ಶ್ರವಣ ಭಕ್ತಿ – 1

ಶ್ರವಣ ಭಕ್ತಿ ಎಂಬುವುದನ್ನು ನಾವು ಬಹಳ ಸಲ ಕೇಳಿದ್ದೇವೆ. ಆದರೆ ಇದರ ಅರ್ಥವೇನು?

ಶ್ರವಣ ಅಂದರೆ ಕೇಳುವುದು ಮತ್ತು ಶ್ರವಣ ಭಕ್ತಿ ನಾವು ಭಕ್ತಿಪೂರ್ವಕವಾಗಿ ನಾವು ಏನು ಕೇಳುತ್ತೇವೆಯೋ ಅದನ್ನು ಶ್ರವಣ ಭಕ್ತಿ ಎನ್ನುತ್ತಾರೆ. ನಾವು ಈಶ್ವರನ ಬಗ್ಗೆ ಎಷ್ಟೊಂದನ್ನು ಕೇಳುತ್ತೇವೆಯೋ ಅದೆಲ್ಲವೂ ಶ್ರವಣ ಭಕ್ತಿಯಾಗಿದೆಯೇ, ಅದಕ್ಕೂ ಮುಂದೆ ಹೋಗಿ ಶ್ರವಣ ಭಕ್ತಿಯ ನಿಜವಾದ ಅರ್ಥವೇನು ಮತ್ತು ನಮ್ಮ ಜೀವನದಲ್ಲಿ ಏಣಿಯಾಗಿ ಬಂದಿರುವ ಶ್ರವಣ ಭಕ್ತಿಯನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ನಾವು ನೋಡೋಣ…

ಶ್ರವಣ ಭಕ್ತಿ

ಸಮಾಜದಲ್ಲಿ ಬಹಳ ಜನರು ಭಜನೆ, ಕೀರ್ತನೆ, ಪ್ರವಚನ, ಪಾರಾಯಣಗಳಿಗೆಲ್ಲ ಹೋಗುತ್ತೇವೆ, ಮತ್ತು ಕೇವಲ ಕುಳಿತುಕೊಂಡು ಕೇಳುತ್ತಾರೆ. ಇದಕ್ಕೆ ಹೆಚ್ಚೇನೂ ಅರ್ಥವಿರುವುದಿಲ್ಲ. ವಾಸ್ತವಿಕವಾಗಿ ಅದು ‘ಶ್ರವಣ’ ಭಕ್ತಿಮಾರ್ಗದ ಒಂದು ಪ್ರವೇಶದ್ವಾರವಾಗಿದೆ. ಶ್ರವಣ ಶಬ್ದದ ನಿಜವಾದ ಅರ್ಥವೇನು, ಹಾಗೆಯೇ ಶ್ರವಣ ಭಕ್ತಿಯ ನಿಜವಾದ ಅರ್ಥವೇನು ಎಂಬುವುದನ್ನು ನೋಡೋಣ.

ವ್ಯಾವಹಾರಿಕ ಸ್ತರದಲ್ಲಿ

ಶ್ರವಣದ ಅರ್ಥ ಕೇಳುವುದು ! ‘ಶ್ರವಣ’ ಇದು ಸಂಪರ್ಕ ಸಾಧಿಸಲು ಮನುಷ್ಯನಿಗಿರುವ ಒಂದು ಮೂಲಭೂತ ಆವಶ್ಯಕತೆಯಾಗಿದೆ. ನಮ್ಮ ಬಳಿ ಐದು ಜ್ಞಾನೇಂದ್ರಿಯಗಳಿವೆ. ಆದರೆ ಜ್ಞಾನ ಸಿಗುವುದರ ಆರಂಭವು ದೃಶ್ಯ ಮತ್ತು ಶ್ರವಣ ಅರ್ಥಾತ್ ಕಣ್ಣುಗಳಿಂದ ಮತ್ತು ಕಿವಿಗಳಿಂದ ಆಗುತ್ತದೆ. ಅದರಲ್ಲಿಯೂ ಕಿವಿಯಿಂದ ಅಂದರೆ ಕೇಳಿಸಿಕೊಂಡು ಜ್ಞಾನ ಪಡೆಯುವ ಪ್ರಕ್ರಿಯೆಯು ಎಲ್ಲಕ್ಕಿಂತ ಮೊದಲು ಪ್ರಾರಂಭವಾಗುತ್ತದೆ. ಶ್ರವಣದಿಂದ ಗ್ರಹಿಸಿದ ಜ್ಞಾನವು ಬಹಳ ಸಮಯದ ತನಕ ನೆನಪಿನಲ್ಲಿರುತ್ತದೆ. ಹಾಗಾಗಿ ಶ್ರವಣ ಭಕ್ತಿಯು ಭಕ್ತಿಯ ಮೊದಲನೆಯ ವಿಧವಾಗಿದೆ.

ನಾವು ಶ್ರವಣ ಭಕ್ತಿಯ ಬಗ್ಗೆ ನಮ್ಮ ಜೀವನದಲ್ಲಿ ವ್ಯಾವಹಾರಿಕ ಉದಾಹರಣೆಗಳನ್ನು ನೋಡುತ್ತೇವೆ. ನಾವು ಯಾರಾದರೊಬ್ಬ ವ್ಯಕ್ತಿಯನ್ನು ಭೇಟಿಯಾಗಲು ಹೋಗುವಾಗ, ಮತ್ತು ಅವರನ್ನು ನಾವು ಮೊದಲು ಯಾವತ್ತೂ ನೋಡಿಲ್ಲವೋ, ಹಾಗೂ ಭೇಟಿಯಾಗಿಲ್ಲವೋ ಆಗ ನಾವು ಆ ವ್ಯಕ್ತಿಯ ಬಗ್ಗೆ ಎಷ್ಟಾಗುತ್ತದೆಯೋ ಅಷ್ಟು ಮಾಹಿತಿಯನ್ನು ಒಟ್ಟು ಮಾಡುತ್ತೇವೆ ಉದಾ. ಆ ವ್ಯಕ್ತಿಯು ನೋಡಲು ಹೇಗೆ ಕಾಣಿಸುತ್ತಾನೆ, ಅವನು ಏನು ಕೆಲಸ ಮಾಡುತ್ತಾನೆ, ಅವರ ಇಷ್ಟನಿಷ್ಟಗಳೇನು, ಅವನು ಎಲ್ಲಿ ವಾಸಿಸುತ್ತಾನೆ ಇತ್ಯಾದಿ.

ಆಧ್ಯಾತ್ಮಿಕ ಸ್ತರದಲ್ಲಿ

ಅದೇ ರೀತಿಯಲ್ಲಿ ನಮಗೆ ಈಶ್ವರನ ಭಕ್ತಿಯನ್ನು ಮಾಡಲಿಕ್ಕಿದ್ದರೆ ಮೊದಲು ಅವನ ಸ್ವರೂಪ ಹೇಗಿದೆ ಎಂಬುವುದನ್ನು ಅರಿತುಕೊಳ್ಳಬೇಕಾಗುತ್ತದೆ. ಈಶ್ವರನಿಗೆ ಅಥವಾ ನಮ್ಮ ಆರಾಧ್ಯ ದೇವರಿಗೆ ಏನು ಇಷ್ಟವಿದೆ? ಅವರ ಪ್ರಾಪ್ತಿಗಾಗಿ ಯಾವ್ಯಾವ ಪ್ರಯತ್ನಗಳನ್ನು ಮಾಡಬೇಕು ಇದೆಲ್ಲವನ್ನು ಕೇಳಿಕೊಳ್ಳದೇ ಅಥವಾ ಅರಿತುಕೊಳ್ಳದೇ ನಾವು ಅದನ್ನು ಆಚರಣೆಗೆ ತರಲು ಆಗುವುದಿಲ್ಲ ಹಾಗಾಗಿ ಭಕ್ತಿಮಾರ್ಗದಲ್ಲಿ ಶ್ರವಣ ಭಕ್ತಿಯು ಮೊತ್ತ ಮೊದಲನೆಯ ಹಂತವಾಗಿದೆ.

ಪರಮಾತ್ಮನ ನಾಮ ಮತ್ತು ಗುಣಗಳ ಸಂಕೀರ್ತನೆಯನ್ನು ಕೇಳುವುದು, ಭಕ್ತಿಯ ಮೊದಲಿನ ಮೆಟ್ಟಿಲಾಗಿದೆ. ಭಕ್ತಿಯ ಈ ವಿಧದಲ್ಲಿ ಈಶ್ವರನ ಗುಣಗಾನವನ್ನು ಕೇಳಲಿಕ್ಕಿರುತ್ತದೆ. ದೇವರ ಬಗೆಗಿನ ವಿಚಾರವನ್ನು ಕೇಳಿ ಅದನ್ನು ಅಳವಡಿಸಿಕೊಳ್ಳುವುದಿರುತ್ತದೆ. ಎಲ್ಲೆಲ್ಲಿ ಈಶ್ವರನ ಕಾರ್ಯ ನಡೆಯುತ್ತಿದೆಯೋ ಅಥವಾ ಈಶ್ವರನಿಂದ ಯಾವುದಾದರೊಂದು ಕಾರ್ಯ ಪ್ರಾರಂಭವಾಗಿದೆಯೋ ಅದನ್ನು ಶ್ರವಣದ ಮಾಧ್ಯಮದಿಂದ ಅರಿತುಕೊಳ್ಳುತ್ತೇವೆ.

ಈಶ್ವರನ ಬಗ್ಗೆ ಏನೆಲ್ಲ ಕೇಳಲು ಸಿಗುತ್ತದೆಯೋ, ಅದೆಲ್ಲವನ್ನೂ ನಾವು ನಮ್ಮ ಹೃದಯದಲ್ಲಿ ಸಂಭಾಳಿಸಿಕೊಂಡು ಇಡಬೇಕು. ಶ್ರವಣದ ಮಾಧ್ಯಮದಿಂದ ಈಶ್ವರನ ಅನುಸಂಧಾನದಲ್ಲಿ ಸತತವಾಗಿ ಇರಬೇಕು. ಶ್ರವಣದ ಮಹತ್ವವನ್ನು ಈಶ್ವರನು ನಮಗೆ ಉದಾಹರಣೆಗಳ ಜೊತೆಗೆ ತೋರಿಸಿದ್ದಾನೆ.

ಶ್ರವಣ ಭಕ್ತಿಯ ಆದರ್ಶ ಉದಾಹರಣೆ – ಪರೀಕ್ಷಿತ ರಾಜ

ಶ್ರವಣಭಕ್ತಿಯ ಮೂಲಕ ಭಗವಂತನೊಂದಿಗೆ ಹೇಗೆ ಎಕರೂಪವಾಗಬಹುದು ಎಂದು ನಮಗೆ ರಾಜಾ ಪರೀಕ್ಷಿತನ ಈ ಉದಾರಹರಣೆಯಿಂದ ಗಮನಕ್ಕೆ ಬರುತ್ತದೆ. ರಾಜಾ ಪರೀಕ್ಷಿತನಿಗೆ ಯಾವಾಗ ತನ್ನ ಜೀವನದಲ್ಲಿ ಇನ್ನು ಕೇವಲ 7 ದಿನಗಳು ಮಾತ್ರ ಉಳಿದಿವೆ ಎಂದು ತಿಳಿಯಿತೋ ಆಗ ಅವನು ಆ 7 ದಿನಗಳನ್ನು ಕೇವಲ ಮತ್ತು ಕೇವಲ ಭಗವಂತನಿಗಾಗಿಯೇ ಉಪಯೋಗಿಸುವುದೆಂದು ನಿರ್ಧರಿಸಿದನು ಮತ್ತು ಆ 7 ದಿನಗಳಲ್ಲಿ ಅವನು ಋಷಿಗಳಿಂದ ಭಗವಂತನ ವಿವಿಧ ಕಥೆಗಳನ್ನು, ಲೀಲೆಗಳ ವರ್ಣನೆಯನ್ನು, ಮತ್ತು ಮನುಷ್ಯನು ಭಕ್ತಿಯನ್ನು ಹೇಗೆ ಮಾಡಬೇಕು ಎಂದು ಶ್ರವಣ ಮಾಡಿದನು (ಕೇಳಿಕೊಂಡಿದ್ದು ಮಾತ್ರವಲ್ಲ, ಆಚರಣೆಗೂ ತಂದನು). ಅವನು ಭಗವಂತನನ್ನು ಪ್ರಾಪ್ತಿ ಸಹ ಮಾಡಿಕೊಂಡನು. ಈ 7 ದಿನಗಳಲ್ಲಿ ಅವನು ಏನೆಲ್ಲವನ್ನೂ ಶ್ರವಣ ಮಾಡಿದನೋ ಅದು ಕೇವಲ ಅವನಿಗಾಗಿ ಮಾತ್ರವಲ್ಲ ಅಖಿಲ ಮಾನವಜಾತಿಗಾಗಿಯೇ ಇತ್ತು. ರಾಜಾ ಪರೀಕ್ಷಿತನ ತಳಮಳದಿಂದ ಅಖಿಲ ಮಾನವಜಾತಿಗೆ ಶ್ರೇಷ್ಠ ಋಷಿಗಳ ದಿವ್ಯ ವಾಣಿಯಿಂದ ಒಸರುತ್ತಿದ್ದ ಜ್ಞಾನಾಮೃತದ ಲಾಭವಾಯಿತು. ಭಗವಂತನ ವಿವಿಧ ದಿವ್ಯ ಲೀಲೆಗಳು ವಿಸ್ತಾರವಾಗಿ ತಿಳಿದವು. ಹಾಗಾಗಿ ಇಂದಿಗೂ ಆ ಲೀಲೆಗಳ ಅನುಭವ ತೆಗೆದುಕೊಳ್ಳಲು ಸಾಧ್ಯವಾಗುತ್ತಿದೆ. ಇದು ಸಹ ಭಗವಂತನ ಒಂದು ಲೀಲೆಯೇ ಆಗಿದೆ.

ನಾವು ರಾಜಾ ಪರೀಕ್ಷಿತನ ಬಗ್ಗೆ ಇನ್ನೊಂದು ಪ್ರಸಂಗವನ್ನು ಕೇಳೋಣ

ಸತ್ಸಂಗದ ಮಹತ್ವ – ಸ್ವರ್ಗದ ಅಮೃತ ಮತ್ತು ಕಥಾಮೃತ ಇವುಗಳ ನಡುವಿನ ವ್ಯತ್ಯಾಸ

ಶುಕದೇವರು ರಾಜಾ ಪರೀಕ್ಷಿತನಿಗೆ ಕಥೆಯನ್ನು ಹೇಳಲು ಪ್ರಾರಂಭಿಸುತ್ತಿದ್ದಂತೆ ಒಂದು ಅದ್ಭುತ ಘಟನೆಯಾಗುತ್ತದೆ. ಆ ಸಮಯದಲ್ಲಿ ಉಚ್ಚ ಲೋಕದ ದೇವದೇವತೆಗಳು ಅಮೃತವಿರುವ ಚಿನ್ನದ ಕಲಶವನ್ನು ತೆಗೆದುಕೊಂಡು ಬರುತ್ತಾರೆ. ಶುಕದೇವರ ಬಳಿ ದೇವತೆಗಳು ‘ನಮಗೆ ಸಹ ಈ ಕಥೆಯನ್ನು ಕೇಳುವ ಅವಕಾಶ ನೀಡಿ’ ಎಂದು ವಿನಂತಿಸುತ್ತಾರೆ. ರಾಜಾ ಪರೀಕ್ಷಿತನಿಗೆ ‘7 ದಿನಗಳಲ್ಲಿ ತಕ್ಷಕನು ನಿನ್ನನ್ನು ಕಚ್ಚಿ ನೀನು ಸಾಯುವೆ. ನಿನಗೆ ಮೃತ್ಯು ಬರಬಾರದು ಎಂದಾದರೆ ಈ ಅಮೃತವನ್ನು ಕುಡಿ ಆಗ ನಿನಗೆ ಜೀವನದಾನ ಸಿಗುವುದು. ನೀನು ಈ ಅಮೃತವನ್ನು ತೆಗೆದುಕೊಂಡು ನಿನ್ನ ಕಥಾಮೃತವನ್ನು (ಶುಕದೇವರು ಹೇಳುತ್ತಿರುವ ದೇವರ ಲೇಲೆಗಳು) ನಮಗೆ ನೀಡು’ ಎನ್ನುತ್ತಾರೆ. ಸ್ವಲ್ಪದರಲ್ಲಿಯೇ ಸ್ವರ್ಗದ ಅಮೃತ ಮತ್ತು ಕಥಾಮೃತದ ವ್ಯತ್ಯಾಸವು ಸುಂದರವಾಗಿ ಗಮನಕ್ಕೆ ಬರುತ್ತದೆ.

ರಾಜಾ ಪರೀಕ್ಷಿತನು ಇದರ ಬಗ್ಗೆ ಶುಕಾಚಾರ್ಯರಲ್ಲಿ ವಿಚಾರಿಸಿದಾಗ ಶುಕಾಚಾರ್ಯರು ಹೇಳುತ್ತಾರೆ, ‘ನೀನು ಸ್ವರ್ಗದ ಅಮೃತವನ್ನು ಕುಡಿದರೆ ದೀರ್ಘಾಯುಷಿ ಆಗುವೆ. ಬೇಕಾದಷ್ಟು ಕಾಲ ಜೀವನ ಮಾಡಬಹುದು. ಕಥಾಮೃತವನ್ನು ಕೇಳಿದರೆ ನೀನೇ ದಿವ್ಯ ಜೀವಿಯಾಗುವೆ. ನಿನಗೆ ಮರಣವೇ ಇಲ್ಲ ಎಂಬುದರ ಅರಿವಾಗುವುದು (ಆತ್ಮಜ್ಞಾನ ಸಿಗುವುದು). ಈ ದೇವತೆಗಳ ಬಳಿ ಅಮೃತವಿದೆ ಎಂದಾದರೆ ಅವರು ಕಥೆಯನ್ನು ಕೇಳಲು ಏತಕ್ಕಾದರೂ ಬಂದಿದ್ದಾರೆ ಎಂಬುವುದರ ವಿಚಾರವನ್ನು ಮಾಡು. ಏಕೆಂದರೆ ದೇವತೆಗಳಿಗೂ ಅವರಲ್ಲಿರುವ ಅಮೃತಕ್ಕಿಂತ ಕಥಾಮೃತವು ಮಹತ್ವದ್ದಾಗಿದೆ ಎಂದು ಗೊತ್ತಿದೆ’ ಎಂದು ಹೇಳುತ್ತಾರೆ.

ಭಕ್ತಿ ಮಾಡಬೇಕಾಗಿದ್ದರೆ ಅದರ ಮೊದಲನೆಯ ಸ್ತರವೇ ಶ್ರವಣ ಭಕ್ತಿ. ಅದನ್ನು ಯಾವ ರೀತಿಯಲ್ಲಿ ಮಾಡಬೇಕು ಎಂಬುದು ಗಮನಕ್ಕೆ ಬಂದಿರಬಹುದು. ‘ಶ್ರವಣ ಭಕ್ತಿಯ ಮಹತ್ವ ಎಷ್ಟಿದೆ’ ಎಂದು ಕೇವಲ ಕೇಳುವುದರಿಂದ ಮಾತ್ರ ಆಗುವುದಿಲ್ಲ ಜೋತೆಗೆ ಕೇಳುವುದರಲ್ಲಿ ಸಹ ಭಾವ ಮತ್ತು ಭಕ್ತಿಯಿರಬೇಕು. ಆಗಲೇ ನಮಗೆ ಅದರ ಲಾಭ ಸಿಗುತ್ತದೆ.

Leave a Comment