ದೀಪಾವಳಿ

ದೀಪಾವಳಿ ಎಂದರೆ ದೀಪಗಳ ಸಾಲು, ಹೊಸ ಬಟ್ಟೆಬರೆ, ಬಗೆ-ಬಗೆಯ ತಿಂಡಿ-ತಿನಿಸು, ರಂಗೋಲಿಗಳು ಇವೇ ಕಣ್ಮುಂದೆ ಕಾಣಿಸುತ್ತವೆ. ದೀಪಾವಳಿಯಂತಹ ಹಬ್ಬವನ್ನು ಆಚರಿಸುವಾಗ, ಶಾಸ್ತ್ರವನ್ನರಿತು ಆಚರಿಸಿದರೆ, ಆನಂದದೊಂದಿಗೆ ಚೈತನ್ಯದ ಅನುಭೂತಿಯನ್ನೂ ಪಡೆಯಬಹುದು. ಶ್ರೀ ಲಕ್ಷ್ಮೀದೇವಿ, ಶ್ರೀಕೃಷ್ಣ, ಶ್ರೀರಾಮ, ಧನ್ವಂತರಿ ದೇವತೆ, ಯಮದೇವತೆ ಮುಂತಾದ ದೇವತೆಗಳನ್ನು ಸ್ಮರಿಸುವ ಈ ದೀಪೋತ್ಸವವನ್ನು ಶಾಸ್ತ್ರಕ್ಕನುಸಾರ ಆಚರಿಸೋಣ ಹಾಗೂ ಆನಂದವನ್ನು ದ್ವಿಗುಣಗೊಳಿಸೋಣ…

ದೀಪಾವಳಿ – ವಿವಿಧ ದಿನಗಳ ಮಹತ್ವ

ಧನತ್ರಯೋದಶಿ (29.10.2024)

ಸಾಧನೆಗಾಗಿ ಅನುಕೂಲ ಪರಿಸ್ಥಿತಿ ಮತ್ತು ಐಶ್ವರ್ಯವನ್ನು ಪಡೆಯಲು ಈ ದಿನ ಧನಲಕ್ಷ್ಮೀಯನ್ನು ಪೂಜಿಸೋಣ. ವರ್ಷವಿಡೀ ಯೋಗ್ಯ ಮಾರ್ಗದಿಂದ ಸಂಪಾದಿಸಿ ಬಾಕಿ ಉಳಿದಿರುವ ಧನದಿಂದ 1/6 ಪಾಲನ್ನು ಧರ್ಮಕಾರ್ಯಕ್ಕೆ ಅರ್ಪಿಸುವ ಉತ್ತಮ ದಿನವಿದು.

ಸನಾತನದ ಅಧ್ಯಾತ್ಮಪ್ರಸಾರದ ಕಾರ್ಯದಲ್ಲಿ ಕೈಜೋಡಿಸಿ. ಅರ್ಪಣೆ ನೀಡಲು ಇಲ್ಲಿ ಕ್ಲಿಕ್ ಮಾಡಿ

ಧನ್ವಂತರಿ ಜಯಂತಿ (29.10.2024)

ಆರೋಗ್ಯವನ್ನು ಪ್ರದಾನಿಸುವ ಧನ್ವಂತರಿ ದೇವತೆಗೆ ಪೂಜೆ ಸಲ್ಲಿಸಿ ಅಮೃತದಿಂದ ಉತ್ಪನ್ನವಾದ ಕಹಿಬೇವಿನ ಪ್ರಸಾದವನ್ನು ಸೇವಿಸೋಣ.

ನರಕ ಚತುರ್ದಶಿ (ಆಶ್ವಯುಜ ಕೃಷ್ಣ ಚತುರ್ದಶಿ) (31.10.2024)

ಅಭ್ಯಂಗಸ್ನಾನವನ್ನು ಮಾಡಿ ‘ನನ್ನೊಳಗಿರುವ ನರಕಾಸುರ ರೂಪಿ ಪಾಪವಾಸನೆ ಮತ್ತು ಅಹಂ ಅನ್ನು ನಾಶ ಮಾಡಿ ಈಶ್ವರಪ್ರಾಪ್ತಿಯ ಹಾದಿಯನ್ನು ಸುಲಭಗೊಳಿಸು’ ಎಂದು ಶ್ರೀಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸೋಣ.

ಲಕ್ಷ್ಮೀಪೂಜೆ (ಆಶ್ವಯುಜ ಅಮಾವಾಸ್ಯೆ) (01.11.2024)

ಶ್ರೀಲಕ್ಷ್ಮೀ ತತ್ತ್ವವನ್ನು ಆದಷ್ಟು ಹೆಚ್ಚು ಗ್ರಹಿಸಿ ಅದರ ಲಾಭ ಪಡೆಯಲು, ಗಳಿಸಿದ ಉತ್ಪನ್ನದ ಸದ್ಬಳಕೆಯಾಗುವಂತಾಗಲು ಭಾವಪೂರ್ಣವಾಗಿ ಶ್ರೀಲಕ್ಷ್ಮೀ ದೇವಿ ಮತ್ತು ಕುಬೇರರಿಗೆ ಪೂಜೆ ಸಲ್ಲಿಸೋಣ.

ಬಲಿಪಾಡ್ಯ (ದೀಪಾವಳಿ ಪಾಡ್ಯ) (02.11.2024)

ರಾಕ್ಷಸಕುಲದಲ್ಲಿ ಜನಿಸಿಯೂ ಶ್ರೀವಿಷ್ಣುವಿನ ಭಕ್ತನಾಗಿದ್ದ ಬಲಿರಾಜನನ್ನು ಸ್ಮರಿಸೋಣ.

ಸಹೋದರ ಬಿದಿಗೆ (ಯಮದ್ವಿತೀಯಾ) (03.11.2024)

ಸಹೋದರಿಯು ಸಹೋದರನಿಗೆ ಭಾವಪೂರ್ಣವಾಗಿ ಆರತಿಯನ್ನು ಬೆಳಗಿ, ಸಹೋದರನ ಆಯುಷ್ಯ ವೃದ್ಧಿಯಾಗುವಂತೆ ಪ್ರಾರ್ಥಿಸಬೇಕು. ಧರ್ಮದ ದೇವತೆಯಾಗಿರುವ ಯಮಧರ್ಮರಾಯನಿಗೆ ‘ಅಪಮೃತ್ಯು ಬಾರದಿರಲಿ’ ಎಂದು ಪ್ರಾರ್ಥನೆ ಸಲ್ಲಿಸೋಣ.

ಇವುಗಳ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಕೆಳಗೆ ನೀಡಿರುವ ಲೇಖನಗಳನ್ನು ಅವಶ್ಯ ಓದಿ…

ಲಕ್ಷ್ಮೀಪೂಜೆ

ಲಕ್ಷ್ಮೀಪೂಜೆಯ ದಿನದಂದು ಎಲ್ಲಾ ದೇವಸ್ಥಾನಗಳಲ್ಲಿ, ಅಂಗಡಿಗಳಲ್ಲಿ ಹಾಗೆಯೇ ಮನೆ-ಮನೆಗಳಲ್ಲಿ ಲಕ್ಷ್ಮೀಪೂಜೆಯನ್ನು ಮಾಡಲಾಗುತ್ತದೆ. ಈ ಪೂಜೆಯ ಬಗ್ಗೆ ಇಲ್ಲಿ ಸುಲಭವಾದ ಭಾಷೆಯಲ್ಲಿ ಶಾಸ್ತ್ರೋಕ್ತವಾದ ಮಾಹಿತಿಯನ್ನು ನೀಡಲಾಗಿದೆ. ಲಕ್ಷ್ಮೀ ಪೂಜೆಯನ್ನು ಮಾಡಿ ನೀವು ಕೂಡ ದೇವಿಯ ಅನುಗ್ರಹವನ್ನು ಪಡೆಯಿರಿ.

ಪೂಜೆಯ ವಿಧಿಯನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ !

ಶ್ರೀ ಮಹಾಲಕ್ಷ್ಮೀ ದೇವಿಯ ನಾಮಜಪ

ಲಕ್ಷ್ಮೀಪೂಜೆಯ ದಿನದಂದು ಶ್ರೀ ಮಹಾಲಕ್ಷ್ಮೀ ದೇವಿಯ ನಾಮಜಪವನ್ನು ಆದಷ್ಟು ಹೆಚ್ಚು ಮಾಡಿ ಶ್ರೀ ದೇವಿಯ ಕೃಪೆಯನ್ನು ಪಡೆಯಿರಿ.

ಲೇಖನಗಳು

ದೀಪಾವಳಿ
ದೀಪಾವಳಿಯ ಸಮಯದಲ್ಲಿ ಬಿಡಿಸುವಂತಹ ಸಾತ್ತ್ವಿಕ ರಂಗೋಲಿಗಳು
ಎಲ್ಲ ವಾಚಕರಿಗೆ, ಹಿತಚಿಂತಕರಿಗೆ ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !
ದೀಪಜ್ಯೋತಿ ನಮೋಸ್ತುತೆ !
ಗೋವತ್ಸ ದ್ವಾದಶಿ
ಆಶ್ವಯುಜ ಕೃಷ್ಣ ತ್ರಯೋದಶಿ – ಧನತ್ರಯೋದಶಿ, ಧನ್ವಂತರಿ ಜಯಂತಿ, ಯಮದೀಪದಾನ
ಅಭ್ಯಂಗಸ್ನಾನ (ಮಂಗಲ ಸ್ನಾನ)
ನರಕ ಚತುರ್ದಶಿ (ಆಶ್ವಯುಜ ಕೃಷ್ಣ ಚತುರ್ದಶಿ)
ಶ್ರೀ ಲಕ್ಷ್ಮೀ ಪೂಜಾವಿಧಿ (ಆಶ್ವಯುಜ ಅಮಾವಾಸ್ಯೆ)
ಬಲಿಪಾಡ್ಯ (ದೀಪಾವಳಿ ಪಾಡ್ಯ)
ಸಹೋದರ ಬಿದಿಗೆ (ಯಮದ್ವಿತೀಯಾ)
ಶ್ರೀ ಲಕ್ಷ್ಮೀದೇವಿಗೆ ಮಾಡುವ ಪ್ರಾರ್ಥನೆ
ತುಳಸಿ ವಿವಾಹ
ನಿಜವಾದ ದೀಪಾವಳಿಯನ್ನು ಹಿಂದೂ ರಾಷ್ಟ್ರದಲ್ಲಿಯೇ ಆಚರಿಸಬಹುದು ! – ಪ.ಪೂ.ಪಾಂಡೆ ಮಹಾರಾಜ
ದೀಪಾವಳಿಯ ಮಂಗಲ ಸಮಯದಲ್ಲಿ ನಿಮ್ಮಿಂದ ಏನಾದರೂ ಅಮಂಗಲ ಘಟಿಸುವುದಿಲ್ಲವಲ್ಲ, ಎಂಬುದರ ವಿಚಾರ ಮಾಡಿರಿ !
ಆಪತ್ಕಾಲದ ಸ್ಥಿತಿಯಲ್ಲಿ ದೀಪಾವಳಿಯನ್ನು ಹೇಗೆ ಆಚರಿಸಬೇಕು ?

ದೀಪಾವಳಿಗೆ ಸಂಬಂಧಿಸಿದ ಧ್ವನಿಚಿತ್ರಮುದ್ರಿಕೆಗಳು

ಸಂಬಂಧಿಸಿದ ಗ್ರಂಥಗಳು

ದೀಪಾವಳಿಯ ಸಮಯದಲ್ಲಿ ಮಾಡುವಂತಹ ಕೃತಿಗಳ, ಅಂದರೆ ಗೂಡುದೀಪ ಕಟ್ಟುವುದು, ಅಭ್ಯಂಗಸ್ನಾನ, ಬಳೆ-ಬಟ್ಟೆ ಖರೀದಿ, ರಂಗೋಲಿ-ಮೆಹೆಂದಿ ಬಿಡಿಸುವುದು, ಮುಂತಾದವುಗಳ ಹಿಂದಿರುವ ಶಾಸ್ತ್ರವನ್ನು ಇಲ್ಲಿ ನೀಡಿರುವ ಗ್ರಂಥಗಳಲ್ಲಿ ಸವಿಸ್ತಾರವಾಗಿ ನೀಡಲಾಗಿದೆ.

ಸೂಚನೆ : ಗ್ರಂಥಗಳನ್ನು ಖರೀದಿಸಲು ಮುಖಪುಟದ ಮೇಲೆ ಕ್ಲಿಕ್ ಮಾಡಿ, ಜಾಲತಾಣದಲ್ಲಿ ನೀಡಿರುವ ವಿ-ಅಂಚೆ ಅಥವಾ ಕ್ರಮಾಂಕವನ್ನು ಸಂಪರ್ಕಿಸಿ.

ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರಸಾತ್ತ್ವಿಕ ಮದರಂಗಿಗಳುಮದರಂಗಿಯ ಸಾತ್ತ್ವಿಕ ವಿನ್ಯಾಸಗಳ ವಿಧಗಳುಆಭರಣಗಳ ಮಹತ್ವಸ್ತ್ರೀ-ಪುರುಷರ ಆಭರಣಗಳುಕಂಠಾಭರಣದಿಂದ ಮೇಖಲೆಯವರೆಗಿನ ಆಭರಣಗಳುಬಟ್ಟೆಗಳು ಆಧ್ಯಾತ್ಮಿಕ ದೃಷ್ಟಿಯಿಂದ ಹೇಗಿರಬೇಕು ?ಪುರುಷರಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಉಪಯುಕ್ತ ಉಡುಪುಗಳುಸ್ತ್ರೀಯರಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಉಪಯುಕ್ತ ಉಡುಪುಗಳು

ಸಾತ್ತ್ವಿಕ ರಂಗೋಲಿಗಳುಸ್ತ್ರೀಯರು ಆಭರಣಗಳನ್ನು ಧರಿಸುವುದರ ಹಿಂದಿನ ಶಾಸ್ತ್ರ