ಕುಂಭದರ್ಶನ : ಕುಂಭಕ್ಷೇತ್ರದ ಪಾವಿತ್ರತೆ ನಾಶವಾಗುತ್ತಿರುವ ಭಯಾನಕ ವಾಸ್ತವಿಕತೆ !

ಶ್ರೀ. ಚೇತನ ರಾಜಹಂಸ

ಕುಂಭಕ್ಷೇತ್ರದ ಪಾವಿತ್ರತೆ ನಾಶವಾಗುತ್ತಿರುವ ಭಯಾನಕ ವಾಸ್ತವಿಕತೆ !

ಪ್ರಯಾಗರಾಜದಲ್ಲಿ ನಡೆದ ಕುಂಭಮೇಳದಲ್ಲಿಯ ಸಾಮಾಜಿಕ ಪಿಡುಗು, ಸರಕಾರಿ ಪ್ರವೃತ್ತಿ ಮತ್ತು ಸಾಧಕವೃತ್ತಿ !

ಪ್ರಯಾಗರಾಜದ ಕುಂಭಮೇಳವು ಎಲ್ಲ ರೀತಿಯ ಒಳ್ಳೆಯ-ಕೆಟ್ಟ ಅನುಭವದ ಆಗಿತ್ತು. ಹೆಚ್ಚು ಕಡಿಮೆ ೬೦ ದಿನದ ಕಾಲಾವಧಿಯಲ್ಲಿ ಏನೆಲ್ಲ ಅನುಭವಕ್ಕೆ ಬಂದವೋ, ಅದರೆಲ್ಲದರ ಲೇಖನ ಮಾಡುವುದು ಅಸಾಧ್ಯವಿತ್ತು. ಹಾಗಾಗಿ ಕೆಲವು ಆಯ್ದ ಅನುಭವವನ್ನು ಬರೆಯುತ್ತಿದ್ದೇನೆ.

ದೇವತೆಗಳ ವೇಷವನ್ನು ಹಾಕಿಕೊಂಡು ಅವರ ಅವಮಾನವನ್ನು    ಮಾಡುವ ವೇಷಧಾರಿಗಳು !

ಕುಂಭಮೇಳದಲ್ಲಿ ಅಲ್ಲಲ್ಲಿ ದೇವತೆಗಳ ವೇಷ ಹಾಗೂ ಬಣ್ಣಗಳನ್ನು ಹಚ್ಚಿಕೊಂಡಿರುವ ವೇಷಧಾರಿಗಳು ಕಾಣಿಸುತ್ತಿದ್ದರು. ಭಗವಾನ ಶಿವ, ಪ್ರಭು ಶ್ರೀರಾಮ, ಹನುಮಾನ, ಶ್ರೀ ದುರ್ಗಾ ಇತ್ಯಾದಿ ದೇವತೆಗಳ ವೇಷವನ್ನು ತೊಟ್ಟಿರುವ ವ್ಯಕ್ತಿಗಳು ಧರ್ಮದ ಬಗ್ಗೆ ಅಜ್ಞಾನವಿರುವ ಹಿಂದೂಗಳನ್ನು ಆಕರ್ಷಿಸುತ್ತಿದ್ದರು. ಸಮವಿಚಾರಿ ಸಂತರನ್ನು ಭೇಟಿಯಾಗಲು ಅವರ ಪೆಂಡಾಲಿಗೆ ಹೋಗುವಾಗ ಹಲವಾರು ಬಾರಿ ಈ ರೀತಿಯ ವೇಷಧಾರಿಗಳು ಸಂತರಿಂದ ಹಣವನ್ನು ತೆಗೆದುಕೊಳ್ಳುವುದು ಕಾಣಿಸಿತು. ಸಂತರಿಗೆ ಅವರ ಬಗ್ಗೆ ಕುತುಹಲವೂ ಇತ್ತು. ಆದ್ದರಿಂದ ಅವರು ಧಾರಾಳವಾಗಿ ಅವರಿಗೆ ದಕ್ಷಿಣೆಯನ್ನು ಕೊಡುತ್ತಿದ್ದರು. ಕೆಲವು ಸಂನ್ಯಾಸಿಗಳು ಈ ರೀತಿಯ ವೇಷಧಾರಿಗಳ ಜೊತೆ ನಮ್ಮ ಫೋಟೊವನ್ನು ತೆಗೆಸಿಕೊಳ್ಳುತ್ತಿದ್ದರು. ಧರ್ಮಕ್ಷೇತ್ರದಲ್ಲಿಯ ವ್ಯಕ್ತಿಗಳಿಂದಲೇ ದೇವತೆಗಳ ಅವಮಾನಗಳಿಗೆ ಪ್ರೋತ್ಸಾಹವನ್ನು ನೀಡುತ್ತಿರುವುದನ್ನು ನೋಡಿ ಬೇಸರ ಆಯಿತು. ನಾವು ಮಾತ್ರ ಪ್ರತಿಯೊಂದು ಸ್ಥಳಗಳಲ್ಲಿ ಇಂತಹ ವೇಷಧಾರಿಗಳಿಗೆ ಎಲ್ಲರ ಎದುರೇ ತರಾಟೆಗೆ ತೆಗೆದುಕೊಂಡ ನಂತರ ಅವರಿಗೆ ಆಶ್ರಮದಲ್ಲಿಯ ಕೆಲವು ಭಕ್ತರು ಅಥವಾ ಸಂತರು ಅವರನ್ನು ಹೊರಹಾಕುತ್ತಿದ್ದರು. ಒಂದು ಹಿಂದುತ್ವನಿಷ್ಠ ಸಂಘಟನೆಯ ಧರ್ಮಸಂಸತ್ತಿನಲ್ಲಿ ಓರ್ವ ಹನುಮಂತನ ವೇಷವನ್ನು ಹಾಕಿಕೊಂಡು ಬಂದಿದ್ದನು. ಅಲ್ಲಿನ ಕಾರ್ಯಕರ್ತರು ಅವರೊಂದಿಗೆ ‘ಸೇಲ್ಫೀ’ ತೆಗೆಯುವುದರಲ್ಲಿ ತಲ್ಲಿನರಾಗಿದ್ದರು. ನಾವು ಧರ್ಮಸಂಸತ್ತಿನಲ್ಲಿ ಭಾಗವಹಿಸಿದ ಸಂತರನ್ನು ಸನಾತನದ ಶಿಬಿರದಲ್ಲಿ ಕರೆದುಕೊಂಡು ಹೊಗಲೆಂದು ಪ್ರವೇಶದ್ವಾರದ ಬಳಿ ಬಂದಾಗ, ನಾವು ಆ ವೇಷಧಾರಿಗೆ, “ಹಿಂದೂಗಳ ದೇವರು ಭಿಕ್ಷೆಯನ್ನು ಬೇಡುವುದಿಲ್ಲ, ನೀವು ನಮ್ಮ ದೇವರ ಅವಮಾನವನ್ನು ಮಾಡುತ್ತಿದ್ದೀರಿ! ಈ ವೇಷವನ್ನು ತೆಗೆಯಿರಿ ಇಲ್ಲವಾದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸಿದಕ್ಕಾಗಿ ಪೊಲೀಸರಿಗೆ ಒಪ್ಪಿಸುತ್ತೇನೆ!”, ಹೇಳಿದೆವು. ಹಣವನ್ನು ತೆಗೆದುಕೊಳ್ಳುತ್ತಿರುವ ಆ ವೇಷಧಾರಿ ಸ್ತಬ್ಧನಾದ. ಕೊನೆಗೆ ಇತರ ಕಾರ್ಯಕರ್ತರು ಆ ವೇಷಧಾರಿಯನ್ನು ಅಲ್ಲಿಂದ ಹೊರಗಟ್ಟಿದರು. ಇಂತಹ ಪ್ರಸಂಗದಲ್ಲಿ ಸನಾತನದ ಸಾಧಕ ‘ದೇವತೆಗಳ ಅವಮಾನವಾಗುತ್ತಿದೆ’, ಎಂಬ ವಿಚಾರವನ್ನು ಮಾಡಿ ವೇಷಧಾರಿಯ ಛಾಯಾಚಿತ್ರವನ್ನು ತೆಗೆದು ವಾರ್ತೆಗಾಗಿ ಕೊಡುತ್ತಿದ್ದರು. ಇದು ಹಂತದಲ್ಲಿ ಸರಿ ಇದ್ದರೂ, ಎದುರಿನ ವೇಷಧಾರಿಯ ವೇಷವನ್ನು ತೆಗೆಸುವ, ಅವರೊಂದಿಗೆ ಚರ್ಚಿಸುವ ಮತ್ತು ಇತರರಿಗೆ ಪ್ರಬೋಧನೆಯನ್ನು ಮಾಡುವಲ್ಲಿ ಅವರು ಕಡಿಮೆ ಬೀಳುತ್ತಿದ್ದರು. ಕೆಲವು ಸಮಯದಲ್ಲಿ ಸಾಧಕರಿಗೆ ಅದು ಅಭ್ಯಾಸವಾಗಿದೆ. ಸಾಧಕರು ಧರ್ಮರಕ್ಷಣೆಗಾಗಿ ಮುಂದಿನ ಹಂತದ ಸಿದ್ಧತೆಯನ್ನು ಮಾಡುತ್ತಿದ್ದರು, ಇದು ಅವರಲ್ಲಿಯ ಸಾಧಕವೃತ್ತಿಯಾಗಿತ್ತು.

೨. ಕೈಯಲ್ಲಿ ಕಮಂಡಲವನ್ನು ಹಿಡಿದು ಭಕ್ತರನ್ನು ಲೂಟಿ ಮಾಡುವ ಬಾಲ ‘ಸಂನ್ಯಾಸಿ’ ಮತ್ತು ಸಾಧುಗಳ ತಂಡ !

ಕುಂಭಮೇಳದಲ್ಲಿ ಅನೇಕ ಸ್ಥಳಗಳಲ್ಲಿ ವಿಶಿಷ್ಟ ಕೇಸರೀ ವಸ್ತ್ರವನ್ನು ಹಾಕಿದ ಕೆಲವು ಸಣ್ಣ ಮಕ್ಕಳು ಅಥವಾ ಸಾಧುಗಳು ಅಲ್ಲಲ್ಲಿ ಭಕ್ತರನ್ನು ಲೂಟಿ ಮಾಡುವುದು ಗಮನಕ್ಕೆ ಬಂದಿತು. ಈ ತಂಡವು ಭಕ್ತರನ್ನು ಅಡ್ಡಗಟ್ಟಿ ಅವರಿಂದ ಚಹಾ, ಚಪ್ಪಲಿ, ಹಣ, ಊಟ ಇತ್ಯಾದಿಗಳನ್ನು ಕೇಳುತ್ತಿದ್ದರು. ಅವರೆಲ್ಲರೂ ಒಂದೇ ಸಮನೆ ಬೆನ್ನು ಹತ್ತುತ್ತಿದ್ದರು. ರಸ್ತೆಯಲ್ಲಿ ಹೋಗುವ ಭಕ್ತರು ಅಸಹಾಯಕವಾಗಿ ಅವರಿಗೆ ಹಣವನ್ನು ಕೊಟ್ಟು ಅವರಿಂದ ಬಿಡಿಸಿಕೊಳ್ಳುತ್ತಿದ್ದರು. ಸನಾತನ ಸಾಧಕ ಶ್ರೀ. ಆನಂದ ಜಾಖೊಟಿಯಾ ಇವರ ಅನೇಕ ಸಲದ ನಿರೀಕ್ಷಣೆಯಲ್ಲಿ ಗಮನಕ್ಕೆ ಬಂದ ಅಂಶವೆಂದರೆ, ಈ ತಂಡವು ಭಕ್ತರ ಕಣ್ಣುಗಳನ್ನು ಸತತವಾಗಿ ನೋಡಿ ಅವರಿಗೆ ಸಮ್ಮೋಹನ ಮಾಡುತ್ತಿದ್ದರು. ನಂತರ ನನ್ನ ಸಂಪರ್ಕದಲ್ಲಿ ಇರುವಂತಹವರಿಗೂ ಈ ತಂಡದ ಬಗ್ಗೆ ಇದೇ ಅರಿವಾಗಿತ್ತು. ಸನಾತನದ ಸಾಧಕರಾದ ಶ್ರೀ. ವಸಂತ ಸಣಸ ಇವರು ಮುಂದಿನ ಅನುಭವ ಹೇಳಿದರು ‘ತ್ರಿವೇಣಿ ಸಂಗಮದಲ್ಲಿ ಗ್ರಂಥವನ್ನು ಮಾರಾಟಕ್ಕಾಗಿ ಹೋದಾಗ ಈ ರೀತಿಯ ಹಣವನ್ನು ಕೀಳುವ ೭-೮ ಜನರ ತಂಡವು ಭಕ್ತರನ್ನು ಲೂಟಿ ಮಾಡುತ್ತಿದ್ದರು. ಅಷ್ಟರಲ್ಲೇ ನಾನು ಈ ತಂಡವು ಭಕ್ತರನ್ನು ಲೂಟಿ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ವಿಷಯವನ್ನು ತಿಳಿಸಿದೆನು. ಆಗ ಪೊಲೀಸರು ‘ಇದು ನಮಗೆ ಗೊತ್ತಿದೆ; ಆದರೆ ಅವರು ಸಾಧುಗಳ ವೇಷದಲ್ಲಿದ್ದುದರಿಂದ ನಮಗೆ ಏನೂ ಮಾಡಲು ಸಾಧ್ಯವಿಲ್ಲ’ ಎಂದರು. ನಾನು ಪೊಲೀಸರಲ್ಲಿ ದೂರಿದ್ದರಿಂದ ಆ ತಂಡದವರೆಲ್ಲರೂ ಸಂಘಟಿತರಾಗಿ ನನ್ನ ಬಳಿ ಬಂದು ನನಗೆ ವಿಚಾರಿಸತೊಡಗಿದರು, ‘ನೀವು ಯಾರು ? ಭಕ್ತರು ನಮಗೆ ಹಣವನ್ನು ಕೊಡುತ್ತಿದ್ದಾರೆ, ಅದಕ್ಕೆ ನಿಮಗೇನು ಅಡಚಣೆ ?’ ಅದಕ್ಕೆ ನಾನು ಅವರಿಗೆ ಪ್ರತಿಯಾಗಿ, ‘ನೀವು ಯಾರು ? ನಿಮ್ಮ ಆಧಾರ ಕಾರ್ಡ ತೋರಿಸಿ ? ನೀವು ಏನು ಮಾಡುತ್ತಿದ್ದಿರಿ, ಎಂಬುದು ನನಗೆ ಗೊತ್ತಾಗಿದೆ’ ಎಂದು ದಿಟ್ಟತನದಿಂದ ಮಾತನಾಡಿದಾಗ ಅವರು ೫ ನಿಮಿಷದಲ್ಲಿ ಸಂಗಮ ಕ್ಷೇತ್ರದಿಂದ ಕಾಲ್ಕಿತ್ತರು’. ಪೊಲೀಸರ ಸರಕಾರಿ ಪ್ರವೃತ್ತಿಯ ಅನುಭವವಾಗಿಯೂ ಕೇಸರಿ ವೇಷಧಾರಿಯ ದುಷ್ಟ ಪ್ರವೃತ್ತಿಯವರಿಗೆ ಕಾನೂನಿನ ಮಾರ್ಗದಿಂದ ತಡೆದ ಸಾಧಕರ ಕ್ಷಾತ್ರಭಾವವು ಎಲ್ಲಾ ಸಾಧಕರಿಗೆ ಕಲಿಯುವಂತೆ ಇತ್ತು.

೩. ಕುದರೆಯ ಲಾಳದ ಉಂಗುರ ಮಾರುವ ಢೋಂಗಿಗಳು !

ಗಂಗೆಯ ದಡದಲ್ಲಿ ಕುದುರೆಯ ಲಾಳದ ಉಂಗುರವನ್ನು ಮಾರಾಟ ಮಾಡುವ ಅನೇಕ ಢೋಂಗಿಗಳು ಸಿಗುತ್ತಾರೆ. ಅವರು ತಮ್ಮ ಬಳಿ ಇರುವ ಧ್ವನಿವರ್ಧಕದಿಂದ ‘ಕಲಿಯುಗದಲ್ಲಿ ಎಲ್ಲಾ ಕಡೆಗಳಲ್ಲಿ ದುಃಖ ಇದೆ; ಆದ್ದರಿಂದ ಬಾಬಾರವರ, ಕುದುರೆಯ ಲಾಳದ ಉಂಗುರವನ್ನು ಹಾಕಿಕೊಂಡರೆ, ಜೀವನದಲ್ಲಿ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ’, ಎಂದು ಹೇಳುತ್ತಿದ್ದರು. ಬಾಬಾರವರು ಇದಕ್ಕೆ ಕೇವಲ ೧೦ ರೂಪಾಯಿ ಇಡಲು ಹೇಳಿದ್ದಾರೆ. ಎಂದು ಹೇಳುವವರು ‘ಆ ಬಾಬಾ ಯಾರು’, ಇದರ ಬಗ್ಗೆ ಯಾರೂ ಮಾತನಾಡುತ್ತಿರಲಿಲ್ಲ. ದುಃಖವನ್ನು ನಿವಾರಿಸುವ ಉಂಗುರ ಮಾತ್ರ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡುತ್ತಾರೆ. ಸಮಾಜದಲ್ಲಿ ಧರ್ಮಶಿಕ್ಷಣವು ಎಷ್ಟು ಅವಶ್ಯಕತೆ ಇದೆ ಎಂದು ಅನುಭವವಾಗುತ್ತದೆ.

೪. ಗಂಗೆಯ ದಡದಲ್ಲಿ ಕುಂಕುಮ ಹಚ್ಚುವುದು ಮತ್ತು ಗೋದಾನ ಮಾಡುವ ಹೆಸರಿನಲ್ಲಿ ಹಣ ದೋಚುವ ಬ್ರಾಹ್ಮಣರು !

ಗಂಗೆಯ ದಡದ ಮೇಲೆ ಅಲ್ಲಲ್ಲಿ ಕಟ್ಟಿಗೆ ಮಣೆಯ ಮೇಲೆ ಬ್ರಾಹ್ಮಣರು ಕುಳಿತಿರುವುದು ಕಂಡುಬರುತ್ತದೆ. ಅವರ ಪಕ್ಕದಲ್ಲಿ ಗೋವನ್ನು ಕಟ್ಟಿರುತ್ತಾರೆ ಮತ್ತು ಮಣೆಯ ಮೇಲೆ ವಿವಿಧ ಪೂಜೆಯ ಸಾಮಗ್ರಿಗಳನ್ನು ಹಾಗೂ ಅಷ್ಟಗಂಧವನ್ನು ಇಟ್ಟಿರುತ್ತಾರೆ. ಸ್ನಾನಕ್ಕಾಗಿ ಹೋಗಿದ ಭಕ್ತರು ಗಂಗೆಯಲ್ಲಿ ಸ್ನಾನವನ್ನು ಮಾಡಿ ಈ ಬ್ರಾಹ್ಮಣರ ಕೈಯಿಂದ ಅಷ್ಟಗಂಧದ ತಿಲಕವನ್ನು ಹಚ್ಚಿಕೊಳ್ಳುತ್ತಾರೆ ಮತ್ತು ಬ್ರಾಹ್ಮಣರಿಗೆ ದಕ್ಷಿಣೆಯನ್ನು ಕೊಡುತ್ತಾರೆ. ಬ್ರಾಹ್ಮಣರಿಗೆ ದಾನವನ್ನು ಶ್ರದ್ಧೆಯಿಂದ ನೀಡುತ್ತಾರೆ. ಆದರೆ ಬ್ರಾಹ್ಮಣರು ಮಾತ್ರ ಹೆಸರಿಗೆ ಮಾತ್ರ ಬ್ರಾಹ್ಮಣರಾಗಿರುತ್ತಾರೆ. ಅವರಿಗೆ ಧರ್ಮದ ಬಗ್ಗೆ ಯಾವುದೇ ಜ್ಞಾನ ಇರುವುದಿಲ್ಲ. ಭಕ್ತರಿಂದ ಅವರು ದಕ್ಷಿಣೆಯನ್ನು ತೆಗೆದುಕೊಳ್ಳುವುದಿಲ್ಲ ಬದಲಾಗಿ ದೋಚುತ್ತಾರೆ.

ಎಲ್ಲಕ್ಕಿಂತ ಕೆಟ್ಟದ್ದು ಗೋದಾನ ಮಾಡುವುದರಲ್ಲಿ ಕಂಡಿತು. ಗಂಗಾಸ್ನಾನ ಆದ ನಂತರ ಗೋದಾನ ಮಾಡುತ್ತಾರೆ. ಗಂಗಾ ಸ್ನಾನ ಮಾಡಲು ಬರುವವರು ಗೋವನ್ನು ಜೊತೆಯಲ್ಲಿ ತರುವುದಿಲ್ಲ. ಬ್ರಾಹ್ಮಣರು ಮರದ ಕಂಬಕ್ಕೆ ಗೋವನ್ನು ಕಟ್ಟಿರುತ್ತಾರೆ, ಸ್ನಾನಕ್ಕಾಗಿ ಬಂದಂತಹ ಭಕ್ತರು ಗೋದಾನವನ್ನು ಮಾಡುವ ಬದಲು ಗೋವಿನ ಬೆಲೆಯಷ್ಟು ಹಣವನ್ನು ಆ ಬ್ರಾಹ್ಮಣರಿಗೆ ಕೊಡುತ್ತಾರೆ ಹಾಗೂ ಅದರೊಂದಿಗೆ ಗೋದಾನ ವಿಧಿಯನ್ನು ಮಾಡುತ್ತಾರೆ. ಇಡೀ ದಿನ ಒಂದೇ ಗೋವಿನ ಅನೇಕ ಸಲ ಗೋದಾನವಾಗುತ್ತದೆ ! ಧರ್ಮದ ಹೆಸರಿನಲ್ಲಿ ಅಥವಾ ಗೋದಾನದ ಹೆಸರಿನಲ್ಲಿ ನಡೆಯುವ ಈ ದಂಧೆಯು ನಮ್ಮಂತಹ ಧರ್ಮಶ್ರದ್ಧೆಯ ಪ್ರಸಾರ ಮಾಡುವವರಿಗೆ ದುಃಖದಾಯಕವಾಗಿತ್ತು.

೫. ಮೇಳಾ ಪ್ರಾಧಿಕಾರ ಕಛೇರಿಯಲ್ಲಿನ ಸರಕಾರದ ದುಷ್ಟಪ್ರವೃತ್ತಿಯ ಅನುಭವ

ಕುಂಭಮೇಳದ ಆರಂಭದಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥೆಗಳಿಗೆ ಕುಂಭ ಕ್ಷೇತ್ರದಲ್ಲಿ ಸ್ಥಳ ಸಿಗಬೇಕೆಂದು ನಾನು ಮೇಳದ ಪ್ರಾಧೀಕರಣ ಕಾರ್ಯಾಲಯದಲ್ಲಿ ಬೆಂಬತ್ತುವಿಕೆ ಸಮಯದಲ್ಲಿ ಬಂದಂತಹ ಅನುಭವವು ಸರಕಾರದ ದುಷ್ಟಪ್ರವೃತ್ತಿಯನ್ನು ತೋರಿಸುತ್ತಿತ್ತು.

೫ ಅ. ಸರಕಾರಿ ಅಥವಾ ರಾಜಕೀಯ ವಶದಲ್ಲಿರುವ ಸಂಸ್ಥೆಗಳಿಗೆ ಕುಂಭಕ್ಷೇತ್ರದಲ್ಲಿ ಭೂಮಿ ಹಂಚಿಕೆಯಾಗುವುದು : ಒಳ್ಳೆಯ ಕಾರ್ಯವನ್ನು ಮಾಡುವ ಸಂಸ್ಥೆಗಳಿಗೆ ಸ್ಥಳವು ಸಿಗುತ್ತಿರಲಿಲ್ಲ; ಆದರೆ ಸರಕಾರಿ, ರಾಜಕೀಯ ಅಥವಾ ಒಂದು ಹಿಂದೂಪರ ಸಂಘಟನೆಯ ವಶದಲ್ಲಿರುವಂತಹ ಸಂಸ್ಥೆಗಳಿಗೆ ಕೂಡಲೇ ಸ್ಥಳವು ಸಿಗುತ್ತಿತ್ತು. ಹಿಂದೂ ಜನಜಾಗೃತಿ ಸಮಿತಿಯ ಕಾರ್ಯವು ರಾಷ್ಟ್ರೀಯ ಮಟ್ಟದಲ್ಲಿದ್ದರೂ ಕೊನೆಯ ತನಕ ಕುಂಭಕ್ಷೇತ್ರದಲ್ಲಿ ಜಾಗ ಸಿಗಲಿಲ್ಲ. ಏನೂ ಕಾರ್ಯವು  ಇಲ್ಲದ್ದಿದ್ದರೂ, ಅಂತಹವರಿಗೆ ಪ್ರಯಾಗರಾಜದಲ್ಲಿ ನೂರಾರು ಸಂಸ್ಥೆಗಳಿಗೆ ಸೆಕ್ಟರ ೬ ರಲ್ಲಿ ಸ್ಥಳ ಸಿಕ್ಕಿರುವುದನ್ನು ನಾವು ನೋಡಿದೆವು. ಈ ಮಂಡಳಿಗಳ ನಂಟು ಯಾವುದಾದರೊಂದು ಸರಕಾರಿ, ರಾಜಕೀಯ ಅಥವಾ ಸಂಘಪರಿವಾರದೊಂದಿಗಿತ್ತು.

೫ ಆ. ಕುಂಭಮೇಳ ಪ್ರಾಧಿಕಾರಣ ಕಛೇರಿಯಲ್ಲಿ ದೂರನ್ನು ದಾಖಲಿಸಿರುವ ಬಗ್ಗೆ ಸ್ವೀಕೃತಿಯನ್ನು ಕೊಡದಿರುವುದು : ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ಸ್ಥಳ ಸಿಗುತ್ತಿಲ್ಲವೆಂದು; ನಾನು ದೂರನ್ನು ದಾಖಲಿಸಲು ಮೇಳಾ ಕಛೇರಿಗೆ ಹೋದೆ, ಆಗ ಕಛೇರಿಯ ಪ್ರತಿನಿಧಿಗಳು ಅದಕ್ಕೆ ಸ್ವೀಕೃತಿಯನ್ನು ಕೊಡುವ ಸೌಜನ್ಯವನ್ನೂ ತೋರಿಸಲಿಲ್ಲ. ಸ್ವೀಕೃತಿ ಪಡೆದ ಕಾಗದವು ಸರಕಾರಿ ಕಾಗದಪತ್ರವಾಗಿದ್ದರಿಂದ ಅದರ ಉಪಯೋಗವನ್ನು ಮಾಹಿತಿ ಅಧಿಕಾರಿಗಳಲ್ಲಿ ಬೆಂಬತ್ತುವಿಕೆ ಮಾಡಲು ಅಥವಾ ನ್ಯಾಯಾಲಯದಲ್ಲಿ ಸಾಕ್ಷಿಯಂತೆ ಉಪಯೋಗಿಸಿ ಕಾನೂನಿನ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ; ಆದರೆ ಸರಕಾರಿ ಪ್ರತಿನಿಧಿಗಳು ಈ ಸ್ವೀಕೃತಿಯನ್ನು ಕೊಡದಿದ್ದುರಿಂದ ನಾವು ಹತಾಶರಾದೆವು.

೫ ಇ. ಮೇಳ ಕಾರ್ಯಾಲಯದ ಅಧಿಕಾರಿಗಳ ಸಂವೇದನಾಶೂನ್ಯತೆ ! : ೧೫ ದಿನ ಪ್ರಾಧಿಕಾರಣ ಕಛೇರಿಯಲ್ಲಿ ಅಲೆದಾಡಿಯೂ ಒಂದೂ ಸಲವೂ ಮೇಳದ ಅಧಿಕಾರಿಗಳು ಸಿಗಲಿಲ್ಲ. ಸೌಲಭ್ಯವನ್ನು ಕೊಡುವ ಅಧಿಕಾರಿ ಕಛೇರಿಗೆ ಬರುತ್ತಿರಲಿಲ್ಲ, ನೂರಾರು ಜನರು ಅವರ ಕಛೇರಿಯಲ್ಲಿ ಬೆಳಿಗ್ಗೆ ೯ ರಿಂದ ರಾತ್ರಿ ೯ ತನಕ ಕಾಯುತ್ತಿದ್ದರು. ಅದರಲ್ಲಿ ಅನೇಕ ಸಾಧು-ಸಂತರು ಕೂಡ ಇದ್ದರು. ಜನರ ಕುಂದುಕೊರತೆಯ ಬಗ್ಗೆ ಸರಕಾರಿ ಅಧಿಕಾರಿಗಳಿಗೆ ಯಾವುದೇ ಸಂಬಂಧವಿಲ್ಲದಂತೆ ಇತ್ತು. ಈ ಕಾಲಾವಧಿಯಲ್ಲಿ ಗ್ವಾಲಿಯರ್‌ನಿಂದ ಬಂದಂತಹ ಓರ್ವ ಸಾಧುವಿನ ಪರಿಚಯವಾಯಿತು. ನನಗೆ ಕಂಡಂತೆ ಆ ವ್ಯಕ್ತಿ ೬ ದಿನಗಳ ಕಾಲ ಪ್ರತಿದಿನ ಕಛೇರಿಗೆ ಬೆಳಿಗ್ಗೆಯಿಂದ ರಾತ್ರಿಯವರೆಗೂ ಕಾಯುತ್ತಿದ್ದರು. ನಾವು ಪ್ರತಿದಿನ ಪರಿಚಯವಾಗುವ ಕಾರ್ಯಕರ್ತರ ಸಂಪರ್ಕದಲ್ಲಿದ್ದು ಮೇಳದ ಅಧಿಕಾರಿ ಯಾವಾಗ ಬರುವರು?, ಎಂಬುದನ್ನು ಉಹಿಸಿಕೊಂಡು ಆ ಸಮಯದಲ್ಲಿ ಕಛೇರಿಯಲ್ಲಿ ಉಪಸ್ಥಿತರಿರುತ್ತಿದ್ದೆವು. ಇದರಿಂದ ಉಳಿದ ಸಮಯದಲ್ಲಿ ಇತರ ಸೇವೆಗೆ ಹೋಗುತ್ತಿದ್ದೆವು. ಗ್ವಾಲಿಯರ್‌ನಿಂದ ಬಂದಂತಹ ಸಾಧು ಮಾತ್ರ ೬ ದಿನ ಬೆಳಿಗ್ಗೆಯಿಂದ ರಾತ್ರಿಯ ತನಕ ಕಛೇರಿಯಲ್ಲಿ ಕುಳಿತುಕೊಳ್ಳುತ್ತಿದ್ದರು; ಆದರೆ ಒಂದು ದಿನವೂ ಅವರಿಗೆ ಮೇಳದ ಅಧಿಕಾರಿಯು ಭೇಟಿಯಾಗಲಿಲ್ಲ. ಕೊನೆಯಲ್ಲಿ ಅವರು ಮರಳಿ ಗ್ವಾಲಿಯರ್‌ಗೆ ಹೋದರು. ಇದೊಂದು ಪ್ರಾತಿನಿಧಿಕ ಉದಾಹರಣೆಯಾಗಿದೆ. ಪ್ರತ್ಯಕ್ಷದಲ್ಲಿ ಹೀಗೆ ಅನೇಕ ಸಾಧು-ಸಂತರ ಸಂದರ್ಭದಲ್ಲಿ ನಡೆಯುತ್ತಿತ್ತು. ಸಂತರಿಗೆ ಸಾಲಿನಲ್ಲಿ ದಿನವಿಡಿ ನಿಲ್ಲುವಂತೆ ಮಾಡುವುದು, ಕಛೇರಿಯವರು ಉದ್ಧಟತನದಿಂದ ಉತ್ತರಿಸುವುದು ಈ ರೀತಿಯ ಪ್ರಸಂಗ ಮೇಲಿಂದ ಮೇಲೆ ಆಗುತ್ತಿತ್ತು. ಮೇಳಾ ಕಛೇರಿಯ ಮುಂದೆ ಸಾಧು-ಸಂತರು ಅನೇಕ ಸಲ ಪ್ರತಿಭಟನೆಯನ್ನು ಮಾಡಿದರು; ಆದರೆ ಕುದುರೆಯ ಕಟ್ಟಿರುವ ಗಾಳದಂತೆ ಸರಕಾರಿ ಅಧಿಕಾರಿಗಳು ಅವರನ್ನೂ ಒಮ್ಮೆಯೂ ನೋಡಲಿಲ್ಲ. ಸರಕಾರಿ ಅಧಿಕಾರಿಗಳ ಹಾಗೂ ಕಾರ್ಯಕರ್ತರ ಕನಿಕರ ಇಲ್ಲದಿರುವುದನ್ನು ಮೇಳ ಕಛೇರಿಯಲ್ಲಿ ಅನುಭವಾಯಿತು. ಹಿಂದೂ ರಾಷ್ಟ್ರದಲ್ಲಿ ಈ ರೀತಿಯ ವ್ಯವಸ್ಥೆ ಇರುವುದಿಲ್ಲ ಎಂಬುದೂ ಕಲಿಯಲು ಸಿಕ್ಕಿತು.

೬. ಸರಕಾರದ ಅಯೋಜನೆಗಳಿಗೆ ಕೋಟಿಗಟ್ಟಲೇ ಹಣದ ಪೋಲು !

ಕುಂಭಕ್ಷೇತ್ರದಲ್ಲಿ ಉತ್ತರಪ್ರದೇಶ ಮತ್ತು ಕೇಂದ್ರದ ವಿವಿಧ ಮಂತ್ರಾಲಯಗಳ ಮಾಧ್ಯಮದಿಂದ ಅನೇಕ ಸರಕಾರಿ ಕಾರ್ಯಕ್ರಮಗಳ ಆಯೋಜನೆಯನ್ನು ಮಾಡಲಾಗಿತ್ತು. ಕುಂಭಮೇಳದಲ್ಲಿ ವಾರಕ್ಕೆ ಒಂದು ದಿನ ಸರಕಾರಿ ಕಾರ್ಯಕ್ರಮದ ಭವ್ಯ ಅಯೋಜನೆಗಳು ಇರುತ್ತಿದ್ದವು. ಇದರಲ್ಲಿ ‘ಸರ್ವಸಮಾವೇಶ ಸಂಸ್ಕೃತಿ ಕುಂಭ’, ‘ಗಂಗಾ ಸಮ್ಮೇಳನ’ ಇತ್ಯಾದಿ ಕೆಲವು ಕಾರ್ಯಕ್ರಮದಲ್ಲಿ ನಾವು ಭಾಗವಹಿಸಿದ್ದೆವು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಬ್ಯಾಗ್, ವಹಿಗಳು, ಪುಸ್ತಕ, ಪೆನ್ನು, ಊಟ, ನೀರು ಕುಡಿಯುವ ಬಾಟಲಿ ಇತ್ಯಾದಿಗಳು ದೊಡ್ಡ ಪ್ರಮಾಣದಲ್ಲಿ ಹಂಚುತ್ತಿದ್ದರು. ಅಲ್ಲಿ ಬರುತ್ತಿದ್ದ ಹವ್ಯಾಸಿಗಳು ವಸ್ತುಗಳನ್ನು ತೆಗೆದುಕೊಂಡು ಕಾರ್ಯಕ್ರಮಕ್ಕೆ ಭಾಗವಹಿಸದೇ ಹೋಗುತ್ತಿದ್ದರು. ನಾವು ನೋಡಿದ ಕಾರ್ಯಕ್ರಮದ ದುಸ್ಥಿತಿ ಹೇಗಿತ್ತೆಂದರೇ, ಕೊನೆಯಲ್ಲಿ ಕಾರ್ಯಕ್ರಮದಲ್ಲಿ ಕಡಿಮೆ ವೀಕ್ಷಕರು ಇರುವುದನ್ನು ನೋಡಿ ಕಾರ್ಯಕ್ರಮ ನಿಲ್ಲಿಸಬೇಕಾಗುತ್ತಿತ್ತು. ಭಕ್ತರಿಗೆ ಆಮಿಷವನ್ನು ಒಡ್ಡಿ ಸರಕಾರಿ ಕಾರ್ಯಕ್ರಮಕ್ಕೆ ಕರೆಯುವುದು ಸರಕಾರದ ಪ್ರಯತ್ನವು ವಿಫಲವಾಯಿತು, ಇದರಿಂದ ಭಕ್ತರ ದುಷ್ಟಪ್ರವೃತ್ತಿಯ ಅನುಭವವಾಯಿತು.

೭. ಕುಂಭಮೇಳದಲ್ಲಿಯ ಅಸ್ವಚ್ಛ ಸ್ವಚ್ಛತಾಗೃಹ !

ಕುಂಭಮೇಳದಲ್ಲಿ ಸರಕಾರವು ೧ ಲಕ್ಷ ೨೨ ಸಾವಿರಕ್ಕಿಂತಲೂ ಹೆಚ್ಚು ಶೌಚಾಲಯಗಳನ್ನು ಕಟ್ಟಿಸಿದ್ದರು. ಅದನ್ನು ಸ್ವಚ್ಛ ಮಾಡುವ ಜವಾಬ್ದಾರಿಯನ್ನು ಸರಕಾರಿ ಕಾರ್ಮಿಕರದ್ದಾಗಿತ್ತು. ಅವರ ಮೇಲೆ ಗಮನವಿಡಲು ಸರಕಾರೇತರ ಸಂಸ್ಥೆಯ ೨ ಸಾವಿರಕ್ಕಿಂತಲೂ ಹೆಚ್ಚು ಸ್ವಚ್ಛತಾಗೃಹದ ಕಾರ್ಯಕರ್ತರು ಇದ್ದರು. ಒಂದು ಸಲ ಓರ್ವ ಹಿರಿಯ ಹಿಂದುತ್ವನಿಷ್ಠರು ಸನಾತನದ ಶಿಬಿರಕ್ಕೆ ಬಂದಿದ್ದರು. ಅವರಿಗೆ ಕಮೋಡ್ ನ ಶೌಚಾಲಯ ಬೇಕಿತ್ತು; ಆದ್ದರಿಂದ ನಾನು ಸರಕಾರಿ ಸ್ವಚ್ಛತಾಗೃಹಕ್ಕೆ ಕರೆದುಕೊಂಡು ಹೊದೆನು. ಅಲ್ಲಿ ಅನುಭವಿಸಿದ ಚಿತ್ರಣವು ಅತ್ಯಂತ ಹೇಸಿಗೆಯಾಗಿತ್ತು. ಹೆಚ್ಚು ಕಡಿಮೆ ೫೦ ಶೌಚಾಲಯಗಳಿದ್ದವು; ಆದರೆ ಒಂದೂ ಕೂಡ ಸ್ವಚ್ಛ ಅಥವಾ ಉಪಯೋಗಿಸಲು ಯೋಗ್ಯವಾಗಿರಲಿಲ್ಲ. ಕೆಲವರು ಹೇಳಿದರು, ಸರಕಾರಿ ಕಾರ್ಮಿಕರು ಕಳೆದ ತಿಂಗಳಲ್ಲಿ ಸ್ವಚ್ಛತೆಯನ್ನು ಮಾಡಿಯೇ ಇರಲಿಲ್ಲ. ಯಾವ ಭಕ್ತರು ಶೌಚಾಲಯವನ್ನು ಉಪಯೋಗಿಸಿ ಹೊಲಸು ಮಾಡಿದರೋ, ಅವರು ಎಷ್ಟು ತಪ್ಪಿತಸ್ಥರಿದ್ದಾರೆಯೋ ಅಷ್ಟೇ ಸರಕಾರಿ ಕಾರ್ಮಿಕರು ಹಾಗೂ ಸ್ವಚ್ಛತಾಗೃಹದವರೂ ತಪ್ಪಿತಸ್ಥರಿದ್ದಾರೆ. ಪವಿತ್ರವಾದಂತಹ ವಾತಾವರಣದಲ್ಲಿ ಸರಕಾರಿ ಕಾರ್ಮಿಕರ ಬೇಜವಾಬ್ದಾರಿತನ ಅಂದರೆ ಅಧರ್ಮಿಕ ಪ್ರವೃತ್ತಿ ತೋರುತ್ತಿತ್ತು ! ಕೊನೆಗೆ ಅತಿಥಿಗೆ ಸನಾತನದ ಸಾಧಕರೇ ಒಂದು ಸರಕಾರಿ ಶೌಚಾಲಯವನ್ನು ಸ್ವಚ್ಛ ಮಾಡಿಕೊಟ್ಟರು.

(ಶ್ರೀ. ಚೇತನ ರಾಜಹಂಸ ಇವರು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರು)

Leave a Comment