ಶ್ರೀ ದತ್ತ ಜಯಂತಿ

ದತ್ತಜಯಂತಿಯ ಮಹತ್ವ

ಇದು ಒಂದು ಸಾಂಪ್ರದಾಯಿಕ ಜನ್ಮೋತ್ಸವ. ಮಾರ್ಗಶಿರ ಹುಣ್ಣಿಮೆಯಂದು ಮೃಗಶಿರಾ ನಕ್ಷತ್ರದಲ್ಲಿ ಸಾಯಂಕಾಲ ದತ್ತನ ಜನ್ಮವಾಯಿತು, ಆದುದರಿಂದ ಆ ದಿನ ದತ್ತನ ಜನ್ಮೋತ್ಸವವನ್ನು ಎಲ್ಲ ದತ್ತಕ್ಷೇತ್ರಗಳಲ್ಲಿ ಆಚರಿಸಲಾಗುತ್ತದೆ.

ದತ್ತಜಯಂತಿಯಂದು ಪೃಥ್ವಿಯ ಮೇಲೆ ದತ್ತತತ್ತ್ವವು ನಿತ್ಯದ ತುಲನೆಯಲ್ಲಿ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ದಿನ ಮನಃಪೂರ್ವಕ ದತ್ತನ ನಾಮಜಪಾದಿ ಉಪಾಸನೆಯನ್ನು ಮಾಡಿದರೆ ದತ್ತತತ್ತ್ವದ ಆದಷ್ಟು ಹೆಚ್ಚು ಲಾಭವಾಗಲು ಸಹಾಯವಾಗುತ್ತದೆ.

 

 

ಜನ್ಮೋತ್ಸವವನ್ನು ಆಚರಿಸುವುದು

ದತ್ತಜಯಂತಿಯನ್ನು ಆಚರಿಸುವ ಸಂದರ್ಭದಲ್ಲಿ ಶಾಸ್ತ್ರೋಕ್ತ ವಿಶಿಷ್ಟ ವಿಧಿವಿಧಾನಗಳು ಕಂಡುಬರುವುದಿಲ್ಲ. ಈ ಉತ್ಸವದ ಮೊದಲು ಏಳು ದಿನಗಳ ವರೆಗೆ ಗುರುಚರಿತ್ರೆಯ ಪಾರಾಯಣವನ್ನು ಮಾಡುವ ಪದ್ಧತಿಯಿದೆ. ಇದಕ್ಕೆ ಗುರುಚರಿತ್ರಸಪ್ತಾಹ ಎನ್ನುತ್ತಾರೆ. ಭಜನೆ, ಪೂಜೆ ಮತ್ತು ವಿಶೇಷವಾಗಿ ಕೀರ್ತನೆ ಇತ್ಯಾದಿ ಭಕ್ತಿಯ ವಿಧಗಳು ಪ್ರಚಲಿತವಾಗಿವೆ. ಮಹಾರಾಷ್ಟ್ರದಲ್ಲಿ ಔದುಂಬರ, ನರಸೋಬಾನ ವಾಡಿ, ಗಾಣಗಾಪುರ ಇತ್ಯಾದಿ ದತ್ತಕ್ಷೇತ್ರಗಳಲ್ಲಿ ಈ ಉತ್ಸವಕ್ಕೆ ವಿಶೇಷ ಮಹತ್ವವಿದೆ. ತಮಿಳುನಾಡಿನಲ್ಲಿಯೂ ದತ್ತಜಯಂತಿಯ ರೂಢಿಯಿದೆ. ಕೆಲವು ಬ್ರಾಹ್ಮಣ ಕುಟುಂಬದಲ್ಲಿ ಈ ಉತ್ಸವದ ನಿಮಿತ್ತ ದತ್ತನವರಾತ್ರಿಯನ್ನು ಪಾಲಿಸಲಾಗುತ್ತದೆ ಮತ್ತು ಅದು ಮಾರ್ಗಶಿರ ಶುಕ್ಲ ಅಷ್ಟಮಿ ಯಿಂದ ಆರಂಭವಾಗುತ್ತದೆ.

ನಿತ್ಯಕ್ರಮಗಳು

೧. ನಿವಾಸ: ಮೇರುಶಿಖರ
೨. ಪ್ರಾತಃಸ್ನಾನ:ವಾರಾಣಸಿ (ಗಂಗಾತೀರ)
೩. ಆಚಮನ: ಕುರುಕ್ಷೇತ್ರ
೪. ಚಂದನ ಲೇಪವನ್ನು ಹಚ್ಚಿಕೊಳ್ಳುವುದು:ಪ್ರಯಾಗ (ಅಪವಾದ – ತಿಲಕ ಹಚ್ಚಿಕೊಳ್ಳುವುದು : ಪಂಢರಾಪುರ)
೫. ಪ್ರಾತಃಸಂಧ್ಯೆ: ಕೇದಾರ
೬. ವಿಭೂತಿಗ್ರಹಣ: ಕೇದಾರ
೭.  ಧ್ಯಾನ: ಗಂಧರ್ವಪತ್ತನ (ಅಪವಾದ – ಯೋಗ: ಗಿರನಾರ, ಸೌರಾಷ್ಟ್ರ, ಗುಜರಾತ.)
೮. ಮಧ್ಯಾಹ್ನದ ಭಿಕ್ಷೆ: ಕೊಲ್ಹಾಪುರ (ಮಹಾರಾಷ್ಟ್ರ)
೯. ಮಧ್ಯಾಹ್ನದ ಭೋಜನ: ಪಾಂಚಾಳೇಶ್ವರ, ಬೀಡ್ ಜಿಲ್ಲೆ, ಮಹಾರಾಷ್ಟ್ರ ಗೋದಾವರಿಯ ತೀರದಲ್ಲಿ.
೧೦. ತಾಂಬೂಲ ಭಕ್ಷಣ: ರಾಕ್ಷಸಭುವನ, ಬೀಡ್ ಜಿಲ್ಲೆ, ಮರಾಠವಾಡಾ.
೧೧. ವಿಶ್ರಾಂತಿ: ರೈವತ ಪರ್ವತ
೧೨. ಸಾಯಂಕಾಲದ ಸಂಧ್ಯೆ: ಪಶ್ಚಿಮ ಸಾಗರ
೧೩. ಪುರಾಣಶ್ರವಣ: ನರನಾರಾಯಣಾಶ್ರಮ (ಅಪವಾದ – ಪ್ರವಚನ ಮತ್ತು ಕೀರ್ತನೆಗಳನ್ನು ಕೇಳುವುದು: ನೈಮಿಷಾರಣ್ಯ, ಬಿಹಾರ್)
೧೪. ನಿದ್ರೆ: ಮಾಹೂರಗಡ (ಅಪವಾದ – ಸಹ್ಯ ಪರ್ವತ, ನಾಂದೇಡ ಜಿಲ್ಲೆ) ಇವುಗಳ ಪೈಕಿ ೨, ೮ ಮತ್ತು ೧೪ನೆಯ ಸ್ಥಾನಗಳು ಪ್ರಸಿದ್ಧವಾಗಿವೆ.

ಮೃತದೇಹವನ್ನು ಸ್ಮಶಾನಕ್ಕೆ ಒಯ್ಯುವಾಗ ಅಂತ್ಯಯಾತ್ರೆಯಲ್ಲಿ ಪಾಲ್ಗೊಂಡವರು ದೊಡ್ಡ ಸ್ವರದಲ್ಲಿ ‘ಶ್ರೀ ಗುರುದೇವ ದತ್ತ|’ ಎಂಬ ನಾಮಜಪವನ್ನು ಏಕೆ ಮಾಡಬೇಕು?
‘ಪೂರ್ವಜರಿಗೆ ಗತಿ (ಮುಕ್ತಿ) ಕೊಡುವುದು’, ದತ್ತತತ್ತ್ವದ ಕಾರ್ಯವೇ ಆಗಿರುವುದರಿಂದ ದತ್ತನ ನಾಮಜಪದಿಂದ ಕಡಿಮೆ ಕಾಲಾವಧಿಯಲ್ಲಿ ಲಿಂಗದೇಹಕ್ಕೆ, ಹಾಗೆಯೇ ವಾತಾವರಣಕಕ್ಷೆಯಲ್ಲಿ ಸಿಲುಕಿ ಕೊಂಡಿರುವ ಅದರ ಇತರ ಪೂರ್ವಜರಿಗೆ ಗತಿಯು ಸಿಗುತ್ತದೆ.
– ಶ್ರೀ ಗುರುತತ್ತ್ವ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೪.೬.೨೦೦೫, ಮಧ್ಯಾಹ್ನ ೩.೫೦)

(ಹೆಚ್ಚಿನ ಮಾಹಿತಿಗಾಗಿ ಓದಿ – ಸನಾತನದ ಗ್ರಂಥ ‘ದತ್ತ’)

 

1 thought on “ಶ್ರೀ ದತ್ತ ಜಯಂತಿ”

Leave a Comment