ಘಂಟಾನಾದದ ಮಹತ್ವ

ಘಂಟಾನಾದದ ಮಹತ್ವ

ಘಂಟೆಯ ಕೋಲು ಮತ್ತು ಘಂಟೆಯ ವಿಶಿಷ್ಟ ಆಕಾರದಿಂದಾಗಿ ಭೂಮಿಲಹರಿಗಳು ಘಂಟೆಯ ಕೋಲಿನತ್ತ ಆಕರ್ಷಿತವಾಗುತ್ತವೆ ಮತ್ತು ಈ ಭೂಮಿಲಹರಿಗಳು ಘಂಟೆಯ ವಿಶಿಷ್ಟ ಆಕಾರದಲ್ಲಿ ಘನೀಕರಣಗೊಳ್ಳುತ್ತವೆ. ಘಂಟೆಯ ನಾದವನ್ನು ಮಾಡಿದಾಗ ಘಂಟೆಯಲ್ಲಿ ಘನೀಕರಣವಾದ ವಾಯುಮಂಡಲದಲ್ಲಿನ ಲಹರಿಗಳು ಕಂಪನಗೊಳ್ಳುತ್ತವೆ ಮತ್ತು ಇದರಿಂದ ಉತ್ಪನ್ನವಾದ ನಾದ ಶಕ್ತಿಯ ಕಡೆಗೆ ಬ್ರಹ್ಮಾಂಡದಲ್ಲಿನ ಶಿವತತ್ತ್ವವು ಆಕರ್ಷಿತವಾಗುತ್ತದೆ. ಶಿವತತ್ತ್ವದೊಂದಿಗೆ ಸಂಬಂಧಿತ ಈ ರಜೋಗುಣಯುಕ್ತ ಮಾರಕ ನಾದಲಹರಿಗಳು ಪಾತಾಳದಿಂದ ಹರಡುವ ತೊಂದರೆದಾಯಕ ಲಹರಿಗಳಲ್ಲಿನ ರಜ-ತಮ ಕಣಗಳನ್ನು ವಿಘಟಿಸುತ್ತವೆ.

ಘಂಟೆಯ ನಾದದಿಂದ ಭೂಮಿಗೆ ಸಮೀಪದ ಅಧೋಗಾಮಿ ದಿಶೆಯಲ್ಲಿ ಕಾರ್ಯನಿರತವಾಗಿರುವ ವಾಯುಮಂಡಲದ ಶುದ್ಧೀಕರಣವಾಗುತ್ತದೆ. ಶಂಖನಾದದಿಂದ ಊರ್ಧ್ವದಿಶೆಯಲ್ಲಿ ಕಾರ್ಯಮಾಡುವ ವಾಯುಮಂಡಲದಲ್ಲಿನ ಲಹರಿಗಳ ಶುದ್ಧೀಕರಣವಾಗುತ್ತದೆ. ಆದುದರಿಂದ ಪೂಜಾವಿಧಿಯಲ್ಲಿ ಶಂಖನಾದಕ್ಕೆ ಹಾಗೂ ಘಂಟಾನಾದಕ್ಕೆ ಬಹಳ ಮಹತ್ವವಿದೆ. ಘಂಟೆಯ ನಾದದಿಂದ ಹಾಗೂ ಶಂಖನಾದದಿಂದ ಜೀವದ ಸುತ್ತಲಿರುವ ವಾಯುಮಂಡಲವು ಜೀವದ ಸಾಧನೆಗಾಗಿ ಸಾತ್ತ್ವಿಕವಾಗುತ್ತದೆ. ಇದರಿಂದ ದೇವತೆಗಳಿಂದ ಬರುವ ಸಾತ್ತ್ವಿಕ ಲಹರಿಗಳನ್ನು ಜೀವವು ಅತ್ಯಧಿಕ ಪ್ರಮಾಣದಲ್ಲಿ ಗ್ರಹಿಸುತ್ತದೆ.
– ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧.೧.೨೦೦೫, ಮಧ್ಯಾಹ್ನ ೧.೪೩)

ಘಂಟೆಯ ನಾದ ಮಾಡುವಾಗ ಆಗುವ ಸೂಕ್ಷ್ಮದಲ್ಲಿನ ಲಾಭಗಳನ್ನು ತೋರಿಸುವ ಚಿತ್ರ

ghanta.jpg

ಇತರ ಅಂಶಗಳು

೧. ಈಶ್ವರನ ಪೂಜೆಯಲ್ಲಿ ಆಕರ್ಷಿಸುವ ಸ್ಪಂದನಗಳು ನಿರ್ಗುಣ ಸ್ವರೂಪದಲ್ಲಿರುತ್ತವೆ. ಘಂಟೆಯ ನಾದದಿಂದಾಗಿ ದೇವತೆಯ ಈ ಸ್ಪಂದನಗಳು ಸಗುಣ-ನಿರ್ಗುಣ ಸ್ವರೂಪದಲ್ಲಿ ಬರುತ್ತವೆ ಮತ್ತು ಈ ಸ್ಪಂದನಗಳು ಭಕ್ತರಿಗೆ ದೊರಕುತ್ತವೆ.

೨. ವಾತಾವರಣದಲ್ಲಿನ ಕೆಟ್ಟ ಶಕ್ತಿಗಳು ನಿರ್ಮಿಸಿದ ಕಪ್ಪು ಶಕ್ತಿಯ ಮೋಡಗಳು ಘಂಟೆಯ ನಾದದಿಂದ ದೂರವಾಗುತ್ತವೆ. ಹಾಗೆಯೇ ಸೂರ್ಯಪ್ರಕಾಶದಂತೆ ಚೈತನ್ಯದ ಕಿರಣವು ಭಕ್ತರೆಡೆಗೆ ಬರುತ್ತದೆ.

೩. ಘಂಟೆಯನ್ನು ಅಲುಗಾಡಿಸಿದುದರಿಂದ ವಾಯುತತ್ತ್ವ ಮತ್ತು ಅದರ ನಾದದಿಂದ ಆಕಾಶತತ್ತ್ವ ಕಾರ್ಯನಿರತವಾಗುತ್ತದೆ.

೪. ಘಂಟೆಯ ನಾದದಿಂದ ‘ಣಂ’ ಎಂಬ ಬೀಜಮಂತ್ರವು ಕೇಳಿಸುತ್ತದೆ.

೫. ವ್ಯಕ್ತಿಯು ಘಂಟೆಯನ್ನು ಭಾವಪೂರ್ಣವಾಗಿ ಬಾರಿಸಿದರೆ ಅದರಿಂದ ಸತ್ತ್ವಪ್ರಧಾನ ಸ್ಪಂದನಗಳು ಪ್ರಕ್ಷೇಪಿಸುತ್ತವೆ ಮತ್ತು ಭಾವಪೂರ್ಣವಾಗಿ ಬಾರಿಸದಿದ್ದರೆ ಸತ್ತ್ವ-ಪ್ರಧಾನ ಘಂಟೆಯಿಂದಲೂ ರಜೋಗುಣಿ ಸ್ಪಂದನಗಳು ಪ್ರಕ್ಷೇಪಿಸಬಹುದು.

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆ ನಿರ್ಮಿಸಿದ ಕಿರುಗ್ರಂಥ ‘ದೇವರಕೋಣೆ ಮತ್ತು ಪೂಜೆಯ ಉಪಕರಣಗಳು’)

2 thoughts on “ಘಂಟಾನಾದದ ಮಹತ್ವ”

  1. ಪ್ರಾತಃ ಕಾಲದಲ್ಲಿ ಏಳುವ ಅಭ್ಯಾಸ ಬಲದಿಂದ ಮನೋಬಲ, ಜ್ಞಾನ ಬಲ, ಇಚ್ಛಾ ಬಲಗಳು ಸಧೃಡವಾಗುತ್ತದೆ. ಇಡೀ ವಾತಾವರಣವು ಧನಾತ್ಮಕ ,ರಚನಾತ್ಮಕ ಶಕ್ತಿಯ ಕೇಂದ್ರವಾಗಿರುತ್ತದೆ. ಕಾರಣ ದೇವತೆಗಳ ಸಂಚಾರ ಹೇರಳವಾಗಿರುತ್ತದೆ. ಇಡೀ ಪ್ರಕೃತಿ ಶುದ್ಧವಾಗಿರುತ್ತದೆ. ಈ ಸಮಯದಲ್ಲಿ ವೃಕ್ಷ ಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಪ್ರಾಣವಾಯು (oxygen ) ಬಿಡುಗಡೆಯಾಗುತ್ತದೆ. ಹಾಗಾಗಿ ವಾತಾವರಣ ತಂಪಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಪೂಜಾ ವಿಧಿ ಕಾರ್ಯಕ್ರಮಗಳನ್ನು ಕೈಗೊಂಡು ದೇವತೆಗಳನ್ನು ಸಂಪನ್ನಗೊಳಿಸಿದಲ್ಲಿ ಕಾರ್ಯಸಿದ್ದಿಯಾಗುತ್ತದೆ.

    ದೇವತೆಗಳ ಜೊತೆ ನೇರ ಸಂವಹನ ನಡೆಸಲಾಗದು. ತನ್ಮೂಲಕ ಮನದ ಭಕ್ತಿಯನ್ನು ,ಮನೋ ನುಡಿಗಳನ್ನು ಶಂಖನಾದದ ಮೂಲಕ ತಲುಪಿಸುವುದು, ಅನಿಷ್ಟ ಕಾರಕಗಳನ್ನು ನಿರ್ನಾಮ ಮಾಡುವುದು , ಕೋಟ್ಯಾಂತರ ರೋಗ ಕಾರಕ ಸೂಕ್ಷ್ಮ ಜೀವಿಗಳನ್ನು ಕಂಪನಗಳ ಮೂಲಕ ಚದುರಿಸುವುದು , ಜಿಡ್ಡುಗಟ್ಟಿದ ಇಚ್ಛಾ ಶಕ್ಕಿಗಳನ್ನು ಕ್ರಿಯಾಶೀಲಗೊಳಿಸುವ ಇನ್ನು ಹತ್ತು ಹಲವು ಕಾರ್ಯಗಳಿಗಾಗಿ ಮಾಡಲಾಗುತ್ತದೆ. ಕೃಷ್ಣ ಪರಮಾತ್ಮನು ತನ್ನ ಪಾಂಚಜನ್ಯ ಮೊಳಗಿಸಿದ್ದು ಜೀವ ವರ್ಗವನ್ನು ಸನ್ಮಾರ್ಗದತ್ತ ಕೊಂಡೊಯ್ಯಲು. ವಾತಾವರಣದಲ್ಲಿ ದುಷ್ಟ ಜೀವಿಗಳಿಂದ ಉತ್ತಮ ಜೀವಿಗಳಿಗೆ ತೊಂದರೆಯಾದಾಗ , ಆ ಅನಿಷ್ಟ ಜೀವಿಗಳ ಸಂಹಾರ ನಿಶ್ಚಿತವಾಗಿ ಆಗಿಯೇ ತೀರುತ್ತದೆ ಎಂಬುದರ ಸಂಕೇತವದು. ಪಾಂಚಜನ್ಯವನ್ನು ಯಾವಾಗಲೂ ಬಳಸುತ್ತಿದ್ದಿಲ್ಲ. ಕೇವಲ ಧರ್ಮ ರಕ್ಷಣೆಯ ವಿಚಾರಕ್ಕೆ ಮಾತ್ರ ಸೀಮಿತವಾಗಿತ್ತು. ಅದು ಯುದ್ಧದ ಸಮಾರಂಭದಲ್ಲಿಯೂ ಬಳಕೆಯಾಗುತ್ತಿತ್ತು. ಯುದ್ಧದಲ್ಲಿ ಎರೆಡೂ ಬದಿಯಲ್ಲಿಯೂ ಸಾವು-ನೋವು ಸಂಭವಿಸುತ್ತಿತ್ತು. ಅಲ್ಲಿ ದುಷ್ಟ ಶಕ್ತಿಗಳು ಮಾತ್ರವೇ ಅಳಿದು ಸಜ್ಜನ ರಕ್ಷಣೆ ಆಗುತ್ತಿತ್ತು. ದುಷ್ಟ ಶಕ್ತಿಯ ಪರ ನಿಂತವರು ಎಷ್ಟೇ ಒಳ್ಳೆಯವರಾಗಿದ್ದರೂ , ಬೆಂಬಲಿಸಿದ ಕಾರಣ ಹತರಾಗದೇ ನುಣುಚಿಕೊಳ್ಲಲಾಗುತ್ತಿರಲಿಲ್ಲ. ಅದಕ್ಕಾಗಿ ಶಂಖನಾದ ಮಹತ್ವ ಪಡೆದಿದೆ. ಅದರ ಶಬ್ದ , ಕಂಪನದ ತೀವ್ರತೆ ದುಷ್ಟ ಜೀವಿಗಳು ತಿದ್ದಿಕೊಳ್ಳಲು ಸಮಯದ ಗಡುವನ್ನು ಕೊಡುತ್ತದೆ. ಅಲ್ಲಿಗೂ ಬದಲಾವಣೆ ಆಗದಿದ್ದಾಗ ಅದಕ್ಕೆ ಪೂರಕ ಪ್ರತಿಕ್ರಿಯೆ ನೀಡುತ್ತದೆ.

    ನಮ್ಮ ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ಮೊಳಗಿಸಲಾಗುವುದು. ಜೊತೆಗೆ ಶ್ವಾಸಕೋಶದ ಶುದ್ದಿ, ಪ್ರಾಣ ವಾಯುವನ್ನು ಜಾಗೃತಗೊಳಿಸುವುದು ಒಂದು ಅಂಶವಾಗಿದೆ.

    Reply

Leave a Comment