ವಿಜಯ ದಶಮಿ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆಯವರ ಸಂದೇಶ

‘ದೇವತೆಗಳು ಆಸುರಿ ಶಕ್ತಿಗಳ ಮೇಲೆ ವಿಜಯ ಪಡೆದ ದಿನವೆಂದರೆ ವಿಜಯದಶಮಿ’. ದೈವಿ ಶಕ್ತಿ ಮತ್ತು ಆಸುರಿ ಶಕ್ತಿಗಳಲ್ಲಿನ ಸಂಘರ್ಷವು ಅನಾದಿ ಮತ್ತು ಅನಂತವಾಗಿದೆ. ಆದುದರಿಂದ ಅದು ಭವಿಷ್ಯದಲ್ಲಿಯೂ ನಡೆಯುತ್ತಿರುವುದು.

ಪಾಂಡವರ ಅಜ್ಞಾತವಾಸವನ್ನು ಮುಗಿಸಲು ಕೌರವರು ವಿರಾಟ ದೇಶದ ಸೀಮೆಯ ಸಶಸ್ತ್ರ ಸೀಮೋಲ್ಲಂಘನ ಮಾಡಿದ್ದರು, ಆಗ ಬೃಹನ್ನಳೆಯ ವೇಶದಲ್ಲಿರುವ ವೀರ ಅರ್ಜುನನು ಶಮೀಯ ಪೊಟರೆಯಿಂದ ಶಸ್ತ್ರಗಳನ್ನು ತೆಗೆದು ಸಂಪೂರ್ಣ ಕೌರವಸೇನೆಯ ಮೇಲೆ ವಿಜಯ ಪಡೆದಿದ್ದನು.

೭೫ ವರ್ಷಗಳ ಹಿಂದೆ ಮಹಾನ್ ಸಂತ ಯೋಗಿ ಅರವಿಂದರು ಸಾಧನೆ ಮಾಡಿ ಹಿಟ್ಲರನ ಆಸುರಿ ಶಕ್ತಿಯನ್ನು ನಿಷ್ಕ್ರಿಯ ಮಾಡಿದರು. ಸೂಕ್ಷ್ಮಯುದ್ಧದ ಮೂಲಕ ಭಾರತದ ಸ್ವಾತಂತ್ರ್ಯದ ಮಾರ್ಗವನ್ನು ಮುಕ್ತಗಿಳಿಸಿದರು. ಹಿಂದೂಗಳೇ, ಈ ಇತಿಹಾಸವನ್ನು ನೆನಪಿಸಿಕೊಳ್ಳಿ !

ನಿಜವಾದ ಸೀಮೋಲ್ಲಂಘನ ಎಂದರೆ ‘ಶತ್ರುಗಳ ಸೀಮೆಯನ್ನು ಉಲ್ಲಂಘಿಸಿ ಯುದ್ಧವನ್ನು ಸಾರುವುದು’. ಅಪರಾಜಿತಾದೇವಿಯ ಪೂಜೆ ಎಂದರೆ ‘ವಿಜಯಕ್ಕಾಗಿ ದೇವಿಯಲ್ಲಿ ಶಕ್ತಿ ಬೇಡುವುದು’ ಮತ್ತು ರಾತ್ರಿ ಶ್ರೇಷ್ಠರಿಗೆ ಹಿರಿಯರಿಗೆ ಮಂದಾರದ ಎಲೆಗಳನ್ನು ನೀಡುವುದು ಎಂದರೆ ‘ನಮ್ಮ ವಿಜಯದ ಪತ್ರ ನೀಡಿ (ವಿಜಯಶ್ರೀ ಪ್ರಾಪ್ತ ಮಾಡಿಕೊಂಡು) ಶ್ರೇಷ್ಠ ಹಿರಿಯರ ಆಶೀರ್ವಾದ ಪಡೆಯುವುದು’ ಆಗಿದೆ. ಹಿಂದೂಗಳೇ, ಗೆಲ್ಲುವ ವೃತ್ತಿಯನ್ನು ಹೆಚ್ಚಿಸುವ ಈ ವಿಜಯದಶಮಿಯ ತೇಜಸ್ವಿ ಪರಂಪರೆಯಾಗಿದೆ.

ಪ್ರಸ್ತುತ ಕಾಲದಲ್ಲಿ ಆಸುರಿ ಶಕ್ತಿಗಳು ಭಾರತದ ವಿಭಜನೆ ಮಾಡಲು ಆತುರರಾಗಿರುವುದು ಕಂಡು ಬರುತ್ತದೆ. ‘೩೭೦ ಕಲಮ್’ ರದ್ದಾದುದರಿಂದ ಪಾಕಿಸ್ತಾನವು ಯುದ್ಧದ ಬೆದರಿಕೆ ನೀಡುತ್ತಿದೆ. ‘ತ್ರಿವಳಿ ತಲಾಕ್’ ರದ್ದುಗೊಳಿಸಿದ್ದರಿಂದ ಹಾಗೂ ಬಾಂಗ್ಲಾದೇಶಿ ನುಸುಳುಕೋರರನ್ನು ತೊಲಗಿಸಲು ಅಸ್ಸಾಂನಲ್ಲಿ ‘ರಾಷ್ಟ್ರೀಯ ಪೌರತ್ವ ನೋಂದಣಿ’ (ಎನ್‌ಆರ್‌ಸಿ) ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರಿಂದ ಈಗ ದೇಶಾಂತರ್ಗತ ಯುದ್ಧದ ಬೆದರಿಕೆ ಬರುತ್ತಿವೆ.

ರಾಜಕಾರಣಿಗಳು ದೇಶಹಿತದ ನಿರ್ಣಯ ತೆಗೆದುಕೊಳ್ಳುವುದು, ಇದು ಅವರ ಮಟ್ಟದ ಸೀಮೋಲ್ಲಂಘನವಾಗಿದೆ. ದೇಶಹಿತದ ನಿರ್ಣಯಗಳಿಗೆ ಬೆಂಬಲ ನೀಡಿ ದೇಶಾಂತರ್ಗತ ಯುದ್ಧಕ್ಕಾಗಿ ಸಿದ್ಧತೆ ಮಾಡುವುದು ಜನತೆಯ ದೃಷ್ಟಿಯಿಂದ ಸೀಮೋಲ್ಲಂಘನವಾಗಿದೆ. ಈಗ ಎಂತಹ ಪರಿಸ್ಥಿತಿಯಿದೆಯೆಂದರೆ, ಬೆದರಿಕೆ ನೀಡುವ ಪಾಕಿಸ್ತಾನದೊಂದಿಗೆ ಸದ್ಯದ ಸ್ಥಿತಿಯಲ್ಲಿ ಯುದ್ಧವಾದರೆ, ಅದು ಗಡಿಯಲ್ಲಷ್ಟೇ ಅಲ್ಲದೇ, ಅದು ಪ್ರತಿಯೊಂದು ಮನೆಯಲ್ಲಿ ಮತ್ತು ರಸ್ತೆಯಲ್ಲಿ ಹೋರಾಡಲಾಗುವುದು.

ಸಶಸ್ತ್ರ ಭಾರತೀಯ ಸೈನ್ಯವು ‘ಸರ್ಜಿಕಲ್ ಸ್ಟ್ರೈಕ್’ ಮತ್ತು ‘ಎರ್ ಸ್ಟ್ರೈಕ್ ಇವುಗಳ ಮೂಲಕ ಸೀಮೋಲ್ಲಂಘನ ಮಾಡುವುದು; ಆದರೆ ದೇಶಾಂತರ್ಗತ ಯುದ್ಧದ ಬಗ್ಗೆ ಏನು ? ಕಳೆದ ನೂರು ವರ್ಷಗಳಿಂದ ಪರಾಜಿತ ಮಾನಸಿಕತೆಯನ್ನು ಕಾಯ್ದುಕೊಂಡ ಹಿಂದೂ ಸಮಾಜವು ಇಂತಹ ಸಂಕಟದ ಸಮಯದಲ್ಲಿ ತಮ್ಮ ಅಥವಾ ತಮ್ಮ ಕುಟುಂಬದವರ ರಕ್ಷಣೆ ಮಾಡಿದರೂ ಅದೇ ಅವರಿಗೆ ಕಾಲಾನುಸಾರ ಸೀಮೋಲ್ಲಂಘನೆಯಾಗುವುದು.

– (ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ

Leave a Comment

Download ‘Ganesh Puja and Aarti’ App