ಆನ್‌ಲೈನ್ ಸತ್ಸಂಗ (27)

ಇಂದಿನ ತನಕ ನಾವು ೨೬ ಲೇಖನಗಳನ್ನು ಓದಿದ್ದೇವೆ. ಈ ಲೇಖನಗಳಲ್ಲಿ ನಾವು ಸಾಧನೆಯ ದೃಷ್ಟಿಯಿಂದ ಅನೇಕ ಮಹತ್ವಪೂರ್ಣ ವಿಷಯಗಳನ್ನು ಸಹ ನೋಡಿದೆವು. ಆರಂಭದಲ್ಲಿ ಲೇಖನಗಳಲ್ಲಿ ನಾವು ಸಾಧನೆಯ ಸಿದ್ಧಾಂತಗಳನ್ನು ಅರಿತುಕೊಂಡೆವು. ‘ವ್ಯಕ್ತಿಯಷ್ಟು ಪ್ರಕೃತಿ, ಮತ್ತು ಅಷ್ಟೇ ಸಾಧನಾಮಾರ್ಗಗಳು’ ಎಂಬ ಅಧ್ಯಾತ್ಮದ ಒಂದು ಮೂಲಭೂತ ಸಿದ್ಧಾಂತವಿದೆ. ಆ ದೃಷ್ಟಿಯಿಂದ ನಮ್ಮ ಇಷ್ಟಾನಿಷ್ಟ, ಕೌಶಲ್ಯ, ನಮ್ಮ ಜ್ಞಾನ ಅಥವಾ ಅಭ್ಯಾಸ, ನಮ್ಮ ಶಾರೀರಿಕ, ಬೌದ್ಧಿಕ ಕ್ಷಮತೆಗನುಸಾರ ಸಾಧನೆಯನ್ನು ಮಾಡಲು ಪ್ರಯತ್ನಿಸಿದರೆ ನಮ್ಮ ಆಧ್ಯಾತ್ಮಿಕ ಉನ್ನತಿಯು ಸಹ ವೇಗವಾಗಿ ಆಗುತ್ತದೆ.

ಗುರುಗಳನ್ನು ‘ಮಾಡಿ’ಕೊಳ್ಳುವುದು, ಸಾಂಪ್ರದಾಯಿಕ ಸಾಧನೆಯಲ್ಲಿ ಸಿಲುಕುವುದು, ತನ್ನನ್ನು ಸಾಧಕನೆಂದು ತಿಳಿದುಕೊಳ್ಳುವುದು, ಇವೇ ಮುಂತಾದ ತಪ್ಪುಗಳಿಂದ ನಾವು ಸಾಧನೆಯಲ್ಲಿ ಒಂದೇ ಹಂತದಲ್ಲಿರುತ್ತೇವೆ. ಹಾಗಾಗಿ ಕಾಲಕ್ಕೆ ತಕ್ಕ (ಯೋಗ್ಯ) ಸಾಧನೆಯನ್ನು ತಿಳಿದುಕೊಳ್ಳುವುದು ಆವಶ್ಯವಾಗಿರುತ್ತದೆ. ನಾವು ಸ್ಥೂಲಕ್ಕಿಂತ ಸೂಕ್ಷ್ಮವು ಹೆಚ್ಚು ಸಾಮರ್ಥ್ಯಶಾಲಿಯಾಗಿದೆ ಎಂಬ ತತ್ತ್ವವನ್ನು ಅರಿತುಕೊಂಡೆವು.

ಅನಂತರ ನಾಮಜಪ ಸಾಧನೆ ಮತ್ತು ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಈ ವಿಷಯವನ್ನು ನಾವು ಸವಿಸ್ತಾರವಾಗಿ ನೋಡಿದೆವು. ಕಾಲಾನುಸಾರ ಆವಶ್ಯವಿರುವಂತಹ ನಾಮಜಪ ಸಾಧನೆಯ ಮಹತ್ವ, ನಾಮಜಪದಿಂದ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಾಗುವ ಲಾಭಗಳು, ಕುಲದೇವತೆಯ ನಾಮಜಪದ ಮಹತ್ತ್ವ ಹಾಗೂ ಅದನ್ನು ಹೇಗೆ ಮಾಡಬೇಕು? ದತ್ತ ಗುರುಗಳ ನಾಮಜಪವನ್ನು ಹೇಗೆ ಮತ್ತು ಏಕೆ ಮಾಡಬೇಕು? ನಾಮಜಪದಲ್ಲಿ ಬರುವ ಅಡಚಣೆಗಳನ್ನು ದೂರಗೊಳಿಸಲು, ಹಾಗೂ ನಾಮಜಪಗಳಲ್ಲಿ ಸಂಖ್ಯಾತ್ಮಕ ಮತ್ತು ಗುಣಾತ್ಮಕ ಹೆಚ್ಚಳವಾಗಲು ಹೇಗೆ ಪ್ರಯತ್ನಿಸಬಹುದು ಎಂದು ಸಹ ತಿಳಿದುಕೊಂಡೆವು.

ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಮಹತ್ವ ಏನು? ಈ ಪ್ರಕ್ರಿಯೆಯನ್ನು ನಾವು ಏಕೆ ಮಾಡಬೇಕು? ಇದನ್ನು ಸಹ ನೋಡಿದೆವು. ನಮ್ಮಲ್ಲಿರುವ ಸ್ವಭಾವದೋಷಗಳಿಂದ ನಮ್ಮ ಸಾಧನೆಯು ಖರ್ಚಾಗುತ್ತಿರುತ್ತದೆ. ಹಾಗಾಗಿ ಸ್ವಭಾವದೋಷ ನಿವಾರಣೆಯತ್ತ ಗಮನ ನೀಡದಿದ್ದರೆ ನಮ್ಮ ಆಧ್ಯಾತ್ಮಿಕ ಉನ್ನತಿಯಾಗಲು ಬಹಳ ಸಮಯವು ತಗಲುತ್ತದೆ. ಈ ಪ್ರಕ್ರಿಯೆಯನ್ನು ನಡೆಸಲು ಶಾಸ್ತ್ರೀಯ ಪದ್ಧತಿಯನ್ನು ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಕಂಡು ಹಿಡಿದಿದ್ದಾರೆ. ಈ ಪದ್ಧತಿಯನ್ನು ನಾವು ಹಿಂದಿನ ಲೇಖನಗಳಲ್ಲಿ ಕಲಿತೆವು. ಮನಸ್ಸಿನ ಪ್ರತಿಯೊಂದು ಅಯೋಗ್ಯ ವಿಚಾರಗಳು ಒಬ್ಬ ಶತ್ರುವಿನಂತೆ ನಮಗೆ ಹಾನಿ ಮಾಡುತ್ತಿರುತ್ತದೆ. ಹಾಗಾಗಿ ನಮ್ಮ ಪ್ರತಿಯೊಂದು ವಿಚಾರ ಮತ್ತು ಕೃತಿ ಯೋಗ್ಯವೇ ಆಗಬೇಕೆಂಬ ಸಂಸ್ಕಾರವು ಮೂಡಬೇಕು ಎಂದು ನಾವು ಸ್ವಯಂಸೂಚನೆಯನ್ನು ತಯಾರಿಸುವುದು ಎಷ್ಟು ಮಹತ್ವದ್ದಾಗಿದೆ ಎಂದು ಸಹ ತಿಳಿದುಕೊಂಡೆವು. ಅದಕ್ಕಾಗಿ ನಾವು ತಪ್ಪುಗಳ ನಿರೀಕ್ಷಣೆಯನ್ನು ಹೇಗೆ ಮಾಡಬೇಕು, ತಖ್ತೆಯಲ್ಲಿ ತಪ್ಪುಗಳನ್ನು ಬರೆಯುವುದು ಹೇಗೆ? ಸ್ವಯಂಸೂಚನೆಯ ಸತ್ರಗಳನ್ನು ಹೇಗೆ ಮಾಡಬೇಕು? ಈ ವಿಷಯವನ್ನು ಸಹ ತಿಳಿದುಕೊಂಡೆವು.

ಮನಸ್ಸಿನ ಪ್ರತಿಯೊಂದು ಅಯೋಗ್ಯ ವಿಚಾರಗಳ ಜಾಗದಲ್ಲಿ ಯೋಗ್ಯ ವಿಚಾರಗಳ ಸಂಸ್ಕಾರವಾಗಬೇಕೆಂದು ನಾವು ಸ್ವಯಂಸೂಚನೆಯನ್ನು ತಯಾರಿಸುವ ವಿವಿಧ ಪದ್ಧತಿಗಳನ್ನು ಸಹ ಕಲಿತೆವು. ಹಾಗೂ ಈ ಪ್ರಕ್ರಿಯೆಗೆ ವೇಗವು ಬರಲು ಗುಣಗಳನ್ನು ಹೆಚ್ಚಿಸುವ ದೃಷ್ಟಿಯಿಂದ ಹೇಗೆ ಪ್ರಯತ್ನಿಸಬೇಕು, ಇದನ್ನು ಸಹ ತಿಳಿದುಕೊಂಡೆವು. ಈ ಪ್ರಕ್ರಿಯೆಯನ್ನು ನಮಗೆ ಯೋಗ್ಯವಾಗಿ ನಡೆಸಲು ಗೊತ್ತಾದರೆ ವ್ಯಕ್ತಿಯು ಅಂತರ್ಮುಖನಾಗಿ ಪ್ರತಿಯೊಂದು ವಿಚಾರ ಮತ್ತು ಕೃತಿಯು ಯೋಗ್ಯವಾದ ನಂತರ ಎಲ್ಲ ಕ್ಷೇತ್ರಗಳಲ್ಲಿ ನಮ್ಮ ಫಲನಿಷ್ಪತ್ತಿಯು ಅನೇಕ ಪಟ್ಟು ಹೆಚ್ಚಾಗುವುದು. ಇದರದ್ದೇ ಪರಿಣಾಮವೆಂದು ನಮ್ಮಲ್ಲಿರುವ ಸತ್ತ್ವಗುಣವು ಹೆಚ್ಚಾಗಿ ನಮ್ಮ ಆಧ್ಯಾತ್ಮಿಕ ಉನ್ನತಿಯೂ ಆಗುವುದು.

ಸ್ವಭಾವದೋಷ-ಅಹಂ ನಿರ್ಮೂಲನೆ ಪ್ರಕ್ರಿಯೆಯ ನಂತರ ಕೆಲವು ಮೂಲಭೂತ ಆಧ್ಯಾತ್ಮಿಕ ಸಂಕಲ್ಪನೆಗಳ ವಿಷಯಗಳ ಲೇಖನಗಳನ್ನು ಸಹ ನಾವು ತೆಗೆದುಕೊಂಡೆವು. ಸಂಚಿತ, ಪ್ರಾರಬ್ದ ಮತ್ತು ಕ್ರಿಯಾಮಾಣ ಅಂದರೇನು ಇದನ್ನು ಸಹ ನೋಡಿದೆವು. ಕಲಲಿಯುಗದಲ್ಲಿ ಮನುಷ್ಯನ ಜೀವನದಲ್ಲಿ ಘಟಿಸುವ ೬೫ % ಘಟನೆಗಳು ಪ್ರಾರಬ್ಧಾಧೀನವಾಗಿರುತ್ತವೆ. ನಮ್ಮ ಕ್ರಿಯಾಮಾಣವನ್ನು ಉಪಯೋಗಿಸಿ ಅಂದರೆ ಸಾಧನೆಯನ್ನು ಮಾಡಿ ಕಠಿಣ ಪ್ರಾರಬ್ಧವನ್ನು ಸಹ ಎದುರಿಸಬಹುದು. ಶಾಸ್ತ್ರವು ಗೊತ್ತಾದರೆ ಮನಸ್ಸಿನ ಅಯೋಗ್ಯ ವಿಚಾರ, ವಿಕಲ್ಪ, ಅಜ್ಞಾನವು ದೂರವಾಗುತ್ತದೆ. ಅನಂತರ ಸತ್ಸಂಗದಲ್ಲಿ ನಾವು ಆಪತ್ಕಾಲದ ಹಿನ್ನೆಲೆಯಲ್ಲಿ ಸಾಧನೆಯ ಮಹತ್ವವನ್ನು ಅರಿತುಕೊಂಡಿದ್ದೆವು. ಕೊರೊನಾದಂತಹ ಸಂಕಟಗಳು, ನೈಸರ್ಗಿಕ ಪ್ರಕೋಪಗಳು, ಮೂರನೆಯ ಮಹಾಯುದ್ಧದಂತಹ ತೂಗುಕತ್ತಿಯ ಲಕ್ಷಣಗಳಿದ್ದು ಅದರಿಂದ ಪಾರಾಗಬೇಕಾದರೆ ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ.

ಇಂದಿನ ತನಕ ನಾವು ನಮ್ಮ ಸಾಧನೆಯ ಅಡಿಪಾಯವು ತಯಾರಾಗಬೇಕು ಎಂಬ ದೃಷ್ಟಿಯಿಂದ ಪ್ರಯತ್ನ ಮಾಡಿದೆವು. ಅಧ್ಯಾತ್ಮವು ಕೃತಿಯಲ್ಲಿ ತರುವ ದೃಷ್ಟಿಯಿಂದ ಇನ್ನೂ ಬಹಳಷ್ಟು ಮತ್ತು ಮುಂದಿನ ಮುಂದಿನ ಪ್ರಯತ್ನಗಳನ್ನು ನಾವು ಕಲಿಯಲಿಕ್ಕಿದೆ. ಮುಂದಿನ ಲೇಖನಗಳಲ್ಲಿ ನಾವು ಅವನ್ನು ನೋಡುವವರಿದ್ದೇವೆ. ಒಟ್ಟಿನಲ್ಲಿ ಇಂದಿನ ತನಕದ ಲೇಖನಗಳಲ್ಲಿ ತಮಗೆಲ್ಲ ಹೇಗೆ ಅನಿಸಿತು? ತಮ್ಮ ಕುಲದೇವಿಯ ಮತ್ತು ದತ್ತಗುರುಗಳ ನಾಮಜಪವು ನಿಯಮಿತವಾಗಿ ನಡೆಯುತ್ತಿದೆಯೇನು? ನಾಮಜಪ ಮಾಡಲು ಪ್ರಾರಂಭಿಸಿದ ನಂತರ ತಮಗೆ ಏನಾದರೂ ಬದಲಾವಣೆಯ ಅರಿವಾಗಿದೆಯೇನು? ಏನೆಲ್ಲ ಅನುಭವಗಳಾದವು? ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ದೃಷ್ಟಿಯಿಂದ ತಖ್ತೆಯನ್ನು ಬರೆಯುವುದು ಸಹ ನಿಯಮಿತವಾಗಿ ಆಗುತ್ತಿದೆಯೇ? ಸ್ವಭಾವದೋಷಗಳ ವ್ಯಾಪ್ತಿಯನ್ನು ತೆಗೆದ ನಂತರ ಸ್ವಯಂಸೂಚನೆಗಳ ಸತ್ರಗಳನ್ನು ಮಾಡಲು ಪ್ರಾರಂಭಿಸಿದ ನಂತರ ತಮಗೆ ಏನೆಲ್ಲ ಅನುಭವವಾಯಿತು? ಇದರ ಅವಲೋಕನ ಮಾಡುವ ಸಮಯವಿದು.

ಒಟ್ಟಿನಲ್ಲಿ ಇಲ್ಲಿಯ ವರೆಗಿನ ವಿಷಯಗಳ ದೃಷ್ಟಿಯಿಂದ ತಮಗೆ ಯಾವುದಾದರೊಂದು ಭಾಗವು ಕ್ಲಿಷ್ಟ ಅನಿಸುತ್ತಿದ್ದಲ್ಲಿ ಅದನ್ನು ಸಹ ತಾವು ನಮಗೆ ತಿಳಿಸಿ. ಅಂದರೆ ಆ ಭಾಗವನ್ನು ಇನ್ನೂ ಉತ್ತಮ ರೀತಿಯಲ್ಲಿ ಹೇಳಲು ನಾವೂ ಇನ್ನೂ ಪ್ರಯತ್ನಿಸುವೆವು.

ಸಾಧನೆಯಲ್ಲಿನ ಕಲಿಯುವ ಆನಂದವನ್ನು ನಾವು ಪಡೆಯಬೇಕಾಗಿದೆ. ಇಂದಿನ ತನಕದ ಲೇಖನಗಳಲ್ಲಿ ನಾವು ಸಾಧನೆಯ ತಾತ್ತ್ವಿಕ ಅಂಗಗಳ ಶಿಕ್ಷಣವನ್ನು ಪಡೆದೆವು. ಇಲ್ಲಿಂದ ಮುಂದೆ ನಾವು ಸಾಧನೆಯ ಪ್ರಾಯೋಗಿಕ ಭಾಗ ಅಂದರೆ ಪ್ರತ್ಯಕ್ಷ ಸಾಧನೆ ಮತ್ತು ಅಧ್ಯಾತ್ಮವನ್ನು ಕೃತಿಯಲ್ಲಿ ತರುವಂತಹ ವಿಷಯಗಳನ್ನು ಕಲಿಯುವವರಿದ್ದೇವೆ. ಅಧ್ಯಾತ್ಮದಲ್ಲಿ ಶ್ರವಣಭಕ್ತಿಗೆ ಕೇವಲ ೨ % ಮತ್ತು ಕಲಿತುದದನ್ನು ಕೃತಿಯಲ್ಲಿ ತರುವುದಕ್ಕೆ ೯೮% ಮಹತ್ವವಿದೆ. ಇಲ್ಲಿಂದ ಮುಂದಿನ ಲೇಖನಗಳಲ್ಲಿ ನಾವು ಕೃತಿಯ ಸ್ತರದ ಪ್ರಯತ್ನಗಳಿಗೆ ಹೆಚ್ಚಿನ ಮಹತ್ವವನ್ನು ನೀಡುವವರಿದ್ದೇವೆ. ನಾವೂ ಇಂದಿನ ತನಕದ ಲೇಖನಗಳಲ್ಲಿ ಕಲಿತ ಅಂಶಗಳನ್ನು ಕೃತಿಯಲ್ಲಿ ತರೋಣ.

ಕಲಿಯಲು ಸಿಕ್ಕಿದ ಅಂಶಗಳನ್ನು ಇತತರಿಗೂ ಹೇಳೋಣ. ಹೀಗೆ ಮಾಡುವುದರಿಂದ ನಮಗೆ ಸತ್ಸಂಗದಿಂದ ದುಪ್ಪಟ್ಟು ಲಾಭವು ಸಿಗುವುದು. ಯಾವಾಗ ನಾವು ಇತರರಿಗೆ ಹೇಳುತ್ತೇವೆಯೋ ಆಗ ಈ ಅಂಶಗಳು ನಮ್ಮ ಮನಸ್ಸಿನಲ್ಲಿಯೂ ಅಚ್ಚೊತ್ತಿದಂತೆ ಆಗಿ ನಮ್ಮ ಸಾಧನೆಯ ದೃಷ್ಟಿಕೋನವು ಇನ್ನಷ್ಟು ದೃಢವಾಗುತ್ತದೆ. ಇಂದಿನ ಕಠಿಣ ಕಾಲವನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ. ಈ ಆಪತ್ಕಾಲದ ಕಾರಣಗಳನ್ನು ಮೇಲುಮೇಲಿನಿಂದ ನೋಡಿದರೆ ಭೌಗೊಲಿಕ, ವಾತಾವರಣದ ಏರುಪೇರಿನಿಂದ ಅಥವಾ ರಾಜಕೀಯ ಎಂದು ಅನಿಸುತ್ತಿದ್ದರೂ ವಾಸ್ತವದಲ್ಲಿ ಅದು ಹಾಗಿಲ್ಲ. ಈ ಆಪತ್ಕಾಲದಿಂದ ಜೀವನದಲ್ಲಿ ಶಾರೀರಿಕ, ಮಾನಸಿಕ, ಆರ್ಥಿಕ ಸ್ತರದಲ್ಲಿ ಪರಿಣಾಮವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಸ್ಥಿರವಾಗಿದ್ದು ಮತ್ತು ಆನಂದಿಯಾಗಿರುವ ಶಕ್ತಿಯು ನಮಗೆ ಸಾಧನೆಯಿಂದ ಸಿಗುತ್ತದೆ. ನಮ್ಮಲ್ಲಿ ಅನೇಕರು ಅದನ್ನು ಅನುಭವಿಸಿದ್ದಾರೆ. ನಾವು ದೇವರ ಭಕ್ತರಾದರೆ, ಸಾಧನೆಯನ್ನು ಮಾಡಿದರೆ, ದೇವರು ನಮ್ಮನ್ನು ಸಂಕಟಕಾಲದಿಂದ ಪಾರು ಮಾಡಿ ಕೊಂಡೊಯ್ಯಲಿದ್ದಾರೆ. ಸಾಕ್ಷಾತ್ ಭಗವಂತ ಶ್ರೀಕೃಷ್ಣನು ‘ನ ಮೆ ಭಕ್ತ ಪ್ರಣಶ್ಯತಿ’ ಅಂದರೆ ‘ಯಾವತ್ತೂ ನನ್ನ ಭಕ್ತನು ನಾಶವಾಗುವುದಿಲ್ಲ’ ಎಂದು ವಚನವನ್ನು ನೀಡಿದ್ದಾನೆ. ಹಾಗಾಗಿ ನಾವು ದೇವರ ಮೇಲೆ ಪೂರ್ಣ ಶ್ರದ್ಧೆಯನ್ನಿಡೋಣ. ಮತ್ತು ಇಂದಿನ ಈ ಕ್ಷಣದಿಂದಲೇ ಜೀವ ತೇದು ಸಾಧನೆಯನ್ನು ಮಾಡುವ ನಿರ್ಧಾರ ಮಾಡೋಣ.

ಹೇಗೆ ವ್ಯಾವಹಾರಿಕ ಜೀವನದಲ್ಲಿ ಒಂದನೆಯ ತರಗತಿಯಿಂದ ಎರಡನೆಯ ತರಗತಿಗೆ ಹೋಗುವುದು, ಎರಡನೆಯದರಿಂದ ಮೂರನೆಯದ್ದಕ್ಕೆ ಹೋಗುವುದು, ಹೀಗಿರುತ್ತದೆ, ಹಾಗೆ ಅಧ್ಯಾತ್ಮದಲ್ಲಿಯೂ ಇರುತ್ತದೆ. ಮುಂದಿನ ಲೇಖನಗಳಿಂದ ನಾವು ಮುಂದಿನ ಸ್ತರದ ಸಾಧನೆಯನ್ನು ಕಲಿಯೋಣ!

Leave a Comment