ಸ್ತ್ರೀಯರು ಆಭರಣಗಳನ್ನು ಧರಿಸುವುದರ ಮಹತ್ವ ಮತ್ತು ಲಾಭಗಳು

ಅ. ಆಭರಣಗಳಲ್ಲಿನ ತೇಜದಿಂದ ಸ್ತ್ರೀಯರಲ್ಲಿನ ಸ್ತ್ರೀತ್ವ, ಅಂದರೆ ರಜೋತತ್ತ್ವವು ಜಾಗೃತವಾಗುವುದು : ಆಭರಣಗಳು ರಜೋಗುಣೀ, ಹಾಗೆಯೇ ತೇಜದಾಯಿಯಾಗಿವೆ. ಈ ತೇಜವು ಸ್ತ್ರೀರೂಪ ದೇಹದಲ್ಲಿನ ರಜೋಗುಣದ ಕಾರ್ಯಕ್ಕೆ ಯೋಗ್ಯ ಮಾರ್ಗವನ್ನು ತೋರಿಸುತ್ತದೆ. ಇದರಿಂದ ಅವಳಿಂದ ಸಂಪೂರ್ಣ ವಿಶ್ವದ ಸತತವಾಗಿ ಗತಿಶೀಲವಾಗಿರುವ ಸ್ಥಳ ಮತ್ತು ಕಾಲ ಇವುಗಳನ್ನು ಜೋಡಿಸುವ ವೇಗರೂಪಿ ಪ್ರಕ್ರಿಯೆಗೆ ದಿಶೆ ಸಿಗುತ್ತದೆ. ಆಭರಣಗಳಲ್ಲಿರುವ ತೇಜದಿಂದ ಸ್ತ್ರೀಯರಲ್ಲಿನ ಸ್ತ್ರೀತ್ವವು, ಅಂದರೆ ರಜೋ ತತ್ತ್ವವು ಜಾಗೃತವಾಗುತ್ತದೆ. ರಜೋತತ್ತ್ವದ ಜಾಗೃತಿಯಿಂದ ಅವಳ ದೇಹದಲ್ಲಿನ ಚೇತನಾಶಕ್ತಿಗೆ ಜಾಗೃತಿಯು ಸಿಗುತ್ತದೆ. ಈ ಜಾಗೃತಿಯು ದೇಹದಿಂದ ಪ್ರಕ್ಷೇಪಿಸುವ ಕಾರ್ಯಕ್ಕೆ ಬಲ ನೀಡುವ ಲಹರಿಗಳ ಬಲದಿಂದ ವಾಯುಮಂಡಲದಲ್ಲಿನ ಕಾಲಕ್ಕೆ ವೇಗವನ್ನು ಪ್ರಾಪ್ತಮಾಡಿಕೊಡುತ್ತದೆ. ಆದುದರಿಂದ ಅಲಂಕೃತ ಸ್ತ್ರೀಯು ವಾತಾವರಣದಲ್ಲಿ ಬಂದರೆ ವಾತಾವರಣದಲ್ಲಿ ಉತ್ಸಾಹವು ಸಂಚರಿಸುತ್ತದೆ.

ಆ. ಆಭರಣಗಳಲ್ಲಿನ ತೇಜತತ್ತ್ವರೂಪಿ ತೇಜಸ್ವೀ ದಿವ್ಯತೆಯು ಸ್ತ್ರೀಯರಿಗೆ ಶಾಲೀನತೆಯನ್ನು ನೀಡುತ್ತದೆ ಮತ್ತು ಈ ಶಾಲೀನತೆಯು ಅವರನ್ನು ದೇವತ್ವದ ಕಡೆಗೆ ಒಯ್ಯುತ್ತದೆ : ಆಭರಣಗಳಲ್ಲಿನ ತೇಜತತ್ತ್ವವು ಸ್ತ್ರೀಯರಲ್ಲಿನ ರಜೋಗುಣದ ಕಾರ್ಯಕ್ಕೆ ಯೋಗ್ಯ ದಿಶೆಯನ್ನು ನೀಡಿ ಅವರನ್ನು ತಮ್ಮ ತೇಜದ ಬಂಧನದಲ್ಲಿ (ತೇಜಕ್ಕನುಸಾರ) ಕಾರ್ಯವನ್ನು ಮಾಡಿಸುವುದರಿಂದ ಅಲಂಕೃತ ಸ್ತ್ರೀಯರು ಸ್ವೇಚ್ಛಾಚಾರದಿಂದ ವರ್ತಿಸುವುದು ಅತ್ಯಲ್ಪವಾಗುತ್ತದೆ. ಸ್ವೇಚ್ಛಾಚಾರವು ಸ್ತ್ರೀಯನ್ನು ವ್ಯಭಿಚಾರಿಯನ್ನಾಗಿ ಮಾಡುತ್ತದೆ, ಆದರೆ ಆಭರಣಗಳಲ್ಲಿನ ತೇಜತತ್ತ್ವ ರೂಪಿ ತೇಜಸ್ವೀ ದಿವ್ಯತೆಯು ಸ್ತ್ರೀಯರಿಗೆ ಶಾಲೀನತೆಯನ್ನು ಪ್ರದಾನಿಸುತ್ತದೆ ಮತ್ತು ಈ ಶಾಲೀನತೆಯು ಅವರನ್ನು ದೇವತ್ವದ ಮಾರ್ಗಕ್ಕೆ ಒಯ್ಯುತ್ತದೆ. – ಓರ್ವ ವಿದ್ವಾಂಸ (ಪೂ.)ಸೌ. ಅಂಜಲಿ ಗಾಡಗೀಳರವರ ಮಾಧ್ಯಮದಿಂದ.

ಇ. ಸೌಭಾಗ್ಯಾಲಂಕಾರಗಳೆಂದರೆ ಸ್ತ್ರೀಯರಿಗೆ ಪಾತಿವ್ರತ್ಯದ ಅರಿವು ಮಾಡಿಸುವ ಮಾಧ್ಯಮಗಳು

೧. ಸ್ತ್ರೀಯರಿಗೆ ಸೌಭಾಗ್ಯಾಲಂಕಾರಗಳಿಂದ ಸತತವಾಗಿ ಆಗುವ ತೇಜಲಹರಿಗಳ ಸ್ಪರ್ಶವು, ಅವರಲ್ಲಿನ ಪಾತಿವ್ರತ್ಯದ ಅರಿವು ಮಾಡಿಕೊಡುತ್ತದೆ. ಇದಕ್ಕಾಗಿಯೇ ಈ ವ್ಯವಸ್ಥೆ ಮಾಡಲಾಗಿದೆ.

೨. ಸೌಭಾಗ್ಯಾಲಂಕಾರಗಳೆಂದರೆ ಅಸುರೀ ಶಕ್ತಿಗಳ ಭೋಗ ದೃಷ್ಟಿಯಿಂದ ರಕ್ಷಿಸಲು ಮಾಡಿರುವ ಒಂದು ಪ್ರಯತ್ನ : ಕಲಿಯುಗವು ರಜತಮ ಪ್ರಧಾನವಾಗಿರುವುದರಿಂದ ಈ ಕಾಲವು ಸ್ವೇಚ್ಛಾಚಾರಕ್ಕೆ ಅನುಕೂಲ ಮತ್ತು ಸಾಧನೆಗೆ ಪ್ರತಿಕೂಲವಾಗಿದೆ. ಈ ಯುಗದಲ್ಲಿ ಸ್ತ್ರೀಯರ ಪಾವಿತ್ರ್ಯಕ್ಕೆ ಅಥವಾ ಸೌಭಾಗ್ಯಕ್ಕೆ ಆಭರಣಗಳ ರೂಪದಲ್ಲಿ ತೇಜಸ್ಸಿನ ಬೇಲಿಯನ್ನು ಹಾಕಲಾಗಿದೆ. ಈ ತೇಜಸ್ಸಿನ ಬಲದಿಂದ ಅವಳ ಶೀಲದ ರಕ್ಷಣೆಯಾಗುತ್ತದೆ. ಸೌಭಾಗ್ಯವತಿ ಸ್ತ್ರೀಯರನ್ನು ಮಂಗಳಸೂತ್ರ, ಬಳೆ ಮತ್ತು ಕುಂಕುಮ ಮುಂತಾದ ಸೌಭಾಗ್ಯದ ಅಲಂಕಾರಗಳು ರಕ್ಷಿಸುತ್ತವೆ. ಈ ರೀತಿಯಲ್ಲಿ ಕಲಿಯುಗದಲ್ಲಿ ಅಸುರೀ ಶಕ್ತಿಗಳ ಭೋಗದೃಷ್ಟಿಯಿಂದ ರಕ್ಷಿಸಲು ಪ್ರಯತ್ನಿಸಲಾಗಿದೆ. – ಓರ್ವ ವಿದ್ವಾಂಸ (ಪೂ.)ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧.೧.೨೦೦೮, ಮಧ್ಯಾಹ್ನ ೫.೦೬

Leave a Comment