ಸುಖದಾಯಕ (ಶಾಂತ) ನಿದ್ರೆಯನ್ನು ಹೇಗೆ ಪಡೆಯಬೇಕು ?

ಸುಖದಾಯಕ (ಶಾಂತ) ನಿದ್ರೆಯನ್ನು ಹೇಗೆ ಪಡೆಯಬೇಕು ?

೧. ಮಲಗುವ ಕೋಣೆಯಲ್ಲಿ ಸಂಪೂರ್ಣ ಕತ್ತಲೆಯನ್ನು ಮಾಡಿ ಮಲಗಬೇಡಿರಿ.

೨. ಮಲಗುವಾಗ ಹಾಸಿಗೆಯ ಸುತ್ತಲೂ ದೇವತೆಗಳ ಸಾತ್ತ್ವ್ವಿಕ ನಾಮಪಟ್ಟಿಗಳ ಮಂಡಲವನ್ನು ಹಾಕಿರಿ. (ಇಂತಹ ಸಾತ್ತ್ವ್ವಿಕ ನಾಮಪಟ್ಟಿಗಳು ಸನಾತನದ ಮಾರಾಟ ಕೇಂದ್ರಗಳಲ್ಲಿ ಲಭ್ಯ !)

೩. ದಿನವಿಡೀ ನಮ್ಮಿಂದಾದ ತಪ್ಪುಗಳ/ಅಪರಾಧಗಳ ಬಗ್ಗೆ ದೇವರಲ್ಲಿ ಕ್ಷಮೆ ಯಾಚಿಸಿರಿ.

೪. ಉಪಾಸ್ಯದೇವತೆಗೆ, ‘ನಿನ್ನ ಸಂರಕ್ಷಣಾ-ಕವಚವು ನನ್ನ ಸುತ್ತಲೂ ಸತತವಾಗಿರಲಿ ಮತ್ತು ನಿದ್ರೆಯಲ್ಲಿಯೂ ನನ್ನ ನಾಮಜಪ ಅಖಂಡವಾಗಿ ನಡೆಯಲಿ ಎಂದು ಪ್ರಾರ್ಥನೆ ಮಾಡಿರಿ.

೫. ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಮತ್ತು ಆದಷ್ಟು ಎಡಮಗ್ಗುಲಾಗಿ ಮಲಗಿರಿ.

೬. ಅಂಕುಡೊಂಕಾಗಿ, ಅಂಗಾತ, ದಕ್ಷಿಣದಿಕ್ಕಿಗೆ ಕಾಲು ಮಾಡಿ ಹಾಗೂ ದೇವರ ಎದುರು ಅತೀ ಸಮೀಪ ಮಲಗಬೇಡಿರಿ.

೭. ಮಲಗುವಾಗ ಚಿತ್ರಗೀತೆಗಳನ್ನು ಕೇಳಬೇಡಿ, ನಾಮಜಪ ಅಥವಾ ಸಂತರು ಹಾಡಿದ ಭಜನೆಗಳನ್ನು ಕೇಳಿ.

ನಿದ್ದೆಗೆ ಸಂಬಂಧಿಸಿದಂತೆ ಧರ್ಮಗ್ರಂಥಗಳಲ್ಲಿ ಇನ್ನೇನು ಹೇಳಲಾಗಿದೆ?

 

ಉಷಃಕಾಲದಲ್ಲಿ ಎದ್ದು ಸಾಧನೆಯನ್ನು ಮಾಡುವ ಮಹತ್ವವೇನು ?

ಉಷಃಕಾಲ ಅಥವಾ ಪ್ರಾತಃಕಾಲ ಎಂದರೆ ಸೂರ್ಯೋದಯಕ್ಕಿಂತ ಮುಂಚಿನ ೫ ಘಳಿಗೆಗಳು. ಉಷಃಕಾಲವು ಸಾತ್ತ್ವಿಕ ಲಹರಿಗಳು ಭೂಮಿಯ ಮೇಲೆ ಬರುವ ಕಾಲವಾಗಿರುತ್ತದೆ. ಈ ಸಮಯದಲ್ಲಿ ಅನೇಕ ದೇವತೆಗಳು ಗಂಧರೂಪದಲ್ಲಿ ಭೂಮಿಯ ಮೇಲೆ ಬರುತ್ತಿರುತ್ತಾರೆ. ಇಂತಹ ಸಮಯದಲ್ಲಿ ಜೀವವು ಸಾಧನೆಯನ್ನು ಮಾಡದೇ ಮಲಗಿಕೊಂಡಿದ್ದರೆ ಅದು ಅನೇಕ ಕನಿಷ್ಟ ದೇವತೆಗಳ ಕೋಪಕ್ಕೆ ಬಲಿಯಾಗುವ ಸಾಧ್ಯತೆಯಿರುತ್ತದೆ. ಏಕೆಂದರೆ ಮಲಗಿಕೊಂಡಿರುವುದರಿಂದ ಜೀವದ ದೇಹವು ಪಾತಾಳದಿಂದ ಬರುವ ತೊಂದರೆದಾಯಕ ಸ್ಪಂದನಗಳಿಂದ ತುಂಬಿರುವುದರಿಂದ ಅದು ವಾಯುಮಂಡಲದಲ್ಲಿ ರಜ-ತಮ ಕಣಗಳ ಪ್ರಕ್ಷೇಪಣೆಯನ್ನು ಮಾಡಿ ಸಾತ್ತ್ವಿಕ ಲಹರಿಗಳ ಆಗಮನಕ್ಕೆ ತೊಂದರೆಗಳನ್ನು ತರುವ ಸಾಧ್ಯತೆಯಿರುತ್ತದೆ. ಆದುದರಿಂದ ದೇವತೆಗಳ ಚೈತನ್ಯದ ಲಾಭವನ್ನು ಪಡೆದುಕೊಳ್ಳಲು ಉಷಃಕಾಲದಲ್ಲಿ ಎದ್ದು ಸಾಧನೆಯನ್ನು ಮಾಡಬೇಕು ಎಂದು ಧರ್ಮಶಾಸ್ತ್ರಗಳಲ್ಲಿ ಹೇಳಲಾಗಿದೆ.

ಹಗಲಿನಲ್ಲಿ ಏಕೆ ಮಲಗಬಾರದು

ರಾತ್ರಿಯದಲ್ಲಿ ವಾತಾವರಣದಲ್ಲಿ ಕೆಟ್ಟಶಕ್ತಿಗಳ ಸಂಚಾರವು ಹೆಚ್ಚಾಗಿರುವುದರಿಂದ ಸಾಧನೆಗೆ ಈ ಸಮಯವು ಪ್ರತಿಕೂಲವಾಗಿರುತ್ತದೆ. ಈ ಸಮಯವು ಮಾಂತ್ರಿಕರಿಗೆ (ಮಾಂತ್ರಿಕರು ಎಂದರೆ ಪಾತಾಳದಲ್ಲಿನ ಬಲಾಢ್ಯ ಆಸುರೀ ಶಕ್ತಿಗಳು) ಪೂರಕವಾಗಿರುತ್ತದೆ. ಆದುದರಿಂದ ಎಲ್ಲ ಮಾಂತ್ರಿಕರು ಈ ತಮಕಾಲದಲ್ಲಿ ಸಾಧನೆಯನ್ನು ಮಾಡುತ್ತಾರೆ. ಇದಕ್ಕೆ ವಿರುದ್ಧವಾಗಿ ಸಾತ್ತ್ವಿಕ ಜೀವಗಳು ಸಾತ್ತ್ವಿಕ ಕಾಲದಲ್ಲಿ (ಹಗಲಿನಲ್ಲಿ) ಸಾಧನೆಯನ್ನು ಮಾಡುತ್ತವೆ. ದಿನದಲ್ಲಿ ಆದಷ್ಟು ಹೆಚ್ಚು ಸಾಧನೆಯನ್ನು ಮಾಡಿ, ಆ ಸಾಧನೆಯ ಬಗ್ಗೆ ರಾತ್ರಿಯ ಸಮಯದಲ್ಲಿ ಚಿಂತನೆಯನ್ನು ಮಾಡುವುದು ಮತ್ತು ದಿನವಿಡೀ ಆದ ತಪ್ಪುಗಳನ್ನು ಸುಧಾರಿಸುವ ಸಂಕಲ್ಪ ಮಾಡಿ, ಮತ್ತೊಮ್ಮೆ ಮರುದಿನ ಪರಿಪೂರ್ಣ ಸಾಧನೆಯನ್ನು ಮಾಡಲು ಪ್ರಯತ್ನಿಸುವುದೇ ಈಶ್ವರನಿಗೆ ಅಪೇಕ್ಷಿತವಾಗಿರುತ್ತದೆ. ಆದುದರಿಂದ ಹಗಲು ಹೊತ್ತಿನಲ್ಲಿ ಮಲಗುವುದನ್ನು ಬಿಡಬೇಕು.

(ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಯನ್ನು ಸನಾತನದ ‘ಆಚಾರಧರ್ಮ ಗ್ರಂಥಮಾಲಿಕೆಯ ‘ಶಾಂತ ನಿದ್ರೆಗಾಗಿ ಏನು ಮಾಡಬೇಕು? ಮತ್ತು ‘ಸ್ನಾನದ ಮೊದಲಿನ ಆಚಾರಗಳ ಶಾಸ್ತ್ರ್ರ’ ಎಂಬ ಗ್ರಂಥಗಳಲ್ಲಿ ನೀಡಲಾಗಿದೆ.)

Leave a Comment