ಜ್ಞಾನಶಕ್ತಿ ಪ್ರಸಾರ ಅಭಿಯಾನ

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ತಮ್ಮ ಅಲೌಕಿಕ ಜ್ಞಾನದಿಂದ ಅಖಿಲ ಮಾನವ ಕುಲಕೋಟಿಯ ಉದ್ಧಾರಕ್ಕಾಗಿ ಆಧ್ಯಾತ್ಮ ಶಾಸ್ತ್ರ, ಆಚಾರ ಧರ್ಮ, ಆಯುರ್ವೇದ, ರಾಷ್ಟ್ರ ಮತ್ತು ಧರ್ಮ ಇತ್ಯಾದಿ ವಿಷಯಗಳ ಮೇಲೆ ಜುಲೈ 2023 ರ ತನಕ ಕನ್ನಡ, ಮರಾಠಿ, ತಮಿಳು, ತೆಲುಗು ಸೇರಿದಂತೆ 11 ಭಾರತೀಯ ಮತ್ತು 6 ವಿದೇಶಿ ಭಾಷೆಗಳಲ್ಲಿ ಒಟ್ಟು 362 ಗ್ರಂಥಗಳನ್ನು ರಚಿಸಿದ್ದಾರೆ. ಈ ಅಮೂಲ್ಯ ಜ್ಞಾನಶಕ್ತಿಯನ್ನು ದೇಶದಾದ್ಯಂತ ಪ್ರಸಾರ ಮಾಡಲು ಆಗಸ್ಟ್ 20 ರಿಂದ ಅಕ್ಟೋಬರ್ 20, 2023 ರವೆರೆಗೆ ಸನಾತನ ಸಂಸ್ಥೆಯ ವತಿಯಿಂದ ಭಾರತದಾದ್ಯಂತ ಹಮ್ಮಿಕೊಳ್ಳಲಾದ ಜ್ಞಾನಶಕ್ತಿ ಪ್ರಸಾರ ಅಭಿಯಾನದ ನಿಮಿತ್ತ…

ಸನಾತನದ ಗ್ರಂಥಗಳೆಂದರೆ ಈಶ್ವರೀ ಚೈತನ್ಯ, ಹಾಗೆಯೇ ಆನಂದ ಮತ್ತು ಶಾಂತಿಯ ಅನುಭೂತಿಯನ್ನು ನೀಡುವ ಸಾಹಿತ್ಯ!

ಸನಾತನದ ಗ್ರಂಥಗಳಲ್ಲಿ ದಿವ್ಯ ಜ್ಞಾನವನ್ನು ಸಮಾಜದವರೆಗೆ ತಲುಪಿಸಲು ಸನಾತನದ ವತಿಯಿಂದ ಭಾರತದಾದ್ಯಂತ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿದೆ. ಸನಾತನದ ಗ್ರಂಥಗಳು ಸಮಾಜದ ಪ್ರತಿಯೊಬ್ಬ ಜಿಜ್ಞಾಸು, ಮುಮುಕ್ಷು ಮುಂತಾದ ಜೀವಗಳವರೆಗೆ ತಲುಪಿ ಅವರಿಗೂ ಈ ಜ್ಞಾನಶಕ್ತಿಯ ಲಾಭವಾಗಬೇಕೆಂಬುದೇ ಈ ಅಭಿಯಾನದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಸನಾತನದ ಗ್ರಂಥಗಳ ವೈಶಿಷ್ಟ್ಯಗಳನ್ನು ಹೇಳುವ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

೧. ಅನುಭವಸಿದ್ಧ ಜ್ಞಾನದಿಂದ ಸಾಕಾರಗೊಳ್ಳುವ ಅಮೂಲ್ಯ ವಿಚಾರಸಂಪತ್ತು !

‘ಅನುಭವಸಿದ್ಧ ವಾಙ್ಮಯದಿಂದ ಸಂಸ್ಕೃತಿಯು ಉಳಿಯುತ್ತದೆ’ ! ಈ ಅನುಭವದ ನುಡಿಗಳಿರುವ ವಾಙ್ಮಯವು ಮುಂದಿನ ಎಷ್ಟೋ ಪೀಳಿಗೆಗಳಿಗೆ ತಾರಕವೆಂದು ಸಿದ್ಧವಾಗುತ್ತದೆ. ಅನುಭವಸಿದ್ಧ ಸಾಹಿತ್ಯ-ಸಂಸ್ಕೃತಿಯನ್ನು ಯಾರು ಸಂರಕ್ಷಿಸಿದರೋ, ಅವರ ಹೆಸರುಗಳು ಅಜರಾಮರವಾದವು ಮತ್ತು ಅವರು ದೀಪಸ್ತಂಭವಾಗಿ ಈ ಜಗತ್ತಿನಲ್ಲಿ ಮಾರ್ಗದರ್ಶಕರೆನಿಸಿಕೊಂಡರು. ಆದಿಶಂಕರಾಚಾರ್ಯರು, ಸಂತ ಏಕನಾಥ ಮಹಾರಾಜರು, ಸಮರ್ಥ ರಾಮದಾಸ ಸ್ವಾಮಿಗಳು ಮುಂತಾದವರ ಚರಿತ್ರೆಗಳು ಮತ್ತು ವಾಙ್ಮಯಗಳಲ್ಲಿ ಅನುಭವವು ತುಂಬಿ ತುಳುಕುತ್ತಿದೆ. ಈ ವಿಭೂತಿಗಳಂತೆ ಪರಾತ್ಪರ ಗುರು ಡಾಕ್ಟರರ ಚರಿತ್ರೆ ಮತ್ತು ಅವರು ಬರೆದ ಗ್ರಂಥಗಳು ಮಾರ್ಗದರ್ಶಕವಾಗಿವೆ; ಏಕೆಂದರೆ ಸಂತರು ವಿವಿಧ ಪ್ರಸಂಗಗಳಲ್ಲಿ ಕಲಿಸಿದ ಅಧ್ಯಾತ್ಮ, ಅಧ್ಯಾತ್ಮವನ್ನು ಜೀವಿಸುವಾಗ ತಮಗೆ ಬಂದ ಅನುಭವ, ಆ ಅನುಭವಗಳ ಬಗ್ಗೆ ಮಾಡಿದ ವಿಶ್ಲೇಷಣೆ, ಪ್ರಯೋಗ ಶೀಲತೆಯಿಂದ ಸಂಪಾದಿಸಿದ ಜ್ಞಾನ ಇತ್ಯಾದಿಗಳಿಂದ ಅವು ಸಮೃದ್ಧವಾಗಿವೆ. ಅಧ್ಯಾತ್ಮವು ಅನುಭೂತಿಯ ಶಾಸ್ತ್ರವಾಗಿದ್ದರಿಂದ ಅನೇಕ ಬಾರಿ ಅಧ್ಯಾತ್ಮದ ನಾವೀನ್ಯಪೂರ್ಣ ಅಂಶಗಳನ್ನು ದೇವರು ಅನುಭೂತಿ ನೀಡಿ ಕಲಿಸುತ್ತಾನೆ. ಗ್ರಂಥಗಳಲ್ಲಿ ಈ ಅಂಶಗಳೂ ಇವೆ.

೨. ಸರ್ವಾಂಗಸ್ಪರ್ಶಿ ಗ್ರಂಥಸಂಪತ್ತು

ಸನಾತನದ ಗ್ರಂಥಸಂಪತ್ತು ಸರ್ವಾಂಗಸ್ಪರ್ಶಿಯಾಗಿದೆ. ಕರ್ಮಕಾಂಡಗಳ ಬಗ್ಗೆ ಶ್ರದ್ಧೆ ಇರುವವರಿಗೆ ಧರ್ಮಶಾಸ್ತ್ರವನ್ನು ಮಂಡಿಸುವ ಗ್ರಂಥಗಳು ಉಪಯುಕ್ತವೆಂದು ಸಿದ್ಧವಾಗುತ್ತವೆ. ಉಪಾಸನಾಕಾಂಡದ ಸಾಧಕರಿಗೆ ಭಕ್ತಿಯನ್ನು ಹೆಚ್ಚಿಸುವ ಗ್ರಂಥಗಳು ಮಾರ್ಗದರ್ಶಕವೆಂದು ಸಿದ್ಧವಾಗುತ್ತವೆ. ಕಲೆಯ ಬಗ್ಗೆ ಆಸಕ್ತಿ ಇದ್ದವರಿಗೆ ‘ಸಾತ್ತ್ವಿಕ ಕಲೆಯನ್ನು ಹೇಗೆ ಸಂರಕ್ಷಿಸಬೇಕು?’, ಈ ಬಗ್ಗೆ ನಾವೀನ್ಯಪೂರ್ಣ ದೃಷ್ಟಿಕೋನವು ಕಲಿಯಲು ಸಿಗುತ್ತದೆ.

ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಇವುಗಳಿಗೆ ಸಂಬಂಧಿಸಿದ ಗ್ರಂಥಗಳು ಹಿಂದೂ ಸಮಾಜಕ್ಕೆ ಎಲ್ಲ ದೃಷ್ಟಿಯಿಂದಲೂ ಆದರ್ಶವಾಗಿರುವ ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಮಾರ್ಗದರ್ಶನ ಮಾಡುತ್ತವೆ. ಬಾಲಸಂಸ್ಕಾರ, ಮಕ್ಕಳ ವಿಕಾಸ, ಆಯುರ್ವೇದ ಇವು ಜೀವನದ ಮತ್ತು ಸಾಧನೆಯ ಪ್ರತಿಯೊಂದು ಅಂಗದ ಬಗ್ಗೆ ವ್ಯಾಪಕ ಮತ್ತು ಆಳವಾದ ಮಾರ್ಗದರ್ಶನವನ್ನು ಮಾಡುವ ಗ್ರಂಥಗಳಾಗಿವೆ.

೩. ಅಧ್ಯಾತ್ಮದಲ್ಲಿನ ಪ್ರತಿಯೊಂದು ವಿಷಯದ ಬಗ್ಗೆ ‘ಏಕೆ ಮತ್ತು ಹೇಗೆ’ ಇವುಗಳಿಗೆ ಶಾಸ್ತ್ರೀಯ ಉತ್ತರಗಳು !

ಸದ್ಯದ ವಿಜ್ಞಾನಯುಗದ ಪೀಳಿಗೆಗೆ ಅಧ್ಯಾತ್ಮದಲ್ಲಿನ ಪ್ರತಿಯೊಂದು ವಿಷಯದ ಬಗ್ಗೆ ‘ಏಕೆ ಮತ್ತು ಹೇಗೆ’ ಎಂಬುದನ್ನು ತಿಳಿದುಕೊಳ್ಳುವ ಜಿಜ್ಞಾಸೆ ಇರುತ್ತದೆ. ಅವರಿಗೆ ಅಧ್ಯಾತ್ಮದಲ್ಲಿನ ಯಾವುದಾದರೊಂದು ವಿಷಯದ ಹಿಂದಿನ ಶಾಸ್ತ್ರವನ್ನು ತಿಳಿಸಿ ಹೇಳಿದರೆ, ಅವರಿಗೆ ಅಧ್ಯಾತ್ಮದ ಮೇಲಿನ ವಿಶ್ವಾಸವು ಬೇಗನೆ ಹೆಚ್ಚಾಗುತ್ತದೆ ಮತ್ತು ಅವರು ಸಾಧನೆಯ ಕಡೆಗೆ ಹೊರಳುತ್ತಾರೆ. ಇದಕ್ಕಾಗಿ ಪರಾತ್ಪರ ಗುರು ಡಾಕ್ಟರರು ಮೊದಲಿನಿಂದಲೇ ಪ್ರತಿಯೊಂದು ಗ್ರಂಥದಲ್ಲಿ ಅಧ್ಯಾತ್ಮಶಾಸ್ತ್ರವನ್ನು ತಿಳಿಸಿಕೊಡಲು ಒತ್ತು ಕೊಟ್ಟಿದ್ದಾರೆ. ಇದರ ಒಂದು ಉದಾಹರಣೆಯನ್ನು ಮುಂದೆ ಕೊಡಲಾಗಿದೆ.

ಶಿವಲಿಂಗದ ಮೇಲೆ ಬಿಲ್ವಪತ್ರೆಯನ್ನು ಅರ್ಪಿಸುವ ಎರಡು ಪದ್ಧತಿಗಳಿವೆ. ಮೊದಲ ಪದ್ಧತಿ ಎಂದರೆ ಎಲೆಗಳ ತುದಿಯನ್ನು ನಮ್ಮ ಕಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸುವುದು ಮತ್ತು ಇನ್ನೊಂದು ಪದ್ಧತಿ ಎಂದರೆ ಎಲೆಗಳ ತೊಟ್ಟನ್ನು ನಮ್ಮ ಕಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸುವುದು. ‘ಎರಡು ಬೇರೆ ಬೇರೆ ಪದ್ಧತಿಗಳೇಕೆ ?’ ಎಂಬ ಪ್ರಶ್ನೆಯು ಜಿಜ್ಞಾಸುಗಳ ಮನಸ್ಸಿನಲ್ಲಿ ಬರಬಹುದು. ಇದರ ಹಿಂದಿನ ಶಾಸ್ತ್ರ ಈ ರೀತಿ ಇದೆ – ಬಿಲ್ವಪತ್ರೆಯ ಎಲೆಯು ತಾರಕ ಶಿವತತ್ತ್ವದ ವಾಹಕವಾಗಿದೆ ಮತ್ತು ಬಿಲ್ವಪತ್ರೆಯ ತೊಟ್ಟು ಮಾರಕ ಶಿವತತ್ತ್ವದ ವಾಹಕವಾಗಿದೆ. ಸರ್ವಸಾಮಾನ್ಯ ಉಪಾಸಕರ ಪ್ರಕೃತಿ ತಾರಕ ಸ್ವರೂಪದ್ದಾಗಿರುವುದರಿಂದ ಶಿವನ ತಾರಕ ಉಪಾಸನೆಯೇ ಅವರ ಪ್ರಕೃತಿಗೆ ಹೊಂದುವ ಮತ್ತು ಅವರ ಆಧ್ಯಾತ್ಮಿಕ ಉನ್ನತಿಗೆ ಪೂರಕವೆಂದು ಸಿದ್ಧವಾಗುತ್ತದೆ. ಇಂತಹವರು ಶಿವನ ತಾರಕ ತತ್ತ್ವದ ಲಾಭ ಪಡೆಯಲು ಎಲೆಗಳ ತೊಟ್ಟನ್ನು ಲಿಂಗದ ಕಡೆಗೆ ಮತ್ತು ತುದಿಯನ್ನು ತಮ್ಮ ಕಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸಬೇಕು. ಆದರೆ ಶಾಕ್ತಪಂಥದ (ಶಕ್ತಿಯ ಉಪಾಸನೆಯನ್ನು ಮಾಡುವವರು) ಶಿವನ ಮಾರಕ ರೂಪದ ಉಪಾಸನೆಯನ್ನು ಮಾಡುತ್ತಾರೆ. ಇಂತಹ ಉಪಾಸಕರು ಶಿವನ ಮಾರಕ ತತ್ತ್ವದ ಲಾಭವಾಗಲು ಬಿಲ್ವಪತ್ರೆಯ ಎಲೆಗಳ ತುದಿಯನ್ನು ದೇವರ ಕಡೆಗೆ ಮತ್ತು ತೊಟ್ಟನ್ನು ತಮ್ಮ ಕಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸಬೇಕು.

– (ಪೂ.) ಸಂದೀಪ ಆಳಶಿ, ಸನಾತನದ ಗ್ರಂಥಗಳ ಸಂಕಲನಕಾರರು (೨೩.೪.೨೦೧೭)

ಸೂಚನೆ : ಚಿತ್ರಗಳ ಮೇಲೆ ಕ್ಲಿಕ್ ಮಾಡಿ, sanatanshop.com ಅಲ್ಲಿ ಆಯಾ ಗ್ರಂಥಗಳ ಪುಟಕ್ಕೆ ಹೋಗಿ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.

ಸನಾತನದ ಗ್ರಂಥಗಳೆಂದರೆ ಆಧುನಿಕ ಕಾಲದ ‘ಭಗವದ್ಗೀತೆ !

ಪೂ. ಸಂದೀಪ ಆಳಶಿ

‘ಶ್ರೀಮದ್ಭಗವದ್ಗೀತೆ’ಯ ವೈಶಿಷ್ಟ್ಯವೇನು? ‘ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ!’ ಅಂದರೆ ‘ಎಲ್ಲ ಪ್ರಕೃತಿಧರ್ಮ, ಷಡ್ರಿಪು ಮತ್ತು ಅಹಂನ ತ್ಯಾಗ ಮಾಡಿ ನನಗೊಬ್ಬನಿಗೇ ಶರಣಾಗು’ ಎಂದು ಉಪದೇಶವನ್ನು ಮಾಡುವ ಗುರು ಶ್ರೀಕೃಷ್ಣನು ಶಿಷ್ಯ ಅರ್ಜುನನಿಗೆ ಭಗವಂತನ ಪ್ರಾಪ್ತಿಯ ರಹಸ್ಯ ಮತ್ತು ಮಾರ್ಗವನ್ನು ತೋರಿಸುತ್ತಾನೆ. ಅದರೊಂದಿಗೆ ‘ಆಪ್ತಬಂಧುಗಳು, ಗುರುಜನರು, ಪಿತಾಮಹ ಮುಂತಾದವರು ಎದುರು ನಿಂತಿದ್ದರೂ, ಅವರು ಅಧರ್ಮದ ಪಕ್ಷದಲ್ಲಿರುವುದರಿಂದ ಅವರನ್ನು ವಧಿಸುವುದು ಧರ್ಮಪಾಲನೆಯೇ ಆಗಿದೆ’ ಎಂದು ‘ಉತ್ತಿಷ್ಠ ಕೌಂತೇಯ ಯುದ್ಧಾಯ ಕೃತನಿಶ್ಚಯಃ’ ಅಂದರೆ ‘ಎದ್ದೇಳು ಅರ್ಜುನಾ, ಧರ್ಮಯುದ್ಧಕ್ಕೆ ಸಿದ್ಧನಾಗು’ ಎಂದು ಸಹ ಸ್ಟಷ್ಟವಾಗಿ ಹೇಳುತ್ತಾನೆ. ಭಗವಂತನ ಈ ‘ಭಗವದ್ಗೀತೆ ಎಂದರೆ ಬ್ರಾಹ್ಮತೇಜ ಮತ್ತು ಕ್ಷಾತ್ರತೇಜದ ಆದರ್ಶ ಸಮನ್ವಯವೇ ಆಗಿದೆ.

ಸಮಾಜವು ಅಧ್ಯಾತ್ಮದ ಮಾರ್ಗದಲ್ಲಿ ನಡೆದರೆ, ಧರ್ಮಾಚರಣಿಯಾದರೆ, ನೈತಿಕತೆ, ಚಾರಿತ್ರ್ಯಶೀಲತೆ, ಬಂಧುಭಾವ, ಕರ್ತವ್ಯದಕ್ಷತೆ ಮುಂತಾದ ಗುಣಗಳು ಅವರಲ್ಲಿ ವಿಕಸನಗೊಂಡು ಸಾಮಾಜಿಕ ಸ್ಥೈರ್ಯ ಲಭಿಸುತ್ತದೆ. ಅದರೊಂದಿಗೆ ಅನ್ಯಾಯ, ಅಧರ್ಮ ಮುಂತಾದವುಗಳ ವಿರುದ್ಧ ಹೋರಾಡಿದರೆ ಮಾತ್ರ ರಾಷ್ಟ್ರೀಯ ಜೀವನದಲ್ಲಿ ಭ್ರಷ್ಟಾಚಾರ, ಗೂಂಡಾಗಿರಿ, ಸಾಮಾಜಿಕ ವೈಷಮ್ಯ ಇವುಗಳಂತಹ ದುರ್ಗುಣಗಳ ಮೇಲೆ ಕಡಿವಾಣ ಬಿದ್ದು ರಾಷ್ಟ್ರವು ಸುರಕ್ಷಿತ ಮತ್ತು ಸುವ್ಯವಸ್ಥಿತವಾಗಿ ಉಳಿಯುತ್ತದೆ. ಇದಕ್ಕಾಗಿಯೇ ಬ್ರಾಹ್ಮತೇಜ ಮತ್ತು ಕ್ಷಾತ್ರತೇಜದ ಸುಯೋಗ್ಯ ಸಮನ್ವಯವಿರುವುದು ಆವಶ್ಯಕವಾಗಿರುತ್ತದೆ. ‘ಭಗವದ್ಗೀತೆ’ ಈ ಗ್ರಂಥದಂತೆ ಸನಾತನದ ಗ್ರಂಥಗಳು ಆಧುನಿಕ ಕಾಲಕ್ಕೆ ಆವಶ್ಯಕವಾಗಿರುವ ಬ್ರಾಹ್ಮತೇಜ ಮತ್ತು ಕ್ಷಾತ್ರತೇಜದ ಶಿಕ್ಷಣವನ್ನು ನೀಡುತ್ತಿವೆ.

– (ಪೂ.) ಸಂದೀಪ ಆಳಶಿ, ಸನಾತನದ ಗ್ರಂಥಗಳ ಸಂಕಲನಕಾರರು (೨೩.೪.೨೦೧೭)

ಸನಾತನದ ಗ್ರಂಥಗಳ ಮಹತ್ವ!

ಪೂ. ರಮಾನಂದ ಗೌಡ
ಪೂ. ರಮಾನಂದ ಗೌಡ

೧. ‘ಶ್ರೀಮದ್ಭಗವದ್ಗೀತೆ, ಮಹಾಭಾರತ ಮುಂತಾದ ಧರ್ಮಗ್ರಂಥಗಳು ಈಶ್ವರೀವಾಣಿಯಿಂದ ಸಾಕಾರಗೊಂಡಿವೆ; ಆದುದರಿಂದ ಅವುಗಳಲ್ಲಿ ಚೈತನ್ಯವಿದೆ, ಹಾಗೆಯೇ ಸನಾತನದ ಗ್ರಂಥಗಳು ಸಹ ಈಶ್ವರನ ಸಂಕಲ್ಪದಿಂದ ಸಾಕಾರಗೊಂಡಿವೆ. ವೇದಕ್ಕೆ ಸಮಾನವಾಗಿರುವ ಈ ಗ್ರಂಥಗಳು ಸ್ವಯಂಭೂ ಚೈತನ್ಯದ ಸ್ರೋತವಾಗಿದ್ದು ಅವುಗಳ ಅಧ್ಯಯನವನ್ನು ಮಾಡುವವರು ಗ್ರಂಥಗಳಲ್ಲಿ ಹೇಳಿದ ಮಾರ್ಗದರ್ಶನವನ್ನು ಕೃತಿಯಲ್ಲಿ ತಂದರೆ, ಅವರು ಸಾಧಕ ಮತ್ತು ಶಿಷ್ಯ ಮುಂದೆ ಸಂತರೂ ಆಗಬಹುದು.

೨. ಈ ಗ್ರಂಥಗಳಿಂದಾಗಿ ಮನೆಯಲ್ಲಿ ಸಾತ್ತ್ವಿಕ ಸ್ಪಂದನಗಳು ನಿರ್ಮಾಣವಾಗಿ ವಾಸ್ತುಶುದ್ಧಿಯೂ ಆಗುತ್ತದೆ.

೩. ಈ ಗ್ರಂಥಗಳ ಅಧ್ಯಯನದಿಂದ ಅಂತರ್ಮನದಲ್ಲಿ ಸಾಧನೆಯ ಸಂಸ್ಕಾರವಾಗುತ್ತದೆ. ಇವುಗಳ ಅಧ್ಯಯನ ಮಾಡಿ ಅದನ್ನು ಕೃತಿಯಲ್ಲಿ ತಂದರೆ, ಅದು ಸಾಧನೆಯೇ ಆಗುತ್ತದೆ. ಇದರಿಂದ ಸಾಧಕನ ಉದ್ಧಾರವಾಗಲಿದೆ.

೪. ಶಾಲೆಯಲ್ಲಿರುವಾಗ ‘ಗ್ರಂಥಗಳೇ ಗುರುಗಳಾಗಿದ್ದಾರೆ’ ಎಂದು ಕಲಿಯುತ್ತಿದ್ದೆವು. ಆಗ ನನಗೆ ಇದರ ಅರ್ಥವು ತಿಳಿದಿರಲಿಲ್ಲ. ಸನಾತನದ ಗ್ರಂಥಗಳನ್ನು ಓದಿದಾಗ ಅದರಲ್ಲಿ ಜ್ಞಾನವು ದೊರಕಿತು ಮತ್ತು ‘ಗ್ರಂಥಗಳೇ ಗುರುಗಳಾಗಿದ್ದಾರೆ’, ಎಂದು ತೀವ್ರವಾಗಿ ಅರಿವಾಯಿತು.

೫. ಸನಾತನದ ಗ್ರಂಥಗಳು ಜ್ಞಾನಭಂಡಾರವಾಗಿವೆ, ಜ್ಞಾನದ ಸಾಗರವಾಗಿವೆ; ಆದುದರಿಂದ ನಮ್ಮ ಗುರುಗಳಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಜ್ಞಾನಗುರುಗಳಾಗಿದ್ದಾರೆ. ‘ಜ್ಞಾನವನ್ನು ಕೃತಿಯಲ್ಲಿ ತಂದರೆ, ಆಚರಣೆಯಲ್ಲಿ ತಂದರೆ ಮಾತ್ರ ನಮಗೆ ಮೋಕ್ಷಪ್ರಾಪ್ತಿಯಾಗುತ್ತದೆ’, ಎಂದು ನಮಗೆ ಪ.ಪೂ. ಗುರುದೇವರೇ ಕಲಿಸಿದ್ದಾರೆ. ಅಂದರೆ ಅವರೇ ನಮ್ಮೆಲ್ಲ ಸಾಧಕರನ್ನು ಮೋಕ್ಷದವರೆಗೆ ಕರೆದೊಯ್ಯುತ್ತಿದ್ದಾರೆ. ಅವರೇ ಮೋಕ್ಷಗುರುಗಳಾಗಿದ್ದಾರೆ.
– ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ, ಕರ್ನಾಟಕ. (೨.೯.೨೦೨೧)

ಸನಾತನದ ಗ್ರಂಥಗಳ ಬಗ್ಗೆ ವಾಚಕರ ಅಭಿಪ್ರಾಯ !

ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ವಿನಂತಿ !

‘ಸನಾತನದ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಈಶ್ವರನ ಕೃಪೆಯನ್ನು ಸಂಪಾದಿಸಿ!
ದೇಶದಾದ್ಯಂತ ‘ಸನಾತನದ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ಮಾಧ್ಯಮದಿಂದ ಸನಾತನದ ಗ್ರಂಥಗಳನ್ನು ಹೆಚ್ಚೆಚ್ಚು ಜಿಜ್ಞಾಸುಗಳವರೆಗೆ ತಲುಪಿಸಲು ಸಾಧಕರು ಪ್ರಯತ್ನಿಸುತ್ತಿದ್ದಾರೆ. ಧರ್ಮಪ್ರಸಾರದ ಕಾರ್ಯದಲ್ಲಿ ಪಾಲ್ಗೊಳ್ಳುವುದು ಎಂದರೆ ಈಶ್ವರೀ ಕೃಪೆಯನ್ನು ಸಂಪಾದಿಸುವ ಮೆಟ್ಟಿಲುಗಳು ! ಆದ್ದರಿಂದಲೇ ಈ ಅಭಿಯಾನದಲ್ಲಿ ತಾವು ಸಹ ಯಥಾಶಕ್ತಿ ಪಾಲ್ಗೊಳ್ಳಿರಿ !
ಇದಕ್ಕಾಗಿ ತಾವು ಸಹ ಗ್ರಂಥಗಳನ್ನು ಖರೀದಿಸುವುದರೊಂದಿಗೆ ಸ್ನೇಹಿತರು-ಸಂಬಂಧಿಕರು ಮತ್ತು ಇತರ ಪರಿಚಿತರಿಗೂ ಗ್ರಂಥಗಳ ಖರೀದಿ ಮಾಡುವುದರೊಂದಿಗೆ ಅವುಗಳ ಪ್ರಸಾರ ಮಾಡಲು ಪ್ರೇರೇಪಿಸಿ !
ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಸಹಾಯ ಬೇಕಿದ್ದರೆ ತಮ್ಮ ಪರಿಚಯದ ಸಾಧಕರನ್ನು ಸಂಪರ್ಕಿಸಿ !

ಸಂಪರ್ಕ : 9379771771

2 thoughts on “ಜ್ಞಾನಶಕ್ತಿ ಪ್ರಸಾರ ಅಭಿಯಾನ”

Leave a Comment