ಹಂತ ೧. ಸ್ವಭಾವದೋಷ ನಿರ್ಮೂಲನ ತಖ್ತೆ

ಪ್ರಕ್ರಿಯೆಯಲ್ಲಿನ ಕೃತಿಗಳ ಹಂತ ೧

ದಿನವಿಡೀ ಘಟಿಸಿದ ಪ್ರಸಂಗ / ತಪ್ಪುಗಳನ್ನು ನಿಯಮಿತವಾಗಿ ‘ಸ್ವಭಾವದೋಷ ನಿರ್ಮೂಲನ ತಖ್ತೆ’ಯಲ್ಲಿ ಬರೆಯಬೇಕು

ದಿನಾಂಕ :
ಪ್ರಸಂಗ / ತಪ್ಪುಗಳು (ಟಿಪ್ಪಣಿ) ತಪ್ಪು ಯಾರ ಗಮನಕ್ಕೆ ಬಂದಿತು? ಕಾಲಾವಧಿ ಸ್ವಭಾವದೋಷ ಉಪಯಕ್ತ ಸ್ವಯಂಸೂಚನೆ ಮತ್ತು ಸ್ವಯಂಸೂಚನಾ ಪದ್ಧತಿ, ಹಾಗೆಯೇ ಇತರ ಪರಿಹಾರೋಪಾಯಗಳು ಸೂಚನಾ ಸತ್ರಗಳು ಪ್ರಗತಿ
ತಮಗೆ ಇತರರಿಗೆ

ಟಿಪ್ಪಣಿ – ತಮ್ಮ ಮನಸ್ಸಿನಲ್ಲಿ ಬಂದ ಅಯೋಗ್ಯ ವಿಚಾರ, ಅಯೋಗ್ಯ ಭಾವನೆ, ಹಾಗೆಯೇ ಆಗಿರುವ ಅಯೋಗ್ಯ ಕೃತಿ ಮತ್ತು ವ್ಯಕ್ತವಾದ ಅಥವಾ ಮನಸ್ಸಿನಲ್ಲಿ ಬಂದ ಅಯೋಗ್ಯ ಪ್ರತಿಕ್ರಿಯೆ ಇವೆಲ್ಲವು ತಪ್ಪುಗಳಲ್ಲಿ ಬರುತ್ತವೆ. ಇವು ಸ್ವಭಾವದೋಷಗಳ ಪ್ರಕಟೀಕರಣವಾಗಿರುತ್ತವೆ.

ಸ್ವಭಾವದೋಷಗಳ ಪ್ರಕಟೀಕರಣ: ನಮ್ಮಿಂದಾಗುವ ಕ್ರಿಯೆ ಅಥವಾ ಕೃತಿಗಳು ಮತ್ತು ವ್ಯಕ್ತವಾಗುವ ಅಥವಾ ಮನಸ್ಸಿನಲ್ಲಿ ಬರುವ ಪ್ರತಿಕ್ರಿಯೆಗಳು ನಮ್ಮ ಸಂಸ್ಕಾರಗಳ ಮೇಲೆ ಅವಲಂಬಿಸಿರುತ್ತವೆ. ಸಾಮಾನ್ಯವಾಗಿ ನಮ್ಮ ಜೀವನದಲ್ಲಿನ ಒಟ್ಟು ಕ್ರಿಯೆ ಅಥವಾ ಕೃತಿ ಮತ್ತು ಪ್ರತಿಕ್ರಿಯೆಗಳ ಪೈಕಿ ಶೇ.೫೦ರಷ್ಟು ಯೋಗ್ಯವಾಗಿದ್ದರೆ ಉಳಿದ ಶೇ.೫೦ರಷ್ಟು ಅಯೋಗ್ಯವಾಗಿರುತ್ತವೆ. ಯೋಗ್ಯ ಕೃತಿ ಮತ್ತು ಯೋಗ್ಯ ಪ್ರತಿಕ್ರಿಯೆಗಳು ಸ್ವಭಾವದಲ್ಲಿನ ಗುಣಗಳಿಗೆ ಮತ್ತು ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳು ಸ್ವಭಾವದೋಷಗಳಿಗೆ ಸಂಬಂಧಿಸಿರುತ್ತವೆ. ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳಿಂದಾಗಿ ನಮಗೆ ತೊಂದರೆಯಾಗುತ್ತದೆ ಅಥವಾ ಅದಕ್ಕೆ ಸಂಬಂಧಿಸಿದ ಇತರರಿಗೆ ತೊಂದರೆಯಾಗುತ್ತದೆ. ಇದರಿಂದ ಇತರರ ಮನಸ್ಸಿನಲ್ಲಿ ಪ್ರತಿಕ್ರಿಯೆಗಳು ಉಂಟಾಗುತ್ತವೆ ಮತ್ತು ಇಬ್ಬರ ನಡುವೆ ಒತ್ತಡ ನಿರ್ಮಾಣವಾಗುತ್ತದೆ. ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ಮೂಲಕವೇ ಸ್ವಭಾವದೋಷಗಳು ವ್ಯಕ್ತವಾಗುವುದರಿಂದ, ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ಬಗ್ಗೆ ಅಧ್ಯಯನ ಮಾಡುವುದು ಅವಶ್ಯಕವಾಗಿದೆ.

ತಖ್ತೆಯನ್ನು ಬರೆಯುವ ಪದ್ಧತಿ

ದಿನಾಂಕ

ದಿನಾಂಕ ಬರೆದು ಆ ದಿನ ಘಟಿಸಿದ ಎಲ್ಲ ತಪ್ಪುಗಳನ್ನು ತಖ್ತೆಯಲ್ಲಿ ಬರೆಯಬೇಕು.

ಸ್ತಂಭ ೧ : ಪ್ರಸಂಗ / ತಪ್ಪುಗಳು

ದಿನವಿಡೀ ನಮ್ಮ ಮನಸ್ಸಿನಲ್ಲಿ ಬಂದ ಅಯೋಗ್ಯ ವಿಚಾರ, ಅಯೋಗ್ಯ ಭಾವನೆ, ಹಾಗೆಯೇ ನಮ್ಮಿಂದಾದ ಅಯೋಗ್ಯ ಕೃತಿ ಮತ್ತು ವ್ಯಕ್ತವಾದ ಅಥವಾ ಮನಸ್ಸಿನಲ್ಲಿ ಮೂಡಿದ ಅಯೋಗ್ಯ ಪ್ರತಿಕ್ರಿಯೆ ಮತ್ತು ಅವುಗಳ ಹಿಂದಿನ ಮೂಲ ವಿಚಾರಪ್ರಕ್ರಿಯೆ, ಹಾಗೆಯೇ ಅದರಿಂದಾದ ಪರಿಣಾಮ ಇವುಗಳನ್ನು ಬರೆದಿಡಬೇಕು.

ಅಯೋಗ್ಯ ವಿಚಾರಗಳ ಉದಾಹರಣೆ

೧. ಇಂದು ಸಾಯಂಕಾಲ ೧೦ ನಿಮಿಷಕ್ಕಾಗಿ ಒಂದು ಕೆಲಸದ ಸಲುವಾಗಿ ನನಗೆ ಹೊರಗೆ ಹೋಗಬೇಕಾಗಿತ್ತು. ಆಗ ‘ಅಪ್ಪನ ದ್ವಿಚಕ್ರವಾಹನ ಕೊಂಡೊಯ್ದರೆ ಬೇಗನೇ ಕೆಲಸವಾಗುತ್ತದೆ. ೧೦ ನಿಮಿಷದೊಳಗೆ ಬರುತ್ತೇನೆ, ಹಾಗಾಗಿ ಅವರಿಗೆ ಹೇಳದೆ ಒಯ್ದರೂ ನಡೆಯುತ್ತದೆ ಎಂಬ ವಿಚಾರವು ಬಂದಿತು.

೨. ಕಚೇರಿಯಲ್ಲಿನ ಮಹತ್ವದ ಸಭೆಯಲ್ಲಿ ಕುಳಿತುಕೊಂಡಾಗ ‘ನಾನು ಮಾಡಿದ ಕೆಲಸವು ಒಳ್ಳೆಯದಾಗಿದೆ; ಅದರಿಂದ ನನ್ನ ಹಿರಿಯ ಅಧಿಕಾರಿಗಳು ನನ್ನ ಬಗ್ಗೆ ಸಂತೋಷ ಪಡಬಹುದು; ನನಗೆ ನೌಕರಿಯಲ್ಲಿ ಬಡ್ತಿಯು ಸಿಗಬಹುದು. ನನ್ನ ಸಂಬಳವು ಹೆಚ್ಚಾಗಬಹುದು. ಅನಂತರ ನಾನು ಚತುಷ್ಚಕ್ರ ವಾಹನವನ್ನು ಖರೀದಿಸಬಹುದು…’, ಎಂಬ ವಿಚಾರಗಳನ್ನು ಮಾಡುತ್ತಾ ನಾನು ಮನೋರಾಜ್ಯದಲ್ಲಿ ವಿಹರಿಸುತ್ತಿದ್ದೆ.

೩. ನಾನು ಅಡುಗೆ ಮಾಡುತ್ತಿರುವಾಗ ಅತ್ತೆ ಮತ್ತು ನಾದಿನಿಯರು ನಿಧಾನವಾಗಿ ಮಾತನಾಡುತ್ತಿದ್ದರು. ಆಗ ‘ಅತ್ತೆಯು ನಾದಿನಿಯ ಬಳಿ ನನ್ನ ಗೋಳು ಹೇಳುತ್ತಿರಬೇಕು’ ಎಂದು ನನಗೆ ಅನಿಸಿತು.

ಅಯೋಗ್ಯ ಭಾವನೆಗಳ ಉದಾಹರಣೆಗಳು

೧. ಲೆಕ್ಕಪತ್ರದ ವರದಿಯನ್ನು ತಯಾರಿಸುವಾಗ ನನ್ನಿಂದಾದ ತಪ್ಪುಗಳನ್ನು ಸುರೇಶರವರು ನನಗೆ ಹೇಳಿದಾಗ ಅವರ ಮೇಲೆ ಕೋಪ ಬಂದಿತು.

೨. ನನ್ನ ಗೆಳತಿಗೆ ವಿದೇಶದಲ್ಲಿರುವ ಹುಡುಗನೊಂದಿಗೆ ಮದುವೆ ನಿರ್ಧರಿಸಿದನ್ನು ತಿಳಿದಾಗ ನನಗೆ ಅವಳ ಬಗ್ಗೆ ಮತ್ಸರವೆನಿಸಿತು.

೩. ಎರಡು ವರ್ಷಗಳ ಹಿಂದೆ ಪದವಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಉತ್ತೀರ್ಣಳಾದರೂ ಇನ್ನೂ ಕೆಲಸ ಸಿಗದಿದ್ದಾಗ ನನಗೆ ನಿರಾಶೆಯಾಯಿತು.

೪. ಮಗಳು ಮದುವೆಗಾಗಿ ಬಂದ ಗಂಡಿನ ಕಡೆಯವರ ಬಗ್ಗೆ ಬಹಳಷ್ಟು ಕುಂದುಕೊರತೆ ಹೇಳುತ್ತಿರುವಾಗ ನನಗೆ ಅವಳ ಮದುವೆ ಬಗ್ಗೆ ಚಿಂತೆಯಾಯಿತು.

ಅಯೋಗ್ಯ ಕೃತಿಗಳ ಉದಾಹರಣೆಗಳು

೧. ನಾನು ಸ್ನಾನವಾದ ಮೇಲೆ ಸ್ನಾನಗೃಹದ ದೀಪವನ್ನು ಆರಿಸಲು ಮರೆತೆ.

೨. ನಾನು ಸರಿಯಾದ ಸಮಯಕ್ಕೆ ಗ್ಯಾಸ್ ಬಂದು ಮಾಡಲಿಲ್ಲ, ಹಾಗಾಗಿ ಗ್ಯಾಸ್ ಮೇಲೆ ಕಾಯಿಸಲು ಇಟ್ಟಿದ್ದ ಹಾಲು ಉಕ್ಕಿ ಹೋಯಿತು.

೩. ಕಾಲೇಜಿನಿಂದ ಮನೆಗೆ ಬಂದ ನಂತರ ಬಟ್ಟೆಗಳನ್ನು ವ್ಯವಸ್ಥಿತವಾಗಿಡಲಿಲ್ಲ.

೪. ರಾತ್ರಿ ಮಲಗುವ ಮೊದಲು ಗಣಕಯಂತ್ರವನ್ನು ಬಂದು ಮಾಡಲಿಲ್ಲ, ಹಾಗಾಗಿ ಅದು ರಾತ್ರಿಯಿಡೀ ಹಾಗೆಯೇ ಇತ್ತು.

ವ್ಯಕ್ತವಾದ ಅಯೋಗ್ಯ ಪ್ರತಿಕ್ರಿಯೆಗಳ ಉದಾಹರಣೆಗಳು

೧. ಮನೆಗೆ ಬಂದಿದ್ದ ಅತಿಥಿಗಳೆದುರು ತಂದೆಯವರು ದೊಡ್ಡ ಸ್ವರದಲ್ಲಿ ಗದರಿಸಿ ಅಧ್ಯಯನವನ್ನು ಮಾಡಲು ಹೇಳಿದುದರಿಂದ ನನಗೆ ಸಿಟ್ಟು ಬಂದಿತು. ನಾನು ಸಿಟ್ಟಿನಿಂದ ಪುಸ್ತಕಗಳನ್ನು ಮೇಜಿನ ಮೇಲೆ ಎಸೆದೆ.

೨. ಕಚೇರಿಯಲ್ಲಿನ ಹಿರಿಯ ಅಧಿಕಾರಿಗಳು ನನ್ನ ಸಹೋದ್ಯೋಗಿಯನ್ನು ಪ್ರಶಂಸಿಸಿದಾಗ ನನಗೆ ಸಿಟ್ಟು ಬಂದಿತು. ‘ನಾನು ಎಷ್ಟು ಕೆಲಸ ಮಾಡಿದರೂ ಮೇಲಧಿಕಾರಿಗಳು ಯಾವಾಗಲೂ ಅವನನ್ನೇ ಹೊಗಳುತ್ತಾರೆ’ ಎಂದು ನಾನು ನನ್ನ ಪತ್ನಿಗೆ ಹೇಳಿದೆ.

೩. ನಾನು ಗಡಿಬಿಡಿಯಿಂದ ಕೆಲಸಕ್ಕೆ ಹೊರಡುತ್ತಿರುವಾಗ ಪತ್ನಿ ನನಗೆ ತುರ್ತಾದ ಕೆಲಸವನ್ನು ಹೇಳಿದಾಗ ನನಗೆ ಸಿಟ್ಟು ಬಂದಿತು ಮತ್ತು ‘ನೀನು ನನಗೆ ಯಾವಾಗಲೂ ನಾನು ಕೆಲಸಕ್ಕೆ ಹೊರಡುವ ಸಮಯದಲ್ಲಿಯೇ ತುರ್ತಾದ ಕೆಲಸ ಹೇಳುತ್ತೀ. ಇದು ನನಗೆ ಮಾಡಲು ಆಗಲ್ಲ’ ಎಂದು ನಾನು ಅವಳಿಗೆ ಸಿಟ್ಟಿನಿಂದ ಹೇಳಿದೆ.

೪. ಅತ್ತೆಯವರು ನಾನು ಮಾಡಿದ ಚಪಾತಿಗಳ ಬಗ್ಗೆ ಟೀಕೆ ಮಾಡಿದಾಗ ನಾನು ಅವರಿಗೆ ‘ನಾಳೆಯಿಂದ ನೀವೇ ಮಾಡಿ’ ಎಂದು ಸಿಟ್ಟಿನಿಂದ ಹೇಳಿದೆ.

ಮನಸ್ಸಿನಲ್ಲಿ ಮೂಡಿದ ಅಯೋಗ್ಯ ಪ್ರತಿಕ್ರಿಯೆಗಳ ಉದಾಹರಣೆಗಳು

೧. ಅತ್ತೆಯು ಅತಿಥಿಗಳೆದುರು ಸಣ್ಣ ಸಣ್ಣ ಕಾರಣಗಳಿಗೆ ನನಗೆ ಕರೆಯುತ್ತಿದ್ದರು. ಆಗ ಪತಿಯು ಸುಮ್ಮನಿರುವುದನ್ನು ನೋಡಿ ‘ಇವರು ನನ್ನ ಪರ ಯಾವಾಗಲೂ ಮಾತನಾಡುವುದಿಲ್ಲ. ಈ ಮನೆಯಲ್ಲಿ ನನಗೆ ಬೆಲೆಯೇ ಇಲ್ಲ’ ಎಂಬ ವಿಚಾರ ಮನಸ್ಸಿನಲ್ಲಿ ಬಂದಿತು.

೨. ಸಾಯಂಕಾಲ ನಾನು ಸ್ನೇಹಿತೆಯ ಹುಟ್ಟುಹಬ್ಬಕ್ಕೆ ಹೊರಟಿದ್ದೆ. ಆಗ ಅತ್ತೆಯವರು ಪಾತ್ರೆಗಳನ್ನು ತೊಳೆಯಲು ಹೇಳಿದರು. ಕೂಡಲೇ ನನ್ನ ಮನಸ್ಸಿನಲ್ಲಿ ‘ಇವರು ಇಷ್ಟು ತಡವಾಗಿ ಮತ್ತು ಕೊನೆಯ ಗಳಿಗೆಯಲ್ಲಿ ಏಕೆ ಹೇಳುತ್ತಾರೆ ? ಈಗ ಆ ಪಾತ್ರೆಗಳಿಲ್ಲದಿದ್ದರೆ ನಡೆಯುವುದಿಲ್ಲವೇ ?’ ಎಂಬ ಪ್ರತಿಕ್ರಿಯೆ ಬಂದಿತು.

೩. ನಾದಿನಿಯು ಅತ್ತೆಮನೆಗೆ ಹೊರಟಾಗ ಪತಿಯವರು ಅವಳಿಗೆ ಬೆಲೆಬಾಳುವ ಸೀರೆ ಉಡುಗೊರೆ ಕೊಟ್ಟರು. ಆಗ ‘ನಾನು ಮಿಕ್ಸರ್ ಕೇಳಿದಾಗ, ಇವರು ಹಣವಿಲ್ಲ ಎಂದು ಹೇಳಿದ್ದರು. ಮತ್ತೆ ಈಗ ಎಲ್ಲಿಂದ ಹಣ ಬಂದಿತು ?’ ಎಂದು ನನಗೆ ಅನಿಸಿತು.

ಸ್ತಂಭ ೨ : ತಪ್ಪು ಯಾರ ಗಮನಕ್ಕೆ ಬಂದಿತು ?

ಇದರಲ್ಲಿನ ಒಂದು ಉಪಸ್ತಂಭದಲ್ಲಿ √ ಗುರುತು ಹಾಕಬೇಕು. ತಪ್ಪು ಇತರರ ಗಮನಕ್ಕೆ ಬಂದಿದ್ದರೆ ಆ ವ್ಯಕ್ತಿಯ ಹೆಸರನ್ನೂ ಬರೆಯಬೇಕು.

ಸ್ತಂಭ ೩ : ಕಾಲಾವಧಿ

ಯಾವುದಾದರೊಂದು ಘಟನೆಯು ಘಟಿಸುತ್ತಿರುವಾಗ ಅಯೋಗ್ಯ ವಿಚಾರ, ಅಯೋಗ್ಯ ಭಾವನೆ ಅಥವಾ ಅಯೋಗ್ಯ ಪ್ರತಿಕ್ರಿಯೆಯು ಬಂದು, ಆ ವಿಚಾರದ, ಭಾವನೆಯ ಅಥವಾ ಪ್ರತಿಕ್ರಿಯೆಯ ಪರಿಣಾಮವು ಮನಸ್ಸಿನಿಂದ ಹೋಗುವವರೆಗಿನ ಕಾಲಾವಧಿಯನ್ನು / ಅಯೋಗ್ಯ ಕೃತಿಯಾದ ನಂತರ ಆ ಅಯೋಗ್ಯ ಕೃತಿಯು ಅರಿವಾಗುವುದರ ನಡುವಿನ ಕಾಲಾವಧಿಯನ್ನು ಈ ಸ್ತಂಭದಲ್ಲಿ ಬರೆಯಬೇಕು.

ಸ್ತಂಭ ೪ : ಸ್ವಭಾವದೋಷ

ಪ್ರತಿಯೊಂದು ಅಯೋಗ್ಯ ವಿಚಾರ, ಅಯೋಗ್ಯ ಭಾವನೆ, ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಯ ಅಧ್ಯಯನ ಮಾಡುವಾಗ ಈ ಪ್ರಕ್ರಿಯೆಯ ‘ಹಂತ ೩‘ರಲ್ಲಿ ನೀಡಿದಂತೆ ನಮ್ಮ ಮನಸ್ಸಿಗೆ ನಾವೇ ಪ್ರಶ್ನೆಗಳನ್ನು ಕೇಳಿ ಅವುಗಳಿಂದ ಸಿಗುವ ಉತ್ತರಗಳ ನಿಷ್ಕರ್ಷಗಳಿಂದ ಸ್ವಭಾವದೋಷ ಹುಡುಕಿ ಅದನ್ನು ಅಥವಾ ಅವುಗಳನ್ನು ಈ ಸ್ತಂಭದಲ್ಲಿ ಬರೆಯಬೇಕು.

ಸ್ತಂಭ ೫ : ಉಪಯುಕ್ತ ಸ್ವಯಂಸೂಚನೆ ಮತ್ತು ಸ್ವಯಂಸೂಚನಾ ಪದ್ಧತಿ, ಹಾಗೆಯೇ ಇತರ ಪರಿಹಾರೋಪಾಯಗಳು

ಅಯೋಗ್ಯ ವಿಚಾರ, ಅಯೋಗ್ಯ ಭಾವನೆ, ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳಿಗೆ ಕಾರಣವಾಗಿರುವ ಸ್ವಭಾವದೋಷಗಳನ್ನು ದೂರಗೊಳಿಸಲು ಈ ಪ್ರಕ್ರಿಯೆಯಲ್ಲಿನ ‘ಹಂತ ೨‘ರಲ್ಲಿ ಕೊಟ್ಟಿರುವ ಪ್ರಸಂಗಗಳಿಗನುಸಾರ ಯೋಗ್ಯ ವಿಚಾರ, ಯೋಗ್ಯ ಭಾವನೆ, ಯೋಗ್ಯ ಕೃತಿ ಮತ್ತು ಯೋಗ್ಯ ಪ್ರತಿಕ್ರಿಯೆ ಇವುಗಳ ವಿಚಾರ ಮಾಡಿ ಸ್ವಯಂಸೂಚನೆಗಳನ್ನು ತಯಾರಿಸಬೇಕು.

ಸ್ತಂಭ ೬ : ಸೂಚನಾಸತ್ರಗಳು

ದಿನವಿಡೀ ಮಾಡಿದ ಸೂಚನಾಸತ್ರಗಳ ಸಂಖ್ಯೆಯನ್ನು ಈ ಸ್ತಂಭದಲ್ಲಿ ಬರೆಯಬೇಕು.

ಸ್ತಂಭ ೭ : ಪ್ರಗತಿ

ಪ್ರಕ್ರಿಯೆಯನ್ನು ಪ್ರಾರಂಭಿಸಿದ ನಂತರ ಪ್ರಕ್ರಿಯೆಯ ಎಲ್ಲ ಹಂತಗಳನ್ನು ನಿಯಮಿತವಾಗಿ ಮತ್ತು ಪ್ರಾಮಾಣಿಕವಾಗಿ ಕೃತಿಯಲ್ಲಿ ತರುವುದರಿಂದ ಸ್ವಭಾವದೋಷಗಳು ಕಡಿಮೆಯಾಗುತ್ತವೆ. ಪ್ರಗತಿಯ ಸ್ತಂಭದಲ್ಲಿ ಮುಂದಿನ ಅಂಶಗಳನ್ನು ಸೇರಿಸಬೇಕು.

ಅ. ಕಳೆದ ವಾರದಲ್ಲಿ ಯಾವ ಸ್ವಭಾವದೋಷ ಮತ್ತು ಅಹಂಗಳ ಲಕ್ಷಣಗಳಿಗೆ ಸ್ವಯಂಸೂಚನೆ ಕೊಡಲಾಗಿತ್ತೋ, ಆ ಲಕ್ಷಣಗಳಲ್ಲಾದ ಬದಲಾವಣೆಗಳು

ಆ. ಯಾವ ಸ್ವಭಾವದೋಷ ಮತ್ತು ಅಹಂಗಳ ಲಕ್ಷಣಗಳ ನಿರ್ಮೂಲನೆಗೆ ಸ್ವಯಂಸೂಚನೆ ಕೊಡದೇ ಅಥವಾ ಇತರ ಪ್ರಯತ್ನ ಮಾಡದೆಯೇ ಅದರಲ್ಲಿ ಕಳೆದ ತಿಂಗಳಿನಲ್ಲಿ ತಾನಾಗಿಯೇ ಆಗಿರುವ ಪ್ರಗತಿ (ಇದರಲ್ಲಿ ತಮಗೆ ಅರಿವಾದ ಅಥವಾ ಇತರರು ಗಮನಕ್ಕೆ ತಂದುಕೊಟ್ಟ ಬದಲಾವಣೆಯನ್ನು ಸೇರಿಸಬೇಕು.)

ಇ. ಸಹವರ್ತಿಗಳು (ಕುಟುಂಬದವರು, ಕಛೇರಿಯ ಸಹೋದ್ಯೋಗಿಗಳು, ಸಹಸಾಧಕರು ಮತ್ತು ಜವಾಬ್ದಾರ ಸಾಧಕರು) ಹೇಳಿದ ಬದಲಾವಣೆ

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ನಮ್ಮಲಿರುವ ಸ್ವಭಾವದೋಷಗಳನ್ನು ಹೇಗೆ ಹುಡುಕಬೇಕು ?’ ಗ್ರಂಥ)

Leave a Comment