ಪ.ಪೂ. ಭಕ್ತರಾಜ ಮಹಾರಾಜರ ಮೋರ್ಟಕ್ಕಾ, ಇಂದೋರ್ ಮತ್ತು ಕಾಂದಳಿ ಆಶ್ರಮಗಳ ಛಾಯಾಚಿತ್ರಮಯ ದರ್ಶನ !

ಶಿಷ್ಯನ ಜೀವನದಲ್ಲಿ ಅಜ್ಞಾನರೂಪಿ ಅಂಧಕಾರವನ್ನು ಜ್ಞಾನರೂಪಿ ತೇಜದಿಂದ ದೂರಗೊಳಿಸುವ ಶ್ರೀಗುರುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವೇ ಗುರುಪೂರ್ಣಿಮೆ ! ಯಾರು ಶಿಷ್ಯನ ಅಜ್ಞಾನ ದೂರವಾಗಿ ಅವನ ಆಧ್ಯಾತ್ಮಿಕ ಉನ್ನತಿಯಾಗಬೇಕೆಂದು, ಅವನಿಗೆ ಸಾಧನೆಯನ್ನು ಕಲಿಸಿ ಅವನಿಂದ ಸಾಧನೆಯನ್ನು ಮಾಡಿಸಿಕೊಳ್ಳುತ್ತಾರೆ ಮತ್ತು ಅನುಭೂತಿಯನ್ನು ಕೂಡ ನೀಡುತ್ತಾರೆಯೋ ಅವರನ್ನು ‘ಗುರು’ ಎಂದು ಕರೆಯುತ್ತೇವೆ. ಇಂತಹ ಕೃಪಾವತ್ಸಲ ಗುರುಗಳು ಅಂದರೆ ಪ.ಪೂ. ಭಕ್ತರಾಜ ಮಹಾರಾಜರು ಸ್ವತಃ ನೆಲೆಸಿದಂತಹ ಮಧ್ಯಪ್ರದೇಶದ ಮೋರ್ಟಕ್ಕಾ ಮತ್ತು ಇಂದೋರ್ ಇಲ್ಲಿನ ಆಶ್ರಮಗಳ ಚೈತನ್ಯಮಯ ವಾಸ್ತುಗಳ ಛಾಯಾಚಿತ್ರಮಯ ದರ್ಶನವನ್ನು ಪಡೆಯೋಣ.

7 ಜೂಲೈ 2019 ರಿಂದ ಪ.ಪೂ. ಭಕ್ತರಾಜ ಮಹಾರಾಜರ ಆಚರಿಸಲಾಗುತ್ತಿರುವ ಜನ್ಮಶತಾಬ್ದಿ ವರ್ಷದ ನಿಮಿತ್ತ ಸನಾತನ ಪರಿವಾರದ ವತಿಯಿಂದ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

ಪ.ಪೂ. ಭಕ್ತರಾಜ ಮಹಾರಾಜರ ಇವರ ಚೈತನ್ಯಮಯ ಕೋಣೆ (ಭಕ್ತವಾತ್ಸಲ್ಯಾಶ್ರಮ, ಇಂದೋರ್) ! ಇಲ್ಲಿಯೇ ಪ.ಪೂ. ರಾಮಾನಂದ ಮಹಾರಾಜರು ಮತ್ತು ಪರಾತ್ಪರ ಗುರು ಡಾ. ಆಠವಲೆಯವರು ಪ.ಪೂ. ಬಾಬಾರವರ ಸೇವೆಯನ್ನು ಮಾಡಿದರು.

ಪ.ಪೂ. ಭಕ್ತರಾಜ ಮಹಾರಾಜರು ಕುಳಿತುಕೊಳ್ಳುತ್ತಿದ್ದ ಜಾಗವಿದು (ಮೋರ್ಟಕ್ಕಾ, ಮಧ್ಯಪ್ರದೇಶ) ! ಈ ಸ್ಥಳವು ಶ್ರೀ ಅನಂತಾನಂದ ಸಾಯಿಷರ ‘ಶ್ರೀ ಸದ್ಗುರು ಸೇವಾಸದನ’ ಆಶ್ರಮದಲ್ಲಿದೆ.

ಮೋರ್ಟಕ್ಕಾ ಆಶ್ರಮದಲ್ಲಿ ಶ್ರೀ ಅನಂತಾನಂದ ಸಾಯಿಷರ ಚಿತ್ರ ಮತ್ತು ಅವರ ಚೈತನ್ಯಮಯ ಪಾದುಕೆಗಳು

ಪ.ಪೂ. ಬಾಬಾರವರ ಕುರ್ಚಿ ಮತ್ತು ಅವರ ಚೈತನ್ಯಮಯ ಪಾದುಕೆಗಳು, ಮೋರ್ಟಕ್ಕಾ

ಕಾಂದಳಿ (ಪುಣೆ) ಆಶ್ರಮದಲ್ಲಿರುವ ಪ.ಪೂ. ಭಕ್ತರಾಜ ಮಹಾರಾಜರ ಸಮಾಧಿ

ಕಾಂದಳಿಯಲ್ಲಿನ (ಪುಣೆ) ಪ.ಪೂ. ಭಕ್ತರಾಜ ಮಹಾರಾಜರ ಗದ್ದೆಗಳು. ಪ.ಪೂ. ಬಾಬಾರವರು ಪ್ರತಿದಿನ ಶಿವಪಿಂಡಿಯ ರೂಪದಲ್ಲಿರುವ ಈ ಬೆಟ್ಟದ ದರ್ಶನವನ್ನು ಪಡೆಯುತ್ತಿದ್ದರು

ಭಕ್ತವಾತ್ಸಲ್ಯಾಶ್ರಮ, ಇಂದೋರ್ ಇಲ್ಲಿರುವ ಗುರುಪಾದುಕೆಗಳ ಭಾವಪೂರ್ಣ ದರ್ಶನವನ್ನು ಪಡೆಯೋಣ !

ಶ್ರೀ ಅನಂತಾನಂದ ಸಾಯಿಷರ ಚೈತನ್ಯಮಯ ಪಾದುಕೆಗಳು

ಪ.ಪೂ. ಭಕ್ತರಾಜ ಮಹಾರಾಜರ ಚೈತನ್ಯಮಯ ಪಾದುಕೆಗಳು

ಪ.ಪೂ. ರಾಮಾನಂದ ಮಹಾರಾಜರ ಚೈತನ್ಯಮಯ ಪಾದುಕೆಗಳು

Leave a Comment