ಸನಾತನದ ೧೭ ನೇ ಸಮಷ್ಟಿ ಸಂತರಾದ ಪೂ. ಕೆ. ಉಮೇಶ ಶೆಣೈ (ವ. ೬೮) ಇವರ ಸಾಧನೆಯ ಪ್ರವಾಸ !

Article also available in :

೧. ಬಾಲ್ಯ

೧ ಅ. ಚಿಕ್ಕಂದಿನಿಂದಲ್ಲೆ ಆಗರ್ಭಶ್ರೀಮಂತ ಮತ್ತು ಪರಾಕೋಟಿಯ ಬಡತನ (ದಾರಿದ್ರ್ಯ), ಹೀಗೆ ಎರಡೂ ಸ್ಥಿತಿಗಳನ್ನು ಅನುಭವಿಸುವುದು

೨೬.೬.೧೯೪೯ ರಂದು ಜ್ಯೇಷ್ಠ ಅಮಾವಾಸ್ಯೆಯಂದು ನನ್ನ ಜನ್ಮವಾಯಿತು. ನನಗೆ ನಾಲ್ಕು ಜನ ಸಹೋದರರು ಮತ್ತು ಇಬ್ಬರು ಸಹೋದರಿಯರಿದ್ದರು. ನಾನು ನನ್ನ ತಂದೆ-ತಾಯಿಯವರ ಮೂರನೇ ಮಗನಾಗಿದ್ದೇನೆ. ನಾನು ಚಿಕ್ಕವನಿದ್ದಾಗ ನನ್ನ ತಂದೆಯವರು ಆಗರ್ಭಶ್ರೀಮಂತರಾಗಿದ್ದರು. ನಾನು ೭ ವರ್ಷದವನಾಗಿದ್ದಾಗ ತಂದೆಯವರು ಬ್ಯಾಂಕಿನ ಸಾಲ ತೀರಿಸದೇ ಇರುವುದರಿಂದ ಅವರ ಎಲ್ಲ ಸಂಪತ್ತನ್ನು ಹರಾಜು ಮಾಡಿ ಅವರನ್ನು ‘ದಿವಾಳಿ’ ಎಂದು ಘೋಷಿಸಲಾಯಿತು. ನಾವು ಏಳು ಜನ ಮಕ್ಕಳು ಮತ್ತು ತಾಯಿಯವರನ್ನು ತವರು ಮನೆಯಲ್ಲಿ ಬಿಟ್ಟು ತಂದೆಯವರು ೧೫-೧೬ ವರ್ಷಗಳ ಕಾಲ ನಾಪತ್ತೆಯಾಗಿದ್ದರು. ತಾಯಿಯ ತವರುಮನೆಯಲ್ಲಿಯೂ ತುಂಬಾ ಬಡತನವಿತ್ತು ಮತ್ತು ಅವರದ್ದೂ ದೊಡ್ಡ ಕುಟುಂಬವಾಗಿತ್ತು. ಅದರಲ್ಲಿ ನಾವು ೮ ಜನ ಅವರ ಕುಟುಂಬದಲ್ಲಿರಲು ಹೋದೆವು. ನನ್ನ ಬಾಲ್ಯವು ತುಂಬಾ ಕಷ್ಟದಲ್ಲಿ ಕಳೆಯಿತು. ನಮಗೆ ಪ್ರತಿದಿನ ಊಟ ಸಿಗಲು ತುಂಬಾ ಕಷ್ಟಪಡಬೇಕಾಗುತ್ತಿತ್ತು. ತಾಯಿಗೆ ಬೇರೆಯವರ ಮನೆಗಳಲ್ಲಿ ಕೆಲಸ ಮಾಡಿ ನಮ್ಮನ್ನು ಸಾಕಬೇಕಾಯಿತು. ನಮ್ಮ ಅಜ್ಜನವರಿಗೆ ನಮಗಾಗಿ ತುಂಬಾ ಸಾಲ ಮಾಡಬೇಕಾಯಿತು. ನನಗೆ ಚಿಕ್ಕ ವಯಸ್ಸಿನಲ್ಲಿಯೇ ಆಗರ್ಭಶ್ರೀಮಂತಿಕೆ ಮತ್ತು ತೀವ್ರ ಬಡತನವನ್ನು (ದಾರಿದ್ರ್ಯವನ್ನು) ಭೋಗಿಸಬೇಕಾಗಿದ್ದರಿಂದ ಅಂದಿನಿಂದಲೇ ನನಗೆ ಇದೆಲ್ಲ ಪ್ರಾರಬ್ಧದ ಭಾಗವಾಗಿದೆ ಎಂದು ಅರಿವಾಯಿತು.

೨. ಶಿಕ್ಷಣ ಮತ್ತು ನೌಕರಿ

೨ ಅ. ಹನ್ನೆರಡನೇ ತರಗತಿಯ ಪರೀಕ್ಷೆಯಲ್ಲಿ ಶಾಲೆಯಲ್ಲಿ ಎಲ್ಲ ವಿಷಯಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿ ಎಂದು ಬಹುಮಾನ ಸಿಗುವುದು : ಪಡುಬಿದ್ರಿಯಲ್ಲಿ ನನ್ನ ಶಾಲೆಯ ಜೀವನ ಪ್ರಾರಂಭವಾಗಿ ೧೯೬೬ ರಲ್ಲಿ ನಾನು ಹನ್ನೆರಡನೇ ತರಗತಿಯ ಪರೀಕ್ಷೆ (ಪಿ.ಯು.ಸಿ.)ಯಲ್ಲಿ ಉತ್ತೀರ್ಣನಾದೆನು. ಜೊತೆಗೆ ಶಾಲೆಯಲ್ಲಿ ಎಲ್ಲ ವಿಷಯಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿ ಎಂದು ನನಗೆ ಬಹುಮಾನವೂ ಸಿಕ್ಕಿತು.

೨ ಆ. ಬ್ಯಾಂಕಿನಲ್ಲಿ ನೌಕರಿ ಸಿಗುವುದು : ವರ್ಷ ೧೯೬೮ ರಲ್ಲಿ ಯಾವ ಬ್ಯಾಂಕಿನಿಂದ (ಸಿಂಡಿಕೇಟ್ ಬ್ಯಾಂಕ್) ನಮ್ಮ (ಸ್ಥಿರ-ಚರ) ಸಂಪತ್ತನ್ನು ಹರಾಜು ಮಾಡಲಾಗಿತ್ತೋ, ಅಲ್ಲಿನ ನೌಕರರಿಗೆ ‘ಅವರಿಂದ
ದೊಡ್ಡ ತಪ್ಪಾಗಿದ್ದು ಓರ್ವ ಶ್ರೀಮಂತ ಕುಟುಂಬದವರ ಮೇಲೆ ಅನ್ಯಾಯವಾಗಿದೆ’, ಎಂದು ಪಶ್ಚಾತ್ತಾಪವಾಯಿತು. ಆ ಬ್ಯಾಂಕಿನ ವ್ಯವಸ್ಥಾಪಕರು ನಮಗೆ ಮೂರು ಮಂದಿ ಸಹೋದರರಿಗೆ ಬ್ಯಾಂಕಿನಲ್ಲಿ ನೌಕರಿ ಕೊಟ್ಟರು.

೨ ಇ. ಕಲಿಯುವ ಆಸಕ್ತಿ ಇರುವುದರಿಂದ ‘ಎಮ್.ಎ’ ಪದವಿ ಅನಂತರ ‘ಎಲ್.ಎಲ್.ಬಿ.’ ಪದವಿ ಪಡೆಯುವುದು : ನನಗೆ ಕಲಿಯುವುದರಲ್ಲಿ ತುಂಬಾ ಆಸಕ್ತಿಯಿರುವುದರಿಂದ ಬ್ಯಾಂಕಿನಲ್ಲಿ ನೌಕರಿ ಮಾಡುತ್ತಿರುವಾಗ ನಾನು ಖಾಸಗಿಯಾಗಿ ‘ಬಿ.ಎ.’ ವರೆಗೆ ಶಿಕ್ಷಣ ಪಡೆದುಕೊಂಡೆನು. ೧೯೭೮ ರಿಂದ ೧೯೮೪ ರ ಕಾಲಾವಧಿಯಲ್ಲಿ ನನಗೆ ಮದುವೆಯಾಗಿ ಇಬ್ಬರು ಮಕ್ಕಳು ಹುಟ್ಟಿದ ನಂತರವೂ ನಾನು ‘ಎಮ್.ಎ.’ ಮತ್ತು ‘ಎಲ್.ಎಲ್.ಬಿ.’ಯ ಶಿಕ್ಷಣ ಪಡೆದೆನು. ನನಗೆ ‘ಎಲ್.ಎಲ್.ಬಿ.’ ಪರೀಕ್ಷೆಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಸುವರ್ಣಪದಕ ಸಿಕ್ಕಿತು. ನಾನು ಆ ಸಮಯದಲ್ಲಿ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಉಪಾಸನೆ ಮಾಡುತ್ತಿರುವುದರಿಂದ ಅವರ ಕೃಪೆಯಿಂದಲೇ ಇದು ಸಾಧ್ಯವಾಯಿತು. ನಾನು ‘ಸಿ.ಎ. ಐ.ಐ. ಬಿ. – ೧’ ಈ ಬ್ಯಾಂಕಿನ ಪರೀಕ್ಷೆಯಲ್ಲಿಯೂ ಉತ್ತೀರ್ಣನಾದೆನು.

೩. ಬ್ಯಾಂಕಿನ ನೌಕರಿ

೩ ಅ. ಕುಟುಂಬದ ಜವಾಬ್ದಾರಿ ಇದ್ದುದರಿಂದ ಬ್ಯಾಂಕಿನಲ್ಲಿನ ಪ್ರಮೋಷನ್ ಬೇಡವೆಂದು ಹೇಳಿ ಒಂದೇ ಶ್ರೇಣಿಯಲ್ಲಿ ೩೦ ವರ್ಷ ಸೇವೆಯನ್ನು ಮಾಡುವುದು ಮತ್ತು ‘ಕುಟುಂಬದ ಜವಾಬ್ದಾರಿಯನ್ನು ಕೊಟ್ಟು ಗುರುದೇವರು ಕೊಡುಕೊಳ್ಳುವಿಕೆಯ ಲೆಕ್ಕಾಚಾರವನ್ನು ತೀರಿಸುವುದು’, ಎಂಬುದು ಗಮನಕ್ಕೆ ಬರುವುದು : ೨೭.೧.೧೯೬೮ ರಂದು ನನಗೆ ಚಿಕ್ಕ ವಯಸ್ಸಿನಲ್ಲಿಯೇ ಸಿಂಡಿಕೇಟ್ ಬ್ಯಾಂಕಿನಲ್ಲಿ ನೌಕರಿ ಸಿಕ್ಕಿತು. ೧೯೭೪ ರಲ್ಲಿ ನನಗೆ ನೌಕರಿಯ ಮೊದಲನೇ ಪ್ರಮೋಷನ್ ಸಿಕ್ಕಿತು. ನನ್ನ ಹಿರಿಯ ಇಬ್ಬರು ಸಹೋದರರು ಮುಂದಿನ ಪ್ರಮೋಷನ್ ಸ್ವೀಕರಿಸಿ ಹೊರಗಿನ ರಾಜ್ಯಗಳಿಗೆ ಸ್ಥಳಾಂತರ ಮಾಡಿಸಿಕೊಂಡರು. ಇದರಿಂದ ಕುಟುಂಬದ ಜವಾಬ್ದಾರಿ ನನ್ನ ಮೇಲೆ ಬಂದಿತು. ತಮ್ಮಂದಿರ ಶಿಕ್ಷಣ, ಅವರ ನೌಕರಿ, ವಿವಾಹ, ಹಾಗೆಯೇ ಇತರ ಸಂಸಾರದ ಭಾರವು ನನ್ನ ಮೇಲೆ ಬಂತು. ನನಗೆ ನನ್ನ ಮೇಲಿನ ಅಧಿಕಾರಿಗಳಿಂದ ಪ್ರಮೋಷನ ತೆಗೆದುಕೊಳ್ಳಬೇಕೆಂದು ತುಂಬಾ ಒತ್ತಡವಿತ್ತು. ‘ನಾನು ಪ್ರಮೋಷನ್ ಸ್ವೀಕರಿಸಿ ಹೊರಗೆ ಹೋದರೆ, ಮನೆಯ ಕಡೆಗೆ ಯಾರು ಗಮನ ಕೊಡುವರು ?’, ಎಂದು ತಾಯಿ ಅಳುತ್ತಿದ್ದರು. ನಾನು ‘ಇನ್ನು ಮುಂದೆ ಪ್ರಮೋಷನ್ ಸ್ವೀಕರಿಸುವುದಿಲ್ಲವೆಂದು’ ತಾಯಿಗೆ ಮಾತು ಕೊಟ್ಟೆ. ನಾನು ಅದೇ ಶ್ರೇಣಿಯಲ್ಲಿ ೩೦ ವರ್ಷ ಸೇವೆ ಮಾಡಿ ೩೦ ಕಿ.ಮೀ ದೂರದೊಳಗಿನ ಊರುಗಳಲ್ಲಿ ಸ್ಥಳಾಂತರ (ಟ್ರಾನ್ಸಫರ್) ಮಾಡಿಸಿಕೊಂಡು ಪ್ರತಿದಿನ ಸಾಯಂಕಾಲ ಮನೆಗೆ ಬರುತ್ತಿದ್ದೆ. ‘ಕುಟುಂಬದ ಜವಾಬ್ದಾರಿಯನ್ನು ಕೊಟ್ಟು ಗುರುದೇವರು ನನ್ನ ಕೊಡುಕೊಳ್ಳುವಿಕೆಯ ಲೆಕ್ಕವನ್ನು ತೀರಿಸಿದರು,’ ಎಂಬುದು ಈಗ ನನ್ನ ಗಮನಕ್ಕೆ ಬಂದಿತು.

೩ ಆ. ಸೇವೆ ಎಂದು ಯುನಿಯನ್ ಲೀಡರ್ ಎಂದು ಕಾರ್ಯವನ್ನು ಮಾಡಿ ಸಿಬ್ಬಂದಿಗಳಿಗೆ ಸಹಾಯ ಮಾಡುವುದು ಮತ್ತು ವರ್ಷ ೨೦೦೨ ರಲ್ಲಿ ಸ್ವೇಚ್ಛಾ ನಿವೃತ್ತಿ ತೆಗೆದುಕೊಳ್ಳುವುದು : ಸಿಂಡಿಕೇಟ್ ಬ್ಯಾಂಕ್‌ನಲ್ಲಿ ನೌಕರಿ ಮಾಡುತ್ತಿರುವಾಗ ನಾನು ಬ್ಯಾಂಕ್ ಯುನಿಯನ್‌ನ ಸಕ್ರೀಯ ಸದಸ್ಯನಾದೆನು. ಮುಂದೆ ರಾಜ್ಯಸ್ತರದಲ್ಲಿನ ಪದವಿಗಳಲ್ಲಿ (ವೈಸ್ ಚೇರಮನ್, ಜ್ಯುನಿಯರ್ ಸೆಕ್ರೆಟರಿ) ಕಾರ್ಯನಿರತನಾದೆನು. ಇದರಲ್ಲಿ ನನ್ನ ಯೂನಿಯನ್ ಸದಸ್ಯರಾಗಿರುವ ಸಿಬ್ಬಂದಿಗಳಿಗೆ ಸಹಾಯ ಮಾಡುವುದು ಇದೊಂದೇ ನನ್ನ ಉದ್ದೇಶವಾಗಿತ್ತು. ಶ್ರೀ ಗುರುದೇವರ ಕೃಪೆಯಿಂದ ನನಗೆ ಇದರಲ್ಲಿ ಯಶಸ್ಸೂ ದೊರಕುತ್ತಿತ್ತು. ನಾನು ರಾಘವೇಂದ್ರ ಸ್ವಾಮಿಯವರ ವೃಂದಾವನಕ್ಕೆ ೧೦೮ ಪ್ರದಕ್ಷಿಣೆಗಳನ್ನು ಹಾಕಿ ಮುಖ್ಯ ಕಛೇರಿಗೆ ಹೋಗುತ್ತಿದ್ದೆ. ನಾನು ಸೇವೆ ಎಂದು ಯುನಿಯನ್ ಲೀಡರ್ ಕಾರ್ಯ ಮಾಡುತ್ತಿದ್ದೆ. ಇತರ ಮುಖಂಡರಂತೆ ಗೊಂದಲವನ್ನು ಹಾಕುತ್ತಿರಲಿಲ್ಲ. ಇತರ ಮುಖಂಡರು (ಲೀಡರ್) ನನ್ನನ್ನು ದ್ವೇಷದಿಂದ ನೋಡುತ್ತಿದ್ದರು. ಗುರುದೇವರ ಕೃಪೆಯಿಂದ ಮತ್ತು ಸಿಬ್ಬಂದಿಗಳ ಸಹಾಯದಿಂದ ನಾನು ಬ್ಯಾಂಕಿನಿಂದ ನಿವೃತ್ತಿ ಆಗುವವರೆಗೂ ‘ಯೂನಿಯನ್ ಲೀಡರ್’ ಆಗಿದ್ದೆ. (ಪ್ರಾರಂಭದಲ್ಲಿ ನನ್ನ ಸನಾತನದ ಸಾಧನೆಯ ಪ್ರವಾಸದಲ್ಲಿ ಗುರುದೇವರು ನನ್ನ ಹೆಸರಿನ ಬದಲು ‘ಆ ಯೂನಿಯನ್ ಲೀಡರ’ ಹೇಗಿದ್ದಾರೆ ?,’ ಎಂದು ನನ್ನ ಬಗ್ಗೆ ವಿಚಾರಿಸುತ್ತಿದ್ದರು.) ೨೦೦೨ರಲ್ಲಿ ನಾನು ಸ್ವೇಚ್ಛಾ ಸೇವಾನಿವೃತ್ತಿಯನ್ನು ತೆಗೆದುಕೊಂಡೆ.

೪. ವೈವಾಹಿಕ ಜೀವನ 

ನನ್ನ ವಿವಾಹವು ಒಂದು ದೈವೀ ಘಟನೆಯಾಗಿದೆ. ೧೯೭೭ ರಲ್ಲಿ ನನ್ನ ಅವಳಿ ಸಹೋದರನ (ನನಗಿಂತ ೧೪ ನಿಮಿಷಗಳಿಂದ ದೊಡ್ಡವನಾಗಿರುವ ಸಹೋದರನ) ವಿವಾಹ ನಿಶ್ಚಿತವಾಯಿತು. ಆ ಸಮಯದಲ್ಲಿ ನನ್ನ ಮದುವೆಯೂ ಅದೇ ಸಮಾರಂಭದಲ್ಲಿಯೇ ಆಗಬೇಕೆಂದು ಅವನು ಹಟ ಹಿಡಿದನು. ಆ ಸಮಯದಲ್ಲಿ ನನ್ನ ಮಾವ ಅವರ ಹೆಂಡತಿಯ ಸೋದ ತಂಗಿಯ ಬಗ್ಗೆ ನನಗೆ, ‘ಅವಳು ಪೋಲಿಯೋದಿಂದಾಗಿ ಸ್ವಲ್ಪ ಕುಂಟುತ್ತಾಳೆ. ನೀನು ಅವಳನ್ನು ನೋಡಿ ನಂತರ ಮದುವೆಯಾಗು’ ಎಂದು ಹೇಳಿದರು. ಮೊದಲೇ ನನಗೆ ಕರ್ಮಫಲನ್ಯಾಯ ಮತ್ತು ಪ್ರಾರಬ್ಧದ ಮೇಲೆ ದೃಢನಂಬಿಕೆ ಇತ್ತು. ನಾವು ಚಿಕ್ಕವರಿರುವಾಗ ನಮ್ಮ ಕಷ್ಟಕರ ಜೀವನದಲ್ಲಿ ಮಾವನವರೇ ನಮ್ಮನ್ನು ಸಲುಹಿದ್ದರು. ಆದುದರಿಂದ ‘ನಾನು ಹುಡುಗಿಯನ್ನು ನೋಡಲು ಹೋಗುವುದಿಲ್ಲ. ನೀವು ಹೇಳಿದ ಹುಡುಗಿಯ ಜೊತೆಗೆ ನಾನು ಮದುವೆಯನ್ನು ಮಾಡಿಕೊಳ್ಳುತ್ತೇನೆ’, ಎಂದು ಹೇಳಿ ನಾನು ನನ್ನ ಒಪ್ಪಿಗೆಯನ್ನು ಕೊಟ್ಟೆನು. ೫.೫.೧೯೭೭ ರಂದು ನನ್ನ ಅವಳಿ ಸಹೋದರನ ಮದುವೆ ಮತ್ತು ೬.೫.೧೯೭೭ ರಂದು ನನ್ನ ಮದುವೆ ಆಯಿತು. ನನಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಹೀಗೆ ಇಬ್ಬರು ಮಕ್ಕಳಿದ್ದು, ಮಗ ಬೆಂಗಳೂರಿನಲ್ಲಿ ಸರ್ಜನ್‌ನೆಂದು ಕೆಲಸ ಮಾಡುತ್ತಿದ್ದಾನೆ. (ಮಗಳು (ವಿದ್ಯಾ) ಪ್ರಿಯಾ ಪ್ರಭು) ಎಮ್. ಕಾಮ್. ಮಾಡಿ (ಗಣಿತ) ಅಧ್ಯಾಪಕಳಾಗಿದ್ದಳು. ಈಗ ಅವಳು ಸನಾತನ ಸಂಸ್ಥೆಯ ಮಾರ್ಗದರ್ಶನದಲ್ಲಿ ಸೇವೆಯನ್ನೂ ಮಾಡುತ್ತಿದ್ದಾಳೆ.

೫. ಸನಾತನ ಸಂಸ್ಥೆಯ ಸಂಪರ್ಕದಲ್ಲಿ ಬರುವುದಕ್ಕಿಂತ ಮೊದಲು ಮಾಡಿದ ಸಾಧನೆ

೫ ಅ. ಚಿಕ್ಕಂದಿನಿಂದಲೇ ದೇವರ ಬಗ್ಗೆ ಆಸಕ್ತಿ ಇರುವುದು : ನನಗೆ ಚಿಕ್ಕಂದಿನಿಂದಲೇ ದೇವರ ಬಗ್ಗೆ ತುಂಬಾ ಆಸಕ್ತಿ ಇತ್ತು. ನಮ್ಮ ಮನೆಯಲ್ಲಿನ ವಾತಾವರಣವೂ ಅದಕ್ಕಾಗಿ ಪೂರಕವಾಗಿತ್ತು. ನನಗೆ ದೇವರಿಗಿಂತ ಸನ್ಯಾಸಿಗಳು ಮತ್ತು ಗುರುಗಳ ಬಗ್ಗೆ ತುಂಬಾ ಕುತೂಹಲ ಮತ್ತು ಶ್ರದ್ಧೆ ಇತ್ತು.

೫ ಆ. ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತಿ ಮಾಡುವುದು : ೧೯೭೪ ರಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಬಗ್ಗೆ ನನ್ನ ಮನಸ್ಸಿನಲ್ಲಿ ತುಂಬಾ ಭಕ್ತಿ ನಿರ್ಮಾಣವಾಯಿತು. ನಾನು ಪ್ರತಿ ಗುರುವಾರ ಸ್ವಾಮಿಗಳ ಮಠಕ್ಕೆ ಹೋಗುವುದು, ವರ್ಷಕ್ಕೊಮ್ಮೆ ಮಂತ್ರಾಲಯಕ್ಕೆ ಹೋಗುವುದು, ಯಾವುದೇ ವಿಷಯದ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಯವರ ವೃಂದಾವನಕ್ಕೆ ೧೦೮ ಪ್ರದಕ್ಷಣೆ ಹಾಕುವುದು, ಈ ರೀತಿ ಉಪಾಸನೆಯನ್ನು ಮಾಡುತ್ತಿದ್ದೆ. ನಾನು ಆಗಾಗ ಕೆಲವು ಸಂತ-ಮಹಾತ್ಮರನ್ನು ಭೇಟಿಯಾಗುತ್ತಿದ್ದೆ. ನನ್ನ ಹೆಂಡತಿಗೂ ಇದರ ಬಗ್ಗೆ ಇಷ್ಟವಿರುವುದರಿಂದ ನಾವಿಬ್ಬರೂ ಗುರುದೇವರ ಬಂಧನದಲ್ಲಿ ಬಂಧಿತರಾದೆವು.

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೆ ||

ಅರ್ಥ : ಪೂಜನೀಯವಾಗಿರುವ ಮತ್ತು ಸತ್ಯಧರ್ಮದ ಪರಿಪಾಲಕರಾದ ಶ್ರೀ ರಾಘವೇಂದ್ರ ಸ್ವಾಮಿಗಳು ಭಕ್ತರಿಗಾಗಿ ಕಲ್ಪವೃಕ್ಷ ಮತ್ತು ಕಾಮಧೇನುವಾಗಿದ್ದಾರೆ.

‘ಶ್ರೀ ರಾಘವೇಂದ್ರ ಸ್ವಾಮಿಜಿಯವರ ಸತ್ಯಧರ್ಮದ ಪರಿಪಾಲನೆ ಮಾಡಲು ನಾನು ಕಲ್ಪವೃಕ್ಷ ಮತ್ತು ಕಾಮಧೇನು ಆಗಿರುವೆನು’, ಈ ಬೋಧನೆ ನನಗೆ ಆದರ್ಶವೆನಿಸುತ್ತಿತ್ತು. ನನಗೆ ಪ್ರಾರಂಭದಿಂದಲೇ ಕರ್ಮಫಲನ್ಯಾಯ ಮತ್ತು ಪ್ರಾರಬ್ಧದ ಮೇಲೆ ತುಂಬಾ ವಿಶ್ವಾಸವಿದೆ. ‘ದೇವರು ಧರ್ಮಪಾಲನೆ ಮಾಡುವವರ ಕೈಬಿಡುವುದಿಲ್ಲ’, ಎಂಬುದರ ಮೇಲೆ ನನ್ನ ನಂಬಿಕೆಯಿತ್ತು.

೬. ಸನಾತನ ಸಂಸ್ಥೆಯ ಸಂಪರ್ಕ

೬ ಅ. ಸತ್ಸಂಗದಿಂದ ಜೀವನದಲ್ಲಿ ಹೇಗೆ ಬದಲಾವಣೆಯಾಗುತ್ತದೆ ?, ಎಂದು ಸ್ನೇಹಿತನು ಹೇಳಿದ ಮೇಲೆ ಜಿಜ್ಞಾಸೆಯಿಂದ ಸನಾತನ ಸಂಸ್ಥೆಯ ಸತ್ಸಂಗಕ್ಕೆ ಹೋಗುವುದು : ನಾನು ಶನಿವಾರ-ರವಿವಾರ ಮತ್ತು ರಜೆಯ ದಿನದಂದು ತಿರುಗಾಡುವುದು, ಮನೆಯ ಹೂದೋಟದಲ್ಲಿ ಕೆಲಸ ಮಾಡುವುದು, ಹೀಗೆ ಮಾಡುತ್ತಿದ್ದೆ. ನವೆಂಬರ್ ೧೯೯೭ ರಲ್ಲಿ ನನ್ನ ಒಬ್ಬ ಸ್ನೇಹಿತನು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರತಿ ಶನಿವಾರ ಸಾಯಂಕಾಲ ಸನಾತನದ ಸತ್ಸಂಗ ನಡೆಯುತ್ತದೆ, ಎಂದು ಹೇಳಿದನು. ‘ಸತ್ಸಂಗದಿಂದ ಜೀವನದಲ್ಲಿ ಹೇಗೆ ಬದಲಾವಣೆ ಆಗುತ್ತದೆ ?’, ಎಂಬ ಜಿಜ್ಞಾಸೆಯಿಂದ ನಾನು ಸತ್ಸಂಗಕ್ಕೆ ಹೋದೆನು. ಆಗ ಅಲ್ಲಿಗೆ ಭಟ್ಕಳದಿಂದ ಡಾ. ಸತೀಶ ಪ್ರಭು ಮತ್ತು ಶ್ರೀ. ಗಣಪತಿ ಕಾಮತ್ ಇವರು ಸಾಧಕರು ಸತ್ಸಂಗ ತೆಗೆದುಕೊಳ್ಳಲು ಬರುತ್ತಿದ್ದರು.

೬. ಸತ್ಸಂಗದ ದಿನಕ್ಕಾಗಿ ಚಾತಕ ಪಕ್ಷಿಯಂತೆ ದಾರಿ ಕಾಯುವುದು : ಒಂದು ಸತ್ಸಂಗದಲ್ಲಿ ‘ಸಂತರು ಕಾಣಲು ಭಿನ್ನ ಆದರೆ ಸ್ವರೂಪದಲ್ಲಿ ಏಕ |’, ಎಂಬ ಒಂದು ವಾಕ್ಯವು ನನ್ನನ್ನು ಜಾಗೃತಗೊಳಿಸಿತು. ಅಂದಿನಿಂದ ಶ್ರೀ ರಾಘವೇಂದ್ರ ಸ್ವಾಮಿಯವರ ಮಠಕ್ಕೆ ಹೋಗುವುದು ನಿಂತುಹೋಯಿತು. ನನ್ನ ಎಲ್ಲ ಪರಿಚಿತರಿಗೆ ‘೩೦ ವರ್ಷಗಳಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಾಡುವವನಿಗೆ ಸನಾತನದ ಸತ್ಸಂಗಕ್ಕೆ ಹೋದ ಮೇಲೆ ಏನಾಯಿತು ?’, ಎಂದು ಆಶ್ಚರ್ಯವೆನಿಸಿತು. ತುಂಬಾ ಜನರು ಮತ್ತು ಅಪ್ತರು ನನಗೆ ಇದರ ಬಗ್ಗೆ ಪ್ರಶ್ನೆಯನ್ನು ಕೇಳುತ್ತಿದ್ದರು. ಅವರಿಗೆ ನಾನು ಒಂದೇ ಉತ್ತರವನ್ನು ಕೊಡುತ್ತಿದ್ದೆ, “ಈಗ ನೀನು ಮಾಡಿರುವ ನನ್ನ ಆರಾಧನೆ ಮತ್ತು ನನಗೆ ಹಾಕಿದ ೧೦೮ ಪ್ರದಕ್ಷಿಣೆಗಳು ಸಾಕು. ನಿನಗೆ ನಾನು ಆಜೀವನ ಮಾರ್ಗದರ್ಶನಕ್ಕಾಗಿ ಮೋಕ್ಷಗುರುಗಳನ್ನು ಸನಾತನದ ರೂಪದಲ್ಲಿ ಜೋಡಿಸಿಕೊಟ್ಟಿದ್ದೇನೆ, ಎಂದು ಹೇಳಿ ಶ್ರೀ ಸ್ವಾಮಿಗಳೇ ನನಗೆ ಅಲ್ಲಿ (ಸನಾತನಕ್ಕೆ) ಕಳುಹಿಸಿದ್ದಾರೆ” ಎಂದು. ನವೆಂಬರ್ ೧೯೯೭ ರಲ್ಲಿ ಮೋಕ್ಷಗುರುಗಳು ನನ್ನ ಜೀವನದಲ್ಲಿ ಬಂದರು. ಅಂದಿನಿಂದ ಗುರುಕೃಪೆಯಿಂದ ನಾನು ಹಿಂದೆ ಹೆಜ್ಜೆ ಹಾಕಿಲ್ಲ. ಆಗ ನಾನು ಯಾವಾಗ ಶನಿವಾರ ಬರುತ್ತದೆ ಮತ್ತು ನನಗೆ ಸತ್ಸಂಗ ಕೇಳಲು ಸಿಗುತ್ತದೆ ?, ಎಂದು ಚಾತಕ ಪಕ್ಷಿಯಂತೆ ದಾರಿ ಕಾಯುತ್ತಿದ್ದೆ. ಮೊದಲು ಅಧ್ಯಾತ್ಮದ ಕುರಿತು ಸ್ವಲ್ಪಮಟ್ಟಿಗೆ ಕೇಳಿದ್ದ ನನಗೆ ಅಮೃತವೇ ಸಿಕ್ಕಂತಾಯಿತು.

೭. ಸೇವೆಗೆ ಪ್ರಾರಂಭ

೭ ಅ. ಪರಾತ್ಪರ ಗುರು ಡಾ. ಆಠವಲೆಯವರ ಕರ್ನಾಟಕದ ಬಹಿರಂಗ ಸಭೆಗಳ ಸಮಯದಲ್ಲಿ ೧ ತಿಂಗಳು ರಜೆ ಪಡೆದು ಪ್ರಸಾರ ಸೇವೆಯನ್ನು ಮಾಡುವುದು : ನಾನು ಸತ್ಸಂಗಕ್ಕೆ ಹೋಗಲು ಪ್ರಾರಂಭಿಸಿ ೨ ತಿಂಗಳಾಗಿತ್ತು. ಆಗ ಕರ್ನಾಟಕದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಬಹಿರಂಗ ಸಭೆಗಳು ಪ್ರಾರಂಭವಾದವು. ಸಾಗರದಲ್ಲಿ ಒಂದು ಬಹಿರಂಗ ಸಭೆಯನ್ನು ನಡೆಸಬೇಕೆಂದು ನಿಶ್ಚಯಿಸಲಾಯಿತು. ಭಟ್ಕಳದ ಸಾಧಕರು (ಡಾ. ಸತೀಶ ಪ್ರಭು ಇವರು) ‘ಒಂದು ತಿಂಗಳು ಪ್ರಚಾರ ಮಾಡಬೇಕಾಗುವುದು, ಸಾಗರದಲ್ಲಿ ಸತ್ಸಂಗ ಪ್ರಾರಂಭವಾಗಿ ಕೇವಲ ೨ ತಿಂಗಳಾಗಿರುವುದರಿಂದ ನನ್ನೊಡನೆ ಒಂದು ತಿಂಗಳು ಪ್ರಚಾರಕ್ಕಾಗಿ ಯಾರು ಬರುವರು ?’, ಎಂದು ಕೇಳಿದ ಕೂಡಲೇ ನಾನು ‘೧ ತಿಂಗಳು ರಜೆ ತೆಗೆದುಕೊಳ್ಳುತ್ತೇನೆ’, ಎಂದು ಅವರಿಗೆ ಹೇಳಿದೆನು. ಈ ಬಹಿರಂಗ ಸಭೆಯಿಂದಲೇ ನನ್ನ ಆಧ್ಯಾತ್ಮಿಕ ಜೀವನದಲ್ಲಿ ದೊಡ್ಡ ಬದಲಾವಣೆ ಆಯಿತು. ನಮ್ಮ ಆಧ್ಯಾತ್ಮಿಕ ಗುರುಗಳಾದ ಶ್ರೀ ರಾಘವೇಂದ್ರ ಸ್ವಾಮಿ ಮತ್ತು ವರದಹಳ್ಳಿಯ ಶ್ರೀ ಶ್ರೀಧರಸ್ವಾಮಿ (ಸಮರ್ಥ ರಾಮದಾಸಸ್ವಾಮಿಯವರ ಶಿಷ್ಯ) ಇವರ ಮಠಕ್ಕೆ ಹೋಗಿ ಸಭೆಯು ಯಶಸ್ವಿ ರೀತಿಯಿಂದ ನಡೆಯಲು ಪ್ರಾರ್ಥನೆ ಮಾಡಿ ಪ್ರಚಾರವನ್ನು ಪ್ರಾರಂಭಿಸಿದೆವು. ಆ ಸಮಯದಲ್ಲಿ ಮನೆ ಮನೆಗೆ ಹೋಗಿ ಮಾಡಿದ ಪ್ರಚಾರದಿಂದ ೧ ತಿಂಗಳು ಸತತವಾಗಿ ನನಗೆ ಜ್ಯೇಷ್ಠ ಸಾಧಕರ ಸತ್ಸಂಗ ಲಭಿಸಿತು. ಇದರಿಂದ ನಾನು ಸಾಧನೆಯ ಕುರಿತು ಇನ್ನೂ ಪ್ರಭಾವಿತನಾದೆ. ವಿಶೇಷವೆಂದರೆ ಕರ್ನಾಟಕದಲ್ಲಿ ಆ ಸಮಯದಲ್ಲಿ ಆಗಿರುವ ಒಟ್ಟು ೧೭ ಬಹಿರಂಗ ಸಭೆಗಳ ತುಲನೆಯಲ್ಲಿ ಸಾಗರದ ಬಹಿರಂಗ ಸಭೆಗೆ ಎಲ್ಲಕ್ಕಿಂತ ಹೆಚ್ಚು ಉಪಸ್ಥಿತಿ ಇರುವುದು, ನಮ್ಮ ಮೇಲೆ ಆಗಿರುವ ಗುರುಕೃಪೆಯೇ.

೭ ಆ. ಗ್ರಂಥಗಳ ಪ್ರದರ್ಶನ, ಪ್ರವಚನ ಮತ್ತು ಸತ್ಸಂಗಗಳನ್ನು ತೆಗೆದುಕೊಳ್ಳುವುದು, ಹೀಗೆ ಸೇವೆಯನ್ನು ಮಾಡಿದ ನಂತರ ಕೇಂದ್ರ ಮತ್ತು ಜಿಲ್ಲೆಯ ಮಟ್ಟದಲ್ಲಿ ಸೇವೆಯ ಜವಾಬ್ದಾರಿ ಸಿಗುವುದು : ನಾನು ಗ್ರಂಥಪ್ರದರ್ಶನ ಹಾಕಲು ಮತ್ತು ಪ್ರವಚನಗಳನ್ನು ತೆಗೆದುಕೊಳ್ಳಲು ಪ್ರತಿವಾರ ಹೋಗುತ್ತಿದ್ದೆನು. ನಂತರ ನನಗೆ ಸಾಗರದೊಂದಿಗೆ ಇನ್ನು ೨-೩ ಸ್ಥಳಗಳಲ್ಲಿ ಸತ್ಸಂಗಗಳನ್ನು ತೆಗೆದುಕೊಳ್ಳಲು ಹೇಳಿದರು. ನಂತರ ಕೆಲವು ತಿಂಗಳುಗಳಲ್ಲಿಯೇ ನನಗೆ ಕೇಂದ್ರ ಮತ್ತು ಜಿಲ್ಲೆಯ ಮಟ್ಟದಲ್ಲಿನ ಜವಾಬ್ದಾರಿ ಕೊಡಲಾಯಿತು. ಗುರುಕೃಪೆಯಿಂದ ನನ್ನಿಂದ ಸೇವೆ ಒಳ್ಳೆಯ ರೀತಿಯಿಂದ ಆಗುತ್ತಿತ್ತು. ನನಗೆ ಸೇವೆ ಮತ್ತು ಸಾಧನೆಯಲ್ಲಿ ಆನಂದ ಸಿಗುತ್ತಿತ್ತು. ನಾನು ಪ್ರತಿವಾರ ಸೈಕಲ್‌ನಿಂದ ಮನೆಮನೆಗೆ ಹೋಗಿ ಸಾಪ್ತಾಹಿಕ ಸನಾತನ ಪ್ರಭಾತವನ್ನು ವಿತರಿಸುತ್ತಿದ್ದೆನು. ನಾನು ಶನಿವಾರ ಮಧ್ಯಾಹ್ನ ಬ್ಯಾಂಕಿನ ಸೇವೆ ಮುಗಿದ ಕೂಡಲೇ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಶಿರಾಳಕೊಪ್ಪ, ನ್ಯಾಮತಿ ಈ ಊರುಗಳಿಗೆ ಭೇಟಿ ನೀಡಿ ರವಿವಾರ ತಡರಾತ್ರಿ ಮನೆಗೆ ಬರುತ್ತಿದ್ದೆನು. ಹೀಗೆ ನಾನು ಕೆಲವು
ವರ್ಷಗಳ ಕಾಲ ಮಾಡಿದೆನು. ಎಲ್ಲ ಕಡೆಗೆ ಸಾಧಕರ ಸಂಖ್ಯೆಯಲ್ಲಿ ವೃದ್ಧಿಯಾಯಿತು. ಅವರ ಸಹವಾಸದಲ್ಲಿ ನನಗೆ ಆನಂದ ಸಿಗುತ್ತಿತ್ತು.

೭ ಇ. ಸೇವೆಯಿಂದ ನಿವೃತ್ತಿ ಪಡೆದ ಮೇಲೆ ‘ದಕ್ಷಿಣ ಭಾರತದ ಸಮನ್ವಯಕ’ನ ಜವಾಬ್ದಾರಿ ಸಿಗುವುದು : ೨೦೦೨ ರಲ್ಲಿ ನಾನು ಬ್ಯಾಂಕಿನಿಂದ ನಿವೃತ್ತನಾದ ನಂತರ ನನಗೆ ‘ದಕ್ಷಿಣ ಭಾರತದ ಸಮನ್ವಯದ ಜವಾಬ್ದಾರಿ’ಯನ್ನು ಕೊಡಲಾಯಿತು. ಗುರುಗಳ ಕೃಪೆಯಿಂದ ನನಗೆ ದಕ್ಷಿಣ ಭಾರತದಲ್ಲಿನ ವಿವಿಧ ರಾಜ್ಯಗಳಲ್ಲಿ ಸೇವೆಯನ್ನು ಮಾಡುವ ಅವಕಾಶ ಸಿಕ್ಕಿತು. ಅಲ್ಲಿನ ಅನೇಕ ಸಾಧಕರೊಡನೆ ನನ್ನ ಪರಿಚಯವಾಯಿತು.

೭ ಈ. ಮೂಲ್ಕಿ ಸೇವಾಕೇಂದ್ರದಲ್ಲಿ ಇರಲು ಬಂದ ಮೇಲೆ ಸೇವಾಕೇಂದ್ರದಲ್ಲಿನ ಸೇವೆಯನ್ನು ನೋಡುವುದು ಮತ್ತು ಸಾಧಕರ ಸಹವಾಸದಲ್ಲಿದ್ದು ಅವರೊಂದಿಗೆ ಹೇಗೆ ಹೊಂದಿಕೊಳ್ಳಬೇಕು ?’, ಎಂಬುದು ಕಲಿಯಲು ಸಿಗುವುದು : ನಾನು ಸೇವೆಗಾಗಿ ಬೇರೆಬೇರೆ ಊರುಗಳಿಗೆ ಹೋಗುತ್ತಿರುವಾಗ ನನ್ನ ಪತ್ನಿ ಒಬ್ಬಳೇ ಮನೆಯಲ್ಲಿ ಇರುತ್ತಿದ್ದಳು. ನನಗೆ ಅವಳ ಕಡೆಗೆ ಸರಿಯಾಗಿ ಗಮನ ಕೊಡಲು ಆಗುತ್ತಿರಲಿಲ್ಲ. ನಂತರ ಹಿರಿಯ ಸಾಧಕರು ನನಗೆ ಮತ್ತು ಪತ್ನಿಗೆ ಮೂಲ್ಕಿ ಸೇವಾಕೇಂದ್ರದಲ್ಲಿರಲು ಹೇಳಿದರು. ನನಗೆ ಸೇವಾಕೇಂದ್ರದಲ್ಲಿನ ಮತ್ತು ಇತರ ಸೇವೆಗಳ ಜವಾಬ್ದಾರಿಯನ್ನು ಕೊಡಲಾಯಿತು. ಇದೆಲ್ಲ ನನಗೆ ಹೊಸದಾಗಿತ್ತು. ಸೇವಾಕೇಂದ್ರದಲ್ಲಿ ೪೦ – ೫೦ ಜನ ಸಾಧಕರು ಇರುತ್ತಿದ್ದರು. ಸಾಪ್ತಾಹಿಕ ಸನಾತನ ಪ್ರಭಾತ ಮತ್ತು ಸಾತ್ತ್ವಿಕ ಊದುಬತ್ತಿ ಇವುಗಳಿಗೆ ಸಂಬಂಧಿಸಿದ ಸೇವೆಯು ಇಲ್ಲಿ ನಡೆಯುತ್ತಿತ್ತು. ಗುರುದೇವರೇ ನನಗೆ ಇಲ್ಲಿ ‘ಸಾಧಕರ ಸಹವಾಸದಲ್ಲಿದ್ದು ಅವರೊಂದಿಗೆ ಹೇಗೆ ಹೊಂದಿಕೊಳ್ಳಬೇಕು ?’, ಎಂಬುದನ್ನೂ ಕಲಿಸಿದರು.

೭ ಉ. ಆಧ್ಯಾತ್ಮಿಕ ಮಟ್ಟ ಶೇ. ೬೦ ರಷ್ಟು ಆಗುವುದು ಮತ್ತು ಮಂಗಳೂರು ಸೇವಾಕೇಂದ್ರದಲ್ಲಿ ಸನಾತನ ಪ್ರಭಾತ ಮತ್ತು ಕನ್ನಡ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳ ಸನಾತನ ಪಂಚಾಂಗದ ಜಾಹೀರಾತು ಸೇವೆಯನ್ನು ಮಾಡುವುದು : ಗುರುಗಳ ಕೃಪೆಯಿಂದ ನನ್ನ ಆಧ್ಯಾತ್ಮಿಕ ಮಟ್ಟ ಶೇ. ೬೦ ರಷ್ಟು ಆಯಿತು. ನಂತರ ಅನುಕೂಲತೆಯ ದೃಷ್ಟಿಯಿಂದ ಮುಲ್ಕಿ ಸೇವಾಕೇಂದ್ರವು ಮಂಗಳೂರಿಗೆ ಸ್ಥಳಾಂತರವಾಯಿತು. ಅಲ್ಲಿ ನನಗೆ ಇತರ ಸೇವೆಗಳ ಜವಾಬ್ದಾರಿಯ ಜೊತೆಗೆ ಸನಾತನ ಪ್ರಭಾತ ಮತ್ತು ಕನ್ನಡ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳ ಸನಾತನ ಪಂಚಾಂಗದ ಜಾಹೀರಾತು ಸೇವೆಯು ಗುರುಗಳ ಕೃಪೆಯಿಂದ ದೊರಕಿತು. ಮೂಲ್ಕಿ, ಹಾಗೆಯೇ ಮಂಗಳೂರು ಸೇವಾಕೇಂದ್ರದಲ್ಲಿ ಮೇಲಿನ ಸೇವೆಗಳನ್ನು ೬ ವರ್ಷಗಳ ವರೆಗೆ ಮಾಡಿದೆನು. ನನಗೆ ಸೇವೆಯಲ್ಲಿ ಆನಂದವೂ ಸಿಗುತ್ತಿತ್ತು.

೮. ಪತ್ನಿಯ ಮೃತ್ಯು

೧೨.೧.೨೦೧೪ ರಂದು ಮಂಗಳೂರು ಸೇವಾಕೇಂದ್ರದಲ್ಲಿ ನನ್ನ ಪತ್ನಿ ಸೌ. ಉಷಾ ಶೆಣೈ ಇವಳ ಮೃತ್ಯುವಾಯಿತು. ಆಗ ಅವಳು ಗುರುಗಳ ಕೃಪೆಯಿಂದ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ್ದಳು. ಅನಂತರ ನನಗೆ ದೇವದ ಆಶ್ರಮದಲ್ಲಿ ಸೇವೆಯನ್ನು ಮಾಡುವ ಭಾಗ್ಯ ಪ್ರಾಪ್ತವಾಯಿತು.

೯. ಪರಾತ್ಪರ ಗುರು ಡಾ. ಆಠವಲೆಯವರ ಅನುಭವಿಸಿದ ಕೃಪೆ ಮತ್ತು ಅದರಿಂದ ಬಂದಿರುವ ಅನುಭೂತಿಗಳು

೯ ಅ. ‘ಅನೇಕ ವರ್ಷಗಳಿಂದ ಮನೆಯ ಕುಟುಂಬ ಪ್ರಮುಖನಾಗಿದ್ದರೂ, ಮಾಯೆಯನ್ನು ತ್ಯಜಿಸಿ ಪೂರ್ಣ ವೇಳೆ ಸಾಧನೆಯನ್ನು ಮಾಡುವುದು, ಇದುವೇ ನನ್ನ ಎಲ್ಲಕ್ಕಿಂತ ದೊಡ್ಡ ಗುರುಕೃಪೆಯಾಗಿದೆ ! : ‘ನಾನು ಸಂಪೂರ್ಣ ಮಾಯೆಯಲ್ಲಿ ಸಿಲುಕಿಕೊಂಡಿದ್ದಾಗ ಅದನ್ನು ತ್ಯಜಿಸಿ ಪೂರ್ಣವೇಳೆ ಸಾಧನೆಯಲ್ಲಿ ಬರುವುದು’, ಇದುವೇ ನನ್ನ ಮೇಲಿನ ಎಲ್ಲಕ್ಕಿಂತ ದೊಡ್ಡ ಗುರುಕೃಪೆಯಾಗಿದೆ. ಅನೇಕ ವರ್ಷಗಳ ವರೆಗೆ ಮನೆಯ, ಕುಟುಂಬದ ಮುಖ್ಯಸ್ಥನಾಗಿದ್ದರೂ ನನಗೆ ಗುರುದೇವರ ಕೃಪೆಯಿಂದ ಮಾಯೆಯಿಂದ ಹೊರಗೆ ಬರಲು ಸಾಧ್ಯವಾಯಿತು. ನನಗೆ ಇಂದಿಗೂ ಅದರ ಬಗ್ಗೆ ಆಶ್ಚರ್ಯವೆನಿಸುತ್ತದೆ. ‘ನಾನು ಹೇಗೆ ಹೊರಗೆ ಬಂದೆ ? ನನ್ನ ಪ್ರಾಣಪ್ರಿಯ ಅವಳಿ ಸಹೋದರ ! ಅವನನ್ನು ಬಿಟ್ಟು ನಾನು ಸಾಧನೆಗೆ ಹೇಗೆ ಬಂದೆ ?’, ಇದು ಇಂದಿಗೂ ನನಗೆ ಎಲ್ಲಕ್ಕಿಂತ ದೊಡ್ಡ ಪ್ರಶ್ನೆಯಾಗಿದೆ. ಇದು ಕೇವಲ ನನಗಾಗಿ ಮಾತ್ರವಲ್ಲ ನನ್ನ ಪರಿಚಿತ ಮತ್ತು ಅಪ್ತರಿಗೂ ಆಶ್ಚರ್ಯದ ವಿಷಯವಾಗಿದೆ. ನನ್ನ ಜೀವನಶೈಲಿಯಲ್ಲಿ ಪರಿವರ್ತನೆಯಾಯಿತು. ನನ್ನ ಆಹಾರ, ಉಡುಗೆ-ತೊಡುಗೆ ಮತ್ತು ಆಚಾರ-ವಿಚಾರ ಇವುಗಳಲ್ಲಿ ಆಮೂಲಾಗ್ರ ಪರಿವರ್ತನೆಯಾಯಿತು. ‘ವ್ಯಕ್ತಿಗಳಷ್ಟು ಪ್ರಕೃತಿಗಳು ಮತ್ತು ಅಷ್ಟೇ ಸಾಧನಾಮಾರ್ಗಗಳು’, ಎಂಬ ತತ್ತ್ವವು ಮನಸ್ಸಿನಲ್ಲಿ ದೃಢವಾಗಿ ನನ್ನಿಂದ ಪ್ರಯತ್ನವಾಗತೊಡಗಿತು.

೯ ಆ. ಶರಣಾಗತಭಾವದಲ್ಲಿದ್ದು ಸೇವೆಯನ್ನು ಭಾವಪೂರ್ಣ ಮತ್ತು ಪರಿಪೂರ್ಣವಾಗಿ ಮಾಡಲು ಪ್ರಯತ್ನಿಸಿದಾಗ ಆನಂದದ ಅನುಭೂತಿ ಬರುವುದು : ಶ್ರೀ ಗುರುದೇವರ ಕೃಪೆಯಿಂದ ಯಾವುದೇ ಸೇವೆಯನ್ನು ಕೊಟ್ಟರೂ ಅಥವಾ ಎಷ್ಟೇ ಸೇವೆ ಇದ್ದರೂ ಅದು ಪರಿಪೂರ್ಣ, ಭಾವಪೂರ್ಣ ಮತ್ತು ತಪ್ಪುರಹಿತವಾಗಬೇಕು ಎಂದು ನನ್ನ ಪ್ರಯತ್ನವಾಗುತ್ತಿದೆ. ‘ಎಲ್ಲ ಸೇವೆಗಳನ್ನು ಕೊಡುವವರು, ಮಾಡುವವರು ಮತ್ತು ಮಾಡಿಸಿಕೊಳ್ಳುವವರು ಗುರುದೇವರೇ ಆಗಿದ್ದಾರೆ, ಎಂಬ ಅನುಭೂತಿ ಬಂದು ನನಗೆ ನನ್ನ ಅಸ್ತಿತ್ವ ನಾಶವಾಗುತ್ತಿರುವುದರ ಅನುಭೂತಿ ಬರುತ್ತಿದೆ. ಸೇವೆ ಮತ್ತು ಸಾಧನೆ ಇವುಗಳ ಬಗ್ಗೆ ಅವರ ಚರಣಗಳಲ್ಲಿ ಶರಣಾಗತ ಭಾವ ಹೆಚ್ಚಿಸಿದರೆ ನನಗೆ ಆನಂದದ ಅನುಭೂತಿ ಬರುತ್ತದೆ.

೯ ಇ. ದೇವದ ಆಶ್ರಮದಲ್ಲಿ ಲಭಿಸಿದ ಸಂತರ ಮಾರ್ಗದರ್ಶನ ಮತ್ತು ಸದ್ಗುರು ರಾಜೇಂದ್ರ ಶಿಂದೆಯವರ ಸತ್ಸಂಗ, ಇವುಗಳಿಂದ ಸ್ವಭಾವದೋಷ ಕಡಿಮೆಯಾಗಿ ಸಾಧನೆಗೆ ದಿಶೆ ಸಿಗುವುದು : ನನ್ನಲ್ಲಿನ ಮರೆಯುವಿಕೆ, ಭಾವನಾಶೀಲತೆ, ತಾರತಮ್ಯದ ಅಭಾವ, ತತ್ಪರತೆಯ ಕೊರತೆ, ಗಮನಕೊಟ್ಟು ಕೃತಿ ಮಾಡದಿರುವುದು, ಮನಸ್ಸಿನ ಅಧ್ಯಯನ ಮಾಡದಿರುವುದು, ಅನಾವಶ್ಯಕ ವಿಚಾರ ಮಾಡುವುದು, ಜಾಗರೂಕತೆಯ ಅಭಾವ, ಕೃತಿಯ ಸಂದರ್ಭದಲ್ಲಿ ಬುದ್ಧಿಯ ಉಪಯೋಗ ಮಾಡದಿರುವುದು ಇತ್ಯಾದಿ ಸ್ವಭಾವದೊಷಗಳು ಗುರುಗಳ ಕೃಪೆಯಿಂದಲೇ ತುಂಬಾ ಕಡಿಮೆಯಾಗಿವೆ. ದೇವದ ಆಶ್ರಮದಲ್ಲಿ ಲಭಿಸಿರುವ ಸಂತರ ಮಾರ್ಗದರ್ಶನ ಮತ್ತು ಸದ್ಗುರು ರಾಜೇಂದ್ರ ಶಿಂದೆ ಇವರ ಸತ್ಸಂಗದಿಂದ ನನ್ನ ಸಾಧನೆಗೆ ದಿಶೆ ಸಿಗುತ್ತಿದೆ.

೯ ಈ. ‘ಪ್ರೇಮಭಾವ ಮತ್ತು ನಮ್ರತೆಯಿಂದ ಎಲ್ಲರೂ ನಮ್ಮವರಾಗುತ್ತಾರೆ’, ಎಂಬ ಗುರುದೇವರ ಬೋಧನೆಯನ್ನು ಆಚರಣೆಯಲ್ಲಿ ತಂದಿರುವುದರಿಂದ ಪ್ರೇಮಭಾವದಲ್ಲಿ ಗುಣಾತ್ಮಕ ಹೆಚ್ಚಳವಾಗುವುದು : ಎಲ್ಲರಲ್ಲಿ ಪ್ರೇಮಭಾವ ಇರುವುದರಿಂದ ನನ್ನ ಪ್ರೇಮಭಾವದಲ್ಲಿಯೂ ಗುಣಾತ್ಮಕ ಹೆಚ್ಚಳವಾಗಿರುವುದರ ಅರಿವು ಶ್ರೀ ಗುರುಗಳ ಕೃಪೆಯಿಂದಲೇ ಆಯಿತು. ‘ಪ್ರೇಮಭಾವ ಮತ್ತು ನಮ್ರತೆ ಇವುಗಳಿಂದ ಎಲ್ಲರೂ ನಮ್ಮವರಾಗುತ್ತಾರೆ’, ಎಂದು ಗುರುದೇವರೇ ಕಲಿಸುತ್ತಿದ್ದಾರೆ. ಪ್ರತಿಕ್ರಿಯೆ, ನಕಾರಾತ್ಮಕ ವಿಚಾರಗಳು ಮತ್ತು ಕ್ರೋಧ ಇತ್ಯಾದಿ ಸ್ವಭಾವದೋಷಗಳನ್ನು ಗುರುದೇವರೇ ಕಡಿಮೆ ಮಾಡಿದ್ದಾರೆ.

೯ ಉ. ‘ಪರಾತ್ಪರ ಗುರು ಡಾ. ಆಠವಲೆಯವರು ಸೂಕ್ಷ್ಮದಿಂದ ಸಾಧನೆಯ ಮುಂದಿನ ಹಂತದ ಮಾರ್ಗದರ್ಶನ ಮಾಡುತ್ತಿದ್ದಾರೆ, ಎಂದು ಅರಿವಾಗುವುದು : ‘ಪರಾತ್ಪರ ಗುರು ಡಾ.ಆಠವಲೆಯವರು ಸೂಕ್ಷ್ಮದಿಂದ ನನಗೆ ಎಲ್ಲವನ್ನು ಕಲಿಸುತ್ತಿದ್ದಾರೆ. ‘ಸಾಧನೆಯ ಒಂದು ಹಂತವನ್ನು ತಲುಪಿದ ನಂತರ ಮುಂದಿನ ಹಂತಕ್ಕೆ ಹೇಗೆ ಹೋಗಬೇಕು ?’, ಎಂಬುದು ತಿಳಿಯದಿದ್ದಾಗ, ಅವರು ನನಗೆ ವಿಚಾರಗಳನ್ನು ಕೊಟ್ಟು ಮುಂದಿನ ಸಾಧನೆಯನ್ನು ಹೇಳುತ್ತಾರೆ’, ಇದು ನನಗೆ ಅರಿವಾಗುತ್ತದೆ. ಇದೆಲ್ಲ ನನ್ನ ಸಾಮರ್ಥ್ಯದ ಆಚೆಗಿನದ್ದಾಗಿದೆ. ‘ನಾನು ಸೂಕ್ಷ್ಮದಲ್ಲಿ ಎಲ್ಲ ಕಡೆಯಲ್ಲಿ ಮತ್ತು ಎಲ್ಲರಲ್ಲಿಯೂ ಇರುತ್ತೇನೆ’, ಎಂಬ ಅನುಭೂತಿ ಗುರುದೇವರೇ ಕೊಡುತ್ತಿದ್ದಾರೆ. ‘ಶರಣಾಗತಭಾವದಲ್ಲಿದ್ದರೆ, ಎಲ್ಲವನ್ನೂ ಗುರುದೇವರೇ ಮಾಡುತ್ತಿದ್ದಾರೆ’, ಎಂಬುದರ ಅರಿವು ನನಗೆ ಆಗುತ್ತದೆ. ಸಂತರು ಅಥವಾ ಸದ್ಗುರು ರಾಜೇಂದ್ರದಾದಾರವರು ಸಾಧನೆಯ ಪ್ರವಾಸದಲ್ಲಿ ಮುಂದಿನ ಹಂತದ ಕುರಿತು ಹೇಳಿದ ಮೇಲೆ ಗುರುದೇವರೇ ಅವರ ಮಾಧ್ಯಮದಿಂದ ನನಗೆ ಮುಂದಿನ ಹಂತದ ಮಾರ್ಗದರ್ಶನ ನೀಡುತ್ತಿದ್ದಾರೆ’, ಎಂಬುದು ನನ್ನ ಗಮನಕ್ಕೆ ಬರುತ್ತದೆ. ‘ದೈನಿಕ ಸನಾತನ ಪ್ರಭಾತ’ದಲ್ಲಿ ಬರುವ ಪ್ರತಿಯೊಂದು ಮಾರ್ಗದರ್ಶನಕ ಅಂಶಗಳ ಪಾಲನೆ ಮಾಡುವ ಪ್ರಯತ್ನವಾಗುವುದು’, ಇದು ಗುರುಕೃಪೆ ಅಲ್ಲದೇ ಇನ್ನೇನು ?

೧೦. ಪರಾತ್ಪರ ಗುರು ಡಾ. ಆಠವಲೆಯವರ ಸಂಕಲ್ಪ ಮತ್ತು ಆಶೀರ್ವಾದದಿಂದಲೇ ಲೇಖನಗಳನ್ನು ಬರೆಯಲು ಸಾಧ್ಯವಾಗಿರುವುದರಿಂದ ಅವರಿಗೆ ವ್ಯಕ್ತಪಡಿಸಿದ ಕೃತಜ್ಞತೆಗಳು !

ನನಗೆ ಈ ಅನುಭೂತಿಗಳು ಬಂದಿರುವುದರಿಂದ ನಾನು ಸಂತಪದವಿಯ ವರೆಗೆ ತಲುಪಿದೆ. ಪ್ರತಿಯೊಬ್ಬ ಸಂತರ ವೈಶಿಷ್ಟ್ಯಗಳನ್ನು ಹೇಳುವಾಗ ಗುರುದೇವರು ನನ್ನ ಬಗ್ಗೆ ‘ಇವರು ಸಣ್ಣ ಸಣ್ಣ ವಿಷಯಗಳನ್ನು ತೆಗೆದುಕೊಂಡು ಸವಿಸ್ತಾರವಾಗಿ ಬರೆಯುತ್ತಾರೆ, ಎಂದು ಹೇಳಿದ್ದರು. ಇಂದು ಅವರ ಸಂಕಲ್ಪ ಮತ್ತು ಆಶೀರ್ವಾದದಿಂದ ಇದು ಸಾಧ್ಯವಾಗುತ್ತಿದೆ. ನನಗೆ ಅವರ ಸಂಕಲ್ಪ ಮತ್ತು ಆಶಿರ್ವಾದದಿಂದಲೇ ಇದನ್ನು ಬರೆಯಲು ಸಾಧ್ಯವಾಯಿತು. ಈ ಲೇಖನವನ್ನು ಶ್ರೀ ಗುರುಚರಣಗಳಲ್ಲಿ ಅರ್ಪಣೆ ಮಾಡುತ್ತೇನೆ.

| ಗುರುಚರಣಾರ್ಪಣಮಸ್ತು |
– (ಪೂ.) ಕೆ. ಉಮೇಶ ಶೆಣೈ, ಸನಾತನ ಆಶ್ರಮ, ದೇವದ, ಪನವೇಲ. (೫.೭.೨೦೧೮)

Leave a Comment