ಯುಗಗಳಿಗನುಸಾರ ಮಾನವನು ಭೋಗಿಸಬೇಕಾಗುವ ರೋಗಗಳು, ಅವುಗಳ ಸ್ವರೂಪ ಮತ್ತು ಹಿಂದಿನ ಆಧ್ಯಾತ್ಮಿಕ ಕಾರ್ಯಕಾರಣಭಾವ

ಅಧರ್ಮಾಚರಣೆ ಮತ್ತು ಅದರಿಂದ ನಿರ್ಮಾಣವಾದ ಪಾಪ, ಇದು ಪ್ರತಿಯೊಂದು ರೋಗದ ಮೂಲ ಕಾರಣವಾಗಿದೆ. ಸತ್ಯಯುಗದಲ್ಲಿ ಎಲ್ಲ ಜನರೂ ಧರ್ಮಾಚರಣಿಗಳಾಗಿದ್ದರು. ಆದುದರಿಂದ ಆಗ ಮನುಷ್ಯನಿಗೆ ದುಃಖ ಅಥವಾ ತೊಂದರೆಗಳನ್ನು ಭೋಗಿಸಬೇಕಾಗುತ್ತಿರಲಿಲ್ಲ. ತ್ರೇತಾಯುಗದಲ್ಲಿ ಹೆಚ್ಚಿನ ಜನರು ಧರ್ಮಾಚರಣೆಯನ್ನು ಮಾಡುತ್ತಿದ್ದರು; ಆದರೆ ಅವರಿಂದ ತಿಳಿದೋ ತಿಳಿಯದೆಯೋ ಕೆಲವು ಪಾಪಕರ್ಮಗಳೂ ಆಗುತ್ತಿದ್ದವು. ದ್ವಾಪರಯುಗದಲ್ಲಿ ಮನುಷ್ಯನ ಮಟ್ಟ ಇನ್ನೂ ಕುಸಿಯಿತು. ಆದುದರಿಂದ ಅನೇಕ ಜನರು ಉದ್ದೇಶಪೂರ್ವಕವಾಗಿ ಪಾಪಕರ್ಮಗಳನ್ನು ಮಾಡತೊಡಗಿದರು. ಇದರಿಂದ ಮನುಷ್ಯನಿಗೆ ವಿವಿಧ ರೀತಿಯ ತೊಂದರೆಗಳಾಗತೊಡಗಿದವು. ಕಲಿಯುಗದ ಪ್ರಭಾವದಿಂದ ಹೆಚ್ಚಿನ ಜನರು ಅಧರ್ಮಾಚರಣೆಯನ್ನು ಮಾಡುತ್ತಾರೆ. ಆದುದರಿಂದ ಅವರಿಗೆ ಬಹಳಷ್ಟು ಪಾಪ ತಗಲುತ್ತದೆ. ಆದುದರಿಂದ ಅವರಿಗೆ ವಿವಿಧ ರೀತಿಯ ದುಃಖ ಮತ್ತು ತೊಂದರೆಗಳನ್ನು ಭೋಗಿಸಬೇಕಾಗುತ್ತದೆ.

೧. ಯುಗಗಳು, ಮನುಷ್ಯ ಧರ್ಮಾಚರಣೆ ಮಾಡುವ ಪ್ರಮಾಣ, ಮನುಷ್ಯನಿಗೆ ಪಾಪ ತಗಲುವ ಪ್ರಮಾಣ ಮತ್ತು ಮನುಷ್ಯನಿಗಾಗುವ ರೋಗಗಳ ಪ್ರಮಾಣ

ಯುಗಗಳು ಮಾನವನು ‌ಧರ್ಮಾಚರಣೆ ಮಾಡುವ ಪ್ರಮಾಣ ಮಾನವನಿಗೆ ಪಾಪ ತಗಲುವ ಪ್ರಮಾಣ ಮಾನವನಿಗೆ ಆಗುವ ರೋಗಗಳ ಪ್ರಮಾಣ ತೊಂದರೆಗಳ ವಿಧಗಳು
ಸತ್ಯ 70 10 20 ಶಾರೀರಿಕ
ತ್ರೇತಾ 50 30 40 ಶಾರೀರಿಕ ಮತ್ತು ಮಾನಸಿಕ
ದ್ವಾಪರ 20 60 60 ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ
ಕಲಿ 5 70 90 ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ

೨. ಕಲಿಯುಗದಲ್ಲಿ ಮನುಷ್ಯನ ದುರ್ಗತಿ ಮತ್ತು ಅವನಿಗೆ ಭೋಗಿಸಬೇಕಾಗುವ ವಿವಿಧ ರೀತಿಯ ತೊಂದರೆಗಳು

ಕಲಿಯುಗದಲ್ಲಿ ಮಾನವನು ಅಧರ್ಮಾಚರಣಿಯಾಗಿರುವುದರಿಂದ ಅವನ ಲಿಂಗದೇಹವು ಬಹಳಷ್ಟು ಪ್ರಮಾಣದಲ್ಲಿ ರಜ-ತಮ ಪ್ರಧಾನವಾಗಿದೆ. ಅದೇ ರೀತಿ ಮಾನವನು ಮಾಡಿದ ಅಧರ್ಮಾಚರಣೆಯಿಂದ ಪೃಥ್ವಿಯ ವಾಯುಮಂಡಲವೂ ರಜ-ತಮ ಲಹರಿಗಳಿಂದ ಕಲುಷಿತಗೊಂಡಿದೆ. ಇದರಿಂದ ಪಾತಾಳದಲ್ಲಿ ವಾಸಿಸುವ ವಿವಿಧ ರೀತಿಯ ರಜ-ತಮ ಪ್ರಧಾನ ಕೆಟ್ಟ ಶಕ್ತಿಗಳು ಕಲಿಯುಗದಲ್ಲಿ ಪೃಥ್ವಿಯ ಮೇಲೆ ಮುಕ್ತವಾಗಿ ಸಂಚಾರ ಮಾಡುತ್ತಿವೆ. ಆದುದರಿಂದ ಇತರ ಯುಗಗಳ ತುಲನೆಯಲ್ಲಿ ಕಲಿಯುಗದ ಮಾನವನು ಕೆಟ್ಟ ಶಕ್ತಿಗಳ ತೀವ್ರ ತೊಂದರೆಗಳನ್ನು ಭೋಗಿಸಬೇಕಾಗುತ್ತಿದೆ. ಪೃಥ್ವಿಯ ಮೇಲಿರುವ ಶೇ. ೮೦ ರಷ್ಟು ವ್ಯಕ್ತಿಗಳ ಜೀವನದಲ್ಲಿ ಕೆಟ್ಟ ಶಕ್ತಿಗಳು ಹಸ್ತಕ್ಷೇಪ ಮಾಡಿದುದರಿಂದ ಅವರಿಗೆ ಶಾರೀರಿಕ ಸ್ತರದಲ್ಲಿ ವಿವಿಧ ಪ್ರಕಾರದ ರೋಗಗಳು, ಮಾನಸಿಕ ಸ್ತರದಲ್ಲಿ ಒತ್ತಡ, ಭಯ ಮತ್ತು ಮನೋರಾಜ್ಯದಲ್ಲಿ ರಮಿಸುವುದು, ಬೌದ್ಧಿಕ ಸ್ತರದಲ್ಲಿ ಬುದ್ಧಿ ಭ್ರಷ್ಟವಾದುದರಿಂದ ವ್ಯಕ್ತಿಗಳು ಅಧರ್ಮಾಚರಣೆಯನ್ನು ಮಾಡುವುದು ಮತ್ತು ಕೆಟ್ಟ ಶಕ್ತಿಗಳು ಮನುಷ್ಯರ ಮೇಲೆ ಆಕ್ರಮಣ ಮಾಡಿ ತೊಂದರೆಗಳನ್ನು ಕೊಡುವುದು ಮುಂತಾದ ವಿವಿಧ ರೀತಿಯ ತೊಂದರೆಗಳು ಆಗುತ್ತಿವೆ. ಮಾನವಾರು ಸ್ವತಃ ಅಧರ್ಮಾಚರಣೆಯನ್ನು ಮಾಡುತ್ತಿರುವುದರಿಂದ ಮೃತ್ಯುವಿನ ನಂತರ ಸ್ವತಃ ಕೆಟ್ಟ ಶಕ್ತಿಯಾಗಿ ಪೃಥ್ವಿಯ ಮೇಲಿರುವ ತೊಂದರೆದಾಯಕ ವಾತಾವರಣದಲ್ಲಿ ಸಿಲುಕಿಕೊಳ್ಳುತ್ತಾರೆ. ಆದುದರಿಂದ ಕಲಿಯುಗದಲ್ಲಿ ಪೃಥ್ವಿಯ ಮೇಲೆ ಅನೇಕ ಪ್ರಕಾರದ ಕೆಟ್ಟ ಶಕ್ತಿಗಳ ಸಂಚಾರ ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ.

೩. ಕಲಿಯುಗದಲ್ಲಿ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡುವ ವ್ಯಕ್ತಿಗಳೂ ಕೆಟ್ಟಶಕ್ತಿಗಳ ತೊಂದರೆಗಳನ್ನು ಭೋಗಿಸಬೇಕಾಗುತ್ತಿರುವುದು

೩ ಅ. ವ್ಯಷ್ಟಿ ಸ್ತರದಲ್ಲಿ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡುವ ವ್ಯಕ್ತಿಗಳಿಗೆ ಕೆಟ್ಟ ಶಕ್ತಿಗಳು ತೊಂದರೆಗಳನ್ನು ಕೊಡುವುದು

ಕಲಿಯುಗದಲ್ಲಿ ಮಾನವನ ಮತ್ತು ಪೃಥ್ವಿಯ ವಾಯುಮಂಡಲದ ಒಟ್ಟು ಸಾತ್ತ್ವಿಕತೆ ನಾಶವಾಗಿರುವುದರಿಂದ ಎಲ್ಲೆಡೆ ಕೆಟ್ಟ ಶಕ್ತಿಗಳ ಸಂಚಾರ ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ವ್ಯಷ್ಟಿ ಸ್ತರದಲ್ಲಿ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡುವ ವ್ಯಕ್ತಿಗಳಿಂದ ವಾತಾವರಣದಲ್ಲಿ ಸಾತ್ತ್ವಿಕ ಲಹರಿಗಳ ಪ್ರಕ್ಷೇಪಣೆಯಾಗುವುದರಿಂದ ವಿಶಿಷ್ಟ ಸ್ಥಾನಗಳಲ್ಲಿ ಮತ್ತು ವಾಯುಮಂಡಲದಲ್ಲಿರುವ ಕೆಟ್ಟ ಶಕ್ತಿಗಳಿಗೆ ತೊಂದರೆಯಾಗುತ್ತದೆ. ಆದುದರಿಂದ ಕನಿಷ್ಠ ಸ್ತರದ ಕೆಟ್ಟ ಶಕ್ತಿಗಳು ವ್ಯಷ್ಟಿ ಸ್ತರದಲ್ಲಿ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡುವ ಸಾಧಕರಿಗೆ ಮಂದ ಮತ್ತು ಮಧ್ಯಮ ಸ್ವರೂಪದ ತೊಂದರೆಗಳನ್ನು ಕೊಡುತ್ತವೆ.

೩ ಆ. ಸಮಷ್ಟಿ ಸ್ತರದಲ್ಲಿ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡುವ ವ್ಯಕ್ತಿಗಳಿಗೆ ಕೆಟ್ಟ ಶಕ್ತಿಗಳು ತೊಂದರೆಗಳನ್ನು ಕೊಡುವುದು

ಬೇರೆ ಬೇರೆ ಸ್ಥಳಗಳಿಗೆ ಹೋಗಿ ಯಜ್ಞಯಾಗಗಳನ್ನು ಮಾಡುವಂತಹ ಸಮಷ್ಟಿ ಸ್ತರದ ಧರ್ಮಾಚರಣೆಯನ್ನು ಮಾಡುವುದು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಮಾಡಲು ಸಮಾಜವನ್ನು ಉದ್ಯುಕ್ತಗೊಳಿಸುವಂತಹ ಸಮಷ್ಟಿ ಸಾಧನೆಯನ್ನು ಮಾಡುವ ಸಾಧಕರಿಗೆ ಕೇವಲ ಪೃಥ್ವಿಯ ಮೇಲಿರುವ ಕೆಟ್ಟ ಶಕ್ತಿಗಳಷ್ಟೇ ಅಲ್ಲ, ಪಾತಾಳದ ದೊಡ್ಡ ದೊಡ್ಡ ಕೆಟ್ಟ ಶಕ್ತಿಗಳೂ ಬಹಳಷ್ಟು ಪ್ರಮಾಣದಲ್ಲಿ ತೊಂದರೆ ಕೊಡುತ್ತವೆ. ಆದುದರಿಂದ ಸಾಧಕರಿಗೆ ವಿವಿಧ ರೀತಿಯ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಸ್ವರೂಪದ ವಿವಿಧ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ತೊಂದರೆಗಳನ್ನು ಕೇವಲ ಸಾಧಕರಷ್ಟೇ ಅಲ್ಲ, ಸಮಷ್ಟಿ ಸಂತರು ಮತ್ತು ಸದ್ಗುರುಗಳೂ ಭೋಗಿಸಬೇಕಾಗುತ್ತದೆ. ಸಾಧಕರು ಮತ್ತು ಸಂತರ ಪ್ರಾಣ ರಕ್ಷಣೆಯನ್ನು ಮಾಡಲು ಅವರ ಮೇಲಾಗುವ ಕೆಟ್ಟ ಶಕ್ತಿಗಳ ಸಮಷ್ಟಿ ಆಕ್ರಮಣಗಳನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಂತಹ ಸಮಷ್ಟಿ ಮತ್ತು ಅವತಾರಿ ಪರಾತ್ಪರ ಗುರುಗಳು ತಾವೇ ಸಹಿಸಿ ಸಾವಿರಾರು ಸಾಧಕರ ರಕ್ಷಣೆಯನ್ನು ಮಾಡುತ್ತಿದ್ದಾರೆ.

೪. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪಾತಾಳದ ವಿವಿಧ ಪ್ರಕಾರದ ಕೆಟ್ಟ ಶಕ್ತಿಗಳ ಅಧ್ಯಯನ ಮಾಡಿ ಅವುಗಳ ತೊಂದರೆಗಳಿಂದ ಸಾಧಕರ ರಕ್ಷಣೆಯನ್ನು ಮಾಡಲು ವಿವಿಧ ರೀತಿಯ ಆಧ್ಯಾತ್ಮಿಕ ಉಪಾಯಗಳನ್ನು ಕಂಡು ಹಿಡಿಯುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ೨೦೦೦ ಇಸವಿಯಿಂದ ಸಾಧಕರಿಗೆ ತೊಂದರೆಗಳನ್ನು ಕೊಡುವ ಪಾತಾಳದ ವಿವಿಧ ಪ್ರಕಾರದ ಕೆಟ್ಟ ಶಕ್ತಿಗಳ ಆಳವಾದ ಅಧ್ಯಯನ ಮಾಡುತ್ತಿದ್ದಾರೆ. ‘ಯಾವ ಪಾತಾಳದ ಮತ್ತು ಯಾವ ಪ್ರಕಾರದ ಕೆಟ್ಟ ಶಕ್ತಿ ಯಾವ ಸಾಧಕನಿಗೆ ಯಾವ ರೀತಿಯ ತೊಂದರೆಗಳನ್ನು ಕೊಡುತ್ತದೆ’, ಎಂಬುದರ ಬಗ್ಗೆ ಅವರು ಆಳವಾಗಿ ಅಧ್ಯಯನ ಮಾಡಿ ಕೆಟ್ಟ ಶಕ್ತಿಗಳ ತೊಂದರೆಗಳ ಪ್ರಭಾವವನ್ನು ಕಡಿಮೆ ಮಾಡಲು ವಿವಿಧ ರೀತಿಯ ಆಧ್ಯಾತ್ಮಿಕ ಉಪಾಯಗಳನ್ನು ಕಂಡು ಹಿಡಿದರು. ಉದಾ. ಕುಟುಂಬಗಳಲ್ಲಿ ಜಗಳಗಳು ಆಗುತ್ತಿದ್ದರೆ, ಆ ತೊಂದರೆಗಳು ಸಾಧಕರ ಅತೃಪ್ತ ಪಿತೃಗಳಿಂದ ಆಗುತ್ತಿವೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ‘ಶ್ರೀ ಗುರುದೇವ ದತ್ತ |’ ಎಂಬ ನಾಮಜಪವನ್ನು ಮಾಡಲು ಹೇಳಿದರು. ಅದರಂತೆ ಯಾವುದಾದರೊಬ್ಬ ವ್ಯಕ್ತಿಗೆ ಕೆಟ್ಟ ಶಕ್ತಿಗಳು ತೊಂದರೆಗಳನ್ನು ಕೊಡುತ್ತಿದ್ದರೆ, ‘ಶ್ರೀ ಹನುಮತೇ ನಮಃ |’ ಅಥವಾ ‘ಹಂ ಹನುಮತೇ ನಮಃ |’ ಈ ನಾಮಜಪವನ್ನು ಮಾಡಲು ಹೇಳಿದರು ಮತ್ತು ತೆಂಗಿನಕಾಯಿಯಿಂದ ಆ ವ್ಯಕ್ತಿಯ ದೃಷ್ಟಿ ನಿವಾಳಿಸಿ ಆ ತೆಂಗಿನಕಾಯಿಯನ್ನು ಹನುಮಂತನ ದೇವಸ್ಥಾನದಲ್ಲಿ ಒಡೆಯಲು ಹೇಳಿದರು. ಕೆಟ್ಟ ಶಕ್ತಿಗಳು ಸಾಧಕರ ಪ್ರಾಣಶಕ್ತಿಯನ್ನು ಕಡಿಮೆ ಮಾಡಿದ್ದರೆ, ಪ್ರಾಣಶಕ್ತಿಯನ್ನು ಹೆಚ್ಚಿಸಲು ಅವರಿಗೆ ‘ಶ್ರೀ ಗಣೇಶಾಯ ನಮಃ |’ ಅಥವಾ ‘ಓಂ ಗಂ ಗಣಪತಯೇ ನಮಃ |’ ನಾಮಜಪಿಸಲು ಹೇಳಿದರು. ಅದರಂತೆಯೇ ಅವರು ಪಂಚಮಹಾಭೂತಗಳ ಸ್ತರದಲ್ಲಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನೂ ಕಂಡು ಹಿಡಿದರು. ಇದರಿಂದ ಸಾಧಕರಿಗೆ ೨೦೦೦ ಇಸವಿಯಿಂದ ಆಗುತ್ತಿರುವ ಕೆಟ್ಟ ಶಕ್ತಿಗಳ ಸೂಕ್ಷ್ಮ ಸ್ತರದ ತೊಂದರೆಗಳನ್ನು ಸಹಿಸಲು ಸಾಧ್ಯವಾಯಿತು ಮತ್ತು ಕೆಟ್ಟ ಶಕ್ತಿಗಳ ತೀವ್ರ ತೊಂದರೆಗಳನ್ನು ಭೋಗಿಸುತ್ತಾ ಸಾಧಕರ ಸಾಧನೆಯೂ ಆಯಿತು.

ಕೃತಜ್ಞತೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದಲೇ ಕೆಟ್ಟ ಶಕ್ತಿಗಳು ಮಾಡಿದ ಮಾರಣಾಂತಿಕ ಆಕ್ರಮಣಗಳಿಂದ ಸನಾತನದ ಸಾವಿರಾರು ಸಾಧಕರ ರಕ್ಷಣೆಯಾಗುತ್ತಿದೆ. ಇದಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಚರಣಗಳಲ್ಲಿ ಎಷ್ಟು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರೂ ಅದು ಕಡಿಮೆಯೇ ಆಗಿದೆ. ಅವರು ಕೇವಲ ಕೆಟ್ಟ ಶಕ್ತಿಗಳ ತೊಂದರೆಗಳಿಂದಷ್ಟೇ ಅಲ್ಲ, ಅವರು ಪೃಥ್ವಿಯ ಮೇಲೆ ಪುನಃ ಪುನಃ ಜನ್ಮಕ್ಕೆ ತರುವಂತಹ ಈ ಭವರೋಗದಿಂದಲೂ ಸಾಧಕರನ್ನು ಬಿಡುಗಡೆ ಮಾಡುತ್ತಿದ್ದಾರೆ’, ಇದಕ್ಕಾಗಿ ಮೋಕ್ಷಗುರುಗಳ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು.

– ಕು. ಮಧುರಾ ಭೋಸಲೆ (ಸೂಕ್ಷದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೭.೯.೨೦೨೧)

Leave a Comment