ದೇವರ ಪೂಜೆಯ ಸಿದ್ಧತೆಯ ಸಂದರ್ಭದಲ್ಲಿನ ಕೆಲವು ಕೃತಿಗಳ ಶಾಸ್ತ್ರ

ಸ್ತೋತ್ರಪಠಣ ಅಥವಾ ನಾಮಜಪ ಮಾಡುವುದು

1366888364_pooja-karane

ಸ್ತೋತ್ರಪಠಣ ಮತ್ತು ನಾಮಜಪಗಳಿಂದಾಗಿ ಜೀವದ ಸುತ್ತಲೂ ಸಂರಕ್ಷಣಾಕವಚವು ನಿರ್ಮಾಣವಾಗುವುದು ಮತ್ತು ಕೆಟ್ಟಶಕ್ತಿಗಳ ಸ್ಪಂದನಗಳು ನಾಶವಾಗಲು ಸಹಾಯವಾಗುವುದು.

ಸ್ತೋತ್ರಪಠಣ, ಮಂತ್ರ ಜಪ ಮತ್ತು ನಾಮಜಪಗಳಿಂದಾಗಿ ಜೀವದ ಶುದ್ಧೀಕರಣವಾಗಿ ಜೀವದ ಸುತ್ತಲೂ ಸಂರಕ್ಷಣಾಕವಚವು ನಿರ್ಮಾಣವಾಗುತ್ತದೆ. ಅಲ್ಲದೇ ದೇವತೆಯ ಶಕ್ತಿಯ ಸ್ಪಂದನಗಳು ವಾಸ್ತುವಿನಲ್ಲಿ ಪ್ರಕ್ಷೇಪಿತವಾಗಿ ಪೂಜಾವಿಧಿಯಲ್ಲಿ ಅಡಚಣೆಗಳನ್ನುಂಟು ಮಾಡುವ ಕೆಟ್ಟಶಕ್ತಿಗಳ ಸ್ಪಂದನಗಳು ಮತ್ತು ವಾಸ್ತುವಿನಲ್ಲಿದ್ದ ಚಿಕ್ಕಪುಟ್ಟ ಕೆಟ್ಟಶಕ್ತಿಗಳ ಸ್ಪಂದನಗಳು ನಾಶವಾಗುತ್ತದೆ.

ಪೂಜಾವಿಧಿಗಳ ಮೊದಲು ಪೂಜಾಸ್ಥಳದ ಶುದ್ಧೀಕರಣ ಮತ್ತು ಪೂಜೆಯ ಉಪಕರಣಗಳ ಜಾಗೃತಿ
ಪೂಜಾಸ್ಥಳದ ಶುದ್ಧಿ

ಪೂಜೆಯ ಸಿದ್ಧತೆಯನ್ನು ಮಾಡುವಾಗ ಮೊತ್ತಮೊದಲು ಪೂಜೆಯ ಸ್ಥಳದ ಶುದ್ಧೀಕರಣವನ್ನು ಮಾಡಬೇಕು. ಪ್ರಸ್ತುತ ರಜ-ತಮಗಳ ಹಲ್ಲೆಯು ಹೆಚ್ಚು ಪ್ರಮಾಣದಲ್ಲಿ ಆಗುತ್ತಿರುವುದರಿಂದ ದೇವರ ಕೋಣೆ, ಪೂಜೆಯ ಉಪಕರಣ ಮತ್ತು ವಾಸ್ತುವಿನ ಮೇಲೆ ಕೆಟ್ಟಶಕ್ತಿಗಳು ಕಪ್ಪು ಆವರಣವನ್ನು ತರುತ್ತವೆ. ಆದುದರಿಂದ ಪೂಜೆಯಿಂದ ಜೀವಕ್ಕೆ ಅಪೇಕ್ಷಿತ ಪ್ರಮಾಣದಲ್ಲಿ ಲಾಭವು ಸಿಗುವುದಿಲ್ಲ; ಪೂಜಾಸ್ಥಳದ ಶುದ್ಧೀಕರಣವನ್ನು ಮುಂದಿನ ಹಂತಗಳಿಗನುಸಾರ ಮಾಡಬೇಕು.

ಅ. ಕಸ ಗುಡಿಸುವುದು: ದೇವರಕೋಣೆ ಇರುವ ಕೋಣೆಯ ಕಸ ಗುಡಿಸಬೇಕು. ಇದರಿಂದ ಆ ಕೋಣೆಯಲ್ಲಿರುವ ರಜ-ತಮ ಕಣಗಳ ವಿಘಟನೆಯಾಗಿ ವಾತಾವರಣವು ಶುದ್ಧವಾಗುತ್ತದೆ. ಸಾಧ್ಯವಿದ್ದಲ್ಲಿ ಪೂಜೆಯನ್ನು ಮಾಡುವವರು ಕಸ ತೆಗೆದರೆ ಹೆಚ್ಚು ಉಪಯೋಗವಾಗುತ್ತದೆ.

ಆ. ಸೆಗಣಿಯಿಂದ ಸಾರಿಸುವುದು: ದೇವರಕೋಣೆಯನ್ನು ಸಾಧ್ಯವಿದ್ದಲ್ಲಿ ಆಕಳ ಸೆಗಣಿಯಿಂದ ಸಾರಿಸಬೇಕು. ಆಕಳ ಸೆಗಣಿಯಲ್ಲಿ ವಾತಾವರಣದಲ್ಲಿನ ಸತ್ತ್ವಕಣಗಳನ್ನು ಹಿಡಿದಿಟ್ಟುಕೊಳ್ಳುವ ಕ್ಷಮತೆ ಇರುತ್ತದೆ. ಇದರಿಂದ ಪೂಜಾಸ್ಥಳದ ಮೇಲೆ ಮಾಂತ್ರಿಕರು ಹಲ್ಲೆಯನ್ನು ಮಾಡಲಾರರು. ಸೆಗಣಿಯಿಂದ ಸಾರಿಸುವುದರಿಂದ ವಾಯುಮಂಡಲದಲ್ಲಿನ ಸಾತ್ತ್ವಿಕತೆಯು ಸ್ಥಿರವಾಗಿರುತ್ತದೆ.

ಇ. ಗೋಮೂತ್ರ ಮತ್ತು ಧೂಪಗಳಿಂದ ಶುದ್ಧೀಕರಣ ಮಾಡುವುದು: ಮಾವಿನ ಅಥವಾ ತುಳಸಿಯ ಎಲೆಯಿಂದ ಗೋಮೂತ್ರವನ್ನು ಸಿಂಪಡಿಸಿ ಧೂಪವನ್ನು ತೋರಿಸಿ ದೇವರಕೋಣೆಯನ್ನು ಶುದ್ಧಗೊಳಿಸಬೇಕು. ಇದರಿಂದ ವಾಯುಮಂಡಲದಲ್ಲಿರುವ ವಿಷಕಾರೀ ವಾಯು ಮತ್ತು ಕಪ್ಪು ಶಕ್ತಿಯು ನಾಶವಾಗಲು ಸಹಾಯವಾಗುತ್ತದೆ. – ಓರ್ವ ಜ್ಞಾನಿ (ಶ್ರೀ.ನಿಷಾದ ದೇಶಮುಖ ಇವರ ಮಾಧ್ಯಮದಿಂದ, ೧೬.೪.೨೦೦೭, ಮಧ್ಯಾಹ್ನ ೩.೧೨)
(ಹಸುವಿನ ಸೆಗಣಿಯಿಂದ ಸಾರಿಸುವುದಕ್ಕೆ ಇಷ್ಟೊಂದು ಮಹತ್ವವಿರುವುದರಿಂದಲೇ ಹಿಂದಿನ ಕಾಲದಲ್ಲಿ ನೆಲವನ್ನು ಹಸುವಿನ ಸೆಗಣಿಯಿಂದ ಸಾರಿಸುತ್ತಿದ್ದರು. ಈಗ ಮಾತ್ರ ಅದರ ಮಹತ್ವವು ಕಡಿಮೆಯಾಗುತ್ತಾ ಹೋಗುತ್ತಿದೆ. – ಸಂಕಲನಕಾರರು)

ರಂಗೋಲಿಯನ್ನು ಏಕೆ ಹಾಕಬೇಕು?

ನೆಲವನ್ನು ಕಸಬರಿಕೆಯಿಂದ ಗುಡಿಸುವಾಗ ಮತ್ತು ಸಾರಿಸುವಾಗ ನೆಲದ ಮೇಲೆ ಸೂಕ್ಷ್ಮರೇಖೆಗಳು ನಿರ್ಮಾಣವಾಗಿ ಅವುಗಳಲ್ಲಿ ಒಂದು ರೀತಿಯ ಸ್ಪಂದನಗಳು ನಿರ್ಮಾಣವಾಗುತ್ತವೆ. ಈ ರೇಖೆಗಳು ಅನಿಯಮಿತವಾಗಿರುವುದರಿಂದ ಅವುಗಳ ಸ್ಪಂದನಗಳು ಸಹ ಅನಿಯಮಿತವಾಗಿರುತ್ತವೆ. ಈ ಸ್ಪಂದನಗಳು ಶರೀರಕ್ಕೆ, ಕಣ್ಣುಗಳಿಗೆ ಮತ್ತು ಮನಸ್ಸಿಗೆ ಹಾನಿಕಾರಕವಾಗಿರುತ್ತವೆ. ಈ ಅನಿಷ್ಟ ಸ್ಪಂದನಗಳನ್ನು ತಡೆಗಟ್ಟಲು ಸಾರಿಸಿದ ನೆಲದ ಮೇಲೆ ರಂಗೋಲಿಯಿಂದ ಕೋನಗಳನ್ನು ಮತ್ತು ಶುಭಚಿಹ್ನೆಗಳನ್ನು ಬಿಡಿಸುತ್ತಾರೆ. ಇದರಿಂದ ನಿಯಮಿತ ಸ್ಪಂದನಗಳು ನಿರ್ಮಾಣವಾಗಿ ಅಶುಭ ಪರಿಣಾಮಗಳು ದೂರವಾಗಿ ಶುಭಪರಿಣಾಮಗಳು ಪ್ರಾಪ್ತವಾಗುತ್ತವೆ.
(ಶ್ರೀ.ನಿಷಾದ ದೇಶಮುಖ ಇವರ ಮಾಧ್ಯಮದಿಂದ, ೧೭.೪.೨೦೦೭, ಮಧ್ಯಾಹ್ನ ೨.೫೬)

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ದೇವರ ಪೂಜೆಯ ಪೂರ್ವತಯಾರಿ’)

Leave a Comment