ಬೆಳಗ್ಗೆ ನೀರು, ಊಟದ ಕೊನೆಗೆ ಮಜ್ಜಿಗೆ ಮತ್ತು ಸಾಯಂಕಾಲ ಹಾಲು ಕುಡಿಯುವುದರ ಮಹತ್ವ

ಆಧ್ಯಾತ್ಮಿಕ ದೃಷ್ಟಿಕೋನದಿಂದ – ಸಾಯಂಕಾಲ (ಮಲಗುವ ಮೊದಲು) ಹಾಲು ಕುಡಿಯುವುದು, ಬೆಳಗ್ಗೆ (ಎದ್ದ ಮೇಲೆ ಮುಖ ತೊಳೆದುಕೊಂಡು) ನೀರು ಕುಡಿಯುವುದು ಮತ್ತು ಊಟದ ಕೊನೆಗೆ ಮಜ್ಜಿಗೆ ಕುಡಿಯುವುದು ಇವುಗಳ ಮಹತ್ವ

ಋತುಗಳಿಗನುಸಾರ ಆಹಾರದ ನಿಯಮಗಳು

ಪ್ರತಿಯೊಂದು ಋತುವಿಗನುಸಾರ ವಾತಾವರಣವು ಬದಲಾಗುತ್ತಿರುತ್ತದೆ. ಈ ಬದಲಾವಣೆಗೆ ಹೊಂದಿಕೊಳ್ಳಲು ಮನುಷ್ಯನಿಗೆ ಆಹಾರದಲ್ಲಿಯೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ತಟ್ಟೆಯನ್ನು ತೊಡೆಯ ಮೇಲೆ ಇಟ್ಟುಕೊಂಡು ಏಕೆ ಊಟವನ್ನು ಮಾಡಬಾರದು?

ತೊಡೆಯ ಮೇಲೆ ಅನ್ನವನ್ನಿಟ್ಟುಕೊಂಡು ಊಟ ಮಾಡಿದರೆ ಅನ್ನದಲ್ಲಿನ ದೇವತ್ವಕ್ಕೆ ಅಗೌರವ ತೋರಿದಂತಾಗಿ ಅನ್ನಬ್ರಹ್ಮದಲ್ಲಿನ ಸಾತ್ತ್ವಿಕತೆಯ ಲಾಭವು ಅಪೇಕ್ಷಿತ ರೀತಿಯಲ್ಲಾಗುವುದಿಲ್ಲ.

ಸಕ್ಕರೆಯ ದುಷ್ಪರಿಣಾಮಗಳು

ಸಕ್ಕರೆಯನ್ನು ಶುದ್ಧೀಕರಿಸುವಾಗ (ರಿಫೈನಿಂಗ್) ಅದರಲ್ಲಿನ ಸುಮಾರು ೬೪ ಅನ್ನಘಟಕಗಳು ನಾಶವಾಗುತ್ತವೆ. ಜೀವಸತ್ವಗಳು (ವಿಟಮಿನ್ಸ್), ಖನಿಜದ್ರವ್ಯಗಳು (ಮಿನರಲ್ಸ್), ಕಿಣ್ವಗಳು (ಎಂಜೈಮ್ಸ್), ಎಮಿನೋ ಆಸಿಡ್ಸ, ತಂತು (ಫೈಬರ್) ಇತ್ಯಾದಿಗಳೆಲ್ಲವೂ ನಾಶವಾಗುತ್ತವೆ ಮತ್ತು ಉಳಿಯುವುದೆಂದರೆ ಯಾವುದೇ ಪೋಷಕಾಂಶವಿಲ್ಲದ ಹಾನಿಕರವಾದ ಸುಕ್ರೋಜ್ ಮಾತ್ರ!

ಉಪವಾಸದ ಬಗ್ಗೆ ವೈಜ್ಞಾನಿಕ ಸಂಶೋಧಕರ ನಿಷ್ಕರ್ಷ

ಪ್ಯೂರಿಂಗ್ಟನ್ ಎಂಬ ವಿಜ್ಞಾನಿಯು ಹೇಳುವುದೇನೆಂದರೆ, ‘ಹುಟ್ಟಿದಾಗಿನಿಂದ ೧೫ ದಿನಕ್ಕೊಮ್ಮೆ ಒಂದು ದಿನ ಪೂರ್ಣ ಉಪವಾಸ ಮಾಡಿದರೆ ವೃದ್ಧಾಪ್ಯವೇ ಬರುವುದಿಲ್ಲ.’

ಆಹಾರ ಮತ್ತು ಮನುಷ್ಯ ಹಾಗೂ ಮನಸ್ಸಿನ ಸಂಬಂಧ

ಆಹಾರದ ಸೂಕ್ಷ್ಮತಮ ಭಾಗದಿಂದ, ಅಂದರೆ ಸತ್ತ್ವ, ರಜ ಮತ್ತು ತಮ ಘಟಕಗಳಿಂದ ಮನಸ್ಸು ತಯಾರಾಗುತ್ತದೆ, ಆಹಾರಕ್ಕೆ ತಕ್ಕಂತೆ ನಮ್ಮ ಆಚಾರ-ವಿಚಾರಗಳು ಬದಲಾಗುತ್ತವೆ

ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು?

ಕೂದಲನ್ನು ತೊಳೆದ ನಂತರ ಅವುಗಳನ್ನು ಒಣಗಿಸಲು ಹಾಗೇ ಬಿಡಬೇಕಾಗುತ್ತದೆ. ಇಂತಹ ಕೂದಲಿನ ಕಡೆಗೆ ಕೆಟ್ಟ ಶಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿತವಾಗುತ್ತವೆ.

ಸ್ನಾನವನ್ನು ಮಾಡುವಾಗ ಪಠಿಸಬೇಕಾದ ಶ್ಲೋಕಗಳು

ಶ್ಲೋಕವನ್ನು ಹೇಳುತ್ತಾ ಸ್ನಾನವನ್ನು ಮಾಡುವುದರಿಂದ ನೀರಿನಲ್ಲಿರುವ ಚೈತನ್ಯವು ಅಣುರೇಣುಗಳಲ್ಲಿ ಸಂಕ್ರಮಣವಾಗಿ ದಿನವಿಡೀ ಮಾಡುವ ಕೃತಿಗಳನ್ನು ಮಾಡಲು ದೇಹವು ಸಕ್ಷಮವಾಗುತ್ತದೆ.

ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?

ಸೂರ್ಯ-ಚಂದ್ರರು ಅನ್ನರಸದ ಪೋಷಣೆಯನ್ನು ಮಾಡುವ ದೇವತೆಗಳಾಗಿದ್ದಾರೆ. ಗ್ರಹಣದ ಸಮಯದಲ್ಲಿ ಅವರ ಶಕ್ತಿಯು ಕಡಿಮೆಯಾಗಿರುವುದರಿಂದ ಭೋಜನವು ವರ್ಜ್ಯವಾಗಿದೆ.