ಹಂತ ೨ : ಅಯೋಗ್ಯ ಕೃತಿ / ಪ್ರತಿಕ್ರಿಯೆಗಳ ಅಧ್ಯಯನ ಮಾಡಿ ಯೋಗ್ಯ ಕೃತಿಗಳನ್ನು ನಿರ್ಧರಿಸುವ ಪದ್ಧತಿ

ಘಟನೆಗಳ ಹಾಗೂ ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ಅಧ್ಯಯನ ಮಾಡಿ ಆಯಾ ಪ್ರಸಂಗಗಳಿಗನುಸಾರ ಯೋಗ್ಯ ಕೃತಿ ಮತ್ತು ಯೋಗ್ಯ ಪ್ರತಿಕ್ರಿಯೆಗಳನ್ನು ನಿರ್ಧರಿಸುವುದು

೧.  ಅಯೋಗ್ಯ ಕೃತಿಗಳ ಅಧ್ಯಯನ ಮಾಡಿ ಯೋಗ್ಯ ಕೃತಿಗಳನ್ನು ನಿರ್ಧರಿಸುವ ಪದ್ಧತಿ

ಅಯೋಗ್ಯ ಕೃತಿ : ಚಹಾ ಕುಡಿದ ನಂತರ ರಾಜೇಶ ಲೋಟವನ್ನು ತೊಳೆದಿಡಲಿಲ್ಲ.

ಅಧ್ಯಯನ : ಈ ಕೃತಿಯಲ್ಲಿ ಚಹಾದ ಲೋಟವನ್ನು ತೊಳೆಯಲು ಬೇಸರವಾಗುತ್ತದೆಯೋ, ಲೋಟವನ್ನು ತೊಳೆಯಲು ಮರೆಯುತ್ತದೆಯೋ ಅಥವಾ ಲೋಟವನ್ನು ತೊಳೆಯುವುದೆಂದರೆ ಅವಮಾನವೆನಿಸುತ್ತದೆಯೋ ಎಂಬುದರ ವಿಚಾರವನ್ನು ಮಾಡಬೇಕು.

ನಿಷ್ಕರ್ಷ : ಇದರಿಂದ ರಾಜೇಶನಲ್ಲಿ ಅನುಕ್ರಮವಾಗಿ ಆಲಸ್ಯ, ಮರೆವು ಅಥವಾ ಅಹಂ ಇವುಗಳಲ್ಲಿ ಯಾವುದಾದರೊಂದು ಅಥವಾ ಒಂದಕ್ಕಿಂತ ಹೆಚ್ಚು ಸ್ವಭಾವದೋಷಗಳಿರುವುದು ಗಮನಕ್ಕೆ ಬರುತ್ತದೆ.

ಯೋಗ್ಯ ಕೃತಿ : ಚಹಾ ಕುಡಿದ ನಂತರ ಲೋಟವನ್ನು ಸ್ವಚ್ಛವಾಗಿ ತೊಳೆದು ಅದನ್ನು ಯೋಗ್ಯ ಸ್ಥಳದಲ್ಲಿ ವ್ಯವಸ್ಥಿತವಾಗಿಡುವುದು.

೨.  ಅಯೋಗ್ಯ ಪ್ರತಿಕ್ರಿಯೆಗಳ ಅಧ್ಯಯನವನ್ನು ಮಾಡಿ ಯೋಗ್ಯ ಪ್ರತಿಕ್ರಿಯೆಗಳನ್ನು ನಿರ್ಧರಿಸುವ ಪದ್ಧತಿ

ಪ್ರಸಂಗ : ತಂದೆ ಮನೆಗೆ ಬಂದಿರುವ ಅತಿಥಿಗಳೆದುರು ಅಧ್ಯಯನ ಮಾಡಲು ಹೇಳಿದಾಗ ಆದಿತ್ಯನಿಗೆ ಕೋಪ ಬಂದಿತು, ಆದುದರಿಂದ ಅವನು ಅಧ್ಯಯನ ಕೊಠಡಿಗೆ ಹೋಗಿ ಕೋಪದಿಂದ ಮೇಜಿನ ಮೇಲೆ ಪುಸ್ತಕಗಳನ್ನು ಎಸೆದನು.

ಅಧ್ಯಯನ : ತಂದೆಯವರು ‘ಅಧ್ಯಯನ ಮಾಡು’ ಎಂದು ಜೋರಾಗಿ ಹೇಳಿದರು; ಆದುದರಿಂದ ಆದಿತ್ಯನಿಗೆ ಕೋಪ ಬಂದಿತು. ‘ಕೆಲವೇ ದಿನಗಳಲ್ಲಿ ತನಗೆ ಪರೀಕ್ಷೆಯಿದೆ, ಹಾಗಾಗಿ ಈಗ ಅಧ್ಯಯನ ಮಾಡಿದರೆ ತನಗೆ ಒಳಿತಾಗುತ್ತದೆ’ ಎಂಬುದನ್ನು ಅವನು ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಹಾಗಾಗಿ ಅಧ್ಯಯನ ಕೊಠಡಿಗೆ ಹೋಗಿ ಕೋಪದಿಂದ ಪುಸ್ತಕಗಳನ್ನು ಮೇಜಿನ ಮೇಲೆ ಎಸೆದನು.

ನಿಷ್ಕರ್ಷ : ಈ ಪ್ರಸಂಗದಿಂದ ಆದಿತ್ಯನಲ್ಲಿ ‘ಕೋಪ ಬರುವುದು’ ಮತ್ತು ‘ಉದ್ಧಟತನ’ ಎಂಬ ಸ್ವಭಾವದೋಷಗಳಿರುವುದು ಗಮನಕ್ಕೆ ಬರುತ್ತದೆ.

ಯೋಗ್ಯ ಪ್ರತಿಕ್ರಿಯೆ : ತಂದೆಯವರು ‘ಅಧ್ಯಯನ ಮಾಡು’ ಎಂದು ಹೇಳಿದಾಗ ‘ವಾರ್ಷಿಕ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿ ಉತ್ತೀರ್ಣನಾಗಲು ಅಧ್ಯಯನ ಮಾಡುವುದು ಯೋಗ್ಯವಾಗಿದೆ; ಹಾಗಾಗಿ ತಂದೆಯವರು ನನಗೆ ಹೀಗೆ ಹೇಳುತ್ತಿದ್ದಾರೆ’ ಎಂಬ ವಿಚಾರ ಮಾಡಿ ಶಾಂತವಾಗಿ ಅಧ್ಯಯನ ಕೋಣೆಗೆ ಹೋಗಿ ಅಧ್ಯಯನ ಮಾಡಲು ಪ್ರಾರಂಭಿಸುವುದು.

೩.  ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ಅಧ್ಯಯನ ಮಾಡುವಾಗ ಗಮನದಲ್ಲಿಡಬೇಕಾದ ಅಂಶಗಳು

ಅ. ಪ್ರಸಂಗವು ಯಾವ ಪರಿಸ್ಥಿತಿಯಲ್ಲಿ ಘಟಿಸಿತು, ಆ ಪರಿಸ್ಥಿತಿಯ ಅಧ್ಯಯನ ಮಾಡಬೇಕು : ಇತರ ಸಮಯದಲ್ಲಿ ನಮಗೆ ಯಾವುದಾದರೊಂದು ಕೃತಿಯನ್ನು ಮಾಡಲು ಇಷ್ಟವಾಗುತ್ತದೆ ಅಥವಾ ಅದನ್ನು ಮಾಡುವಾಗ ಮನಸ್ಸಿನ ಮೇಲೆ ಒತ್ತಡವಾಗುವುದಿಲ್ಲ; ಆದರೆ ವಿಶಿಷ್ಟ ಪರಿಸ್ಥಿತಿಯಲ್ಲಿ ಅದೇ ಕೃತಿಯನ್ನು ಮಾಡಲು ಇಷ್ಟವಾಗುವುದಿಲ್ಲ ಮತ್ತು ಮನಸ್ಸಿನಲ್ಲಿ ಅಯೋಗ್ಯ ಪ್ರತಿಕ್ರಿಯೆಗಳು ಬರುತ್ತವೆ.

ಆ. ಪ್ರಸಂಗದಲ್ಲಿನ ವಿವಿಧ ಘಟಕಗಳು : ವ್ಯಕ್ತಿ, ಸ್ಥಳ, ಕಾಲ ಮತ್ತು ಸಮಯ ಹಾಗೂ ವ್ಯಕ್ತಿಯ ಮನಃಸ್ಥಿತಿ.

ಆ ೧. ವ್ಯಕ್ತಿ: ಯಾವುದಾದರೊಂದು ಪ್ರಸಂಗದ ಅಧ್ಯಯನವನ್ನು ಮಾಡುವಾಗ ಪ್ರತಿಕ್ರಿಯೆಯು ವ್ಯಕ್ತಿನಿಷ್ಠವಾಗಿದೆಯೇನು (ವಿಶಿಷ್ಟ ವ್ಯಕ್ತಿಯ ಸಂದರ್ಭದಲ್ಲಿ) ಎಂಬುದನ್ನು ಅವಲೋಕಿಸಬೇಕು.

ಆ ೨. ಸ್ಥಳ: ಬಹಳಷ್ಟು ಸಲ ನಮ್ಮ ಮನಸ್ಸಿನಲ್ಲಿ ಬರುವ ಅಯೋಗ್ಯ ಪ್ರತಿಕ್ರಿಯೆಗಳು ಸ್ಥಳದ (ಕಚೇರಿ, ಮನೆ, ಶಾಲೆ) ಮೇಲೆಯೂ ಅವಲಂಬಿಸಿರುತ್ತವೆ.

ಆ ೩. ಕಾಲ ಮತ್ತು ಸಮಯ: ನಮಗೆ ಬೇಡವೆನಿಸುವ ಯಾವುದಾದರೊಂದು ಕೃತಿ ಯನ್ನು ಮಾಡಬೇಕಾದರೆ ಅಥವಾ ಯಾವುದಾದರೊಂದು ಪ್ರಸಂಗದಿಂದ ಮಾನಸಿಕ ಒತ್ತಡವುಂಟಾದಾಗ, ನಮ್ಮ ಮನಸ್ಸಿನಲ್ಲಿ ಅನೇಕ ನಕಾರಾತ್ಮಕ ಪ್ರತಿಕ್ರಿಯೆಗಳು ಉಂಟಾಗುತ್ತವೆ ಅಥವಾ ನಮ್ಮಿಂದ ಅಯೋಗ್ಯ ಕೃತಿಗಳು ಘಟಿಸುತ್ತವೆ.

ಆ ೪. ವ್ಯಕ್ತಿಯ ಮನಃಸ್ಥಿತಿ : ದಿನವಿಡೀ ಘಟಿಸುವ ಅನೇಕ ಪ್ರಸಂಗಗಳಲ್ಲಿ ನಮ್ಮ ಮನಃಸ್ಥಿತಿಯು ವಿಭಿನ್ನವಾಗಿರುತ್ತದೆ. ಅದಕ್ಕನುಸಾರವಾಗಿ ನಮ್ಮ ಮನಸ್ಸಿನಲ್ಲಿ ಬರುವ ಪ್ರತಿಕ್ರಿಯೆಗಳ ತೀವ್ರತೆ ಮತ್ತು ಮರುಕಳಿಸುವಿಕೆಯು ಅವಲಂಬಿಸಿಕೊಂಡಿರುತ್ತದೆ.

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ನಮ್ಮಲಿರುವ ಸ್ವಭಾವದೋಷಗಳನ್ನು ಹೇಗೆ ಹುಡುಕಬೇಕು ?’ ಗ್ರಂಥ)

Leave a Comment