ಹಂತ ೪. ಸ್ವಭಾವದೋಷಗಳ ಪಟ್ಟಿಯನ್ನು ತಯಾರಿಸುವುದು

ಹಂತ ೪. ಸ್ವಭಾವದೋಷಗಳ ಪಟ್ಟಿಯನ್ನು ತಯಾರಿಸುವುದು ಮತ್ತು ಸ್ವಭಾವದೋಷಗಳ ವರ್ಗೀಕರಣ 

ಸ್ವಭಾವದೋಷಗಳ ಪಟ್ಟಿಯನ್ನು ತಯಾರಿಸುವುದು

೧.  ದಿನವಿಡೀ ಘಟಿಸಿದ ಪ್ರಸಂಗಗಳ ಅಧ್ಯಯನವನ್ನು ಮಾಡಿ ಅಯೋಗ್ಯ ಕೃತಿಗಳ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ವಿಶ್ಲೇಷಣೆಯನ್ನು ಮಾಡಬೇಕು. ಅದರಿಂದ ಮೂಲ ಅಥವಾ ಮೂಲಭೂತ ಸ್ವಭಾವ ದೋಷಗಳನ್ನು ಕಂಡುಹಿಡಿದು ಅವುಗಳ ಪಟ್ಟಿಯನ್ನು ತಯಾರಿಸಬೇಕು.

೨.  ಸ್ವಭಾವದೋಷಗಳ ವರ್ಗೀಕರಣವನ್ನು ಮಾಡುವುದು : ಸ್ವಭಾವದೋಷಗಳ ಪಟ್ಟಿಯನ್ನು ನೋಡಿ ಅವುಗಳನ್ನು ವರ್ಗೀಕರಿಸಬೇಕು. ವರ್ಗೀಕರಿಸುವಾಗ ಮುಂದಿನ ಅಂಶ ಗಮನದಲ್ಲಿಟ್ಟುಕೊಳ್ಳಬೇಕು.

೨ ಅ. ತೀವ್ರತೆಗನುಸಾರ: ತೀವ್ರತೆಗನುಸಾರ ಸ್ವಭಾವದೋಷಗಳ ವಿಧಗಳು ಮುಂದಿನಂತಿವೆ. ೧.ತೀವ್ರ, ೨.ಮಧ್ಯಮ, ೩.ಮಂದ

BOX

ಸ್ವಭಾವದೋಷಗಳ ಅಭಿವ್ಯಕ್ತಿ

ಸ್ವಭಾವದೋಷಗಳ ‘ಅಭಿವ್ಯಕ್ತಿ’ ಎಂದರೆ ಸ್ವಭಾವದೋಷಗಳ ಪ್ರಕಟೀಕರಣ (ವ್ಯಕ್ತವಾಗುವಿಕೆ). ನಮ್ಮಿಂದಾಗುವ ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳೆಂದರೆ ಸ್ವಭಾವದೋಷಗಳ ದೃಶ್ಯ ಪರಿಣಾಮ, ಉದಾ. ‘ಕೋಪ ಬರುವುದು’ ಮೂಲ ಸ್ವಭಾವದೋಷವಾಗಿದ್ದರೆ ಕೋಪದ ಭರದಲ್ಲಿ ವಸ್ತುಗಳನ್ನು ಬಿಸಾಡುವುದು, ಜಗಳವಾಡುವುದು ಮುಂತಾದ ಅಯೋಗ್ಯ ಪ್ರತಿಕ್ರಿಯೆಗಳು ಅಥವಾ ಅಯೋಗ್ಯ ವರ್ತನೆಗಳು ‘ಕೋಪ ಬರುವುದು’ ಎಂಬ ಸ್ವಭಾವದೋಷದ ಪ್ರಕಟೀಕರಣವಾಗಿವೆ. ಇದನ್ನೇ ‘ಅಭಿವ್ಯಕ್ತಿ’ ಎನ್ನುತ್ತಾರೆ.

ಸ್ವಭಾವದೋಷಗಳ ಪ್ರಾಧಾನ್ಯಕ್ರಮಗಳನ್ನು ನಿರ್ಧರಿಸುವುದು

ಸ್ವಭಾವದೋಷಗಳನ್ನು ವರ್ಗೀಕರಿಸಿದ ನಂತರ ಸ್ವಭಾವದೋಷಗಳ ಪಟ್ಟಿಯನ್ನು ಅಧ್ಯಯನ ಮಾಡಿ ಮೂಲಸ್ವಭಾವದೋಷ, ಹಾಗೆಯೇ ಮೂಲಸ್ವಭಾವದೋಷದಿಂದ ನಂತರ ನಿರ್ಮಾಣವಾದ ಇತರ ಸ್ವಭಾವದೋಷಗಳು, ಅಂದರೆ ಉಪದೋಷಗಳು ಯಾವುವು ಎನ್ನುವುದನ್ನು ಕಂಡುಹಿಡಿಯಬೇಕು. ಅವುಗಳಿಂದ ಮೂರು ಸ್ವಭಾವದೋಷಗಳನ್ನು ಅಥವಾ ಅವುಗಳ ಮೂರು ಅಭಿವ್ಯಕ್ತಿಗಳನ್ನು ಪ್ರಕ್ರಿಯೆಗಾಗಿ ಆರಿಸಬೇಕು.

ಅ. ಸ್ವಭಾವದೋಷಗಳ ಪ್ರಾಧಾನ್ಯಕ್ರಮ ನಿರ್ಧರಿಸುವಾಗ ನೆನಪಿನಲ್ಲಿಡಬೇಕಾದ ಸಂಗತಿಗಳು

ಅ ೧. ಸಮಷ್ಟಿಹಿತಕ್ಕೆ ಅಪಾಯಕರವಾಗಿರುವ ಸ್ವಭಾವದೋಷಗಳನ್ನು ಮೊದಲು ಆರಿಸಿಕೊಳ್ಳಬೇಕು

ಅ ೨. ದೈನಂದಿನ ಜೀವನದಲ್ಲಿನ ಸಮಸ್ಯೆಗಳ ಪೈಕಿ ಗಂಭೀರ ಸಮಸ್ಯೆಗೆ ಕಾರಣವಾಗಿರುವ ಸ್ವಭಾವದೋಷವನ್ನು ಮೊದಲು ಆರಿಸಬೇಕು

ಅ ೩. ಕಾರ್ಯದ ಸ್ಥಳದಲ್ಲಿ ತೊಂದರೆದಾಯಕವಾಗಿರುವ ಸ್ವಭಾವದೋಷವನ್ನು ಆರಿಸಬೇಕು

ಅ ೪. ಪ್ರಸಂಗಗಳ ಅಧ್ಯಯನವನ್ನು ಮಾಡಿ ತಪ್ಪಿನ ಮೂಲದಲ್ಲಿರುವ ತೀವ್ರ ಸ್ವಭಾವ ದೋಷವನ್ನು ಆರಿಸಬೇಕು

ಅ ೫. ಮೂಲ ಸ್ವಭಾವದೋಷಗಳನ್ನು ಪ್ರಾಧಾನ್ಯತೆಯಿಂದ ಆರಿಸಬೇಕು

ಅ ೬. ಮೂಲ ಸ್ವಭಾವದೋಷಗಳಲ್ಲಿನ ಮುಖ್ಯ ಅಥವಾ ಪ್ರಬಲ ಸ್ವಭಾವದೋಷ ವನ್ನು ಆರಿಸಬೇಕು

ಅ ೭. ಸ್ವಭಾವದೋಷದ ವಿವಿಧ ಅಭಿವ್ಯಕ್ತಿಗಳ ಪೈಕಿ ನಿರ್ಮೂಲನಕ್ಕೆ ಅವಶ್ಯಕವಾಗಿ ರುವ ಅಭಿವ್ಯಕ್ತಿಯನ್ನು ಪ್ರಾಧಾನ್ಯತೆಯಿಂದ ಆರಿಸಬೇಕು

ಅ ೮. ಸ್ವಭಾವದೋಷದ ವಿವಿಧ ಅಭಿವ್ಯಕ್ತಿಗಳ ಪೈಕಿ ನಿರ್ಮೂಲನಕ್ಕೆ ಅವಶ್ಯಕವಾಗಿ ರುವ ಅಭಿವ್ಯಕ್ತಿಯನ್ನು ಪ್ರಾಧಾನ್ಯತೆಯಿಂದ ಆರಿಸಬೇಕು

ಅ ೯. ಮನಸ್ಸಿನಲ್ಲಿ ಬಂದು, ಕೂಡಲೇ ಇಲ್ಲವಾಗುವ ಪ್ರತಿಕ್ರಿಯೆಗಳಿಗಿಂತ ತೀವ್ರತೆ ಯಿಂದ ಉಮ್ಮಳಿಸುವ ಅಥವಾ ದೀರ್ಘಕಾಲ ಉಳಿದುಕೊಳ್ಳುವ ಪ್ರತಿಕ್ರಿಯೆಗಳಿಗೆ ಸಂಬಂಧಿಸಿದ ಸ್ವಭಾವದೋಷಗಳನ್ನು ಪ್ರಾಧಾನ್ಯತೆಯಿಂದ ಆರಿಸಬೇಕು

 

Leave a Comment