ಯುಗಾದಿ ನಿಮಿತ್ತ ಸಂದೇಶ

Article also available in :

ಚೈತ್ರ ಪ್ರತಿಪದೆಯ ‘ಯುಗಾದಿ’ಯ ತಿಥಿಗೆ ನವವರ್ಷಾರಂಭ ಎಂಬ ರಾಜಮಾನ್ಯತೆಯು ಸಿಗುವುದಕ್ಕಾಗಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ !

ಪರಾತ್ಪರ ಗುರು ಡಾ. ಆಠವಲೆ

‘ಚೈತ್ರ ಪ್ರತಿಪದೆ’ಯು ಯುಗಾದಿಯ ತಿಥಿಯಾಗಿದೆ. ‘ಯುಗ’ ಮತ್ತು ‘ಆದಿ’ ಈ ಶಬ್ದಗಳ ಸಂಧಿಯಿಂದ ‘ಯುಗಾದಿ’ ಪದ ಬಂದಿದೆ. ಈ ದಿನದಂದು ಬ್ರಹ್ಮದೇವರು ಸೃಷ್ಟಿಯನ್ನು ನಿರ್ಮಿಸಿದರು. ಸೃಷ್ಟಿಯ ಪ್ರಾರಂಭದಿನ, ಅಂದರೆ ಕಾಲಗಣನೆಯ ಪ್ರಥಮದಿನವು ಚೈತ್ರ ಪ್ರತಿಪದೆ ಆಗಿದ್ದರೂ ಇಂದು ಭಾರತದಲ್ಲಿ ಎಲ್ಲೆಡೆ ಜನವರಿ ೧ ಹೊಸ ವರ್ಷಾರಂಭವೆಂದು ಆಚರಿಸಲ್ಪಡುತ್ತದೆ. ಇದು ಸ್ವತಂತ್ರ ಭಾರತದ ಸಾಂಸ್ಕೃತಿಕ ಪರಾಭವವಾಗಿದೆ. ಅನಾದಿಯಾದ ಯುಗಾದಿ ತಿಥಿಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಆ ಸಾಂಸ್ಕೃತಿಕ ಪರಾಭವದ ಇತಿಹಾಸವನ್ನು ಬದಲಾಯಿಸಲು ಚೈತ್ರ ಪ್ರತಿಪದೆ ಈ ‘ಯುಗಾದಿ’ಯ ತಿಥಿಗೆ ನವವರ್ಷಾರಂಭ ಎಂಬ ರಾಜಮಾನ್ಯತೆಯು ಸಿಗಬೇಕೆಂದು ಭಾರತವು ಸಾಂವಿಧಾನಿಕ ದೃಷ್ಟಿಯಿಂದ ‘ಹಿಂದೂ ರಾಷ್ಟ್ರ’ವೆಂದು ಘೋಷಿಸಲ್ಪಡುವುದು ಅನಿವಾರ್ಯವಾಗಿದೆ.

ಭಾರತದ ಪುರುಷಾರ್ಥಿ ಸಾಮ್ರಾಟರು ‘ಯುಗಾದಿ ತಿಥಿಯ’ ಮಹತ್ವವನ್ನು ಅರಿತು ಈ ದಿನದಿಂದಲೇ ‘ವಿಕ್ರಮ ಸಂವತ್ಸರ’ (ಉಜ್ಜೈನಿಯ ರಾಜಾ ವಿಕ್ರಮಾದಿತ್ಯ ಆರಂಭಿಸಿದ ಕಾಲಗಣನೆ), ‘ಶಾಲಿವಾಹನ ಶಕೆ’ (ಕ್ರಿ.ಶ. ೭೮ ರಲ್ಲಿ ಶಾಲಿವಾಹನ ಎಂಬ ರಾಜನು ಆರಂಭಿಸಿದ ಕಾಲಗಣನೆ), ‘ಯುಧಿಷ್ಠಿರ ಸಂವತ್ಸರ’ (ರಾಜಾ ಯುಧಿಷ್ಠಿರ ಪ್ರಾರಂಭಿಸಿದ ಕಾಲಗಣನೆ) ಮುಂತಾದ ಕಾಲಗಣನೆಗಳು ಆರಂಭವಾದವು. ಅವರ ಪರಾಕ್ರಮಗಳನ್ನು ಸ್ಮರಿಸುವ ಸಮಯವು ಇದಾಗಿದೆ. ಹಿಂದೂಗಳೇ, ಚೈತ್ರ ಪ್ರತಿಪದೆಯ ಈ ‘ಯುಗಾದಿ ತಿಥಿ’ಗೆ ನವ ವರ್ಷಾಂಭದ ದಿನವೆಂಬ ರಾಜಮಾನ್ಯತೆ ಸಿಗಲು ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ರಾಜಕೀಯ ಪ್ರಯತ್ನಗಳ ಪರಾಕಾಷ್ಠೆಯನ್ನು ಸಾಧಿಸಿ ಮತ್ತು ಭಾರತದಲ್ಲಿ ‘ಹಿಂದೂ ರಾಷ್ಟ್ರ’ದ ಸ್ಥಾಪನೆಯನ್ನು ಮಾಡಿರಿ !

– (ಪರಾತ್ಪರ ಗುರು) ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ.

Leave a Comment

Click here to read more…