ಶ್ರೀರಾಮ ಮಂದಿರ ಭೂಮಿಪೂಜೆ (5.8.2020)

ಶ್ರೀರಾಮ ಮಂದಿರ ಭೂಮಿಪೂಜೆ (5.8.2020)

ಶ್ರೀರಾಮಮಂದಿರದ ಭೂಮಿಪೂಜೆಯ ಮಂಗಲಮಯ ದಿನ ಭೂಲೋಕದಲ್ಲಿ |
ಕೇಸರಿ ಧ್ವಜಗಳು ಹಾರಾಡಲಿ, ರಾಮನಾಮ ಮೊಳಗಲಿ ಮನೆ-ಮನದಲ್ಲಿ ||

ಪ್ರಭು ಶ್ರೀರಾಮಚಂದ್ರನ ಕೃಪೆಯಿಂದ ೫ ಆಗಸ್ಟ್ ೨೦೨೦ ರಂದು ಪುಣ್ಯಭೂಮಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಭೂಮಿಪೂಜೆ ನಡೆಯಲಿದೆ. ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ಪ್ರಾರಂಭವಾಗುವುದು ಇದು ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಒಂದು ಮೈಲಿಗಲ್ಲು! ಹಿಂದುಗಳಿಗೋಸ್ಕರ ಇಂದೊಂದು ಆನಂದೋತ್ಸವವೇ ! ಮಾತ್ರವಲ್ಲ, ರಾಮಜನ್ಮಭೂಮಿಯ ಮುಕ್ತಿಗಾಗಿ ಅವಿರತ ಪ್ರಯತ್ನಗಳನ್ನು ಮಾಡಿದ, ತಮ್ಮ ಪ್ರಾಣವನ್ನೇ ಅರ್ಪಿಸಿದಂತಹ ರಾಮಭಕ್ತರನ್ನು ಸ್ಮರಿಸುವ ದಿನವಿದು. ಈ ದಿನದಂದು ಎಲ್ಲರೂ ಮುಂದಿನಂತೆ ಈ ಕೃತಜ್ಞತೆಯ ಉತ್ಸವವನ್ನು ಆಚರಿಸಿ ಶ್ರೀರಾಮನ ಕೃಪೆಯನ್ನು ಸಂಪಾದಿಸೋಣ.

1. ಮನೆಯ ಮೇಲೆ ಕೇಸರಿ ಧ್ವಜವನ್ನು ಹಾರಿಸಿ !

2. ಮನೆ ಎದುರು ಶ್ರೀರಾಮತತ್ತ್ವದ ರಂಗೋಲಿ ಬಿಡಿಸಿ ! (ಕ್ಲಿಕ್ ಮಾಡಿ)

3. ಬೆಳಗ್ಗೆ ಪ್ರಭು ಶ್ರೀರಾಮನ ಭಾವಚಿತ್ರದ ಪೂಜೆ ಮಾಡಿ, ದೇವರ ಎದುರು ಎಣ್ಣೆ ದೀಪವನ್ನು ಹಚ್ಚಿ !

4. ದಿನವಿಡೀ ಶ್ರೀರಾಮ ಜಯ ರಾಮ ಜಯ ಜಯ ರಾಮ | ಎಂಬ ನಾಮಜಪವನ್ನು ಹೆಚ್ಚೆಚ್ಚು ಮಾಡಿ ! (ಕ್ಲಿಕ್ ಮಾಡಿ)

5. ಸಾಯಂಕಾಲ ಮನೆ ಎದುರು ಎರಡು ಎಣ್ಣೆ ದೀಪ ಹಚ್ಚಿ !

6. ಮನೆಯಲ್ಲಿ ಕುಟುಂಬದವರೆಲ್ಲರೂ ಒಟ್ಟು ಸೇರಿ ಸಾಮೂಹಿಕವಾಗಿ ಶ್ರೀರಾಮರಕ್ಷಾ ಸ್ತೋತ್ರವನ್ನು ಪಠಿಸಿ ! (ಕ್ಲಿಕ್ ಮಾಡಿ)

7. ಶ್ರೀರಾಮನಿಗೆ ಅಪೇಕ್ಷಿತ ರಾಮರಾಜ್ಯ (ಹಿಂದೂ ರಾಷ್ಟ್ರ) ಬೇಗನೆ ಬರಲಿ, ಎಂದು ಭಾವಪೂರ್ಣ ಪ್ರಾರ್ಥನೆ ಮಾಡಿ !

– ಶ್ರೀಚಿತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್, ಸನಾತನ ಆಶ್ರಮ, ರಾಮನಾಥಿ ಆಶ್ರಮ.

1 thought on “ಶ್ರೀರಾಮ ಮಂದಿರ ಭೂಮಿಪೂಜೆ (5.8.2020)”

Leave a Comment