ಬೇವಿನ ಮಿಶ್ರಣ

ಬೇವಿನ ಮಿಶ್ರಣದ ಮಹತ್ವ

ಬೇವಿನಲ್ಲಿ ಪ್ರಜಾಪತಿ-ಲಹರಿಗಳನ್ನು ಗ್ರಹಿಸುವ ಕ್ಷಮತೆಯು ಇತರ ಯಾವುದೇ ಪದಾರ್ಥಕ್ಕಿಂತಲೂ ಹೆಚ್ಚಿರುವುದರಿಂದ ಯುಗಾದಿಯ ದಿನ ಬೇವಿನ ಮಿಶ್ರಣವನ್ನು ಸೇವಿಸುತ್ತಾರೆ. ಇದರಲ್ಲಿ ಶಕ್ತಿ, ಚೈತನ್ಯ ಮತ್ತು ಆನಂದದ ಲಹರಿಗಳನ್ನು ಒಟ್ಟಿಗೆ ಆಕರ್ಷಿಸಲ್ಪಡುತ್ತವೆ.

ಮುಂದಿನ ಕೋಷ್ಟಕದಲ್ಲಿ ಲಹರಿಗಳನ್ನು ಗ್ರಹಿಸುವ ಕೆಲವು ಪದಾರ್ಥಗಳ ಕ್ಷಮತೆಯನ್ನು ನೀಡಲಾಗಿದೆ. ಇದರಿಂದ ಯುಗಾದಿಯಂದು ಬೇವನ್ನು ಏಕೆ ತಿನ್ನುತ್ತಾರೆ ಮತ್ತು ಚೈತ್ರ ಮಾಸದಲ್ಲಿ ಹಾಲು, ಮೊಸರು, ತುಪ್ಪ ಮತ್ತು ಸಕ್ಕರೆಯನ್ನು ಏಕೆ ತಿನ್ನಬಾರದೆಂಬುದು ಗಮನಕ್ಕೆ ಬರುತ್ತದೆ.

(ಸಂಕಲನಕಾರ ಪ.ಪೂ.ಡಾ.ಜಯಂತ ಆಠವಲೆ ಇವರಿಗೆ ಧ್ಯಾನದಲ್ಲಿ ಪ್ರಾಪ್ತವಾದ ಜ್ಞಾನ)

ಬೇವಿನ ಮಿಶ್ರಣವನ್ನು ತಯಾರಿಸುವ ಪದ್ಧತಿ

ಬೇವಿನ ಹೂವು, ಬೇವಿನ ಚಿಗುರೆಲೆ, ಕರಿಮೆಣಸು, ಸಕ್ಕರೆ, ಓಮ ಮತ್ತು ಸ್ವಲ್ಪ ಹಿಂಗು ಇವೆಲ್ಲವನ್ನು ಬೆರೆಸಿ ಮಿಶ್ರಣವನ್ನು ತಯಾರಿಸಿ ಹುಣಸೆಹಣ್ಣಿನೊಂದಿಗೆ ಸೇರಿಸಿ ಎಲ್ಲರಿಗೂ ಕೊಡಬೇಕು.

ಇದನ್ನು ಸೇವಿಸುವವರಿಗೆ ರೋಗಶಾಂತಿ ಹಾಗೂ ವ್ಯಾಧಿಗಳು ನಾಶವಾಗಿ ಸುಖ-ಸಂಪತ್ತಿ, ವಿದ್ಯೆ, ಆಯುಷ್ಯ ಲಭಿಸಲಿ ಎಂದು ಈ ಮಿಶ್ರಣವನ್ನು ಸೇವಿಸಲು ತಿಳಿಸಲಾಗಿದೆ.

(ಹೆಚ್ಚಿನ ಮಾಹಿತಿಗಾಗಿ ಓದಿ – ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)

Leave a Comment