ಇಂದಿನ ಯುಗವನ್ನು ವಿಜ್ಞಾನಯುಗವೆಂದು ಕರೆಯಲಾಗುತ್ತದೆ. ವಿಜ್ಞಾನದಿಂದ ಭೌತಿಕ ಪ್ರಗತಿಯಾಗಿದೆ, ಸುಖ ಸೌಲಭ್ಯಗಳು ದೊರೆತಿವೆ ಎಂದೆನಿಸಿದರೂ, ಮಾನವನಿಗೆ ಆತ್ಮಿಕ ಶಾಂತಿ ಮಾತ್ರ ದೂರವೇ. ಶಾಂತಿ, ನೆಮ್ಮದಿ ನೀಡದ ವಿಜ್ಞಾನವು ನಿಜವಾಗಿಯೂ ವಿಜ್ಞಾನವೇ? .
‘ವಿಜ್ಞಾನ’ ಶಬ್ದದ ಅರ್ಥ
ವಿಶೇಷ ಜ್ಞಾನ, ಶಾಸ್ತ್ರೀಯ ಜ್ಞಾನ, ತತ್ತ್ವಜ್ಞಾನ, ಅಪರೋಕ್ಷಜ್ಞಾನ, ಬ್ರಹ್ಮಜ್ಞಾನ ಎಂದು ವಿಜ್ಞಾನ ಎಂಬ ಶಬ್ದಕ್ಕೆ ವಿವಿಧ ಅರ್ಥಗಳಿವೆ; ಆದರೆ ಸಾಮಾನ್ಯವಾಗಿ ಜಡ ಪದಾರ್ಥ ಮತ್ತು ನೈಸರ್ಗಿಕ ಘಟನೆಗಳನ್ನು ನಿರೀಕ್ಷಿಸಿ, ಪ್ರಯೋಗಗಳನ್ನು ನಡೆಸಿ ನಮ್ಮ ಇಂದ್ರಿಯಗಳ ಸಹಾಯದಿಂದ ಯಾವ ಜ್ಞಾನವು ಪ್ರಾಪ್ತವಾಗುತ್ತದೆಯೋ, ಅದನ್ನು ಕ್ರಮಬದ್ಧ ಮತ್ತು ನಿಯಮಬದ್ಧ ಮಾಡಿದಾಗ ಯಾವ ಶಾಸ್ತ್ರವು ನಿರ್ಮಾಣವಾಗುತ್ತದೆಯೋ, ಅದನ್ನು ‘ವಿಜ್ಞಾನ’ ಎಂದು ಕರೆಯುತ್ತಾರೆ.
ವಿಜ್ಞಾನದ ಕಾರ್ಯಪದ್ಧತಿ
ಈ ಬಗ್ಗೆ ಪ್ರಾ. ಕೆ.ವಿ. ಬೆಲಸರೆಯವರು ಒಂದು ವಿವೇಚನೆಯನ್ನು ಮಾಡಿದ್ದಾರೆ. ಅದು ಹೀಗಿದೆ – ಭೌತಿಕ ವಸ್ತುಗಳ ಗುಣಧರ್ಮ ಮತ್ತು ಪರಸ್ಪರ ಸಂಬಂಧವನ್ನು ತಿಳಿದುಕೊಂಡು, ಅವುಗಳಲ್ಲಿನ ಸಾಮಾನ್ಯ ನಿಯಮಗಳನ್ನು ಶೋಧಿಸಿ ತೆಗೆಯುವುದು ಹಾಗೂ ಆ ನಿಯಮಗಳ ತರ್ಕಬದ್ಧ ಪ್ರಣಾಲಿಯನ್ನು ಮಾಡುವುದು ವಿಜ್ಞಾನದ ಕಾರ್ಯವಾಗಿದೆ. ಸೂಕ್ಷ್ಮ ಪರೀಕ್ಷಣೆ, ವರ್ಗೀಕರಣ, ನಿಯಮ ಮತ್ತು ಅವುಗಳ ಆಧಾರದ ಮೇಲೆ ಒಂದು ತೀರ್ಮಾನಕ್ಕೆ ಬರುವುದು ಇವು ವಿಜ್ಞಾನದ ನಾಲ್ಕು ಹಂತಗಳಾಗಿವೆ. ವಸ್ತುಗಳ ವರ್ತನೆಯ ನಿಯಮಗಳು ತಿಳಿದರೆ, ಅವುಗಳ ವರ್ತನೆಯನ್ನು ನಿಯಂತ್ರಿಸುವ ಪ್ರಯತ್ನವನ್ನು ಮಾಡಲು ಸಾಧ್ಯವಾಗುತ್ತದೆ. ಇಂತಹ ರೀತಿಯಲ್ಲಿ ವಿದ್ಯುತ್, ಉಷ್ಣತೆ, ಪ್ರಕಾಶ, ಧ್ವನಿ, ನೀರು, ವಾಯು ಇತ್ಯಾದಿ ಶಕ್ತಿಗಳನ್ನು ಸ್ವಾಧೀನಪಡಿಸಿಕೊಂಡು ಸ್ಥಳ, ಕಾಲ, ಗತಿ, ರೋಗ ಇತ್ಯಾದಿಗಳ ಮೇಲೆ ಮನುಷ್ಯನು ವಿಜಯ ಸಾಧಿಸಲು ಸಾಧ್ಯವಾಗುತ್ತದೆ.
ಈ ಜಗತ್ತಿನ ವಸ್ತುಗಳ ವರ್ತನೆಯ ಯಾವ ವಿವಿಧ ನಿಯಮಗಳಿವೆಯೋ, ಅವುಗಳಲ್ಲಿ ಕಾರ್ಯಕಾರಣಭಾವ (cause and effect) ಎಂಬ ನಿಯಮವು ಅತ್ಯಂತ ವ್ಯಾಪಕವಾಗಿ ಕಂಡುಬರುತ್ತದೆ; ಆದ್ದರಿಂದ ವಿಜ್ಞಾನದ ಮುಖ್ಯ ಒತ್ತು ವಸ್ತುಗಳ ನಡುವಿನ ಕಾರ್ಯಕಾರಣ ಸಂಬಂಧವನ್ನು ನಿಶ್ಚಿತಗೊಳಿಸುವುದರ ಮೇಲಿರುತ್ತದೆ. ವಿಜ್ಞಾನದ ದೃಷ್ಟಿಯಿಂದ ಜಗತ್ತಿನ ಎಲ್ಲಾ ಘಟನೆಗಳು ಅತ್ಯಂತ ನಿಯಮಬದ್ಧವಾಗಿವೆ. ನಿಸರ್ಗದಲ್ಲಿ ಗೂಢ, ಚಮತ್ಕಾರಿ ಎಂದು ಯಾವುದೂ ಇಲ್ಲ. ಯಾವ ಘಟನೆಗಳು ಗೂಢವೆನಿಸುತ್ತವೆಯೋ, ಅವುಗಳ ಕಾರ್ಯಕಾರಣಭಾವ ತಿಳಿದ ನಂತರ ಅವು ಗೂಢವೆನಿಸುವುದಿಲ್ಲ. ಕಾರ್ಯಕಾರಣಭಾವದ ಜ್ಞಾನದ ಉಪಯೋಗವನ್ನು ಮಾಡಿಕೊಂಡು ಮನುಷ್ಯನು ರೈಲು ಗಾಡಿ, ವಿಮಾನಗಳು, ವಿದ್ಯುತ್ ದೀಪಗಳು, ಆಕಾಶವಾಣಿ, ದೂರವಾಣಿ ಇತ್ಯಾದಿ ಸಾಧನಗಳನ್ನು ನಿರ್ಮಿಸಿದ್ದರಿಂದ ನಮ್ಮ ನಿತ್ಯದ ಜೀವನವು ಪೂರ್ತಿಯಾಗಿ ಬದಲಾಗಿ ಹೋಗಿದೆ.
ವಿಜ್ಞಾನ ಮತ್ತು ಭಾರತೀಯ ಸಮಾಜ
ಅ. ಭಾರತೀಯರ ಅಂತರ್ಮುಖ ವೃತ್ತಿಯಿಂದಾಗಿ ಅವರ ವಿಜ್ಞಾನದ ಕಡೆಗೆ ನಿರ್ಲಕ್ಷವಾದುದರಿಂದ ದೇಶದ ವ್ಯಾವಹಾರಿಕ ಉನ್ನತಿಯು ಕುಂಠಿತವಾಗುವುದು: ಪ್ರಾಚೀನ ಭಾರತೀಯ ಪಂಡಿತರು ಸಮಾಜಕ್ಕೆ ಆಂತರಿಕ ಮತ್ತು ಬಾಹ್ಯ ಸುಖವು ಸಮಾನವಾಗಿ ಲಭಿಸಲಿ ಎಂಬ ದೃಷ್ಟಿಯಿಂದ ಪ್ರಯತ್ನ ಮಾಡಿದರು; ಏಕೆಂದರೆ ಆಂತರಿಕ ಸುಖವಿಲ್ಲದೆ ಬಾಹ್ಯ ಸುಖವು ನಿರರ್ಥಕವಾಗುತ್ತದೆ. ಕ್ರಿಸ್ತಶಕ ೧೦ ನೇ ಶತಮಾನದ ನಂತರ ನಾವು ಕೇವಲ ಆಂತರಿಕ ಸಾಧನೆಗೇ ಮಹತ್ವ ನೀಡತೊಡಗಿದೆವು. ಭಕ್ತಿ ಮತ್ತು ಧರ್ಮ ಈ ಕ್ಷೇತ್ರಗಳಲ್ಲಿ ವಿಪುಲ ವಿಚಾರವಿಮರ್ಶೆಗಳು ನಡೆಯುತ್ತಲೇ ಇದ್ದವು; ಆದರೆ ವಿಜ್ಞಾನದ ಕಡೆಗೆ ನಾವು ನಿರ್ಲಕ್ಷ ಮಾಡಿದೆವು. ಅಷ್ಟೇ ಅಲ್ಲದೆ, ಪ್ರಾಚೀನ ಋಷಿಮುನಿಗಳು ಸಂಗ್ರಹಿಸಿದ ಜ್ಞಾನವನ್ನೂ ನಾವು ಮರೆತು ಹೋದೆವು. ಇದರಿಂದ ದೇಶದ ವ್ಯಾವಹಾರಿಕ ಅವನತಿಯಾಯಿತು.
ಆ. ನೈತಿಕ ಮೌಲ್ಯಗಳ ಹ್ರಾಸ: ದೇಶದ ಜನತೆ ಸೋಮಾರಿಗಳು, ದರಿದ್ರರು, ರೋಗಗಳಿಂದ ಪೀಡಿತರು ಮತ್ತು ದುರ್ಬಲರಾದರು. ದೇಶದಲ್ಲಿ ನಿರುದ್ಯೋಗವು ಹೆಚ್ಚಾಯಿತು. ಹಸಿದವನು ಅಧ್ಯಾತ್ಮದ ವಿಚಾರವನ್ನೂ ಮಾಡಲು ಸಾಧ್ಯವಾಗುವುದಿಲ್ಲ. ನೀತಿಮೌಲ್ಯಗಳು ರಸಾತಳಕ್ಕೆ ಹೋದವು. ಇದರ ಪರಿಣಾಮವೆಂದರೆ ಜನರು ಭ್ರಷ್ಟಾಚಾರಿಗಳು, ಲಂಚಕೋರರು ಮತ್ತು ಗುಂಡಾಗಳಾದರು.
ಇ. ಪಾಶ್ಚಾತ್ಯ ಸಂಸ್ಕೃತಿಯ ಆಕರ್ಷಣೆ ಉಂಟಾಗಿ ಭಾರತೀಯರು ‘ವಿಜ್ಞಾನ’ದ ಹಾದಿ ಹಿಡಿಯುವುದು: ಈ ಹಿನ್ನೆಲೆಯಲ್ಲಿ ಭಾರತದ ತರುಣ ಪೀಳಿಗೆಗೆ ಪಾಶ್ಚಾತ್ಯ ಸಂಸ್ಕೃತಿಯ ಆಕರ್ಷಣೆ ಉಂಟಾಗುವುದು ಸ್ವಾಭಾವಿಕವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯು ಬಹಿರ್ಮುಖವಾಗಿದೆ. ಅದು ವಿಜ್ಞಾನದ ಸಹಾಯದಿಂದ ಬಾಹ್ಯ ಜಗತ್ತಿನ ಶೋಧ ನಡೆಸಿತು. ಪಾಶ್ಚಾತ್ಯರಂತೆ ಭಾರತೀಯರೂ ಸಹ ‘ವಿಜ್ಞಾನ’ದ ಹಾದಿ ಹಿಡಿದರು.
ಈ. ಸುಖದಲ್ಲಿ ಸಿಲುಕಿಕೊಂಡ ಭಾರತೀಯರು ಅಧ್ಯಾತ್ಮ ಮರೆಯುವುದು: ವಿಜ್ಞಾನದಿಂದ ಭಾರತೀಯರು ಸುಖಿಯಾಗತೊಡಗಿದರು. ಮುಂದೆ ವಿಜ್ಞಾನದಿಂದ ಸಿಗುವ ಸುಖದಲ್ಲಿಯೇ ಅವರು ಸಿಲುಕಿಕೊಂಡಿದ್ದರಿಂದ ಅಧ್ಯಾತ್ಮವನ್ನು ಅವರು ಮರೆತರು ಮತ್ತು ಅದರಿಂದ ಅವರ ನಿಜವಾದ ಅರ್ಥದಲ್ಲಿ ಅವನತಿಯಾಯಿತು.
ಮನುಷ್ಯ ಜನ್ಮದ ಧ್ಯೇಯ – ಧರ್ಮಗ್ರಂಥಗಳಲ್ಲಿ ಹೇಳಿರುವಂತೆ
ನಾಲ್ಕೂ ವರ್ಣಗಳಲ್ಲಿ ಬ್ರಾಹ್ಮಣರಿಗೆ ಅತಿ ಹೆಚ್ಚು ಬಂಧನಗಳನ್ನು ಏಕೆ ಹಾಕಲಾಗಿದೆ?
ಸೃಷ್ಟಿಯ ನಿರ್ಮಿತಿಯ ಏಕೆ ಮತ್ತು ಹೇಗಾಯಿತು?
ಅಧ್ಯಾತ್ಮಶಾಸ್ತ್ರ : ಒಂದು ಪರಿಪೂರ್ಣ ಶಾಸ್ತ್ರ
ದಾನ ಮತ್ತು ಅರ್ಪಣೆಯ ಮಹತ್ವ ಮತ್ತು ಅವುಗಳಲ್ಲಿನ ವ್ಯತ್ಯಾಸ
ಅನಂತದ ಆನಂದದಾಯಕ ಶಾಸ್ತ್ರವೇ ಅಧ್ಯಾತ್ಮ!