ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು?

ದೇವರಕೋಣೆ/ಮಂಟಪದ ಮುಖವನ್ನು ಪೂರ್ವದಿಕ್ಕಿಗೆ ಮಾಡುವುದರಿಂದ ದೇವತೆಗಳಿಂದ ಪ್ರಕ್ಷೇಪಿತವಾಗುವ ಲಹರಿಗಳು ಪೂರ್ವದಿಕ್ಕಿನ ಟೊಳ್ಳಿನಲ್ಲಿ ಸ್ಥಿರವಾಗಿರುವ ಕ್ರಿಯಾಶಕ್ತಿಯ ಬಲದಿಂದ ಗತಿಮಾನವಾಗುತ್ತವೆ.

ಕೆಲವು ದೇವಸ್ಥಾನಗಳಲ್ಲಿ ಪುರುಷರು ಅಂಗಿಯನ್ನು ತೆಗೆದು ಪ್ರವೇಶಿಸಬೇಕು ಎಂಬ ನಿಯಮ ಏಕೆ ಮಾಡಿರುತ್ತಾರೆ?

ಸ್ತ್ರೀಯರು ಪ್ರತ್ಯಕ್ಷ ಶಕ್ತಿರೂಪಿ ಧಾರೆಯಾಗಿರುವುದರಿಂದ ಮತ್ತು ಪುರುಷರು ಶಿವರೂಪಿ ಕಾರ್ಯ ಮಾಡುವವರಾಗಿದ್ದರಿಂದ ಅವರು ಹೆಚ್ಚಿನ ಪ್ರಮಾಣದಲ್ಲಿ ಸಾತ್ತ್ವಿಕತೆಯನ್ನು ಪಡೆದುಕೊಳ್ಳುವುದು ಮಹತ್ವದ್ದಾಗಿರುತ್ತದೆ.