ಅಸುರಕ್ಷಿತತೆಯ ಭಾವನೆ ಎಂಬ ದೋಷ, ಕೀಳರಿಮೆ ಎಂಬ ಅಹಂನ ಲಕ್ಷಣಗಳು, ಹಾನಿ ಮತ್ತು ಅವುಗಳನ್ನು ಎದುರಿಸಿದಾಗ ಆಗುವ ಲಾಭ !

ಶ್ರೀ. ದೇಯಾನ್ ಗ್ಲೇಶ್ಚಿಚ್

ಸಾಮಾನ್ಯವಾಗಿ ಎಲ್ಲರಲ್ಲಿ ‘ಅಸುರಕ್ಷಿತತೆ’ ಎಂಬ ಸ್ವಭಾವದೋಷ ಮತ್ತು ‘ಕೀಳರಿಮೆ’ ಎಂಬ ಅಹಂನ ಲಕ್ಷಣಗಳು ಕಂಡುಬರುತ್ತವೆ. ಹೆಚ್ಚಿನ ಬಾರಿ ಇವೆರಡು ಒಟ್ಟಿಗೆ ಇರುತ್ತವೆ. ಆದುದರಿಂದ ಸಾಧಕನಿಗೆ ಆಧ್ಯಾತ್ಮಿಕ ಮಟ್ಟದವರೆಗೆ ತಲುಪಲು ಅಡಚಣೆಯಾಗುತ್ತದೆ ಮತ್ತು ಅವನು ಮಾನಸಿಕ ಸ್ತರದಲ್ಲಿಯೇ ಸಿಲುಕಿಕೊಳ್ಳುತ್ತಾನೆ. ಇವೆರಡರಿಂದ ಸಾಧಕನಲ್ಲಿನ ಇತರ ಅನೇಕ ಸ್ವಭಾವದೋಷ ಮತ್ತು ಅಹಂನ ಲಕ್ಷಣಗಳು ಹೆಚ್ಚಾಗುತ್ತವೆ ಅಥವಾ ನಿರ್ಮಾಣವಾಗುತ್ತವೆ. ಇದರಿಂದ ಸಾಧಕನ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯಲ್ಲಿ ಅಡಚಣೆ ನಿರ್ಮಾಣವಾಗುವ ಸಾಧ್ಯತೆ ಇರುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ

೧. ಅಸುರಕ್ಷಿತತೆಯ ವಿಧಗಳು

೧ ಅ. ಪ್ರಕಟ ಸ್ವರೂಪ : ಕೆಲವು ಸಾಧಕರಲ್ಲಿ ‘ಅಸುರಕ್ಷಿತತೆ’ ಎಂಬ ಸ್ವಭಾವದೋಷವು ಪ್ರಕಟ ಅಥವಾ ವ್ಯಕ್ತ ಸ್ವರೂಪದಲ್ಲಿರುತ್ತದೆ. ‘ಇತರರೊಂದಿಗೆ ಬೆರೆಯದಿರುವುದು, ಮಾತನಾಡುವಾಗ ತಡವರಿಸುವುದು ಅಥವಾ ಸ್ವಲ್ಪ ಪ್ರಮಾಣದಲ್ಲಿ ಮಾತನಾಡುವುದು’ ಅವುಗಳ ಲಕ್ಷಣಗಳಾಗಿವೆ. ಇಂತಹ ಸಾಧಕರು ಯಾವುದೇ ಕಠಿಣ ಪ್ರಸಂಗವನ್ನು ಎದುರಿಸುವುದನ್ನು ತಪ್ಪಿಸಿಕೊಳ್ಳುತ್ತಾರೆ. ಯಾವುದಾದರೊಂದು ಚಿಕ್ಕ ಸಮಸ್ಯೆಯಿಂದಲೂ ಅವರಿಗೆ ತುಂಬಾ ಒತ್ತಡವಾಗುತ್ತದೆ ಅಥವಾ ಅದರ ಬಗ್ಗೆ ಭಯವೆನಿಸುತ್ತದೆ. ಅವರ ದೇಹಭಾಷೆಯಲ್ಲಿಯೂ ಅಸುರಕ್ಷಿತತೆಯು ಕಂಡುಬರುತ್ತದೆ, ಉದಾ. ಅವರ ಶರೀರವು ಬಿಗಿದಿರುತ್ತದೆ, ಭುಜಗಳನ್ನು ಮೇಲೆ ಎತ್ತಿರುತ್ತಾರೆ, ಮಾತನಾಡುವಾಗ ತಲೆ ಮುಂದೆ ಬಗ್ಗಿರುತ್ತದೆ ಮತ್ತು ಎದುರಿನ ವ್ಯಕ್ತಿಯ ದೃಷ್ಟಿಗೆ ದೃಷ್ಟಿ ಕೊಡುವುದಿಲ್ಲ ಮುಂತಾದವುಗಳು. ಇಷ್ಟು ಲಕ್ಷಣಗಳಿಂದ ಈ ಸ್ವಭಾವದೋಷ ಸುಲಭವಾಗಿ ಗಮನಕ್ಕೆ ಬರುತ್ತದೆ; ಏಕೆಂದರೆ ಸಾಧಕನಿಗೆ ತನ್ನ ಸ್ವಭಾವದೋಷಗಳ ಅರಿವಿರುತ್ತದೆ, ಹಾಗೆಯೇ ಆ ಸ್ವಭಾವದೋಷವು ಇತರ ಸಾಧಕರ ಗಮನಕ್ಕೆ ಬಂದಿರುವುದರಿಂದ ಅವರು ಅವನಿಗೆ ಅದರ ಅರಿವು ಮಾಡಿಕೊಟ್ಟು ಅವನಿಗೆ ಸಹಾಯ ಮಾಡಬಹುದು.

೧ ಆ. ಸುಪ್ತ ಅಥವಾ ಅಪ್ರಕಟ ಸ್ವರೂಪ : ಕೆಲವು ಸಾಧಕರಲ್ಲಿ ‘ಅಸುರಕ್ಷಿತ’ ಎಂಬ ಸ್ವಭಾವದೋಷ ಮತ್ತು ‘ಕೀಳರಿಮೆ’ ಎಂಬ ಅಹಂನ ಲಕ್ಷಣವು ಸುಪ್ತ ಅಥವಾ ಅಪ್ರಕಟ ಸ್ವರೂಪದಲ್ಲಿರುತ್ತವೆ; ಏಕೆಂದರೆ ಅಭಿಮಾನ, ಶ್ರೇಷ್ಠತೆಯ ಭಾವನೆ, ಆಡಂಬರ ಅಥವಾ ಈ ವಿಧದ ಇತರ ಅಹಂನ ಲಕ್ಷಣಗಳಲ್ಲಿ ಅವು ಅಡಗಿಕೊಂಡಿರುತ್ತವೆ. ಈ ಸಾಧಕರಿಗೆ ತಮ್ಮಲ್ಲಿನ ಕೀಳರಿಮೆ ಸ್ವೀಕರಿಸಲು ಆಗದಿರುವುದರಿಂದ ಅವರಿಗೆ ಅದರ ಅರಿವೂ ಇರುವುದಿಲ್ಲ. ತನ್ನಲ್ಲಿನ ಹೇಡಿತನ ಅಥವಾ ಅಸಾಮರ್ಥ್ಯವನ್ನು ಸ್ವೀಕರಿಸಲು ಆಗದಿರುವುದು ಅಥವಾ ಆ ದೋಷದ ಬಗ್ಗೆ ಇತರರಿಗೆ ತಿಳಿಸಿಹೇಳುವ ಇಚ್ಛೆ ಇಲ್ಲದಿರುವುದು ಮತ್ತು ಅಹಂಭಾವ ಇವುಗಳಿಂದಾಗಿ ಅವನು ತನ್ನಲ್ಲಿನ ಕೀಳರಿಮೆ ಸ್ವೀಕರಿಸಲು ತಪ್ಪಿಸಿಕೊಳ್ಳುತ್ತಾನೆ. ಇದರ ಅರ್ಥ ‘ಅವನಲ್ಲಿ ಅಸುರಕ್ಷಿತತೆ ಇರುವುದಿಲ್ಲ’, ಎಂದಲ್ಲ. ಇಂತಹ ಸಾಧಕನು ಈ ಸ್ವಭಾವದೋಷವು ಪ್ರಕಟ ಸ್ವರೂಪದಲ್ಲಿರುವ ಇತರ ಸಾಧಕರ ಬಗ್ಗೆ ನಿಷ್ಕರ್ಷ ತೆಗೆಯುವುದು, ಪ್ರತಿಕ್ರಿಯೆ ವ್ಯಕ್ತಪಡಿಸುವುದು, ಸಿಡಿಮಿಡಿಗೊಳ್ಳುವುದು, ಅವರನ್ನು ಕನಿಷ್ಠರೆಂದು ನೋಡುವುದು ಮುಂತಾದವುಗಳನ್ನು ಮಾಡುತ್ತಾನೆ; ಏಕೆಂದರೆ ಅವನಿಗೆ ಆ ಸಾಧಕರ ವರ್ತನೆಯಿಂದ ತನ್ನಲ್ಲಿನ ಕೀಳರಿಮೆಯ ಅರಿವು ಅಂತರ್ಮನದಿಂದ ಆಗುತ್ತಿರುತ್ತದೆ. ಈ ವಿಧದಲ್ಲಿನ ಸಾಧಕರಿಗೆ ಅಸುರಕ್ಷಿತತೆಯ ಮತ್ತು ಕೀಳರಿಮೆ ಇವುಗಳನ್ನು ಎದುರಿಸಲು ಹೆಚ್ಚು ಕಠಿಣವಿರುತ್ತದೆ; ಆದರೆ ಅವರು ಪ್ರಾಮಾಣಿಕತೆಯಿಂದ ಅಂತರ್ಮುಖರಾಗಿ ತಮ್ಮಲ್ಲಿನ ‘ಅಸುರಕ್ಷಿತತೆ’ ಎಂಬ ಸ್ವಭಾವದೋಷವನ್ನು ಸ್ವೀಕರಿಸಿ ಅದರ ಅಭ್ಯಾಸ ಮಾಡಿದರೆ (ಚಿಂತನೆ ಮಾಡಿದರೆ) ಮತ್ತು ಅದರ ಬಗ್ಗೆ ಅವರು ಇತರ ಸಾಧಕರೊಂದಿಗೆ ಮನಮುಕ್ತತೆಯಿಂದ ಮಾತನಾಡಿದರೆ ಆ ಸ್ವಭಾವದೋಷವು ಪ್ರಕಟವಾಗಲು ಸಾಧ್ಯವಾಗುತ್ತದೆ. ನಂತರ ಅದನ್ನು ಕಡಿಮೆ ಮಾಡಲು ಅವರಿಗೆ ಪ್ರಯತ್ನಿಸಲು ಸಾಧ್ಯವಾಗುತ್ತದೆ.

೨. ‘ಅಸುರಕ್ಷಿತತೆ’ ಮತ್ತು ‘ಕೀಳರಿಮೆ’ ಇವುಗಳೊಂದಿಗೆ ಸಂಬಂಧಿಸಿದ ಇತರ ಸ್ವಭಾವದೋಷಗಳು ಮತ್ತು ಅಹಂನ ಲಕ್ಷಣಗಳು

೨ ಅ. ಅಭಿಮಾನ : ಸಾಧಕನು ತನ್ನ ನ್ಯೂನ್ಯತೆಯನ್ನು ಎದುರಿಸಲು ಮತ್ತು ಇತರರ ಎದುರು ‘ನಾನು ಸಮರ್ಥನಿದ್ದೇನೆ’, ‘ನಾನು ಏನಾದರೂ ಒಳ್ಳೆಯದು ಮಾಡಿದ್ದೇನೆ’ ಅಥವಾ ‘ನಾನು ಅರ್ಹನಾಗಿದ್ದೇನೆ’, ಎಂದು ತೋರಿಸಲು ಸತತ ಪ್ರಯತ್ನಿಸುತ್ತಿರುತ್ತಾನೆ.

೨ ಆ. ಅಭಿಮಾನ : ‘ನನಗಿಂತ ಇತರರು ಚೆನ್ನಾಗಿರುವುದರಿಂದ ನನಗೆ ನನ್ನ ಬಗ್ಗೆ ವಿಚಾರ ಮಾಡಬೇಕು. ನನ್ನ ಕಾಳಜಿ ವಹಿಸಬೇಕು, ಇಲ್ಲದಿದ್ದರೆ ನಾನು ಹಿಂದೆ ಬೀಳುವೆನು’, ಎಂಬ ಭಾವನೆ ಸಾಧಕನ ಮನಸ್ಸಿನಲ್ಲಿರುತ್ತದೆ.

೨ ಇ. ಇತರರ ಗಮನ ಸೆಳೆಯುವುದು ಮತ್ತು ಪ್ರಶಂಸೆಯ ಅಪೇಕ್ಷೆ ಮಾಡುವುದು : ಇದು ಒಂದು ರೀತಿಯಲ್ಲಿ ಸಾಧಕನಿಗೆ ಸತತವಾಗಿ ‘ನಾನು ಆರಾಮದಲ್ಲಿದ್ದೇನೆ’ ಮತ್ತು ‘ನಾನು ಒಳ್ಳೆಯವನಿದ್ದೇನೆ’, ಎಂಬುದರ ಬಗ್ಗೆ ಖಾತ್ರಿ ಬೇಕಾಗುತ್ತದೆ. ಈ ಭಾವನೆಗೆ ಯಾವುದೇ ಕೊನೆಯಿರುವುದಿಲ್ಲ; ಏಕೆಂದರೆ ಯಾವುದಾದರೊಂದು ವಿಷಯ ಮನಸ್ಸಿಗನುಸಾರ ಆಗದಿದ್ದರೆ, ಅವನಿಗೆ ಅನಿಸುವ ಅಸುರಕ್ಷಿತತೆ ಮತ್ತು ಕೀಳರಿಮೆ ಉಮ್ಮಳಿಸಿ ಬರುತ್ತದೆ. ಆದುದರಿಂದ ಪುನಃ ಪ್ರಶಂಸೆ ಮತ್ತು ಸ್ತುತಿ ಇವುಗಳ ಅಪೇಕ್ಷೆ ಹೆಚ್ಚಾಗುತ್ತದೆ.

೨ ಈ. ನಕಾರಾತ್ಮಕ ವಿಚಾರ ಮಾಡುವುದು : ಸಾಧಕನು ‘ನನ್ನ ಸಾಧನೆ ಸರಿಯಾಗಿ ಆಗುವುದಿಲ್ಲ’, ‘ನನ್ನ ಆಧ್ಯಾತ್ಮಿಕ ಪ್ರಗತಿಯಾಗಲು ಸಾಧ್ಯವಿಲ್ಲ’, ಎಂಬ ನಕಾರಾತ್ಮಕ ವಿಚಾರ ಮಾಡುತ್ತಿರುವುದರಿಂದ ಅವನ ಸಾಧನೆಯ ಪ್ರಯತ್ನಗಳು ಕಡಿಮೆಯಾಗುತ್ತವೆ.

೨ ಉ. ಆಲಸ್ಯ : ‘ನಾನು ಎಷ್ಟು ಪ್ರಯತ್ನ ಮಾಡಿದರೂ, ನಾನು ಯಶಸ್ವಿ ಆಗುವುದಿಲ್ಲ, ಎಂದು ಸಾಧಕನಿಗೆ ಅನಿಸತೊಡಗಿದಾಗ ಅವನಲ್ಲಿ ಆಲಸ್ಯ ಹೆಚ್ಚಾಗುತ್ತದೆ. ಅದರ ಪರಿಣಾಮ ಸ್ವರೂಪ ಅವನು ನಿರುತ್ಸಾಹಿಯಾಗಿ ಕೊನೆಗೆ ಅವನಿಗೆ ನಿರಾಶೆ ಬರಬಹುದು.

೨ ಊ. ಮತ್ಸರ : ಸಾಧಕನಿಗೆ ‘ಚೆನ್ನಾಗಿ ಪ್ರಯತ್ನ ಮಾಡುವವರು’, ‘ಶೀಘ್ರ ಪ್ರಗತಿ ಮಾಡಿಕೊಳ್ಳುವವರು’ ಅಥವಾ ಅವನ ದೃಷ್ಟಿಯಿಂದ ಅವನಿಗಿಂತ ಚೆನ್ನಾಗಿ ಪ್ರಗತಿ ಮಾಡುತ್ತಿರುವ ಸಾಧಕರ ಬಗ್ಗೆ ಮತ್ಸರವೆನಿಸತೊಡಗುತ್ತದೆ.

೨ ಏ. ಸಂಕೋಚಪಡುವುದು ಮತ್ತು ಮನಮುಕ್ತತೆಯ ಅಭಾವ : ಈ ಸ್ವಭಾವದೋಷಗಳಿಂದಾಗಿ ಸಾಧಕನು ಇತರರಿಂದ ದೂರವಿರುತ್ತಾನೆ ಮತ್ತು ಇತರರ ಬಗ್ಗೆ ಪ್ರೇಮಭಾವ ನಿರ್ಮಿಸುವ ಅವಕಾಶವನ್ನು ಕಳೆದುಕೊಳ್ಳುತ್ತಾನೆ. ಆದ್ದರಿಂದ ಅವನಲ್ಲಿ ‘ವಸುಧೈವ ಕುಟುಂಬಕಮ್ |’ (ಅಂದರೆ ಸಂಪೂರ್ಣ ಪೃಥ್ವಿಯೇ ಕುಟುಂಬವಾಗಿದೆ), ಎಂಬ ಭಾವನೆ ನಿರ್ಮಾಣವಾಗುವುದಿಲ್ಲ.

೨ ಐ. ಭಯ : ಸಾಧಕನು ಶ್ರದ್ಧೆಯ ಅಭಾವದಿಂದ ಯಾವಾಗಲೂ ದುಃಖಿ ಮತ್ತು ಭಯಗ್ರಸ್ತನಿರುತ್ತಾನೆ. ಇಂತಹ ಸಮಯದಲ್ಲಿ ಅವನು ತನಗೆ ಕಠಿಣವೆನಿಸುವ ಮತ್ತು ಒತ್ತಡ ನಿರ್ಮಾಣವಾಗುವಂತಹ ಚಿಕ್ಕಚಿಕ್ಕ ಪ್ರಸಂಗಗಳಿಂದ ತಪ್ಪಿಸಿಕೊಳ್ಳುತ್ತಾನೆ.

೨ ಓ. ಮಹತ್ವಾಕಾಂಕ್ಷಿ : ತನ್ನಲ್ಲಿನ ಕೀಳರಿಮೆಯ ಭಾವನೆಯನ್ನು ಅಡಗಿಸಲು ಏನಾದರೂ ಒಳ್ಳೆಯದನ್ನು ಮಾಡಿ ತೋರಿಸುವ ಪ್ರಯತ್ನ ಮಾಡಲು ಸಾಧಕನಲ್ಲಿನ ಮಹತ್ತ್ವಾಕಾಂಕ್ಷೆ ಬೆಳೆಯುತ್ತದೆ.

೨ ಔ. ತನ್ನನ್ನು ಶ್ರೇಷ್ಠವೆಂದು ತಿಳಿಯುವುದು : ಸಾಧಕನಲ್ಲಿನ ‘ತನ್ನನ್ನು ತಾನು ಕೀಳೆಂದು ತಿಳಿಯುವುದು’, ಈ ಸ್ವಭಾವದೋಷವನ್ನು ಅಡಗಿಸಲು ಅವನು ‘ನಾನು ಶ್ರೇಷ್ಠನಾಗಿದ್ದೇನೆ’, ಎಂದು ತೋರಿಸುವ ಪ್ರಯತ್ನ ಮಾಡುತ್ತಾನೆ. ಇದರಲ್ಲಿ ಅನೇಕ ಬಾರಿ ಪರಿಸ್ಥಿತಿಗನುಸಾರ, ಅಂದರೆ ಯಾವ ಸಾಧಕನು ಅವನಿಗೆ ತನ್ನ ತುಲನೆಯಲ್ಲಿ ಶ್ರೇಷ್ಠವೆನಿಸುತ್ತಾನೆ, ಅವರ ಎದುರು ಸಾಧಕನು ‘ತನ್ನನ್ನು ಕೀಳೆಂದು ನೋಡುವುದು’ ಎಂಬ ಸ್ವಭಾವದೋಷ ಅಥವಾ ಯಾವ ಸಾಧಕ ಸ್ವಂತ ತುಲನೆಯಲ್ಲಿ ಕನಿಷ್ಟ ಎನಿಸುವನೋ, ಅವರೆದುರು ಸಾಧಕನಲ್ಲಿನ ‘ತನ್ನನ್ನು ಶ್ರೇಷ್ಠವೆಂದು ತಿಳಿಯುವುದು’ ಎಂಬ ಸ್ವಭಾವದೋಷಗಳು ಉಮ್ಮಳಿಸಿ ಬರುತ್ತದೆ.

೩. ಅಸುರಕ್ಷಿತತೆ ಮತ್ತು ಕೀಳರಿಮೆ ಇವುಗಳಿಂದಾಗುವ ಹಾನಿ

೩ ಅ. ಅಸುರಕ್ಷಿತತೆ ಮತ್ತು ಕೀಳರಿಮೆ ಇವುಗಳಿಂದಾಗಿ ಮನಸ್ಸು ದುರ್ಬಲಗೊಳ್ಳುತ್ತದೆ.

೩ ಆ. ತಪ್ಪುಗಳಿಂದ ಕಲಿತು ಸಾಧನೆಯಲ್ಲಿ ಮುಂದೆ ಹೋಗುವ ವೃತ್ತಿ ಇಲ್ಲದಿರುವುದರಿಂದ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯು ನಿಧಾನವಾಗುವುದು : ಈ ಸ್ವಭಾವದೋಷವಿರುವ ಸಾಧಕರು ತಪ್ಪುಗಳ ಬಗ್ಗೆ ತುಂಬಾ ಸಂವೇದನಶೀಲರಾಗಿರುತ್ತಾರೆ. ಯಾರಾದರೂ ಅವರ ತಪ್ಪನ್ನು ಗಮನಕ್ಕೆ ತಂದು ಕೊಟ್ಟರೆ ಅಥವಾ ವ್ಯಷ್ಟಿ ಸಾಧನೆಯ ವರದಿಯಲ್ಲಿ ಅವರಿಗೆ ಅವರ ತಪ್ಪುಗಳ ಅರಿವು ಮಾಡಿಕೊಟ್ಟಾಗ ಅವರು ‘ನಾನು ಒಳ್ಳೆಯ ಸಾಧಕನಲ್ಲ’, ‘ನಾನು ಎಷ್ಟೇ ಪ್ರಯತ್ನಿಸಿದರೂ ನನ್ನ ಪ್ರಗತಿ ಆಗಲಾರದು’, ಇವುಗಳಂತಹ ವಿಚಾರ ಮಾಡಿ ನಕಾರಾತ್ಮಕ ಸ್ಥಿತಿಗೆ ಹೋಗುತ್ತಾನೆ. ಅವನ ಕಲಿಯುವ ದೃಷ್ಟಿಕೋನದಲ್ಲಿ ತಪ್ಪು ಸ್ವೀಕರಿಸುವ ಸಿದ್ಧತೆ ಇಲ್ಲದಿರುವುದರಿಂದ ತಪ್ಪುಗಳಿಂದ ಕಲಿತು ಸಾಧನೆಯಲ್ಲಿ ಮುಂದೆ ಹೋಗುವ ಅವನ ವೃತ್ತಿ ಇರುವುದಿಲ್ಲ. ಆದ್ದರಿಂದ ಅವನ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯು ನಿಧಾನವಾಗುತ್ತದೆ.

೩ ಇ. ‘ಕೀಳರಿಮೆ’ ಎಂಬ ಅಹಂನ ಅನುಚಿತ ಲಾಭಪಡೆದು ಕೆಟ್ಟ ಶಕ್ತಿಗಳು ಸಾಧಕನನ್ನು ನಕಾರಾತ್ಮಕ ಸ್ಥಿತಿಯಲ್ಲಿಡುವುದು ಮತ್ತು ಅವನ ಒಟ್ಟಿನಲ್ಲಿ ಆಧ್ಯಾತ್ಮಿಕ ಉಪಾಯ ಮತ್ತು ವ್ಯಷ್ಟಿ ಸಾಧನೆಯ ಪ್ರಯತ್ನ ಕಡಿಮೆಯಾಗುವಂತೆ ಅಥವಾ ನಿಲ್ಲಿಸಲು ಬೆನ್ನು ಬೀಳುವುದು : ಕೆಟ್ಟ ಶಕ್ತಿಯು ಸಾಧಕನಲ್ಲಿನ ‘ಕೀಳರಿಮೆ’ ಎಂಬ ಅಹಂನ ಲಾಭ ಪಡೆದುಕೊಂಡು ಅವನನ್ನು ಸತತವಾಗಿ ನಕಾರಾತ್ಮಕ ಸ್ಥಿತಿಯಲ್ಲಿಟ್ಟು ಅವನಿಗೆ ಆಧ್ಯಾತ್ಮಿಕ ಉಪಾಯ ಮತ್ತು ವ್ಯಷ್ಟಿ ಸಾಧನೆಯ ಪ್ರಯತ್ನ ಕಡಿಮೆಯಾಗುವಂತೆ ಅಥವಾ ನಿಲ್ಲಿಸಲು ಬೆಂಬತ್ತುತ್ತದೆ. ಆದ್ದರಿಂದ ಅವನ ಶಕ್ತಿ ಖರ್ಚಾಗುತ್ತದೆ. ಸಾಧಕನ ಪ್ರಯತ್ನಗಳು ಅವನ ಕ್ಷಮತೆಗಿಂತ ಕಡಿಮೆಯಾಗುತ್ತದೆ. ಪರಿಣಾಮವಾಗಿ ಅವನ ಆಧ್ಯಾತ್ಮಿಕ ಪ್ರಗತಿಯ ಗತಿಯು ಕಡಿಮೆಯಾಗುತ್ತದೆ.

೪. ಸಾಧಕರಲ್ಲಿರುವ ‘ಅಸುರಕ್ಷಿತತೆ ಭಾವನೆ’ ಎಂಬ ಸ್ವಭಾವದೋಷದಿಂದಾಗಿ ಅವನ ಸಮಷ್ಟಿ ಸಾಧನೆ ಮತ್ತು ಅಧ್ಯಾತ್ಮಪ್ರಸಾರ ಇವುಗಳ ಮೇಲಾಗುವ ವಿಪರೀತ ಪರಿಣಾಮ

ಅ. ಸವಾಲುಗಳನ್ನು ಸ್ವೀಕರಿಸಲು ಸಾಧಕನ ಮನಸ್ಸಿನ ದ್ವಂದ್ವ ಮನಃಸ್ಥಿತಿ ಇರುವುದರಿಂದ ಹೆಚ್ಚು ಜವಾಬ್ದಾರಿಯಿರುವ ಸೇವೆ ಮಾಡುವುದು ಮತ್ತು ಮುಂದಿನ ಸ್ತರದ ಹೊಸ ಸೇವೆಗಳನ್ನು ಕಲಿತುಕೊಳ್ಳುವುದು, ಇಂತಹ ಅವಕಾಶ ಅವನು ಕಳೆದುಕೊಳ್ಳಬಹುದು.

ಆ. ‘ನನಗೆ ಈ ಸೇವೆ ಮಾಡಲು ಆಗುವುದಿಲ್ಲ’, ‘ನನ್ನಲ್ಲಿ ಈ ಸೇವೆ ಮಾಡುವ ಕ್ಷಮತೆ ಇಲ್ಲ’ ‘ನಾನು ಸೇವೆಯನ್ನು ಹೇಗೆ ಮಾಡಲಿ ?’ ಮತ್ತು ‘ನನಗೆ ಖಂಡಿತವಾಗಿಯೂ ಯಶಸ್ಸು ಸಿಗುವುದಿಲ್ಲ’, ಇಂತಹ ನಕಾರಾತ್ಮಕ ವಿಚಾರ ಮಾಡಿ ಅವನಿಗೆ ಕಠಿಣವೆನಿಸುವ ಸೇವೆ ಮಾಡಲು ಅವನು ಮುಂದೂಡುತ್ತಾನೆ.

ಇ. ಸೇವೆ ಮಾಡುವಾಗ ಬರುವ ಅಡಚಣೆಗಳನ್ನು ಪರಿಹರಿಸುವುದು, ಅಡಚಣೆಗಳ ಕಲ್ಪನೆಯ ಜವಾಬ್ದಾರಿ ಸಾಧಕರಿಗೆ ಕೊಡುವುದು ಮತ್ತು ಸಮಷ್ಟಿ ಸೇವೆಯಲ್ಲಿ ಇತರ ಸಾಧಕರಿಂದ ಘಟಿಸುವ ತಪ್ಪುಗಳ ಬಗ್ಗೆ ಮುಂದೆ ಹೇಳುವುದು, ಇವುಗಳಲ್ಲಿ ಸಾಧಕನ ಮನಸ್ಸಿನ ದ್ವಂದ್ವ ಮನಃಸ್ಥಿತಿ ಆಗಬಹುದು.

ಈ. ಕೆಲವೊಮ್ಮೆ ಇತರ ಸಾಧಕರು ಮಾಡುತ್ತಿರುವ ತಪ್ಪು ಕೃತಿ ಅಥವಾ ಅವರಿಂದಾಗುವ ಅಯೋಗ್ಯ ಮಾತು ಇವುಗಳನ್ನು ಸಾಧಕನು ಅನುಕರಣೆ ಮಾಡಬಹುದು. ಅದರಿಂದ ಸಮಷ್ಟಿ ಸಾಧನೆಯಲ್ಲಿ ಅಡಚಣೆ ನಿರ್ಮಾಣವಾಗಬಹುದು. ಆ ಬಗ್ಗೆ ಜವಾಬ್ದಾರ ಸಾಧಕರಿಗೆ ಹೇಳುವುದು, ಅವನ ಮುಂದಿನ ಜವಾಬ್ದಾರ ಸಾಧಕರಿಗೆ ಹೇಳುವುದು ಅಥವಾ ಬಗ್ಗೆ ಮಾರ್ಗದರ್ಶನ ಪಡೆಯುವುದು, ಇವುಗಳಂತಹ ಕೃತಿ ಮಾಡಲು ಅವನಿಗೆ ಸಾಧ್ಯವಾಗುವುದಿಲ್ಲ.

ಉ. ಅಸುರಕ್ಷಿತ ಭಾವನೆ ಸಾಧಕನಲ್ಲಿನ ಕ್ಷಾತ್ರವೃತ್ತಿಯನ್ನು ಕಡಿಮೆಮಾಡುತ್ತದೆ ಹಾಗೂ ಅವನ ಆಧ್ಯಾತ್ಮಿಕ ತೊಂದರೆಯೊಂದಿಗೆ ಹೋರಾಡುವ ಕ್ಷಮತೆಯನ್ನು, ಅಧ್ಯಾತ್ಮಪ್ರಸಾರದ ಕಾರ್ಯದಲ್ಲಿ ವಿರೋಧಕರ ಎದುರಿಸುವ ಕ್ಷಮತೆಯನ್ನು, ಸಮಾಜದಲ್ಲಿನ ಅಧರ್ಮವನ್ನು ಎದುರಿಸುವುದು ಮತ್ತು ಅದನ್ನು ವಿರೋಧಿಸುವ ಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಈ ಎಲ್ಲ ಸಮಷ್ಟಿ ಕಾರ್ಯದ ಮೇಲೆ ವಿಪರೀತ ಪರಿಣಾಮವಾಗುತ್ತದೆ. ಗುರುಗಳಿಗೆ ಅಪೇಕ್ಷಿತವಿದ್ದಂತೆ ಸಮಷ್ಟಿ ಕಾರ್ಯವು ನಮ್ಮಿಂದ ಆಗುವುದಿಲ್ಲ. ಸಮಾಜದಲ್ಲಿನ ಅಧರ್ಮದ ವಿರೋಧ ಮಾಡದಿರುವುದರಿಂದ ನಮ್ಮ ವರ್ತನೆ ಧರ್ಮಕ್ಕೆ ವಿರುದ್ಧವಾಗಿ ನಾವು ಪಾಪದ ಪಾಲುಗಾರರಾಗುವೆವು.

೫. ದೇವರು ಪ್ರತಿಕ್ಷಣ ನಮ್ಮ ಕಾಳಜಿ ವಹಿಸುತ್ತಿರುವುದರಿಂದ ನಾವು ನಿರಂತರವಾಗಿ ಸುರಕ್ಷಿತವಿರುವುದು, ‘ಅಸುರಕ್ಷಿತತೆ ಮತ್ತು ಕೀಳರಿಮೆ’ ಇವು ಕೇವಲ ಒಂದು ಭ್ರಮೆಯಾಗಿರುವುದು

ವಾಸ್ತವದಲ್ಲಿ ‘ಅಸುರಕ್ಷಿತತೆ ಮತ್ತು ಕೀಳರಿಮೆ’ಯು ಒಂದು ಭ್ರಮೆಯಾಗಿದೆ. ನಮಗೆ ಅಸುರಕ್ಷಿತತೆ ಅನಿಸುತ್ತಿರುತ್ತದೆ; ಆದರೆ ದೇವರು ಪ್ರತಿಕ್ಷಣ ನಮ್ಮ ಕಾಳಜಿ ವಹಿಸುತ್ತಿರುವುದರಿಂದ ನಾವು ನಿರಂತರ ಸುರಕ್ಷಿತರಾಗಿರುತ್ತೇವೆ. ‘ದೇವರ ಅಸ್ತಿತ್ವ ಮತ್ತು ಅವನು ಸತತವಾಗಿ ನಮ್ಮೊಂದಿಗಿದ್ದು ನಮ್ಮ ಕಾಳಜಿ ವಹಿಸುತ್ತಾನೆ’, ಎಂಬುದರ ಅರಿವು ಮನಸ್ಸಿನಲ್ಲಿ ಇರುವುದಿಲ್ಲ. ಇದರಿಂದ ಮನಸ್ಸಿಗೆ ಭಯವಾಗುತ್ತದೆ ಮತ್ತು ಅವನಿಗೆ ಅಸುರಕ್ಷಿತವೆನಿಸುತ್ತದೆ. ‘ನಾವು ಇತರರಿಗಿಂತ ಕಡಿಮೆ ಇದ್ದೇವೆ’, ಎಂದು ನಮಗೆ ಅನಿಸುತ್ತದೆ. ವಾಸ್ತವದಲ್ಲಿ ನಮ್ಮೆಲ್ಲರಲ್ಲಿ ಒಂದೇ ಆತ್ಮವಿದೆ. ಇದರಿಂದ ಶ್ರೇಷ್ಠ ಅಥವಾ ಕನಿಷ್ಠ ಎಂಬ ಪ್ರಶ್ನೆ ಬರುವುದಿಲ್ಲ. ಜೀವವು ಅತ್ಯಂತ ಸೂಕ್ಷ್ಮ ಮತ್ತು ಕ್ಷುಲ್ಲಕವಾಗಿದ್ದರೂ, ಪ್ರತಿಯೊಬ್ಬರಲ್ಲಿರುವ ‘ಆತ್ಮ’ವು ದೇವರ ಅಂಶವೇ ಆಗಿದೆ. ಅದು ಅಮೂಲ್ಯವಾಗಿದ್ದು ಸತ್-ಚಿತ್-ಆನಂದ ಸ್ವರೂಪವಿದೆ. ಇದೇ ನಮ್ಮ ನಿಜವಾದ ಮೌಲ್ಯ (ನಿಜವಾದ ಗುರುತು)ವಾಗಿದೆ. ನಾವು ನಮ್ಮ ಸಂಬಂಧವನ್ನು ನನ್ನ ಮನಸ್ಸು, ಬುದ್ಧಿ ಮತ್ತು ಅಹಂ ಇವುಗಳೊಂದಿಗೆ ಜೋಡಿಸಿರುವುದರಿಂದ ಕೀಳರಿಮೆಯ ಭಾವನೆ ಉದ್ಭವಿಸುತ್ತದೆ. ‘ಎಲ್ಲವೂ ನಮ್ಮ ಮೇಲೆ ಅವಲಂಬಿಸಿದೆ’, ಎಂಬ ಭ್ರಮೆಯಲ್ಲಿ ನಾವು ಇರುತ್ತೇವೆ, ಆದರೆ ಅದೇ ಸಮಯದಲ್ಲಿ ‘ನಮಗೆ ಏನೂ ಮಾಡಲು ಸಾಧ್ಯವಿಲ್ಲ’, ಎಂದು ನಮಗೆ ಅನಿಸುತ್ತದೆ. ವಾಸ್ತವದಲ್ಲಿ ನಮ್ಮ ಮೇಲೆ ಏನೂ ಅವಲಂಬಿಸಿರುವುದಿಲ್ಲ; ಏಕೆಂದರೆ ಜಗತ್ತಿನಲ್ಲಿ ಪ್ರತಿಯೊಂದು ವಿಷಯವು ದೇವರ ಇಚ್ಛೆಯಂತೆ ನಡೆಯುತ್ತಿರುತ್ತದೆ. ಆದ್ದರಿಂದ ದೇವರ ಅಥವಾ ಗುರುಗಳ ಕೃಪೆಯಿಂದಾಗಿ ಜಗತ್ತಿನಲ್ಲಿ ಎಲ್ಲವೂ ಸಾಧ್ಯವಾಗುತ್ತದೆ.

೬. ‘ಅಸುರಕ್ಷಿತತೆ’ ಮತ್ತು ‘ಕೀಳರಿಮೆ’ ದೂರ ಮಾಡಲು ಮಾಡಬೇಕಾದ ಪ್ರಯತ್ನ

೬ ಅ. ಸ್ವಯಂಸೂಚನೆ ನೀಡುವುದು

೬ ಅ ೧. ಪ್ರಗತಿಯ ಸ್ವಯಂಸೂಚನೆ ನೀಡುವುದು : ಸಾಧನೆಯಿಂದ ನಮ್ಮಲ್ಲಾಗುವ ಬದಲಾವಣೆ ಅಥವಾ ನಮ್ಮಲ್ಲಾಗುವ ಪ್ರಗತಿಯು ಗಮನಕ್ಕೆ ಬಂದ ನಂತರ ಅದರ ಆಧಾರದಲ್ಲಿ ಪ್ರಗತಿಯ ಸೂಚನೆ ಕೊಡುವುದು ಆವಶ್ಯಕವಿದೆ. ವಿಶೇಷವಾಗಿ ಯಾವ ಸಾಧಕರಲ್ಲಿ ‘ಅಸುರಕ್ಷಿತತೆ’ ಎಂಬ ಸ್ವಭಾವದೋಷವಿದೆ, ಅವರು ಅದನ್ನು ಕೊಡುವುದು ಅತ್ಯಂತ ಅವಶ್ಯಕವಿದೆ. ಕೆಲವೊಮ್ಮೆ ತನ್ನಲ್ಲಾದ ಪ್ರಗತಿಯು ಗಮನಕ್ಕೆ ಬಂದರೂ ಅದರ ಮೇಲೆ ವಿಶ್ವಾಸ ಇಲ್ಲದಿರುವುದರಿಂದ ಸಾಧಕನು ಪ್ರಗತಿಯ ಸೂಚನೆ ಕೊಡುವುದನ್ನು ತಪ್ಪಿಸುತ್ತಾನೆ; ಆದರೆ ಆ ಸೂಚನೆಯನ್ನು ಸತತವಾಗಿ ಕೊಡುವುದು ಅವಶ್ಯಕವಿದೆ.

೬ ಅ ೨. ‘ಅ ೧’ ಅಥವಾ ‘ಅ ೨’ ಈ ಪದ್ಧತಿಗನುಸಾರ ಸ್ವಯಂಸೂಚನೆ ಕೊಡುವುದು : ಸನಾತನ ಪ್ರಕಾಶಿಸಿದ ‘ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆ (ಭಾಗ ೨)’ ಈ ಗ್ರಂಥದಲ್ಲಿ ಕೊಟ್ಟಿರುವಂತೆ ‘ಅ ೧’ ಅಥವಾ ‘ಅ ೨’ ಈ ಪದ್ಧತಿಗನುಸಾರ ಸ್ವಯಂಸೂಚನೆ ಕೊಡುವುದರಿಂದ ‘ಅಸುರಕ್ಷಿತತೆ’ ಎಂಬ ಸ್ವಭಾವದೋಷ ಯಾವ ಯಾವ ಪ್ರಸಂಗಗಳಲ್ಲಿ ಪ್ರಕಟವಾಗುತ್ತದೆ ?, ಎಂದು ಗಮನಕ್ಕೆ ಬರುತ್ತದೆ. ಅದರಿಂದ ಆ ಸ್ವಭಾವದೋಷವನ್ನು ಜಯಿಸಲು ಮನಸ್ಸಿಗೆ ಯೋಗ್ಯ ದೃಷ್ಟಿಕೋನವನ್ನು ನೀಡಲು ಸ್ವಯಂಸೂಚನೆಗಳ ಲಾಭವಾಗುತ್ತದೆ.

೬ ಅ ೩. ‘ಅ ೩’ ಪದ್ಧತಿಯ ಸ್ವಯಂಸೂಚನೆ ಕೊಡುವುದು : ಯಾವುದೇ ಹೊಸ ಮತ್ತು ಕಠಿಣ ಪ್ರಸಂಗಗಳನ್ನು ಎದುರಿಸಲು ‘ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆ (ಭಾಗ ೨)’ ಎಂಬ ಗ್ರಂಥದಲ್ಲಿ ಕೊಟ್ಟಿರುವಂತೆ ‘ಅ ೩’ ಪದ್ಧತಿಯ ಸ್ವಯಂಸೂಚನೆ ಕೊಡಬೇಕು. ಇದರಿಂದ ಅಲ್ಪ ಅವಧಿಯಲ್ಲಿ ನಾವು ಆ ಪ್ರಸಂಗವನ್ನು ಯಶಸ್ವಿಯಾಗಿ ಎದುರಿಸಬಹುದು, ಹಾಗೆಯೇ ನಮಗೆ ಸಕಾರಾತ್ಮಕತೆಯ ಅನುಭವ ಬರುತ್ತದೆ ಮತ್ತು ಆ ಮೂಲಕ ನಮ್ಮ ಪ್ರಗತಿಯಾಗುತ್ತದೆ.

೬ ಆ. ವಿವಿಧ ಕೃತಿ ಮಾಡುತ್ತಿರುವಾಗ ಮನಸ್ಸಿಗೆ ಕೊಡಬೇಕಾದ ಯೋಗ್ಯ ದೃಷ್ಟಿಕೋನಗಳು

೬ ಆ ೧. ಸೇವೆ ಸಿಗುವುದು : ಗುರುಗಳು ನನಗೆ ಸೇವೆ ಕೊಟ್ಟಿದ್ದು ಅದನ್ನು ಮಾಡಲು ಜವಾಬ್ದಾರ ಸಾಧಕರ ಸಹಾಯವನ್ನು ನೀಡಿದ್ದಾರೆ. ಆದುದರಿಂದ ಈ ಸೇವೆ ಮಾಡುವುದು ನನಗೆ ಸಹಜ ಸಾಧ್ಯವಾಗಿದೆ. ನಾನು ನನ್ನ ಮನಸ್ಸು ಮತ್ತು ಬುದ್ಧಿ ಇವುಗಳ ಮೇಲೆ ವಿಶ್ವಾಸ ಇಡುವುದಕ್ಕಿಂತ ಗುರುಗಳ ಮತ್ತು ಜವಾಬ್ದಾರ ಸಾಧಕರ ಮೇಲೆ ವಿಶ್ವಾಸ ಇಡುವೆನು.

೬ ಆ ೨. ತನಗಿಂತ ಇತರ ಸಾಧಕರಲ್ಲಿನ ಹೆಚ್ಚು ಗುಣವೈಶಿಷ್ಟ್ಯಗಳು ಗಮನಕ್ಕೆ ಬರುವುದು : ಆ ಸಾಧಕರಲ್ಲಿ ಕೆಲವು ಗುಣವೈಶಿಷ್ಟ್ಯಗಳಿವೆ ಮತ್ತು ನನ್ನಲ್ಲಿಯೂ ಕೆಲವು ಗುಣವೈಶಿಷ್ಟ್ಯಗಳಿವೆ ದೇವರು ಆ ಸಾಧಕರಿಗೆ ನನ್ನೆದುರು ಆದರ್ಶವೆಂದು ತೋರಿಸಿ ಅವರಲ್ಲಿರುವ ಗುಣಗಳನ್ನು ನನ್ನಲ್ಲಿ ಬೆಳೆಸಲು ಒಂದು ಅವಕಾಶ ನೀಡಿದ್ದಾರೆ. ಆದುದರಿಂದ ನಾನು ನಿಶ್ಚಿತವಾಗಿ ಆ ಗುಣಗಳನ್ನು ಅಂಗೀಕರಿಸಲು ಪ್ರಯತ್ನಿಸುವೆನು.

೬ ಆ ೩. ಇತರ ಸಾಧಕರನ್ನು ಪ್ರಶಂಸಿಸಿದಾಗ ಅಥವಾ ಅವರ ಪ್ರಗತಿ ತನಗಿಂತ ಹೆಚ್ಚಾಗುವುದು : ಓರ್ವ ಸಾಧಕನ ಪ್ರಗತಿಯಾದಾಗ ದೇವರು ನನ್ನ ಮೇಲಿನ ಪ್ರೀತಿಯನ್ನು ಅಥವಾ ನನ್ನ ಅಧ್ಯಾತ್ಮಿಕ ಪ್ರಗತಿಯ ಸಾಧ್ಯತೆಯನ್ನು ಕಡಿಮೆ ಮಾಡಲಿಲ್ಲ. ಪ್ರತಿಯೊಬ್ಬ ಸಾಧಕನು ತನ್ನದೇ ಆದ ಒಂದು ವಿಶಿಷ್ಟ ಮಾರ್ಗದಿಂದ ಮುಂದೆ ಹೋಗುತ್ತಾನೆ. ದೇವರು ನನಗೆ ಮತ್ತು ಇತರ ಸಾಧಕರಿಗೆ ಪ್ರಗತಿಯ ಸಮಾನ ಅವಕಾಶ ನೀಡುತ್ತಿರುತ್ತಾನೆ. ಆದ್ದರಿಂದ ನಾನು ನನ್ನ ಪ್ರಯತ್ನವನ್ನು ಮುಂದುವರಿಸುವೆನು ಮತ್ತು ಆ ಸಾಧಕರಿಂದ ಕಲಿಯಲು ಪ್ರಯತ್ನಿಸುವೆನು.

೬ ಆ ೪. ‘ನಾವು ಪ್ರಗತಿ ಮಾಡಿಕೊಳ್ಳಲು ಸಾಧ್ಯವಿಲ್ಲ’ ಅಥವಾ ‘ನಮ್ಮಲ್ಲಿ ಪರಿವರ್ತನೆಯಾಗಲು ಸಾಧ್ಯವಿಲ್ಲ’, ಎಂದೆನಿಸುವುದು : ‘ನಾವು ಪ್ರಗತಿ ಮಾಡಿಕೊಳ್ಳಲು ಸಾಧ್ಯವಿಲ್ಲ’ ಅಥವಾ ‘ನಮ್ಮಲ್ಲಿ ಪರಿವರ್ತನೆಯಾಗಲು ಸಾಧ್ಯವಿಲ್ಲ’, ಎಂದು ಅನಿಸುತ್ತಿರುವಾಗ ಮುಂದಿನ ಆಶಯದ ಸ್ವಯಂಸೂಚನೆ ಕೊಡಬೇಕು, ‘ನನಗಾಗಿ ಇದು ಸಾಧ್ಯವಿಲ್ಲದಿದ್ದರೂ, ದೇವರಿಗೆ ಎಲ್ಲವೂ ಸಾಧ್ಯವಿದೆ. ಇದುವರೆಗೆ ನನ್ನ ಆಯುಷ್ಯದಲ್ಲಿನ ಪ್ರತಿಯೊಂದು ಪ್ರಸಂಗದಲ್ಲಿ ದೇವರು ನನ್ನ ಕಾಳಜಿ ವಹಿಸಿದ್ದಾನೆ. ಅವನು ಈಗಲೂ ಕ್ಷಣ ಕ್ಷಣಕ್ಕೆ ನನ್ನ ಕಾಳಜಿ ವಹಿಸುತ್ತಲೇ ಇದ್ದಾನೆ. ಆದ್ದರಿಂದ ನಾನು ದೇವರಿಗೆ ಸಂಪೂರ್ಣವಾಗಿ ಶರಣಾಗಿ ಅವನ ಮೇಲೆ ಶ್ರದ್ಧೆ ಇಡುವೆನು’.

೬ ಇ. ಕೃತಿಯ ಸ್ತರದಲ್ಲಿ ಮಾಡಬೇಕಾದ ಪ್ರಯತ್ನ

೧. ಪ್ರತಿಯೊಂದು ಪ್ರಸಂಗವನ್ನು ಎದುರಿಸಬೇಕು ಮತ್ತು ಎಲ್ಲ ಸೇವೆಗಳನ್ನು ಸ್ವೀಕರಿಸಬೇಕು. ಹೀಗೆ ಮಾಡಿದರೆ ‘ನಾವು ಏನೂ ಮಾಡಬಹುದು’, ಎಂದು ಅನುಭವಿಸಲು ಬರುತ್ತದೆ ಮತ್ತು ಅದರಿಂದ ಅಸುರಕ್ಷಿತತೆಯ ಭಾವನೆ ಕಡಿಮೆಯಾಗುತ್ತದೆ.

೨. ತನ್ನಲ್ಲಿನ ಅಸುರಕ್ಷಿತತೆಯ ಭಾವನೆ, ಕೀಳರಿಮೆ ಅಥವಾ ನಕಾರಾತ್ಮಕ ವಿಚಾರಗಳು ಉಮ್ಮಳಿಸಿದಾಗ ಜವಾಬ್ದಾರ ಸಾಧಕರ ಮತ್ತು ಆಧ್ಯಾತ್ಮಿಕ ಗೆಳೆಯ/ ಗೆಳತಿ ಇವರೊಂದಿಗೆ ಮನಮುಕ್ತತೆಯಿಂದ ಮಾತನಾಡಬೇಕು. ಅವರು ನೀಡಿದ ಸಕಾರಾತ್ಮಕ ದೃಷ್ಟಿಕೋನದಿಂದ ಅಸುರಕ್ಷಿತತೆಯ ಭಾವನೆ ಕಡಿಮೆಯಾಗುತ್ತದೆ.

೩. ತನ್ನಲ್ಲಿನ ಗುಣವೈಶಿಷ್ಟ್ಯಗಳನ್ನು ಬರೆದಿಡಬೇಕು. ಅದರಿಂದ ತನ್ನಲ್ಲಿನ ನಕಾರಾತ್ಮಕತೆ ಕಡಿಮೆಯಾಗಿ ಸಕಾರಾತ್ಮಕತೆಯ ಮತ್ತು ಗುಣಗಳ ಅರಿವಾಗುತ್ತದೆ. ‘ತನ್ನಲ್ಲಿ ಅಹಂ ಹೆಚ್ಚಾಗಬಹುದು’, ಎಂಬ ಭಯದಿಂದ ಕೆಲವೊಮ್ಮೆ ನಾವು ನಮ್ಮ ಗುಣವೈಶಿಷ್ಟ್ಯಗಳ ಕಡೆಗೆ ಕಣ್ಣಿದ್ದು ಕುರುಡರಂತೆ ಮಾಡುತ್ತೇವೆ; ಆದರೆ ‘ಈ ಗುಣಗಳನ್ನು ದೇವರು ನೀಡಿದ್ದಾನೆ’, ಎಂಬ ಅರಿವಿನಿಂದ ಕೃತಜ್ಞತೆ ಸಲ್ಲಿಸಿದರೆ ಪ್ರತ್ಯಕ್ಷದಲ್ಲಿ ಆ ಗುಣಗಳ ಬಗ್ಗೆ ನಮಗೆ ಅನಿಸುವ ಅಹಂ ಕಡಿಮೆಯಾಗುತ್ತದೆ. ತನ್ನಲ್ಲಿನ ಸಕಾರಾತ್ಮಕತೆಯ ಅರಿವು ಮಾಡಿಕೊಳ್ಳದಿದ್ದರೆ ನಮ್ಮ ಅಂತರ್ಮನದಲ್ಲಿ ಗುಣಗಳ ಬಗ್ಗೆ ಅಹಂ ಹಾಗೆಯೇ ಇರುತ್ತದೆ. ಆದ್ದರಿಂದ ಶ್ರೇಷ್ಠತ್ವದ ಭಾವನೆ ಮತ್ತು ಅಹಂಕಾರ ಎರಡೂ ಜೋಪಾಸನೆ ಮಾಡಲಾಗುತ್ತದೆ.

೪. ತನ್ನಲ್ಲಿನ ಗುಣವೈಶಿಷ್ಟ್ಯಗಳು ತನ್ನ ಗಮನಕ್ಕೆ ಬರದಿದ್ದರೆ ಇತರ ಸಾಧಕರಿಗೆ ನಮ್ಮಲ್ಲಿನ ಅರಿವಾದ ಗುಣಗಳನ್ನು ವಿಚಾರಿಸಬೇಕು. ಸಾಧಕರು ಅದನ್ನು ಹೇಳುತ್ತಿರುವಾಗ ‘ಪ್ರತ್ಯಕ್ಷ ಗುರುಗಳೇ ಅದನ್ನು ಹೇಳುತ್ತಿದ್ದಾರೆ’, ಎಂಬ ಭಾವ ಇಡುವುದು ಅವಶ್ಯಕವಿದೆ. ‘ಅಸುರಕ್ಷಿತತೆ’ ಎಂಬ ಸ್ವಭಾವ ದೋಷವನ್ನು ಜಯಿಸಲು ಪ್ರಯತ್ನ ಮಾಡಿದ ಸಾಧಕರೊಂದಿಗೆ ಮಾತನಾಡಿ ‘ಅದನ್ನು ಜಯಿಸಲು ಅವರು ಏನು ಪ್ರಯತ್ನ ಮಾಡಿದರು ?’, ಎಂದು ಕೇಳಬೇಕು.

೭. ‘ಅಸುರಕ್ಷಿತತೆ’ ಮತ್ತು ‘ಕೀಳರಿಮೆ’ ಇವುಗಳು ದೂರವಾದ ನಂತರ ಆಗುವ ಲಾಭ

ಅ. ಸಾಧಕರಲ್ಲಿನ ಭಾವಾನಪ್ರಧಾನತೆ ಕಡಿಮೆಯಾಗಿ ಅವರು ಆಧ್ಯಾತ್ಮಿಕ ಮಟ್ಟದಲ್ಲಿರಲು ಸಾಧ್ಯವಾಗುತ್ತದೆ.

ಆ. ಸಾಧಕರಲ್ಲಿನ ಕ್ಷಾತ್ರವೃತ್ತಿ ಹೆಚ್ಚಾಗುತ್ತದೆ ಅವರಿಗೆ ಸಾಧನೆಯಲ್ಲಿ ಮತ್ತು ದೈನಂದಿನ ಜೀವನದಲ್ಲಿನ ಯಾವುದೇ ಪ್ರಸಂಗವನ್ನು ಸ್ಥಿರತೆಯಿಂದ ಎದುರಿಸಲು ಬರುತ್ತದೆ.

ಇ. ಇತರರು ಹೇಳಿದ ತಪ್ಪನ್ನು ಸಹಜವಾಗಿ ಸ್ವೀಕರಿಸಲು ಆಗುತ್ತದೆ.

ಈ. ಇತರರ ಬಗ್ಗೆ ಪ್ರೇಮಭಾವ ಮತ್ತು ಮನಮುಕ್ತತೆ ಇವುಗಳಲ್ಲಿ ಹೆಚ್ಚಳವಾಗುತ್ತದೆ.

ಉ. ಆನಂದ ಮತ್ತು ಶಾಂತಿ ಹೆಚ್ಚು ಪ್ರಮಾಣದಲ್ಲಿ ಅನುಭವಿಸಲು ಸಿಗುತ್ತದೆ.

ಊ. ‘ಅಸುರಕ್ಷಿತತೆ’ ಎಂಬ ಸ್ವಭಾವದೋಷದೊಂದಿಗೆ ಸಂಬಂಧಿಸಿದ ಇತರ ಸ್ವಭಾವದೋಷಗಳು ಮತ್ತು ಅಹಂ ಲಕ್ಷಣಗಳು ಕಡಿಮೆಯಾಗುತ್ತವೆ.

ಎ. ನಮ್ರತೆ ಮತ್ತು ಕೃತಜ್ಞತಾಭಾವ ಹೆಚ್ಚಾಗುತ್ತದೆ.

ಏ. ಆಧ್ಯಾತ್ಮಿಕ ಪ್ರಗತಿಯು ಶೀಘ್ರಗತಿಯಿಂದ ಆಗುತ್ತದೆ.

ಓ. ಸಮಷ್ಟಿ ಸೇವೆ ಮಾಡುವ ಕ್ಷಮತೆಯಲ್ಲಿ ತುಂಬಾ ವೃದ್ಧಿಯಾಗುತ್ತದೆ.

ಹೇ ಶ್ರೀಕೃಷ್ಣಾ, ನೀನೇ ನಮಗೆ ನಮ್ಮಲ್ಲಿನ ತೊಂದರೆದಾಯಕವಾಗಿರುವ ಸ್ವಭಾವದೋಷಗಳನ್ನು ಎದುರಿಸಲು ಅವಶ್ಯಕವಿರುವ ಪ್ರಯತ್ನ ಮಾಡಿಸಿಕೋ. ನಮ್ಮ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಿ ನಮಗೆ ನಿನ್ನ ಸಮಷ್ಟಿ ರೂಪದೊಂದಿಗೆ ಏಕರೂಪವಾಗುವಂತಾಗಲಿ, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ !

– ಶ್ರೀ. ದೇಯಾನ್ ಗ್ಲೇಶ್ಚಿಚ್, ಯುರೋಪ್ (೨.೨.೨೦೧೮)

Leave a Comment