ಶಾಸ್ತ್ರೀಯ ಗಣೇಶಮೂರ್ತಿಯನ್ನೇ ಪೂಜಿಸಿ!

ಗಣೇಶೋತ್ಸವ ಮಂಡಳಿಗಳೇ, ಅಗ್ಗದ ಜನಪ್ರಿಯತೆಗಾಗಿ ಗಣೇಶೋತ್ಸವವನ್ನು ಆಚರಿಸದೇ,
ಲೋಕಕಲ್ಯಾಣಕ್ಕಾಗಿ ಆಚರಿಸಿರಿ!

Sri+Ganesh.jpg

ಇಂದು ಧರ್ಮಶಿಕ್ಷಣದ ಅಭಾವದಿಂದ ಮತ್ತು ಅಗ್ಗದ ಜನಪ್ರಿಯತೆಗಾಗಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಪ್ರತಿವರ್ಷ ಚಿತ್ರವಿಚಿತ್ರ ರೂಪದಲ್ಲಿನ ಮತ್ತು ಬೃಹತ್ ಆಕಾರದ ಶ್ರೀ ಗಣೇಶಮೂರ್ತಿಯನ್ನು ಕುಳ್ಳಿರಿಸುತ್ತಾರೆ.

ಮಕ್ಕಳಿಗೆ ಇಷ್ಟವಾಗುತ್ತದೆ ಎಂದು ತರುವ ಮೂರ್ತಿಯನ್ನು ಬದಲಾಯಿಸುವುದು ಕಠಿಣವಾಗುತ್ತದೆ: ಕೆಲವು ಮನೆಗಳಲ್ಲಿ ಮಕ್ಕಳು ಹೇಳಿದಂತೆ, ಉದಾ. ಕ್ರಿಕೆಟ್ ಆಡುವ ಗಣೇಶ ಮೂರ್ತಿಯನ್ನು ತರುತ್ತಾರೆ. ಕೆಲವು ಮನೆಗಳಲ್ಲಿ ಮಕ್ಕಳಿಗೆ ಇಷ್ಟವಾಗುತ್ತದೆ ಎಂದು ಪ್ರತಿವರ್ಷ ವೈವಿಧ್ಯಮಯ ಅಶಾಸ್ತ್ರೀಯ ರೂಪದ ಮೂರ್ತಿಗಳನ್ನು ತರುತ್ತಾರೆ. ಪಾಲಕರು, ‘ಮಕ್ಕಳಿಗೆ ಇಷ್ಟವಾಗುವ ಮೂರ್ತಿಯನ್ನು ತರುವುದು ಅಯೋಗ್ಯವಾಗಿದೆಯೇ’ ಎಂದು ಕೇಳುತ್ತಾರೆ.

ಅ. ಪ್ರತಿವರ್ಷ ಅದರಲ್ಲಿ ವೈವಿಧ್ಯತೆ ಬೇಕೆಂದು ಹೇಳಲು, ಗಣೇಶನ ಮೂರ್ತಿ ಆಟದ ಸಾಮಾನಲ್ಲ, ಭಕ್ತಿಭಾವವನ್ನು ಹೆಚ್ಚಿಸುವುದು, ಈಶ್ವರೀ ಚೈತನ್ಯವನ್ನು ಗ್ರಹಿಸುವುದು ಮುಂತಾದವುಗಳಿಗಾಗಿ ಶ್ರೀ ಗಣೇಶನ ಮೂರ್ತಿಯನ್ನು ಮನೆಗೆ ತಂದು ಪೂಜಿಸಬೇಕಾಗಿರುತ್ತದೆ. ಧರ್ಮಶಾಸ್ತ್ರದಲ್ಲಿ ಹೇಳಿದ್ದನ್ನು ಎಂದಿಗೂ ಬದಲಾಯಿಸಬಾರದು. ಬದಲಿಗೆ ಈ ನಿಮಿತ್ತದಿಂದ ಮಕ್ಕಳಿಗೆ ಪ್ರಬೋಧನೆ ಮಾಡಬೇಕು ಮತ್ತು ಅವರಿಗೆ ಧರ್ಮಶಿಕ್ಷಣ ನೀಡಬೇಕು.

ಆ. ದೊಡ್ಡವರಿಗೆ ಮಕ್ಕಳ ಇಷ್ಟದಂತೆಯೇ ಏನಾದರೂ ಮಾಡಬೇಕೆಂದು ಅನಿಸಿದರೆ ಬಟ್ಟೆ, ತಿಂಡಿ-ತಿನಿಸುಗಳಲ್ಲಿ ತಾರತಮ್ಯ ಮಾಡಬೇಕು.

ಇ. ಪಾಲಕರೇ, ಶಾಸ್ತ್ರದಲ್ಲಿ ಹೇಳಿರುವ ಮೂರ್ತಿಯನ್ನು ಬಿಟ್ಟು ಬೇರೆ ಮೂರ್ತಿಯನ್ನು ತರುವುದು ಅಯೋಗ್ಯವಾಗಿದೆ ಎಂದು ಮಕ್ಕಳಿಗೆ ಹೇಳುವುದು ನಿಮ್ಮ ಧರ್ಮಕರ್ತವ್ಯವೇ ಆಗಿದೆ! ಇಲ್ಲದಿದ್ದಲ್ಲಿ ಅಯೋಗ್ಯ ಮೂರ್ತಿಯಿಂದಾಗಿ ನಮ್ಮ ದೇವತೆಗಳ ಕುರಿತು ಮಕ್ಕಳಿಗೆ ಯೋಗ್ಯ ಧರ್ಮಶಿಕ್ಷಣ ಸಿಗುವುದಿಲ್ಲ.

ಪರಂಪರೆಗನುಸಾರ ತರಲಾಗುವ ಮೂರ್ತಿಯನ್ನು ಬದಲಾಯಿಸುವುದು ಕಠಿಣವೆನಿಸುತ್ತದೆ: ಕೆಲವು ಗಣೇಶಭಕ್ತರ ಮನೆಗಳಲ್ಲಿ ಪರಂಪರೆಗನುಸಾರ, ಅಂದರೆ ಕಳೆದ ೪೦-೫೦ ವರ್ಷಗಳಿಂದ ಒಂದೇ ರೀತಿಯ ಮೂರ್ತಿಯನ್ನು ತರುತ್ತಾರೆ, ಉದಾ.ಗರುಡನ ಮೇಲೆ ಕುಳಿತ ಮೂರ್ತಿ, ಮೂರು-ನಾಲ್ಕು ಅಡಿ ಎತ್ತರದ ಮೂರ್ತಿ ಅಥವಾ ನಿಂತಿರುವ ಭಂಗಿಯಲ್ಲಿನ ಮೂರ್ತಿ. ಅವರಿಗೆ ಈ ಪರಂಪರೆಯನ್ನು ಬದಲಾಯಿಸುವುದು ಯೋಗ್ಯವಲ್ಲ ಎಂದು ಅನಿಸುತ್ತದೆ.

ಆ ಕಾಲದಲ್ಲಿನ ಕುಟುಂಬಪ್ರಮುಖರು ವಿಶಿಷ್ಟ ಗಣೇಶ ಮೂರ್ತಿಯನ್ನು ತರುವ ಪರಂಪರೆಯನ್ನು ಪ್ರಾರಂಭಿಸಿರುತ್ತಾರೆ. ಬಹುತೇಕ ಬಾರಿ ಧರ್ಮಶಾಸ್ತ್ರದ ಬಗ್ಗೆ ವಿಚಾರ ಮಾಡದೇ ಇಷ್ಟವಾಗುತ್ತದೆ ಎಂದು ಅಥವಾ ಯಾರಾದರೂ ಹೇಳಿದ್ದಾರೆಂದು ಅಂತಹ ಪರಂಪರೆಯು ಪ್ರಾರಂಭವಾಗಿರುತ್ತದೆ. ‘ಕೇವಲ ಹಿಂದಿನಿಂದ ನಡೆಯುತ್ತಾ ಬಂದಿರುವ ಪರಂಪರೆಯಾಗಿದೆ’ ಎಂದು ಅದನ್ನು ಪಾಲಿಸುವುದಕ್ಕಿಂತ ‘ಆ ಪರಂಪರೆಯು ಧರ್ಮಶಾಸ್ತ್ರಕ್ಕನು ಸಾರವಾಗಿದೆಯೇ’, ಎಂಬ ವಿಚಾರವನ್ನು ಗಣೇಶಭಕ್ತರು ಮಾಡುವುದು ಆವಶ್ಯಕವಾಗಿದೆ. ‘ಧರ್ಮಶಾಸ್ತ್ರವು ಸುಸ್ಪಷ್ಟ ವಾಗಿದ್ದಲ್ಲಿ, ಅದಕ್ಕನುಸಾರ ಆಚರಣೆ ಮಾಡಬೇಕು’, ಎಂದು ಧರ್ಮಾಧಿಕಾರಿಗಳೂ ಹೇಳುತ್ತಾರೆ. ಮೂರ್ತಿವಿಜ್ಞಾನದ ಬಗ್ಗೆ ಹಿಂದೂ ಧರ್ಮಶಾಸ್ತ್ರವು ಸುಸ್ಪಷ್ಟ ವಿವೇಚನೆಯನ್ನು ಮಾಡುತ್ತದೆ. ಪ್ರಸ್ತುತ ಕಿರುಗ್ರಂಥದಲ್ಲಿಯೂ ಈ ಶಾಸ್ತ್ರವನ್ನು ವಿವರವಾಗಿ ಹೇಳಲಾಗಿದೆ. ಆದ್ದರಿಂದ ಪರಂಪರೆಯಿಂದ ಕಳೆದ ಕೆಲವು ವರ್ಷಗಳಿಂದ ತರಲಾಗುತ್ತಿರುವ ಶಾಸ್ತ್ರಕ್ಕನುಸಾರವಿರದ ಮೂರ್ತಿಯನ್ನು ಬದಲಿಸಿ ಶಾಸ್ತ್ರಕ್ಕನುಸಾರವಿರುವ ಮೂರ್ತಿಯನ್ನೇ ತರಬೇಕು. ಹೀಗೆ ಮಾಡುವುದರಿಂದ ಶ್ರೀ ಗಣೇಶನ ಅವಕೃಪೆಯಾಗುವ ಅಪಾಯವಂತೂ ಆಗುವುದೇ ಇಲ್ಲ, ಬದಲಿಗೆ ಅವನು ಭಕ್ತರ ಮೇಲೆ ಪ್ರಸನ್ನನಾಗುತ್ತಾನೆ.

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಕಿರುಗ್ರಂಥ ‘ಶ್ರೀ ಗಣೇಶಮೂರ್ತಿ ಶಾಸ್ತ್ರಾನುಸಾರ ಇರಬೇಕು’)

Leave a Comment