ಚೀನಾ ನಿರ್ಮಿತಿಯ ವಸ್ತುಗಳನ್ನು ಬಹಿಷ್ಕರಿಸುವಂತೆ ವೀ ಫಾರ್ ಸಂಗೆ ಈ ಸಂಘಟನೆಯ ಕರೆ

ಗೋವಾ (2016) : ದೇಶಭಕ್ತ ಗೋಮಂತಕಿ ಬಾಂಧವರು ಧಾರ್ಮಿಕ ಉತ್ಸವಕ್ಕಾಗಿ ಮಾರುಕಟ್ಟೆಯಿಂದ ಚೀನಾ ನಿರ್ಮಿತಿಯ ವಸ್ತುಗಳಿಗೆ ಸಂಪೂರ್ಣ ಬಹಿಷ್ಕಾರ ಹಾಕಿ ಉಗ್ರವಾದದ ವಿರುದ್ಧ ಹೋರಾಡಲು ಭಾರತ ಸರಕಾರಕ್ಕೆ ನಮ್ಮ ಸಹಕಾರ ನೀಡುತ್ತೇವೆ, ಎಂದು ಇಲ್ಲಿನ ವಿ ಫಾರ್ ಸಂಗೆ ಈ ಸಂಘಟನೆಯುಕರೆ ನೀಡಿದೆ. ಸಂಘಟನೆಯು ಈ ಬಗ್ಗೆ ಮುಂದೆ ಹೇಳುತ್ತಾ, ವಿದೇಶ ನಿರ್ಮಿತ ವಸ್ತು ಖರೀದಿ ಮಾಡಿ ನಾವು ಒಂದು ರೀತಿಯಲ್ಲಿ ದೇಶದ ವಿರುದ್ಧ ಯುದ್ಧ ಸಾರುವ ರಾಷ್ಟ್ರಗಳಿಗೆ ಆರ್ಥಿಕ ಸಹಾಯ ಮಾಡುತ್ತೇವೆ. ಇದನ್ನು ನಾವು ಮಾರುಕಟ್ಟೆಗೆ ಹೋದಾಗ ವಿಚಾರ ಮಾಡುವುದಿಲ್ಲ. ದೀಪಾವಳಿಯ ಹಬ್ಬವನ್ನು ಆಚರಿಸುವಾಗ ನಾವು ಗೂಡುದೀಪ, ಹಣತೆಗಳು, ವಿದ್ಯುತ್ ದೀಪಗಳಂತಹ ಚೀನಾ ನಿರ್ಮಿತಿಯ ವಸ್ತುಗಳನ್ನು ಖರೀದಿಸಿ ಶತ್ರುರಾಷ್ಟ್ರಗಳನ್ನು ನಾವು ಆರ್ಥಿಕ ದೃಷ್ಟಿಯಲ್ಲಿ ಸಕ್ಷಮಗೊಳಿಸುತ್ತೇವೆ. ಚೀನಾದಂತಹ ದೇಶ ಭಾರತದಲ್ಲಿನ ಮಾರುಕಟ್ಟೆಯನ್ನು ಕಬಳಿಸುತ್ತಾ ಆರ್ಥಿಕ ಜಾಲವನ್ನು ಹರಡಿಸುತ್ತಿದೆ ಹಾಗೂ ಇದರಿಂದ ಸಿಗುವ ಲಾಭದಿಂದ ಭಾರತದ ವಿರುದ್ಧ ಕಾರ್ಯಾಚರಣೆ ಮಾಡಲು ಉಗ್ರರಿಗೆ ಹಣವನ್ನು ಒದಗಿಸುತ್ತದೆ, ಎಂದರು.

ಆಧಾರ : ಸಾಪ್ತಾಹಿಕ ಸನಾತನ ಪ್ರಭಾತ

Leave a Comment