ಅನಂತದ ಆನಂದದಾಯಕ ಶಾಸ್ತ್ರವೇ ಅಧ್ಯಾತ್ಮ!

Article also available in :

ಅಧ್ಯಾತ್ಮದಲ್ಲಿ ಯಾವುದಕ್ಕೆ ಮಹತ್ವವದೆ?

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಒಬ್ಬನಿಗೆ ಶಬ್ದಜ್ಞಾನ ಎಷ್ಟಿದೆ ಎಂಬುದಕ್ಕೆ ಅಧ್ಯಾತ್ಮದಲ್ಲಿ ಬೆಲೆಯಿಲ್ಲ. ಹಂತ ಹಂತವಾಗಿ ಆಧ್ಯಾತ್ಮಿಕ ಶಕ್ತಿ, ಭಾವ, ಚೈತನ್ಯ, ಆನಂದ ಮತ್ತು ಶಾಂತಿ ಈ ವಿಷಯಗಳನ್ನು ಗುರುತಿಸಲು ಸಾಧ್ಯವಾಗುವುದು ಮತ್ತು ಅವುಗಳು ತನ್ನಲ್ಲಿ ಇರುವುದು ಆಧ್ಯಾತ್ಮಿಕ ಉನ್ನತಿಯ ಲಕ್ಷಣವಾಗಿದೆ. ನಾವಿರುವುದಕ್ಕಿಂತ 2 ಹಂತ ಮುಂದಿನ ಸ್ಥಿತಿಗಳನ್ನು ಗುರುತಿಸಲು ಸಾಧ್ಯವಾಗುತ್ತದೆ; ಆದ್ದರಿಂದ ಶಕ್ತಿಮಟ್ಟದಲ್ಲಿ ಇರುವವರಿಗೆ ಭಾವ ಮತ್ತು ಚೈತನ್ಯ ಇರುವುದನ್ನು ಗುರುತಿಸಲು ಸಾಧ್ಯವಾಗುತ್ತದೆ; ಆದರೆ ಆನಂದ ಮತ್ತು ಶಾಂತಿಯ ಸ್ಥಿತಿಯಲ್ಲಿರುವ ಸಂತರನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಆದರೆ ಕ್ರಮೇಣ ಈ ವಿಷಯಗಳು ತನ್ನಲ್ಲಿಯೂ ನಿರ್ಮಾಣವಾಗುತ್ತವೆ.

ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಆಚೆ ಅಧ್ಯಾತ್ಮವಿದೆ ಎಂದರೆ ಏನು?

ಒಬ್ಬರ ಕೈಬರಹ ಸುಂದರವಾಗಿದೆ ಎಂಬುದು ಕಣ್ಣುಗಳಿಗೆ ಕಾಣಿಸುತ್ತದೆ, ಅದು ಮನಸ್ಸಿಗೆ ಇಷ್ಟವಾಗುತ್ತದೆ. ಇಷ್ಟವಾಗಲು ಕಾರಣ ಅಕ್ಷರ ಸುಂದರವಾಗಿದೆ ಎಂಬುದು ಬುದ್ಧಿಗೆ ತಿಳಿಯುತ್ತದೆ. ಇದಕ್ಕೆ ವಿರುದ್ಧವಾಗಿ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಆಚೆ ಹೋದವರಿಗೆ ಸೂಕ್ಷ್ಮದಲ್ಲಿನ ಸ್ಪಂದನಗಳು ತಿಳಿಯುತ್ತವೆ. ಆದ್ದರಿಂದ ಅವರಿಗೆ ಸಂತರ ಅಕ್ಷರ ಚೆನ್ನಾಗಿಲ್ಲದಿದ್ದರೂ, ಅವರು ಅಡ್ಡಾದಿಡ್ಡಿ ಗೆರೆಗಳನ್ನು ಎಳೆದಿದ್ದರೂ, ಅವುಗಳಲ್ಲಿ ಚೈತನ್ಯವಿರುವುದು ಅರಿವಿಗೆ ಬರುತ್ತದೆ; ಆದ್ದರಿಂದ ಅದು ಚೆನ್ನಾಗಿದೆ ಎಂದು ಅವರು ಹೇಳುತ್ತಾರೆ.

ಅಧ್ಯಾತ್ಮದಲ್ಲಿ ಆನಂದವನ್ನು ಸತತವಾಗಿ ಅನುಭವಿಸಲು ಸಾಧ್ಯವಿದೆ

ಜ್ಞಾನದಲ್ಲಿ ಆನಂದವಿರುತ್ತದೆ. ಜ್ಞಾನವು ಅನಂತದ್ದಾಗಿದೆ. ಆದ್ದರಿಂದ ಆನಂದವೂ ಸತತವಾಗಿ ಸಿಗುತ್ತಲೇ ಇರುತ್ತದೆ. ವ್ಯವಹಾರದ ಉದಾಹರಣೆ ನೋಡುವುದಾದರೆ, ಒಂದು ಲೆಕ್ಕವನ್ನು ಹೇಗೆ ಬಿಡಿಸಬೇಕು ಎಂಬುದು ನಮಗೆ ಒಮ್ಮೆ ತಿಳಿದ ನಂತರ ಆ ಲೆಕ್ಕದಲ್ಲಿ ಹೊಸದೇನೂ ಉಳಿಯುವುದಿಲ್ಲ. ಹೀಗೆಯೇ ಜಗತ್ತಿನ ಇತರ ವಿಷಯಗಳ ಬಗ್ಗೆ ಮಿತಿ ಬರುತ್ತದೆ. ಕೇವಲ ಅಧ್ಯಾತ್ಮದಲ್ಲಿಯೇ ಅನುಭೂತಿಗಳು ಬರುತ್ತವೆ ಮತ್ತು ಜ್ಞಾನದಲ್ಲಿ ಆನಂದ ಸಿಗುತ್ತದೆ. ಅಧ್ಯಾತ್ಮವು ಅನಂತದ ಶಾಸ್ತ್ರವಾಗಿರುವುದರಿಂದ ಪ್ರತಿದಿನ ಹೊಸದೇನನ್ನಾದರೂ ಕಲಿಯಲು ಸಿಗುತ್ತದೆ ಮತ್ತು ಜ್ಞಾನದಿಂದ ಸತತವಾಗಿ ಆನಂದ ಸಿಗುತ್ತದೆ. ನಾವಿನ್ಯವಿಲ್ಲದೆ ಯಾರೂ ಬದುಕಲು ಸಾಧ್ಯವಿಲ್ಲ, ಉದಾ. ನಮಗೆ ಐಸ್‌ಕ್ರೀಮ್ ಇಷ್ಟವಾಗುತ್ತದೆ; ಆದರೆ ನಾವು ಅದರಲ್ಲಿಯೂ ಬೇರೆ ಬೇರೆ ರುಚಿಯ ಐಸ್‌ಕ್ರೀಮ್ ತಿನ್ನಲು ಪ್ರಯತ್ನಿಸುತ್ತೇವೆ. ಅಧ್ಯಾತ್ಮದ ಹೊರತು ಬೇರೆ ಯಾವುದೇ ವಿಷಯದಲ್ಲಿರುವ ನಾವಿನ್ಯತೆಯಿಂದ ಅನುಭೂತಿಗಳು ಬರುವುದಿಲ್ಲ.

ಅಧ್ಯಾತ್ಮವನ್ನು ಹೇಗೆ ತಿಳಿಯಬೇಕು?

ಅಧ್ಯಾತ್ಮದಲ್ಲಿ ಬುದ್ಧಿಗೆ ಯಾವುದೇ ಉಪಯೋಗವಿಲ್ಲ. ಬುದ್ಧಿಯಿಂದ ಅಧ್ಯಾತ್ಮ, ಅಂದರೆ ಸೂಕ್ಷ್ಮವು ತಿಳಿಯುವುದಿಲ್ಲ ಎಂದು ಹೇಳಲಾಗುತ್ತದೆ. ಕೆಲವರಿಗೆ, ಇದು ಹೇಗೆ ಸಾಧ್ಯ, ಬುದ್ಧಿಯಿಂದಲೇ ತಾನೇ ನಾವು ಎಲ್ಲವನ್ನೂ ತಿಳಿದುಕೊಳ್ಳುತ್ತಿರುವುದು, ಅಂದಮೇಲೆ ಬುದ್ಧಿಯನ್ನು ಬಿಟ್ಟುಬಿಡಿ ಎಂದರೆ ಹೇಗೆ, ವಿಶ್ವಬುದ್ಧಿ ಇತ್ಯಾದಿ ವಿಷಯಗಳು ಹಾಗಾದರೆ ಏತಕ್ಕಾಗಿ ಎಂದೆಲ್ಲ ಎಂದು ಪ್ರಶ್ನೆಗಳು ಮೂಡುತ್ತವೆ. ಸಾಮಾನ್ಯವಾಗಿ ‘ಅಧ್ಯಾತ್ಮದಲ್ಲಿ ಬುದ್ಧಿಯ ಯಾವುದೇ ಉಪಯೋಗವಿಲ್ಲದಿರುವುದರಿಂದ ಬುದ್ಧಿಯನ್ನು ಬಿಟ್ಟುಬಿಡಿ’ ಎಂದು ಯಾವಾಗ ಹೇಳಲಾಗುತ್ತದೆಯೋ, ಆಗ ಅದು ರಾಜಸಿಕ ಮತ್ತು ತಾಮಸಿಕ ಬುದ್ಧಿಗಳ ಸಂದರ್ಭದಲ್ಲಿ ಇರುತ್ತದೆ. ಅವುಗಳನ್ನು ನಾಶ ಮಾಡಿದ ನಂತರ ಉಳಿಯುವುದು ಸಾತ್ತ್ವಿಕ ಬುದ್ಧಿ. ಶೇ. ೧೦೦ ರಷ್ಟು ಸಾತ್ತ್ವಿಕ ಬುದ್ಧಿಯಿಂದ ಮತ್ತು ಸೂಕ್ಷ್ಮದಿಂದ ತಿಳಿದುಕೊಂಡಿರುವುದು ಒಂದೇ ಆಗಿರುತ್ತದೆ; ಏಕೆಂದರೆ ಆಗ ಸಾತ್ತ್ವಿಕ ಬುದ್ಧಿಗೆ ಯಾವುದು ತಿಳಿಯುತ್ತದೆಯೋ, ಅದು ವಿಶ್ವಬುದ್ಧಿಯಿಂದಲೇ ಧ್ಯಾನದಲ್ಲಿ ತಿಳಿಯುತ್ತದೆ.

 

Leave a Comment