ಸದ್ಯದ ಸ್ಪರ್ಧಾತ್ಮಕ ಮತ್ತು ಭೋಗವಾದಿ ಯುಗದಲ್ಲಿ ಅಸೂಯೆ, ದ್ವೇಷಭಾವನೆ, ಪ್ರಸಿದ್ಧಿಗಾಗಿ ಹಂಬಲ, ಭಿನ್ನಲಿಂಗದ ವ್ಯಕ್ತಿಗಳನ್ನು ನೋಡುವ ಕೆಟ್ಟ ದೃಷ್ಟಿಯಂತಹ ವಿಕೃತಿಗಳಿಂದ ಅನೇಕರು ಬಳಲುತ್ತಿದ್ದಾರೆ. ಸೂಕ್ಷ್ಮ ಸ್ತರದಲ್ಲಿ, ಈ ವಿಕೃತಿಜನ್ಯ ರಜ-ತಮಾತ್ಮಕ ಸ್ಪಂದನಗಳ ತೊಂದರೆದಾಯಕ ಪರಿಣಾಮವು ಇನ್ನೊಬ್ಬ ವ್ಯಕ್ತಿಯ ಮೇಲೆ ಅವರಿಗರಿವಿಲ್ಲದೆಯೇ ಆಗುತ್ತದೆ. ಇದನ್ನೇ ‘ದೃಷ್ಟಿ ತಗುಲುವುದು’ ಎಂದು ಹೇಳುತ್ತಾರೆ. ಹಾಗೆಯೇ ಕುಟುಂಬದಲ್ಲಿ ಜಗಳ, ವ್ಯಾಧಿ, ಹಣಕಾಸಿನ ತೊಂದರೆ, ಕೆಟ್ಟ ಸ್ವಪ್ನಗಳು ಬೀಳುವುದು, ನೈರಾಶ್ಯ, ಸಿಗರೇಟು, ಮದ್ಯ ಅಥವಾ ಮಾದಕ ವಸ್ತುಗಳ ವ್ಯಸನದಂತಹ ಸಮಸ್ಯೆಗಳು ಈಗ ಸಾಮಾನ್ಯ ವಿಷಯಗಳಾಗಿವೆ. ಜೀವನದ ಶೇ. ೮೦ ರಷ್ಟು ಸಮಸ್ಯೆಗಳ ಹಿಂದಿನ ಕಾರಣಗಳು ಸ್ಥೂಲದಲ್ಲಿವೆ ಎಂದು ಮೇಲ್ನೋಟಕ್ಕೆ ಕಂಡರೂ, ನಿಜವಾದ ಮೂಲ ಕಾರಣವು ಸೂಕ್ಷ್ಮದಲ್ಲಿ, ಅಂದರೆ ಕೆಟ್ಟ ಶಕ್ತಿಗಳ ತೊಂದರೆ ಆಗಿರುತ್ತದೆ. ಕೆಟ್ಟ ಶಕ್ತಿಗಳ ತೊಂದರೆಯೂ ದೃಷ್ಟಿ ತಗುಲುವುದೇ ಆಗಿದೆ.
ಅಧ್ಯಾತ್ಮದ ತಾತ್ತ್ವಿಕ ಭಾಗದ ಎಷ್ಟೇ ಅಧ್ಯಯನ ಮಾಡಿದರೂ, ಮನಸ್ಸಿನಲ್ಲಿರುವ ಪ್ರಶ್ನೆಗಳಿಗೆ ಉತ್ತರ ಸಿಗದಿದ್ದರೆ ಸಾಧನೆಯು ಸರಿಯಾಗಿ ಆಗುವುದಿಲ್ಲ. ಈ ನಿಟ್ಟಿನಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು (ಗುರುದೇವರು) ಅಧ್ಯಾತ್ಮಶಾಸ್ತ್ರದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಭಾಗದ ಬಗ್ಗೆ ಸಾಮಾನ್ಯವಾಗಿ ಉದ್ಭವಿಸುವ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಇದರ ಅಧ್ಯಯನ ಮಾಡಿ ಜಿಜ್ಞಾಸುಗಳು ಯೋಗ್ಯ ಸಾಧನೆ ಆರಂಭಿಸಲಿ ಮತ್ತು ಜೀವನವನ್ನು ನಿಜವಾದ ಅರ್ಥದಲ್ಲಿ ಸಾರ್ಥಕಗೊಳಿಸಿಕೊಳ್ಳುವಂತಾಗಲಿ ಎಂದು ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ!
ಆಧ್ಯಾತ್ಮಿಕ ತೊಂದರೆಗಳ ಕುರಿತಾದ ಪ್ರಶ್ನೆಗಳು
ಕಲಿಯುಗದ ವೈಶಿಷ್ಟ್ಯ ಮತ್ತು ಮಾನವ ಜೀವನದ ಮೇಲೆ ಅದರಿಂದಾಗುವ ಪರಿಣಾಮ
ಅ. ಕಲಿಯುಗವು ತಮೋಗುಣಿ ಸಂಸ್ಕಾರಗಳಿಂದ ಆವರಿಸಲ್ಪಟ್ಟಿದೆ.
ಆ. ಸಾಧನೆ ಮಾಡದೆ ಇರುವುದು, ಹಾಗೆಯೇ ಆಧ್ಯಾತ್ಮಿಕ ಉಪಾಯಗಳಿಲ್ಲದೆ ಜೀವನ ಕಳೆಯುವುದು ಎಂದರೆ ಈ ಜನ್ಮದಲ್ಲಿ ತನ್ನದೇ ಅತ್ಯಂತ ಹಾನಿ ಮಾಡಿಕೊಳ್ಳುವುದು ಮತ್ತು ಜನ್ಮ-ಮೃತ್ಯುವಿನ ಸುಳಿಯಲ್ಲಿ ಸಿಲುಕಿಕೊಳ್ಳುವುದಾಗಿದೆ.
ಇ. ಮನುಷ್ಯನಲ್ಲಿ ಷಡ್ರಿಪುಗಳ ಪ್ರಭಾವ ಅವನ ಕರ್ಮಕ್ಕೆ ಅನುಗುಣವಾಗಿ ಹೆಚ್ಚು-ಕಡಿಮೆ ಇರುತ್ತದೆ. ಕಲಿಯುಗದಲ್ಲಿ ಮನುಷ್ಯನು ಷಡ್ರಿಪುಗಳ ಪ್ರಭಾವದಿಂದ ಕಾರ್ಯ ಮಾಡುವ ಪ್ರಮಾಣವು ಹೆಚ್ಚಾಗಿರುವುದರಿಂದ ಅವನಿಗೆ ಇತರರ ಬಗ್ಗೆ ಅಸೂಯೆ ಇರುತ್ತದೆ, ಹಾಗೆಯೇ ಅನೇಕ ವಿಷಯಗಳ ಬಗ್ಗೆ ಅಪೇಕ್ಷೆ ಮತ್ತು ಆಸಕ್ತಿ ಇರುತ್ತದೆ. ಈ ಎಲ್ಲ ವಿಚಾರಗಳು ವಾಸನೆಗೆ ಸಂಬಂಧಿಸಿರುತ್ತವೆ.
ಈ. ಕಲಿಯುಗದ ಮನುಷ್ಯನ ಮನಸ್ಸು ಶೇ. 70 ರಷ್ಟು ವಿಕಲ್ಪಗಳಿಂದ ತುಂಬಿರುತ್ತದೆ. ಅವನ ಮನಸ್ಸಿನಲ್ಲಿ ಬರುವ ಮತ್ತು ವ್ಯಕ್ತವಾಗುವ ವಿಚಾರವು ತಮೋಗುಣಿಯಾಗಿರುತ್ತದೆ.
ಉ. ಸೃಷ್ಟಿಚಕ್ರದಲ್ಲಿ ಜೀವನ ನಡೆಸುವ ಇಂತಹ ತಾಮಸಿಕ ವಿಚಾರಗಳ ತಮೋಗುಣಿ ಬಿರುಗಾಳಿಯು ಜೀವದ ಮೇಲೆ ತನ್ನ ರಜ-ತಮಾತ್ಮಕ ಪ್ರಭಾವವನ್ನು ಬೀರುತ್ತಿರುತ್ತದೆ. ಕ್ರೋಧ, ದ್ವೇಷ, ಮತ್ಸರದಂತಹ ದೋಷಗಳ ಪರಿಣಾಮವು ಇತರರ ಮೇಲೆ ಉಂಟಾಗಿ, ಯಾರ ಬಗ್ಗೆ ನಮಗೆ ವಾಸನಾಜನ್ಯ ರೂಪದ ಆಸಕ್ತಿಯ ರಜ-ತಮಾತ್ಮಕ ವಿಚಾರಗಳು ಬರುತ್ತವೆಯೋ, ಆ ವಿಚಾರಗಳ ತೀವ್ರತೆಗೆ ಅನುಗುಣವಾಗಿ ಆಯಾ ಜೀವಕ್ಕೆ ದೃಷ್ಟಿ ತಗುಲುವ ಸಾಧ್ಯತೆ ಹೆಚ್ಚಿರುತ್ತದೆ.
ಕಲಿಯುಗದಲ್ಲಿ ಜೀವಗಳು ಸಾಧನೆ ಮಾಡುವ ಮಹತ್ವ
ಕಲಿಯುಗದಲ್ಲಿ ವಾಯುಮಂಡಲವೇ ತಮೋಗುಣಿ ವಿಚಾರಗಳಿಂದ ಆವರಿಸಲ್ಪಟ್ಟಿರುವುದರಿಂದ ಜೀವಕ್ಕೆ ಯಾರದ್ದಾದರೂ ದೃಷ್ಟಿ ತಗುಲುತ್ತಲೇ ಇರುತ್ತದೆ. ಅದಕ್ಕಾಗಿ ಜೀವವು ಸಾಧನೆ ಮಾಡಿ ತನ್ನ ಸುತ್ತಲಿನ ವಾಯುಮಂಡಲವನ್ನು ಸತತವಾಗಿ ಶುದ್ಧವಾಗಿಟ್ಟುಕೊಳ್ಳುವುದು ಮತ್ತು ಅದರಿಂದಲೇ ಶ್ವಾಸ ತೆಗೆದುಕೊಂಡು ಈಶ್ವರನ ಚೈತನ್ಯ ಲಹರಿಗಳ ಅಪೇಕ್ಷಿತ ಲಾಭವನ್ನು ಪಡೆದುಕೊಳ್ಳುವುದು ಇಷ್ಟವಾಗುತ್ತದೆ.
ಅತೃಪ್ತ ಪೂರ್ವಜರು
ಇತ್ತೀಚೆಗೆ ಹೆಚ್ಚಿನವರಿಗೆ ಅತೃಪ್ತ ಪೂರ್ವಜರ ಲಿಂಗದೇಹದಿಂದ ತೊಂದರೆಯಾಗುತ್ತದೆ. ಅತೃಪ್ತ ಪೂರ್ವಜರ ತೊಂದರೆಯ ಲಕ್ಷಣಗಳು ಯಾವುವು, ಅವರು ತೊಂದರೆ ಏಕೆ ಕೊಡುತ್ತಾರೆ ಮತ್ತು ಅವರಿಂದ ಆಗುವ ತೊಂದರೆಯ ನಿವಾರಣೆ ಹೇಗೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.
ಅ. ಪ್ರಶ್ನೆ : ಅತೃಪ್ತ ಪೂರ್ವಜರಿಂದ ಎಲ್ಲರಿಗೂ ತೊಂದರೆಯಾಗುತ್ತದೆಯೇ?
ಉತ್ತರ : ಪ್ರಸ್ತುತ ಕಾಲದಲ್ಲಿ ಹೆಚ್ಚಿನವರಿಗೆ ತೊಂದರೆ ಆಗಬಹುದು. ನಮಗೆಲ್ಲರಿಗೂ ಪ್ರಾರಬ್ಧದ ತೊಂದರೆ ಇದ್ದೇ ಇದೆ. ಪ್ರಾರಬ್ಧವನ್ನು ಅನುಭವಿಸಿ ಮುಗಿಸುವುದಕ್ಕಾಗಿಯೇ ನಾವು ಜನ್ಮ ತಾಳಿದ್ದೇವೆ. ಅದರಲ್ಲಿಯೂ ನಾವು ಕಲಿಯುಗದಲ್ಲಿ ಹುಟ್ಟಿದ್ದೇವೆ ಎಂದರೆ ಹೆಚ್ಚಾಗಿ ದುಃಖಗಳನ್ನೇ ಅನುಭವಿಸಿ ಮುಗಿಸಬೇಕಿದೆ. ಸತ್ಯಯುಗದಲ್ಲಿ ಅಥವಾ ತ್ರೇತಾಯುಗದಲ್ಲಿ ನಾವು ಇದ್ದಿದ್ದರೆ, ಸುಖವನ್ನು ಅನುಭವಿಸುವುದಕ್ಕಾಗಿಯೇ ನಮ್ಮ ಜನ್ಮವಾಗುತ್ತಿತ್ತು. ಪ್ರಾರಬ್ಧವು ದುಃಖವನ್ನು ಅನುಭವಿಸುವಲ್ಲಿ ಹೇಗೆ ಮಹತ್ವದ ಭಾಗವಾಗಿದೆಯೋ, ಹಾಗೆಯೇ ಎರಡನೇ ಮಹತ್ವದ ಅಂಶವೆಂದರೆ ನಮ್ಮ ಅತೃಪ್ತ ಪೂರ್ವಜರು!
ಹಿಂದೆ ಅಂದರೆ ಸುಮಾರು ೫೦ ರಿಂದ ೧೦೦ ವರ್ಷಗಳ ಹಿಂದೆ ಹೆಚ್ಚಿನ ಮನೆಗಳಲ್ಲಿ ಪಿತೃಪಕ್ಷ, ನಾಗಬಲಿ, ಕಾಗೆಗೆ ಅನ್ನ ಇಡುವುದನ್ನು ಕ್ರಮಬದ್ಧವಾಗಿ ಮಾಡುತ್ತಿದ್ದರು. ನಂತರದ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟ ಆರಂಭವಾಯಿತು, ಇಡೀ ಪೀಳಿಗೆಯು ಅದರತ್ತ ತಿರುಗಿತು. ಮನೆಯ ಕರ್ತೃ ಪುರುಷರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಹೋದ ಕಾರಣ ಯಾವ ಪರಂಪರೆಗಳಿದ್ದವೋ, ಅವೆಲ್ಲವೂ ನಿಂತುಹೋದವು. ಈಗಿನ ಪೀಳಿಗೆಯಂತೂ ಆಂಗ್ಲ ಭಾಷೆಯಲ್ಲಿ, ಕಾನ್ವೆಂಟ್‌ಗಳಲ್ಲಿ ಕಲಿಯುತ್ತಿದೆ; ಅಂದರೆ ಯಾವ ಸಂಸ್ಕಾರಗಳು ಆಗುವ ಸಾಧ್ಯತೆ ಇತ್ತೋ, ಅದೂ ಹೋಯಿತು. ಟಿವಿಯಲ್ಲಿ ವಿದೇಶಿ ಸಂಸ್ಕೃತಿಯನ್ನು ತೋರಿಸಲಾಗುತ್ತದೆ. ಆದ್ದರಿಂದ ದೇವರಿಗಾಗಿ ಏನನ್ನಾದರೂ ಮಾಡಬೇಕು, ಪೂರ್ವಜರಿಗಾಗಿ ಶ್ರಾದ್ಧಪಕ್ಷದಲ್ಲಿ ವಿಧಿ ಮಾಡಬೇಕು ಎಂಬುದು ನಮಗೆ ತಿಳಿಯುವುದೇ ಇಲ್ಲ. ಇದರಿಂದ ಬಹುತೇಕ ಜನರಿಗೆ ಈ ತೊಂದರೆಯಾಗುತ್ತದೆ. ವೈಯಕ್ತಿಕವಾಗಿ ಉತ್ತಮ ಸಾಧನೆ ಮಾಡಿದವರಿಗೆ, ಅಂದರೆ ಸತತವಾಗಿ ಸತ್ಯದ ವಿಚಾರವೇ ಯಾರ ಮನಸ್ಸಿನಲ್ಲಿ ನಡೆಯುತ್ತಿದೆಯೋ, ನಾಮಸ್ಮರಣೆ ನಡೆಯುತ್ತಿದೆಯೋ, ಸೇವೆ ಮತ್ತು ತ್ಯಾಗವಿದೆಯೋ ಅವರಿಗೆ ತೊಂದರೆಯಾಗುವುದಿಲ್ಲ; ಆದರೆ ಯಾರಿಂದ ಇಷ್ಟೊಂದು ಸಾಧ್ಯವಾಗುವುದಿಲ್ಲವೋ, ಅವರಿಗೆ ತೊಂದರೆಯಾಗಬಹುದು.
ಅತೃಪ್ತ ಪೂರ್ವಜರ ತೊಂದರೆಯ ಬಗ್ಗೆ ಬುದ್ಧಿಗೆ ತಿಳಿಯುವ ಕೆಲವು ಉದಾಹರಣೆಗಳನ್ನು ನೋಡೋಣ. ಒಬ್ಬನ ಆರ್ಥಿಕ ಸ್ಥಿತಿ ಸರಿಯಿಲ್ಲ, ಪ್ರಯತ್ನ ಮಾಡುತ್ತಿದ್ದರೂ ಸತತವಾಗಿ ತೊಂದರೆಯಾಗುತ್ತಿದೆ. ಕೆಲಸ-ಕಾರ್ಯಗಳಿಲ್ಲ, ಅಂತಹ ಸಮಯದಲ್ಲಿ ಅರ್ಧದಷ್ಟು ಜನರ ವಿಷಯದಲ್ಲಿ ಪ್ರಾರಬ್ಧದಿಂದ, ಇನ್ನುಳಿದ ಅರ್ಧದಷ್ಟು ಜನರ ವಿಷಯದಲ್ಲಿ ಅತೃಪ್ತ ಪೂರ್ವಜರಿಂದ ಹೀಗೆ ನಡೆಯುತ್ತಿರುತ್ತದೆ. ಅತೃಪ್ತ ಪೂರ್ವಜರ ತೊಂದರೆಯಿಂದ ಕೆಲವೊಮ್ಮೆ ಮದುವೆಯೇ ನಿಶ್ಚಯವಾಗುವುದಿಲ್ಲ, ಮದುವೆಯಾದರೂ ಗಂಡ-ಹೆಂಡತಿಯ ನಡುವೆ ಹೊಂದಾಣಿಕೆಯಾಗುವುದಿಲ್ಲ. ಮದುವೆಯಾಗಿ ಗಂಡ-ಹೆಂಡತಿಯ ನಡುವೆ ಹೊಂದಾಣಿಕೆಯಿದ್ದರೂ ಮಗು ಆಗುವುದಿಲ್ಲ. ಗರ್ಭಧರಿಸಿದರೂ ಎರಡು ಅಥವಾ ನಾಲ್ಕನೇ ತಿಂಗಳಿನಲ್ಲಿಯೇ ಗರ್ಭಪಾತವಾಗುತ್ತದೆ. ಮಗು ಹುಟ್ಟಿದರೂ ಅದು ಶಾರೀರಿಕವಾಗಿ ಅಥವಾ ಮಾನಸಿಕವಾಗಿ ಅಂಗವಿಕಲವಾಗಿರುತ್ತದೆ. ಮಗು ಚೆನ್ನಾಗಿ ಹುಟ್ಟಿದರೂ ಅದರ ಬಾಲಮೃತ್ಯು ಅಥವಾ ಅಪಮೃತ್ಯುವಾಗುತ್ತದೆ. ಹೀಗೆ ಎಲ್ಲಿ ಒಂದು ಕುಟುಂಬದಲ್ಲಿ ಕಂಡುಬರುತ್ತದೆಯೋ, ಅಲ್ಲಿ ಅತೃಪ್ತ ಪೂರ್ವಜರ ತೊಂದರೆ ಇರಬಹುದು ಎಂದು ತಿಳಿಯಬೇಕು. ಇಲ್ಲಿ ವೈದ್ಯಕೀಯ ಚಿಕಿತ್ಸೆಯಿಂದ ಉಪಯೋಗವಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಆದರೆ ವೈದ್ಯರು ಸಹಾಯ ಮಾಡಲು ಸಾಧ್ಯವಾಗುವುದಿಲ್ಲ ಎಂಬುವುದು ಬುದ್ಧಿಯಿಂದ ತಿಳಿಯುವ ಭಾಗವಾಯಿತು ಮತ್ತು ಬುದ್ಧಿಗೆ ಯಾವುದು ತಿಳಿಯುವುದಿಲ್ಲವೋ ಅದು ಅಧ್ಯಾತ್ಮದ ವಿಷಯವಾಗಿರಬಹುದು.
ತ್ರಿಪಿಂಡಿ ಶ್ರಾದ್ಧವನ್ನು ಪ್ರತಿಯೊಬ್ಬರೂ ಮಾಡಬೇಕೆಂದಿಲ್ಲ. ಯಾರಿಗೆ ಏನಾದರೂ ತೊಂದರೆ ಇದೆಯೋ, ಅವರು ಮಾತ್ರ ಅವಶ್ಯವಾಗಿ ಮಾಡಬೇಕು. ತ್ರಿಪಿಂಡಿ ಶ್ರಾದ್ಧ, ನಾರಾಯಣ ನಾಗಬಲಿ ಇವೆಲ್ಲವನ್ನೂ ಮಾಡಲೇಬೇಕು. ಭಗೀರಥನು ೬೦ ಸಾವಿರ ವರ್ಷಗಳ ಕಾಲ ತಪಸ್ಸು ಮಾಡಿದನು. ಆಗ ಅವನ ಎಲ್ಲಾ ಪೂರ್ವಜರಿಗೆ ಮುಕ್ತಿ ದೊರೆಯಿತು. ನಮ್ಮ ಆಯುಷ್ಯವು ಚಿಕ್ಕದಾಗಿರುತ್ತದೆ, ಅಧ್ಯಾತ್ಮವು ತಿಳಿಯುವುದು ತಡವಾಗಿ ಮತ್ತು ಎಲ್ಲ ವ್ಯವಹಾರಗಳನ್ನು ಸಾಂಭಾಳಿಸಿಕೊಂಡು ಸ್ವಲ್ಪವೇ ಸಾಧನೆ ಮಾಡುವಾಗ ನಾವು ಪೂರ್ವಜರಿಗೆ ಮುಕ್ತಿ ಹೇಗೆ ನೀಡಲು ಸಾಧ್ಯ? ಅದಕ್ಕಿಂತ ಈ ವಿಧಿಗಳನ್ನು ಮಾಡಿದರೆ ಸಾಧನೆಯು ಉಳಿಯುತ್ತದೆ. ಇಲ್ಲದಿದ್ದರೆ ನಾವು ಮಾಡಿದ ಸಾಧನೆಯು ಅತೃಪ್ತ ಪೂರ್ವಜರ ಮುಕ್ತಿಗಾಗಿಯೇ ವ್ಯಯವಾಗುತ್ತಿರುತ್ತದೆ.
ಅತೃಪ್ತ ಪೂರ್ವಜರು ತೊಂದರೆ ಏಕೆ ಕೊಡುತ್ತಾರೆ? ಪೂರ್ವಜರ ಸಂಪತ್ತನ್ನು ನಾವು ಅನುಭವಿಸುತ್ತೇವೆ. ‘ನಮ್ಮ ತಂದೆಯವರು ಇಟ್ಟಿದ್ದಾರೆ’, ‘ನಮ್ಮ ಅಜ್ಜ ಇಟ್ಟಿದ್ದಾರೆ’ ಎಂದು ಪಡೆದುಕೊಳ್ಳಲು ನಮಗೆ ಸರಿಯೆನಿಸುತ್ತದೆ. ಭೂಮಿ-ಮನೆಯಲ್ಲಿ ಪಾಲು ಪಡೆಯಲು ನಾವು ಹಿಂದೆ-ಮುಂದೆ ನೋಡುವುದಿಲ್ಲ. ಕೆಲವೊಂದೆಡೆ ಒಂದು ಮರಕ್ಕಾಗಿಯೂ ಜಗಳವಾಡುತ್ತಾರೆ!
ನಮ್ಮ ಎಲ್ಲ ಪೂರ್ವಜರೂ ಸಂತರು-ಮಹಾತ್ಮರು ಆಗಿ ಹೋಗಿಲ್ಲ. ಇವರೆಲ್ಲರೂ ನಮ್ಮಂತೆಯೇ ಸಾಮಾನ್ಯ ಮನುಷ್ಯರಾಗಿದ್ದಾರೆ. ಅವರು ಕೂಡ ಸಾಧನೆ ಮಾಡಿರುವುದಿಲ್ಲ. ಆದ್ದರಿಂದ ಅವರು ಸಿಲುಕಿಕೊಂಡಿರುತ್ತಾರೆ. ಅವರು ಹೇಳಲು ಪ್ರಯತ್ನಿಸುತ್ತಾರೆ, ‘ನಾನು ಇಲ್ಲಿ ಭುವರ್ಲೋಕದಲ್ಲಿ ಸಿಲುಕಿಕೊಂಡಿದ್ದೇನೆ! ನನಗಾಗಿ ಏನನ್ನಾದರೂ ಮಾಡಿ!’ ಎಂದು. ಆದರೆ ಅದನ್ನು ಕೇಳಿಸಿಕೊಳ್ಳುವ ಸಾಮರ್ಥ್ಯ ನಮಗಿಲ್ಲ. ಹೇಗೆ ನಾಯಿ, ಬೆಕ್ಕು, ಕಾಗೆಗಳಿಗೆ ಏನೋ ತಿಳಿಯುತ್ತದೆಯೋ (ಏಕೆಂದರೆ ಅವರ ಸೂಕ್ಷ್ಮ ಸ್ಪಂದನಗಳಿಗೆ ಸಂವೇದನಾಶೀಲರಾಗಿರುತ್ತಾರೆ), ಹಾಗೆ ನಮ್ಮ ವಿಷಯದಲ್ಲಿ ಆಗುವುದಿಲ್ಲ.
‘ಇದೆಲ್ಲ ನನ್ನ ಕರ್ತೃತ್ವದಿಂದ ನಾನು ಗಳಿಸಿದ್ದೇನೆ’ ಎಂದು ನಮಗೆ ಅನಿಸುತ್ತದೆ; ಆದ್ದರಿಂದ ಕೂಡ ಅತೃಪ್ತ ಪೂರ್ವಜರು ನಮಗೆ ದುಃಖ ಕೊಡುತ್ತಾರೆ. ನಾವು ಯಾರಿಗಾದರೂ ಕೇಳುತ್ತೇವೆ, ‘ನಮ್ಮ ಮನೆಯಲ್ಲಿ ಹೊಂದಾಣಿಕೆಯಾಗುತ್ತಿಲ್ಲ, ಏನಾಗಿದೆ?’ ಎಂದು. ಆಗ ಯಾರಾದರೂ ಹೇಳುತ್ತಾರೆ, ‘ನಿಮ್ಮ ಮನೆಯಲ್ಲಿ ಅತೃಪ್ತ ಪೂರ್ವಜರ ತೊಂದರೆ ಇದೆ. ನಾರಾಯಣ-ನಾಗಬಲಿ ಮಾಡಿಸಿ, ತ್ರಿಪಿಂಡಿ ಶ್ರಾದ್ಧ ಮಾಡಿ!’ ಎಂದು. ಅದನ್ನು ಮಾಡಿದ ಕೂಡಲೇ ಬಹಳಷ್ಟು ಜನರ ಜೀವನವು ಸುಖಮಯವಾಗಿ ಹೋಗುತ್ತದೆ. ಭಾರತವನ್ನು ಹೊರತುಪಡಿಸಿ ಬೇರೆಲ್ಲೂ ಈ ಶಾಸ್ತ್ರವೇ ತಿಳಿದಿರುವುದಿಲ್ಲ. ಅಲ್ಲಿನ ಜನರು ಜೀವನಪೂರ್ತಿ ದುಃಖಿಯಾಗಿಯೇ ಇರುತ್ತಾರೆ.
ಆ. ಪ್ರಶ್ನೆ : ತ್ರಿಪಿಂಡಿ ಶ್ರಾದ್ಧವನ್ನು ಒಂದೇ ಬಾರಿ ಮಾಡಿದರೆ ನಡೆಯುತ್ತದೆಯೇ? ಅದರಿಂದ ಅತೃಪ್ತ ಪೂರ್ವಜರ ತೊಂದರೆಗಳು ದೂರವಾಗುತ್ತವೆಯೇ ಅಥವಾ ೨-೩ ಬಾರಿ ಈ ವಿಧಿಯನ್ನು ಮಾಡಬೇಕಾಗುತ್ತದೆಯೇ?
ಉತ್ತರ : ನಮ್ಮಲ್ಲಿ ನೂರಾರು ಪೂರ್ವಜರಿದ್ದಾರೆ. ಒಮ್ಮೆ ತ್ರಿಪಿಂಡಿ ಶ್ರಾದ್ಧ ಮಾಡಿದಾಗ ಯಾವ ಅತೃಪ್ತ ಪೂರ್ವಜರ ಮುಕ್ತಿಯ ಸಮಯವು ಹತ್ತಿರ ಬಂದಿರುತ್ತದೆಯೋ, ಅವರು ಆ ಯೋನಿಯಿಂದ ಮುಕ್ತರಾಗಿ ಹೋಗುತ್ತಾರೆ. ಬಾಕಿ ಇರುವ ನೂರಾರು ಅತೃಪ್ತ ಪೂರ್ವಜರು ಹಾಗೆಯೇ ಉಳಿದು ಹೋಗುತ್ತಾರೆ; ಆದರೆ ಇವರೆಲ್ಲರೂ ತೊಂದರೆ ಕೊಡುವವರಾಗಿರುವುದಿಲ್ಲ. ಹಂತ ಹಂತವಾಗಿ ನಮಗೆ ತೊಂದರೆಗಳು ಉಂಟಾಗುತ್ತವೆ. ಸಾಧಾರಣವಾಗಿ ಶೇ. ೭೦-೮೦ ರಷ್ಟು ಜನರಿಗೆ ತ್ರಿಪಿಂಡಿ ಶ್ರಾದ್ಧವನ್ನು ಒಂದೇ ಬಾರಿ ಮಾಡಿದರೆ ಸಾಕು. ಇನ್ನುಳಿದ ಶೇ. ೫-೨೦ ರಷ್ಟು ಜನರಿಗೆ ಜೀವನದಲ್ಲಿ ಎರಡು ಅಥವಾ ಮೂರು ಬಾರಿ ಮಾಡಬೇಕಾಗುತ್ತದೆ.
ಇ. ಪ್ರಶ್ನೆ : ತ್ರಿಪಿಂಡಿ ಶ್ರಾದ್ಧ ಮಾಡುವಾಗ ಕುಟುಂಬದ ಎಲ್ಲಾ ಸದಸ್ಯರೂ ಉಪಸ್ಥಿತರಿರುವುದು ಆವಶ್ಯಕವೇ?
ಉತ್ತರ : ಎಲ್ಲರೂ ಇರುವುದು ಆವಶ್ಯಕವಲ್ಲ; ಆದರೆ ಯಾರು ಹೋಗುತ್ತಾರೋ ಅವರ ಬಗ್ಗೆ ‘ಇವರು ನನಗಾಗಿ ಏನನ್ನಾದರೂ ಮಾಡಿದರು’ ಎಂದು ಪಿತೃಗಳಿಗೆ ಅನಿಸುತ್ತದೆ. ಅಣ್ಣ-ತಮ್ಮಂದಿರು ಖರ್ಚನ್ನು ಹಂಚಿಕೊಂಡರೆ ಇಬ್ಬರ ಬಗ್ಗೆಯೂ ಪಿತೃಗಳಿಗೆ ಹೀಗೆನಿಸುತ್ತದೆ. ಒಬ್ಬನೇ ಸಹೋದರ ಖರ್ಚು ಮಾಡಿದರೆ ಪಿತೃಗಳು ಅವನ ಮೇಲೆಯೇ ಆನಂದಿತರಾಗುತ್ತಾರೆ. ಪಿತೃಗಳು ಮುಕ್ತರಾಗುವಾಗ ಕೇವಲ ತೊಂದರೆ ಕೊಡುವುದನ್ನು ನಿಲ್ಲಿಸುತ್ತಾರೆ ಎಂದಲ್ಲ, ಬದಲಿಗೆ ನಮಗೆ ಏನಾದರೂ ಶುಭವನ್ನೂ ಮಾಡುತ್ತಾರೆ. ಕೊನೆಗೆ ನಾವು ಅವರ ಕುಟುಂಬದವರೇ ತಾನೇ! ಭೂತವು ಹೋಗುವಾಗ ಕೋಪದಿಂದಲೇ ಹೊರಟು ಹೋಗುತ್ತದೆ; ಆದರೆ ಅತೃಪ್ತ ಪಿತೃಗಳು ಹೋಗುವಾಗ ‘ನನಗಾಗಿ ಮೊಮ್ಮಕ್ಕಳು, ಮರಿಮಕ್ಕಳು ಏನೋ ಮಾಡಿದರು’ ಎಂದು ಅವರಿಗೆ ಅರಿವಿರುತ್ತದೆ; ಆದ್ದರಿಂದ ಅವರು ನಮಗೆ ಏನಾದರೂ ಸಹಾಯ ಮಾಡುತ್ತಾರೆ. ಆದ್ದರಿಂದ ಎಷ್ಟು ಜನರಿಗೆ ಸಾಧ್ಯವೋ ಅಷ್ಟು ಜನರು ಹೋಗಬೇಕು. ಅದು ಪೂರ್ವಜರಿಗೆ ಶ್ರದ್ಧಾಂಜಲಿ ಅರ್ಪಿಸುವ ವಿಧಿಯೇ ಆಗಿದೆ.
ಒಳ್ಳೆಯ ಶಕ್ತಿ
ಒಳ್ಳೆಯ ಶಕ್ತಿಗಳು ತೊಂದರೆ ಏಕೆ ಕೊಡುತ್ತವೆ ಎಂಬುದಕ್ಕೆ ಕಾರಣವು ಮುಂದಿನ ಪ್ರಶ್ನೋತ್ತರದಿಂದ ತಿಳಿಯುವುದು.
ಅ. ಪ್ರಶ್ನೆ : ಕೆಟ್ಟ ಶಕ್ತಿಗಳ ತೊಂದರೆಯಾಗುವಂತೆ, ಒಳ್ಳೆಯ ಶಕ್ತಿಗಳಾದ ಕುಲದೇವತೆ, ಗ್ರಾಮದೇವತೆ ಇವರಿಂದಲೂ ತೊಂದರೆ ಆಗುತ್ತದೆಯೇ?
ಉತ್ತರ : ಯಾರಿಗೆ ಸಾಧನೆ ಮಾಡುವ ಸಾಮರ್ಥ್ಯವಿದೆಯೋ, ಅಂದರೆ ಸಾಧನೆ ಮಾಡಿದರೆ ಇದೇ ಜನ್ಮದಲ್ಲಿ ಅವನು ತುಂಬಾ ಪ್ರಗತಿ ಹೊಂದಲು ಸಾಧ್ಯವಿದೆ, ಆದರೂ ಅವನು ಸಾಧನೆ ಮಾಡುತ್ತಿಲ್ಲವಾದರೆ, ಕುಲದೇವತೆಯು ಅವನಿಗೆ ಖಂಡಿತವಾಗಿಯೂ ತೊಂದರೆ ಕೊಡುತ್ತಾರೆ. ಒಬ್ಬ ಹುಡುಗ ಹುಷಾರಿದ್ದಾನೆ, ಅವನು ಸರಿಯಾಗಿ ಅಧ್ಯಯನ ಮಾಡಿದರೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಿದೆ, ಆದರೂ ಅವನು ಗಮನವಿಟ್ಟು ಅಧ್ಯಯನ ಮಾಡುತ್ತಿಲ್ಲವೆಂದರೆ ಶಿಕ್ಷಕರು ಅವನ ಹಿಂದೆ ಬೀಳುತ್ತಾರೆ, ಅವನನ್ನು ಶಿಕ್ಷಿಸುತ್ತಾರೆ. ದಡ್ಡನ ಹಿಂದೆ ಯಾರೂ ಬೀಳುವುದಿಲ್ಲ ಅಲ್ಲವೇ? ಯಾರಾದರೂ ಸಾಧನೆ ಮಾಡುತ್ತಿದ್ದರೆ ಕುಲದೇವತೆಗೆ ‘ಇವನು ನನ್ನವನು, ಇವನು ಪ್ರಗತಿ ಹೊಂದಲಿ’ ಎಂದೆನಿಸುತ್ತದೆ, ಆಗ ಅವರು ತೊಂದರೆ ಕೊಡುತ್ತಾರೆ. ಯಾರಿಗಾದರೀ ನಾವು ಕೇಳಿದಾಗ ನಮಗೆ ತಿಳಿಯುತ್ತದೆ. ಕುಲದೇವತೆಯ ಬಳಿ ನಾವು ಹೋಗಬೇಕು, ದೂರವಿದ್ದರೆ ವರ್ಷಕ್ಕೊಮ್ಮೆಯಾದರೂ ಹೋಗಬೇಕು. ಅವರ ಜಪ ಮಾಡಬೇಕು. ಕುಲಾಚಾರವನ್ನು ಪಾಲಿಸಬೇಕು. ಇದರಿಂದಲೇ ಆಧ್ಯಾತ್ಮಿಕ ಸಾಧನೆಯ ಆರಂಭವಾಗುತ್ತದೆ. ತೊಂದರೆ ದೂರವಾಗಲಿ ಎಂದು ಪ್ರಾರಂಭಿಸಿದ ಸಾಧನೆಯ ರುಚಿ ಹಿಡಿದಾಗ ತೊಂದರೆಯ ನಿವಾರಣೆಯಾದ ಮೇಲೆಯೂ ಮುಂದುವರೆಯುತ್ತದೆ.
ಊರನ್ನು ರಕ್ಷಿಸುವ ಹೊಣೆಗಾರಿಕೆ ಗ್ರಾಮದೇವತೆಯ ಮೇಲಿರುತ್ತದೆ. ಅವರು ನಮಗಾಗಿ ಇಷ್ಟು ಮಾಡುತ್ತಾರೆ ಎಂದಾದರೆ, ಗ್ರಾಮದೇವತೆಯ ವಾರ್ಷಿಕ ಉತ್ಸವದಲ್ಲಿಯಾದರೂ ನಾವು ಪಾಲ್ಗೊಳ್ಳಬೇಕು. ತನು, ಮನ, ಧನದಿಂದ ಏನನ್ನಾದರೂ ಮಾಡಬೇಕು. ಯಾರು ಸಾಧನೆ ಮಾಡುವುದಿಲ್ಲವೋ ಅವರ ಪಾಲಿಗೆ ಈ ನಿಯಮಗಳಿವೆ. ಯಾರು ಸಾಧನೆಗೆ ಹಚ್ಚಿಕೊಂಡಿದ್ದಾರೋ, ಯಾರಿಗೆ ಗುರುಗಳ ಕೃಪೆಯಾಗಿದೆಯೋ ಅವರ ವಿಷಯದಲ್ಲಿ ಇಂತಹ ಪ್ರಶ್ನೆಗಳು ಉಂಟಾಗುವುದಿಲ್ಲ. ಗ್ರಾಮದೇವತೆ ಇತ್ಯಾದಿ ಕ್ಷುದ್ರ ದೇವತೆಗಳಾಗಿವೆ. ಒಂದು ಕಚೇರಿಯ ಮುಖ್ಯ ಅಧಿಕಾರಿಗಳು ನಿಮಗೆ ಪರಿಚಯವಿದ್ದರೆ ಸಾಕು ತಾನೆ, ನಮ್ಮ ಕೆಲಸ ಆಗುತ್ತದೆ. ಗುರುಗಳು ಅಥವಾ ಕುಲದೇವತೆಯು ನಮ್ಮ ಮೇಲೆ ಪ್ರಸನ್ನರಾದರೆ, ಸಾಧನೆ ಮಾಡುತ್ತಿದ್ದರೆ, ಆಗ ಗ್ರಾಮದೇವತೆಗಾಗಿ ಏನೂ ಮಾಡದಿದ್ದರೂ ನಡೆಯುತ್ತದೆ.
ಯುಗಗಳಿಗನುಸಾರ ಮಾನವನು ಭೋಗಿಸಬೇಕಾಗುವ ರೋಗಗಳು, ಅವುಗಳ ಸ್ವರೂಪ ಮತ್ತು ಹಿಂದಿನ ಆಧ್ಯಾತ್ಮಿಕ ಕಾರ್ಯಕಾರಣಭಾವ
‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?
ಅಮಾವಾಸ್ಯೆ ಮತ್ತು ಹುಣ್ಣಿಮೆಯ ಚಂದ್ರನಿಂದ ಮನುಷ್ಯರ ಮೇಲಾಗುವ ಪರಿಣಾಮ
ವಾಹನವನ್ನು ದೃಷ್ಟಿ ತಗಲುವುದರಿಂದ ಹೇಗೆ ರಕ್ಷಿಸುವುದು?
ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ
ವಾಸ್ತುಗೆ ದೃಷ್ಟಿ ತಗಲುತ್ತದೆ ಎಂದರೆ ಏನಾಗುತ್ತದೆ?