ಶಿವಪೂಜೆಯ ಕೆಲವು ವೈಶಿಷ್ಟ್ಯಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ!

೧. ‘ಶಿವಪೂಜೆಯಲ್ಲಿ ಶಂಖದ ಪೂಜೆಯನ್ನು ಮಾಡುವುದಿಲ್ಲ ಮತ್ತು ಶಿವನಿಗೆ ಶಂಖದ ನೀರಿನಿಂದ ಅಭಿಷೇಕವನ್ನು ಮಾಡುವುದಿಲ್ಲ. ದೇವರ ಮೂರ್ತಿಯಲ್ಲಿ ಪಂಚಾಯತನದ ಸ್ಥಾಪನೆ ಇದ್ದರೆ, ಅದರಲ್ಲಿನ ಬಾಣಲಿಂಗದ ಮೇಲೆ ಶಂಖೋದಕವನ್ನು ಹಾಕಬಹುದು; ಆದರೆ ಮಹಾದೇವನ ಲಿಂಗವಿರುವ ಬಾಣಲಿಂಗಕ್ಕೆ ಶಂಖೋದಕದಿಂದ ಅಭಿಷೇಕ ಮಾಡಬಾರದು. ಶಾಸ್ತ್ರ: ಶಿವಲಿಂಗದಲ್ಲಿ ಪಾಣಿಪೀಠದ ರೂಪದಲ್ಲಿ ಸ್ತ್ರೀತತ್ತ್ವವು ಇರುವುದರಿಂದ ಸ್ತ್ರೀತತ್ತ್ವವಿರುವ ಶಂಖದಲ್ಲಿನ ನೀರನ್ನು ಮತ್ತೊಮ್ಮೆ ಹಾಕುವ ಅವಶ್ಯಕತೆಯಿರುವುದಿಲ್ಲ. ಬಾಣಲಿಂಗದ ಜೊತೆಗೆ ಪಾಣಿಪೀಠವು ಇಲ್ಲದಿರುವುದರಿಂದ ಅದಕ್ಕೆ ಶಂಖದ ನೀರಿನಿಂದ ಅಭಿಷೇಕವನ್ನು ಮಾಡುತ್ತಾರೆ. ೨. ‘ದೇವಸ್ಥಾನದಲ್ಲಿ ಮಹಾದೇವನ ಪೂಜೆಯನ್ನು ಮಾಡುವಾಗ ಶಂಖಪೂಜೆಯನ್ನು … Read more