ಪ್ರಾರ್ಥನೆಯನ್ನು ಹೇಗೆ ಮಾಡಬೇಕು?

ಸಾಮಾನ್ಯ ಪದ್ಧತಿ

೧. ಪ್ರಾರ್ಥನೆಯ ಸಮಯದಲ್ಲಿ ಮನಸ್ಸನ್ನು ಸ್ಥಿರ ಮತ್ತು ಶಾಂತವಾಗಿರಿಸಬೇಕು.

೨. ನಮಸ್ಕಾರದ ಮುದ್ರೆಯಲ್ಲಿ ಕೈಗಳನ್ನು ಜೋಡಿಸಿರಬೇಕು.

೩. ‘ದೇವತೆ ಅಥವಾ ಗುರುಗಳು ಪ್ರತ್ಯಕ್ಷ ನಮ್ಮೆದುರಿಗಿದ್ದಾರೆ’ ಎಂದು ಕಲ್ಪನೆಯನ್ನು ಮಾಡಬೇಕು ಅಥವಾ ದೇವತೆಯ/ ಗುರುಗಳ ಚರಣಗಳನ್ನು ಕಣ್ಣೆದುರು ತಂದುಕೊಳ್ಳಬೇಕು.

೪. ಕೆಲವು ಕ್ಷಣ ದೇವತೆಯ ಅಥವಾ ಗುರುಗಳ ಚರಣಗಳಲ್ಲಿ ಮನಸ್ಸನ್ನು ಏಕಾಗ್ರಗೊಳಿಸಬೇಕು.

೫. ಪ್ರಾರ್ಥನೆಯನ್ನು ಸ್ಪಷ್ಟ ಶಬ್ದಗಳಲ್ಲಿ ಮಾಡಬೇಕು. ಪ್ರಾರ್ಥನೆಯ ಅಭ್ಯಾಸವಾಗಲು ಪ್ರಾರಂಭದಲ್ಲಿ ಪ್ರಾರ್ಥನೆಯನ್ನು ದೊಡ್ಡಸ್ವರದಲ್ಲಿ ಮಾಡುವುದು ಅನುಕೂಲವಾಗಿರುತ್ತದೆ. ಮುಂದೆ ಪ್ರಾರ್ಥನೆಯನ್ನು ಮನಸ್ಸಿನಲ್ಲಿ ಮಾಡಬೇಕು.

೬. ಪ್ರಾರ್ಥನೆಯಲ್ಲಿನ ಶಬ್ದ ಮತ್ತು ಅರ್ಥಗಳ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಬೇಕು.

೭. ಪ್ರಾರ್ಥನೆಯನ್ನು ಕೇವಲ ಓದಿದಂತೆ ಮಾಡದೇ, ಪ್ರಾರ್ಥನೆಯಿಂದ ದೇವತೆಯೊಂದಿಗೆ/ಗುರುಗಳೊಂದಿಗೆ ಆರ್ತತೆಯಿಂದ ಮಾತನಾಡಲು ಪ್ರಯತ್ನಿಸಬೇಕು. ಉದಾ. ‘ನನ್ನ ಸಾಧನೆಯಲ್ಲಿನ ಅಡಚಣೆಗಳು ದೂರವಾಗಲಿ’, ಈ ಪ್ರಾರ್ಥನೆಯನ್ನು ಮಾಡುವಾಗ ಸಾಧನೆಯಲ್ಲಿ ಪದೇಪದೇ ಬರುವ ಅಡಚಣೆಗಳನ್ನು ನೆನಪಿಸಿಕೊಂಡು ಅವುಗಳನ್ನು ಆರ್ತತೆಯಿಂದ ದೇವತೆಗೆ/ಗುರುಗಳಿಗೆ ಹೇಳಬೇಕು.

೮. ‘ದೇವತೆಯೇ/ಗುರುಗಳೇ ಪ್ರಾರ್ಥನೆಯನ್ನು ಮಾಡಿಸಿಕೊಂಡರು’ ಎಂದು ದೇವತೆಯ ಬಗ್ಗೆ/ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಕಿರುಗ್ರಂಥ ‘ಪ್ರಾರ್ಥನೆಯ ಮಹತ್ವ ಮತ್ತು ಉದಾಹರಣೆಗಳು’)

1 thought on “ಪ್ರಾರ್ಥನೆಯನ್ನು ಹೇಗೆ ಮಾಡಬೇಕು?”

Leave a Comment