ಹಿಂದೂ ಧರ್ಮದ ವೈವಿಧ್ಯತೆ, ವಿಶಾಲತೆ, ಸರ್ಮಸಮಾವೇಶಕತೆ, ಐಕ್ಯತೆ ಮತ್ತು ಅಖಂಡತ್ವ ಇವುಗಳ ಸರ್ವಸುಂದರ ದರ್ಶನವಾಗಿರುವ ಜಗತ್ತಿನ ಏಕೈಕ ಕುಂಭಮೇಳದ ನಿಮಿತ್ತ ‘ಕುಂಭದರ್ಶನ’ ಈ ವಿಶೇಷ ಲೇಖನಮಾಲೆ ! ಈ ಲೇಖನಮಾಲೆಯ ಮಾಧ್ಯಮದಿಂದ ನಮ್ಮ ವಾಚಕರಿಗೆ ಪ್ರಯಾಗರಾಜದ ಸ್ಥಾನದರ್ಶನ, ಕುಂಭಮೇಳದಲ್ಲಿ ವಿವಿಧ ಸಮುದಾಯಗಳು, ಅವುಗಳ ಪೇಶವೆಯವರ ಮೆರವಣಿಗೆ (ಶೋಭಾಯಾತ್ರೆ), ಸಂತ-ಮಹಂತರ ದರ್ಶನ, ತ್ರಿವೇಣಿ ಸಂಗಮದಲ್ಲಿ ಭಕ್ತಿಭಾವದಿಂದ ಸ್ನಾನ ಮಾಡಲು ಬಂದ ಹಿಂದೂಗಳ ಮುಖದ ಮೇಲಿನ ಉತ್ಕಟ ಭಾವ, ಹಿಂದೂ ಧರ್ಮದ ಖ್ಯಾತಿಯನ್ನು ಕೇಳಿ ಸಪ್ತಸಮುದ್ರಗಳಾಚೆಯಿಂದ ಬರುವ ವಿದೇಶಿ ಜನರ ಸಹಭಾಗ ಮುಂತಾದ ಛಾಯಾಚಿತ್ರ ಮತ್ತು ವೈಶಿಷ್ಟ್ಯಪೂರ್ಣ ಮಾಹಿತಿ ನೀಡುವ ನಮ್ಮ ಪ್ರಯತ್ನವಿರುವುದು. ಇದರಿಂದ ವಾಚಕರಿಗೆ ಹಿಂದೂ ಧರ್ಮದ ಅಸಾಧಾರಣ ಮಹತ್ವ ಮತ್ತು ಸಾಧನೆ ಮಾಡುವುದು ಏಕೆ ಆವಶ್ಯಕವಿದೆ, ಎಂದು ತಿಳಿಯುವುದು. ಈ ಲೇಖನಮಾಲೆಯಿಂದ ನಮಗೆ ಮನೆಯಲ್ಲಿ ಕುಳಿತೇ ಭಕ್ತಿಭಾವದ ಸ್ವಲ್ಪವಾದರೂ ಅನುಭವ ಅವಶ್ಯವಾಗಿ ಬರುವುದು. ಹಾಗಾಗಿ ಈ ಕುಂಭಮೇಳದ ಪವಿತ್ರ ಕಾಲದಲ್ಲಿ ಹಿಂದೂಗಳು ಸಾಧನೆಯನ್ನು ಮಾಡುವ ಸಂಕಲ್ಪ ಮಾಡಬೇಕು; ಏಕೆಂದರೆ ಮುಂಬರುವ ಆಪತ್ಕಾಲದಲ್ಲಿ ಈ ಸಾಧನೆಯೇ ನಮ್ಮನ್ನು ಪಾರುಮಾಡಲಿದೆ, ಎಂಬುದು ಖಚಿತ !
ಪ್ರಸ್ತಾವಿತ ಆಖಾಡಾಗಳ ಲೆಕ್ಕಚಾರ ತಪ್ಪಿತು !
ಉತ್ತರಪ್ರದೇಶದ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಕೊನೆಗೂ ಕಿನ್ನರ ಆಖಾಡ ನಾಗಾ ಸನ್ಯಾಸಿ ಸಾಧುಗಳು ಜುನಾ ಆಖಾಡಾದಲ್ಲಿ ವಿಲೀನಗೊಂಡರು. ತದನಂತರ ಜುನಾ ಆಖಾಡಾಗಳ ಸಂತ-ಮಹಂತರ ಗುಂಪಿನೊಂದಿಗೆ ಕಿನ್ನರ ಆಖಾಡಾಗಳ ಕಿನ್ನರರು ಅಮೃತಕುಂಭ ಸ್ನಾನವನ್ನು ಮಾಡಿದರು. ಉಜ್ಜೈನದಲ್ಲಿ ಜರುಗಿದ ಸಿಂಹಸ್ಥ ಕುಂಭಮೇಳದಲ್ಲಿ ಕಿನ್ನರ ಆಖಾಡಾ ಸ್ಥಾಪಿಸಲಾಗಿತ್ತು. ಆಖಾಡಾ ಎಂದರೆ ವಿವಿಧ ಸ್ಥಳಗಳಲ್ಲಿ ಸಾಧು, ಸಂತ, ಸನ್ಯಾಸಿ, ಆಚಾರ್ಯರ ವರ್ಗೀಕರಣ ಮತ್ತು ಸುಲಭಗೊಳಿಸುವ ವ್ಯವಸ್ಥೆಯಾಗಿದೆ. ಸನಾತನ ಹಿಂದೂ ಧರ್ಮದ ಆಚರಣೆ, ಉಪಾಸನೆ, ಪ್ರಸಾರ ಮತ್ತು ರಕ್ಷಣೆಗಳು ಪ್ರಮುಖವಾಗಿ ಅಖಾಡಾ ಸಾಧುಗಳ ಜೀವನಕಾರ್ಯವಿರುತ್ತದೆ. ಇತ್ತೀಚೆಗಷ್ಟೇ ಸ್ಥಾಪಿಸಿರುವ ಕಿನ್ನರ ಆಖಾಡಾದಲ್ಲಿ ಈ ಪ್ರಮುಖ ಕಾರ್ಯ ಎಷ್ಟು ನಡೆಯುತ್ತಿದೆ ಎನ್ನುವುದು ಸಂಶೋಧನೆಯ ವಿಷಯವಾಗಿದೆ. ಆಖಾಡಾದಲ್ಲಿ ಭಾಗವಹಿಸಲು ‘ಸನಾತನ ಹಿಂದೂ ಧರ್ಮದ’ ಕುರಿತು ಮತ್ತು ಜೀವನಪದ್ಧತಿಯ ಕುರಿತು ನಿಷ್ಠೆ ಇದು ಒಂದು ಮುಖ್ಯ ಮಾನದಂಡವಾಗಿರುತ್ತದೆ; ಆದರೆ ‘ಆಖಾಡದಲ್ಲಿ ಸ್ಥಾನ ದೊರೆಯದಿದ್ದರೆ, ನಾವು ಇಸ್ಲಾಂ ಅಂಗೀಕರಿಸುತ್ತೇವೆ’, ಎಂದು ಈ ಕಿನ್ನರರು ನೀಡಿದ ಎಚ್ಚರಿಕೆಯ ವೃಥಾ ಭಯದಿಂದ ಸನಾತನ ಧರ್ಮನಿಷ್ಠೆಯ ಪರೀಕ್ಷೆಯ ಒರೆ ಹಚ್ಚದೆ ಕಿನ್ನರರನ್ನು ಜುನಾ ಆಖಾಡಾದಲ್ಲಿ ಸೇರ್ಪಡಿಸಿಕೊಳ್ಳುವುದು ಒಂದು ದಿಕ್ಕುತಪ್ಪಿದ ಹೆಜ್ಜೆಯೆಂದೇ ಹೇಳಬಹುದು.
ಏಕನಿಷ್ಠೆಯಿಲ್ಲದಿರುವವರ ಆಖಾಡಾ ಹೇಗೆ ?
ಹಿಂದೂ ಧರ್ಮವು ಎಂದಿಗೂ ಒಬ್ಬ ವ್ಯಕ್ತಿಯೆಂದು ಕಿನ್ನರ ಸಮಾಜವನ್ನು ಉಪೇಕ್ಷಿಸಿಲ್ಲ. ತದ್ವಿರುದ್ಧ ಕಿನ್ನರರ ಆಶೀರ್ವಾದ ಫಲದಾಯಕವಾಗಿದೆ ಎಂದು ನಂಬಿದೆ. ಆದರೆ ಸಮಾಜದ ಜನರ ಅಯೋಗ್ಯ ವರ್ತನೆಯಿಂದ ಹಾಗೆಯೇ ಇತರ ಸಮಾಜದ ಅಜ್ಞಾನದಿಂದ ಇಂದು ಕಿನ್ನರರನ್ನು ನೋಡುವ ದೃಷ್ಟಿ ಬೇರೆಯಾಗಿದೆ, ಇದು ವಸ್ತುಸ್ಥಿತಿಯಾಗಿದೆ. ಹಿಂದೂ ಧರ್ಮವು ಮನುಷ್ಯ ಜೀವನದ ಅಂತಿಮ ಧ್ಯೇಯವಿರುವ ಮೋಕ್ಷಪದದ ಅಧಿಕಾರವನ್ನು ಎಂದಿಗೂ ಯಾರಿಗೂ ನಿರಾಕರಿಸಿಲ್ಲ. ಅಂದರೆ ಅನಾದಿ ಕಾಲದಿಂದಲೂ ಕಿನ್ನರರ ಸಾಮಾಜಿಕ ಅಸ್ತಿತ್ವವಿದೆ. ‘ಕಿನ್ನರತೆ ಇದು ದೇಹದೊಂದಿಗೆ ಸಂಬಂಧಿಸಿದ್ದರೆ’, ‘ಸಂತಪದವಿಯು ಅಧ್ಯಾತ್ಮದ ಅಧಿಕಾರದೊಂದಿಗೆ’ ಸಂಬಂಧಿಸಿದೆ. ‘ನಾವು ಕಿನ್ನರರಿದ್ದೇವೆ’ ಎನ್ನುವ ಗುರುತನ್ನು ಮರೆತ ಕೂಡಲೇ ವ್ಯಕ್ತಿ ಸಂತನಾಗುತ್ತಾನೆ. ಇದರಿಂದ ಕಿನ್ನರ ಸಮಾಜದ ಯಾವುದೇ ಒಬ್ಬ ಆಧ್ಯಾತ್ಮಿಕ ಅಧಿಕಾರಿ ವ್ಯಕ್ತಿ ಯಾವುದೇ ಆಖಾಡಾದಲ್ಲಿ ಸಹಭಾಗಿಯಾದಲ್ಲಿ ಅದರಲ್ಲಿ ಯಾವುದೇ ಆಧ್ಯಾತ್ಮಿಕ ಅಧಿಕಾರಿ ವ್ಯಕ್ತಿ ಯಾವುದೇ ಆಖಾಡಾದಲ್ಲಿ ಸಹಭಾಗಿಯಾದರೆ, ಅದನ್ನು ಯಾರೂ ಆಕ್ಷೇಪಿಸಲಾರರು; ಆದರೆ ಮೂಲದಲ್ಲಿ ಸದ್ಯದ ಕಿನ್ನರ ಆಖಾಡಾದ ಉದ್ದೇಶವೇ ಜನಾಕರ್ಷಣೆ ಮತ್ತು ಪ್ರಸಿದ್ಧಿಯನ್ನು ಅವಲಂಬಿಸಿದೆ. ಇಂತಹ ಕಿನ್ನರ ಅಖಾಡಾಕ್ಕೆ ನೂರಾರು ವರ್ಷಗಳ ಧರ್ಮಪಾಲನೆಯ ಪರಂಪರೆಯಿರುವ ಜುನಾ ಆಖಾಡಾದಲ್ಲಿ ಸಹಭಾಗಿಯನ್ನಾಗಿ ಮಾಡಿಕೊಳ್ಳುವುದು ದುರ್ದೈವವೇ ಆಗಿದೆ. ಇದರಿಂದ ಏನು ಸಾಧ್ಯವಾಗಲಿದೆಯೆನ್ನುವುದೇ ಪ್ರಶ್ನೆಯಾಗಿದೆ. ಈ ವಿಲೀನೀಕರಣದಿಂದ ಕಿನ್ನರ ಸಮಾಜ ಕಟ್ಟಾ ಹಿಂದೂ ಆಗಲಿದೆಯೇ ಅಥವಾ ಆಖಾಡಾಗಳ ಅಪಮೌಲ್ಯವಾಗುವುದೇ ? ಆಖಾಡಾದಲ್ಲಿ ಸಮಾವೇಶವಾಗುವುದಿದ್ದರೆ, ನೀವು ಸಾಧು-ಸಂತರು, ವೈರಾಗಿ ಅಥವಾ ಆಚಾರ್ಯರಾಗಿರುವುದು ಆವಶ್ಯಕವಾಗಿದೆ. ಸದ್ಯದ ಸ್ಥಿತಿಯಲ್ಲಿ ಬಹುತೇಕ ಕಿನ್ನರರು ಈ ವರ್ಗಕ್ಕೆ ಸೇರುವುದಿಲ್ಲ. ಹೀಗಿರುವಾಗ ಅವರ ಪ್ರತ್ಯೇಕ ಆಖಾಡಾ ಏತಕ್ಕಾಗಿ ? ಯಾವ ಜನರಿಗೆ ಧರ್ಮಕ್ಕಿಂತಲೂ ಹುದ್ದೆ, ಪ್ರಸಿದ್ಧಿ ದೊಡ್ಡದೆನಿಸುತ್ತದೆಯೋ ಹಾಗೂ ಅದಕ್ಕಾಗಿ ಧರ್ಮವನ್ನು ತ್ಯಜಿಸುವ ಎಚ್ಚರಿಕೆಯನ್ನು ನೀಡುತ್ತಾರೆಯೋ ಅವರನ್ನು ಧರ್ಮನಿಷ್ಠ ಹಿಂದೂ ಎಂದು ಹೇಗೆ ಹೇಳಬಹುದು ?
ಜನ್ಮದಿಂದ ಹಿಂದೂಗಳಾಗಿರುವ ಅನೇಕ ಕಿನ್ನರರು ಇಂದು ಇಸ್ಲಾಂನ ಹಿಡಿತದಲ್ಲಿದ್ದಾರೆ. ಅನೇಕ ಜನರು ನಮಾಜ ಮಾಡುತ್ತಾರೆ. ‘ಅವರು ಇಸ್ಲಾಂನ ಮಾರ್ಗದಲ್ಲಿ ಹೋಗಬಾರದು’ ಎಂದು ಜುನಾ ಆಖಾಡಾದ ಸಾಧು-ಸಂತರು ಪ್ರಾಮಾಣಿಕವಾಗಿ ಇಚ್ಛಿಸುತ್ತಿದ್ದರೆ, ಸ್ವತಂತ್ರ ಕಿನ್ನರ ಆಖಾಡಾಕ್ಕೆ ಮಾನ್ಯತೆ, ಮಹಾಮಂಡಲೇಶ್ವರ, ಮಹಂತ ಇತ್ಯಾದಿ ಉಪಾಧಿಗಳ ಭೌತಿಕ ಅಥವಾ ಧಾರ್ಮಿಕ ಆಮಿಷವನ್ನು ತೋರಿಸದೇ ಸಾಧು-ಸಂತರು ಈ ಸಮಾಜದ ಜನರಲ್ಲಿ ಧರ್ಮನಿಷ್ಠೆಯನ್ನು ಜಾಗೃತಗೊಳಿಸುವ ಕಾರ್ಯವನ್ನು ಮಾಡಬೇಕು. ಅರ್ಹತೆ ಮತ್ತು ಆಖಾಡಾದ ನಿಯಮಗಳಿಗನುಸಾರ ಆಖಾಡಾಗಳಲ್ಲಿ ಸಹಭಾಗಿಗಳನ್ನಾಗಿ ಮಾಡಿಕೊಳ್ಳಬೇಕು. ಸದ್ಯದ ಕಿನ್ನರರಿಂದ ಸನಾತನ ಧರ್ಮದರಕ್ಷಣೆಯ ಕಾರ್ಯ ಪ್ರಾಮಾಣಿಕವಾಗಿ ಸಾಧ್ಯವಾಗಲಿದೆಯೇ ಎನ್ನುವುದನ್ನು ಪರಿಶೀಲಿಸದೇ ಪ್ರವೇಶ ನೀಡಿದಲ್ಲಿ ಯಾವ ವೇಗದಿಂದ ಕಿನ್ನರ ಆಖಾಡಾ ಜುನಾ ಆಖಾಡಾದಲ್ಲಿ ಸಮಾವೇಶಗೊಂಡಿದೆಯೋ ಅದೇ ವೇಗದಿಂದ ಅದು ಹೊರಗೆ ಬರಲಾರದು ಅಥವಾ ಆಖಾಡಾ ವ್ಯವಸ್ಥೆಗೆ ಸುರಂಗ ಕೊರೆಯುವುದಿಲ್ಲ ಎಂದು ಹೇಗೆ ಹೇಳಬಹುದು?
ಇದು ಒಪ್ಪಿಗೆಯೇ ?
ಕಿನ್ನರ ಆಖಾಡಾದ ಮಹಾಮಂಡಲೇಶ್ವರ ತೃತೀಯ ಪಂಥಿಯ ಲಕ್ಷ್ಮೀನಾರಾಯಣ ತ್ರಿಪಾಠಿಯವರು ಸಲಿಂಗ ಸಂಬಂಧದ ಕಟ್ಟಾ ಬೆಂಬಲಿಗರಾಗಿದ್ದಾರೆ. ‘ಪ್ರತಿಯೊಬ್ಬ ಮಹಿಳೆಗೆ ರಾವಣನಂತಹ ಸಹೋದರನ ಆವಶ್ಯಕತೆಯಿದೆ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಸ್ತ್ರೀ-ಪುರುಷ ಸಮಾನತೆಯ ಹೆಸರಿನಲ್ಲಿ ಭಾರತೀಯ ಸಂಸ್ಕೃತಿಯನ್ನು ಅವರು ಅನೇಕ ಸಲ ಟೀಕಿಸಿದ್ದಾರೆ. ಅವರ ವೈಯಕ್ತಿಕ ಜೀವನವೂ ಹಿಂದೂ ಧರ್ಮಕ್ಕೆ ಅಪೇಕ್ಷಿತವಿರುವಂತೆ ಸಂಯಮದಿಂದ ಕೂಡಿರದೇ, ವೈಭವೋಪೇತವಾಗಿದೆ. ಸಾಮಾಜಿಕ ಜಾಲತಾಣದಲ್ಲಿರುವ ಅವರ ಛಾಯಾಚಿತ್ರದಿಂದಲೂ ಇದು ಕಂಡು ಬರುತ್ತದೆ. ಟ್ಯಾಟೂ, ಪಾಶ್ಚಾತ್ಯ ವೇಷ ಭೂಷಣಗಳನ್ನು ಗೌರವಿಸುವ ತ್ರಿಪಾಠಿಯವರು ಹಿಂದೂ ಧರ್ಮದ ಕಾರ್ಯವನ್ನು ಹೇಗೆ ಮಾಡುವರು ? ಈ ಆಖಾಡಾದ ಸಂಸ್ಥಾಪಕರಾದ ಅಜಯ ದಾಸ ಇವರು ‘ವಿವಾಹ : ಒಂದು ನೈತಿಕ ಬಲಾತ್ಕಾರ’ ಹೆಸರಿನ ವಿವಾದಿತ ಪುಸ್ತಕವನ್ನು ಬರೆದಿದ್ದಾರೆ. ಇಂತಹ ವ್ಯಕ್ತಿ ಯಾವ ಆಖಾಡಾದ ಪ್ರಮುಖರಾಗಿದ್ದಾರೆಯೋ ಆ ಆಖಾಡಾದಿಂದ ಸನಾತನ ಹಿಂದೂ ಧರ್ಮದ ಉತ್ಥಾನದ ಕಾರ್ಯವಾಗುವುದೋ ಅಥವಾ ಅವನತಿಯಾಗಲಿದೆಯೇ ಎನ್ನುವುದನ್ನು ಹೇಳಲು ಯಾವುದೇ ತಜ್ಞರ ಅವಶ್ಯಕತೆಯಿಲ್ಲ. ಒಟ್ಟಾರೆ ಕಿನ್ನರ ಆಖಾಡಾದ ನಿರ್ದೇಶನವೇ ಸನಾತನ ಹಿಂದೂ ಧರ್ಮದಲ್ಲಿ ಮಾನ್ಯತೆಯಿಲ್ಲದಿರುವ ತತ್ತ್ವಗಳ ಮೇಲೆ ನಡೆಯುತ್ತಿದೆ. ಕಿನ್ನರರಿಗೆ ಧಾರ್ಮಿಕ ಸಾಧುಗಳೆಂದು ಸೇರ್ಪಡೆಗೊಳಿಸಿಕೊಳ್ಳುವ ಜುನಾ ಆಖಾಡಾದ ಸಂತ-ಮಹಂತರಿಗೆ ಹಾಗೆಯೇ ಆಖಾಡಾ ಪರಿಷತ್ತಿಗೆ ಕಿನ್ನರ ಆಖಾಡಾ ಪ್ರಮುಖರ ವಿಚಾರ ಒಪ್ಪಿಗೆ ಇದೆಯೇ ? ಕೇವಲ ಇತರ ಪಂಥಗಳಿಗೆ ಹೋಗಬಾರದು ಎಂದು ಹಿಂದೂ ಧರ್ಮದಲ್ಲಿ ನಿರುಪಯುಕ್ತರ ಸಂಖ್ಯೆಯನ್ನು ಹೆಚ್ಚಿಸುವುದರಿಂದ ಹಿಂದೂ ಧರ್ಮದ ಶಕ್ತಿ ಹೆಚ್ಚಾಗುವುದೇ ? ಇದರ ಉತ್ತರ ಮಹಾಭಾರತದಲ್ಲಿ ಸಿಗುತ್ತದೆ. ಧರ್ಮಯುದ್ಧದಲ್ಲಿ ಸಂಖ್ಯಾಬಲದಿಂದಲ್ಲ ಆಧ್ಯಾತ್ಮಿಕ ಬಲ ಮತ್ತು ಈಶ್ವರ ಭಕ್ತಿಯೇ ಜಯಶಾಲಿಯಾಗುತ್ತದೆ. ಕಿನ್ನರ ಪ್ರಕರಣದಲ್ಲಿ ಪ್ರಸ್ತಾಪಿತ ಆಖಾಡಾಗಳ ಲೆಕ್ಕಾಚಾರ ತಪ್ಪಿದೆಯೆಂದು ಹೇಳಬೇಕಾಗಿದೆ.
– ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ.