ಡಿಸೆಂಬರ್ ೩೧ ರ ರಾತ್ರಿ ‘ನ್ಯೂ ಇಯರ್ ಪಾರ್ಟಿ’ಯಲ್ಲಿ ಭಾಗವಹಿಸುವವರ ಮೇಲಾಗುವ ಅಲ್ಲಿಯ ವಾತಾವರಣದ ನಕಾರಾತ್ಮಕ ಪ್ರಭಾವ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ‘ಯು.ಎ.ಎಸ್‌. (ಯೂನಿವರ್ಸಲ್ ಔರಾ ಸ್ಕ್ಯಾನರ್)’ ಮುಖಾಂತರ ನಡೆದ ವೈಜ್ಞಾನಿಕ ಸಂಶೋಧನೆ

ಚೈತ್ರ ಶುಕ್ಲ ಪಕ್ಷ ಪ್ರತಿಪದೆಗೆ, ಅಂದರೆ ಯುಗಾದಿಯಂದು ಹಿಂದೂಗಳ ವರ್ಷಾರಂಭವಾಗುತ್ತದೆ. ಆದರೂ ಭಾರತದಲ್ಲಿ ಅನೇಕ ವರ್ಷಗಳಿಂದ 31 ಡಿಸೆಂಬರ್‌ಗೆ ರಾತ್ರಿ 12 ಗಂಟೆಗೆ ಹೊಸವರ್ಷವನ್ನು ಸ್ವಾಗತಿಸುವುದು ರೂಢಿಯಾಗಿದೆ. ಡಿಸೆಂಬರ್ 31 ರಂದು ಯಾವುದಾದರೊಂದು ಹೋಟೆಲ್‌ನಲ್ಲಿ ಆಚರಿಸಲಾಗುವ ನ್ಯೂ ಇಯರ್ ಪಾರ್ಟಿಯಲ್ಲಿ ಭಾಗವಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಡಿಸೆಂಬರ್ 31 ರ ರಾತ್ರಿ ‘ನ್ಯೂ ಇಯರ್ ಪಾರ್ಟಿ’ಯಲ್ಲಿ ಭಾಗವಹಿಸಿ ‘ಹೊಸ ವರ್ಷ’ವನ್ನು ಸ್ವಾಗತಿಸುವವರ ಮೇಲೆ ಯಾವ ರೀತಿಯಲ್ಲಿ ಅಲ್ಲಿಯ ವಾತಾವರಣದ ಪರಿಣಾಮವಾಗುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಒಂದು ಸಂಶೋಧನೆಯನ್ನು ನಡೆಸಿತು. ಅದರಲ್ಲಿ ‘ಯು.ಎ.ಎಸ್‌. (ಯೂನಿವರ್ಸಲ್ ಔರಾ ಸ್ಕ್ಯಾನರ್)’ ಎಂಬ ಉಪಕರಣವನ್ನು ಉಪಯೋಗಿಸಲಾಯಿತು. (ಈ ಉಪಕರಣದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.)

1. ಸಂಶೋಧನೆಯ ಸ್ವರೂಪ

ಈ ಪ್ರಯೋಗದಲ್ಲಿ ಒಟ್ಟು 11 ಸಾಧಕರು (3 ಭಾರತೀಯ ಮತ್ತು 8 ವಿದೇಶಿ ಸಾಧಕರು) ಭಾಗವಹಿಸಿದ್ದರು. ಅದರಲ್ಲಿ 8 ಸಾಧಕರಿಗೆ ತೀವ್ರ ಆಧ್ಯಾತ್ಮಿಕ ತೊಂದರೆಯಿದ್ದು (ಟಿಪ್ಪಣಿ 1) ಉಳಿದ 3 ಸಾಧಕರಿಗೆ ಯಾವುದೇ ರೀತಿಯ ಆಧ್ಯಾತ್ಮಿಕ ತೊಂದರೆ ಇಲ್ಲ. ಈ ಮೂವರು ಸಾಧಕರಲ್ಲಿ ಒಬ್ಬರ ಆಧ್ಯಾತ್ಮಿಕ ಮಟ್ಟ ಶೇ. 62 ರಷ್ಟಿದ್ದು (ಟಿಪ್ಪಣಿ 2), ಉಳಿದಿಬ್ಬರ ಆಧ್ಯಾತ್ಮಿಕ ಮಟ್ಟ ಶೇ. 60 ಕ್ಕಿಂತ ಕಡಿಮೆ ಇತ್ತು. ಈ ಸಂಶೋಧನೆಗೆಂದು ಎಲ್ಲರೂ ಕೂಡ ಪಾಶ್ಚಾತ್ಯ ರೀತಿಯಲ್ಲಿ ಕೇಶಾಲಂಕಾರ (ಹೇರ್ ಸ್ಟೈಲ್) ಮೇಕ್ಅಪ್ ಮತ್ತು ಬಟ್ಟೆಗಳನ್ನು ಧರಿಸಿ, ಗೋವಾ ರಾಜ್ಯದ ಒಂದು ಪ್ರಸಿದ್ಧ ಹೋಟೆಲ್‌ನಲ್ಲಿ ನಡೆಯುವ ನ್ಯೂ ಇಯರ್ ಪಾರ್ಟಿಯಲ್ಲಿ ಭಾಗವಸಿದರು. ಎಲ್ಲ ಸಾಧಕರೂ ಅಲ್ಲಿ ೫ ಗಂಟೆಗಳ ಕಾಲ ಕಳೆದರು. 31.12.2018 ರಂದು ರಾತ್ರಿ ಪಾರ್ಟಿಯಲ್ಲಿ ಭಾಗವಹಿಸುವ ಮೊದಲು ಮತ್ತು 1.1.2019 ರಂದು ಪಾರ್ಟಿಯಲ್ಲಿ ಭಾಗವಹಿಸಿದ ನಂತರ ‘ಯು.ಎ.ಎಸ್‌.’ಉಪಕರಣದಿಂದ ಮಾಡಿದ ಪ್ರಯೋಗದ ನೋಂದಣಿಗಳನ್ನು ಬರೆದಿಡಲಾಯಿತು. ನಂತರ ಇವೆಲ್ಲವುಗಳ ತುಲನಾತ್ಮಕ ಅಧ್ಯಯನವನ್ನು ಮಾಡಲಾಯಿತು.

ಟಿಪ್ಪಣಿ 1 – ಆಧ್ಯಾತ್ಮಿಕ ತೊಂದರೆ : ಓರ್ವ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಕಂಡುಬಂದರೆ ಅವರಿಗೆ ಆಧ್ಯಾತ್ಮಿಕ ತೊಂದರೆ ಇದೆ ಎಂದರ್ಥ. ಓರ್ವ ವ್ಯಕ್ತಿಯಲ್ಲಿ ಶೇ. 50 ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಕಂಡುಬಂದರೆ ಅವರಿಗೆ ತೀವ್ರ ಆಧ್ಯಾತ್ಮಿಕ ತೊಂದರೆ ಇದೆ ಎಂದೂ, ಶೇ. 30 ರಿಂದ ಶೇ. 49 ರಷ್ಟಿದ್ದರೆ ಅವರಿಗೆ ಮಾಧ್ಯಮ ಸ್ತರದ ತೊಂದರೆ ಇದೆ ಎಂದೂ, ಶೇ. 30 ಕ್ಕಿಂತಲೂ ಕಡಿಮೆ ತೊಂದರೆ ಇದ್ದರೆ ಅವರಿಗೆ ಮಂದ ಆಧ್ಯಾತ್ಮಿಕ ತೊಂದರೆ ಇದೆ ಎಂದಾಗುತ್ತದೆ. ಆಧ್ಯಾತ್ಮಿಕ ತೊಂದರೆಗೆ ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಕಾರಣಗಳಿರುತ್ತವೆ. ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ತಿಳಿಯಬಲ್ಲವರು ಆಧ್ಯಾತ್ಮಿಕ ತೊಂದರೆಯ ಪರಿಹಾರವನ್ನು ಸೂಚಿಸಬಲ್ಲರು.

ಟಿಪ್ಪಣಿ 2 : ಶೇ. ೬೦ ಆಧ್ಯಾತ್ಮಿಕ ಮಟ್ಟ ತಲುಪುವ ಮಹತ್ವ : ಕಲಿಯುಗದಲ್ಲಿ ನಿರ್ಜಿವ ವಸ್ತುಗಳ ಆಧ್ಯಾತ್ಮಿಕ ಮಟ್ಟ ಶೇ. 1 ರಷ್ಟಿದ್ದರೆ, ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಶೇ. 20 ರಷ್ಟಿರುತ್ತದೆ ಮತ್ತು ಮೋಕ್ಷ (ಅಂದರೆ ಈಶ್ವರ) ಶೇ. 100 ರಷ್ಟಿರುತ್ತದೆ. ಸಾಮಾನ್ಯ ವ್ಯಕ್ತಿಯು ಕೇವಲ ತನ್ನ ಸುಖ-ದುಃಖದ ಬಗ್ಗೆ ವಿಚಾರ ಮಾಡುತ್ತಾನೆ. ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. 60 ತಲುಪಿದಾಗ ಅವನು ಮಾಯೆಯಿಂದ ಅಲಿಪ್ತನಾಗಲು ಪ್ರಾರಂಭವಾಗಿ ಆತನು ಜನ್ಮ ಮೃತ್ಯುಗಳ ಚಕ್ರದಿಂದ ಬಿಡುಗಡೆ ಹೊಂದುತ್ತಾನೆ.

ಟಿಪ್ಪಣಿ 3 : ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ೮ ಸಾಧಕರ ನೋಂದಣಿಗಳಲ್ಲಿ ಸಮಾನ ಲಕ್ಷಣಗಳು (ಟ್ರೆಂಡ್) ಕಂಡುಬಂದವು. ಅದೇ ರೀತಿ ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ೩ ಸಾಧಕರ ನೋಂದಣಿಗಳಲ್ಲಿ ಸಮಾನ ಲಕ್ಷಣಗಳು (ಟ್ರೆಂಡ್) ಕಂಡುಬಂದವು. ಆದುದರಿಂದ ಈ ಲೇಖನದಲ್ಲಿ ಎಲ್ಲ ಸಾಧಕರ ನೊಂದಣಿಗಳನ್ನು ನೀಡದೇ, ಉದಾಹರಣೆಗೆಂದು ತೀವ್ರ ಆಧ್ಯಾತ್ಮಿಕ ತೊಂದರೆ ಇರುವ 2 ಸಾಧಕರ, ಆಧಾತ್ಮಿಕ ತೊಂದರೆ ಇಲ್ಲದಿರುವ ಓರ್ವ ಸಾಧಕರ ಹಾಗೆಯೇ ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಹಾಗೂ ಶೇ. 62 ಆಧ್ಯಾತ್ಮಿಕ ಮಟ್ಟವಿರುವ ಸಾಧಕನ, ಅಂದರೆ ಒಟ್ಟಿಗೆ 4 ಸಾಧಕರ ನೋಂದಣಿಗಳನ್ನು ನೀಡುತ್ತಿದ್ದೇವೆ.

2. ನೋಂದಣಿಗಳು ಮತ್ತು ವಿವೇಚನೆ

2ಅ. ನಕಾರಾತ್ಮಕ ಶಕ್ತಿಯ ಸಂದರ್ಭದಲ್ಲಿ ಮಾಡಿದ ನೋಂದಣಿಗಳ ವಿವೇಚನೆ

2ಅ 1. ಪಾರ್ಟಿಯಿಂದ ಹಿಂದಿರುಗಿದ ನಂತರ ಎಲ್ಲ ಸಾಧಕರಲ್ಲಿ ‘ಇನ್ಫ್ರಾರೆಡ್’ ನಕಾರಾತ್ಮಕ ಶಕ್ತಿಯಲ್ಲಿ ತುಂಬಾ ಹೆಚ್ಚಳವಾಗಿರುವುದು ಕಂಡುಬರುವುದು : ನ್ಯೂ ಇಯರ್ ಪಾರ್ಟಿಗೆ ಹೋಗುವ ಮೊದಲು ನಡೆಸಿದ ಪರೀಕ್ಷಣೆಯಲ್ಲಿ ಎಲ್ಲ ಸಾಧಕರಲ್ಲಿ ಇನ್ಫ್ರಾರೆಡ್ ನಕಾರಾತ್ಮಕ ಶಕ್ತಿಯು ಕಂಡುಬಂತು. ಪಾರ್ಟಿಯಿಂದ ಹಿಂದಿರುಗಿದ ನಂತರ ಈ ಸಾಧಕರಲ್ಲಿರುವ ಈ ನಕಾರಾತ್ಮಕ ಶಕ್ತಿಯಲ್ಲಿ ತುಂಬಾ ಹೆಚ್ಚಳವಾಗಿರುವುದು ಕಂಡುಬಂತು,ಅದನ್ನು ಮುಂದಿನ ಕೋಷ್ಟಕದಲ್ಲಿ ನೀಡಲಾಗಿದೆ.

ಪರೀಕ್ಷಣೆಯಲ್ಲಿ ಭಾಗವಹಿಸಿದ ಸಾಧಕ  ಇನ್ಫ್ರಾರೆಡ್ (ನಕಾರಾತ್ಮಕ) ಶಕ್ತಿಯ ಪ್ರಭಾವಲಯ (ಮೀಟರ್)
ಪಾರ್ಟಿಗೆ ಹೋಗುವ ಮೊದಲು  ಪಾರ್ಟಿಯಿಂದ ಹಿಂದಿರುಗಿದ ನಂತರ ಪ್ರಭಾವಲಯಲ್ಲಿ ಆದ ಹೆಚ್ಚಳ
1. ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕ 2.44 11.09 7.65
2. ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕಿ 2.17 10.56 8.39
3. ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಸಾಧಕ 1.54 9.00 7.56
4. ಶೇ. ೬೨ ಆಧ್ಯಾತ್ಮಿಕ ಮಟ್ಟವಿರುವ ಸಾಧಕ 1.41 6.26 4.85

ಈ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.

ಅ. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಇಬ್ಬರಲ್ಲಿಯೂ ನಕಾರಾತ್ಮಕ ಶಕ್ತಿಯ ಪ್ರಭಾವಲಯದಲ್ಲಿ ಆದ ಹೆಚ್ಚಳ ಹೆಚ್ಚುಕಮ್ಮಿ ಸಮಾನವಾಗಿತ್ತು.

ಆ. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ತುಲನೆಯಲ್ಲಿ ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಸಾಧಕರಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವಲಯದಲ್ಲಿ ಆದ ಹೆಚ್ಚಳದ ಪ್ರಮಾಣವು ಸ್ವಲ್ಪ ಕಡಿಮೆ ಇತ್ತು.

ಇ. ಆಧ್ಯಾತ್ಮಿಕ ತೊಂದರೆ ಇಲ್ಲದ ಹಾಗೂ ಶೇ. 62 ಆಧ್ಯಾತ್ಮಿಕ ಮಟ್ಟದ ಸಾಧಕರಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವಲಯದಲ್ಲಿ ಆದ ಹೆಚ್ಚಳವು ಇನ್ನೂ ಕಡಿಮೆ ಪ್ರಮಾಣದಲ್ಲಿ ಇತ್ತು.

2 ಅ 2. ಪಾರ್ಟಿಯಿಂದ ಹಿಂದಿರುಗಿದ ನಂತರ ತೀವ್ರ ಆಧ್ಯಾತಿಕ ತೊಂದರೆ ಇರುವ ಸಾಧಕರಲ್ಲಿ ‘ಅಲ್ಟ್ರಾವಯಲೆಟ್’ ನಕಾರಾತ್ಮಕ ಶಕ್ತಿಯಲ್ಲಿ ತುಂಬಾ ಹೆಚ್ಚಳ ಕಂಡುಬರುವುದು, ಹಾಗೆಯೇ ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕ ಹಾಗೂ ಶೇ. ೬೨ ಆಧ್ಯಾತ್ಮಿಕ ಮಟ್ಟವಿರುವ ಸಾಧಕರಲ್ಲಿ ಕೂಡ ನಕಾರಾತ್ಮಕ ಶಕ್ತಿ ನಿರ್ಮಾಣವಾಗುವುದು

ಪರೀಕ್ಷಣೆಯಲ್ಲಿ ಭಾಗವಹಿಸಿದ ಸಾಧಕ ಅಲ್ಟ್ರಾವಯಲೆಟ್ (ನಕಾರಾತ್ಮಕ) ಶಕ್ತಿಯ ಪ್ರಭಾವಲಯ (ಮೀಟರ್)
ಪಾರ್ಟಿಗೆ ಹೋಗುವ ಮೊದಲು ಪಾರ್ಟಿಯಿಂದ ಹಿಂದಿರುಗಿದ ನಂತರ
1. ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕ 1.71 6.39
2. ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕಿ 1.44 5.53
3. ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಸಾಧಕ – ಟಿಪ್ಪಣಿ 4.79
4. ಶೇ. ೬೨ ಆಧ್ಯಾತ್ಮಿಕ ಮಟ್ಟವಿರುವ ಸಾಧಕ – ಟಿಪ್ಪಣಿ 2.57

ಟಿಪ್ಪಣಿ : ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕ ಹಾಗೂ ಶೇ. ೬೨ ಆಧ್ಯಾತ್ಮಿಕ ಮಟ್ಟವಿರುವ ಸಾಧಕರಲ್ಲಿ ಪಾರ್ಟಿಗೆ ತೆರಳುವ ಮೊದಲು ಅಲ್ಟ್ರಾವಯಲೆಟ್ ನಕಾರಾತ್ಮಕ ಶಕ್ತಿ ಇರಲಿಲ್ಲ

2 ಆ. ಸಕಾರಾತ್ಮಕ ಶಕ್ತಿಯ ಸಂದರ್ಭದಲ್ಲಿ ಮಾಡಿದ ನೋಂದಣಿಗಳ ವಿವೇಚನೆ

ಎಲ್ಲ ವ್ಯಕ್ತಿ, ವಾಸ್ತು ಅಥವಾ ವಸ್ತುಗಳಲ್ಲಿ ಸಕಾರಾತ್ಮಕ ಶಕ್ತಿ ಇರುತ್ತದೆ ಎಂದೇನಿಲ್ಲ.

2 ಆ 1. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರಲ್ಲಿ ಸಕಾರಾತ್ಮಕ ಶಕ್ತಿ ಕಾಣಿಸಲಿಲ್ಲ.

2 ಆ 2. ಪಾರ್ಟಿಯಿಂದ ಹಿಂದಿರುಗಿದ ನಂತರ ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕ ಹಾಗೂ ಶೇ. ೬೨ ಆಧ್ಯಾತ್ಮಿಕ ಮಟ್ಟವಿರುವ ಸಾಧಕರಲ್ಲಿರುವ ಸಕಾರಾತ್ಮಕ ಶಕ್ತಿಯು ಇಲ್ಲವಾಯಿತು : ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕ ಹಾಗೂ ಶೇ. ೬೨ ಆಧ್ಯಾತ್ಮಿಕ ಮಟ್ಟವಿರುವ ಸಾಧಕರಲ್ಲಿ ಮೊದಲಿಗೆ ಸಕಾರಾತ್ಮಕ ಶಕ್ತಿ ಕಾಣಿಸಿದ್ದು, ಅದು ಕ್ರಮವಾಗಿ 1.23 ಮೀಟರ್ ಮತ್ತು 1.84 ಮೀಟರ್‌ನಷ್ಟು ಇತ್ತು. ಪಾರ್ಟಿಯಿಂದ ಹಿಂದಿರುಗಿದ ನಂತರ ಇಬ್ಬರಲ್ಲಿಯೂ ಸಕಾರಾತ್ಮಕ ಶಕ್ತಿಯು ಕಾಣಿಸಲಿಲ್ಲ. ಅಂದರೆ ಪಾರ್ಟಿಯಿಂದ ಹಿಂದಿರುಗಿದ ನಂತರ ಅವರಲ್ಲಿದ್ದ ಸಕಾರಾತ್ಮಕ ಶಕ್ತಿಯು ಇಲ್ಲವಾಯಿತು.

2 ಇ. ಒಟ್ಟು ಪ್ರಭಾವಲಯದ (ಟಿಪ್ಪಣಿ) ಸಂದರ್ಭದಲ್ಲಿ ಮಾಡಿದ ನೋಂದಣಿಗಳ ವಿವೇಚನೆ

ಟಿಪ್ಪಣಿ – ಒಟ್ಟು ಪ್ರಭಾವಲಯ : ವ್ಯಕ್ತಿಯ ಸಂದರ್ಭದಲ್ಲಿ ಅವರ ಲಾಲಾರಸ, ವಸ್ತುಗಳ ಸಂದರ್ಭದಲ್ಲಿ ಅದರ ಮೇಲಿನ ಧೂಳಿನ ಕಣಗಳನ್ನು ಅಥವಾ ಸ್ವಲ್ಪ ಭಾಗವನ್ನು ಮಾದರಿಯೆಂದು ಉಪಯೋಗಿಸಿ ಆ ವ್ಯಕ್ತಿ ಅಥವಾ ಆ ವಸ್ತುವಿನ ‘ಒಟ್ಟು ಪ್ರಭಾವಲಯ’ವನ್ನು ಅಳೆಯಲಾಗುತ್ತದೆ.

ಸಾಮಾನ್ಯ ವ್ಯಕ್ತಿ ಅಥವಾ ವಸ್ತುವಿನ ಒಟ್ಟು ಪ್ರಭಾವಲಯವು ಸಾಧಾರಣವಾಗಿ 1 ಮೀಟರ್‌ನಷ್ಟಿರುತ್ತದೆ.

2 ಇ 1. ಪಾರ್ಟಿಯಿಂದ ಹಿಂದಿರುಗಿದ ನಂತರ ಭಾಗವಹಿಸಿದ ಎಲ್ಲ ಸಾಧಕರ ಒಟ್ಟು ಪ್ರಭಾವಲಯದಯಲ್ಲಿ ತುಂಬಾ ಹೆಚ್ಚಳವಾಗುವುದು

ಪರೀಕ್ಷಣೆಯಲ್ಲಿ ಭಾಗವಹಿಸಿದ ಸಾಧಕ ಒಟ್ಟು ಪ್ರಭಾವಲಯ (ಮೀಟರ್)
ಪಾರ್ಟಿಗೆ ಹೋಗುವ ಮೊದಲು ಪಾರ್ಟಿಯಿಂದ ಹಿಂದಿರುಗಿದ ನಂತರ ಒಟ್ಟು ಪ್ರಭಾವಲಯದಲ್ಲಿ ಕಂಡುಬಂದ ಹೆಚ್ಚಳ
1. ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕ 3.44 11.94 8.50
2. ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕಿ 2.74 13.32 10.58
3. ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಸಾಧಕ 2.00 11.13 9.13
4. ಶೇ. ೬೨ ಆಧ್ಯಾತ್ಮಿಕ ಮಟ್ಟವಿರುವ ಸಾಧಕ 2.76 7.64 4.88

3. ವಿಶ್ಲೇಷಣೆ

‘ನ್ಯೂ ಇಯರ್ ಪಾರ್ಟಿಯಿಂದ’ ಹಿಂದಿರುಗಿದ ನಂತರ ಭಾಗವಹಿಸಿದ ಎಲ್ಲ ಸಾಧಕರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ತೊಂದರೆದಾಯಕ ಶಕ್ತಿಯ ಪರಿಣಾಮವಾಗಿರುವುದರಿಂದ ಅವರಲ್ಲಿ ನಕಾರಾತ್ಮಕ ಶಕ್ತಿಯು ಹೆಚ್ಚಾಗಿರುವುದು ಕಂಡುಬಂತು.

ನ್ಯೂ ಇಯರ್ ಪಾರ್ಟಿಯನ್ನು ಆಯೋಜಿಸುವಾಗ ‘ಗ್ರಾಹಕರನ್ನು ಆಕರ್ಷಿಸಿ, ಮನೋರಂಜನೆ ಮಾಡುವ ಮೂಲಕ ತುಂಬಾ ಹಣ ಗಳಿಸುವುದು’ ಆ ಪಾರ್ಟಿಯ ಆಯೋಜಕರ ಉದ್ದೇಶವಾಗಿರುತ್ತದೆ. ಆದುದರಿಂದಲೇ ಅಲ್ಲಿ ಪಾಶ್ಚಾತ್ಯ ನೃತ್ಯ, ಸಂಗೀತ, ಝಗಮಗಿಸುವ ವಿದ್ಯುದ್ದೀಪಾಲಂಕಾರ ಇತ್ಯಾದಿಗಳ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ ವಿವಿಧ ಬಗೆಯ ಮಾಂಸಾಹಾರ ಮತ್ತು ಮದ್ಯಗಳನ್ನು ಕೂಡ ಪೂರೈಸುತ್ತಾರೆ. ಪಾರ್ಟಿಯಲ್ಲಿ ಭಾಗವಹಿಸುವ ಹೆಚ್ಚಿನವರ ಕೇಶರಚನೆ, ಬಟ್ಟೆಗಳು ಮತ್ತು ಮೇಕ್ಅಪ್ ಅಸಾತ್ತ್ವಿಕವಾಗಿರುತ್ತದೆ. ಇದರಿಂದಾಗಿ ಅಲ್ಲಿನ ವಾತಾವರಣವು ತುಂಬಾ ಅಸಾತ್ತ್ವಿಕವಾಗಿರುತ್ತದೆ. ಪ್ರಯೋಗಕ್ಕೆಂದು ಸಾಧಕರು ಹೋದ ಹೋಟೆಲ್ನಲ್ಲಿ ಕೂಡ ಇದೇ ಸ್ಥಿತಿಯಿತ್ತು. ನಕಾರಾತ್ಮಕ ಸ್ಪಂದನಗಳು ಸ್ವಾಭಾವಿಕವಾಗಿ ಅಸಾತ್ತ್ವಿಕ ವಿಷಯಗಳತ್ತ ಆಕರ್ಷಿಸಲ್ಪಡುತ್ತವೆ. ಪಾರ್ಟಿಯ ವಾತಾವರಣ ಎಷ್ಟು ರಜ-ತಮಗಳಿಂದ ಕೂಡಿರುತ್ತದೆಯೋ, ಅಷ್ಟೇ ಹೆಚ್ಚು ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಅಲ್ಲಿ ಆಕರ್ಷಿಸಲ್ಪಡುತ್ತವೆ. ‘ನ್ಯೂ ಇಯರ್ ಪಾರ್ಟಿ’ಯಲ್ಲಿ ನಡೆಸಿದ ಪ್ರಯೋಗದಿಂದ ಕೂಡ ಇದು ಸ್ಪಷ್ಟವಾಗಿದೆ.ಪಾರ್ಟಿಯ ವಾತಾವರಣ ರಜ-ತಮದಿಂದ ಕೂಡಿರುವುದರಿಂದ ಪ್ರಯೋಗದಲ್ಲಿ ಭಾಗವಹಿಸಿದ ಸಾಧಕರರು ಕೇವಲ ೫ ಗಂಟೆಗಳ ಕಾಲ ಅಲ್ಲಿದ್ದರೂ ಕೂಡ ಅವರ ಮೇಲೆ ನಕಾರಾತ್ಮಕ ಸ್ಪಂದನಗಳ ತುಂಬಾ ಪರಿಣಾಮವಾಯಿತು. ಇದರ ವಿವರಣೆಯನ್ನು ಮುಂದೆ ನೀಡಲಾಗಿದೆ.

3 ಅ. ಪ್ರಯೋಗದಲ್ಲಿ ಭಾಗವಹಿಸಿದ ಎಲ್ಲ ಸಾಧಕರಲ್ಲಿ ಇನ್ಫ್ರಾರೆಡ್ ನಕಾರಾತ್ಮಕ ಶಕ್ತಿಯಲ್ಲಿ ತುಂಬಾ ಹೆಚ್ಚಳವಾಯಿತು : ಓರ್ವ ವ್ಯಕ್ತಿಯ ದೇಹದ ಸುತ್ತಲೂ ತೊಂದರೆ ನೀಡುವ ಶಕ್ತಿಯ ಆವರಣವು ಇನ್ಫ್ರಾರೆಡ್ ಎಂಬ ನಕಾರಾತ್ಮಕ ಶಕ್ತಿಯಿಂದ ಕಂಡುಬರುತ್ತದೆ.

ಪಾರ್ಟಿಯಲ್ಲಿ ಅತಿ ಹೆಚ್ಚು ರಜ-ತಮ ತುಂಬಿದ ವಾತಾವರಣದಲ್ಲಿ ಕೆಲವು ಗಂಟೆಗಳ ಕಾಲ ಕಳೆದಿರುವುದರಿಂದ ಪ್ರಯೋಗದಲ್ಲಿ ಭಾಗವಹಿಸಿದ ಎಲ್ಲ ಸಾಧಕರ ಸುತ್ತಲೂ ತೊಂದರೆದಾಯಕ ಶಕ್ತಿಯ ಆವರಣದಲ್ಲಿ ತುಂಬಾ ಹೆಚ್ಚಳ ಕಂಡುಬಂತು. ಆದುದರಿಂದ ಎಲ್ಲ ಸಾಧಕರ ಇನ್ಫ್ರಾರೆಡ್ ನಕಾರಾತ್ಮಕ ಶಕ್ತಿಯಲ್ಲಿ ಹೆಚ್ಚಳವಾಯಿತು. (ಇಂದಿನವರೆಗೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಈ ರೀತಿಯ ಅನೇಕ ಪ್ರಯೋಗಗಳನ್ನು ಮಾಡಿದೆ. ಉದಾ :ಅಸಾತ್ತ್ವಿಕ ಸಂಗೀತ ಕೇಳುವುದರಿಂದ, ಅಸಾತ್ತ್ವಿಕ ಉಡುಪುಗಳನ್ನು ಧರಿಸುವುದರಿಂದ, ಅಸಾತ್ತ್ವಿಕ ಅಲಂಕಾರದಿಂದ ಆಗುವ ಪರಿಣಾಮಗಳು.ಇವೆಲ್ಲವುಗಳಲ್ಲಿ ಪ್ರಯೋಗದಲ್ಲಿ ಭಾಗವಹಿಸಿದವರಲ್ಲಿ ಇನ್ಫ್ರಾರೆಡ್ ನಕಾರಾತ್ಮಕ ಶಕ್ತಿಯಲ್ಲಿ ಹೆಚ್ಚಳವಾಗಿದ್ದು ಕಂಡುಬಂತು, ಆದರೆ ಈ ಪ್ರಯೋಗದಲ್ಲಿ ಈ ಹೆಚ್ಚಳವು ಅತಿ ಹೆಚ್ಚು ಪ್ರಮಾಣದಲ್ಲಿದೆ.)

3 ಆ. ತೀವ್ರ ಆಧ್ಯಾತ್ಮಿಕ ತೊಂದರೆ ಇರುವಂತಹ ಸಾಧಕರಲ್ಲಿ ಅಲ್ಟ್ರಾವಯಲೆಟ್ ನಕಾರಾತ್ಮಕ ಶಕ್ತಿಯಲ್ಲಿ ಹೆಚ್ಚಳವಾಗಿದ್ದು, ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕ ಹಾಗೂ ಶೇ.೬೨ ಆಧ್ಯಾತ್ಮಿಕ ಮಟ್ಟವಿರುವ ಸಾಧಕರಲ್ಲಿ ಈ ನಕಾರಾತ್ಮಕ ಶಕ್ತಿಯು ಸ್ವಲ್ಪ ಪ್ರಮಾಣದಲ್ಲಿ ನಿರ್ಮಾಣವಾಗುವುದು

1. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರಲ್ಲಿ ಕೆಟ್ಟ ಶಕ್ತಿಗಳ ತೊಂದರೆಯಿಂದಾಗಿ ಅವರ ಸುತ್ತಲೂ ತೊಂದರೆ ನೀಡುವ ಶಕ್ತಿಯ ಆವರಣವೂ ಇರುತ್ತದೆ. ಶರೀರದಲ್ಲಿ ಇರುವ ಈ ತೊಂದರೆಯ ಸ್ಥಾನಗಳ ನಕಾರಾತ್ಮಕ ಶಕ್ತಿಯು ಅಲ್ಟ್ರಾವಯಲೆಟ್ ನಕಾರಾತ್ಮಕ ಶಕ್ತಿಯಿಂದ ಅಳೆಯಬಹುದು. ಪಾರ್ಟಿಯಿಂದ ಹಿಂದಿರುಗಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರಲ್ಲಿ ಅಲ್ಟ್ರಾವಯಲೆಟ್ ನಕಾರಾತ್ಮಕ ಶಕ್ತಿಯಲ್ಲಿ ಹೆಚ್ಚಳವಾಗಿರುವುದು ಕಂಡುಬಂತು. ಸಾಧಕರಿಗೆ ತೊಂದರೆ ನೀಡುವ ಕೆಟ್ಟ ಶಕ್ತಿಗಳಿಗೆ ಅಲ್ಲಿನ ವಾತಾವರಣವು ಪೂರಕವಾಗಿರುವುದರಿಂದ, ದೊಡ್ಡ ಪ್ರಮಾಣದಲ್ಲಿ ಅಲ್ಲಿನ ನಕಾರಾತ್ಮಕ ಸ್ಪಂದನಗಳನ್ನು ಗ್ರಹಿಸಿ ಪ್ರಕ್ಷೇಪಿಸಲು ಸುಲಭವಾಯಿತು. (ಇಂದಿನವರೆಗೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಮಾಡಿದ ಅನೇಕ ಪ್ರಯೋಗಗಳಲ್ಲಿ ಭಾಗವಹಿಸಿದ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರಲ್ಲಿ ಅಲ್ಟ್ರಾವಯಲೆಟ್ ನಕಾರಾತ್ಮಕ ಶಕ್ತಿಯಲ್ಲಿ ಹೆಚ್ಚಳವಾಗಿದ್ದು ಕಂಡುಬಂತು, ಆದರೆ ಈ ಪ್ರಯೋಗದಲ್ಲಿ ಈ ಹೆಚ್ಚಳವು ಅತಿ ಹೆಚ್ಚು ಪ್ರಮಾಣದಲ್ಲಿದೆ.)

2. ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಸಾಧಕ ಹಾಗೂ ಶೇ. ೬೨ ಆಧ್ಯಾತ್ಮಿಕ ಮಟ್ಟವಿರುವ ಸಾಧಕರ ಸುತ್ತಲೂ ತೊಂದರೆ ನೀಡುವ ಶಕ್ತಿಯ ಆವರಣವು ಸ್ವಲ್ಪ ಪ್ರಮಾಣದಲ್ಲಿತ್ತು. ಆದುದರಿಂದ ಪ್ರಯೋಗದ ಪ್ರಾರಂಭದಲ್ಲಿ ಅವರಲ್ಲಿ ಇನ್ಫ್ರಾರೆಡ್ ನಕಾರಾತ್ಮಕ ಶಕ್ತಿಯು ಕಂಡುಬಂದಿತ್ತು, ಆದರೆ ಅಲ್ಟ್ರಾವಯಲೆಟ್ ನಕಾರಾತ್ಮಕ ಶಕ್ತಿಯು ಕಂಡುಬರಲಿಲ್ಲ. ಅವರಲ್ಲಿ ಸಕಾರಾತ್ಮಕ ಶಕ್ತಿಯು ಇತ್ತು. ಪಾರ್ಟಿಯಲ್ಲಿ ಭಾಗವಹಿಸಿದ ಕಾರಣ, ಅಲ್ಲಿನ ರಜ-ತಮ ಪ್ರಧಾನ ವಾತಾವರಣದಿಂದಾಗಿ ಅವರ ಸುತ್ತಲೂ ನಕಾರಾತ್ಮಕ ಶಕ್ತಿಯ ಆವರಣದಲ್ಲಿ ಹೆಚ್ಚಳವಾಯಿತು. ಆ ನಕಾರಾತ್ಮಕ ಶಕ್ತಿಯೊಂದಿಗೆ ಹೋರಾಡಲು ಅವಲ್ಲಿರುವ ಸಕಾರಾತ್ಮಕ ಶಕ್ತಿಯು ಖರ್ಚಾಯಿತು. ಪಾರ್ಟಿಯ ರಜ-ತಮ ಪ್ರಧಾನ ವಾತಾವರಣಕ್ಕೆ ಆಕರ್ಷಿಸಲ್ಪಟ್ಟ ಕೆಟ್ಟ ಶಕ್ತಿಗಳು ವಾತಾವರಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳನ್ನು ಪ್ರಕ್ಷೇಪಿಸಿದುದರಿಂದ ಆ ವಾತಾವರಣವು ಇನ್ನಷ್ಟು ಕಲುಷಿತವಾಯಿತು.ಆದುದರಿಂದಲೇ ಈ ಸಾಧಕರು ಪಾರ್ಟಿಯಿಂದ ಹಿಂದಿರುಗಿದ ನಂತರ ಅವರಲ್ಲಿ ಅಲ್ಟ್ರಾವಯಲೆಟ್ ನಕಾರಾತ್ಮಕ ಶಕ್ತಿಯು ನಿರ್ಮಾಣವಾಗಿರುವುದು ಕಂಡುಬಂತು.

3 ಇ. ಪ್ರಯೋಗದಲ್ಲಿ ಭಾಗವಹಿಸಿದ ಎಲ್ಲ ಸಾಧಕರ ಒಟ್ಟು ಪ್ರಭಾವಲಯದ ಮೇಲೆ ನಕಾರಾತ್ಮಕ ಸ್ಪಂದನಗಳ ಪ್ರಭಾವ ಪ್ರಬಲವಾಗಿರುವುದರಿಂದ ಅವರ ಒಟ್ಟು ಪ್ರಭಾವಲಯವು ತುಂಬಾ ಹೆಚ್ಚಾಯಿತು.

3 ಈ. ಪ್ರಯೋಗದಲ್ಲಿ ಕೆಲವು ಸಾಧಕರು ಭಾರತೀಯರಾಗಿದ್ದರು, ಕೆಲವು ವಿದೇಶಿಗಳಾಗಿದ್ದರು, ಆದರೆ ಅವರೆಲ್ಲರ ಮೇಲೆ ನಕಾರಾತ್ಮಕ ಸ್ಪಂದನಗಳ ಪರಿಣಾಮವು ಸಮಾನವಾಗಿತ್ತು.

3 ಉ. ಸಾಧಕರ ಮೇಲೆ ಈ ನಕಾರಾತ್ಮಕ ಸ್ಪಂದನಗಳ ಪರಿಣಾಮವು ೪೮ ಗಂಟೆಗಳ ಕಾಲ, ಅಂದರೆ ೨ ದಿನಗಳ ವರೆಗೆ ಇತ್ತು : ಪ್ರಯೋಗದಲ್ಲಿ ಭಾಗವಹಿಸಿದ ಸಾಧಕರ ಮೇಲೆ ಆದ ನಕಾರಾತ್ಮಕ ಸ್ಪಂದನಗಳ ಪರಿಣಾಮವು ದೂರವಾಗಲು ಅವರಿಗೆ ೪೮ ಗಂಟೆಗಳು ತಗಲಿದವು. ಹಲವು ವರ್ಷಗಳಿಂದ ಸಾಧನೆಯನ್ನು ಮಾಡುವ ಸಾಧಕರ ಮೇಲೆ ಕೆಲವೇ ಕೆಲವು ಗಂಟೆಗಳ ಈ ರಜ-ತಮವಿರುವ ವಾತಾವರಣದ ಹಾನಿಕಾರಕ ಪರಿಣಾಮವು ಇಷ್ಟು ಪ್ರಬಲವಾಗಿರಬೇಕಾದರೆ, ಸಾಧನೆ ಮಾಡದೇ ಇರುವವರ ಮೇಲೆ ಎಷ್ಟು ಪ್ರಬಲವಾಗಿರಬೇಕು, ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ.

ಸ್ವಲ್ಪದರಲ್ಲಿ ಹೇಳುವುದಾದರೆ, ಡಿಸೆಂಬರ್ ೩೧ ರಂದು ಹೊಸ ವರ್ಷವನ್ನು ಸ್ವಾಗತಿಸಲು ಆಯೋಜಿಸಲಾಗುವ ನ್ಯೂ ಇಯರ್ ಪಾರ್ಟಿಯಲ್ಲಿ ಭಾಗವಹಿಸುವುದು ಅತ್ಯಂತ ಹಾನಿಕಾರಕವಾಗಿದೆ ಎಂಬುವುದು ಈ ವೈಜ್ಞಾನಿಕ ಪ್ರಯೋಗದಿಂದ ತಿಳಿದುಬರುತ್ತದೆ.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

ಇ-ಇಮೇಲ್ : [email protected]