ಭಗವಂತನ ಭಾವವಿಶ್ವವನ್ನು ಹೇಗೆ ಅನುಭವಿಸುವುದು?

ಪರಾತ್ಪರ ಗುರು ಡಾ. ಆಠವಲೆ

ನಾವು ದೇವರಲ್ಲಿಗೆ ಹೋಗದೇ, ನಮ್ಮ ಹತ್ತಿರ ಬರಬೇಕೆಂದು ದೇವರಿಗೇ ಅನಿಸುವಷ್ಟರ ಮಟ್ಟಿಗೆ ನಮ್ಮ ಭಾವವನ್ನು ಹೆಚ್ಚಿಸಬೇಕು !

ಪರಾತ್ಪರ ಗುರು ಡಾ. ಆಠವಲೆ

ಸತತ ಭಾವಸ್ಥಿತಿಯಲ್ಲಿದ್ದರೆ, ಸೇವೆಯಲ್ಲಿ ಶರೀರ, ಮನಸ್ಸು ಮತ್ತು ಬುದ್ಧಿ ಸಹಕರಿಸುವುದಿಲ್ಲವೆಂದು ವಿಚಾರ ಮಾಡದಿರಿ !

ಓರ್ವ ಸಾಧಕ : ಸೇವೆಯಲ್ಲಿ ಶರೀರ ಸಹಕರಿಸುವಾಗ ಮನಸ್ಸು ಮತ್ತು ಬುದ್ಧಿ ಸಹಕರಿಸುವುದಿಲ್ಲ. ಮನಸ್ಸು ಮತ್ತು ಬುದ್ಧಿ ಸಹಕರಿಸುವಾಗ ಶರೀರ ಸಹಕರಿಸುವುದಿಲ್ಲ.

ಪ.ಪೂ. ಡಾಕ್ಟರ್ : ಸತತ ಭಾವದ ಸ್ಥಿತಿಯಲ್ಲಿದ್ದರೆ, ಶರೀರ, ಮನಸ್ಸು, ಬುದ್ಧಿ ಇವುಗಳು ಸಹಕರಿಸುವ ವಿಷಯದಲ್ಲಿ ಅಡಚಣೆ ಬರುವುದಿಲ್ಲ. ಸನಾತನವು ಪ್ರಕಾಶಿಸಿದ ‘ಭಾವಜಾಗೃತಿಗಾಗಿ ಸಾಧನೆ‘ಯ ಗ್ರಂಥಗಳನ್ನು ಓದಿ ದಿನವಿಡೀ ಭಾವದ ಸ್ಥಿತಿಯಲ್ಲಿರಲು ಪ್ರಯತ್ನಿಸಿರಿ. ನಿಮ್ಮಲ್ಲಿ ಭಾವವಿದೆ. ಭಾವ ಇರುವುದರಿಂದ ಮುಂದೆ ಹೋಗುವಿರಿ. ಭಾವ ಮತ್ತು ಆನಂದದ ಅನುಭೂತಿ ಬರುತ್ತದೆ, ಇನ್ನೇನು ಬೇಕು ? ಶಬ್ದದಿಂದ ಮಾತನಾಡಿ ಏನು ಸಿಗಲಿದೆ ? ಆನಂದ ಮತ್ತು ಭಾವಜಾಗೃತಿ ಇದೇ ಒಳ್ಳೆದಿದೆ.

ಬುದ್ಧಿಯಿಂದ ಅಧ್ಯಾತ್ಮದ ಬಗ್ಗೆ ಏನಾದರೂ ಕಲಿಯುವುದಕ್ಕಿಂತ ಭಾವದ ಸ್ಥಿತಿಯಲ್ಲಿರುವುದು ಮಹತ್ವದ್ದಾಗಿದೆ

ಇದರ ಕಾರಣವೆಂದರೆ ಹೇಗೆ ಅಧ್ಯಾತ್ಮವು ಬುದ್ಧಿಯ ಆಚೆಗಿನ ಶಾಸ್ತ್ರವಾಗಿದೆಯೋ ಭಾವವೂ ಬುದ್ಧಿಯ ಆಚೆಗಿನ ವಿಷಯವಾಗಿದೆ.

ಸಾಧಕನು ಭಾವಾವಸ್ಥೆಯಲ್ಲಿದ್ದರೆ ನನಗೆ ಅದೇ ಆನಂದ !

ಪ.ಪೂ. ಡಾಕ್ಟರ್ (ತೀವ್ರ ತೊಂದರೆ ಇದ್ದರೂ ಅನೇಕ ವರ್ಷಗಳಿಂದ ಸಾಧನೆಯಲ್ಲಿರುವ ಹಾಗೂ ಈಗ ಭಾವ ಜಾಗೃತವಾಗಿರುವ ಸಾಧಕನನ್ನು ಉದ್ದೇಶಿಸಿ) : ನೀವು ಭಾವವನ್ನು ಹೇಗೆ ಜಾಗೃತಗೊಳಿಸಿದ್ದೀರಿ ?

ಓರ್ವ ಸಾಧಕ : ನೀವೇ ಎಲ್ಲವನ್ನೂ ಮಾಡಿಸಿಕೊಳ್ಳುತ್ತಿದ್ದೀರಿ. ತುಂಬಿ ತುಂಬಿ ಆನಂದವನ್ನು ನೀಡುತ್ತಿದ್ದೀರಿ; ಆದರೆ ಭಗವಂತಾ, ನಿಮಗೆ ಆನಂದವಾಗುವಂತಹ ಯಾವುದೇ ಪ್ರಯತ್ನ ನನ್ನಿಂದ ಆಗುವುದಿಲ್ಲ.

ಪ.ಪೂ. ಡಾಕ್ಟರ್ : ನೀವು ಭಾವದ ಸ್ಥಿತಿಯಲ್ಲಿದ್ದೀರಿ, ಇದೇ ನನಗೆ ಎಲ್ಲಕ್ಕಿಂತ ದೊಡ್ಡ ಆನಂದವಾಗಿದೆ.

(ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಸಾಧನೆಯಾಗಬೇಕು ಹಾಗೂ ಸಾಧಕರು ಆನಂದದಲ್ಲಿರಬೇಕು, ಎಂದು ಅಖಂಡವಾಗಿ ಚಡಪಡಿಸುತ್ತಿರುತ್ತಾರೆ. ಅದರ ಋಣವನ್ನು ನಾವು ತೀರಿಸಲು ಸಾಧ್ಯವಿಲ್ಲ; ಆದರೆ ಅವರು ಹೇಳಿದ ಪ್ರಯತ್ನವನ್ನು ನಿರಂತರ ಹಾಗೂ ಮನಃಪೂರ್ವಕ ಮಾಡಿ ಭಾವದ ಸ್ಥಿತಿಯನ್ನು ಅನುಭವಿಸಿ ಅಷ್ಟು ಆನಂದವನ್ನಾದರೂ ಅವರಿಗೆ ಕೊಡಬಹುದು.)

ಭಾವದ ಮಹತ್ವ

ಭಾವದಲ್ಲಿ ಆನಂದವಿದೆ. ಭಾವದ ನಂತರ ಶಾಂತಿಯ ಹಂತ ಬರುತ್ತದೆ. ಭಾವದ ಸ್ಥಿತಿಗೆ ಹೋಗಲು ಕಷ್ಟವಿದೆ. ಸತತ ಶರಣಾಗತಭಾವದಿಂದ ಪ್ರಯತ್ನಿಸಬೇಕಾಗುತ್ತದೆ. ಭಾವದ ಸ್ತರದಲ್ಲಿರುವ ಸಾಧಕರ ಪ್ರಾರ್ಥನೆಯನ್ನು ದೇವರು ಕೇಳಿಯೇ ಕೇಳುತ್ತಾರೆ ! ಭಾವ-ಭಕ್ತಿ ಹೆಚ್ಚಾದರೆ ಶಕ್ತಿ ಹೆಚ್ಚಾಗುತ್ತದೆ.

ಸಕ್ಕರೆಯ ಸವಿಯನ್ನು ಹೇಗೆ ಶಬ್ದದಿಂದ ಹೇಳಲು ಸಾಧ್ಯವಿಲ್ಲವೋ, ಹಾಗೆಯೇ ಭಾವವನ್ನು ಸಹ ಶಬ್ದದಿಂದ ವ್ಯಕ್ತಪಡಿಸಲು ಸಾಧ್ಯವಿಲ್ಲ. ಸತತ ಭಗವಂತನ ಅನುಸಂಧಾನದಲ್ಲಿರುವ ಸುಲಭವಾದ ಮಾರ್ಗವೆಂದರೆ ಸತತ ಭಾವಾವಸ್ಥೆಯಲ್ಲಿರಲು ಪ್ರಯತ್ನಿಸುವುದು.

ಸೂಚನೆ : ಇಲ್ಲಿ ಪ.ಪೂ. ಡಾಕ್ಟರ್ ಎಂದರೆ ಪರಾತ್ಪರ ಗುರು ಡಾ. ಆಠವಲೆ.

Leave a Comment