ತಮ್ಮ ಶಬ್ದಜನ್ಯ ಹಾಗೂ ಶಬ್ದಾತೀತ ಬೋಧನೆಯಿಂದ ಸಾಧಕರನ್ನು ಪ್ರತಿಕ್ಷಣ ರೂಪಿಸುವ ಹಾಗೂ ಸನಾತನ ಸಂಸ್ಥೆಯನ್ನು ಎಲ್ಲ ರೀತಿಯಿಂದಲೂ ಸಂಭಾಳಿಸುವ ಪ.ಪೂ. ಭಕ್ತರಾಜ ಮಹಾರಾಜರ ಚರಣಗಳಲ್ಲಿ ಅನಂತ ಕೋಟಿ ಕೃತಜ್ಞತೆಗಳು !

೭ ಜುಲೈ ೧೯೨೦ ರಂದು ಪ.ಪೂ. ಭಕ್ತರಾಜ ಮಹಾರಾಜರ ಜನ್ಮದಿನವಾಗಿದೆ !

ಪ.ಪೂ. ಸದ್ಗುರು ಭಕ್ತರಾಜ ಮಹಾರಾಜ ಜನ್ಮಶತಾಬ್ದಿ ಮಹೋತ್ಸವ ಸೇವಾ ಸಮಿತಿಯ ವತಿಯಿಂದ ೭ ಜುಲೈ ೨೦೧೯ ರಿಂದ ೭ ಜುಲೈ ೨೦೨೦ ಈ ಪೂರ್ಣ ವರ್ಷದಲ್ಲಿ ಸಂತ ಭಕ್ತರಾಜ ಮಹಾರಾಜರ ಜನ್ಮಶತಮಾನೋತ್ಸವವನ್ನು ಆಚರಿಸಲಾಗುವುದು. ಈ ನಿಮಿತ್ತ ಅನೇಕ ಉಪಕ್ರಮಗಳ ಆಯೋಜನೆಯನ್ನು ಮಾಡಲಾಗಿದ್ದು ಇದರಿಂದ ಹಳ್ಳಿಹಳ್ಳಿಗಳಲ್ಲಿಯ ಶಿಷ್ಯರಿಗೆ ದೊಡ್ಡ ಸತ್ಸಂಗವು ಲಭಿಸಲಿದೆ. ಚೈತನ್ಯದ ಸಗುಣ ಮೂರ್ತಿಯಾಗಿರುವ ಪ.ಪೂ. ಬಾಬಾರವರು ‘ಭಜನೆ, ಭ್ರಮಣ ಮತ್ತು ಭಂಡಾರ (ಅನ್ನಸಂತರ್ಪಣೆ) ಈ ೩ ‘ಭ’ಕಾರಗಳಿಂದ ಅನೇಕ ಜಿಜ್ಞಾಸುಗಳಿಗೆ ಈಶ್ವರಪ್ರಾಪ್ತಿಯ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ತಾವು ಸ್ವತಃ ಬರೆದ ಅಪ್ರತಿಮ ಭಜನೆಗಳಿಂದ ಸಾಧಕರಿಗೆ ಶಬ್ದಜನ್ಯ ಮತ್ತು ಶಬ್ದಾತೀತ ಬೋಧನೆಯನ್ನು ನೀಡಿದ್ದಾರೆ. ಅವು ಸಾಧಕರಿಗೆ ಈಗಲೂ ಸಾಧನೆಯಲ್ಲಿ ಮಾರ್ಗದರ್ಶಕವಾಗಿವೆ. ಪ.ಪೂ. ಬಾಬಾ ರಂತಹ ಉನ್ನತ ಸಂತರ ಕಾರ್ಯವು ನಿರ್ಗುಣದಲ್ಲಿಯೂ ನಿರಂತರವಾಗಿ ನಡೆಯುತ್ತಿದ್ದರಿಂದ ಅವರ ಚೈತನ್ಯಮಯ ಭಜನೆಗಳಿಂದ ಸಾಧಕರಿಗೆ ವಿವಿಧ ಹಂತಗಳಲ್ಲಿ ಅನುಭೂತಿಗಳು ಬರುತ್ತಿವೆ, ಅದೇರೀತಿ ಭಾವಾವಸ್ಥೆಗನುಸಾರ ಭಜನೆಯ ಭಾವಾರ್ಥಗಳೂ ಗಮನಕ್ಕೆ ಬರುತ್ತಿವೆ. ಪ.ಪೂ. ಬಾಬಾರವರ ಭಜನೆಗಳೆಂದರೆ ಅಲೌಕಿಕ, ಆನಂದಮಯ ಹಾಗೂ ಚಿರಂತನದ ಸಂಗ್ರಹವೇ ಆಗಿದೆ.

ಪ.ಪೂ. ಬಾಬಾರವರು ‘ನಾನು ಸನಾತನವನ್ನು ನಡೆಸುವೆ’, ಎಂದು ಉದ್ಗಾರ ತೆಗೆದಿದ್ದರು, ಅದು ಹೆಜ್ಜೆ ಹೆಜ್ಜೆಗೂ ನಿಜವಾಗುತ್ತಿದೆ. ಸಾಧಕರಿಗೆ ಅವರ ಬಗ್ಗೆ ಬರುವಂತಹ ವಿವಿಧ ಅನುಭೂತಿಗಳು, ಅವರ ಛಾಯಾಚಿತ್ರದಲ್ಲಿ ಬಂದಂತಹ ಸಜೀವತೆ, ಅದೇರೀತಿ ಅವರ ಛಾಯಾಚಿತ್ರವು ಹೆಚ್ಚೆಚ್ಚು ನಿರ್ಗುಣಕ್ಕೆ ಹೋಗುತ್ತಿರುವುದು, ಇವೆಲ್ಲದರಿಂದ ‘ಸನಾತನ ಸಂಸ್ಥೆಯ ಎಲ್ಲ ಕಾರ್ಯಭಾರವನ್ನು ಅವರೇ ಹೇಗೆ ನೋಡುತ್ತಿದ್ದಾರೆ ?’, ಎಂಬುದು ಗಮನಕ್ಕೆ ಬರುತ್ತದೆ. ನನ್ನ ಮೇಲೆ ಮಹಾಮೃತ್ಯುಯೋಗದ ಕರಿನೆರಳು ಇರುವಾಗ, ಅದೇರೀತಿ ಸನಾತನ ಸಂಸ್ಥೆಯ ಮೇಲೆ ಕೆಲವು ಸಂಕಟಗಳು ಬಂದಾಗ ಪ.ಪೂ. ಬಾಬಾರವರ ಛಾಯಾಚಿತ್ರಗಳಿಂದ ತಾರಕ ಹಾಗೂ ಮಾರಕ ಸ್ವರೂಪದ ಬದಲಾವಣೆಯಾಗುತ್ತದೆ.

೧೯೮೭ ರಲ್ಲಿ ನನ್ನ ಹಾಗೂ ಪ.ಪೂ. ಬಾಬಾರವರೊಂದಿಗೆ ಭೇಟಿಯಾದಾಗಲೇ ಅವರು ನನಗೆ ರಾಮದಾಸ ಸ್ವಾಮಿಯ ‘ಸಮರ್ಥರ ಸೇವಕರ ಮೇಲೆ ವಕ್ರದೃಷ್ಠಿಯಿಂದ ನೋಡಿದರೆ !’ ಈ ಸಾಲಿನ ಫಲಕವನ್ನು ಬರೆಯಲು ಹೇಳಿ ‘ಮುಂದಿನ ಧರ್ಮಕಾರ್ಯ ಮಾಡುವಾಗ ನಾನು ಆಯಾ ಸಮಯದಲ್ಲಿ ರಕ್ಷಣೆ ಮಾಡುವೆ’ ಎಂಬಂತೆ ಧೈರ್ಯ ನೀಡಿದ್ದರು. ಇಂದು ನಿರ್ಗುಣರೂಪದಲ್ಲಿರುವ ಪ.ಪೂ. ಬಾಬಾರವರು ಎಲ್ಲ ಸಂಕಟಗಳಿಂದ ನನ್ನ ಹಾಗೂ ಸನಾತನದ ಆಯಾ ಸಮಯದಲ್ಲಿ ರಕ್ಷಣೆಯನ್ನು ಮಾಡುತ್ತಿದ್ದಾರೆ. ಅವರ ಛಾಯಾಚಿತ್ರದಲ್ಲಿ ಆಗುತ್ತಿರುವ ಬದಲಾವಣೆಯು ಅದರ ಒಂದು ಪ್ರತೀಕವಾಗಿದೆ. ಇದರಿಂದಲೇ ಪ.ಪೂ. ಬಾಬಾರವರಂತೆ ಉತ್ತಮ ಸದ್ಗುರುಗಳ ಅಲೌಕಿಕತೆ ಹಾಗೂ ಶ್ರೇಷ್ಠತೆಯು ಗಮನಕ್ಕೆ ಬರುತ್ತದೆ.

ತಮ್ಮ ಚೈತನ್ಯಮಯವಾಣಿ ಹಾಗೂ ಅಮೂಲ್ಯ ಬೋಧನೆ ಯಿಂದ ನಮ್ಮೆಲ್ಲರ ಮೇಲೆ ಕೃಪೆ ತೋರುವ ಹಾಗೂ ಈಶ್ವರೀ ರಾಜ್ಯದ ಸ್ಥಾಪನೆಯಲ್ಲಿನ ಅಡಚಣೆಗಳನ್ನು ದೂರಗೊಳಿಸುವ ಪ.ಪೂ. ಭಕ್ತರಾಜ ಮಹಾರಾಜರ ಚರಣಗಳಲ್ಲಿ ಜನ್ಮಶತಮಾನೋತ್ಸವ ನಿಮಿತ್ತ ಅನಂತ ಕೋಟಿ ಕೃತಜ್ಞತೆಗಳು ! – ಡಾ. ಜಯಂತ ಆಠವಲೆ

Leave a Comment