ಜೀರ್ಣ ದೇವಸ್ಥಾನಗಳಿರುವ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಏಕೆ ಮಾಡಬಾರದು?

ಶಾಸ್ತ್ರ : ಜೀರ್ಣ ದೇವಸ್ಥಾನಗಳಿರುವ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದರಿಂದ ರಜ-ತಮಾತ್ಮಕ ಲಹರಿಗಳು ಮತ್ತು ವಾಯುಗಳು ಹರಡಿ ಪವಿತ್ರ ವಾಯುಮಂಡಲವು ಅಪವಿತ್ರವಾಗುತ್ತದೆ: ‘ಜೀರ್ಣ’ ಎಂದರೆ ಅತ್ಯಂತ ಹಳೆಯ. ಕಾಲಕಳೆದಂತೆ ಇಂತಹ ದೇವಾಲಯಗಳ ಸ್ಥಳಗಳಲ್ಲಿ ಅಲ್ಲಿನ ದೇವತೆಗಳ ಶಕ್ತಿರೂಪೀ ವಾಯುಮಂಡಲವು ಭೂಮಂಡಲದೊಂದಿಗೆ ಘನೀಕೃತವಾಗಿರುತ್ತದೆ. ಜೀರ್ಣ ದೇವಸ್ಥಾನಗಳ ಭಗ್ನ ಅವಶೇಷಗಳಿಂದ ವಾಯುಮಂಡಲದಲ್ಲಿ ಹೊರಬೀಳುವ ದೇವತೆಯ ಚೇತನವು ಕಡಿಮೆಯಾಗಿದ್ದರೂ ಆ ದೇವತೆಯ ಪೃಥ್ವಿ ಮತ್ತು ಆಪತತ್ತ್ವಗಳೊಂದಿಗೆ ಸಂಬಂಧಿಸಿದ ಶಕ್ತಿಸ್ವರೂಪ ವಾಯುಮಂಡಲವು ಭೂಮಂಡಲದೊಂದಿಗೆ ಘನೀಕೃತವಾಗಿ ಸುಪ್ತ ರೂಪದಲ್ಲಿ ಇರುವುದರಿಂದ ಅದು ಒಂದು ಪವಿತ್ರ ವಾಯುಮಂಡಲವೇ ಆಗಿರುತ್ತದೆ. ಇಂತಹ ಪವಿತ್ರ ಸ್ಥಳದಲ್ಲಿ ರಜ-ತಮಾತ್ಮಕ ಲಹರಿಗಳ ಮತ್ತು ವಾಯುಗಳ ಹರಡುವಿಕೆಗೆ ಕಾರಣವಾಗುವ ಮಲಮೂತ್ರ ವಿಸರ್ಜನೆಯಂತಹ ಕೃತಿಗಳನ್ನು ಮಾಡುವುದರಿಂದ ಆ ಸ್ಥಳದಲ್ಲಿರುವ ಪವಿತ್ರ ವಾಯುಮಂಡಲವು ಅಪವಿತ್ರವಾಗುತ್ತದೆ ಮತ್ತು ಇದು ಒಂದು ಪಾಪಭರಿತ ಕರ್ಮವಾಗುತ್ತದೆ.

ಟಿಪ್ಪಣಿ : ಜೀರ್ಣ ದೇವಸ್ಥಾನಗಳ ಬಳಿ ಅಷ್ಟೇ ಅಲ್ಲದೇ, ದೇವಸ್ಥಾನದ ಸುತ್ತಮುತ್ತಲಿನ ಜಾಗದಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದು ಪಾಪಕರ್ಮವೇ ಆಗಿದೆ.

(ಹೆಚ್ಚಿನ ಮಾಹಿತಿಗಾಗಿ ಓದಿರಿ ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ)

Leave a Comment