ಆನ್‌ಲೈನ್ ಸತ್ಸಂಗ (19)

ಆ-೨ ಸ್ವಯಂಸೂಚನೆ ಪದ್ಧತಿ

ಕಳೆದ ಲೇಖನದಲ್ಲಿ ನಾವು ಆ-೧ ಸ್ವಯಂಸೂಚನೆ ಪದ್ಧತಿಯ ಬಗ್ಗೆ ತಿಳಿದುಕೊಂಡಿದ್ದೆವು. ಈಗ ನಾವು ಆ-೨ ಸ್ವಯಂಸೂಚನೆ ಪದ್ಧತಿಯ ಬಗ್ಗೆ ಅಭ್ಯಾಸ ಮಾಡಲಿದ್ದೇವೆ.

ಆ-೧ ಹಾಗೂ ಆ-೨ ಸ್ವಯಂಸೂಚನೆ ಪದ್ಧತಿಯಲ್ಲಿರುವ ವ್ಯತ್ಯಾಸಗಳು

ಬೇರೆಯವರ ಸ್ವಭಾವದೋಷ ದೂರ ಮಾಡಲು ಅಥವಾ ಅವರಿಗಿರುವ ಕಠಿಣ ಪರಿಸ್ಥಿತಿಯನ್ನು ಬದಲಾಯಿಸಿ ನಮ್ಮ ಮನಸ್ಸಿನ ಮೇಲೆ ಬರುವ ಒತ್ತಡ ಕಡಿಮೆ ಮಾಡುವುದು ಸಾಧ್ಯವಿದ್ದರೆ ನಾವು ಆ-೧ ಪದ್ಧತಿಯನ್ನು ಬಳಸಬಹುದು. ಬೇರೆಯವರ ಸ್ವಭಾವದೋಷ ಅಥವಾ ಕಠಿಣ ಪರಿಸ್ಥಿತಿಯನ್ನು ಬದಲಾಯಿಸುವುದು ಸಾಧ್ಯವಿರದಿದ್ದಾಗ ನಾವು ಆ-೨ ಪದ್ಧತಿಯನ್ನು ಉಪಯೋಗಿಸುತ್ತೇವೆ. ಕೆಲವೊಮ್ಮೆ ಬೇರೆಯವರ ಅಂದರೆ ಉದಾಹರಣೆಗೆ ನಮ್ಮ ಹಿರಿಯ ಅಧಿಕರಾರಿಗಳ ಸ್ವಭಾವದೋಷವನ್ನು ದೂರ ಮಾಡುವುದು ಅಸಾಧ್ಯವಾಗಿರುತ್ತದೆ. ಅದೇ ರೀತಿ ಕಡು ಬಡತನ, ಅತಿವೇದನೆ ನೀಡುವಂತಹ ಅಥವಾ ಭೀಕರ ರೋಗಗಳು, ಅಪಘಾತ, ಕ್ಷಾಮ ಇತ್ಯಾದಿ ಸಂಕಟಗಳಿಂದ ಅಥವಾ ಒತ್ತಡ ನಿರ್ಮಿಸುವ ಪ್ರಸಂಗಗಳಲ್ಲಿ ತತ್ವಜ್ಞಾನದ ಭೂಮಿಕೆಯಿಂದ ಆ ಪ್ರಸಂಗವನ್ನು ನೋಡುವುದೇ ಏಕೈಕ ಉಪಾಯ ಸಾಧ್ಯವಾಗಿರುತ್ತದೆ. ಅಂತಹ ಸಮಯದಲ್ಲಿ ಆ-೨ ಪದ್ಧತಿಯಂತೆ ಸ್ವಯಂಸೂಚನೆ ನೀಡಿ ಒತ್ತಡದ ಪರಿಸ್ಥಿತಿಯನ್ನು ಎದುರಿಸಬಹುದು.

ತತ್ವಜ್ಞಾನದ ಭೂಮಿಕೆಯಿಂದ ಸಮಸ್ಯೆಯನ್ನು ನೋಡಲು ಮಾಡಬೇಕಾಗಿರುವ ಪರಿಹಾರಗಳು

ಎಷ್ಟೋ ಸಲ ಸಮಸ್ಯೆಗಳಿಗೆ ಅಥವಾ ಒತ್ತಡಕ್ಕೆ ಅಪೇಕ್ಷೆಯೇ ಮೂಲ ಕಾರಣವಾಗಿರುತ್ತದೆ. ವ್ಯಕ್ತಿಗೆ ತನ್ನಿಂದ ಅಥವಾ ಇತರರಿಂದ ಎಷ್ಟು ಕಡಿಮೆ ಅಪೇಕ್ಷೆಯಿರುತ್ತದೋ, ಆ ವ್ಯಕ್ತಿಯು ಅಷ್ಟೇ ಸಮಾಧಾನವಾಗಿ ಅಥವಾ ಆನಂದವಾಗಿರಲು ಸಾಧ್ಯ. ಬೇರೆಯವರಿಂದ ಯಾರೂ ಕೂಡ ಅಪೇಕ್ಷೆಯಿಟ್ಟುಕೊಳ್ಳುವುದು ಬೇಡ, ಅದೇ ರೀತಿ ಸ್ವಪ್ರಯತ್ನಗಳಿಗೆ ಫಲ ಸಿಗಲಿ ಎಂಬ ಅಪೇಕ್ಷೆ ಕೂಡ ಇಟ್ಟುಕೊಳ್ಳಬಾರದು. ಕರ್ಮಫಲನ್ಯಾಯಕ್ಕೆ ಅನುಗುಣವಾಗಿ ಸುಖ ಅಥವಾ ದುಃಖ ಸಿಗುತ್ತದೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಂಡರೆ, ದಾರಿದ್ರ್ಯ, ಅಪಘಾತ, ಬರಗಾಲ ಹಾಗೂ ಅನ್ಯ ಪ್ರಸಂಗಗಳಿಂದ ದುಃಖಿತನಾಗಿರುವ ವ್ಯಕ್ತಿಯನ್ನು ನೋಡಿ ನಮಗೆ ದುಃಖವಾಗುವುದಿಲ್ಲ. ಕಲಿಯುಗದಲ್ಲಿ ವ್ಯಕ್ತಿಯ ಜೀವನದಲ್ಲಿ ಬರುವ ಶೇಕಡ ೬೫ರಷ್ಟು ಘಟನೆಗಳು ಪ್ರಾರಬ್ಧಾನುಸಾರವಾಗಿ ಬರುತ್ತದೆ. ನಮ್ಮ ಪಾಲಿಗೆ ಬರುವ ಸುಖ-ದುಃಖ ಇದು ನಮ್ಮ ಪೂರ್ವಜನ್ಮದ ಕರ್ಮಗಳ ಫಲವಾಗಿದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡರೆ ಅಥವಾ ನಮ್ಮ ಅಂತರ್ಮನಸ್ಸಿಗೆ ನಾಟಿದರೆ, ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕೂಡ ಭಾವನಾಪರವಶರಾಗುವುದಿಲ್ಲ.
ತತ್ವಜ್ಞಾನದ ಭೂಮಿಕೆ ನಿರ್ಮಾಣ ಮಾಡುವಂತಹ ಸೂಚನೆಗಳನ್ನು ಒತ್ತಡ ನಿರ್ಮಿಸುವ ಪ್ರಸಂಗಗಳ ಅವಧಿಗೆ ಅನುಸಾರವಾಗಿ ಅ-೨ ಅಥವಾ ಅ-೩ ಪದ್ಧತಿಯಂತೆ ನೀಡಲಾಗುತ್ತದೆ. ಬೇರೆ ಬೇರೆ ಪದ್ಧತಿಗಳನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ಗೊಂದಲ ಬೇಡ ಎಂಬುದನ್ನು ಗಮನದಲ್ಲಿಟ್ಟುಕೊಳ್ಳುವುದು ಮಹತ್ತ್ವದ್ದಾಗಿದೆ.

 

ಆ-೨ ಸ್ವಯಂಸೂಚನೆ ಪದ್ಧತಿಗೆ ಉದಾಹರಣೆಗಳು

ಈಗ ನಾವು ಆ-೨ ಪದ್ಧತಿಯಂತೆ ಯಾವ ರೀತಿಯಲ್ಲಿ ಸ್ವಯಂಸೂಚನೆಗಳನ್ನು ತಯಾರಿಸಬಹುದು, ಎಂಬುದರ ಬಗ್ಗೆ ಕೆಲವು ಉದಾಹರಣೆಗಳನ್ನು ನೋಡೋಣ.

ಪ್ರಸಂಗ ೧ :

ಮನೆಯಲ್ಲಿ ಮೋತಿ ಎಂಬ ನಾಯಿಯಿತ್ತು. ನನಗೆ ಅದರ ಮೇಲೆ ತುಂಬಾ ಪ್ರೀತಿಯಿತ್ತು. ಅದಕ್ಕೆ ವಯಸ್ಸಾದದ್ದರಿಂದ ಅದು ಅಸುನೀಗಿತು. ಆಗ ಅದರ ದುಃಖ ತಡೆದುಕೊಳ್ಳಲು ಆಗಲಿಲ್ಲ.

ಅಭ್ಯಾಸ : ವಾಸ್ತವದಲ್ಲಿ ಮೃತ್ಯು ಎಂಬುವುದು ಒಂದು ಅನಿವಾರ್ಯ ಸತ್ಯ. ‘ಹುಟ್ಟಿದವರೆಲ್ಲರಿಗೂ ಸಾವು ಖಂಡಿತ, ಎಂಬುದು ತನಗೆ ಗೊತ್ತಿರಲಿಲ್ಲ ಎಂದೇನಿಲ್ಲ; ಆದರೆ ಭಾವನಾಪ್ರಧಾನತೆ ಎಂಬ ಸ್ವಭಾವದೋಷದಿಂದ ಮನಸ್ಸು ಸ್ಥಿರವಾಗಿರಲಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಸ್ವಯಂಸೂಚನೆಯ ಮಾಧ್ಯಮದಿಂದ ಮನಸ್ಸಿನ ಮೇಲೆ ದೃಷ್ಟಿಕೋನವನ್ನು ಬಿಂಬಿಸಿದರೆ ಅದರಿಂದ ಹೊರಗೆ ಬರಬಹುದು.

ಸ್ವಯಂಸೂಚನೆ : ವಯಸ್ಸಾದ್ದರಿಂದ ಮೋತಿ ಅಸುನೀಗಿದೆ ಎಂಬುದು ನನ್ನ ಗಮನಕ್ಕೆ ಬಂದಾಗ, ‘ಜನ್ಮ ಪಡೆಯುವ ಪ್ರತಿಯೊಂದು ಜೀವದ ಮೃತ್ಯು ಅನಿವಾರ್ಯ, ಆದರೆ ಭಗವಂತನು ಮಾತ್ರ ಜನ್ಮಜನ್ಮಾಂತರದವರೆಗೆ ನಮ್ಮ ಜೊತೆಯಲ್ಲಿಯೇ ಇರುತ್ತಾನೆ, ಎಂಬುದು ನನ್ನ ಗಮನಕ್ಕೆ ಬಂದು ನಾನು ನಾಮಜಪ ಮಾಡಲು ಪ್ರಾರಂಭಿಸುವೆನು.

ಈ ಪ್ರಸಂಗದಲ್ಲಿ ತತ್ವಜ್ಞಾನದ ಭೂಮಿಕೆ ವಹಿಸಿದ್ದರ ಜೊತೆಗೆ ಮನಸ್ಸು ಆ ವಿಚಾರದಲ್ಲಿ ಸಿಲುಕಿಕೊಳ್ಳುವುದು ಬೇಡ, ಎಂಬುದಕ್ಕಾಗಿ ನಾಮಜಪ ಮಾಡುವ ಕೃತಿ ಮಾಡಲು ಮನಸ್ಸಿಗೆ ದಾರಿ ತೋರಿಸಲಾಗಿದೆ; ಏಕೆಂದರೆ ನಾಮಜಪದಿಂದ ಆಧ್ಯಾತ್ಮಿಕ ಶಕ್ತಿ ದೊರೆತು ಕಠಿಣ ಪ್ರಸಂಗಗಳನ್ನು ಎದುರಿಸಲು ಧೈರ್ಯ ಸಿಗುತ್ತದೆ.

ಈಗ ನಾವು ಇನ್ನೂ ಕೆಲವು ಉದಾಹರಣೆಗಳ ಮೂಲಕ ಆ-೨ ಪದ್ಧತಿಯ ಸ್ವಯಂಸೂಚನೆಗಳನ್ನು ಹೇಗೆ ತೆಗೆದುಕೊಳ್ಳಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳೋಣ.

ಪ್ರಸಂಗ ೨ :

‘ನನಗೆ ಕೊರೋನಾ ವೈರಾಣು ತಗುಲಿದರೆ ನನ್ನ ಮೃತ್ಯುವಾಗುವುದು’, ಎಂಬ ವಿಚಾರದಿಂದ ಒಂದು ವೇಳೆ ನಮಗೆ ಭಯವಾಗುತ್ತಿದ್ದರೆ, ಆ ಭಯದಿಂದ ಮನಸ್ಸು ಅಸ್ವಸ್ಥವಾಗಿದೆ ಎಂಬುದು ಪ್ರಸಂಗ. ಸ್ವಯಂಸೂಚನೆಯನ್ನು ಯಾವ ರೀತಿ ತಯಾರಿಸಬಹುದು ಎಂಬುದನ್ನು ನಾವು ನೋಡೋಣ.

ಸ್ವಯಂಸೂಚನೆ : ಯಾವಾಗ ನನ್ನ ಮನಸ್ಸಿನಲ್ಲಿ ನನಗೆ ಕೊರೋನಾ ವೈರಾಣು ತಗುಲಿದರೆ ನನ್ನ ಮೃತ್ಯುವಾಗುವುದು, ಎಂಬ ವಿಚಾರ ಬರುತ್ತಿರುತ್ತದೋ, ಆಗ ‘ಪ್ರತಿಯೊಬ್ಬರ ಮರಣದ ಸಮಯವನ್ನು ದೇವರು ನಿರ್ಧರಿಸಿದ್ದಾರೆ. ಆದ್ದರಿಂದ ಕೊರೊನಾದಿಂದ ಆಗದೆ, ಬೇರೆ ಕಾರಣಗಳಿಂದಲೂ ಯಾವಾಗಲಾದರೂ ತೀರಿಹೋಗಬಹುದು, ಎಂಬುವುದರ ಅರಿವಾಗಿ ನಾನು ಮನುಷ್ಯಜನ್ಮವನ್ನು ಸಾರ್ಥಕಪಡಿಸಲು ಸಾಧನೆಯ ಕಡೆಗೆ ಗಮನ ಹರಿಸುವೆನು.

ಅಭ್ಯಾಸ : ಈ ರೀತಿಯಲ್ಲಿ ಸ್ವಯಂಸೂಚನೆ ನೀಡುವುದರಿಂದ ಮನಸ್ಸಿನಲ್ಲಿರುವ ಭಯ ಹೋಗಲಾಡಿಸಲು ಸಹಾಯವಾಗುತ್ತದೆ. ಜನ್ಮ, ಮೃತ್ಯು ಹಾಗೂ ವಿವಾಹ ಈ ಮೂರೂ ವಿಷಯಗಳು ಅವರವರ ಪ್ರಾರಬ್ಧಾನುಸಾರವಾಗಿ ನಡೆಯುತ್ತವೆ. ಹೇಗೆ ಜನ್ಮ ಪಡೆದುಕೊಳ್ಳುವುದು ನಮ್ಮ ಕೈಯಲ್ಲಿರುವುದಿಲ್ಲವೋ, ಅದೇ ರೀತಿ ಮೃತ್ಯು ಕೂಡ ನಮ್ಮ ಕೈಯ್ಯಲ್ಲಿಲ್ಲ. ಕೊರೋನಾ ವಿಷಯದಲ್ಲಿ ಅಗತ್ಯವಿರುವ ಎಲ್ಲಾ ಕಾಳಜಿ ತೆಗೆದುಕೊಳ್ಳಲೇಬೇಕು; ಆದರೆ ನಮಗೆ ಭಯವಾಗುತ್ತಿದ್ದರೆ, ನಾವು ಅದರ ಮೇಲೆ ಸ್ವಯಂಸೂಚನೆ ನೀಡಬಹುದು.

ಮತ್ತೊಂದು ಪ್ರಸಂಗ ನೋಡೋಣ. ಕೆಲವೊಮ್ಮೆ ಎದುರಿಗಿರುವ ವ್ಯಕ್ತಿಯ ಅಯೋಗ್ಯ ಮಾತಿನಿಂದ ಅಥವಾ ನಡವಳಿಕೆಯಿಂದ ನಮಗೆ ಸಿಟ್ಟು ಬರುತ್ತದೆ. ಎದುರಿಗಿರುವ ವ್ಯಕ್ತಿಗೆ ಅವರ ಆ ವರ್ತನೆಯ ಬಗ್ಗೆ ಮನವರಿಕೆ ಮಾಡಿಕೊಡುವುದು ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ ನಾವೇ ನಮ್ಮ ಮನಸ್ಸಿನ ಮೇಲೆ ಯೋಗ್ಯ ದೃಷ್ಟಿಕೋನವನ್ನು ನಾಟುವಂತೆ ಮಾಡಿ ಸ್ಥಿರವಾಗಿರುವುದು ಅಗತ್ಯ. ವ್ಯಕ್ತಿ ಹಾಗೂ ಪರಿಸ್ಥಿತಿ ಯಾವುದೇ ರೀತಿಯಲ್ಲಿದ್ದರೂ ಸಹ ಸ್ವತಃ ಸ್ಥಿರವಾಗಿದ್ದುಕೊಂಡು ಪ್ರಯತ್ನಿಸುವುದೇ ಸಾಧನೆಯಾಗಿದೆ. ನಾವು ಯಾವಾಗ ಬೇರೆಯವರ ಅಯೋಗ್ಯ ವರ್ತನೆ ಬದಲಾಯಿಸಲು ಸಾಧ್ಯವಾಗುವುದಿಲ್ಲವೋ ಆಗ ನಾವು ಆ-೨ ಪದ್ಧತಿಯಂತೆ ಸ್ವಯಂಸೂಚನೆ ನೀಡಿ ಸ್ವತಃ ಮನಸ್ಸಿನ ಅಸ್ಥಿರತೆಯನ್ನು ಬಗೆಹರಿಸಬಹುದು. ಈ ವಿಷಯದ ಮೇಲೆ ಒಂದು ಪ್ರಸಂಗ ಹಾಗೂ ಅದರ ಮೇಲೆ ಸ್ವಯಂಸೂಚನೆಯನ್ನು ನೊಡೋಣ.

ಪ್ರಸಂಗ ೩ :

ಮಾಯಾ ಇವರ ಸಂಬಂಧಿಯಾದ ರೂಪಾ ಇವರು ಮಾಯಾ ಮನೆಗೆ ಬಂದಿದ್ದರು. ರೂಪಾ ಇವರು ಹೊಸದಾಗಿ ಖರೀದಿಸಿದ ವಾಹನದ ಬಗ್ಗೆ ತುಂಬಾ ಜಂಭದಿಂದ ಹೇಳಿಕೊಂಡರು ಮತ್ತು ಮಾಯಾ ಹತ್ತಿರ ವಾಹನ ಇಲ್ಲದಿರುವ ಬಗ್ಗೆ ಅವರೊಂದಿಗೆ ತುಚ್ಛವಾಗಿ ವರ್ತಿಸಿದರು. ಇದರಿಂದ ಮಾಯಾಗೆ ಕೆಟ್ಟದೆನಿಸಿತು.

ಅಭ್ಯಾಸ : ಇಂತಹ ರೀತಿಯ ಪ್ರಸಂಗಗಳಲ್ಲಿ ಇತರರ ಮಾತಿನಿಂದ ಮನಸ್ಸಿನ ಮೇಲೆ ಪರಿಣಾಮವಾಗಿ ಕೆಟ್ಟದೆನಿಸುಕೊಳ್ಳುವುದಕ್ಕಿಂತ ಇತರರ ವರ್ತನೆಯತ್ತ ದುರ್ಲಕ್ಷ್ಯ ಮಾಡಿ ನಾವು ನಮ್ಮ ಸಾಧನೆಯತ್ತ ಅಥವಾ ನಾಮಸ್ಮರಣೆಯತ್ತ ಗಮನವನ್ನು ಕೇಂದ್ರಿಕರಿಸುವುದು ಆವಶ್ಯಕವಾಗಿದೆ. ಇಲ್ಲಿ ಗಮನದಲ್ಲಿರಿಸಬೇಕಾದ ಇನ್ನೊಂದು ಮಹತ್ವದ ಅಂಶವೇನೆಂದರೆ ನಮ್ಮ ಜನ್ಮವು ಪ್ರಾರಬ್ಧಕ್ಕನುಸಾರ ಆಗಿರುತ್ತದೆ. ಎಲ್ಲಿ ಜನ್ಮ ತಾಳುವುದು, ಇದು ನಮ್ಮ ಕೈಯಲ್ಲಿರುವುದಿಲ್ಲ. ಯಾವ ರೀತಿ ನಮ್ಮ ಜನ್ಮವು ಪ್ರಾರಬ್ಧಕ್ಕನುಸಾರವಾಗಿರುತ್ತದೆಯೋ ಅದೇ ರೀತಿ ಜೀವನದಲ್ಲಿ ನಮಗೆ ಅಂತಹದ್ದೇ ವ್ಯಕ್ತಿಯೊಂದಿಗೆ ನಾವು ಸಂಪರ್ಕಕ್ಕೆ ಬರುತ್ತೇವೆ. ಅವರ ಜೊತೆಗೆ ನಮ್ಮ ಕೊಡಕೊಳ್ಳುವಿಕೆಯ ಲೆಕ್ಕಾಚಾರವಿರುತ್ತದೆ. ಪ್ರಾರಬ್ಧವು ಸಂತರಿಗೂ ತಪ್ಪಿದ್ದಲ್ಲ, ಹೀಗಿರುವಾಗ ನಮ್ಮಂತಹ ಸಾಮಾನ್ಯ ವ್ಯಕ್ತಿಗಳದ್ದು ಹೇಗಿರಬಲ್ಲದು? (ಕೊಡಕೊಳ್ಳುವಿಕೆಯ ಲೆಕ್ಕಾಚಾರ, ಪ್ರಾರಬ್ಧ, ಸಂಚಿತ, ಕ್ರಿಯಾಮಾಣ ಇವುಗಳ ವಿಷಯದಲ್ಲಿ ಇನ್ನೂ ಹೆಚ್ಚಿನ ಮಾಹಿತಿಯು ಸನಾತನದ ಗ್ರಂಥಗಳಲ್ಲಿ ಲಭ್ಯವಿದೆ.) ಎದುರಿನ ವ್ಯಕ್ತಿಯು ನಮ್ಮೊಂದಿಗೆ ಅಯೋಗ್ಯವಾಗಿ ವರ್ತಿಸುವುದು ಸಹ ಪ್ರಾರಬ್ಧದಿಂದಿರಬಹುದು ಮತ್ತು ಪ್ರಾರಬ್ಧವನ್ನು ಸುಸಹ್ಯಗೊಳಿಸಲು ಸಾಧನೆಯನ್ನು ಮಾಡುವುದೊಂದೇ ಉಪಾಯವಾಗಿದೆ.

ಬಂಧು-ಬಳಗದವರ ಅಯೋಗ್ಯ ರೀತಿಯ ಮಾತುಗಳ ಬಗ್ಗೆ ಸ್ವಯಂಸೂಚನೆಯನ್ನು ಹೇಗೆ ತಯಾರಿಸಬಹುದು ಎಂದು ನಾವೀಗ ನೋಡೋಣ.

ಸ್ವಯಂಸೂಚನೆ : ಯಾವಾಗ ರೂಪಾ ಇವರು ತಮ್ಮ ವಾಹನದ ವಿಷಯದಲ್ಲಿ ಹೇಳಿ ನಮ್ಮಲ್ಲಿ ವಾಹನ ಇಲ್ಲದ ಬಗ್ಗೆ ನನ್ನನ್ನು ತುಚ್ಛವಾಗಿ ಮಾತನಾಡುತ್ತಾರೆಯೋ ಆಗ ಅದು ಅವರ ಹಳೆಯ ಸ್ವಭಾವದೋಷವಾಗಿದೆ. ಅದು ಹೋಗಲು ಸಮಯ ತಗಲುತ್ತದೆ ಎಂಬುದನ್ನು ಗಮನದಲ್ಲಿರಿಸಿ ನಾನು ನಾಮಸ್ಮರಣೆ ಮಾಡುವುದರತ್ತ ಗಮನ ಹರಿಸುವೆನು.

Leave a Comment