ಆನ್‌ಲೈನ್ ಸತ್ಸಂಗ (15)

ಸ್ವಯಂಸೂಚನೆಗಳನ್ನು ತಯಾರಿಸುವಾಗ ವಹಿಸಬೇಕಾದ ಎಚ್ಚರಿಕೆಗಳು

ಸ್ವಭಾವದೋಷ-ನಿರ್ಮೂಲನಾ ಪ್ರಕ್ರಿಯೆಯಲ್ಲಿ ಇದುವರೆಗೆ ಅ ೧ ಮತ್ತು ಅ ೨ ಸ್ವಯಂಸೂಚನೆಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಈಗ ನಾವು ಸ್ವಯಂಸೂಚನೆಯನ್ನು ತಯಾರಿಸುವಾಗ ಅದು ಪರಿಣಾಮಕಾರಿಯಾಗಬೇಕು ಹಾಗೂ ಮನಸ್ಸಿಗೆ ಬೇಗನೆ ಸ್ವೀಕಾರವಾಗಬೇಕು ಎಂಬುದಕ್ಕಾಗಿ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ.

ಅ. ಸುಲಭ ವಾಕ್ಯರಚನೆ

ಸ್ವಯಂಸೂಚನೆಯನ್ನು ತಯಾರಿಸುವಾಗ ವಾಕ್ಯರಚನೆಯು ಯಾವಾಗಲೂ ಸುಲಭವಾಗಿರಬೇಕು ಹಾಗೂ ಯೋಗ್ಯ ಶಬ್ದಗಳನ್ನು ಉಪಯೋಗಿಸಿ ತಯಾರಿಸಿರಬೇಕು.

ಆ. ಸೂಚನೆಯಲ್ಲಿ ಸಕಾರಾತ್ಮಕ ಶಬ್ದಗಳನ್ನು ಬಳಸಬೇಕು

ಸೂಚನೆಯು ನಕಾರಾತ್ಮಕವಾಗಿರಬಾರದು. ಸೂಚನೆಯಲ್ಲಿ ಎಂದಿಗೂ ‘ಇಲ್ಲ’, ‘ಬೇಡ’ ಎಂಬಂತಹ ನಕಾರಾತ್ಮಕ ಪದಗಳನ್ನು ಬಳಸಬಾರದು. ಸೂಚನೆಯು ಯಾವಾಗಲೂ ಸಕಾರಾತ್ಮಕವಾಗಿಯೇ ಇರಬೇಕು.

ಉದಾ: ‘ನಾನು ಕಿರಿಕಿರಿ ಮಾಡಿಕೊಳ್ಳದೆ ಮಾತಾಡುವೆನು’ ಎಂದು ವಾಕ್ಯವನ್ನು ರಚಿಸುವ ಬದಲು ‘ನಾನು ಶಾಂತವಾಗಿ ಮಾತನಾಡುವೆನು’ ಎಂದು ಸೂಚನೆಯನ್ನು ರಚಿಸಬೇಕು. ‘ನಾನು ತಡವಾಗಿ ಏಳಲಾರೆನು’ ಎಂದು ವಾಕ್ಯವನ್ನು ರಚಿಸುವ ಬದಲು ‘ನಾನು ಬೇಗನೆ ಏಳುವೆನು’ ಎಂದು ವಾಕ್ಯವನ್ನು ರಚಿಸಬೇಕು.

ಇ. ಸ್ವಯಂ ಸೂಚನೆಯು ಯಾವಾಗಲೂ ಭೂತಕಾಲದ್ದಾಗಿರಬಾರದು. ಅ-೧ ಮತ್ತು ಅ-೨ ಸೂಚನಾಪದ್ಧತಿಗಳ ವಾಕ್ಯರಚನೆಯು ಭವಿಷ್ಯಕಾಲದ್ದಾಗಿರಬೇಕು.

ಈ. ಸೂಚನೆಯಲ್ಲಿ ‘ನಾವು’, ‘ನಮ್ಮದು’ ಇವುಗಳ ಬದಲು ‘ನಾನು’, ‘ನನ್ನದು’ ಎಂದು ಉಲ್ಲೇಖಿಸಬೇಕು

ಸ್ವಯಂಸೂಚನೆಯಲ್ಲಿ ‘ನಾವು’, ‘ನಮ್ಮದು’ ಹೀಗೆ ಪ್ರಥಮಪುರುಷ ಬಹುವಚನದಲ್ಲಿ ಉಲ್ಲೇಖ ಮಾಡದೇ ‘ನಾನು’, ‘ನನ್ನ’ ಹೀಗೆ ಪ್ರಥಮಪುರುಷ ಏಕವಚನದಲ್ಲಿ ಉಲ್ಲೇಖ ಮಾಡಬೇಕು.

ಉದಾ: ಸುನೀಲನು ‘ಓದಿದ್ದಾಯಿತಾ’ ಎಂದು ನನ್ನನ್ನು ಕೇಳಿದಾಗ ‘ನಾವು ಓದಿ ಆಯಿತು’ ಎಂದು ಶಾಂತವಾಗಿ ಹೇಳುವೆನು ಎಂದು ಹೇಳುವ ಬದಲು ‘ನಾನು ಓದಿ ಆಯಿತು’ ಎಂದು ಶಾಂತವಾಗಿ ಹೇಳುವೆನು ಎಂಬಂತೆ ವಾಕ್ಯರಚನೆ ಮಾಡಬೇಕು.

ಉ. ಸರ್ವಸಾಮಾನ್ಯ ಸೂಚನೆಯ ಬದಲು ನಿಖರವಾದ ಹಾಗೂ ಸಕಾರಾತ್ಮಕವಾದ ಸೂಚನೆಯನ್ನು ಕೊಡಬೇಕು

ಸ್ವಭಾವದೋಷಗಳಿಗೆ ವಿಶಿಷ್ಟ ಸೂಚನೆಯನ್ನು ಕೊಡಬೇಕು. ಸರ್ವಸಾಮಾನ್ಯ ಸೂಚನೆಯನ್ನು ಕೊಡಬಾರದು. ಸರ್ವೇಸಾಮಾನ್ಯ ಸೂಚನೆಗಿಂತ ಸ್ಥಳ, ಕಾಲ, ವೇಳೆ, ವ್ಯಕ್ತಿ, ಪ್ರಸಂಗ ಮತ್ತು ವಿಷಯ ಇವುಗಳ ಉಲ್ಲೇಖ ಮಾಡಿ ವಿಶಿಷ್ಟ ಸೂಚನೆಯನ್ನು ಕೊಟ್ಟರೆ ಅಂತರ್ಮನಸ್ಸಿಗೆ ಅದನ್ನು ಗ್ರಹಿಸಲು ಸುಲಭವಾಗುತ್ತದೆ.

ಉದಾ: ಯಾರಾದರೊಬ್ಬರು ನಮ್ಮ ಎದುರು ಬಂದಾಗ ನಮಗೆ ಆ ವ್ಯಕ್ತಿಯ ದೋಷಗಳೇ ಕಾಣುತ್ತವೆ. ಇದನ್ನು ತಪ್ಪಿಸುವುದಕ್ಕಾಗಿ ನಾವು ಸೂಚನೆಯನ್ನು ಕೊಟ್ಟುಕೊಳ್ಳುವುದಿದ್ದರೆ ಸಂಬಂಧಪಟ್ಟ ವ್ಯಕ್ತಿಯ ಹೆಸರನ್ನು ಹಾಗೂ ಗುಣಗಳನ್ನು ಸೂಚನೆಯಲ್ಲಿ ಉಲ್ಲೇಖಿಸಬೇಕು. “ಯಾರಾದರೂ ನನ್ನ ಎದುರು ಬಂದಾಗ ನಾನು ಆತನಲ್ಲಿರುವ ಸ್ವಭಾವದೋಷವನ್ನು ನೋಡದೇ ಗುಣಗಳನ್ನೇ ನೋಡುವೆನು” ಇದರ ಬದಲು “ಸುನಿಲನು ನನ್ನೆದುರು ಬಂದಾಗ ನನಗೆ ಆತನಲ್ಲಿರುವ ಪ್ರಾಮಾಣಿಕತೆ ಎಂಬ ಗುಣವೇ ಕಾಣುವುದು” ಎಂಬಂತೆ ನಿಖರವಾದ ಸೂಚನೆಯನ್ನು ತಯಾರಿಸಬೇಕು.

ಸರ್ವೇಸಾಮಾನ್ಯ ಸೂಚನೆಯನ್ನು ಏಕೆ ಕೊಡಬಾರದೆಂದರೆ ಅದರಲ್ಲಿ ನಮಗೆ ನಿಖರವಾಗಿ ಯಾವುದನ್ನು ಸುಧಾರಿಸಬೇಕಾಗಿದೆ ಎಂಬುದು ಗಮನಕ್ಕೆ ಬರುವುದಿಲ್ಲ. ನಾನು ಅವಸರ ಪಟ್ಟುಕೊಂಡು ಕೃತಿಯನ್ನು ಮಾಡಲಾರೆನು ಎಂಬ ಸರ್ವೇಸಾಮಾನ್ಯ ಸೂಚನೆಯನ್ನು ಕೊಟ್ಟರೆ ಅವಸರ ಪಟ್ಟುಕೊಂಡು ಕೃತಿಯನ್ನು ಮಾಡುವುದು ಎಂದರೇನು ಹಾಗೂ ಯೋಗ್ಯ ಕೃತಿಯು ಯಾವುದು ಎಂಬುದರ ಸೂಚನೆಯನ್ನು ಸೇರಿಸದಿರುವ ಕಾರಣ ಚಿತ್ತವು ಅದನ್ನು ಸ್ವೀಕರಿಸುವುದಿಲ್ಲ. ನಿಖರವಾದ ಸೂಚನೆಯನ್ನು ಕೊಟ್ಟರೆ ನಮಗೆ ನಿಜವಾಗಿಯು ನಮ್ಮ ತಪ್ಪು ಏನು ಎಂಬುದು ಮತ್ತು ಅದರಲ್ಲಿ ಯಾವ ಸುಧಾರಣೆಯನ್ನು ಮಾಡಬೇಕು ಎಂಬುದು ಸರಿಯಾಗಿ ತಿಳಿಯುತ್ತದೆ. ಆದ್ದರಿಂದ ‘ನಾನು ಗಡಿಬಿಡಿಯಿಂದ ಕೃತಿಯನ್ನು ಮಾಡುವುದಿಲ್ಲ’ ಎಂದು ಸರ್ವೇಸಾಮಾನ್ಯ ವಾಕ್ಯವನ್ನು ಬರೆಯುವ ಬದಲು ನಿಶ್ಚಿತ ಕೃತಿಯ ಉಲ್ಲೇಖ ಮಾಡಿ ವಾಕ್ಯವನ್ನು ರಚಿಸಬೇಕು. ಉದಾ: ‘ನಾನು ಚಹಾವನ್ನು ಅವಸರ ಪಟ್ಟುಕೊಂಡು ಗಾಳಿಸುತ್ತಿದ್ದರೆ ಅದು ಚೆಲ್ಲಬಹುದು ಎಂಬುದರ ಅರಿವಾಗಿ ನಾನು ಕಾಳಜಿ ಪೂರ್ವಕವಾಗಿಯೂ ನಿಧಾನವಾಗಿಯೂ ಚಹಾವನ್ನು ಗಾಳಿಸುವೆನು’.

ಊ. ಸ್ವಯಂಸೂಚನೆಗಳ ಹಂತಗಳು

೧. ಮೊದಲನೆಯ ಹಂತ : ಸ್ವಯಂಸೂಚನೆಯನ್ನು ಕೊಟ್ಟು ಕೊಳ್ಳುವುದರಲ್ಲಿ ಹಂತಗಳಿವೆ. ಪ್ರಾರಂಭದಲ್ಲಿ ನಾವು ಮೊದಲನೆಯ ಹಂತದ ಸೂಚನೆಯನ್ನು ಕೊಡಬೇಕು. ಸ್ವಯಂಸೂಚನೆಯ ಮೊದಲನೆಯ ಹಂತದಲ್ಲಿ ಆ ಸ್ವಭಾವದೋಷದಿಂದ ವ್ಯಕ್ತಿಗೆ ಆಗುವ ಹಾನಿಯ ಉಲ್ಲೇಖ ಇರಬೇಕು. ‘ಇಂತಹ ಒಂದು ಕೃತಿಯನ್ನು ಮಾಡಿದರೆ ನಿನಗೆ ಒಳ್ಳೆಯದಾಗುವುದು’ ಎಂದು ಹೇಳಿದರೆ ಮಾನವನ ಮನಸ್ಸು ಮೊದಲು ಅದನ್ನು ಸ್ವೀಕರಿಸಲು ಸಿದ್ಧವಾಗಿರುವುದಿಲ್ಲ. ಆದ್ದರಿಂದ ‘ನೀನು ಇಂತಹ ಒಂದು ಕೃತಿಯನ್ನು ಮಾಡದಿದ್ದರೆ ನಿನಗೆ ಇಂತಹ ಒಂದು ನಷ್ಟವಾಗುವುದು’ ಎಂದು ಹೇಳಿ ಅಪಾಯದ ಅರಿವನ್ನು ಮಾಡಿಕೊಟ್ಟರೆ ಮನಸ್ಸು ಆ ವ್ಯಕ್ತಿಯನ್ನು ಆ ಕೃತಿಯನ್ನು ಮಾಡುವುದರಿಂದ ದೂರವಿಡುತ್ತದೆ. ಈ ತತ್ತ್ವವನ್ನು ಉಪಯೋಗಿಸಿ ಮೊದಲನೆಯ ಹಂತದಲ್ಲಿ ಸ್ವಯಂಸೂಚನೆಯನ್ನು ಕೊಟ್ಟರೆ ಅದು ಪರಿಣಾಮಕಾರಿಯಾಗಿರುತ್ತದೆ. ಇದನ್ನು ನಾವು ಒಂದು ಉದಾಹರಣೆಯ ಮೂಲಕ ತಿಳಿದುಕೊಳ್ಳೋಣ.

ಉದಾ : ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡುವ ಮೊದಲು ಹೆಲ್ಮೆಟ್ ಅನ್ನು ಧರಿಸುವುದು ಬೇಡ ಎಂದು ವಿಚಾರ ಮಾಡಿದರೆ ಹೆಲ್ಮೆಟ್ ಅನ್ನು ಉಪಯೋಗಿಸುವುದರ ಮಹತ್ವವನ್ನು ಬಿಂಬಿಸುವುದಿದ್ದರೆ…

ಈ ಸೂಚನೆಯಲ್ಲಿ ‘ಹೆಲ್ಮೆಟ್ ಧರಿಸದಿದ್ದರೆ ಅಪಘಾತವಾದ ಸಂದರ್ಭದಲ್ಲಿ ಪ್ರಾಣ ಹೋಗುವ ಸಂಭವವಿದೆ’ ಎಂಬ ಅರಿವನ್ನು ಅಂತರ್ಮನಸ್ಸಿಗೆ ಮಾಡಿಕೊಟ್ಟರೆ ಅಪಘಾತದಲ್ಲಿ ಜೀವ ಹೋಗುವ ಭಯದಿಂದಾಗಿ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡುವಾಗ ಹೆಲ್ಮೆಟ್ ಅನ್ನು ಧರಿಸುವುದರ ಗಾಂಭೀರ್ಯತೆಯು ಗಮನಕ್ಕೆ ಬರುತ್ತದೆ.

೩.ಎರಡನೆಯ ಹಂತ : ಸ್ವಯಂಸೂಚನೆಯ ಎರಡನೆಯ ಹಂತದಲ್ಲಿ ಯೋಗ್ಯ ಕೃತಿಯನ್ನು ಮಾಡಿದರೆ ತನಗೆ ಆಗುವ ಲಾಭದ ಬಗ್ಗೆ ಅಂತರ್ಮನಸ್ಸಿನಲ್ಲಿ ಅರಿವು ಮೂಡಿಸುವುದಿರುತ್ತದೆ. ಇದರಿಂದ ಯೋಗ್ಯ ಕೃತಿ ಮಾಡಲು ಪ್ರೋತ್ಸಾಹ ಸಿಗುತ್ತದೆ.

ಇಲ್ಲಿ ‘ದ್ವಿಚಕ್ರ ವಾಹನವನ್ನು ಚಲಿಸುವಾಗ ಹೆಲ್ಮೆಟ್ ಉಪಯೋಗಿಸುವುದರಿಂದ ಪ್ರಯಾಣವು ಸುರಕ್ಷಿತವಾಗುತ್ತದೆ’ ಎಂಬುದರ ಅರಿವಾಗುತ್ತದೆ ಮತ್ತು ಯೋಗ್ಯ ಕೃತಿಯಾಗುತ್ತದೆ.

೩. ಮೂರನೆಯ ಹಂತ : ಸ್ವಯಂಸೂಚನೆಯ ಮೂರನೆಯ ಹಂತದಲ್ಲಿ ಯೋಗ್ಯ ಕೃತಿ ಮಾಡುವುದರಿಂದ ತನಗೆ ಹಾಗೂ ಇತರರಿಗೆ ಆಗುವ ಲಾಭದ ಉಲ್ಲೇಖ ಮಾಡಬೇಕು. ಇದರಿಂದಾಗಿ ತನ್ನೊಂದಿಗೆ ಇತರರ ಹಿತದ ಕುರಿತು ವಿಚಾರ ಮಾಡುವ ಅಭ್ಯಾಸವಾಗುತ್ತದೆ.

ಇಲ್ಲಿ ‘ಸಂಚಾರ ನಿಯಮಗಳ ಪಾಲನೆಯಾಗಿ ಇತರ ಪ್ರಯಾಣಿಕರ ಪ್ರಯಾಣವು ಕೂಡ ಸುರಕ್ಷಿತವಿರುತ್ತದೆ’ ಎಂಬುದರ ಅರಿವಾಗುತ್ತದೆ ಮತ್ತು ಯೋಗ್ಯ ಕೃತಿಯಾಗುತ್ತದೆ.

೪. ನಾಲ್ಕನೆಯ ಹಂತ : ಸ್ವಯಂಸೂಚನೆಯ ನಾಲ್ಕನೆಯ ಹಂತದಲ್ಲಿ ಯೋಗ್ಯ ಕೃತಿ ಆಗಬೇಕೆಂಬುದಕ್ಕಾಗಿ ಅವಶ್ಯಕವಿರುವ ಸೂತ್ರಗಳನ್ನು ಸ್ವಯಂಸೂಚನೆಯಲ್ಲಿ ಸೇರಿಸಿಕೊಳ್ಳಬೇಕು.

ಎ. ಸ್ವಯಂಸೂಚನೆಯಯು ಅಂತರ್ಮುಖತೆಯನ್ನು ನಿರ್ಮಾಣ ಮಾಡುವಂತಹದ್ದಾಗಿರಬೇಕು

ಸ್ವಯಂಸೂಚನೆಯು ವ್ಯಕ್ತಿಯನ್ನು ಬಹಿರ್ಮುಖವನ್ನಾಗಿಸುವ ಬದಲು ಅಂತರ್ಮುಖವನ್ನಾಗಿಸುವಂತಹದ್ದಾಗಿರಬೇಕು.

‘ಯಾವಾಗ ತಂದೆಯವರು ‘ಆಟವನ್ನು ನಿಲ್ಲಿಸಿ ಅಧ್ಯಯನ ಮಾಡು’ ಎಂದು ಗದರಿಸಿ ಹೇಳುವರೋ ಆಗ ಅವರು ಕೋಪಿಷ್ಠರಾಗಿದ್ದಾರೆ ಎಂದು ವಿಚಾರ ಮಾಡಿ ನಾನು ಅವರ ಕಡೆ ದುರ್ಲಕ್ಷ್ಯ ಮಾಡುವೆನು’, ಎಂದು ಸ್ವಯಂಸೂಚನೆಯನ್ನು ಕೊಟ್ಟರೆ ‘ಅಪ್ಪ ಕೋಪಿಷ್ಠರಾಗಿದ್ದಾರೆ’, ‘ಅವರ ಕಡೆ ನಾನು ದುರ್ಲಕ್ಷ್ಯ ಮಾಡಬೇಕು’ ಎಂಬುವುದೇ ಮನಸ್ಸಿನ ಮೇಲೆ ಬಿಂಬಿತವಾಗುತ್ತದೆ. ಹೀಗಾದರೆ ನಾವು ಬಹಿರ್ಮುಖತೆಯ ಕಡೆ ಹೋದಂತಾಗುವುದು. ಆದರೆ ತನ್ನನ್ನು ಅಂತರ್ಮುಖವನ್ನಾಗಿಸಿಕೊಳ್ಳುವುದು ಪ್ರಕ್ರಿಯೆಯ ಉದ್ದೇಶವಾಗಿದೆ. ಆದ್ದರಿಂದ ಈ ಪ್ರಸಂಗದಲ್ಲಿ ಸೂಚನೆಯನ್ನು ಹೇಗೆ ಕೊಡಬಹುದೆಂದರೆ ‘ಅಪ್ಪ ನನಗೆ ‘ಆಟವನ್ನು ನಿಲ್ಲಿಸಿ ಅಧ್ಯಯನ ಮಾಡು’ ಎಂದು ಗದರಿಸಿ ಹೇಳಿದಾಗ ‘ನನಗೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳು ಬರಬೇಕು’ ಎಂಬುದಕ್ಕಾಗಿ ಅವರು ಹಾಗೆ ಹೇಳುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬರುವುದು ಮತ್ತೆ ನಾನು ಕೂಡಲೇ ಆಟವನ್ನು ನಿಲ್ಲಿಸಿ ಅಧ್ಯಯನವನ್ನು ಪ್ರಾರಂಭಿಸುವೆನು.’

Leave a Comment