆ’ ಎಂದು ನಾವು ಸತ್ಸಂಗಕ್ಕೆ ಬರುತ್ತೇವಲ್ಲವೇ? ಸತ್ಸಂಗದಲ್ಲಿ ನಮಗೆ ಆನಂದ ಸಿಗುತ್ತದೆ. … Read more

ಆನ್‌ಲೈನ್ ಸತ್ಸಂಗ (20)

ಇ-೧ ಮತ್ತು ಇ-೨ ಸ್ವಯಂಸೂಚನಾ ಪದ್ಧತಿ ಇದುವರೆಗೆ ನಾವು ‘ಅ-೧’, ‘ಅ-೨’, ಮತ್ತು ‘ಅ-೩’, ‘ಆ-೧’ ಮತ್ತು ‘ಆ-೨’ ಈ ಸ್ವಯಂಸೂಚನಾ ಪದ್ಧತಿಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಈಗ ನಾವು ಕೊನೆಯ ಎರಡು ಪದ್ಧತಿಗಳ ಬಗ್ಗೆ ಅಂದರೆ ಇ-೧ ಮತ್ತು ಇ-೨ ಸ್ವಯಂಸೂಚನಾ ಪದ್ಧತಿಗಳ ಬಗ್ಗೆ ಕಲಿಯೋಣ. ಪ್ರತಿಯೊಬ್ಬರಲ್ಲಿಯೂ ಈಶ್ವರನ ಅಂಶವಿದೆ. ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ ಅಂದರೆ ನಮ್ಮಲ್ಲಿರುವ ಸ್ವಭಾವದೋಷಗಳನ್ನು ಮತ್ತು ಅಹಂಕಾರವನ್ನು ನಷ್ಟಗೊಳಿಸಿ ನಮ್ಮಲ್ಲಿರುವ ಈಶ್ವರಿ ತತ್ತ್ವವನ್ನು ಪ್ರಕಟಗೊಳಿಸುವ ಪ್ರಕ್ರಿಯೆ. ಶಿಲ್ಪಿಯು ಮೂರ್ತಿಯನ್ನು ತಯಾರಿಸುವಾಗ ಶಿಲೆಯನ್ನು ಕೆತ್ತಿ, … Read more

ಆನ್‌ಲೈನ್ ಸತ್ಸಂಗ (19)

ಆ-೨ ಸ್ವಯಂಸೂಚನೆ ಪದ್ಧತಿ ಕಳೆದ ಲೇಖನದಲ್ಲಿ ನಾವು ಆ-೧ ಸ್ವಯಂಸೂಚನೆ ಪದ್ಧತಿಯ ಬಗ್ಗೆ ತಿಳಿದುಕೊಂಡಿದ್ದೆವು. ಈಗ ನಾವು ಆ-೨ ಸ್ವಯಂಸೂಚನೆ ಪದ್ಧತಿಯ ಬಗ್ಗೆ ಅಭ್ಯಾಸ ಮಾಡಲಿದ್ದೇವೆ. ಆ-೧ ಹಾಗೂ ಆ-೨ ಸ್ವಯಂಸೂಚನೆ ಪದ್ಧತಿಯಲ್ಲಿರುವ ವ್ಯತ್ಯಾಸಗಳು ಬೇರೆಯವರ ಸ್ವಭಾವದೋಷ ದೂರ ಮಾಡಲು ಅಥವಾ ಅವರಿಗಿರುವ ಕಠಿಣ ಪರಿಸ್ಥಿತಿಯನ್ನು ಬದಲಾಯಿಸಿ ನಮ್ಮ ಮನಸ್ಸಿನ ಮೇಲೆ ಬರುವ ಒತ್ತಡ ಕಡಿಮೆ ಮಾಡುವುದು ಸಾಧ್ಯವಿದ್ದರೆ ನಾವು ಆ-೧ ಪದ್ಧತಿಯನ್ನು ಬಳಸಬಹುದು. ಬೇರೆಯವರ ಸ್ವಭಾವದೋಷ ಅಥವಾ ಕಠಿಣ ಪರಿಸ್ಥಿತಿಯನ್ನು ಬದಲಾಯಿಸುವುದು ಸಾಧ್ಯವಿರದಿದ್ದಾಗ ನಾವು ಆ-೨ … Read more

ಆನ್‌ಲೈನ್ ಸತ್ಸಂಗ (18)

ಆ-೧ ಸ್ವಯಂಸೂಚನಾ ಪದ್ಧತಿ ಇದುವರೆಗೆ ನಾವು ಅ-೧, ಅ-೨, ಮತ್ತು ಅ-೩ ಈ ಸ್ವಯಂಸೂಚನಾ ಪದ್ಧತಿಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಈಗ ಅದರ ಮುಂದಿನ ಸೂಚನಾಪದ್ಧತಿಯ ಬಗ್ಗೆ ಎಂದರೆ ಆ-೧ ಸ್ವಯಂಸೂಚನಾ ಪದ್ಧತಿಯ ಬಗ್ಗೆ ತಿಳಿದುಕೊಳ್ಳೋಣ. ಕೆಲವೊಮ್ಮೆ ಇತರರ ಅಯೋಗ್ಯ ವರ್ತನೆಯಿಂದ ನಮಗೆ ಒತ್ತಡವುಂಟಾಗುತ್ತದೆ ಅಥವಾ ಕೆಲಸದಲ್ಲಿ ತಪ್ಪುಗಳಾಗುತ್ತವೆ. ಇಂತಹ ಸಂದರ್ಭದಲ್ಲಿ ಎದುರಿನ ವ್ಯಕ್ತಿಯ ವರ್ತನೆಯನ್ನು ಬದಲಾಯಿಸುವುದು ಮತ್ತು ಅವರಲ್ಲಿ ಯೋಗ್ಯ ವರ್ತನೆಯ ಅಭ್ಯಾಸ ಮಾಡಿಸುವುದು ಸಾಧ್ಯವಿದ್ದರೆ ಆ-೧ ಪದ್ಧತಿಯಿಂದ ಸ್ವಯಂಸೂಚನೆಯನ್ನು ಕೊಟ್ಟು ನಮ್ಮ ಮನಸ್ಸಿಗಾಗುವ ಒತ್ತಡವನ್ನು ಕಡಿಮೆ … Read more