ದ್ವಾಪರಯುಗದ ಶ್ರೀವಿಷ್ಣುವಿನ ಬುದ್ಧಾವತಾರ ಮತ್ತು ಪ್ರತ್ಯೇಕ ಧರ್ಮಸ್ಥಾಪನೆ ಮಾಡಿದ ಬುದ್ಧ !

೧. ಪ್ರತ್ಯೇಕವಾದ ಧರ್ಮಸ್ಥಾಪನೆ ಮಾಡಿದ ಬುದ್ಧ

ಅ. ಪ್ರತ್ಯೇಕವಾದ ಧರ್ಮಸ್ಥಾಪನೆ ಮಾಡಿದ ಬುದ್ಧನು ಅವತಾರವಾಗಿರದೇ ಅವರು ಧ್ಯಾನ ಮಾರ್ಗದ ಸಂತರಾಗಿದ್ದರು.

ಆ. ಬುದ್ಧನು ತಿಳಿಸಿದ ತತ್ತ್ವಜ್ಞಾನವನ್ನು ಅವನ ಅನುಯಾಯಿಗಳು ಬೌದ್ಧಧರ್ಮ ಅಥವಾ ಬುದ್ಧನ ತತ್ತ್ವಜ್ಞಾನ ಎಂಬ ರೂಪದಲ್ಲಿ ಮಂಡಿಸಿದರು.

ಇ. ಆ ಕಾಲದಲ್ಲಿ ಕೆಲವು ಅರ್ಧಂಬರ್ಧ ಜ್ಞಾನವಿರುವ ವಿದ್ವಾಂಸರು ಈ ಬುದ್ಧನು ಶ್ರೀವಿಷ್ಣು ವಿನ ಅವತಾರವೇ ಆಗಿರುವುದಾಗಿ ಪ್ರಚಾರ ಮಾಡಿದರು. ಇದರಿಂದ ಹಿಂದೂಗಳು ಈ ಬೌದ್ಧ ತತ್ತ್ವಜ್ಞಾನ ದೆಡೆಗೆ ಹೊರಳತೊಡಗಿದರು.

೨. ದ್ವಾಪರಯುಗದ ಶ್ರೀವಿಷ್ಣುವಿನ ಬುದ್ಧ ಅವತಾರದ ವೈಶಿಷ್ಟ್ಯಗಳು

ಅ. ಶ್ರೀವಿಷ್ಣುವಿನ ಬುದ್ಧ ಅವತಾರವು ದ್ವಾಪರ ಯುಗದಲ್ಲಿ ಆಯಿತು. ಈ ಅವತಾರವು ಶ್ರೀಕೃಷ್ಣನ ಅವತಾರದ ನಂತರ ಜನ್ಮಕ್ಕೆ ಬಂದಿತು.

ಆ. ಋಷಿಗಳು ಬುದ್ಧ ಅವತಾರವನ್ನು ಮೋಕ್ಷಾವತಾರವೆಂದು ಹೇಳಿದ್ದಾರೆ.

೨ ಅ. ವರ್ಣನೆ

೨ ಅ ೧. ಕಾರ್ಯ : ತಾರಕ ಸ್ವರೂಪವಾಗಿತ್ತು. ಜೀವಿಗಳಿಗೆ ಮೋಕ್ಷದ ಮಾರ್ಗ ತೋರಿಸುವುದು ಮತ್ತು ಪ್ರತ್ಯಕ್ಷ ಮೋಕ್ಷದೆಡೆಗೆ ಕರೆದೊಯ್ಯುವುದು.

೨ ಅ ೨. ಎತ್ತರ : ಆರೂವರೆ ಅಡಿ

೨ ಅ ೩. ವರ್ಣ : ಶ್ವೇತ

೨ ಅ ೪. ಆಯುಷ್ಯ : ೩೦೦ ವರ್ಷಗಳು

೩. ಶ್ರೀವಿಷ್ಣುವಿನ ಈ ಕಾರ್ಯದ ನೋಂದಣಿಯು ಅಲ್ಪ ಪ್ರಮಾಣದಲ್ಲಿ ಆಯಿತು ಮತ್ತು ಅದರಲ್ಲಿ ಕೆಲವು ನೋಂದಣಿಗಳು ಕಾಲಾಂತರದಲ್ಲಿ ನಾಶವಾದವು. ಇದರಿಂದ ಕಲಿಯುಗದ ಬೌದ್ಧ ಧರ್ಮ ಸ್ಥಾಪನೆ ಮಾಡಿದ ಬುದ್ಧನನ್ನು ಶ್ರೀವಿಷ್ಣುವಿನ ಅವತಾರವೆಂದು ತಿಳಿಯ ತೊಡಗಿದರು.

೪. ಶ್ರೀವಿಷ್ಣುವಿನ ದ್ವಾಪರಯುಗದ ಬುದ್ಧ ಅವತಾರ ಮತ್ತು ಕಲಿಯುಗದ ಬುದ್ಧಧರ್ಮವನ್ನು ಸ್ಥಾಪನೆ ಮಾಡಿದ ಬುದ್ಧನಲ್ಲಿ ಕೇವಲ ಹೆಸರಿನ ಹೋಲಿಕೆಯಿದೆ.

ಬುದ್ಧ ಅವತಾರದ ಬಗ್ಗೆ ಇತರ ಗ್ರಂಥಗಳಲ್ಲಿ ವಿವರವಾದ ಮಾಹಿತಿ ದೊರಕದಿರುವ ಕಾರಣಗಳು

೧. ಶ್ರೀವಿಷ್ಣುವಿನ ಇತರ ಅವತಾರಗಳಂತೆ ಬುದ್ಧನ ಕಾರ್ಯವು ಲೀಲಾತ್ಮಕವಾಗಿರಲಿಲ್ಲ. ಆದುದರಿಂದ ಅವನ ವರ್ಣನೆ ಮತ್ತು ಕಾರ್ಯವನ್ನು ಗ್ರಂಥಗಳಲ್ಲಿ ವಿವರಿಸಿಲ್ಲ.

೨. ಶ್ರೀವಿಷ್ಣುವಿನ ಇತರ ಅವತಾರಗಳು ನಿರ್ಗುಣ ಮತ್ತು ಅಂಶಾತ್ಮಕವಾಗಿ ಸಗುಣತತ್ತ್ವಕ್ಕೆ ಸಂಬಂಧಿಸಿದ ಕಾರ್ಯ ಮಾಡಿವೆ. ಬುದ್ಧ ಅವತಾರದ ಕಾರ್ಯವು ಪೂರ್ಣತಃ ಮೋಕ್ಷಕ್ಕೆ ಸಂಬಂಧಿಸಿದಂತೆ ಅಂದರೆ ನಿರ್ಗುಣ ತತ್ತ್ವದೊಂದಿಗೆ ಸಂಬಂಧಿಸಿರುವುದರಿಂದ ಅವುಗಳ ವರ್ಣನೆಯಿಲ್ಲ.

೩. ಶ್ರೀವಿಷ್ಣುವಿನ ಇತರ ಅವತಾರಗಳು ಪ್ರಕಟ ಶಕ್ತಿಯ ಆಧಾರದಲ್ಲಿ ವಿಶಿಷ್ಟ ರೂಪ ಧರಿಸುವುದು, ದುರ್ಜನರನ್ನು ನಾಶಗೊಳಿಸುವುದು, ಭಕ್ತರಿಗೆ ಲೀಲಾತ್ಮಕ ಅನುಭೂತಿಯನ್ನು ನೀಡುವುದು ಇತ್ಯಾದಿ ಕಾರ್ಯಗಳನ್ನು ಮಾಡಿದವು. ಬುದ್ಧಾವತಾರದಲ್ಲಿ ಇಂತಹ ಕಾರ್ಯಗಳನ್ನು ಮಾಡಿಲ್ಲ.

೫. ಶ್ರೀಕೃಷ್ಣನು ಅವತಾರ ಸಮಾಪ್ತಿಯ ಮೊದಲು ಅರ್ಜುನನಿಗೆ ‘ನಾನು ಗುರುರೂಪದಲ್ಲಿ ಮರಳಿ ಜನಿಸುವೆನು, ಆದರೆ ಅದು ವಿಸ್ತಾರವಾಗಿರುವುದಿಲ್ಲ (ಇಲ್ಲಿ ವಿಸ್ತಾರ ಶಬ್ದದ ಅರ್ಥ : ಕಾರ್ಯವು ಸೀಮಿತವಾಗಿದ್ದು, ಅದರ ಹೆಸರು ಲೌಕಿಕವಾಗಿರುವುದಿಲ್ಲ.) ಎಂದು ತಿಳಿಸಿದ್ದನು.

೬. ಶ್ರೀಕೃಷ್ಣ ಮತ್ತು ಅದಕ್ಕಿಂತ ಮೊದಲು ಆದ ಶ್ರೀವಿಷ್ಣುವಿನ ಅವತಾರಗಳು ಲೀಲಾತ್ಮಕ ಮತ್ತು ಮಾರಕ ರೂಪದಲ್ಲಿದ್ದವು. ಬುದ್ಧ ಅವತಾರವು ಗುರುರೂಪದಲ್ಲಿತ್ತು.

ಶ್ರೀವಿಷ್ಣುವಿನ ದಶಾವತಾರದಲ್ಲಿನ ಇತರ ಅವತಾರಗಳು ಮತ್ತು ಬುದ್ಧ ಅವತಾರದ ನಡುವಿನ ವ್ಯತ್ಯಾಸಗಳು


ವಿಷ್ಣುವಿನ ದಶಾವತಾರಗಳು, ಅವರಲ್ಲಿರುವ ವಿಷ್ಣುತತ್ತ್ವದ ಪ್ರಮಾಣ ಹಾಗೂ ಅವರ ವೈಶಿಷ್ಟ್ಯಗಳು

 

 

Leave a Comment