ನಾಗರಪಂಚಮಿಯ ಪೂಜೆ (ಅರ್ಥ ಸಹಿತ) – ಭಾಗ 2

Article also available in :

ಈ ಲೇಖನದಲ್ಲಿ ನಾಗರಪಂಚಮಿಯ ಪೂಜೆಯ ಎರಡನೇ ಭಾಗವನ್ನು ನೀಡಲಾಗಿದೆ.

ನಾಗರಪಂಚಮಿಯ ಪೂಜೆ (ಅರ್ಥ ಸಹಿತ) – ಭಾಗ 1 ಓದಲು ಇಲ್ಲಿ ಕ್ಲಿಕ್ ಮಾಡಿ!

ಅರಿಶಿನ ಮತ್ತು ಚಂದನವನ್ನು ಬೆರೆಸಿ ಗೋಡೆಯ ಮೇಲೆ ಅಥವಾ ಮಣೆಯ ಮೇಲೆ ನಾಗಗಳ ಚಿತ್ರವನ್ನು ಬಿಡಿಸಬೇಕು. ಚಿತ್ರದ ಸ್ಥಳದಲ್ಲಿ ಮುಂದಿನ ನಾಮಮಂತ್ರಗಳನ್ನು ಉಚ್ಚರಿಸಿ ನವನಾಗಗಳನ್ನು ಆಹ್ವಾನಿಸಬೇಕು. ಬಲಗೈಯಲ್ಲಿ ಅಕ್ಷತೆಯನ್ನು ಹಿಡಿದು ‘ಆವಾಹಯಾಮಿ’ ಎಂದು ಹೇಳುವಾಗ ನಾಗದೇವತೆಯ ಚರಣಗಳಲ್ಲಿ ಅಕ್ಷತೆಯನ್ನು ಅರ್ಪಿಸಬೇಕು.

ಓಂ ಅನನ್ತಾಯ ನಮಃ । ಅನನ್ತಮ್ ಆವಾಹಯಾಮಿ ।।
ಓಂ ವಾಸುಕಯೇ ನಮ: । ವಾಸುಕಿಮ್ ಆವಾಹಯಾಮಿ ।।
ಓಂ ಶೇಷಾಯ ನಮ: । ಶೇಷಮ್ ಆವಾಹಯಾಮಿ ।।
ಓಂ ಶಙ್ಖಾಯ ನಮ: । ಶಙ್ಖಮ್ ಆವಾಹಯಾಮಿ ।।
ಓಂ ಪದ್ಮಾಯ ನಮ: । ಪದ್ಮಮ್ ಆವಾಹಯಾಮಿ ।।
ಓಂ ಕಮ್ಬಲಾಯ ನಮ: । ಕಮ್ಬಲಮ್ ಆವಾಹಯಾಮಿ ।।
ಓಂ ಕರ್ಕೋಟಕಾಯ ನಮ: । ಕರ್ಕೋಟಕಮ್ ಆವಾಹಯಾಮಿ ।।
ಓಂ ಅಶ್ವತರಯೇ ನಮ: । ಅಶ್ವತರಮ್ ಆವಾಹಯಾಮಿ ।।
ಓಂ ಧೃತರಾಷ್ಟ್ರಾಯ ನಮ: । ಧೃತರಾಷ್ಟ್ರಮ್ ಆವಾಹಯಾಮಿ ।।
ಓಂ ತಕ್ಷಕಾಯ ನಮ: । ತಕ್ಷಕಮ್ ಆವಾಹಯಾಮಿ ।।
ಓಂ ಕಾಲಿಯಾಯ ನಮ: । ಕಾಲಿಯಮ್ ಆವಾಹಯಾಮಿ ।।
ಓಂ ಕಪಿಲಾಯ ನಮ: । ಕಪಿಲಮ್ ಆವಾಹಯಾಮಿ ।।
ಓಂ ನಾಗಪತ್ನೀಭ್ಯೋ ನಮಃ । ನಾಗಪತ್ನೀಃ ಆವಾಹಯಾಮಿ ।।

ಓಂ ಅನನ್ತಾದಿನಾಗದೇವತಾಭ್ಯೋ ನಮ: । ಧ್ಯಾಯಾಮಿ ।
(ಅನಂತಾದಿ ನಾಗದೇವತೆಗಳನ್ನು ನಮಿಸಿ ನಾನು ಧ್ಯಾನ ಮಾಡುತ್ತೇನೆ)

೧. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಆವಾಹಯಾಮಿ ।

೨. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಆಸನಾರ್ಥೇ ಅಕ್ಷತಾನ್ ಸಮರ್ಪಯಾಮಿ ।
(ಚಿತ್ರಕ್ಕೆ ಅಕ್ಷತೆಗಳನ್ನು ಅರ್ಪಿಸಬೇಕು)

೩. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಪಾದ್ಯಂ ಸಮರ್ಪಯಾಮಿ ।
(ಬಲಗೈಯಿಂದ ಹರಿವಾಣದಲ್ಲಿ ನೀರು ಬಿಡಬೇಕು)

೪. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಅರ್ಘ್ಯಂ ಸಮರ್ಪಯಾಮಿ ।
(ಬಲಗೈಯಿಂದ ಹರಿವಾಣದಲ್ಲಿ ನೀರು ಬಿಡಬೇಕು)

೫. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಆಚಮನೀಯಂ ಸಮರ್ಪಯಾಮಿ ।
(ಬಲಗೈಯಿಂದ ಹರಿವಾಣದಲ್ಲಿ ನೀರು ಬಿಡಬೇಕು)

೬. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಸ್ನಾನಂ ಸಮರ್ಪಯಾಮಿ ।
(ಬಲಗೈಯಿಂದ ಹರಿವಾಣದಲ್ಲಿ ನೀರು ಬಿಡಬೇಕು)

೭. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ವಸ್ತ್ರಂ ಸಮರ್ಪಯಾಮಿ ।
(ವಸ್ತ್ರ ಅರ್ಪಿಸಬೇಕು)

೮. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಉಪವೀತಂ ಸಮರ್ಪಯಾಮಿ ।
(ಯಜ್ಞೋಪವೀತ ಅಥವಾ ಅಕ್ಷತೆಗಳನ್ನು ಅರ್ಪಿಸಬೇಕು)

೯. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಚನ್ದನಂ ಸಮರ್ಪಯಾಮಿ ।
(ಅನಂತಾದಿ ನವನಾಗಗಳಿಗೆ ಹೂವು-ಗಂಧ ಅರ್ಪಿಸಬೇಕು)

೧೦. ನಾಗಪತ್ನೀಭ್ಯೋನಮಃ । ಹರಿದ್ರಾಂ ಸಮರ್ಪಯಾಮಿ ।
(ನಾಗಪತ್ನಿಯರಿಗೆ ಅರಿಶಿನವನ್ನು ಅರ್ಪಿಸಬೇಕು)

೧೧. ನಾಗಪತ್ನೀಭ್ಯೋನಮಃ । ಕುಙ್ಕುಮಂ ಸಮರ್ಪಯಾಮಿ ।
(ನಾಗಪತ್ನಿಯರಿಗೆ ಕುಂಕುಮವನ್ನು ಅರ್ಪಿಸಬೇಕು)

೧೨. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಅಲಙ್ಕಾರಾರ್ಥೇ ಅಕ್ಷತಾನ್ ಸಮರ್ಪಯಾಮಿ ।
(ಅಕ್ಷತೆಗಳನ್ನು ಅರ್ಪಿಸಬೇಕು)

೧೩. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಪೂಜಾರ್ಥೇ ಋತುಕಾಲೋದ್ಭವಪುಷ್ಪಾಣಿ ತುಲಸೀಪತ್ರಾಣಿ ಬಿಲ್ವಪತ್ರಾಣಿ ದೂರ್ವಾಙ್ಕುರಾಂಶ್ಚ ಸಮರ್ಪಯಾಮಿ।
(ಹೂವು, ಹಾರ, ಬಿಲ್ವಪತ್ರೆ ಇತ್ಯಾದಿ ಅರ್ಪಿಸಬೇಕು)

೧೪. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಧೂಪಂ ಸಮರ್ಪಯಾಮಿ ।
(ಊದುಬತ್ತಿಯಿಂದ ಬೆಳಗಬೇಕು)

೧೫. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ದೀಪಂ ಸಮರ್ಪಯಾಮಿ ।
(ನೀರಾಜನದಿಂದ ಆರತಿ ಬೆಳಗಬೇಕು)

೧೬. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ನೈವೇದ್ಯಾರ್ಥೇ ಪುರತಸ್ಥಾಪಿತ ನೈವೇದ್ಯಂ ನಿವೇದಯಾಮಿ ।
(ಹಾಲು-ಸಕ್ಕರೆ, ಕುಲಪರಂಪರೆಗನುಸಾರ ಪಾಯಸ ಇತ್ಯಾದಿಗಳ ನೈವೇದ್ಯ ಅರ್ಪಿಸಬೇಕು)

ಬಲಗೈಯಲ್ಲಿ ೨ ತುಳಸಿ ಎಲೆಗಳನ್ನು ತೆಗೆದುಕೊಂಡು ಅವುಗಳ ಮೇಲೆ ನೀರನ್ನು ಹಾಕಬೇಕು. ನಂತರ ನೈವೇದ್ಯದ ಮೇಲೆ ಪ್ರೋಕ್ಷಣೆ ಮಾಡಿ (ಸಿಂಪಡಿಸಿ) ಎಲೆಗಳನ್ನು ಕೈಯಲ್ಲಿಯೇ ಹಿಡಿದುಕೊಂಡಿರಬೇಕು. ಎಡಗೈಯ ಬೆರಳುಗಳನ್ನು ಎರಡೂ ಕಣ್ಣುಗಳ (ಅಥವಾ ಎಡಗೈಯನ್ನು ಎದೆಯ ಮೇಲೆ) ಮೇಲಿಟ್ಟು ನೈವೇದ್ಯವನ್ನು ಅರ್ಪಿಸುವಾಗ ಬಲಗೈಯನ್ನು ನೈವೇದ್ಯದಿಂದ ನಾಗಗಳ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತ ಮುಂದಿನ ಮಂತ್ರವನ್ನು ಪಠಿಸಬೇಕು.

ಪ್ರಾಣಾಯ ಸ್ವಾಹಾ ।
ಅಪಾನಾಯ ಸ್ವಾಹಾ ।
ವ್ಯಾನಾಯ ಸ್ವಾಹಾ ।
ಉದಾನಾಯ ಸ್ವಾಹಾ ।
ಸಮಾನಾಯ ಸ್ವಾಹಾ ।
ಬ್ರಹ್ಮಣೇ ಸ್ವಾಹಾ ।

ಕೈಯಲ್ಲಿರುವ ಒಂದು ಎಲೆಯನ್ನು ನೈವೇದ್ಯದ ಮೇಲೆ ಮತ್ತು ಇನ್ನೊಂದು ಎಲೆಯನ್ನು ನಾಗದೇವತೆಯ ಚರಣಗಳಲ್ಲಿ ಅರ್ಪಿಸಬೇಕು. ಅಂಗೈಯಲ್ಲಿ ನೀರನ್ನು ತೆಗೆದುಕೊಳ್ಳಬೇಕು ಮತ್ತು ಮುಂದಿನ ಪ್ರತಿಯೊಂದು ಮಂತ್ರದ ‘ಸಮರ್ಪಯಾಮಿ’ ಎಂದು ಹೇಳುವಾಗ ಆ ನೀರನ್ನು ಹರಿವಾಣದಲ್ಲಿ ಬಿಡಬೇಕು.

ಓಂ ಅನನ್ತಾದಿನಾಗದೇವತಾಭ್ಯೋ ನಮಃ । ನೈವೇದ್ಯಂ ಸಮರ್ಪಯಾಮಿ ।

ಮಧ್ಯೇ ಪಾನೀಯಂ ಸಮರ್ಪಯಾಮಿ ।

ಉತ್ತರಾಪೋಶನಂ ಸಮರ್ಪಯಾಮಿ ।

ಹಸ್ತಪ್ರಕ್ಷಾಲನಂ ಸಮರ್ಪಯಾಮಿ ।

ಮುಖಪ್ರಕ್ಷಾಲನಂ ಸಮರ್ಪಯಾಮಿ ।

ಕರೋದ್ವರ್ತನಾರ್ಥೇ ಚನ್ದನಂ ಸಮರ್ಪಯಾಮಿ ।

ಮುಖವಾಸಾರ್ಥೇ ಪೂಗೀಫಲತಾಮ್ಬೂಲಂ ಸಮರ್ಪಯಾಮಿ ।

ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಮಙ್ಗಲಾರ್ತಿಕ್ಯದೀಪಂ ಸಮರ್ಪಯಾಮಿ ।

ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಕರ್ಪೂರದೀಪಂ ಸಮರ್ಪಯಾಮಿ ।
(ಕರ್ಪೂರದ ಆರತಿಯನ್ನು ಬೆಳಗಬೇಕು)

ಓಂ ಅನನ್ತಾದಿನಾಗದೇವತಾಭ್ಯೋ ನಮಃ । ನಮಸ್ಕಾರಾನ್ ಸಮರ್ಪಯಾಮಿ ।
(ಸಾಷ್ಟಾಂಗ ನಮಸ್ಕಾರ ಹಾಕಬೇಕು)

ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಪ್ರದಕ್ಷಿಣಾಂ ಸಮರ್ಪಯಾಮಿ ।
(ಎದೆಯ ಬಳಿ ಎರಡೂ ಕೈಗಳನ್ನು ನಮಸ್ಕಾರದ ಮುದ್ರೆಯಲ್ಲಿ ಜೋಡಿಸಬೇಕು ಮತ್ತು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತಮ್ಮ ಸುತ್ತಲೂ ಗೋಲಾಕಾರವಾಗಿ ತಿರುಗಿ ಪ್ರದಕ್ಷಿಣೆ ಹಾಕಬೇಕು.)

ಶ್ರಾವಣೇ ಶುಕ್ಲಪಞ್ಚಮ್ಯಾಂ ಯತ್ಕೃತಂ ನಾಗಪೂಜನಮ್ ।
ತೇನ ತೃಪ್ಯನ್ತು ಮೇ ನಾಗಾ ಭವನ್ತು ಸುಖದಾಃ ಸದಾ ।।

ಅಜ್ಞಾನಾಜ್ಜ್ಞಾನತೋ ವಾಽಪಿ ಯನ್ಮಯಾ ಪೂಜನಂ ಕೃತಮ್ ।
ನ್ಯೂನಾತಿರಿಕ್ತಂ ತತ್ಸರ್ವಂ ಭೋ ನಾಗಾಃ ಕ್ಷನ್ತುಮರ್ಹಥ ।।

ಯುಷ್ಮತ್ಪ್ರಸಾದಾತ್ಸಫಲಾ ಮಮ ಸನ್ತು ಮನೋರಥಾಃ ।
ಸರ್ವದಾ ಮತ್ಕುಲೇ ಮಾಸ್ತು ಭಯಂ ಸರ್ಪವಿಷೋದ್ಭವಮ್ ।।

ಅರ್ಥ : ಶ್ರಾವಣ ಶುಕ್ಲ ಪಕ್ಷ ಪಂಚಮಿಯಂದು ನಾನು ಮಾಡಿರುವ ಈ ನಾಗಪೂಜೆಯಿಂದ ನಾಗದೇವತೆಗಳು ಪ್ರಸನ್ನಾರಾಗಿ ನನಗೆ ಸದಾಕಾಲ ಸುಖವನ್ನು ಪ್ರದಾನಿಸುವಂತವರಾಗಲಿ. ಹೇ ನಾಗದೇವತೆಗಳೇ, ನಾನು ಮಾಡಿರುವ ಈ ಪೂಜೆಯಲ್ಲಿ  ತಿಳಿದೋ ತಿಳಿಯದೆಯೋ ಏನಾದರೂ ಹೆಚ್ಚು-ಕಡಿಮೆ ಆಗಿದ್ದಲ್ಲಿ ನನ್ನನ್ನು ಕ್ಷಮಿಸಿ. ನಿಮ್ಮ ಕೃಪೆಯಿಂದ ನನ್ನ ಸರ್ವ ಇಚ್ಛೆ ಮನೋಕಾಮನೆಗಳು ಪೂರ್ಣವಾಗಲಿ. ನನ್ನ ಕುಲದಲ್ಲಿ ಎಂದಿಗೂ ಸರ್ಪವಿಷದ ಭಯ ಉತ್ಪನ್ನವಾಗದಿರಲಿ ಎಂದು ತಮ್ಮ ಚರಣಗಳಲ್ಲಿ ಪ್ರಾರ್ಥನೆ..

ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಪ್ರಾರ್ಥನಾಂ ಸಮರ್ಪಯಾಮಿ ।
(ಕೈ ಜೋಡಿಸಿ ಪ್ರಾರ್ಥನೆ ಮಾಡಬೇಕು)

ಆವಾಹನಂ ನ ಜಾನಾಮಿ ನ ಜಾನಾಮಿ ತವಾರ್ಚನಮ್ ।
ಪೂಜಾಂ ಚೈವ ನ ಜಾನಾಮಿ ಕ್ಷಮ್ಯತಾಂ ಪರಮೇಶ್ವರ ।।

ಮನ್ತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಸುರೇಶ್ವರ ।
ಯತ್ಪೂಜಿತಂ ಮಯಾ ದೇವ ಪರಿಪೂರ್ಣಂ ತದಸ್ತು ಮೇ ।।

ಅರ್ಥ : ಭಗವಂತಾ, ನನಗೆ ನಿನ್ನ ಆವಾಹನೆ ಮತ್ತು ಅರ್ಚನೆ, ಹಾಗೆಯೇ ನಿನ್ನ ಪೂಜೆಯನ್ನು ಹೇಗೆ ಮಾಡಬೇಕು ಎಂಬುದೂ ತಿಳಿದಿಲ್ಲ. ಪೂಜೆಯನ್ನು ಮಾಡುವಾಗ ಏನಾದರೂ ತಪ್ಪಾಗಿದ್ದಲ್ಲಿ ನನ್ನನ್ನು ಕ್ಷಮಿಸು. ಹೇ ದೇವಾ, ನಾನು ಮಂತ್ರಹೀನ, ಕ್ರಿಯಾಹೀನ ಮತ್ತು ಭಕ್ತಿಹೀನನಾಗಿದ್ದೇನೆ. ನಾನು ಮಾಡಿದ ಪೂಜೆಯನ್ನು, ನೀನು ಪರಿಪೂರ್ಣವಾಗಿಸಿಕೋ. ಹಗಲು ರಾತ್ರಿ ನನ್ನಿಂದ ತಿಳಿದೋ ಅಥವಾ ತಿಳಿಯದೆಯೋ ಸಹಸ್ರಾರು ಅಪರಾಧಗಳಾಗುತ್ತಿರುತ್ತವೆ. ‘ನಾನು ನಿನ್ನ ದಾಸನಾಗಿದ್ದೇನೆ’ ಎಂದು ಭಾವಿಸಿ ನನ್ನನ್ನು ಕ್ಷಮಿಸು.

ಕಾಯೇನ ವಾಚಾ ಮನಸೇನ್ದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತಿಸ್ವಭಾವಾತ್ ।
ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯೇ ತತ್ ।।

ಅರ್ಥ : ಹೇ ನಾರಾಯಣಾ, ಶರೀರ, ವಾಣಿ, ಮನಸ್ಸು, ಇತರ ಇಂದ್ರಿಯಗಳು, ಬುದ್ಧಿ, ಆತ್ಮ ಅಥವಾ ಪ್ರಕೃತಿ ಸ್ವಭಾವಕ್ಕನುಗುಣವಾಗಿ ನಾನು ಏನೇನು ಮಾಡಿದ್ದೇನೆಯೋ, ಅವೆಲ್ಲವನ್ನೂ ನಿಮಗೆ ಅರ್ಪಿಸುತ್ತೇನೆ.

ಅನೇನ ಕೃತಪೂಜನೇನ ಅನನ್ತಾದಿನವನಾಗದೇವತಾ: ಪ್ರೀಯನ್ತಾಮ್ ।

(ಹೀಗೆ ಹೇಳಿ ಬಲಗೈಯಿಂದ ಹರಿವಾಣದಲ್ಲಿ ನೀರು ಬಿಡಬೇಕು ಮತ್ತು ಎರಡು ಸಲ ಆಚಮನ ಮಾಡಬೇಕು,)

ಸಂಜೆ ವಿಸರ್ಜನೆಯ ಸಮಯದಲ್ಲಿ ಮುಂದಿನ ಶ್ಲೋಕವನ್ನು ಹೇಳಿ ನಾಗದೇವತೆಗಳ ಚರಣಗಳಲ್ಲಿ ಅಕ್ಷತೆಯನ್ನು ಅರ್ಪಿಸಿ ವಿಸರ್ಜನೆ ಮಾಡಬೇಕು.

ಯಾನ್ತು ದೇವಗಣಾಃ ಸರ್ವೇ ಪೂಜಾಮಾದಾಯ ಪಾರ್ಥಿವಾತ್ ।
ಇಷ್ಟಕಾಮಪ್ರಸಿದ್ಧ್ಯರ್ಥಂ ಪುನರಾಗಮನಾಯ ಚ ।।

ಈ ಪೂಜೆಯನ್ನು ಎಲ್ಲ ದೇವಗಣರು ಸ್ವೀಕರಿಸಲಿ ಮತ್ತು ಇಚ್ಛಿತ ಕಾರ್ಯದ ಸಿದ್ಧಿಗಾಗಿ ಮತ್ತು ಪುನಃ ಬರಲು ಈಗ ಪ್ರಸ್ಥಾನ ಮಾಡಲಿ.

ಇಲ್ಲಿಗೆ ನಾಗದೇವತೆಯ ಪೂಜೆ ಸಮಾಪ್ತವಾಯಿತು.

2 thoughts on “ನಾಗರಪಂಚಮಿಯ ಪೂಜೆ (ಅರ್ಥ ಸಹಿತ) – ಭಾಗ 2”

  • ನಮಸ್ಕಾರ ಹೇಮಾರವರೇ,

   ಇಲ್ಲಿ ನೀಡಿರುವ ಪೂಜೆಯ ಆಡಿಯೋ/ವೀಡಿಯೋ ಸಧ್ಯಕ್ಕೆ ನಮ್ಮಲ್ಲಿ ಲಭ್ಯವಿಲ್ಲ, ಕ್ಷಮಿಸಿ.

   ಇಂತಿ,
   ಸನಾತನ ಸಂಸ್ಥೆ

   Reply

Leave a Comment