ಬ್ರಾಹ್ಮ ಹಾಗೂ ಕ್ಷಾತ್ರ ತೇಜದ ಸಂಗಮ – ಯೋದ್ಧಾವತಾರಿ ಭಗವಾನ್ ಪರಶುರಾಮ !

ವೈಶಾಖ ಶುಕ್ಲ ಪಕ್ಷ ತೃತೀಯಾದಂದು ಭಗವಾನ್ ಪರಶುರಾಮರ ಜಯಂತಿಯಿರುತ್ತದೆ. ಆ ನಿಮಿತ್ತ ಅವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳನ್ನು ಸಲ್ಲಿಸೋಣ.

ಭಗವಾನ್ ಪರಶುರಾಮರ ಗುಣವೈಶಿಷ್ಟ್ಯವನ್ನು ವಿವರಿಸುವ ಈ ಲೇಖನವು ಅವರ ಚರಣಗಳಲ್ಲಿ ವಿನಯಪೂರ್ವಕವಾಗಿ ಸಮರ್ಪಣೆ !

೧. ಸಪ್ತಚಿರಂಜೀವಿಗಳಲ್ಲಿ ಒಬ್ಬರು

ಅಶ್ವತ್ಥಾಮ ಬಲಿರ್ವ್ಯಾಸೋ ಹನುಮಾಂಶಚ ವಿಭೀಷಣಃ |
ಕೃಪಃ ಪರಶುರಾಮಶ್ಚ ಸಪ್ತೈತೆ ಚಿರಜೀವಿನಃ ||

ಅರ್ಥ : ಅಶ್ವತ್ಥಾಮ, ಬಲಿ, ಮಹರ್ಷಿ ವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ ಮತ್ತು ಪರಶುರಾಮ ಮುಂತಾದ ಸಪ್ತ ಚಿರಂಜೀವಿಗಳಲ್ಲಿ ಪರಶುರಾಮರು ಕಾಲವನ್ನು ಗೆದ್ದುಕೊಂಡಿದ್ದಾರೆ. ಆದ್ದರಿಂದ ಅವರು ಸಪ್ತಚಿರಂಜೀವಿಗಳಲ್ಲಿ ಒಬ್ಬರಾಗಿದ್ದಾರೆ. ಪ್ರಾತಃಕಾಲದಲ್ಲಿ ಅವರನ್ನು ಸ್ಮರಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ.

೨. ಶ್ರೀವಿಷ್ಣುವಿನ ಆರನೇ ಅವತಾರ

ಸತ್ಯಯುಗದಲ್ಲಿ ಮತ್ಸ್ಯ, ಕೂರ್ಮ, ವರಾಹ, ನರಸಿಂಹ ಮತ್ತು ವಾಮನ ಇವು ವಿಷ್ಣುವಿನ ೫ ಅವತಾರಗಳಾಗಿವೆ. ತ್ರೇತಾಯುಗದ ಪ್ರಾರಂಭದಲ್ಲಿ ಮಹರ್ಷಿ ಭ್ರಗು ಇವರ ಗೋತ್ರದಲ್ಲಿ ಜಮದಗ್ನಿಯ ಕುಲದಲ್ಲಿ ಮಹರ್ಷಿ ಜಮದಗ್ನಿ ಮತ್ತು ರೇಣುಕಾಮಾತೆಯ ಉದರದಲ್ಲಿ ಶ್ರೀವಿಷ್ಣುವಿನ ಆರನೇ ಅವತಾರವಾಯಿತು. ಅವರ ಹೆಸರು ಪರಶುರಾಮ. ಭಾರ್ಗವಗೋತ್ರಿಯಾಗಿದ್ದರಿಂದ ಅವರನ್ನು ಭಾರ್ಗವರಾಮ ಎಂದು ಸಹ ಕರೆಯುತ್ತಿದ್ದರು.

೩. ಕಾಲ ಮತ್ತು ಕಾರ್ಯವನ್ನು ಜಯಿಸಿದ ದೇವತೆ !

ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಚಿಪಳೂಣ್‌ನ ಸಮೀಪದ ಲೋಟೆ ಎಂಬ ಊರಿನ ಮಹೇಂದ್ರ ಪರ್ವತದ ಮೇಲೆ ಭಗವಾನ್ ಪರಶುರಾಮರ ಪುರಾತನ ದೇವಸ್ಥಾನವಿದೆ. ಅಲ್ಲಿ ಪರಶುರಾಮರ ಪಾದದ ಚಿಹ್ನೆ ಮೂಡಿರುವ ಶಿಲೆಯನ್ನು ನಿತ್ಯ ಪೂಜಿಸಲಾಗುತ್ತಿದೆ. ಈ ಶಿಲೆಯ ಹಿಂದೆ ಮೂರು ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಮಧ್ಯಭಾಗದಲ್ಲಿ ಭಗವಾನ್ ಪರಶುರಾಮರ ಆಕಾರದಲ್ಲಿ ದೊಡ್ಡದಾಗಿರುವ ಹಾಗೂ ರೇಖೆಗಳ ಮೂರ್ತಿ ಇದೆ. ಅದರ ಬಲಬದಿಗೆ ಕಾಲದೇವತೆ ಮತ್ತು ಎಡಬದಿಗೆ ಕಾಮದೇವತೆಯ ಸಣ್ಣ ಆಕಾರದ ಮೂರ್ತಿಗಳಿವೆ. ಇದು ಭಾರ್ಗವ ರಾಮರು ಕಾಲ ಮತ್ತು ಕಾರ್ಯವನ್ನು ಜಯಿಸಿರುವುದರ ಸಂಕೇತವಾಗಿದೆ.

೪. ಅಖಂಡ ಬ್ರಹ್ಮಚಾರಿ ಹಾಗೂ ಪರಮ ವೈರಾಗಿಯಾಗಿರುವುದು

ಪರಶುರಾಮರು ಕಾಮವಾಸನೆಯನ್ನು ಜಯಿಸಿದ್ದರು. ಆದ್ದರಿಂದ ಅವರು ಅಖಂಡ ಬ್ರಹ್ಮಚಾರಿಯಾಗಿದ್ದರು. ಪರಶುರಾಮರಲ್ಲಿ ಪ್ರಚಂಡ ವಾದ ವಿರಕ್ತಿಯಿತ್ತು. ಆದ್ದರಿಂದಲೇ ಅವರು ಸಂಪೂರ್ಣ ಪೃಥ್ವಿಯನ್ನು ಜಯಿಸಿದರೂ ಕಶ್ಯಪ ಋಷಿಗಳಿಗೆ ಅದೆಲ್ಲವನ್ನೂ ಕೈಯೆತ್ತಿ ದಾನ ಮಾಡಿ ಮಹೇಂದ್ರ ಪರ್ವತದ ಮೇಲೆ ಏಕಾಂತದಲ್ಲಿದ್ದು ಸಂನ್ಯಾಸ ಜೀವನವನ್ನು ನಡೆಸಿದರು.

೫. ಅಪರಾಜೇಯ ಯೋಧರಾಗಿರುವ ಕಾರ್ತವೀರ್ಯ ಸಹಸ್ರಾರ್ಜುನನನ್ನು ವಿನಾಶ ಮಾಡಲು ಪರಶುರಾಮರು ಮಾಡಿದ ಅದ್ವಿತೀಯ ಪರಾಕ್ರಮ !

೫ ಅ. ಪರಶುರಾಮರು ತಪಶ್ಚರ್ಯ ಮಾಡಿ ಸಹಸ್ರಾರ್ಜುನ ಕಾರ್ತವೀರ್ಯನಿಗಿಂತ ಹೆಚ್ಚು ತಪೋಬಲವನ್ನು ಗಳಿಸಿರುವುದರಿಂದ ಸೂಕ್ಷ್ಮ ಸ್ತರದಲ್ಲಿ ಕಾರ್ತವೀರ್ಯ ಸಹಸ್ರಾರ್ಜುನನ ಪರಾಭವ ಆರಂಭವಾಗುವುದು : ಹೈಹಯ ವಂಶದ ಅಧರ್ಮಿ ರಾಜಾ ಮಹಿಷ್ಮತಿ ನರೇಶ ಕಾತವೀರ್ಯ ಸಹಸ್ರಾರ್ಜುನನು ಸಾವಿರಾರು ವರ್ಷ ಕಠೋರವಾಗಿ ತಪಶ್ಚರ್ಯ ಮಾಡಿ ಭಗವಾನ್ ದತ್ತಾತ್ರೇಯರನ್ನು ಪ್ರಸನ್ನ ಗೊಳಿಸಿಕೊಂಡನು ಹಾಗೂ ಅಪ್ರತಿಮ ಶಕ್ತಿಶಾಲಿಯಾಗಿ ಸಾವಿರಾರು ಭುಜ ಗಳನ್ನು ಧಾರಣೆ ಮಾಡುವ ವರದಾನ ವನ್ನು ಗಳಿಸಿದನು. ಇಂತಹ ಕಾರ್ತವೀರ್ಯ ಸಹಸ್ರಾರ್ಜುನನನ್ನು ನಾಶಗೊಳಿಸಲು ಸಾಧ್ಯವಾಗಬೇಕೆಂದು ಅವನ ತಪಶ್ಚರ್ಯಕ್ಕಿಂತ ಹೆಚ್ಚು ತಪಶ್ಚರ್ಯವನ್ನು ಸಂಪಾದಿಸಲು ಪರಶುರಾಮರು ಶಿವನನ್ನು ಪ್ರಸನ್ನ ಗೊಳಿಸಲು ಕಠೋರ ತಪಶ್ಚರ್ಯವನ್ನು ಮಾಡಿದರು.

ಕಾರ್ತವೀರ್ಯನ ತಪಶ್ಚರ್ಯವನ್ನು ನಿಷ್ಕ್ರಿಯಗೊಳಿಸಲು ಪರಶುರಾಮರು ಅದಕ್ಕಿಂತಲೂ ಕಠೋರವಾದ ತಪಶ್ಚರ್ಯವನ್ನು ಮಾಡಿ ಬ್ರಾಹ್ಮತೇಜದ ಶಸ್ತ್ರಗಳಿಂದ ಕಾರ್ತವೀರ್ಯನ ಪುಣ್ಯಬಲದ ಮೇಲೆ ಒಂದೇ ಸಮನೆ ಪ್ರಹಾರ ಮಾಡಿ ಅವನನ್ನು ಕ್ಷೀಣಗೊಳಿಸಿದರು. ಆದ್ದರಿಂದ ಕಾರ್ತವೀರ್ಯನ ಸಾವಿರಾರು ಭುಜಗಳ ಮೂಲಕ ಕಾರ್ಯನಿರತವಾಗಿದ್ದ ಸೂಕ್ಷ್ಮ ಕರ್ಮೇಂದ್ರಿಯಗಳ ದಿವ್ಯ ಶಕ್ತಿಯು ಕ್ಷೀಣವಾಗಲು ಆರಂಭವಾಯಿತು ಹಾಗೂ ಸೂಕ್ಷ್ಮದಿಂದ ಅಧರ್ಮದ ಪ್ರತೀಕವಾಗಿರುವ ಕಾರ್ತವೀರ್ಯನ ಪರಾಭವವು ಆರಂಭವಾಯಿತು. ಕಾರ್ತವೀರ್ಯನನ್ನು ಪರಾಭವ ಗೊಳಿಸಿದ ಭಗವಾನ್ ಪರಶುರಾಮರ ಈ ಆಧ್ಯಾತ್ಮಿಕ ಸ್ತರದಲ್ಲಿನ ಹೋರಾಟವು ಅದ್ವಿತೀಯವಾಗಿದೆ.

೫ ಆ. ಗೋಧನವನ್ನು ಕದಿಯುವವರ ವಿನಾಶವಾಗಲಿ, ಎಂದು ಸಂಕಲ್ಪ ಮಾಡಿ ಅದನ್ನು ಪೂರ್ಣಗೊಳಿಸುವುದು : ಕಾರ್ತವೀರ್ಯ ಸಹಸ್ರಾರ್ಜು ನನು ಋಷಿ ದಂಪತಿಗಳ ವಿರೋಧವನ್ನು ಲೆಕ್ಕಿಸದೆ ಜಮದಗ್ನಿಯ ಆಶ್ರಮದಿಂದ ಗೋಮಾತೆ ಕಾಮಧೇನುವನ್ನು ಬಲವಂತದಿಂದ ಅಪಹರಿ ಸಿದನು. ಈ ಘಟನೆ ನಡೆಯುವಾಗ ಪರಶುರಾಮರು ಆಶ್ರಮದಲ್ಲಿರಲಿಲ್ಲ. ಅವರು ಘನಘೋರ ಅರಣ್ಯದಲ್ಲಿ ಕಠೋರವಾದ ತಪಶ್ಚರ್ಯ ಮಾಡುವುದರಲ್ಲಿ ಮಗ್ನರಾಗಿದ್ದರು. ನಂತರ ಅವರು ಜಮದಗ್ನಿಯ ಆಶ್ರಮಕ್ಕೆ ತಲುಪಿದಾಗ ಅವರಿಗೆ ಘಟಿಸಿದ ಪ್ರಸಂಗದ ಅರಿವಾಯಿತು. ಕಾರ್ತವೀರ್ಯ ಸಹಸ್ರಾರ್ಜುನನ ವಶದಲ್ಲಿದ್ದ ಕಾಮಧೇನುವನ್ನು ಮುಕ್ತ ಗೊಳಿಸಿ ಗೋಮಾತೆ ಮತ್ತು ಗೋಧನವನ್ನು ರಕ್ಷಣೆ ಮಾಡಲು ಅವರು ಗೋಧನವನ್ನು ಅಪಹರಿಸುವವರ ವಿನಾಶವಾಗಲಿ ಎಂದು ಸಂಕಲ್ಪ ಮಾಡಿದರು. ಅವರ ಶಾಪವಾಣಿ ನಿಜವಾಯಿತು; ಏಕೆಂದರೆ ಗೋಧನ ವನ್ನು ಅಪಹರಿಸಿದ ಅಪರಾಧ ಮಾಡಿರುವುದರಿಂದ ಕಾರ್ತವೀರ್ಯನ ಪುಣ್ಯವು ಕ್ಷಯವಾಯಿತು. ಜಮದಗ್ನಿ ಋಷಿಗಳ ಮೇಲೆ ಪ್ರಾಣಘಾತಕ ಆಕ್ರಮಣ ಮಾಡಿರುವುದರಿಂದ ಕಾರ್ತವೀರ್ಯನ ಪುತ್ರರಿಗೂ ಪಾಪ ತಗಲಿತು. ಪರಶುರಾಮರು ಕಾರ್ತವೀರ್ಯನ ಕುಲವೇ ವಿನಾಶಗೊಳಿ ಸಲು ಮಾಡಿದ ಸಂಕಲ್ಪವು ಪೂರ್ಣಗೊಂಡು ಗೋಮಾತೆಯನ್ನು ಮುಕ್ತ ಗೊಳಿಸಿ ಪುನಃ ಜಮದಗ್ನಿಯ ಆಶ್ರಮಕ್ಕೆ ಆದರದಿಂದ ಕರೆ ತಂದರು.

೫ ಇ. ಕಾರ್ತವೀರ್ಯ ಸಹಸ್ರಾರ್ಜುನನ ಅಂತ್ಯಕಾಲವು ಸಮೀಪಿಸುತ್ತಿದ್ದಂತೆಯೇ ಭಗವಾನ್ ಪಶುರಾಮರು ಅವನ ಮೇಲೆ ಸ್ಥೂಲದಲ್ಲಿ ಪರಶುವಿನಿಂದ ಆಘಾತ ಮಾಡಿ ಅವನ ಸಾವಿರ ಭುಜಗಳನ್ನು ಕಡಿದು ಹಾಕಿದರು ಹಾಗೂ ನಂತರ ಅವನ ಶಿರಚ್ಛೇದ ಮಾಡಿದರು. ಈ ರೀತಿಯಲ್ಲಿ ಭಗವಾನ ಪರಶುರಾಮರು ಕ್ಷತ್ರಿಯರನ್ನು ನಾಶಗೊಳಿಸಲು ಮಹಾಕಾಲೇಶ್ವರ ಶಿವನು  ನೀಡಿದ ಪರಶುವನ್ನು ಶಸ್ತ್ರ ವೆಂದು ಉಪಯೋಗಿಸಲು ಆರಂಭಿಸಿದರು.

೬. ಭಗವಾನ ಪರಶುರಾಮರು ಮಾಡಿದ ಅಪೂರ್ವವಾದ ಅವತಾರ ಕಾರ್ಯ ಮತ್ತು ಪರಾಕ್ರಮಗಳ ಮಹತ್ವದ ಉದಾಹರಣೆಗಳು

೬ ಅ. ೨೧ ಬಾರಿ ಪೃಥ್ವಿಗೆ ಪ್ರದಕ್ಷಿಣೆ ಹಾಕಿ ಸಂಪೂರ್ಣ ಪೃಥ್ವಿಯನ್ನು ನಿಃಕ್ಷತ್ರಿಯಗೊಳಿಸುವುದು : ಭಗವಾನ್ ಪರಶುರಾಮರು ಒಬ್ಬರೇ ಸಂಪೂರ್ಣ ಪೃಥ್ವಿಗೆ ೨೧ ಬಾರಿ ಪ್ರದಕ್ಷಿಣೆ ಹಾಕಿ ಪೃಥ್ವಿಯ ಮೇಲೆ ಕೋಲಾಹಲವೆಬ್ಬಿಸುತ್ತಿದ್ದ ಅಹಂಕಾರಿ ಹಾಗೂ ಅಧರ್ಮಿ ಕ್ಷತ್ರಿಯರನ್ನು ನಾಶಗೊಳಿಸಿದರು. ಹೀಗೆ ಪೃಥ್ವಿಗೆ ಪ್ರದಕ್ಷಿಣೆ ಹಾಕಿ ಅವರು ಪೃಥ್ವಿಯ ಭಾರವನ್ನು ಕಡಿಮೆಗೊಳಿಸಿದರು ಹಾಗೂ ಅದರೊಂದಿಗೆ ಪೃಥ್ವಿಗೆ ಪ್ರದಕ್ಷಿಣೆ ಹಾಕುವಂತಹ ಪರಮಪುಣ್ಯವನ್ನೂ ಗಳಿಸಿಕೊಂಡರು.

೬ ಆ. ಸಾವಿರಾರು ಕ್ಷತ್ರಿಯರು ಮತ್ತು ಲಕ್ಷಗಟ್ಟಲೆ ಸೈನಿಕರೊಂದಿಗೆ ಒಬ್ಬರೇ ಹೋರಾಡುವ ಅಪೂರ್ವ ಸಾಮರ್ಥ್ಯವಿರುವುದು : ಪ್ರಜೆಗಳನ್ನು ಹಿಂಸಿಸಿ ಪೃಥ್ವಿಯ ಮೇಲೆ ಉಪದ್ರವ ನೀಡುತ್ತಿದ್ದ ಸಾವಿರಾರು ಕ್ಷತ್ರಿಯರಿದ್ದರು. ಅವರಲ್ಲಿ ಲಕ್ಷಗಟ್ಟಲೆ ಅಕ್ಷೌಹಿಣಿ ಸೈನ್ಯಬಲವಿತ್ತು. ಭಗವಾನ್ ಪರಶುರಾಮರು ನರದೇಹವನ್ನು ಧಾರಣೆ ಮಾಡಿದ ಸಾಕ್ಷಾತ್ ಶ್ರೀಮನ್ನಾರಾಯಣನೇ ಆಗಿದ್ದರು. ಆದ್ದರಿಂದ ಅವರಲ್ಲಿ ಸಾವಿರಾರು ಕ್ಷತ್ರಿಯರು ಮತ್ತು ಲಕ್ಷಗಟ್ಟಲೆ ಸೈನಿಕರೊಂದಿಗೆ ಒಬ್ಬರೇ ಹೋರಾಡುವ ಅಪೂರ್ವ ಸಾಮರ್ಥ್ಯವಿತ್ತು.

೬ ಇ. ದಾನಶೂರ : ಏಕಛತ್ರ ಸಾಮ್ರಾಟರಂತೆ ಇಡೀ ಭೂಮಂಡಲದ ಅಧಿಪತಿಯಾಗಿದ್ದರೂ ಅಶ್ವಮೇಧ ಯಜ್ಞದ ಸಮಯ ದಲ್ಲಿ ಪರಶುರಾಮರು ಯಜ್ಞದ ಪ್ರಮುಖ (ಯಜ್ಞಪುರೋಹಿತ)ರಾದ ಮಹರ್ಷಿ ಕಶ್ಯಪರಿಗೆ ಸಂಪೂರ್ಣ ಪೃಥ್ವಿಯನ್ನು ದಾನವನ್ನಾಗಿ ನೀಡಿದರು. ಇದರಿಂದ ಪರಶುರಾಮರು ಎಷ್ಟು ದಾನಶೂರರಾಗಿದ್ದರು, ಎಂಬುದು ಅರಿವಾಗುತ್ತದೆ.

೬ ಈ. ನವಸೃಷ್ಟಿಯನ್ನು ನಿರ್ಮಾಣ ಮಾಡುವುದು : ಭಗವಾನ ಪರಶುರಾಮರು ಕೇವಲ ಮೂರು ಹೆಜ್ಜೆಗಳಿಂದ ಸಮುದ್ರವನ್ನು ಹಿಂದೆ ಸರಿಸಿ ಒಂದೇ ಕ್ಷಣದಲ್ಲಿ ಭೂಮಿಯನ್ನು ನಿರ್ಮಾಣ ಮಾಡಿದರು ಹಾಗೂ ಚಿತೆಯಿಂದ ಚಿತ್ತಪಾವನ ಬ್ರಾಹ್ಮಣರನ್ನು ನಿರ್ಮಾಣ ಮಾಡಿ ಪರಶುರಾಮ ಕ್ಷೇತ್ರದಲ್ಲಿ ಹೊಸ ಸೃಷ್ಟಿಯನ್ನು ಸಾಕಾರಗೊಳಿಸಿದರು.

೭. ಶತ್ರುಗಳ ನಿರ್ಮೂಲನೆ ಮಾಡಲು ಬ್ರಾಹ್ಮ ಹಾಗೂ ಕ್ಷಾತ್ರ ತೇಜದ ಉತ್ಕೃಷ್ಟ ಉಪಯೋಗ ಮಾಡುವ ಶ್ರೇಷ್ಠತಮ ಯೋಧರ ಉತ್ತಮವಾದ ಉದಾಹರಣೆಯೆಂದರೆ ಭಗವಾನ ಪರಶುರಾಮ !

ಅಗ್ರತಃ ಚತುರೋ ವೇದಾಃ ಪೃಷ್ಠತಃ ಸಶರಂ ಧನುಃ |
ಇದಂ ಬ್ರಾಹ್ಮಮ್ ಇದಮ್ ಕ್ಷಾತ್ರಂ ಶಾಪಾದಪಿ ಶರಾದಪಿ ||

ಅರ್ಥ : ಮುಖದಲ್ಲಿ ನಾಲ್ಕು ವೇದಗಳಿವೆ, ಬೆನ್ನಿನ ಮೇಲೆ ಬಾಣಗಳ ಸಹಿತ ಧನುಷ್ಯ (ಬಿಲ್ಲು) ಇದೆ, ಇಂತಹ ಪರಶುರಾಮರು ಶಾಪ ಕೊಟ್ಟು ಅಥವಾ ಬಾಣದಿಂದ ಶತ್ರುವನ್ನು ನಾಶಗೊಳಿಸುತ್ತಾರೆ. ಪರಶುರಾಮರು ಶಾಸ್ತ್ರಬಲ ಅಂದರೆ ಜ್ಞಾನಬಲ ಮತ್ತು ಶಸ್ತ್ರಬಲವೆಂದರೆ ಬಾಹುಬಲ ಇವೆರಡರ ಸಂಯೋಗದಿಂದ ಶತ್ರುದಮನ ಮಾಡಿದರು. ಆಧ್ಯಾತ್ಮಿಕ ಪರಿಭಾಷೆಯಲ್ಲಿ ಜ್ಞಾನಬಲವೆಂದರೆ ಬ್ರಾಹ್ಮತೇಜ ಮತ್ತು ಬಾಹುಬಲವೆಂದರೆ, ಕ್ಷಾತ್ರತೇಜವಾಗಿದೆ. ಪರಶುರಾಮರು ಶಾಸ್ತ್ರ ಬಲ ದಿಂದ ಶಾಪ ಕೊಟ್ಟು ಅಂದರೆ ಸಂಕಲ್ಪದಿಂದ ಹಾಗೂ ಬಾಹುಬಲ ಅಂದರೆ ಕ್ಷಾತ್ರತೇಜದ ಬಲದಿಂದ ಪರಶುವಿನಿಂದ ಆಘಾತ ಮಾಡಿ ಅಂದರೆ ಪ್ರತ್ಯಕ್ಷ ಪ್ರಹಾರ ಮಾಡಿ ಶತ್ರುವನ್ನು ಸಂಹಾರ ಮಾಡಿದರು. ಇಂತಹ ಭಗವಾನ್ ಪರಶುರಾಮರು ಶತ್ರುಗಳನ್ನು ನಾಶಗೊಳಿ ಸಲು ಬ್ರಾಹ್ಮ ಹಾಗೂ ಕ್ಷಾತ್ರ ಇವೆರಡೂ ತೇಜಗಳನ್ನು ಉತ್ಕೃಷ್ಟವಾಗಿ ಉಪಯೋಗಿಸುವ ಶ್ರೇಷ್ಠತಮ ಯೋದ್ಧರ ಉತ್ತಮ             ಉದಾಹರಣೆಯಾಗಿದ್ದಾರೆ.

೮. ಹುಟ್ಟು ಬ್ರಾಹ್ಮಣರಾಗಿದ್ದರೂ ಕಾಲಾನುಸಾರ ಆವಶ್ಯಕವಿರುವ ಕ್ಷತ್ರಿಯರ ಕರ್ತವ್ಯಗಳನ್ನು ಪೂರ್ಣಗೊಳಿಸುವುದು.

ಮಹರ್ಷಿ ಜಮದಗ್ನಿಯವರ ವರ್ಣ ಬ್ರಾಹ್ಮಣ ಹಾಗೂ ರೇಣುಕಾ ಮಾತೆ ಕ್ಷತ್ರಿಯ ವರ್ಣದವರಾಗಿದ್ದರು. ಪರಶುರಾಮರು ಜನ್ಮದಿಂದ ಬ್ರಾಹ್ಮಣ; ಆದರೆ ಗುಣ ಮತ್ತು ಕರ್ಮದಿಂದ ಕ್ಷತ್ರಿಯರಾಗಿದ್ದರು. ಆದ್ದರಿಂದ ಅವರು ಕ್ಷತ್ರಿಯ ವರ್ಣಕ್ಕನುಸಾರ ಆಚರಣೆ ಮಾಡುತ್ತಾ ಕ್ಷಾತ್ರಧರ್ಮದ ಪಾಲನೆ ಮಾಡಿ ದುರ್ಜನರ ನಾಶ ಮಾಡಿದರು. ಭಗವಾನ ಪರಶುರಾಮರು ಕಾಲಾನುಸಾರ ಸಮಷ್ಟಿ ಸಾಧನೆಯ ಮತ್ತು ವರ್ಣಾನುಸಾರ ಕ್ಷಾತ್ರಧರ್ಮ ಸಾಧನೆಯ ಉತ್ತಮವಾದ ಉದಾಹರಣೆಯಾಗಿದ್ದಾರೆ. ತಂದೆಯ ಹಾಗೆಯೇ ಬ್ರಾಹ್ಮತೇಜ ಹಾಗೂ ಮಾತೆಯ ಹಾಗೆ ಕ್ಷಾತ್ರತೇಜವಿರುವ ಪರಶುರಾಮರು ಯೋದ್ಧಾವತಾರವಾಗಿದ್ದಾರೆ. ಬ್ರಹ್ಮವೃಂದವನ್ನು ಸರ್ವನಾಶಗೊಳಿಸಲು ಅವರ ಆಶ್ರಮ ಮತ್ತು ಗುರುಕುಲದ ಉಜ್ವಲ ಪರಂಪರೆಯನ್ನು ಧ್ವಂಸಗೊಳಿಸುವ ಅನ್ಯಾಯದ ರಾಜ್ಯಾಧಿಕಾರಕ್ಕೆ ಎರಡೂ ತೇಜಗಳಿಂದ ಸಂಪನ್ನವಿರುವ ಪರಶುರಾಮರು ತಡೆ ಹಾಕಿದರು. ದುಷ್ಟರಿಗೆ ಶಾಪಕೊಟ್ಟು ಅಥವಾ ಶಸ್ತ್ರಗಳಿಂದ ಆಘಾತ ಮಾಡಿ ಕಠೋರವಾದ ಶಿಕ್ಷೆಯನ್ನು ವಿಧಿಸಿದರು. ಈ ರೀತಿಯಲ್ಲಿ ಕಾಲಾನುಸಾರ ಆವಶ್ಯಕವಿರುವ ಕ್ಷತ್ರಿಯರ ಕರ್ತವ್ಯವನ್ನು ಪರಶುರಾಮರು ಪೂರ್ಣಗೊಳಿಸಿದರು.

೯. ಕರ್ನಾಟಕದಲ್ಲಿರುವ ತುಂಗಭದ್ರಾ ನದಿಯ ತೀರದಲ್ಲಿ ನೆಲೆಸಿರುವ ತೀರ್ಥಹಳ್ಳಿಯೆಂಬ ತೀರ್ಥಕ್ಷೇತ್ರದ ಮಹಾತ್ಮೆ

ತಂದೆ ಜಮದಗ್ನಿ ಋಷಿಗಳ ಆಜ್ಞೆಗನುಸಾರ ಪರಶುರಾಮರು ಮಾತೆಯ ಶಿರಚ್ಛೇದ ಮಾಡಿದರು. ಪರಶುರಾಮರ ಪ್ರಾರ್ಥನೆಯ ನಂತರ ಜಮದಗ್ನಿಋಷಿಗಳು ರೇಣುಕಾದೇವಿಗೆ ಪುನರ್ಜನ್ಮ ನೀಡಿದರು; ಆದರೆ ಪರಶುರಾಮರ ಪರಶುವಿಗೆ ತಗಲಿದ ರೇಣುಕಾದೇವಿಯ ರಕ್ತದ ಕಲೆಯು ಏನು ಮಾಡಿದರೂ ಯಾವುದೇ ನದಿಯ ಅಥವಾ ಸರೋವರದ ಜಲದಿಂದ ತೊಳೆದರೂ ಹೋಗುತ್ತಿರಲಿಲ್ಲ. ಪರಶುರಾಮರು ಸಂಚಾರ ಮಾಡುತ್ತಾ ಕರ್ನಾಟಕದ ತುಂಗಭದ್ರಾ ನದಿಯ ತೀರದಲ್ಲಿ ನೆಲೆಸಿರುವ ಕ್ಷೇತ್ರಕ್ಕೆ ಬಂದು ತಲುಪಿದರು. ಅಲ್ಲಿನ ತುಂಗಭದ್ರಾ ನದಿಯ ಜಲದಿಂದ ಪರಶುವನ್ನು ತೊಳೆದಾಗ ಅದಕ್ಕೆ ತಗಲಿದ ರಕ್ತದ ಕಲೆಯು ಇಲ್ಲದಂತಾಯಿತು. ಇದರಿಂದಾಗಿ ಈ ಸ್ಥಾನವು ತೀರ್ಥಹಳ್ಳಿ ಎಂಬ ಹೆಸರಿನಲ್ಲಿ ಪ್ರಖ್ಯಾತವಾಯಿತು. ಈ ತೀರ್ಥಕ್ಷೇತ್ರದಲ್ಲಿ ತುಂಗಭದ್ರೆಯ ಜಲದಲ್ಲಿ ಎಲ್ಲ ಪಾಪಗಳ ವಿಮೋಚನೆ ಮಾಡುವ ಸಾಮರ್ಥ್ಯವಿದೆ. ಈ ಜಲದ ರುಚಿಯೂ ಅತ್ಯಂತ ಮಧುರವಾಗಿದೆ.

೧೦. ಶಿವ ಮತ್ತು ದತ್ತ ಇವರನ್ನು ಗುರುಸ್ಥಾನದಲ್ಲಿಟ್ಟು ಅವರ ಕೃಪೆಯನ್ನು ಸಂಪಾದಿಸುವುದು

ಪರಶುರಾಮರು ಶಿವ ಮತ್ತು ಭಗವಾನ ದತ್ತಾತ್ರೇಯರನ್ನು ಗುರುಸ್ಥಾನದಲ್ಲಿಟ್ಟು ಅವರಿಂದ ಶಿಷ್ಯತ್ವವನ್ನು ಸ್ವೀಕರಿಸಿದ್ದರು. ಅವರು ಕೈಲಾಸದಲ್ಲಿ ೧೨ ವರ್ಷಗಳ ಕಾಲ ವಾಸಮಾಡಿ ಗುರುಸ್ಥಾನದಲ್ಲಿರುವ ಶಿವನಿಂದ ಗಾಯತ್ರಿ ಉಪಾಸನೆಯ ಮೂಲಕ ಏಕಾಗ್ರತೆ, ಯುದ್ಧಕೌಶಲ್ಯ, ಶಸ್ತ್ರಕಲೆ, ಅಸ್ತ್ರವಿದ್ಯೆ ಮತ್ತು ವೇದಗಳ ಜ್ಞಾನ ಮತ್ತು ಆತ್ಮಜ್ಞಾನವನ್ನು ಪ್ರಾಪ್ತಿ ಮಾಡಿದರು. ಅದೇ ರೀತಿ ಭಗವಾನ್ ದತ್ತಾತ್ರೇಯರನ್ನು ಗುರುಗಳ ಸ್ಥಾನದಲ್ಲಿಟ್ಟು ಅವರನ್ನು ಪ್ರಸನ್ನಗೊಳಿಸಿದರು ಹಾಗೂ ಅವರ ಕೃಪೆಯಿಂದ ಹಠಯೋಗ, ಶಕ್ತಿಪಾತಯೋಗ ಮತ್ತು ಧ್ಯಾನಯೋಗಗಳ ಗೂಢ ರಹಸ್ಯವನ್ನು ತಿಳಿದುಕೊಂಡರು.

೧೧. ಸಂಪೂರ್ಣ ಅವತಾರ ಕಾಲದಲ್ಲಿ ಅತೀ ಹೆಚ್ಚು ಕ್ಷಾತ್ರೋಪಾಸನೆ ಮಾಡಿರುವ ಏಕೈಕ ಉದಾಹರಣೆ 

ಗುರುಕುಲದ ಪರಂಪರೆ, ಆಶ್ರಮ ವ್ಯವಸ್ಥೆ ಮತ್ತು ಋಷಿ ಜೀವನವು ಕ್ಷತ್ರಿಯರ ಉನ್ಮತ್ತತೆಯಿಂದ ವ್ಯಾಪಿಸಿತ್ತು. ಕ್ಷತ್ರಿಯರ ಹಿಡಿತದಿಂದ ಪರಂಪರೆ, ಸಂಸ್ಕೃತಿ ಮತ್ತು ಧರ್ಮದ ರಕ್ಷಣೆ ಮಾಡು ವುದು ಅತ್ಯಂತ ಆವಶ್ಯಕವಾಗಿತ್ತು. ಆದ್ದರಿಂದ ಭಗವಾನ ಪರಶು ರಾಮರು ಶಿಷ್ಯಾವಸ್ಥೆಯು ಮುಗಿಯುವಾಗಲೇ ಶಿವನು ಆಶೀರ್ವಾದ ಸ್ವರೂಪದಲ್ಲಿ ನೀಡಿದ ಪರಶು, ಬಿಲ್ಲುಬಾಣ ಮತ್ತು ಶಾಪಮಯ ವಾಣಿಯನ್ನು ಶತ್ರುಗಳ ಮೇಲೆ ಪ್ರಹಾರ ಮಾಡಲು ಶಸ್ತ್ರಗಳಂತೆ ಉಪಯೋಗಿಸಿ ಕಾರ್ತವೀರ್ಯ ಸಹಸ್ರಾರ್ಜುನನ ಸಹಿತ ಎಲ್ಲ ಮದವೇರಿದ ಕ್ಷತ್ರಿಯರನ್ನು ವಿನಾಶಗೊಳಿಸಿದರು. ಸಂಪೂರ್ಣ ಅವತಾರದ ಕಾಲದಲ್ಲಿ ಅತೀ ಹೆಚ್ಚು ಕ್ಷಾತ್ರೋಪಾಸನೆ ಮಾಡಿರುವ ಏಕೈಕ ಉದಾಹರಣೆಯೆಂದರೆ ಭಗವಾನ್ ಪರಶುರಾಮ. ಭಗವಾನ್ ಪರಶುರಾಮರ ಚರಣಗಳಲ್ಲಿ ಶಿರಸಾಷ್ಟಾಂಗ ನಮಸ್ಕಾರಗಳು !

– ಕು. ಮಧುರಾ ಭೋಸಲೆ, ಸನಾತನ ಆಶ್ರಮ, ರಾಮನಾಥಿ ಗೋವಾ. (೨.೫.೨೦೧೫)

(ಆಧಾರ : ಸಾಪ್ತಾಹಿಕ ಪತ್ರಿಕೆ “ಸನಾತನ ಪ್ರಭಾತ”)

Leave a Comment