ಸೂಕ್ಷದಲ್ಲಿ ದೊರೆತ ಆಧ್ಯಾತ್ಮಿಕ ದೃಷ್ಟಿಕೋನ
೧. ನಾಲ್ಕು ವರ್ಣಗಳೆಂದರೆ ಜೀವದ ತ್ಯಾಗ ಮಾಡುವ ಕ್ಷಮತೆ
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ – ಈ ನಾಲ್ಕು ವರ್ಣಗಳು ವ್ಯಕ್ತಿಯ ಬೇರೆ ಬೇರೆ ಕ್ಷಮತೆಗಳನ್ನು ತೋರಿಸುತ್ತವೆ. ವ್ಯಕ್ತಿಗೆ ತನ್ನ ಕ್ಷಮತೆಗನುಸಾರ ಸಾಧನೆ ಮಾಡಿ ಪ್ರಗತಿಯನ್ನು ಮಾಡಿಕೊಳ್ಳಲು ವರ್ಣವ್ಯವಸ್ಥೆಯನ್ನು ಮಾಡಲಾಗಿದೆ. ಸಾಧನೆಯಲ್ಲಿ ಪ್ರಗತಿಯಾಗಲು, ವ್ಯಕ್ತಿಯ ಕ್ಷಮತೆಗನುಸಾರ ತ್ಯಾಗ ಮಾಡುವುದು ಆವಶ್ಯಕವಾಗಿರುತ್ತದೆ. ಧನ ಸಂಪಾದನೆ ಮಾಡುವುದು ಕೂಡ ಒಂದು ಕ್ಷಮತೆಯಾಗಿದೆ. ಓರ್ವ ವ್ಯಕ್ತಿಗೆ ಧನಸಂಪಾದಿಸುವ ಕ್ಷಮತೆ ಇಲ್ಲದಿದ್ದರೆ, ಸಾಧನೆಯ ದೃಷ್ಟಿಯಿಂದ ಅವನು ಹಣವನ್ನು ತ್ಯಾಗ ಮಾಡುವ ಆವಶ್ಯಕತೆಯಿರುವುದಿಲ್ಲ. ಆದರೆ, ಒಬ್ಬನ ಬಳಿ ಹಣವಿದ್ದರೆ, ಅವನು ತನು, ಮನ ಮತ್ತು ಧನ ಮೂರನ್ನೂ ತ್ಯಾಗ ಮಾಡುವುದು ಆವಶ್ಯಕವಾಗಿರುತ್ತದೆ.
ವರ್ಣ ಅಂದರೇನು ಎಂದು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ!
೨. ವರ್ಣಾನುಸಾರ ತ್ಯಾಗ ಮಾಡುವ ಕ್ಷಮತೆ
೨ ಅ. ಶೂದ್ರ : ತನು ಮತ್ತು ಮನಸ್ಸನ್ನು ತ್ಯಾಗ ಮಾಡುವವನು.
೨ ಆ. ವೈಶ್ಯ : ತನು,ಮನ, ಮತ್ತು ಧನವನ್ನು ತ್ಯಾಗ ಮಾಡುವವನು.
೨ ಇ. ಕ್ಷತ್ರಿಯ : ತನು, ಮನ, ಧನ, ಬುದ್ಧಿ ಮತ್ತು ಪ್ರಸಂಗ ಬಂದರೆ ಪ್ರಾಣತ್ಯಾಗ ಮಾಡುವವನು.
೨ ಈ. ಬ್ರಾಹ್ಮಣ : ತನು, ಮನ, ಧನ, ಬುದ್ಧಿ, ಪ್ರಾಣ ಮತ್ತು ಅಹಂಕಾರದ ತ್ಯಾಗ ಮಾಡುವವನು.
೩. ತ್ಯಾಗವು ಒಮ್ಮೆ ಮಾಡುವ ಕೃತಿಯಾಗಿರದೇ, ಅದು ಪ್ರತಿದಿನ ಮಾಡುವ ಪ್ರಕ್ರಿಯೆ ಆಗಿದೆ !
ಅನೇಕ ಜನರ ಪ್ರಕಾರ, ತ್ಯಾಗವು ಒಮ್ಮೆ ಮಾಡುವ ಕೃತಿಯಾಗಿದೆ, ಆದರೆ, ಅಧ್ಯಾತ್ಮಶಾಸ್ತ್ರದ ಪ್ರಕಾರ, ತ್ಯಾಗವು ಒಮ್ಮೆ ಮಾಡುವ ಕೃತಿಯಾಗಿರದೇ, ಅದು ಪ್ರತಿದಿನ ಮಾಡುವ ಪ್ರಕ್ರಿಯೆಯಾಗಿದೆ. ಒಬ್ಬ ಶಿಷ್ಯನು ತನ್ನ ಹತ್ತಿರವಿರುವ ಎಲ್ಲ ಹಣವನ್ನು ಗುರುವಿನ ಚರಣಗಳಿಗೆ ಒಮ್ಮೆ ಅರ್ಪಿಸಿದರೂ, ಅವನಿಗೆ ಹಣ ಸಂಪಾದಿಸುವ ಕ್ಷಮತೆ ಹಾಗೆಯೇ ಇರುತ್ತದೆ. ಇದರಿಂದ ಅವನ ಸಂಪೂರ್ಣ ತ್ಯಾಗವಾಗುವುದಿಲ್ಲ. ಯಾವಾಗ ಧನಾರ್ಜನೆಯ ಉದ್ದೇಶವನ್ನು ಬಿಟ್ಟು ಗುರುವು ಹೇಳಿದಂತೆ ತನ್ನ ಜೀವನವನ್ನು ಕಳೆಯುತ್ತಾನೆಯೋ ಆಗ ಮಾತ್ರ ಅವನಿಂದ ಧನದ ನಿಜವಾದ ತ್ಯಾಗ ಆಗುತ್ತಿರುತ್ತದೆ. ಇದೇ ನಿಯಮ ತನು, ಮನ, ಬುದ್ಧಿ ಮತ್ತು ಇತರ ವಿಷಯಗಳಿಗೂ ಅನ್ವಯಿಸುತ್ತದೆ.
೪. ಬ್ರಾಹ್ಮಣರಿಂದ ಪರಿಪೂರ್ಣ ತ್ಯಾಗವಾಗಬೇಕೆಂದು ಅವರಿಗೆ ಅತ್ಯಧಿಕ ನಿರ್ಬಂಧಗಳನ್ನು ವಿಧಿಸಲಾಗಿದೆ
ಇತರ ವರ್ಣಗಳಿಗೆ ಹೋಲಿಸಿದರೆ ಬ್ರಾಹ್ಮಣರ ಕ್ಷಮತೆ ಹೆಚ್ಚು. ಆದ್ದರಿಂದ ತನು, ಮನ, ಧನ, ಬುದ್ಧಿ ಮತ್ತು ಅಹಂ ಇವುಗಳ ತ್ಯಾಗ ಪ್ರತಿದಿನವೂ ಆಗಿ ಬ್ರಾಹ್ಮಣರ ಸಾಧನೆ ಆಗಬೇಕು ಎಂದು ನಾಲ್ಕು ವರ್ಣಗಳಲ್ಲಿ ಬ್ರಾಹ್ಮಣರಿಗೆ ಅತಿ ಹೆಚ್ಚು ನಿರ್ಬಂಧಗಳನ್ನು ಹೇಳಲಾಗಿದೆ. ಈ ನಿರ್ಬಂಧಗಳಿಂದ ಬ್ರಾಹ್ಮಣರಿಗೆ ‘ನಿರ್ಬಂಧಗಳನ್ನು ಪಾಲಿಸುವುದೇ ಸಾಧನೆಯಾಗಿದ್ದು’ ಮತ್ತು ‘ನಿರ್ಬಂಧಗಳನ್ನು ಪಾಲಿಸದಿರುವುದು ತಪ್ಪು ಆಗಿದೆ’ ಎಂಬ ಯೋಗ್ಯ-ಅಯೋಗ್ಯ ಕರ್ಮಗಳ ಜ್ಞಾನ ಅವರಿಗೆ ಬರುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಬ್ರಾಹ್ಮಣರಿಂದ ತಪ್ಪುಗಳಾಗಬಾರದು ಮತ್ತು ಅವರ ಸಾತ್ತ್ವಿಕತೆ ಹಾಗೇ ಉಳಿಯಬೇಕು – ಈ ಎರಡೂ ಉದ್ದೇಶಗಳಿಗಾಗಿ ನಾಲ್ಕು ವರ್ಣಗಳಲ್ಲಿ ಬ್ರಾಹ್ಮಣರಿಗೆ ಹೆಚ್ಚು ನಿರ್ಬಂಧಗಳನ್ನು ಹಾಕಲಾಗಿದೆ.
– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮದಿಂದ ಸಿಕ್ಕಿದ ಜ್ಞಾನ) ಸನಾತನ ಆಶ್ರಮ, ರಾಮನಾಥಿ, ಗೋವಾ.
ಮನುಷ್ಯ ಜನ್ಮದ ಧ್ಯೇಯ – ಧರ್ಮಗ್ರಂಥಗಳಲ್ಲಿ ಹೇಳಿರುವಂತೆ
ಸೃಷ್ಟಿಯ ನಿರ್ಮಿತಿಯ ಏಕೆ ಮತ್ತು ಹೇಗಾಯಿತು?
ವಿಜ್ಞಾನವೆಂದು ಯಾವುದನ್ನು ಕರೆಯಬೇಕು?
ಅಧ್ಯಾತ್ಮಶಾಸ್ತ್ರ : ಒಂದು ಪರಿಪೂರ್ಣ ಶಾಸ್ತ್ರ
ದಾನ ಮತ್ತು ಅರ್ಪಣೆಯ ಮಹತ್ವ ಮತ್ತು ಅವುಗಳಲ್ಲಿನ ವ್ಯತ್ಯಾಸ
ಅನಂತದ ಆನಂದದಾಯಕ ಶಾಸ್ತ್ರವೇ ಅಧ್ಯಾತ್ಮ!