ಆನ್‌ಲೈನ್ ಸತ್ಸಂಗ (16)

‘ಅ ೩’ ಸ್ವಯಂಸೂಚನಾ ಪದ್ಧತಿ

ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯ ಅಂತರ್ಗತವಾಗಿ ಇದುವರೆಗೆ ನಾವು ಅ – ೧ ಮತ್ತು ಅ – ೨ ಸ್ವಯಂಸೂಚನಾ ಪದ್ಧತಿ ಹಾಗೂ ಸ್ವಯಂಸೂಚನೆಗಳನ್ನು ತಯಾರಿಸುವ ಪದ್ಧತಿ ಮುಂತಾದ ಅಂಶಳನ್ನು ತಿಳಿದುಕೊಂಡೆವು. ಈಗ ನಾವು ಅ – ೩ ಸ್ವಯಂಸೂಚನಾ ಪದ್ಧತಿಯ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ.

ಅ. ಅ ೩ ಸ್ವಯಂಸೂಚನಾ ಪದ್ಧತಿಯ ತತ್ತ್ವ

ಅ ೩ ಸ್ವಯಂಸೂಚನಾ ಪದ್ಧತಿಯಲ್ಲಿ ವ್ಯಕ್ತಿಯು ತಾನು ಕಠಿಣ ಪ್ರಸಂಗವನ್ನು ಯಶಸ್ವಿಯಾಗಿ ಎದುರಿಸುತ್ತಿದ್ದೇನೆ ಎಂದು ಕಲ್ಪಿಸಿಕೊಳ್ಳುವುದಿರುತ್ತದೆ. ಇದರಿಂದ ಮನಸ್ಸಿಗೆ ಒಂದು ವಿಧದಲ್ಲಿ ಆ ಪ್ರಸಂಗವನ್ನು ಎದುರಿಸುವ ಅಭ್ಯಾಸವಾಗಿ, ಪ್ರತ್ಯಕ್ಷ ಪ್ರಸಂಗವನ್ನು ಎದುರಿಸುವ ಪರಿಸ್ಥಿತಿಯು ಬಂದಾಗ ಮನಸ್ಸಿನಲ್ಲಿ ಒತ್ತಡ ಉಂಟಾಗುವುದಿಲ್ಲ. ನಮ್ಮ ಪೈಕಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಪ್ರಸಂಗವನ್ನು ಎದುರಿಸುವುದರ ಬಗ್ಗೆ ಮನಸ್ಸಿನಲ್ಲಿ ಭಯವಿರುತ್ತದೆ ಅಥವಾ ನಾವು ಅಂತಹ ಪ್ರಸಂಗಗಳನ್ನು ಎದುರಿಸದೇ ಇರಲು ಪ್ರಯತ್ನ ಮಾಡುತ್ತೇವೆ ಎಂಬ ಅನುಭವವಿರಬಹುದು.

ಉದಾ: ಒಬ್ಬರಿಗೆ ರೈಲಿನಲ್ಲಿ ಪ್ರಯಾಣ ಮಾಡುವುದಿದ್ದರೆ ಒತ್ತಡ ಆಗುತ್ತದೆ, ಮತ್ತೊಬ್ಬರಿಗೆ ಪರೀಕ್ಷೆಯ ಬಗ್ಗೆ ಒತ್ತಡವಿರುತ್ತದೆ. ಇನ್ನೊಬ್ಬರಿಗೆ ವ್ಯವಹಾರ ಮಾಡುವ ಬಗ್ಗೆ ಒತ್ತಡ ಇರುತ್ತದೆಯಾದರೆ ಮತ್ತೆ ಯಾರಿಗೋ ಅಪರಿಚಿತರ ಜೊತೆ ಮಾತನಾಡಲೂ ಭಯವಾಗುತ್ತದೆ. ಇನ್ನೊಬ್ಬರಿಗೆ ಸಭೆ-ಸಮಾರಂಭಕ್ಕೆ ಹೋಗಲು ಭಯವಾಗುತ್ತದೆ, ಯಾರಿಗೋ ಮಕ್ಕಳ ಶಾಲೆಯಲ್ಲಿ ಪೋಷಕರ ಭೇಟಿಗೆ ಹೋಗುವ ಬಗ್ಗೆ ಒತ್ತಡವಿರುತ್ತದೆ. ಇಂತಹ ಹಲವಾರು ಪ್ರಸಂಗಗಳನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ಅನುಭವಿಸುತ್ತಿರುತ್ತೇವೆ. ನಮಗೆ ಯಾವುದಾದರೊಂದು ಕೃತಿಯನ್ನು ಮಾಡುವ ಬಗ್ಗೆ ಭಯವೆನಿಸುತ್ತಿದ್ದರೆ ಇಂತಹ ಪ್ರಸಂಗಗಳಿಗೆ ಅ೩ ಪದ್ಧತಿಯಿಂದ ಸ್ವಯಂಸೂಚನೆ ಕೊಟ್ಟು ಅದನ್ನ ಗೆಲ್ಲಬಹುದು.

ನಾವು ಯಾವುದಾದರೊಂದು ಕೃತಿಯನ್ನು ಮೊದಲ ಬಾರಿಗೆ ಮಾಡುತ್ತಿದ್ದರೆ ಅಥವಾ ಮನಸ್ಸು ನಕಾರಾತ್ಮಕ ಪರಿಣಾಮಗಳ ಬಗ್ಗೆ ವಿಚಾರ ಮಾಡಿ ಹೆದರುತ್ತಿದ್ದರೆ ನಾವು ಇಂತಹ ಕೃತಿಗಳನ್ನು ಮಾಡದೇ ಹೇಗೆ ತಪ್ಪಿಸಿಕೊಳ್ಳಬಹುದು ಎಂಬುದಾಗಿ ವಿಚಾರ ಮಾಡುವ ಪ್ರವೃತ್ತಿ ಇರುತ್ತದೆ. ಕೆಲವು ಪ್ರಸಂಗಗಳ ಬಗ್ಗೆ ಮನಸ್ಸಿನಲ್ಲಿ ಭಯ ಕೂತಿರುವುದರಿಂದ ಆ ಕೃತಿಗಳನ್ನು ನಾವು ಆತ್ಮವಿಶ್ವಾಸದಿಂದ ಮಾಡಲು ಆಗುವುದಿಲ್ಲ.

ಉದಾ: ವಿದ್ಯಾರ್ಥಿಗೆ ಪರೀಕ್ಷೆಯ ಬಗ್ಗೆ ಭಯವಿದ್ದರೆ ಪರೀಕ್ಷೆಯ ಸಮಯದಲ್ಲಿ ಅವನು ಯಾವುದನ್ನು ಸರಿಯಾಗಿ ಓದಿರುತ್ತಾನೆಯೋ ಅಥವಾ ಯಾವುದು ಅವನಿಗೆ ತಿಳಿಯುತ್ತದೆಯೋ ಅದನ್ನು ಕೂಡ ಅವನು ಮರೆತು ಬಿಡುತ್ತಾನೆ. ಇಂತಹ ಸಮಯದಲ್ಲಿ ಆತನ ಭಯವನ್ನು ದೂರಗೊಳಿಸುವುದಕ್ಕಾಗಿ ಅ ೩ ಸ್ವಯಂಸೂಚನಾ ಪದ್ಧತಿಯನ್ನು ಉಪಯೋಗಿಸುತ್ತಾರೆ. ಇಲ್ಲಿ ಗಮನಕ್ಕೆ ತೆಗೆದುಕೊಳ್ಳಬೇಕಾದ ಸಂಗತಿಯೆಂದರೆ ಅ-೩ ಸ್ವಯಂಸೂಚನೆ ಕೊಡುವುದರ ಜೊತೆಗೆ ಆಯಾಯ ಪ್ರಸಂಗಕ್ಕೆ ಅನುಗುಣವಾಗಿ ಹೊಸ ಹೊಸದಾಗಿ ಕಲಿಯುವುದು ಎಂಬ ಗುಣವನ್ನು ನಮ್ಮಲ್ಲಿ ಬೆಳೆಸಿಕೊಳ್ಳುವುದು ಕೂಡ ಆವಶ್ಯವಾಗಿರುತ್ತದೆ. ಅ ೩ ಸ್ವಯಂಸೂಚನೆಯನ್ನು ಕೊಟ್ಟು ವಿದ್ಯಾರ್ಥಿಯ ಪರೀಕ್ಷೆಯ ಭಯವನ್ನು ಹೋಗಲಾಡಿಸಬಹುದು; ಆದರೆ ಪರೀಕ್ಷೆಗೆ ಅಧ್ಯಯನ ಮಾಡುವುದಕ್ಕಾಗಿ ಮಾತ್ರ ವಿದ್ಯಾರ್ಥಿಯು ತಾನೇ ಸಮಯವನ್ನು ಕೊಡಬೇಕಾಗುವುದು.

ಇಳಿ ವಯಸ್ಸಿನ ಕೆಲವರಿಗೆ ಹೊಸ ಫೋನ್ ಉಪಯೋಗಿಸುವ ಬಗ್ಗೆ ಭಯವೆನಿಸುತ್ತದೆ. ಯಾವುದಾದರೂ ಕೀಯನ್ನು ಒತ್ತಿದರೆ ಫೋನ್ ಗೆ ಏನಾಗಿ ಬಿಡುವುದೋ ಎಂದೆನಿಸುತ್ತದೆ. ಇಂತಹ ಸಮಯದಲ್ಲಿ ಹೊಸ ಫೋನ್ ಉಪಯೋಗಿಸುವ ಬಗೆಗಿನ ಭಯವನ್ನು ಹೋಗಲಾಡಿಸುವುದಕ್ಕಾಗಿ ಸ್ವಯಂಸೂಚನೆಯು ಆವಶ್ಯಕವಾಗಿದೆ. ಆದರೆ ಹೊಸ ಫೋನ್ ಅನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಬಲ್ಲವರಿಂದ ತಿಳಿದುದುಕೊಳ್ಳುವುದೂ ಅಷ್ಟೇ ಆವಶ್ಯಕವಾಗಿದೆ.

ಆ. ಅ-೩ ಸ್ವಯಂಸೂಚನೆಯನ್ನು ಯಾವ ಸ್ವಭಾವದೋಷ ಗಳಿಗಾಗಿ ತೆಗೆದುಕೊಳ್ಳಬೇಕು ?

ಯಾವುದಾದರೊಂದು ಪ್ರಸಂಗದಲ್ಲಿ ‘ಇಂತಹ ಒಂದು ಕೃತಿಯನ್ನು ಮಾಡುವುದು ನನ್ನಿಂದ ಸಾಧ್ಯವಿಲ್ಲ ಅಥವಾ ಸಾಧ್ಯವಾಗಲಾರದು’ ಎಂಬ ನಕಾರಾತ್ಮಕ ಸಂಸ್ಕಾರವನ್ನು ದೂರಗೊಳಿಸುವುದಕ್ಕಾಗಿ ಈ ಪದ್ಧತಿಯನ್ನು ಉಪಯೋಗಿಸುತ್ತಾರೆ.

ಪಟ್ಟು ಹಿಡಿಯುವಿಕೆ ಇಲ್ಲದಿರುವುದು, ನೇತೃತ್ವವನ್ನು ತೆಗೆದುಕೊಳ್ಳದಿರುವುದು, ಸುಮ್ಮನೆ ಕೂರುವುದು, ಆತ್ಮವಿಶ್ವಾಸದ ಅಭಾವ, ಸೋಲನ್ನು ಒಪ್ಪುವುದು, ಕೀಳರಿಮೆ ಮುಂತಾದ ಸ್ವಭಾವದೋಷಗಳನ್ನು ದೂರಗೊಳಿಸುವುದಕ್ಕಾಗಿ ಈ ಪದ್ಧತಿಯನ್ನು ಉಪಯೋಗಿಸಲಾಗುತ್ತದೆ.

ಇ. ಈಗ ನಾವು ಒಂದು ಉದಾಹರಣೆಯ ಮೂಲಕ ಈ ಸ್ವಯಂಸೂಚನಾ ಪದ್ಧತಿಯ ಬಗ್ಗೆ ತಿಳಿದುಕೊಳ್ಳೋಣ.

ಪ್ರಸಂಗ ೧ : ತಿಂಗಳಿಗೆ ಬೇಕಾದ ದಿನಸಿ ಖರೀದಿಸುವುದಕ್ಕಾಗಿ ನನ್ನ ಯಜಮಾನರು ನನಗೆ ಬ್ಯಾಂಕಿನಿಂದ ಹಣ ತೆಗೆಯಲು ಹೇಳಿದಾಗ ‘ನಾನು ಒಬ್ಬಳೇ ಬ್ಯಾಂಕಿಗೆ ಹೋಗಿ ಹಣ ತರಲು ನನ್ನಿಂದ ಆಗುವುದೇ’ ಎಂಬುದರ ಬಗ್ಗೆ ಮನಸ್ಸಿನಲ್ಲಿ ಒತ್ತಡ ಉಂಟಾಯಿತು. ಆದ್ದರಿಂದ ನಾನು ಯಜಮಾನರಿಗೆ ಹೇಳಿದೆ, ‘ದಿನಸಿಗಳನ್ನು ತಡವಾಗಿ ತಂದರೂ ಪರವಾಗಿಲ್ಲ, ಆದರೆ ನೀವೇ ಬ್ಯಾಂಕಿನಿಂದ ಹಣ ತೆಗೆದುಕೊಂಡು ಬನ್ನಿ’.

ಈ ಪ್ರಸಂಗದ ಮೂಲದಲ್ಲೇನಿದೆಯೆಂದರೆ ‘ನಾನು ಒಬ್ಬಳೇ ಬ್ಯಾಂಕಿಗೆ ಹೋಗಿ ಹಣ ತರುವ ಆತ್ಮವಿಶ್ವಾಸವು ನನ್ನಲ್ಲಿಲ್ಲ’. ಈ ಕೀಳರಿಮೆಗೆ ‘ಅ ೩’ ಪದ್ಧತಿಯಿಂದ ಸ್ವಯಂಸೂಚನೆಯನ್ನು ಕೊಟ್ಟುಕೊಂಡು ಮುಂದೆ ಹೋಗಬಹುದು. ಅ ೩ ಪದ್ಧತಿಯಿಂದ ಸ್ವಯಂಸೂಚನೆ ತೆಗೆದುಕೊಳ್ಳುವುದೆಂದರೇನು ? ನಾವು ಆ ಕೃತಿಯನ್ನು ಆತ್ಮವಿಶ್ವಾಸದಿಂದಲೂ ಯಶಸ್ವಿಯಾಗಿಯೂ ಮಾಡಬಲ್ಲೆವು ಎಂದು ಕಲ್ಪಿಸಿಕೊಳ್ಳಬೇಕು. ಅ ೩ ಸ್ವಯಂಸೂಚನೆಯನ್ನು ವರ್ತಮಾನಕಾಲದಲ್ಲಿ ತಯಾರಿಸಬೇಕು. ಈ ಸ್ವಯಂಸೂಚನೆಯು ಅ ೧ ಮತ್ತು ಅ ೨ ಪದ್ಧತಿಗಳಂತೆ ಒಂದೆರಡು ಸಾಲುಗಳದ್ದಾಗಿರದೆ ಸ್ವಲ್ಪ ವಿವರವಾಗಿರುತ್ತದೆ.

ಬ್ಯಾಂಕಿನಿಂದ ಹಣ ತರುವ ಸಂದರ್ಭದಲ್ಲಿನ ಸೂಚನೆ ಹೇಗಿರಬಹುದು ಎಂಬುದನ್ನು ನೋಡೋಣ.

೧. ಯಜಮಾನರು ನನಗೆ ಬ್ಯಾಂಕಿನಿಂದ ಹಣ ತರಲು ಹೇಳುತ್ತಿದ್ದಾರೆ.
೨. ನಾನು ಯಜಮಾನರಿಂದ ಬ್ಯಾಂಕಿನಿಂದ ಹಣವನ್ನು ತೆಗೆಯುವ ಹಂತಗಳನ್ನು ತಿಳಿದುಕೊಳ್ಳುತ್ತಿದ್ದೇನೆ. ಈ ಅಂಶಗಳನ್ನು ನಾನು ನೋಟ್ ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ದೇನೆ.
೩. ಬ್ಯಾಂಕಿಗೆ ಹೋಗುವ ಮುನ್ನ ನಾನು ಬ್ಯಾಂಕಿನಿಂದ ಹಣ ತೆಗೆದುಕೊಳ್ಳುವ ಹಂತಗಳನ್ನು ಮತ್ತೊಮ್ಮೆ ಅಭ್ಯಾಸ ಮಾಡುತ್ತಿದ್ದೇನೆ.
೪. ನಾನು ಬ್ಯಾಂಕಿಗೆ ತಲುಪುತ್ತಿದ್ದೇನೆ.
೫. ಬ್ಯಾಂಕಿನೊಳಗೆ ಪ್ರವೇಶ ಮಾಡಿದ ನಂತರ ನಾನು ವಿತ್ ಡ್ರಾವಲ್ ಸ್ಲಿಪ್ ಅನ್ನು ತೆಗೆದುಕೊಂಡು ಅದನ್ನು ಸರಿಯಾಗಿ ತುಂಬಿಸುತ್ತಿದ್ದೇನೆ.
೬. ಯೋಗ್ಯವಾದ ಕೌಂಟರ್ ನ ಬಳಿ ಸಾಲಿನಲ್ಲಿ (ಕ್ಯೂ) ನಿಂತುಕೊಂಡು ನನ್ನ ಸರದಿ ಬರುವ ತನಕ ಶಾಂತವಾಗಿ ನಾಮಜಪವನ್ನು ಮಾಡುತ್ತಿದ್ದೇನೆ.
೭. ನನ್ನ ಸರದಿ ಬಂದಾಗ ನಾನು ಪಾಸ್ ಬುಕ್ ಹಾಗೂ ವಿತ್ ಡ್ರಾವಲ್ ಸ್ಲಿಪ್ ಅನ್ನು ಎದುರಿರುವ ಸಿಬ್ಬಂದಿಗೆ ಕೊಡುತ್ತಿದ್ದೇನೆ.
೮. ಸಿಬ್ಬಂದಿಯು ನನ್ನ ಪಾಸ್ ಬುಕ್ ಅನ್ನು ಸಂಸ್ಕರಿಸಿ ನನಗೆ ಬೇಕಾಗಿರುವ ಮೊತ್ತವನ್ನು ನನಗೆ ಕೊಡುತ್ತಿದ್ದಾರೆ.
೯. ನನ್ನ ಕೈಗೆ ಬಂದಿರುವ ಮೊತ್ತ ಸರಿಯಿದೆಯೇ ಎಂಬುದನ್ನು ನಾನು ಖಚಿತಪಡಿಸಿಕೊಳ್ಳುತ್ತಿದ್ದೇನೆ. ಪಾಸ್ ಬುಕ್ ಮತ್ತು ಹಣವನ್ನು ವ್ಯವಸ್ಥಿತವಾಗಿ ಚೀಲದಲ್ಲಿ ಇಡುತ್ತಿದ್ದೇನೆ.
೧೦. ನಾನು ಬ್ಯಾಂಕಿನಿಂದ ವ್ಯವಸ್ಥಿತವಾಗಿ ಹಣವನ್ನು ತೆಗೆದುಕೊಳ್ಳಲು ಸಾಧ್ಯವಾಯಿತು ಎಂಬುದರ ಬಗ್ಗೆ ನನಗೆ ಆನಂದವಾಯಿತು. ನಾನು ನನ್ನ ಉಪಾಸ್ಯದೇವತೆಯ ಚರಣಗಳಲ್ಲಿ ಅದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇನೆ.

ಈ ರೀತಿಯಲ್ಲಿ ನಾವು ಸ್ವಯಂಸೂಚನೆಯನ್ನು ಕೊಡುವುದಿದೆ. ಎಲ್ಲೆರಿಗೂ ಇದು ತಿಳಿಯಿತಲ್ಲವೇ ? ಪರೀಕ್ಷೆ ಎದುರಿಸುವುದು, ಸಂದರ್ಶನ ಅಥವಾ ಪ್ರೆಸೆಂಟೇಶನ್ ಕೊಡುವುದು ಇವುಗಳ ಒತ್ತಡ ಉಂಟಾಗುತ್ತಿದ್ದರೆ ಅ – ೩ ಪದ್ಧತಿಯಿಂದ ಸ್ವಯಂಸೂಚನೆಯನ್ನು ತೆಗೆದುಕೊಳ್ಳಬಹುದು. ಮತ್ತೊಂದು ಉದಾಹರಣೆಯ ಮೂಲಕ ಈ ಸೂಚನಾಪದ್ಧತಿಯನ್ನು ತಿಳಿದುಕೊಳ್ಳೋಣ.

ಪ್ರಸಂಗ ೨ : ವಿಭಾಗ ಪ್ರಮುಖರು ನನಗೆ ಸಾಫ್ಟ್ ವೇರ್ ಬಗ್ಗೆ ಎಲ್ಲ ಸಿಬ್ಬಂದಿಗಳೆದುರು ಪ್ರೆಸೆಂಟೇಶನ್ ಕೊಡಲು ಹೇಳಿದಾಗ ‘ನನಗೆ ಅವರೆದುರು ಸರಿಯಾಗಿ ಮಾತನಾಡಲು ಬರುವುದೇ? ಪ್ರೆಸೆಂಟೇಶನ್ ಅನ್ನು ಉತ್ತಮ ರೀತಿಯಲ್ಲಿ ಕೊಡಲು ಸಾಧ್ಯವಾಗುವುದೇ’ ಎಂಬಂತಹ ವಿಚಾರಗಳಿಂದ ಒತ್ತಡ ಉಂಟಾಯಿತು.

ಇದಕ್ಕೆ ಸ್ವಯಂಸೂಚನೆಯನ್ನು ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ.

೧. ವಿಭಾಗ ಪ್ರಮುಖರು ನನಗೆ ಸಾಫ್ಟ್ ವೇರ್ ನ ಬಗ್ಗೆ ಪ್ರೆಸೆಂಟೇಶನ್ ಕೊಡಲು ಹೇಳುತ್ತಿದ್ದಾರೆ.
೨. ನಾನು ವಿಭಾಗ ಪ್ರಮುಖರಿಂದ ಪ್ರೆಸೆಂಟೇಶನ್ ಎಷ್ಟು ಅವಧಿಯದ್ದಾಗಿರಬೇಕು, ಅದರಲ್ಲಿ ಯಾವ ಯಾವ ಅಂಶಗಳನ್ನು ಸೇರಿಸುವುದು ಇದೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದೇನೆ.
೩. ವಿಭಾಗ ಪ್ರಮುಖರು ಹೇಳುತ್ತಿರುವ ಅಂಶಗಳನ್ನು ನಾನು ಬರೆದುಕೊಳ್ಳುತ್ತಿದ್ದೇನೆ.
೪. ಪ್ರೆಸೆಂಟೇಶನ್ ಅನ್ನು ಸಿದ್ಧ ಮಾಡುವ ಮುನ್ನ ನಾನು ವಿಭಾಗ ಪ್ರಮುಖರು ಹೇಳಿರುವ ಅಂಶಗಳನ್ನು ಶಾಂತವಾಗಿ ಓದಿ ಅವುಗಳ ಅಭ್ಯಾಸ ಮಾಡುತ್ತಿದ್ದೇನೆ.
೫. ನಾನು ಭಗವಂತನ ಸ್ಮರಣೆ ಮಾಡಿ ಪಿಪಿಟಿ ಸ್ಲೈಡ್ಸ್ ಸಿದ್ಧಪಡಿಸುತ್ತಿದ್ದೇನೆ.
೬. ಸ್ಲೈಡ್ಸ್ ಗಳನ್ನು ಸಿದ್ಧಪಡಿಸಿದ ನಂತರ ನಾನು ಮತ್ತೊಮ್ಮೆ ಪರಿಶೀಲಿಸುತ್ತಿದ್ದೇನೆ.
೭. ನಾನು ಸ್ಲೈಡ್ ಗಳನ್ನು ಹಾಗೂ ಹೇಳಬೇಕಾಗಿರುವ ಅಂಶಗಳನ್ನು ಯಾವ ಕ್ರಮದಲ್ಲಿ ಹೇಳಬೇಕು ಎಂಬುದರ ಅಭ್ಯಾಸ ಮಾಡುತ್ತಿದ್ದೇನೆ.
೮. ವಿಭಾಗದಲ್ಲಿನ ಸಿಬ್ಬಂದಿಗಳೆದುರು ಪ್ರೆಸೆಂಟೇಶನ್ ಮಾಡುವ ಮೊದಲು ನಾನು ಮತ್ತೊಮ್ಮೆ ಎಲ್ಲ ಅಂಶಗಳನ್ನು ಓದುತ್ತಿದ್ದೇನೆ. ನನಗೆ ಎಲ್ಲ ಅಂಶಗಳು ನೆನಪಾಗುತ್ತಿವೆ.
೯. ನಾನು ಭಗವಂತನ ಸ್ಮರಣೆ ಮಾಡಿ ಶಾಂತವಾಗಿ, ಕ್ರಮವಾಗಿ, ಸಮರ್ಪಕ ಉದಾಹರಣೆಗಳೊಂದಿಗೆ ಪ್ರೆಸೆಂಟೇಶನ್ ಕೊಡುತ್ತಿದ್ದೇನೆ.
೧೦. ನನಗೆ ಎಲ್ಲ ಅಂಶಗಳನ್ನು ಸರಿಯಾಗಿ ಹೇಳಲು ಸಾಧ್ಯವಾಗುತ್ತಿದೆ.
೧೧. ನಾನು ಪೂರ್ಣ ಕಾಲಾವಧಿ ನಿರ್ಭೀತಿಯಿಂದ ಮಾತನಾಡಲು ಸಾಧ್ಯವಾಯಿತೆಂದು ನನಗೆ ಆನಂದವಾಯಿತು.
೧೨. ವಿಷಯವನ್ನು ಮಂಡಿಸಿದ ನಂತರ ನಾನು ದೇವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇನೆ.

ಪ್ರಸಂಗ ೩ : ನಾವು ಇದಕ್ಕೂ ಮೊದಲು, ಅಧ್ಯಾತ್ಮಪ್ರಚಾರವು ಸರ್ವೋತ್ತಮ ಸತ್ಸೇವೆಯಾಗಿದೆ ಎಂಬುದನ್ನು ನೋಡಿದ್ದೆವು. ಸಮಾಜವನ್ನು ಸಾಧನೆಯ ಕಡೆಗೆ ಹೊರಳಿಸುವ ಪ್ರಯತ್ನ ಮಾಡುವವರ ಮೇಲೆ ಭಗವಂತನ ಕೃಪೆಯಾಗುತ್ತದೆ. ಇಂತಹ ಜೀವಗಳು ಗುರುಕೃಪೆಗೂ ಪಾತ್ರವಾಗುತ್ತವೆ. ಸಮಾಜದಲ್ಲಿ ಅಧ್ಯಾತ್ಮಪ್ರಚಾರ ಮಾಡಬೇಕಿದ್ದರೆ ನಮಗೆ ಅಧ್ಯಾತ್ಮದ ಬಗ್ಗೆ ಏನು ತಿಳಿದಿದೆಯೋ ಅದನ್ನು ಆತ್ಮವಿಶ್ವಾಸದಿಂದ ಎದುರಿನ ವ್ಯಕ್ತಿಗೆ ಅಥವಾ ವ್ಯಕ್ತಿಗಳ ಸಮೂಹಕ್ಕೆ ಹೇಳಲು ಅಥವಾ ಮನವರಿಕೆ ಮಾಡಿಕೊಡಲು ಬರಬೇಕು.

ಈಗ ನಾವು, ನಮ್ಮ ನೆಂಟರಿಗೆ ಸಾಧನೆಯನ್ನು ಹೇಳಿ ಅಧ್ಯಾತ್ಮಪ್ರಚಾರ ಮಾಡುವುದಿದೆ ಎಂದು ಕಲ್ಪಿಸಿಕೊಳ್ಳೋಣ. ಸಾಧನೆಯನ್ನು ಹೇಳುವುದೆಂದರೆ ನಾವು ಏನು ಮಾಡಬೇಕು – ನಾವು ಇದುವರೆಗೆ ತಿಳಿದುಕೊಂಡಿರುವ ಕುಲದೇವಿಯ ನಾಮಜಪ ಮತ್ತು ದತ್ತಗುರುಗಳ ನಾಮಸ್ಮರಣೆಯ ಮಹತ್ವವನ್ನು ಅವರಿಗೆ ಹೇಳಬೇಕು.

ಕೆಲವರಿಗೆ ಭಾಷಣ ಕೌಶಲ್ಯವು ಇರುತ್ತದೆ ಮತ್ತು ಸಮೂಹದ ಎದುರು ಮಾತನಾಡಲು ಅವರಿಗೆ ಭಯವಾಗುವುದಿಲ್ಲ. ಆದರೆ ಕೆಲವರ ಮನಸ್ಸಿನಲ್ಲಿ ಒತಡವಿದ್ದು ಈ ರೀತಿ ವಿಚಾರಗಳಿರುತ್ತವೆ. ‘ನನಗೆ ಮಾತನಾಡಲು ಆಗುವುದೇ? ನನ್ನಿಂದ ಸಾಧನೆಯನ್ನು ಹೇಳಲು ಆಗುವುದೇ? ಎದುರಿನವರು ನನ್ನನ್ನು ಮರುಪ್ರಶ್ನಿಸಿದರೆ ನನಗೆ ಉತ್ತರ ಕೊಡಲು ಬರುವುದೇ? ಅವರಿಗೆ ಇದನ್ನು ಹೇಗೆ ಹೇಳುವುದು ? ಎಲ್ಲಿಂದ ಪ್ರಾರಂಭಿಸಬೇಕು ? ನನ್ನಿಂದ ಏನೂ ತಪ್ಪಾಗುವುದಿಲ್ಲ ತಾನೇ ? ಯಾರಾದರೂ ನನ್ನನ್ನು ಏನೂ ಅನ್ನುವುದಿಲ್ಲ ತಾನೇ ?’

ನಾವು ಸಾಧನೆ ಮಾಡಬೇಕಾದರೆ ಸ್ವಭಾವದೋಷಗಳ ಮೇಲೆ ಜಯ ಪಡೆಯುವುದರ ಒಟ್ಟಿಗೆ ಗುರುಸೇವೆಯನ್ನು ಮಾಡಲು ಆವಶ್ಯಕವಿರುವ ಗುಣಗಳನ್ನು ಮೈಗೂಡಿಸುವ ಆವಶ್ಯಕತೆಯಿದೆ. ಈಗಿನ ಈ ಪ್ರಸಂಗದ ವಿಚಾರ ಮಾಡಿದರೆ ಗಮನಕ್ಕೆ ಬರುವುದೇನೆಂದರೆ ಸಮಾಜಕ್ಕೆ ಸಾಧನೆಯನ್ನು ಹೇಳುವುದರ ಬಗ್ಗೆ ಒತ್ತಡ ಉಂಟಾಗುತ್ತಿದ್ದರೆ ಅದರ ಹಿಂದೆ ಆತ್ಮವಿಶ್ವಾಸದ ಕೊರತೆ, ನೇತೃತ್ವ ವಹಿಸಿಕೊಳ್ಳದಿರುವುದು, ಸೋಲನ್ನು ಒಪ್ಪಿಕೊಳ್ಳುವುದು ಇಂತಹ ಸ್ವಭಾವದೋಷಗಳಿರಬಹುದು. ಅ-೩ ಸ್ವಯಂಸೂಚನಾ ಪದ್ಧತಿಯಿಂದ ಇಂತಹ ಸ್ವಭಾವದೋಷಗಳ ಮೇಲೆ ಜಯವನ್ನು ಸಾಧಿಸಬಹುದು ಎಂಬುದನ್ನು ನಾವು ಈಗ ತಿಳಿದುಕೊಂಡಿದ್ದೇವೆ. ಮುಂದಿನ ಭಾಗದಲ್ಲಿ ನಾವು ಈ ಪ್ರಸಂಗಕ್ಕೆ ಪ್ರತ್ಯಕ್ಷ ಸ್ವಯಂಸೂಚನೆಯನ್ನು ತೆಗೆದುಕೊಳ್ಳೋಣ.

೧. ನಾನು ನನ್ನ ಸಾಧನೆಯೆಂದು ನನ್ನ ನೆಂಟರಿಷ್ಟರಿಗೆ ನಾಮಜಪ ಸಾಧನೆಯನ್ನು ಹೇಳುವುದಿದೆ. ಅವರೆಲ್ಲರೂ ನನ್ನೆದುರು ಮಾತನಾಡುತ್ತಾ ಕುಳಿತಿದ್ದಾರೆ.
೨. ಅವರಿಗೆ ಯಾವ ಅಂಶಗಳನ್ನು ಯಾವ ರೀತಿ ಹೇಳಬೇಕು ಎಂಬುದರ ಬಗ್ಗೆ ನಾನು ಮನಸ್ಸಿನಲ್ಲಿ ಚಿಂತನೆ ಹಾಗೂ ಅಭ್ಯಾಸ ಮಾಡುತ್ತಿದ್ದೇನೆ.
೩. ನನ್ನಿಂದ ಸಾಧನೆಯನ್ನು ಹೇಳುವ ಸೇವೆಯು ಭಗವಂತನಿಗೆ ಅಪೇಕ್ಷಿತವಾದ ರೀತಿಯಲ್ಲಿ ಆಗಲಿ ಎಂದು ನಾನು ದೇವರಲ್ಲಿ ಆರ್ತತೆಯಿಂದ ಪ್ರಾರ್ಥನೆಯನ್ನು ಮಾಡುತ್ತಿದ್ದೇನೆ.
೪. ಪ್ರಾರ್ಥನೆಯಾದ ನಂತರ ನಾನು ಅವರೊಂದಿಗೆ ಮಾತನ್ನು ಪ್ರಾರಂಭಿಸುತ್ತಿದ್ದೇನೆ.
೫. ನಾನು ಅವರೊಂದಿಗೆ ಮುಕ್ತವಾಗಿ ಹಾಗೂ ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದೇನೆ. ಸಾಧನೆಯ ಮಹತ್ವ, ಕುಲದೇವಿಯ ನಾಮಜಪದ ಮಹತ್ವ, ಕುಲದೇವಿಯ ನಾಮಜಪವನ್ನು ಹೇಗೆ ಮಾಡಬೇಕು, ಇದೆಲ್ಲವನ್ನು ಹೇಳುತ್ತಿದ್ದೇನೆ. ಪೂರ್ವಜರಿಂದ ಆಗುವ ತೊಂದರೆಯಿಂದ ಮುಕ್ತಿ ಕೊಡುವ ದತ್ತಗುರುಗಳ ನಾಮಜಪದ ಮಹತ್ವವನ್ನು ಹೇಳುತ್ತಿದ್ದೇನೆ.
೬. ನೆಂಟರಿಷ್ಟರು ಕೇಳುವ ಪ್ರಶ್ನೆಗಳಿಗೆ ನಾನು ಅತ್ಯಂತ ಸುಲಭವಾಗಿ ಉತ್ತರಗಳನ್ನು ನೀಡುತ್ತಿದ್ದೇನೆ.
೭. ಎಲ್ಲರೂ ಶಾಂತವಾಗಿ ವಿಷಯವನ್ನು ಕೇಳಿಸಿಕೊಳ್ಳುತ್ತಿದ್ದಾರೆ.
೮. ನಾನು ಎಲ್ಲ ಅಂಶಗಳನ್ನು ಯಾವಾಗ ಹೇಳಿ ಮುಗಿಸಿದೆ ಎಂಬುದು ನನಗೆ ತಿಳಿಯಲೇ ಇಲ್ಲ.
೯. ಈಶ್ವರನೇ ನನ್ನಿಂದ ಇದನ್ನು ಮಾಡಿಸಿಕೊಂಡನು ಎಂಬುದರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇನೆ.

ಈ ರೀತಿ ‘ಅ-೩’ ಪದ್ಧತಿಯಿಂದ ಸ್ವಯಂಸೂಚನೆಯನ್ನು ಕೊಟ್ಟು ಆತ್ಮವಿಶ್ವಾಸದ ಅಭಾವ ಈ ಸ್ವಭಾವದೋಷವನ್ನು ದೂರಗೊಳಿಸಬಹುದು.

ಈ ಪ್ರಸಂಗದಲ್ಲಿ ನಾವು ಇನ್ನೊಂದು ಮಹತ್ವದ ಅಂಶವನ್ನು ಗಮನಿಸಬೇಕಾಗಿದೆ. ಅದೇನೆಂದರೆ ಸಾಧನೆಯ ಮಹತ್ವವೆಂದು ಏನನ್ನು ಹೇಳಬೇಕು, ಯಾವ ಯಾವ ಅಂಶಗಳನ್ನು ನಾವು ಅದರಲ್ಲಿ ಸೇರಿಸಬೇಕು ಎಂಬುದನ್ನು ಅಭ್ಯಾಸ ಮಾಡುವುದು ಅಥವಾ ಸತ್ಸಂಗಸೇವಕರ ಜೊತೆ ಅಥವಾ ಅನ್ಯ ಜವಾಬ್ದಾರ ಸಾಧಕರ ಜೊತೆ ಮಾತನಾಡಿ ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಈ ರೀತಿ ಆಯೋಜನೆ ಮಾಡುವುದು ಬಾಹ್ಯ ಮನಸ್ಸಿನ ಮಟ್ಟದಲ್ಲಿ ಮಹತ್ವದ್ದಿರುತ್ತದೆಯಾದರೆ ಸ್ವಯಂಸೂಚನೆಯ ಅಭ್ಯಾಸ ಮಾಡುವುದು ಅಂತರ್ಮನಸ್ಸಿನ ಮಟ್ಟದಲ್ಲಿ ಮಹತ್ವದ್ದಾಗಿರುತ್ತದೆ.

ಯಾವುದಾದರೊಂದು ಪ್ರಸಂಗದಿಂದ ಅಥವಾ ಪರಿಸ್ಥಿತಿಯಿಂದ ನಮ್ಮ ಮನಸ್ಸಿಗೆ ಒತ್ತಡ ಉಂಟಾಗುತ್ತಿದ್ದರೆ ನಮ್ಮ ಮನಸ್ಸಿನ ಸ್ಥಿತಿ ಹೇಗಿರುತ್ತದೆ ಮತ್ತು ನಾವು ಆತ್ಮವಿಶ್ವಾಸದಿಂದ ಪ್ರಸಂಗಗಳನ್ನು ಎದುರಿಸುತ್ತಿದ್ದರೆ ಅದು ಹೇಗಿರುತ್ತದೆ ಎಂಬುದರ ವ್ಯತ್ಯಾಸವು ನಮಗೆ ಈ ಪ್ರಯೋಗದಿಂದ ಗಮನಕ್ಕೆ ಬಂದಿರಬಹುದು. ನಾವು ಪ್ರತಿಯೊಂದು ಪ್ರಸಂಗವನ್ನೂ ಎದುರಿಸಲೇಬೇಕು. ಪಲಾಯನ ಮಾಡಬಾರದು. ಅಲೆಗಳಿಗೆ ಹೆದರುವ ದೋಣಿ ಯಾವಾಗಲೂ ತೀರ ಸೇರಲು ಸಾಧ್ಯವಿಲ್ಲ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ.

Leave a Comment