ಭಾವನಾಪ್ರಧಾನತೆ ಹೆಚ್ಚಿರುವ ಸ್ತ್ರೀಯರು ಎಂತಹ ಆಭರಣಗಳನ್ನು ಧರಿಸಬೇಕು ?

ಅ. ಸ್ತ್ರೀಯರು ಭಾವನಾಪ್ರಧಾನರಾಗಿರುವುದರಿಂದ ಅವರಲ್ಲಿನ ಶಕ್ತಿಸ್ವರೂಪವನ್ನು ಪ್ರಕಟಗೊಳಿಸಲು ವಿವಿಧ ಆಭರಣಗಳು ನಿರ್ಮಾಣವಾದವು.

ಆ. ಭಾವನಾಪ್ರಧಾನತೆ ಹೆಚ್ಚಿರುವ ಸ್ತ್ರೀಯರು ದೊಡ್ಡ ಆಕಾರದ ಆಭರಣಗಳನ್ನು ಧರಿಸಬೇಕು : ಭಾವನಾಪ್ರಧಾನತೆ ಹೆಚ್ಚಿರುವ ಸ್ತ್ರೀಯರು ದೊಡ್ಡ ಆಕಾರದ ಆಭರಣಗಳನ್ನು ಧರಿಸಬೇಕು. ಇದರಿಂದ ಅವರಲ್ಲಿನ ರಜೋಗುಣವು ಕಾರ್ಯನಿರತವಾಗಿ ಅವ್ಯಕ್ತ ಕ್ಷಾತ್ರಭಾವವು ನಿರ್ಮಾಣವಾಗುತ್ತದೆ. ಇದರಿಂದ ಅವರು ತಮಗೆ ಬರುವ ಸಂಕಟಗಳನ್ನು ಎದುರಿಸಬಹುದು.

ಆ ೧. ದೊಡ್ಡ ಆಕಾರದ ಆಭರಣಗಳ ಕೆಲವು ಉದಾಹರಣೆಗಳು

ಅ. ಕಿವಿಗಳಲ್ಲಿ ಹಾಕಿಕೊಳ್ಳುವ ಆಭರಣಗಳು : ಕಿವಿಯಲ್ಲಿ ಹಾಕಿ ಕೊಳ್ಳುವ ಆಭರಣಗಳು ಜೋತು ಬೀಳುವ ಆಭರಣಗಳಾಗಿರಬೇಕು. ಇಂತಹ ಆಭರಣಗಳ ಗ್ರಹಿಸುವ ಕ್ಷಮತೆಯು ಹೆಚ್ಚಿರುತ್ತದೆ.

ಆ. ಕೊರಳಿನಲ್ಲಿ ಹಾಕಿಕೊಳ್ಳುವ ಆಭರಣಗಳು : ಕೊರಳಿನಲ್ಲಿ ಹಾಕಿಕೊಳ್ಳುವ ಆಭರಣಗಳು ಕುತ್ತಿಗೆಯ ಅಳತೆಯಷ್ಟೇ ಆಗಿರದೇ ಅನಾಹತಚಕ್ರದವರೆಗೆ (ಎದೆಯ ಮದ್ಯಭಾಗಕ್ಕೆ ತಗಲುವಷ್ಟು) ಇರಬೇಕು.

ಇ. ಬಳೆಗಳು : ಬಳೆಗಳು ದೊಡ್ಡ ಆಕಾರದ, ಆದಷ್ಟು ಅಗಲ ಮತ್ತು ದಪ್ಪವಾಗಿರಬೇಕು.

ಈ. ಕಾಲ್ಗೆಜ್ಜೆ : ಕಾಲ್ಗೆಜ್ಜೆಗಳನ್ನು ದಪ್ಪ ಪಟ್ಟಿಯಿಂದ ಮಾಡಿರಬೇಕು ಮತ್ತು ಅವುಗಳ ಮೇಲೆ ಸಾತ್ತ್ವಿಕ ವಿನ್ಯಾಸಗಳಿರಬೇಕು.

೨ ಆ ೨. ದೊಡ್ಡ ಆಕಾರದ, ದಪ್ಪ ಪಟ್ಟಿಯ ಮತ್ತು ಸಾತ್ತ್ವಿಕ ವಿನ್ಯಾಸಗಳಿರುವ ಆಭರಣಗಳನ್ನು ಧರಿಸುವುದರಿಂದ ಜೀವದ ಮನೋಮಯ ಕೋಶದ ಮೇಲೆ ಪರಿಣಾಮವಾಗಿ ಜೀವದ ಭಾವನಾಪ್ರಧಾನತೆಯು ಕಡಿಮೆಯಾಗುವುದು : ದೊಡ್ಡ ಆಕಾರದ ಮತ್ತು ದಪ್ಪಪಟ್ಟಿಗಳಿರುವ ಆಭರಣಗಳು ಶರೀರದ ಹೆಚ್ಚು ಭಾಗವನ್ನು ವ್ಯಾಪಿಸಿಕೊಳ್ಳುತ್ತವೆ. ಇದರಿಂದ ಇಂತಹ ಆಭರಣಗಳನ್ನು ಧರಿಸುವ ಜೀವಕ್ಕೆ ತೊಂದರೆ ಕೊಡುವ ಕೆಟ್ಟ ಶಕ್ತಿಯು ಬಂಧನದಲ್ಲಿರುವ ಪ್ರಮಾಣ ಹೆಚ್ಚಿರುತ್ತದೆ. ಕೆಟ್ಟ ಶಕ್ತಿಗಳಿಗೆ ಜೀವದ ದೇಹದೊಳಗೆ ಸೇರಿಕೊಳ್ಳಲು ಮತ್ತು ಕಪ್ಪು ಶಕ್ತಿಯ ಕೊಡುಕೊಳ್ಳುವಿಕೆಗೆ ನಿರ್ಬಂಧವುಂಟಾಗುತ್ತದೆ. ದೊಡ್ಡ ಆಭರಣಗಳ ಮೇಲಿನ ಸಾತ್ತ್ವಿಕ ವಿನ್ಯಾಸಗಳ ಆಕಾರವೂ ದೊಡ್ಡದಾಗಿರುವುದರಿಂದ ಅವುಗಳಲ್ಲಿ ಈಶ್ವರನ ಚೈತನ್ಯವು ಹೆಚ್ಚು ಪ್ರಮಾಣದಲ್ಲಿ ಸೆಳೆಯಲ್ಪಡುತ್ತದೆ. ಇಂತಹ ಆಭರಣಗಳನ್ನು ಧರಿಸುವವರ ಮನೋಮಯಕೋಶದ ಮೇಲೆ ಈ ಚೈತನ್ಯದ ಪರಿಣಾಮವಾಗುತ್ತದೆ ಮತ್ತು ಅವರಲ್ಲಿನ ಭಾವನಾಪ್ರಧಾನತೆಯು ಕಡಿಮೆಯಾಗಲು ಸಹಾಯವಾಗುತ್ತದೆ.
– ಒಂದು ಅಜ್ಞಾತ ಶಕ್ತಿ (ಸೌ. ರಂಜನಾ ಗಡೇಕರ್‌ರವರ ಮಾಧ್ಯಮದಿಂದ, ಫಾಲ್ಗುಣ ಶುಕ್ಲ ಪಕ್ಷ ಚತುರ್ದಶಿ, (೨೦.೩.೨೦೦೮) ಮಧ್ಯಾಹ್ನ ೨.೩೨)

1 thought on “ಭಾವನಾಪ್ರಧಾನತೆ ಹೆಚ್ಚಿರುವ ಸ್ತ್ರೀಯರು ಎಂತಹ ಆಭರಣಗಳನ್ನು ಧರಿಸಬೇಕು ?”

Leave a Comment