ಶ್ರೀಕೃಷ್ಣನ ವಿವಿಧ ಗುಣವೈಶಿಷ್ಟ್ಯಗಳು

1. ಧರ್ಮಸಂಸ್ಥಾಪನೆಯ ಆರಾಧ್ಯ ದೇವತೆ

ಭಗವಾನ್ ಕೃಷ್ಣನು ಧರ್ಮಸಂಸ್ಥಾಪನೆಯ ಆರಾಧ್ಯ ದೇವತೆಯಾಗಿದ್ದಾನೆ.

2. ಅವತಾರ

ಶ್ರೀಕೃಷ್ಣನು ವಿಷ್ಣುವಿನ ಎಂಟನೇ ಅವತಾರ. ಅವನು ಹದಿನಾರು ಕಲೆಗಳನ್ನು ಒಳಗೊಂಡಿರುವುದರಿಂದ ಅವನನ್ನು ಪೂರ್ಣಾವತಾರವೆಂದೂ ಕರೆಯಲಾಗುತ್ತದೆ.

3. ಸಂಬಂಧಿಸಿದ ನದಿ

ಶ್ರೀಕೃಷ್ಣನೊಂದಿಗೆ ಯಮುನಾ ನದಿಯ ಅವಿನಾಭಾವ ಸಂಬಂಧವಿದೆ. ಯಮುನೆಯಲ್ಲಿ ಹೆಚ್ಚು ಕೃಷ್ಣತತ್ವವಿದೆ. ಅವಳ ಬಣ್ಣವು ಶ್ರೀಕೃಷ್ಣನಂತೆಯೇ ನುಸುಗಪ್ಪಾಗಿದೆ. ಯಮುನೆಯನ್ನು ‘ಕಾಲಿಂದಿ’ ಎಂದೂ ಕರೆಯುತ್ತಾರೆ.

4. ಕುಂಡಲಿನಿಯಲ್ಲಿ ಸಂಬಂಧಿಸಿದ ಚಕ್ರಗಳು

ಕುಂಡಲಿನಿಯ ಅನಾಹತ ಚಕ್ರವು ಶ್ರೀಕೃಷ್ಣನೊಂದಿಗೆ ಸಂಬಂಧ ಹೊಂದಿದೆ.

5. ಸಂಬಂಧಿಸಿದ ದಿನಗಳು

ಬುಧವಾರ ವಿಠ್ಠಲನ ದಿನವಾಗಿದೆ. ಕಲಿಯುಗದಲ್ಲಿ ಶ್ರೀಕೃಷ್ಣನ ಅವತಾರವೆಂದರೆ ಶ್ರೀ ವಿಠ್ಠಲ.

6. ಸಂಬಂಧಿತ ದಿನ

ಶ್ರಾವಣದ ಕೃಷ್ಣ ಪಕ್ಷದಲ್ಲಿ ಬರುವ ಅಷ್ಟಮಿ ಅಂದರೆ ಗೋಕುಲಷ್ಟಮಿಯ ದಿನವು ಶ್ರೀಕೃಷ್ಣನೊಂದಿಗೆ ಸಂಬಂಧ ಹೊಂದಿದೆ. ಮಾರ್ಗಶಿರ್ಷ ಶುಕ್ಲ ಪಕ್ಷ ಏಕಾದಶಿಯಂದು ಬರುವ ‘ಗೀತಾ ಜಯಂತಿ’ ಕೃಷ್ಣನು ಅರ್ಜುನನಿಗೆ ಶ್ರೀಮದ್‌ಭಗವದ್ಗೀತೆಯ ಉಪದೇಶ ಮಾಡಿದ ದಿನ.

7. ಭಗವಾನ್ ಕೃಷ್ಣನ ತತ್ವದ ಬಣ್ಣವು ಯೋಗ ಮಾರ್ಗಕ್ಕೆ ಅನುಗುಣವಾಗಿ ಭಿನ್ನವಾಗಿರುತ್ತದೆ

7 ಅ. ಭಕ್ತಿಮಾರ್ಗದ ಪ್ರಕಾರ

ಶ್ರೀಕೃಷ್ಣನ ತತ್ವದ ಬಣ್ಣ ನೀಲಿಯಾಗಿರುತ್ತದೆ.

7 ಆ. ಜ್ಞಾನಮಾರ್ಗದ ಪ್ರಕಾರ

ಶ್ರೀಕೃಷ್ಣನ ತತ್ವದ ಬಣ್ಣ ಹಳದಿಯಾಗಿರುತ್ತದೆ.

7 ಇ. ಕರ್ಮಮಾರ್ಗದ ಪ್ರಕಾರ

ಶ್ರೀಕೃಷ್ಣನ ತತ್ವದ ಬಣ್ಣ ಹಳದಿ-ಕೇಸರಿ ಬಣ್ಣದ್ದಾಗಿದೆ.

8. ಪ್ರಿಯವಾದ ನೈವೈದ್ಯ

ಬೆಣ್ಣೆ, ಮೊಸರವಲಕ್ಕಿ ಮತ್ತು ಶಿರಾ ಶ್ರೀಕೃಷ್ಣನಿಗೆ ಪ್ರಿಯವಾದ ತಿನಿಸುಗಳು. ಉತ್ತರ ಭಾರತದ ವಿವಿಧ ದೇವಾಲಯಗಳಲ್ಲಿ 56 ಭೋಗಗಳನ್ನು (ವಿವಿಧ ಸಿಹಿತಿಂಡಿಗಳು) ಶ್ರೀಕೃಷ್ಣನಿಗೆ ಅರ್ಪಿಸಲಾಗುತ್ತದೆ.

9. ಆಯುಧಗಳು

ಸುದರ್ಶನ್ ಚಕ್ರ ಮತ್ತು ಪಾಂಚಜನ್ಯ ಎಂಬ ಶಂಖ ಅವನ ಆಯುಧಗಳಾಗಿವೆ.

10. ಸಂಬಂಧಿಸಿದ ವಾದ್ಯಗಳು

ಕೊಳಲು ಭಗವಾನ್ ಕೃಷ್ಣನ ನೆಚ್ಚಿನ ವಾದ್ಯವಾಗಿದೆ.

11. ಸಂಬಂಧಿಸಿದ ದೇವಾಲಯಗಳು ಮತ್ತು ಜಾಗೃತ ದೇವಾಲಯಗಳು

ಗೋಕುಲ, ವೃಂದಾವನ, ಮಥುರೆ, ದ್ವಾರಕೆ ಮತ್ತು ಜಗನ್ನಾಥಪುರಿ ​​ಭಗವಾನ್ ಕೃಷ್ಣನಿಗೆ ಸಂಬಂಧಿಸಿದ ದೇವಾಲಯಗಳಾಗಿವೆ. ಕೇರಳದ ಗುರುವಾಯೂರ್ ದೇವಸ್ಥಾನ, ಉಡುಪಿಯ ಶ್ರೀಕೃಷ್ಣ ದೇವಸ್ಥಾನ ಇವು ಕೃಷ್ಣನ ಜಾಗೃತ ದೇವಾಲಯಗಳು.

12. ಶ್ರೀಕೃಷ್ಣನ ವಿವಿಧ ಹೆಸರುಗಳು

ಕನ್ಹಯ್ಯ, ಕಾನ್ಹಾ, ಶ್ಯಾಮ್‌ಸುಂದರ, ಮುರಳೀಧರ, ಗಿರಿಧರ, ಕೇಶವ, ಮಾಧವ, ಮೋಹನ, ಮನಮೋಹನ, ಬನ್ಸಿವಾಲಾ, ಮಖಾಂಚೋರ, ರಾಧೇಶ್ಯಾಮ್, ಗೋವಿಂದ, ಗೋಪಾಲ, ಮುರಾರಿ, ಕೃಷ್ಣ, ದೇವಕೀನಂದನ, ಯಶೋದಾನಂದನ, ನಂದನಂದನ, ವಾಸುದೇವ, ದ್ವಾರಕಾಧೀಶ, ತ್ರಿಲೋಕನಾಥ, ಬಾಂಕೇಬಿಹಾರಿ, ಚಕ್ರಧರ, ನಂದಕಿಶೋರ, ಲಡ್ಡುಗೋಪಾಲ ಮುಂತಾದ ಅನೇಕ ಹೆಸರುಗಳು ಪ್ರಸಿದ್ಧವಾಗಿವೆ.

ಆ. ದೇವಕೀನಂದನ, ಯಶೋದಾನಂದನ ಮತ್ತು ನಂದನಂದನ

ದೇವಕೀ, ಯಶೋದಾ ಮತ್ತು ನಂದರಾಜರ ಮಗನಾಗಿ ಅವನಿಗೆ ಕ್ರಮವಾಗಿ ದೇವಕೀನಂದನ, ಯಶೋದಾನಂದನ ಮತ್ತು ನಂದನಂದನ ಎಂಬ ಹೆಸರುಗಳು ಬಂದವು.

ವಸುದೇವ ಶ್ರೀಕೃಷ್ಣನ ಜನ್ಮ ತಂದೆ. ದೇವಕೀ ಶ್ರೀಕೃಷ್ಣನಿಗೆ ಜನ್ಮ ನೀಡಿದ ತಾಯಿ. ವಸುದೇವನು ಶ್ರೀಕೃಷ್ಣನನ್ನು ಮಥುರೆಯಿಂದ ಗೋಕುಲಕ್ಕೆ ಕರೆದೊಯ್ದಾಗ, ನಂದರಾಜ ಮತ್ತು ಯಶೋದೆ ಶ್ರೀಕೃಷ್ಣನನ್ನು ಪಾಲನೆ ಮಾಡಿದರು. ಆದ್ದರಿಂದ ಯಶೋದಾ ಶ್ರೀಕೃಷ್ಣನ ಸಾಕು ತಾಯಿ ಮತ್ತು ನಂದರಾಜ ಸಾಕು ತಂದೆಯಾದರು. ಆದ್ದರಿಂದ, ಶ್ರೀಕೃಷ್ಣನು ವಸುದೇವ, ದೇವಕಿ, ಯಶೋದಾ ಮತ್ತು ನಂದರಾಜರ ಮಗನೂ ಆಗಿದ್ದನು.

ಆ. ವಾಸುದೇವ ಮತ್ತು ವಸುದೇವಸುತ

ಶ್ರೀಕೃಷ್ಣನ ಜನ್ಮ ನೀಡಿದ ತಂದೆಯ ಹೆಸರು ವಸುದೇವ. ವಸುದೇವನ ಮಗನಾಗಿ ಅವನನ್ನು ‘ವಾಸುದೇವ’ ಎಂದು ಕರೆಯಲಾಗುತ್ತದೆ. ಅವನು ವಸುದೇವನ ಮಗನಾಗಿರುವುದರಿಂದ ಅವನನ್ನು ‘ವಸುದೇವಸುತ’ ಎಂದೂ ಕರೆಯಲಾಗುತ್ತದೆ.

ಇ. ಮಾಖಾನ್ ಚೋರ್

ಭಗವಾನ್ ಕೃಷ್ಣನು ತನ್ನ ಮಿತ್ರರೊಂದಿಗೆ ಗೋಕುಲದಲ್ಲಿರುವ ಗೋಪಿಗಳ ಮನೆಗೆ ಹೋಗಿ ಮಡಕೆಯಿಂದ ಬೆಣ್ಣೆಯನ್ನು ಕದಿಯುತ್ತಿದ್ದನು. ಅದಕ್ಕಾಗಿಯೇ ಗೋಪಿಕೆಯರು ಅವನ್ನು ಪ್ರೀತಿಯಿಂದ ‘ಮಾಖಾನ್ ಚೋರ್’ ಎಂಬ ಹೆಸರಿಟ್ಟರು.

ಈ. ಶ್ಯಾಮ್ ಮತ್ತು ಶ್ಯಾಮ್‌ಸುಂದರ್

ಶ್ರೀಕೃಷ್ಣನ ಬಣ್ಣ ಕಡುನೀಲಿ ಅಥವಾ ನುಸುಗಪ್ಪಾಗಿತ್ತು. ಅದಕ್ಕಾಗಿಯೇ ಅವನನ್ನು ‘ಶ್ಯಾಮ್’ ಎಂಬ ಹೆಸರು ಬಂದಿತು. ಬಣ್ಣ ಹೀಗಿದ್ದರೂ ನೋಡಲು ಅವನು ತುಂಬಾ ಸುಂದರವಾಗಿದ್ದನು; ಅದಕ್ಕಾಗಿಯೇ ‘ಶ್ಯಾಮ್‌ಸುಂದರ್’ ಎಂದೂ ಕರೆಯಲ್ಪಡುತ್ತಾನೆ.

ಉ. ಬನ್ಸಿಧರ ಮತ್ತು ಮುರಳೀಧರ

ಶ್ರೀಕೃಷ್ಣನ ಕೈಯಲ್ಲಿ ಕೊಳಲು ಇದ್ದುದರಿಂದ ಅವನಿಗೆ ‘ಬನ್ಸಿವಲಾ’ ಅಥವಾ ‘ಬನ್ಸಿಧರ’ ಎಂಬ ಹೆಸರು ಬಂತು. ಕೊಳಲನ್ನು ಮುರಳಿ ಎಂದೂ ಕರೆಯುವುದರಿಂದ ಅವನನ್ನು ‘ಮುರಳೀಧರ’ ಎಂದೂ ಕರೆಯುತ್ತಾರೆ.

ಊ. ಗೋಪಾಲ

ಶ್ರೀಕೃಷ್ಣನು ಗೊಲ್ಲನಾಗಿ ಹಸುಗಳನ್ನು ರಕ್ಷಿಸಿದ್ದರಿಂದ ಅವನಿಗೆ ‘ಗೋಪಾಲ’ ಎಂಬ ಹೆಸರು ಬಂದಿತು.

ಋ. ಗೋವಿಂದ

ಭಗವಾನ ಶ್ರೀಕೃಷ್ಣನನ್ನು ‘ಗೋವಿಂದ’ ಎಂದು ಕರೆಯಲಾಗುತ್ತದೆ, ಏಕೆಂದರೆ ಅವನು ಪ್ರತಿಯೊಂದು ಪ್ರಾಣಿಯ ಹೃದಯದಲ್ಲಿ ಆನಂದದ ರೂಪದಲ್ಲಿ ವಾಸಿಸುತ್ತಾನೆ.

ಎ. ಹೃಷಿಕೇಶ

ಶ್ರೀಕೃಷ್ಣನು ಎಲ್ಲರ ಇಂದ್ರಿಯಗಳ ಅಂತಿಮ ಮಾರ್ಗದರ್ಶಿ. ಅದಕ್ಕಾಗಿಯೇ ಅವರನ್ನು ‘ಹೃಷಿಕೇಶ’ ಎಂದು ಕರೆಯಲಾಗುತ್ತದೆ. ‘ಹೃಷಿಕ್’ ಎಂದರೆ ಇಂದ್ರಿಯಗಳು. ಅವುಗಳ ಈಶ (ಒಡೆಯ) ಅಂದರೆ ಅವನೇ ಹೃಷಿಕೇಶ.

– ಕು. ಮಧುರಾ ಭೋಸಲೆ, ಸನಾತನ ಆಶ್ರಮ, ಗೋವಾ.

4 thoughts on “ಶ್ರೀಕೃಷ್ಣನ ವಿವಿಧ ಗುಣವೈಶಿಷ್ಟ್ಯಗಳು”

  1. My due Namaskarams to the Lord Sree Krishna paramathna’s feet….dear all desiples ..please do accept my sincere thanks to you for this message information provided to all. I’m happy to read this. With Warm Regards.

    Reply

Leave a Comment