ಸನಾತನ ಸಂಸ್ಥೆ ನಿರ್ಮಿಸಿದ ಶ್ರೀಕೃಷ್ಣನ ಸಾತ್ತ್ವಿಕ ಚಿತ್ರದ ಸೂಕ್ಷ್ಮ ಪ್ರಯೋಗ 

Article also available in :

ಈ ಪ್ರಯೋಗದ ಉದ್ದೇಶ

ಸದ್ಗುರು (ಡಾ.) ಮುಕುಲ ಗಾಡಗೀಳ

ಸನಾತನದ ಕಲಾಕಾರ ಸಾಧಕಿ ಸೌ. ಜಾಹ್ನವಿ ಶಿಂದೆಯವರು ಇತರ ಕಲಾಕಾರ ಸಾಧಕರ ಸಹಾಯದಿಂದ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ತಯಾರಿಸಿದ್ದಾರೆ. ಅವರು  ದೇವತೆಗಳ ಸೂಕ್ಷ್ಮ ಸ್ಪಂದನಗಳನ್ನು ತಿಳಿದುಕೊಂಡು ದೇವತೆಗಳ ಚಿತ್ರಗಳನ್ನು ತಯಾರಿಸಲು ಪ್ರಯತ್ನಿಸಿದ್ದಾರೆ. ಚಿತ್ರದಲ್ಲಿ ದೇವತೆಯ ಆಕಾರ, ಅವಯವಗಳು, ಮೈಮೇಲಿರುವ ಆಭರಣಗಳು, ಶಸ್ತ್ರಗಳು ಇತ್ಯಾದಿ ಘಟಕಗಳು ಪ್ರತ್ಯಕ್ಷದಲ್ಲಿ ಆ ದೇವತೆಯ ಆಯಾ ಘಟಕಗಳೊಂದಿಗೆ ಎಷ್ಟು ಪ್ರಮಾಣದಲ್ಲಿ ಸರಿಹೊಂದುತ್ತವೆ, ಎಂಬುದನ್ನು ಆಧರಿಸಿ ಆ ಚಿತ್ರದ ಒಟ್ಟು ಸತ್ಯತೆ, ಅಂದರೆ ಸಾತ್ತ್ವಿಕತೆಯು ನಿಶ್ಚಿತವಾಗುತ್ತದೆ. ಪ್ರತಿಯೊಂದು ದೇವತೆಯ ಚಿತ್ರ ತಯಾರಾದ ನಂತರ ಪರಾತ್ಪರ ಗುರು ಡಾ. ಆಠವಲೆಯವರು ಆ ಚಿತ್ರದ ಸಾತ್ತ್ವಿಕತೆಯನ್ನು ಸೂಕ್ಷ್ಮದಿಂದ ಅರಿತುಕೊಂಡು ಅದನ್ನು ದಶಮಾಂಶ ಸಂಖ್ಯೆಯವರೆಗೆ ಹೇಳುತ್ತಾರೆ, ಉದಾ. ಶೇ. ೩೧.೭, ೨೯.೩ ಇತ್ಯಾದಿ. ‘ಅವರು ಹೇಳಿದ ಸಾತ್ತ್ವಿಕತೆಗನುಸಾರ ಆ ದೇವತೆಯ ಚಿತ್ರದ ಕಡೆಗೆ ನೋಡಿ ಅನುಭೂತಿಗಳು ಬರುತ್ತವೆಯೇ ಮತ್ತು ಆ ದೇವತೆಯ ನಾಮಜಪವನ್ನು ಮಾಡಿದಾಗ ಬರುವ ಅನುಭೂತಿಗಳಿಗೂ ಆ ದೇವತೆಯ ಚಿತ್ರದ ಕಡೆಗೆ ನೋಡಿ ಬರುವ ಅನುಭೂತಿಗಳಿಗೂ ಹೊಂದಾಣಿಕೆಯಿದೆಯೇ’, ಎಂದು ನೋಡುವುದೇ ಈ ಪ್ರಯೋಗದ ಮುಖ್ಯ ಉದ್ದೇಶವಾಗಿದೆ.

ಇಲ್ಲಿಯವರೆಗೆ ಕೆಲವು ಬುದ್ಧಿಪ್ರಾಮಣ್ಯವಾದಿಗಳು (ಬುದ್ಧಿಪ್ರಾಮಣ್ಯವಾದಿಗಳು ಎಂದರೆ ಯಾರು ಸಾಕ್ಷಿಯನ್ನು ನೀಡಿದ ನಂತರವೇ ಅದನ್ನು ಸತ್ಯವೆಂದು ಒಪ್ಪಿಕೊಳ್ಳುತ್ತಾರೆಯೋ ಅವರು) ‘ಸನಾತನ ಸಂಸ್ಥೆಯು ಪ್ರಕಟಿಸಿದ ದೇವತೆಗಳ ಚಿತ್ರಗಳಲ್ಲಿ ದೇವತೆಗಳ ತತ್ತ್ವದ ಪ್ರಮಾಣವು ನಿಜವಾಗಿದೆ ಎಂದು ಹೇಗೆ ನಂಬುವುದು ?’, ಎಂಬ ಪ್ರಶ್ನೆಯನ್ನು ಕೇಳುತ್ತಿದ್ದರು. ‘ಈಗ ಅದು ನಿಜವಾಗಿದೆ ಎಂಬುದು ಸದ್ಗುರು ಡಾ. ಗಾಡಗೀಳರವರ ಈ ಲೇಖನದಿಂದ ಗಮನಕ್ಕೆ ಬರುವುದು. – (ಪರಾತ್ಪರ ಗುರು) ಡಾ. ಆಠವಲೆ

೧.ಶ್ರೀಕೃಷ್ಣನ ಶೇ. ೨೯.೩ ರಷ್ಟು ಶ್ರೀಕೃಷ್ಣತತ್ತ್ವವಿರುವ ಚಿತ್ರ

ಸನಾತನ ಸಂಸ್ಥೆಯ ಕೃಷ್ಣನ ಚಿತ್ರ
ಶ್ರೀಕೃಷ್ಣನ ಶೇ. ೨೯.೩ ರಷ್ಟು ಶ್ರೀಕೃಷ್ಣತತ್ತ್ವವಿರುವ ಚಿತ್ರ (೨೦೧೨)

೧ ಅ. ಶ್ರೀಕೃಷ್ಣನ ಚಿತ್ರದ ಕಡೆಗೆ ನೋಡುವುದು

೧. ಪ್ರಯೋಗದ ಪ್ರಾರಂಭದಲ್ಲಿ ನನ್ನ ಸೂರ್ಯನಾಡಿ ಕಾರ್ಯನಿರತವಾಗಿತ್ತು.

೨. ನಾನು ಶ್ರೀಕೃಷ್ಣನ ಚಿತ್ರದ ಕಡೆಗೆ ನೋಡತೊಡಗಿದಾಗ ನನಗೆ ಅನಾಹತ ಚಕ್ರದ ಮೇಲೆ ತಂಪಿನ ಅರಿವಾಗತೊಡಗಿತು ಮತ್ತು ೨-೩ ನಿಮಿಷಗಳಲ್ಲಿಯೇ ನನ್ನ ಸುಷುಮ್ನಾ ನಾಡಿ ಕಾರ್ಯನಿರತವಾಯಿತು. ಸುಷುಮ್ನಾ ನಾಡಿಯು ಕಾರ್ಯನಿರತವಾದ ನಂತರ ಸ್ಪಂದನಗಳು ಕೆಳಗಿನ ಮಣಿಪುರಚಕ್ರದ ಕಡೆಗೆ ಹೋದವು.

೩. ಅನಂತರ ನನಗೆ ಕ್ರಮವಾಗಿ ನನ್ನ ಮಣಿಪುರ, ಸ್ವಾಧಿಷ್ಠಾನ ಮತ್ತು ಮೂಲಾಧಾರ ಚಕ್ರಗಳ ಮೇಲೆ ತಂಪಿನ ಅರಿವಾಗತೊಡಗಿತು.

೪. ಸ್ಪಂದನಗಳು ಮೂಲಾಧಾರಚಕ್ರದವರೆಗೆ ಹೋದನಂತರ ನನಗೆ ಧ್ಯಾನ ತಗುಲತೊಡಗಿತು.

೫. ಧ್ಯಾನ ತಗಲುತ್ತಿರುವಾಗ ನಾನು ಜಾಗೃತವಾಗಿರಲು ಪ್ರಯತ್ನ ಮಾಡಿದೆ, ಆಗ ‘ನನ್ನ ಕುಂಡಲಿನಿಶಕ್ತಿ ಜಾಗೃತವಾಗುತ್ತಿದೆ’ ಎಂದು ನನ್ನ ಗಮನಕ್ಕೆ ಬಂದಿತು.

೬. ಕುಂಡಲಿನಿಶಕ್ತಿ ಜಾಗೃತವಾಗುತ್ತಿರುವಾಗ ನನಗೆ ನನ್ನ ಬೆನ್ನಿನಲ್ಲಿ ತ್ರಿಕಾಸ್ಥಿಯ ಸ್ಥಳದಲ್ಲಿ (ಬೆನ್ನುಮೂಳೆಯ ಕೊನೆಯ ಎಲುಬು) ತಂಪು ಸ್ಪಂದನಗಳು ಅರಿವಾಗತೊಡಗಿದವು ಮತ್ತು ಅವು ಬೆನ್ನಿನಿಂದ ಮೇಲೆ ಮೇಲೆ ಹೋಗತೊಡಗಿದವು. ಆದುದರಿಂದ ನನಗೆ ಬೆನ್ನಿನಲ್ಲಿ ತಂಪು ಅರಿವಾಗತೊಡಗಿತು. ಮುಂದೆ ಆ ಸ್ಪಂದನಗಳು ಕುತ್ತಿಗೆಯಲ್ಲಿ, ಅನಂತರ ತಲೆಯ ಹಿಂದಿನ ಭಾಗದಲ್ಲಿ ಮತ್ತು ಕೊನೆಗೆ ಸಹಸ್ರಾರಚಕ್ರದ ಮೇಲೆ ಅರಿವಾಗತೊಡಗಿದವು. ಇದರಿಂದ ‘ಕುಂಡಲಿನಿಶಕ್ತಿಯು ಮೂಲಾಧಾರಚಕ್ರದಿಂದ ಮೇಲೆ ಏರುವಾಗ ಬೆನ್ನಿನೊಳಗಿಂದ ಏರುತ್ತದೆ ಮತ್ತು ಅದರ ಪ್ರವಾಸ ಹೇಗಿರುತ್ತದೆ’, ಎಂಬುದು ನನಗೆ ತಿಳಿಯಿತು. ಅದು ಶಕ್ತಿಯಾಗಿದ್ದರೂ, ಅದರಲ್ಲಿ ತಂಪಿರುತ್ತದೆ, ಎಂಬುದೂ ತಿಳಿಯಿತು.

೭. ಸಹಸ್ರಾರಚಕ್ರದವರೆಗೆ ಹೋದನಂತರ ಕುಂಡಲಿನಿಶಕ್ತಿಯು ಪುನಃ ಕೆಳಗೆ ಬಂದಿತು.

೮. ಕಲಿಯುಗದ ಪ್ರಸ್ತುತ ಕಾಲವು ಆಪತ್ಕಾಲವೂ ಆಗಿದೆ, ಹಾಗೆಯೇ ಮುಂಬರುವ ಒಳ್ಳೆಯ ಕಾಲದ ಮೊದಲಿನ ಸಂಧಿಕಾಲವೂ ಆಗಿದೆ. ಇಂತಹ ಈ ಕಾಲದಲ್ಲಿ ಧರ್ಮಸಂಸ್ಥಾಪನೆಗಾಗಿ ಶ್ರೀಕೃಷ್ಣನು ಅನುಕೂಲ ದೇವನಾಗಿದ್ದಾನೆ. ಅವನು ಸಾಧನೆಯನ್ನು ಮಾಡಿಸಿಕೊಳ್ಳುವ ಮತ್ತು ಆಧ್ಯಾತ್ಮಿಕ ಉನ್ನತಿಗಾಗಿ ಅನುಕೂಲ ದೇವನಾಗಿದ್ದಾನೆ. ಆದುದರಿಂದ ಶ್ರೀಕೃಷ್ಣನ ಚಿತ್ರವು ಮೂಲಾದಾರಚಕ್ರದವರೆಗೆ ಸ್ಪಂದನಗಳನ್ನು ತಲುಪಿಸಿ ಕುಂಡಲಿನಿ ಶಕ್ತಿಯನ್ನು ಜಾಗೃತ ಮಾಡಿಕೊಟ್ಟಿತು, ಎಂದು ನನಗೆ ಅರಿವಾಯಿತು.

೯. ಶ್ರೀಕೃಷ್ಣನ ಚಿತ್ರದ ಸ್ಪಂದನಗಳಿಗೆ ಪೂರಕವಾಗಿರುವ ಮುದ್ರೆಯನ್ನು ಹುಡುಕಿದಾಗ ಅದು ‘ಹೆಬ್ಬರಳಿನ ಮೂಲಕ್ಕೆ ತರ್ಜನಿಯ ತುದಿಯನ್ನು ಹಚ್ಚುವುದು’ ಈ ಆಕಾಶತತ್ತ್ವಕ್ಕೆ ಸಂಬಂಧಿಸಿದ ಮುದ್ರೆಯು ಬಂದಿತು. ಈ ಮುದ್ರೆಯನ್ನು ಮಾಡಿದ ನಂತರ ನನಗೆ ನೇರವಾಗಿ ಸಹಸ್ರಾರಚಕ್ರದ ಮೇಲೆ ಸ್ಪಂದನಗಳು ಅರಿವಾಗತೊಡಗಿದವು.

೧೦. ನನಗೆ ನನ್ನ ಶರೀರದ ಸುತ್ತಲೂ ಸಂರಕ್ಷಕ ಕವಚ ನಿರ್ಮಾಣವಾಗಿರುವುದರ ಅರಿವಾಯಿತು. ಆನಂತರ ನನಗೆ ಧ್ಯಾನ ತಗುಲತೊಡಗಿತು. ಇದರಿಂದ, ಸದ್ಯದ ಆಪತ್ಕಾಲದಲ್ಲಿ ಶ್ರೀಕೃಷ್ಣನೊಂದಿಗೆ ಅನುಸಂಧಾನವನ್ನು ಇಡುವುದು ಮತ್ತು ಆಕಾಶತತ್ತ್ವದ ಮುದ್ರೆಯನ್ನು ಮಾಡುವುದು, ಈ ಉಪಾಯಗಳನ್ನು ಮಾಡಿದರೆ ನಮ್ಮ ರಕ್ಷಣೆ ಆಗುವುದು, ಎಂದು ಗಮನಕ್ಕೆ ಬಂದಿತು. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಈ ಉಪಾಯವನ್ನೇ ಮಾಡಲು ಹೇಳಿದ್ದಾರೆ.

೧೧. ಪ್ರಯೋಗದ ಆರಂಭದಲ್ಲಿ ನನ್ನ ನಾಡಿಮಿಡಿತ (pulse rate) ೫೪ ಇತ್ತು. ಪ್ರಯೋಗದ ನಂತರ ಅದು ಅಷ್ಟೇ ಉಳಿಯಿತು.

೧ ಆ. ಓಂ ನಮೋ ಭಗವತೇ ವಾಸುದೇವಾಯ | ನಾಮ ಜಪಿಸುವುದು

೧ ಆ ೧. ಶ್ರೀಕೃಷ್ಣನ ನಾಮಜಪದಿಂದ ಅನುಭವಿಸಿದ ಸ್ಪಂದನಗಳು ಸನಾತನದ ಶ್ರೀಕೃಷ್ಣನ ಸಾತ್ತ್ವಿಕ ಚಿತ್ರದ ಸ್ಪಂದನಗಳಿಗೆ ನೂರಕ್ಕೆ ನೂರರಷ್ಟು ಹೊಂದುತ್ತವೆ : ಆಶ್ಚರ್ಯವೆಂದರೆ ಈ ನಾಮಜಪದ ಪ್ರಯೋಗದಲ್ಲಿ ಅರಿವಾದ ಸ್ಪಂದನಗಳು ಶ್ರೀಕೃಷ್ಣನ ಚಿತ್ರದ ಕಡೆಗೆ ನೋಡಿ ಮಾಡಿದ ಪ್ರಯೋಗದಲ್ಲಿನ ಸ್ಪಂದನಗಳಿಗೆ ನೂರಕ್ಕೆ ನೂರರಷ್ಟು ಹೊಂದಿದವು. ಸ್ಪಂದನಗಳ ಅರಿವಾದ ಕ್ರಮಗಳು, ಕುಂಡಲಿನಿಶಕ್ತಿ ಜಾಗೃತವಾಗುವುದು, ಹಾಗೆಯೇ ಪೂರಕವಾಗಿರುವ ಮುದ್ರೆ ಮತ್ತು ಅದರಿಂದ ಅರಿವಾದ ಸ್ಪಂದನಗಳೂ ಒಂದೇ ಆಗಿದ್ದವು.

೧ ಆ ೨. ನಾಮಜಪವನ್ನು ಮಾಡುವಾಗ ಅರಿವಾದ ಇತರ ಕೆಲವು ವೈಶಿಷ್ಟ್ಯಗಳು

ಅ. ಶ್ರೀಕೃಷ್ಣನ ನಾಮಜಪವನ್ನು ಮಾಡುವಾಗ ಯಾವಾಗ ನಾಮಜಪದ ಸ್ಪಂದನಗಳು ಮೂಲಾಧಾರಚಕ್ರದ ವರೆಗೆ ತಲುಪಿದವೋ, ಆಗ ನನ್ನ ಧ್ಯಾನ ತಗುಲತೊಡಗಿತು. ಶ್ರೀಕೃಷ್ಣನ ಚಿತ್ರದ ಕಡೆಗೆ ನೋಡುತ್ತಿರುವಾಗಲೂ ಹಾಗೆಯೇ ಆಯಿತು; ಆದರೆ ನಾಮಜಪವನ್ನು ಮಾಡುತ್ತಿರುವಾಗ ನಾನು ಅದನ್ನು ಕಣ್ಣುಮುಚ್ಚಿ ಮಾಡುತ್ತಿರುವುದರಿಂದ ನನಗೆ ಧ್ಯಾನಾವಸ್ಥೆಯಿಂದ ಜಾಗೃತಾವಸ್ಥೆಯಲ್ಲಿ ಬರಲು ತುಂಬಾ ಪ್ರಯತ್ನಿಸಬೇಕಾಯಿತು. ನಾಮಜಪದ ಸ್ಪಂದನಗಳ ಮುಂದಿನ ಪ್ರವಾಸ ತಿಳಿಯಲು ಅದು ಆವಶ್ಯಕವಾಗಿತ್ತು.

ಆ. ನಾಮಜಪ ಮಾಡುವಾಗ ಆಕಾಶತತ್ತ್ವದ ಪೂರಕ ಮುದ್ರೆಯನ್ನು ಮಾಡಿದಾಗ ಯಾವಾಗ ಶರೀರದ ಸುತ್ತಲೂ ಸಂರಕ್ಷಕ ಕವಚ ನಿರ್ಮಾಣವಾಯಿತೋ, ಆಗ ಶ್ರೀಕೃಷ್ಣನ ನಾಮಜಪದ ಕವಚದಲ್ಲಿ ನಾನಿದ್ದೇನೆ, ಎಂದು ನನಗೆ ಅರಿವಾಯಿತು.

೧ ಇ. ಚಿತ್ರದ ಶ್ರೀಕೃಷ್ಣನ ಕುಂಡಲಿನಿಚಕ್ರಗಳ ಮೇಲೆ ಅರಿವಾದ ಸ್ಪಂದನಗಳು

ನಾನು ಚಿತ್ರದ ಶ್ರೀಕೃಷ್ಣನ ಆಜ್ಞಾಚಕ್ರದಿಂದ ಮುಂದಿನ ಪ್ರತಿಯೊಂದು ಚಕ್ರದ ಮೇಲೆ ಗಮನವನ್ನು ಕೇಂದ್ರೀಕರಿಸಿದಾಗ ಏನು ಅರಿವಾಗುತ್ತದೆ, ಎಂಬ ಪ್ರಯೋಗವನ್ನು ಮಾಡಿದೆ. ಶ್ರೀಕೃಷ್ಣನ ಚಿತ್ರವು ಸೊಂಟದವರೆಗೆ ಮಾತ್ರ ಇರುವುದರಿಂದ ಮಣಿಪುರಚಕ್ರದವರೆಗೆಯೇ ಪ್ರಯೋಗವನ್ನು ಮಾಡಲು ಸಾಧ್ಯವಾಯಿತು. ಮುಂದೆ ಕೊಟ್ಟಿರುವ ಕೊಷ್ಟಕದಂತೆ ನನಗೆ ಸ್ಪಂದನಗಳ ಅರಿವಾಯಿತು.

 

ಕುಂಡಲಿನಿಚಕ್ರಗಳು ಅರಿವಾದ ಸ್ಪಂದನಗಳು
೧. ಆಜ್ಞಾಚಕ್ರ ಶಕ್ತಿ
೨. ವಿಶುದ್ಧಚಕ್ರ ಶಕ್ತಿ ಮತ್ತು ಆನಂದ
೩. ಅನಾಹತಚಕ್ರ ಆನಂದ
೪. ಮಣಿಪುರಚಕ್ರ ಶಾಂತಿ

೧ ಇ ೧. ಶ್ರೀಕೃಷ್ಣನ ಚಿತ್ರದಲ್ಲಿನ ಕುಂಡಲಿನಿಚಕ್ರಗಳ ಮೇಲೆ ಅರಿವಾದ ಸ್ಪಂದಗಳ ಕ್ರಮವು ಆಧ್ಯಾತ್ಮಿಕ ದೃಷ್ಟಿಯಿಂದ ವಿರುದ್ಧವಾಗಿ ಅರಿವಾಗುವುದರ ಕಾರಣಗಳು

ಇಲ್ಲಿ ಚಕ್ರಗಳ ಸಂದರ್ಭದಲ್ಲಿ ಅರಿವಾದ ಸ್ಪಂದನಗಳ ಕ್ರಮವು ಏಕೆ ವಿರುದ್ಧವಾಗಿದೆ ಎಂಬ ಪ್ರಶ್ನೆಯು ಸಹಜವಾಗಿ ಯಾರಿಗಾದರೂ  ಬರಬಹುದು. ಅದರ ಉತ್ತರವು ಮುಂದಿನಂತಿದೆ.

ಮನುಷ್ಯನಲ್ಲಿ ಮೂಲಾಧಾರಚಕ್ರದಿಂದ ಸಹಸ್ರಾರಚಕ್ರದ ವರೆಗೆ ಹೋದರೆ ಆಧ್ಯಾತ್ಮಿಕ ದೃಷ್ಟಿಯಿಂದ ಆ ಚಕ್ರಗಳ ಸ್ತರವು ಉಚ್ಚ ಉಚ್ಚವಾಗುತ್ತಾ ಹೋಗುತ್ತದೆ ಮತ್ತು ಸಹಸ್ರಾರಚಕ್ರದ ಮೇಲೆ ಶಾಂತಿಯ ಸ್ಪಂದನಗಳು ಅರಿವಾಗುತ್ತವೆ. ಇದರ ಕಾರಣವೆಂದರೆ ಮನುಷ್ಯನ ಪ್ರವಾಸವು ‘ಪಿಂಡದಿಂದ ಬ್ರಹ್ಮಾಂಡ’, ಹೀಗೆ ಊರ್ಧ್ವ ದಿಕ್ಕಿನಲ್ಲಿರುತ್ತದೆ. ದೇವತೆಯ ಚಿತ್ರದಲ್ಲಿ ಮಾತ್ರ ಬ್ರಹ್ಮಾಂಡದಿಂದ ದೇವತೆಯ ಸ್ಪಂದನಗಳು ಬರುವುದರಿಂದ ಆಧ್ಯಾತ್ಮಿಕ ದೃಷ್ಟಿಯಿಂದ ಚಕ್ರಗಳ ಸ್ತರವು ಸಹಸ್ರಾರದಿಂದ ಮೂಲಾಧಾರ ಹೀಗೆ ಉಚ್ಚ ಉಚ್ಚವಾಗುತ್ತಾ ಹೋಗುತ್ತದೆ. ಆದುದರಿಂದಲೇ ದೇವಸ್ಥಾನದಲ್ಲಿ ದೇವತೆಯ ದರ್ಶನವನ್ನು ಪಡೆಯುವಾಗ ವಿಗ್ರಹದ ಚರಣಗಳ ಕಡೆಗೆ ನೋಡಿದಾಗ ನಮಗೆ ಶಾಂತಿಯ ಸ್ಪಂದನಗಳು ಅರಿವಾಗುತ್ತವೆ ಮತ್ತು ಮುಖದ ಕಡೆಗೆ ನೋಡಿದಾಗ ಶಕ್ತಿಯ ಅರಿವಾಗುತ್ತದೆ; ಆದುದರಿಂದ ದೇವರ ದರ್ಶನವನ್ನು ಪಡೆಯುವಾಗ ಮುಖದಿಂದ ಚರಣಗಳ ಕಡೆಗೆ ಬರಬೇಕಾಗುತ್ತದೆ ಮತ್ತು ಅಲ್ಲಿ ಕೇಂದ್ರೀಕರಿಸಬೇಕಾಗುತ್ತದೆ. ಇದರಿಂದಾಗಿ ನಮಗೆ ಶಾಂತಿ ಸಿಗುತ್ತದೆ.

೧ ಈ.  ನಿಷ್ಕರ್ಷ

ಶ್ರೀಕೃಷ್ಣನ ಶೇ. ೨೯.೩ ರಷ್ಟು ಸಾತ್ತ್ವಿಕತೆಯಿರುವ ಚಿತ್ರದಲ್ಲಿರುವ ಸ್ಪಂದನಗಳು ಮತ್ತು ಶ್ರೀಕೃಷ್ಣನ ನಾಮಜಪದ ಸ್ಪಂದಗಳು ಪರಸ್ಪರ ಸರಿಯಾಗಿ ಹೊಂದುತ್ತವೆ.

– ಸದ್ಗುರು ಡಾ. ಮುಕುಲ ಗಾಡಗಿಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೧.೧೦.೨೦೧೮)

Leave a Comment